ತಮಿಳುನಾಡಿನಲ್ಲಿ ಮತ್ತೊಬ್ಬ ಪಿಯು ವಿದ್ಯಾರ್ಥಿನಿ ನಿಗೂಢ ಸಾವು, ಆತ್ಮಹತ್ಯೆ ಶಂಕೆ - Vistara News

ಕ್ರೈಂ

ತಮಿಳುನಾಡಿನಲ್ಲಿ ಮತ್ತೊಬ್ಬ ಪಿಯು ವಿದ್ಯಾರ್ಥಿನಿ ನಿಗೂಢ ಸಾವು, ಆತ್ಮಹತ್ಯೆ ಶಂಕೆ

ಕಳೆದ ಜುಲೈ 13ರಂದು ತಮಿಳುನಾಡಿನ ಕಲ್ಲಕುರಿಚಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ನಿಗೂಢ ಸಾವು ಸಂಭವಿಸಿತ್ತು. ಅದರ ವಿರುದ್ಧದ ಆಕ್ರೋಶ ಇನ್ನೂ ತಾರಕದಲ್ಲಿ ಇರುವಂತೆಯೇ ಮತ್ತೊಬ್ಬ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ.

VISTARANEWS.COM


on

Tamilnadu student suicide
ತಮಿಳುನಾಡಿನ ತಿರುವಳ್ಳೂರಿನಲ್ಲಿ ವಿದ್ಯಾರ್ಥಿನಿಯ ಸಾವು ಸಂಭವಿಸಿದ ಹಾಸ್ಟೆಲ್‌ ಹೊರಗಡೆ ಪೊಲೀಸರ ಭದ್ರತೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವಳ್ಳೂರು: ಕಲ್ಲಕುರಿಚಿಯ ಕನಿಯಮುನೂರ್‌ ಗ್ರಾಮದಲ್ಲಿರುವ ಶಕ್ತಿ ಮೆಟ್ರಿಕ್ಯುಲೇಶನ್‌ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ಶ್ರೀಮತಿ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಗೂಢವಾಗಿ ಪ್ರಾಣ ಕಳೆದುಕೊಂಡ ವಿದ್ಯಮಾನ ನಡೆದು ಎರಡು ವಾರಗಳಾಗುವ ಮುನ್ನವೇ ತಮಿಳುನಾಡಿನಲ್ಲಿ ಇನ್ನೊಬ್ಬ ಪಿಯುಸಿ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ.

ಈ ಬಾರಿ ತಿರುವಳ್ಳೂರ್‌ ಜಿಲ್ಲೆಯ ಸರಕಾರಿ ಅನುದಾನಿತ ಶಾಲೆಯೊಂದರ ಹಾಸ್ಟೆಲ್‌ ರೂಮ್‌ನಲ್ಲಿ ೧೨ನೇ ತರಗತಿಯ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಈಗಾಗಲೇ ಘಟನೆಯ ಬಗ್ಗೆ ಸಿಬಿ-ಸಿಐಡಿ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಡಿಐಜಿ ಪ್ರಕಟಿಸಿದ್ದಾರೆ. ಶಾಲೆಯ ಆವರಣದಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ.

೧೭ ವರ್ಷದ ಹುಡುಗಿಯ ಮೃತದೇಹವನ್ನು ತಿರುವಳ್ಳೂರ್‌ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದ್ದು, ಅಲ್ಲಿ ಪೋಸ್ಟ್‌ ಮಾರ್ಟಂ ನಡೆಯಲಿದೆ. ವಿದ್ಯಾರ್ಥಿನಿ ಸೋಮವಾರ ಮುಂಜಾನೆ ಹೊತ್ತಿನಲ್ಲಿ ಈ ಕೃತ್ಯವನ್ನು ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಹಿ ನೆನಪು ಮರೆಯುವ ಮುನ್ನವೇ
ಕಳೆದ ಜುಲೈ ೧೩ರಂದು ಕಲ್ಲಕುರಿಚಿಯಲ್ಲಿ ಪಿಯುಸಿ ವಿದ್ಯಾರ್ಥಿನಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಳು. ಈ ಘಟನೆ ಬಯಲಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಪೋಷಕರು ಜಮಾಯಿಸಿ ವಾಹನಗಳನ್ನು ಸುಟ್ಟು ಹಾಕಿದ್ದರು. ಶಾಲೆಯ ಆವರಣದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದಿತ್ತು.
ಪೋಷಕರ ಪ್ರತಿಭಟನೆ ಎಷ್ಟು ತೀವ್ರವಾಗಿತ್ತು ಎಂದರೆ ಮಗಳ ಶವವನ್ನೂ ಸ್ವೀಕರಿಸಲೂ ಹೆತ್ತವರು ನಿರಾಕರಿಸಿದ್ದರು. ತಾವು ಬಯಸಿದ ವೈದ್ಯರ ಮೂಲಕ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಜತೆಗೆ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್‌ ಅದಕ್ಕೆ ಮನ್ನಣೆ ನೀಡಲಿಲ್ಲ. ಕೊನೆಗೆ ಎರಡು ದಿನಗಳ ಹಿಂದಷ್ಟೇ ಕುಟುಂಬ ಮೃತದೇಹವನ್ನು ಸ್ವೀಕರಿಸಿ ಅಂತ್ಯ ಸಂಸ್ಕಾರ ನಡೆಸಿತ್ತು.

ವಿದ್ಯಾರ್ಥಿನಿಯ ಸಾವಿನ ಹಿಂದೆ ಹಾಸ್ಟೆಲ್‌ನ ವಾರ್ಡನ್‌ಗಳು, ಕೆಲಸಗಾರರು, ಆಡಳಿತ ಮಂಡಳಿಯ ಕೈವಾಡವಿದೆ ಎನ್ನುವುದು ಹೆತ್ತವರ ಗಂಭೀರ ಆರೋಪವಾಗಿದೆ. ಇದೀಗ ಹೈಕೋರ್ಟ್‌ ಮರಣೋತ್ತರ ಪರೀಕ್ಷಾ ವರದಿಯನ್ನು ಸರಿಯಾಗಿ ಅವಲೋಕಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.

ಇದನ್ನೂ ಓದಿ| School Girl Suicide | ಶಿಕ್ಷಕರ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಶಾಲೆ ಮೇಲೆ ಜನರ ದಾಳಿ, ಬಸ್‌ಗೆ ಬೆಂಕಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Assault Case: ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

Assault Case: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್‌ ʼಏಯ್ ಹೋಗ್ರೋʼ ಎಂದಿದ್ದಾರೆ.

VISTARANEWS.COM


on

assault case anekal
Koo

ಆನೇಕಲ್: ಪುಡಿ ರೌಡಿಗಳು (Rowdy Sheeters) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಅಟ್ಯಾಕ್‌ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ʼಏಯ್ ಹೋಗೋʼ ಎಂದಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿ ಕೊಚ್ಚಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ನಡೆದಿರುವುದು ಬೆಂಗಳೂರು ಹೊರವಲಯ (Bangalore Rural) ಆನೇಕಲ್ (Anekal) ತಾಲ್ಲೂಕಿನ ‌ಜಿಗಣಿಯಲ್ಲಿ.

ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರದಲ್ಲಿ ಘಟನೆ ನಡೆದಿದ್ದು, ವಾಬಸಂದ್ರ ವಾಸಿ ನಾಗರಾಜ್(26) ಹಲ್ಲೆಗೊಳಗಾದ ಯುವಕ. ಮುಂಜಾನೆ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್‌ ʼಏಯ್ ಹೋಗ್ರೋʼ ಎಂದಿದ್ದಾರೆ.

ಅಷ್ಟಕ್ಕೆ ಮನೆವರೆಗೂ ನಾಗರಾಜ್‌ನನನ್ನು ಹಿಂಬಾಲಿಸಿದ್ದ ಆರೋಪಿಗಳು, ಮನೆ ಬಳಿ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್‌, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೌಡಿ ಶೀಟರ್‌ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಇತ್ತೀಚೆಗೆ ಕ್ರೈಮ್‌ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುತ್ತಿದೆ. ಕಳೆದ ತಿಂಗಳು 26ನೇ ತಾರೀಕು ಗುರಾಯಿಸಿದ ಎಂದು ಬಾರ್‌ನಲ್ಲಿ ತಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಮರ್ಡರ್ ಮಾಡಲಾಗಿತ್ತು. ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಲ್ಕೆರೆ ಬಾರ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಹರ್ಷವರ್ಧನ್ ಕೊಲೆಯಾಗಿತ್ತು. ಇದೀಗ ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಮಾರಕ ದಾಳಿ ನಡೆದಿದೆ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ನಡೆಯುತ್ತಿದೆ. ಗೂಂಡಾಗಿರಿ ನಡೆಸತ್ತಿರುವ ಪಾತಕಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಶ್ರೀಸಾಮಾನ್ಯರು ಅಳಲು ತೋಡಿಕೊಳ್ಳುತ್ತಾರೆ.

ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.

ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ದಯಾನಂದ್‌ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: Parappana Agrahara: ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲು ಸಾಗಿಸುತ್ತಿದ್ದ ಕೈದಿ; 2 ಫೋನ್‌ ಎಲ್ಲಿಟ್ಟುಕೊಂಡಿದ್ದ ಗೊತ್ತಾ?

Continue Reading

ಕರ್ನಾಟಕ

Road Accident: ಬೈಕ್‌ಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು!

Road Accident: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮತ್ತು ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯು ಶಿರಾ ತಾಲೂಕಿನ ಸೀಬಿ ಅರಣ್ಯ ಪ್ರದೇಶ ಸಮೀಪದ ಶಿರಾ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ ಸಂಜೆ ಜರುಗಿದೆ.

VISTARANEWS.COM


on

A lorry collided with a bike Two persons died on the spot
Koo

ಶಿರಾ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮತ್ತು ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯು ಶಿರಾ ತಾಲೂಕಿನ ಸೀಬಿ ಅರಣ್ಯ ಪ್ರದೇಶ ಸಮೀಪದ ಶಿರಾ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ ಸಂಜೆ (Road Accident) ನಡೆದಿದೆ.

ತಾಲೂಕಿನ ಚಿಕ್ಕ ಸೀಬಿ ಗ್ರಾಮದ ಲಿಂಗರಾಜ್ (20) ಮೃತ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ಇದ್ದ‌ ಸಿದ್ದಲಿಂಗಪ್ಪ (50) ಅಪಘಾತದಲ್ಲಿ ಮೃತಪಟ್ಟವರು. ಗುರುವಾರ ಮಧ್ಯಾಹ್ನ ತಮ್ಮ ಸ್ವಗ್ರಾಮ ಚಿಕ್ಕ ಸೀಬಿಯಿಂದ ದೊಡ್ಡ ಅಲದ ಮರದ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ.

ಇದನ್ನೂ ಓದಿ: Robot Suicide: ದ. ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ತುಮಕೂರು ಕಡೆಯಿಂದ ಶಿರಾ ಕಡೆಗೆ ತೆರಳುತ್ತಿದ್ದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಲಾರಿಯ ಚಕ್ರ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಶಿರಾ ಉಪ ವಿಭಾಗದ ಡಿವೈಎಸ್‌ಪಿ ಬಿ.ಕೆ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೈಂ

Reels Obsession : ಶೋಕಿಲಾಲನ ವಿರುದ್ಧ ಚಿತ್ರದುರ್ಗದಲ್ಲೂ ಕೇಸ್‌; ಡಮ್ಮಿ ಗನ್‌ ಕೊಟ್ಟ ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ

Reels Obsession: ಮೊನ್ನೆಯಷ್ಟೇ ರೀಲ್ಸ್‌ಗಾಗಿ ಡಮ್ಮಿ ಗನ್‌ ಹಿಡಿದು ಶೋಕಿ ಮಾಡಿದ ಕಾರಣಕ್ಕೆ ರೀಲ್ಸ್‌ ಸ್ಟಾರ್‌ ಅರೆಸ್ಟ್‌ ಆಗಿದ್ದ. ಆದರೆ ಈತನ ವಿರುದ್ಧ ಚಿತ್ರದುರ್ಗದಲ್ಲೂ ಕೇಸ್‌ ದಾಖಲಾಗಿದ್ದು, ಡಮ್ಮಿ ಗನ್‌ ಕೊಟ್ಟ ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ.

VISTARANEWS.COM


on

By

Reels Obsession who gave dummy gun To Reels Obsession Sandalwood technician now trouble
ಸಿನಿಮಾ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರಿಂದ ನೋಟಿಸ್‌.. ಡಮ್ಮಿ ಗನ್‌ ಹಿಡಿದು ಶೋಕಿ ಮಾಡಿದ ಅರುಣ್‌ ಕಟಾರೆ
Koo

ಚಿತ್ರದುರ್ಗ/ಬೆಂಗಳೂರು: ರೀಲ್ಸ್‌ಗಾಗಿ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು ಶೋಕಿ (Reels Obsession) ಮಾಡಿದ ಅರುಣ್‌ ಕಟಾರೆ ಎಂಬಾತನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆದರೆ ಕಳೆದ ವರ್ಷವೇ ಚಿತ್ರದುರ್ಗದಲ್ಲಿ ಅರುಣ್‌ ವಿರುದ್ಧ ಪ್ರತ್ಯೇಕ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

ಶೋಕಿಲಾಲ ಅರುಣ್‌ ಕಟಾರೆ ವಿರುದ್ಧ ಕಳೆದ 2023ರ ಏಪ್ರಿಲ್ ಹಾಗೂ ಜುಲೈನಲ್ಲಿ ಬ್ಲ್ಯಾಕ್‌ಮೇಲ್‌ ಹಾಗೂ ಚೀಟಿಂಗ್‌ ಮಾಡಿರುವ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಬಾಲಕನಿಗೆ ಮದ್ಯ ಕುಡಿಸಿ, ಸಿಗರೇಟ್ ಸೇದಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಬೆದರಿಸುತ್ತಿದ್ದ. ಮನೆಯಿಂದ ಒಡವೆ ತರುವಂತೆ ಬಾಲಕನಿಗೆ ಅರುಣ್ ಕಟಾರೆ ಬೆದರಿಸುತ್ತಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕನ ತಂದೆ ಬಾಲಾಜಿ ಎಂ.ಕೆ ಎಂಬುವವರಿಂದ ದೂರು ದಾಖಲಿಸಿದ್ದರು.

ಹಣ ಡಬಲ್‌ ಮಾಡುವುದಾಗಿ ವಂಚನೆ

ಮತ್ತೊಬ್ಬರಿಗೆ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಸುಮಾರು 3,68,000 ಹಣ ಪಡೆದು ಅರುಣ್ ಕಟಾರೆ ವಂಚಿಸಿದ್ದಾನೆ. ಡ್ಯೂಯೆಟ್ ಪಬ್‌ನಲ್ಲಿ ಬಂಡವಾಳ ಹಾಕಿ ಡಬಲ್ ಮಾಡುವುದಾಗಿ ಹೇಳಿದ್ದ. ವಂಚನೆಗೆ ಒಳಗಾದ ರವಿತೇಜ ಎಲ್.ಯು ಎಂಬುವುವರಿಂದ ದೂರು ದಾಖಲಾಗಿದೆ. ರವಿತೇಜನಿಂದ ಹಣ ಪಡೆದ ಬಳಿಕ ಫೋನ್ ಸ್ವಿಚ್ ಮಾಡಿಕೊಂಡು ಅರುಣ್‌ ಕಟಾರೆ ಪರಾರಿ ಆಗಿದ್ದ.

ಸ್ಯಾಂಡಲ್‌ವುಡ್‌ ಟೆಕ್ನಿಷಿಯನ್‌ಗೆ ಸಂಕಷ್ಟ

ಅರುಣ್‌ ಕಟಾರೆ ರೀಲ್ಸ್ ಶೋಕಿಯಿಂದಾಗಿ ಸ್ಯಾಂಡಲವುಡ್‌ನ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್‌ಗಳ ಸಿನಿಮಾಗಳಿಗೆ ಸಾಹಿಲ್ ಟೆಕ್ನಿಷಿಯನ್ ಆಗಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ, ಭೈರತಿ ರಣಗಲ್, ಮಪ್ತಿ ಸಿನಿಮಾಗಳಿಗೆ ಟೆಕ್ನಿಷಿಯನ್ ಸಾಹಿಲ್ ಡಮ್ಮಿ ಗನ್ ಒದಗಿಸಿದ್ದರು. ಇದೇ ಸಾಹಿಲ್ ಬಳಿ ಅರುಣ್ ಕಟಾರೆ ಡಮ್ಮಿ ಗನ್ ಬಾಡಿಗೆ ಪಡೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಡಮ್ಮಿ ಗನ್‌ ಅನ್ನು ಅರುಣ್ ಕಟಾರೆ ಬಳಸಿದ್ದ. ಸದ್ಯ ಕೊತ್ತನೂರು ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಅರುಣ್ ಕಾಟೇರ, ಸಾಹಿಲ್ ಬಳಿ ಶಾರ್ಟ್ ಮೂವಿಗೆ ಎಂದು ಡಮ್ಮಿ ಗನ್ ಬಾಡಿಗೆ ತೆಗೆದುಕೊಂಡಿದ್ದ. ಈಗ ಕೊತ್ತನೂರು ಪೊಲೀಸರು ಸಾಹಿಲ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

ಏನಿದು ಪ್ರಕರಣ?

ಬೆಂಗಳೂರು: ರೀಲ್ಸ್‌ಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದರು. ಈತ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್‌ ಕಂಡು ಜನ ಆತಂಕಕ್ಕೊಳಗಾಗಿದ್ದರು.

ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದರು. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದರು.

ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು. ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿತ್ತು. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Dhruva Sarja: ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!

Dhruva Sarja: ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಆ ಬಳಿಕ ಪ್ರಶಾಂತ್ ಪೂಜಾರಿಗೆ ಹಲ್ಲೆ ಮಾಡಿದ್ದರು. ಸದ್ಯ ಬಂಧನ ಭೀತಿಯಿಂದ ಆರೋಪಿಗಳು ಜಾಮೀನು ಪಡೆದಿದ್ದಾರೆ. ಈಗ ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿಯಿಂದಲೂ ಪೊಲೀಸರಿಗೆ ಸಹಕಾರ ಸಿಗುತ್ತಿಲ್ಲ . ಹಲ್ಲೆಯಾದಾಗಲು ಪ್ರಶಾಂತ್ ಪೂಜಾರಿ ದೂರು ನೀಡಲು ಹಿಂದೇಟಾಕಿದ್ದರು. ಈಗ ಧ್ರುವ ಸರ್ಜಾರಿಂದಲೂ ಪೊಲೀಸರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇನ್ನು ತಮ್ಮವರೇ ಎಂದು ನಟ ಧ್ರುವ ಸರ್ಜಾ ಸುಮ್ಮನಾಗಿದ್ದಾರೆ.

VISTARANEWS.COM


on

Dhruva Sarja Gym Trainer Prashanth poojari twist
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದಂತಾಗಿದೆ. ಧ್ರುವ ಸರ್ಜಾ ಜತೆ ಹತ್ತಿರವಾಗಬೇಕು ಎಂದು ಅಟ್ಯಾಕ್‌ ನಡೆದಿತ್ತು ಎಂದು ತಿಳಿದು ಬಂದಿದೆ. ಈ ವಿಚಾರ ಗೊತ್ತಿಲ್ಲದೇ ದಕ್ಷಿಣ ವಿಭಾಗ ಡಿಸಿಪಿಗೆ ಧ್ರುವ ಸರ್ಜಾ ಕರೆ ಮಾಡಿದ್ದರು.

ಈ ಬಗ್ಗೆ ತನಿಖೆಗೆ ಇಳಿದ ಬನಶಂಕರಿ ಪೊಲೀಸರಿಂದ ಅಸಲಿ ಸತ್ಯ ಬಯಲಾಗಿದೆ. ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದು ಹರ್ಷ ಮತ್ತು ಸುಭಾಷ್. ಆದರೆ ಹಲ್ಲೆ ಮಾಡಿಸಿದ್ದು ಮಾತ್ರ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಮಾತ್ರವಲ್ಲ ನಾಗೇಂದ್ರ ಧ್ರುವ ಸರ್ಜಾಗೆ ಚಾಲಕನಾಗಿಯು ಕೆಲಸ ಮಾಡುತ್ತಿದ್ದ. ಪ್ರಶಾಂತ್ ಪೂಜಾರಿ ಇತ್ತೀಚೆಗೆ ಧ್ರುವ ಸರ್ಜಾಗೆ ಆಪ್ತನಾಗ್ತಿದ್ದ. ಇದು ನಾಗೇಂದ್ರನಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ತಾನು ಹಲ್ಲೆ ಮಾಡಿದರೆ ಎಲ್ಲಿ ಹೊರಗೆ ಬರತ್ತೋ ಎಂದು ಹರ್ಷ ಮತ್ತು ಸುಭಾಷ್‌ಗೆ ಹಲ್ಲೆ ಮಾಡಲು ಹೇಳಿದ್ದ.

ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಆ ಬಳಿಕ ಪ್ರಶಾಂತ್ ಪೂಜಾರಿಗೆ ಹಲ್ಲೆ ಮಾಡಿದ್ದರು. ಸದ್ಯ ಬಂಧನ ಭೀತಿಯಿಂದ ಆರೋಪಿಗಳು ಜಾಮೀನು ಪಡೆದಿದ್ದಾರೆ. ಈಗ ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿಯಿಂದಲೂ ಪೊಲೀಸರಿಗೆ ಸಹಕಾರ ಸಿಗುತ್ತಿಲ್ಲ . ಹಲ್ಲೆಯಾದಾಗಲು ಪ್ರಶಾಂತ್ ಪೂಜಾರಿ ದೂರು ನೀಡಲು ಹಿಂದೇಟಾಕಿದ್ದರು. ಈಗ ಧ್ರುವ ಸರ್ಜಾರಿಂದಲೂ ಪೊಲೀಸರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇನ್ನು ತಮ್ಮವರೇ ಎಂದು ನಟ ಧ್ರುವ ಸರ್ಜಾ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ಕಳೆದ ಮೇ 26 ರಂದು ರಾತ್ರಿ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆಯಾಗಿತ್ತು. ಧ್ರುವಾ ಸರ್ಜಾ ಮನೆಯಿಂದ ತೆರಳುತ್ತಿದ್ದ ವೇಳೆ ಪ್ರಶಾಂತ್ ಪೂಜಾರಿಗೆ ಹಲ್ಲೆಯಾಗಿತ್ತು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

Continue Reading
Advertisement
Team India
ಕ್ರೀಡೆ11 mins ago

Team India: ವಾಂಖೆಡೆ ಸ್ಟೇಡಿಯಂನಲ್ಲಿ ವಂದೇ ಮಾತರಂ ಹಾಡಿದ ಟೀಮ್​ ಇಂಡಿಯಾ; ವಿಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್

Vastu Tips
ಧಾರ್ಮಿಕ19 mins ago

Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!

assault case anekal
ಕ್ರೈಂ19 mins ago

Assault Case: ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

Anant-Radhika Wedding Justin Bieber arrives in Mumbai
ಬಾಲಿವುಡ್23 mins ago

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Upcoming SUVs
ಆಟೋಮೊಬೈಲ್23 mins ago

Upcoming SUVs: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್ ಯು ವಿಗಳು

UK Election
ವಿದೇಶ27 mins ago

UK Election: ಬ್ರಿಟನ್‌ ಸಂಸತ್‌ ಚುನಾವಣೆ; ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಪಕ್ಷಕ್ಕೆ ಭಾರೀ ಹಿನ್ನಡೆ

Paris Olympics 2024
ಕ್ರೀಡೆ41 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್48 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ1 hour ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ1 hour ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ3 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ19 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ21 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ22 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌