ಅಬು ಸಲೇಂನನ್ನು ಜೀವನಪೂರ್ತಿ ಜೈಲಲ್ಲಿ ಇರಿಸುವಂತಿಲ್ಲ, 25 ವರ್ಷದ ಬಳಿಕ ಬಿಡುಗಡೆ ಮಾಡಲೇಬೇಕೆಂದ ಸುಪ್ರೀಂ - Vistara News

ಕ್ರೈಂ

ಅಬು ಸಲೇಂನನ್ನು ಜೀವನಪೂರ್ತಿ ಜೈಲಲ್ಲಿ ಇರಿಸುವಂತಿಲ್ಲ, 25 ವರ್ಷದ ಬಳಿಕ ಬಿಡುಗಡೆ ಮಾಡಲೇಬೇಕೆಂದ ಸುಪ್ರೀಂ

ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿಅಪರಾಧಿ ಎಂದು ಘೋಷಿತನಾದ ಗ್ಯಾಂಗ್‌ಸ್ಟರ್‌ ಅಬು ಸಲೇಂಗೆ 25 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆ ನೀಡಲಾಗದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

VISTARANEWS.COM


on

abu salem
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ೧೯೯೩ರಲ್ಲಿ ನಡೆದ ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿರುವ ಅಬು ಸಲೇಂನನ್ನು ಜೀವನಪೂರ್ತಿ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ೨೫ ವರ್ಷದ ಜೈಲು ಶಿಕ್ಷೆ ಅವಧಿ ಪೂರ್ತಿಯಾದ ಕೂಡಲೇ ಆತನನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

೨೦೦೫ರಲ್ಲಿ ಅಬು ಸಲೇಂನನ್ನು ಪೋರ್ಚುಗಲ್‌ನಿಂದ ಗಡಿಪಾರು ಮಾಡಿಕೊಳ್ಳುವಾಗ ಆತನ ಶಿಕ್ಷೆ ಅವಧಿ ೨೫ ವರ್ಷಕ್ಕಿಂತ ಹೆಚ್ಚು ಇರುವುದಿಲ್ಲ ಎಂಬ ವಾಗ್ದಾನವನ್ನು ಕೇಂದ್ರ ಸರಕಾರ ಅಲ್ಲಿನ ಸರಕಾರಕ್ಕೆ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳುವುದು ಸರಕಾರದ ಹೊಣೆಗಾರಿಕೆ ಆಗಿರುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಗ್ಯಾಂಗ್‌ಸ್ಟರ್‌ ಅಬು ಸಲೇಂ ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ. ಆತನನ್ನು ಅಲ್ಲಿಂದ ಗಡಿಪಾರು ಮಾಡಿ ತರಲು ಕೇಂದ್ರ ಸರಕಾರ ಹರಸಾಹಸವನ್ನೇ ನಡೆಸಿತ್ತು. ಕೊನೆಗೆ ಪೋರ್ಚುಗಲ್‌ ಸರಕಾರದೊಂದಿಗಿನ ಸಂಧಾನದಲ್ಲಿ ಆರೋಪಿಗೆ ೨೫ ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆ ವಿಧಿಸುವುದಿಲ್ಲ, ೨೫ ವರ್ಷದ ಶಿಕ್ಷೆಯ ಬಳಿಕ ಬಂಧಮುಕ್ತಗೊಳಿಸಲಾಗುವುದು ಎಂದು ವಾಗ್ದಾನ ಮಾಡಲಾಗಿತ್ತು. ಜತೆಗೆ ಆತನಿಗೆ ಮರಣದಂಡನೆ ಶಿಕ್ಷೆ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ೨೦೦೫ರ ನವೆಂಬರ್‌ ೫ರಂದು ಅಬು ಸಲೇಂನನ್ನು ಭಾರತಕ್ಕೆ ಕರೆ ತರಲಾಗಿತ್ತು. ಈ ವಾಗ್ದಾನದ ಅವಧಿ ೨೦೩೦ರವರೆಗೆ ಜಾರಿಯಲ್ಲಿರುತ್ತದೆ.

ಈ ನಡುವೆ, ೧೯೯೫ರಲ್ಲಿ ನಡೆದ ಮುಂಬಯಿ ಮೂಲದ ಬಿಲ್ಡರ್‌ ಪ್ರದೀಪ್‌ ಜೈನ್‌ ಅವರ ಕೊಲೆಗೆ ಸಂಬಂಧಿಸಿ ಟಾಡಾ ಕೋರ್ಟ್‌ ೨೦೧೫ರ ಫೆಬ್ರವರಿ ೨೫ರಂದು ತೀರ್ಪು ನೀಡಿದೆ. ಇದರಲ್ಲಿ ಸಲೇಂ ಮತ್ತು ಆತನ ಚಾಲಕ ಮೆಹದಿ ಹಸನ್‌ಗೆ ಜೀವನಪೂರ್ತಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನು ಪ್ರಶ್ನಿಸಿ ಅಬುಸಲೇಂ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದ. ಇದನ್ನು ಪರಿಗಣಿಸಿದ ಕೋರ್ಟ್‌ ಅಬು ಸಲೇಂ ಮತ್ತು ಸರಕಾರದ ಪರ ವಕೀಲರ ವಾದವನ್ನು ಪರಿಗಣಿಸಿ ಮಹತ್ವದ ತೀರ್ಪನ್ನು ನೀಡಿದೆ.
ಕೇಂದ್ರ ಸರಕಾರವು ಪೋರ್ಚುಗಲ್‌ ಸರಕಾರಕ್ಕೆ ನೀಡಿರುವ ವಾಗ್ದಾನವನ್ನು ಮುರಿಯುವಂತಿಲ್ಲ. ಶಿಕ್ಷೆಯ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಚನ ಬದ್ಧತೆ ಮತ್ತು ಸಂವಿಧಾನದ ೭೨ನೇ ವಿಧಿಯ ಅಡಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸರಕಾರ ರಾಷ್ಟ್ರಪತಿಗಳ ಸಲಹೆಯನ್ನು ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌ ಮತ್ತು ಎಂಎಂ ಸುಂದರೇಶ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

೨೫ ವರ್ಷಗಳ ಶಿಕ್ಷೆಯ ಅವಧಿ ಪೂರ್ಣಗೊಂಡು ಒಂದು ತಿಂಗಳ ಒಳಗೆ ಸರಕಾರ ಸಿಆರ್‌ಪಿಸಿ ಸೆಕ್ಷನ್‌ಗಳ ಅಡಿಯಲ್ಲಿರುವ ಬರುವ ಶಿಕ್ಷೆಗಳನ್ನು ಕಡಿತಗೊಳಿಸಿ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Murder Case: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿಯಲ್ಲಿ ಬಾಲಕನನ್ನು ಸ್ವಂತ ಚಿಕ್ಕಪ್ಪನೇ ಕೊಂದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತಯಾಗಿರುವುದು ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

VISTARANEWS.COM


on

Murder Case
Koo

ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕನ ಕತ್ತು ಸೀಳಿ ಸ್ವಂತ ಚಿಕ್ಕಪ್ಪನೇ ಕೊಲೆ (Murder Case) ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿಯಲ್ಲಿ ನಡೆದಿದೆ. ಗೌತಮ್ (3) ಕೊಲೆಯಾದ ಬಾಲಕ. ರಂಜಿತ್ (30) ಬಾಲಕನ ಕತ್ತು ಸೀಳಿದ ಆರೋಪಿ.

‌ಬಾಲಕನ ಕೊಂದ ಆರೋಪಿ ರಂಜಿತ್

ಗೌತಮ್ (3) ಕೊಲೆಯಾದ ಬಾಲಕ. ರಂಜಿತ್ (30) ಬಾಲಕನ ಕತ್ತು ಸೀಳಿದ ಆರೋಪಿ. ಶಿರಿಷ-ಮಂಜುನಾಥ್ ದಂಪತಿ ಪುತ್ರ ಗೌತಮ್‌ನನ್ನು ಪಾಳುಬಿದ್ದ ಮನೆಗೆ ಕರೆದೊಯ್ದ ಚಿಕ್ಕಪ್ಪ, ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆ

ವಿಜಯನಗರ: ಹರಪನಹಳ್ಳಿ ತಾಲೂಕಿನ ನಂದಾಲ್ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವುದು ಬುಧವಾರ ನಡೆದಿದೆ. ಕೌಶಿಕ್(15) ಮತ್ತು ಸಮೀರ್ (14) ನಾಪತ್ತೆಯಾದ ಬಾಲಕರು. ಹರಪನಹಳ್ಳಿ ಪಟ್ಟಣದ ಸಿಲಾರ್ ಗೇರಿಯ ಗ್ರಾಮದ ಬಾಲಕರು ನದಿಗೆ ಈಜಲು ಹೋಗಿದ್ದಾಗ ನಾಪತ್ತೆಯಾಗಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Actor Darshan: ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮೀ; ದರ್ಶನ್‌ ಕುಟುಂಬದ ವಿರುದ್ಧ ಸುದ್ದಿ ಪ್ರಸಾರಕ್ಕೆ ನಿರ್ಬಂಧ!

ಭದ್ರಾ ಹಿನ್ನೀರಿಯಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರ ಸಾವು

ಚಿಕ್ಕಮಗಳೂರು: ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರು ದುರ್ಮರಣ ಹೊಂದಿರುವ ಘಟನೆ (Raft sinking) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೂವರ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಮೂವರ ಶವಕ್ಕಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ.

Continue Reading

ಪ್ರಮುಖ ಸುದ್ದಿ

Actor Darshan: ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮೀ; ದರ್ಶನ್‌ ಕುಟುಂಬದ ವಿರುದ್ಧ ಸುದ್ದಿ ಪ್ರಸಾರಕ್ಕೆ ನಿರ್ಬಂಧ!

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ಕಪೋಲಕಲ್ಪಿತ ಸುದ್ದಿ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.

ರೇಣುಕಾಸ್ವಾಮಿ ಸಾವಿಗೆ ಸಂತಾಪ

ರೇಣುಕಾಸ್ವಾಮಿ ಸಾವಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ರೇಣುಕಾಸ್ವಾಮಿ ಸಾವಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ.

ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಮಗ ಮತ್ತು ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ದುಃಖದಲ್ಲಿದ್ದೇವೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ಪ್ರಕರಣದಲ್ಲಿ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಮತ್ತು ಅಸತ್ಯಗಳನ್ನು ಜನರು ವಿಶ್ರಾಂತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯನ್ನಷ್ಟೇ ಪ್ರಕಟಿಸಲು ನಾನು ಪ್ರತಿಯೊಬ್ಬರನ್ನೂ ಕೋರುತ್ತೇನೆ. ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಜಯ ಸಾಧಿಸಲಿ. ಸತ್ಯಮೇವ ಜಯತೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್‌ ಕೂಲ್‌..!

ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ; ಪೊಲೀಸರಿಗೆ ನಟ ಪ್ರಥಮ್‌ ದೂರು

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಬಂಧನದ ಬಗ್ಗೆ ಮಾತನಾಡಿದ್ದಕ್ಕೆ ನಟ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಥಮ್ ಜೀವ ಬೆದರಿಕೆ ಹಾಕಿರುವುದು ಕಂಡುಬಂದಿದೆ. ದರ್ಶನ್‌ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ಪ್ರಥಮ್‌ (Actor Pratham) ದೂರು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿದ್ದರೂ ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ನಟ ಪ್ರಥಮ್‌ ಕಿಡಿಕಾರಿದ್ದರು. ನನಗೆ ಒಂದು ವಾರ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಲು ಅವಕಾಶ ಕೊಟ್ಟರೆ, ದರ್ಶನ್‌ ಅಂಧ ಅಭಿಮಾನಿಗಳಿಗೆ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಆ ಪೊಲೀಸ್‌ ಸ್ಟೇಷನ್‌ ಬಳಿ ಇದ್ದವರಲ್ಲಿ ಒಬ್ಬನಾದರೂ ಅವರ ತಾಯಿಗೆ ಒಂದು ಹೊತ್ತು ಊಟ ಕೊಡಿಸಲು ಯೋಗ್ಯತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಪ್ರಥಮ್‌ಗೆ ನಟ ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ.

ದೂರು ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಪ್ರಥಮ್‌ ಅವರು, ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ #ಕರ್ನಾಟಕದ_ಅಳಿಯ ತಂಡದ office no ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಿ. ಇನ್ಮೇಲೆ ನನಗೆ ಬರೋ ಕಾಲ್ msg ಅಥವಾ social media warning ಎಲ್ಲವೂ ಪೋಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ; ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ…; ಯಾರಿಗೋಸ್ಕರವೋ ಲೈಫ಼್ ಹಾಳುಮಾಡಿಕೊಳ್ಳಬೇಡಿ ಎಂದು ತಮಗೆ ಬೆದರಿಕೆ ಹಾಕಿರುವ ದರ್ಶನ್‌ ಅಭಿಮಾನಿಗಳಿಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

Continue Reading

ಕರ್ನಾಟಕ

Raft sinking: ಭದ್ರಾ ಹಿನ್ನೀರಿಯಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರ ಸಾವು

Raft sinking: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದ ಬಳಿ ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ನೀರುಪಾಲಾಗಿದ್ದಾರೆ.

VISTARANEWS.COM


on

Raft sinking
Koo

ಚಿಕ್ಕಮಗಳೂರು: ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರು ದುರ್ಮರಣ ಹೊಂದಿರುವ ಘಟನೆ (Raft sinking) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೂವರ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಮೂವರ ಶವಕ್ಕಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ.

ಟಿಪ್ಪರ್ ಹರಿದು ಮಹಿಳೆ ದಾರುಣ ಸಾವು

ದೊಡ್ಡಬಳ್ಳಾಪುರ: ಟಿಪ್ಪರ್ ಹರಿದು ಮಹಿಳೆ ದಾರುಣ ಸಾವಿಗೀಡಾಗಿರುವ ಘಟನೆ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ವತ್ರೆ ಸಮೀಪದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನಡೆದಿದೆ. ಹಿಂಬದಿಯಿಂದ ದ್ವಿಚಕ್ರ ವಾಹನದ ಮೇಲೆ‌ ಟಿಪ್ಪರ್‌ ಹರಿದಿದ್ದರಿಂದ ನಾಗಮಂಗಲ ಮೂಲದ ಅನಿತಾ (29) ಮೃತಪಟ್ಟಿದ್ದಾರೆ.

ಈಶಾ ಫೌಂಡೇಶನ್‌ಗೆ ಸ್ನೇಹಿತನ ಜತೆ ಹೋಗುತ್ತಿದ್ದ ಮಹಿಳೆ‌ಗೆ ತಲೆ ಮೇಲೆ ಟಿಪ್ಪರ್ ಚಕ್ರ ಹರಿದ ಪರಿಣಾಮ ಮೆದುಳು ಹೊರ ಬಂದು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಅಪಘಾತದ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಹಂಪಿ ಕನ್ನಡ ವಿವಿ ಬಳಿ ಕಾರು ಗುದ್ದಿ ಇಬ್ಬರು ಸವಾರರ ದುರ್ಮರಣ

ವಿಜಯನಗರ: ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿರುವುದು (Road Accident) ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್ ಬಳಿ ಬುಧವಾರ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಆಂಜನೇಯ (53), ಹನುಮೇಶ್(18) ಮೃತ ದುರ್ದೈವಿಗಳು.

ಆಂಜನೇಯ (53), ಹನುಮೇಶ್(18) ಮೃತ ದುರ್ದೈವಿಗಳು. ಇವರು ಕಮಲಾಪುರದಿಂದ ಪಾಪಿನಾಯಕನಹಳ್ಳಿಯ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಎದುರಿಗೆ ಸ್ಪೀಡಾಗಿ ಬಂದ ಕಾರು ಗುದ್ದಿ ಮೃತಪಟ್ಟಿದ್ದಾರೆ. ಕಮಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಚ್‌ಸಿಯ ಡಿ ಗ್ರೂಪ್‌ ಮಹಿಳಾ ಉದ್ಯೋಗಿ ಆತ್ಮಹತ್ಯೆ

ಕಲಬುರಗಿ: ಸಿಎಚ್‌ಸಿಯ ಡಿ ಗ್ರೂಪ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ನಡೆದಿದೆ. ಕುಂಚಾವರಂನ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಮಾಲಾಶ್ರೀ 29 ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಸತಿ ಗೃಹದಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

Continue Reading

ಪ್ರಮುಖ ಸುದ್ದಿ

Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

Electric Shock: ವಿದ್ಯುತ್‌ನಿಂದ ಎಷ್ಟು ಎಚ್ಚರವಿದ್ದರೂ ಸಾಲದು. ಒಂದು ಸಣ್ಣ ತಪ್ಪಿನಿಂದ ಜೀವವನ್ನೇ ಬಲಿಕೊಡಬೇಕಾದ ಸಂದರ್ಭ ಒದಗಿಬರುತ್ತದೆ. ಪುಣೆಯಲ್ಲಿ ಕಟ್ಟಡ ಕಾರ್ಮಿಕನೊಬ್ಬ ವಿದ್ಯುತ್ ಹರಿಯುತ್ತಿದ್ದ ತಂತಿಯ ಮೇಲೆ ಟವೆಲ್ ನೇತು ಹಾಕಲು ಹೋಗಿ ಜೀವಕಳೆದುಕೊಂಡ ಘಟನೆ ನಡೆದಿದೆ. ಇನ್ನು ಅವನ ಪ್ರಾಣ ಉಳಿಸಲು ಹೋದ ಪತ್ನಿ ಹಾಗೂ ಮಗ ಕೂಡ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಗಳ ಪರಿಹಾರ ನೀಡುವುದಾಗಿ ವಿದ್ಯುತ್ ಮಂಡಳಿ ಘೋಷಿಸಿದೆ.

VISTARANEWS.COM


on

Electric Shock
Koo

ಪುಣೆ : ಕಟ್ಟಡ ಕಾರ್ಮಿಕನೊಬ್ಬ ವಿದ್ಯುತ್ (Electric Shock) ಹರಿಯುತ್ತಿದ್ದ ತಂತಿಯ ಮೇಲೆ ಟವೆಲ್ ನೇತು ಹಾಕಿದ ಪರಿಣಾಮ, ಆ ವ್ಯಕ್ತಿ, ಆತನ ಹೆಂಡತಿ ಹಾಗೂ ಮಗ ಸಾವನಪ್ಪಿದ ದುರ್ಘಟನೆ ಪುಣೆಯಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ದೌಂಡ್ ತಾಲೂಕಿನ ದಪೋಡಿಯಲ್ಲಿ ನಡೆದಿದೆ.

ಸುರೇಂದ್ರ ಭಲೇಕರ್ (47) , ಆದಿಕಾ(40) ಮತ್ತು ಪ್ರಸಾದ್ ಕರೆಂಟ್ ಶಾಕ್‌ನಿಂದ ಸಾವನಪ್ಪಿದವರು. ಭಲೇಕರ್ ವಿದ್ಯುತ್ ಹರಿಯುತ್ತಿದ್ದ ತಂತಿಯ ಮೇಲೆ ತಮ್ಮ ಟವೆಲ್ ಅನ್ನು ಒಗೆದು ಒಣಗಿಸಲು ಹೋಗಿದ್ದಾರೆ. ಆ ತಂತಿಯಲ್ಲಿ ವಿದ್ಯುತ್ ಹರಿಯುತ್ತಿದ್ದ ಕಾರಣ ಅವರಿಗೆ ಶಾಕ್ ಹೊಡೆದಿದೆ. ಆಗ ಅವನ ಮಗ ಪ್ರಸಾದ್ ಹಾಗೂ ಪತ್ನಿ ಆತನನ್ನು ಕಾಪಾಡಲು ಹೋಗಿ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಯವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಡಿದ್ದಾರೆ. ಭಲೇಕರ್ ಕುಟುಂಬ ಕಳೆದ ಐದು ವರ್ಷಗಳಿಂದ ದಪೋಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಲೇಕರ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ ಆತನ ಪತ್ನಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಳು. ಅವರ ಮಗ ಹಾಗೂ ಮಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ಭಾನುವಾರ ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅವರ ಹಿತ್ತಲಿನಲ್ಲಿ ವಿದ್ಯುತ್ ತಂತಿ ಬಾಗಿ ಮನೆಯ ಗೋಡೆಗೆ ತಗುಲಿತ್ತು. ಭಲೇಕರ್ ಮನೆಯ ಸ್ನಾನದ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸಲು ತಗಡಿನ ಗೋಡೆಗೆ ಕಬ್ಬಿಣದ ತಂತಿ ಕಟ್ಟಿದ್ದರು. ವಿದ್ಯುತ್ ತಂತಿಯಲ್ಲಿರುವ ವಿದ್ಯುತ್ ಈ ಕಬ್ಬಿಣದ ತಂತಿಯ ಮೂಲಕ ಹಾದುಹೋಗಿದೆ. ಹಾಗಾಗಿ ಭಲೇಕರ್ ಬೆಳಿಗ್ಗೆ ಸ್ನಾನ ಮಾಡಲು ಹೋದಾಗ ಅದರ ಮೇಲೆ ಟವೆಲ್ ಒಣಗಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯ ವೇಳೆ ಅವರ ಪತ್ನಿ ನೆರೆಹೊರೆಯವರ ಸಹಾಯಕ್ಕಾಗಿ ಕೂಗಿದ್ದರು. ಆದರೆ ಅವರೆಲ್ಲರೂ ಬರುವ ಮುನ್ನವೇ ಮೂವರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಮಗಳು ಕೋಚಿಂಗ್ ತರಗತಿಗೆ ಹೋಗಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Viral News: ಆನ್‌ಲೈನ್‌ನಲ್ಲಿ ಬಂದ ಐಸ್ ಕ್ರೀಂನಲ್ಲಿ ಸಿಕ್ಕಿದ ಬೆರಳು ಕಾರ್ಮಿಕನದು!

ಘಟನೆಯ ಬಳಿಕ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಯ ವಿದ್ಯುತ್ ಮೀಟರ್ ಅನ್ನು ತೆಗೆದುಕೊಂಡಿದ್ದಾರೆ. ಘರ್ಷಣೆಯಿಂದ ಇದು ಹಾನಿಯಾಗಿರಬಹುದು. ಮತ್ತೆ ಇದರಿಂದ ಸಮಸ್ಯೆ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಹಾಗೇ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಗಳ ಪರಿಹಾರ ನೀಡುವುದಾಗಿ ವಿದ್ಯುತ್ ಮಂಡಳಿ ಘೋಷಿಸಿದೆ.

Continue Reading
Advertisement
Hooch Tragedy
ದೇಶ50 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ59 mins ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು1 hour ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌