Kasturirangan Report | ಹೊಸ ಸಮಿತಿ ವಿಚಾರ ಹೊಸದೇನಲ್ಲ! ಆದರೆ ರಾಜ್ಯ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ!! - Vistara News

ಪರಿಸರ

Kasturirangan Report | ಹೊಸ ಸಮಿತಿ ವಿಚಾರ ಹೊಸದೇನಲ್ಲ! ಆದರೆ ರಾಜ್ಯ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ!!

ಕಸ್ತೂರಿ ರಂಗನ್‌ ವರದಿ (Kasturirangan Report ) ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಅಂತಿಮಗೊಳಿಸಲು ನಾಲ್ಕು ತಿಂಗಳ ಹಿಂದೆಯೇ ಸಮಿತಿ ರಚಿಸಿದ್ದರೂ ಅದು ರಾಜ್ಯ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ!

VISTARANEWS.COM


on

Kasturirangan Report
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮಸ್ವಾಮಿ ಹುಲಕೋಡು
ಬೆಂಗಳೂರು: ಕಸ್ತೂರಿ ರಂಗನ್‌ ವರದಿ (Kasturirangan Report) ಜಾರಿಯ ವಿಷಯದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಇನ್ನು ಮುಂದೆ ಈ ವರದಿ ಜಾರಿಯ ಆತಂಕವಿಲ್ಲ. ನಮ್ಮ ಅಭಿಪ್ರಾಯ ಕೇಳಿಯೇ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವ ವಿಷಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮುಂದಿರುವುದರಿಂದ  ಕೋರ್ಟ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಕಸ್ತೂರಿ ರಂಗನ್‌ ವರದಿಯ ಭವಿಷ್ಯ ನಿಂತಿದೆ.

Kasturirangan Report

ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿಯೇ ಇದುವರೆಗೆ ಕೇಂದ್ರ ಸರ್ಕಾರ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯಗಳು ವಿರೋಧಿಸುತ್ತಿದ್ದರೂ 2014 ರಿಂದ ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ʼಸರ್ಕಸ್‌ʼ ಮಾಡುತ್ತಲೇ ಬಂದಿದೆ. ಕಳೆದ ಜನವರಿಯಲ್ಲಿ ನೀಡಿದ ಸೂಚನೆಯಂತೆಯೇ ಈಗಲೂ ಕೂಡ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಾರಿಯೂ ಅಧಿಸೂಚನೆಯನ್ನು ಅಂತಿಮಗೊಳಿಸದಿದ್ದಲ್ಲಿ ನ್ಯಾಯಾಲಯ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದೆ ಎಂಬ ಆತಂಕ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಗಳನ್ನು ಕಾಡುತ್ತಿದೆ.

ಪ್ರತಿ ಬಾರಿಯೂ ಎನ್‌ಜಿಟಿ ಚಾಟಿ ಬೀಸುತ್ತಿರುವುದರಿಂದ ಈ ಬಾರಿ ಹೇಗಾದರೂ ಮಾಡಿ, ಕಸ್ತೂರಿ ರಂಗನ್‌ ವರದಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದುಕೊಂಡು ಇದಕ್ಕೆ ಇರುವ ಆಕ್ಷೇಪಣೆಗಳ ಬಗ್ಗೆ ಪುನರ್‌ ಪರಿಶೀಲಿಸಲು ಕಳೆದ ಏಪ್ರಿಲ್‌ನಲ್ಲಿಯೇ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಿ, ಹೆಚ್ಚು ವಿರೋಧ ವ್ಯಕ್ತವಾಗದಂತೆ ಅಧಿಸೂಚನೆಯನ್ನು ಹೊರಡಿಸಲು ಸಚಿವಾಲಯ ಕ್ರಮ ತೆಗೆದುಕೊಂಡಿತ್ತು.

ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರೊಂದಿಗೆ ರಾಜ್ಯದ ನಿಯೋಗ

ಮೇ 30ರ ಒಳಗೆ ವರದಿ ನೀಡುವಂತೆ ಈ ಹೊಸ ಸಮಿತಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಎರಡು ತಿಂಗಳಿನಲ್ಲಿ ಈ ಸಮಿತಿಯಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂಬುದು ಅಧಿಕಾರಗಳ ಗಮನಕ್ಕೆ ಬಂದಿತ್ತು. ಹೀಗಾಗಿ ಮೇ ಅಂತ್ಯದಲ್ಲಿ ಈ ಸಮಿತಿಯ ಕಾಲಾವಧಿಯನ್ನು ಒಂದು ವರ್ಷಗಳಿಗೆ ವಿಸ್ತರಿಸಿ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ, ಅಗತ್ಯ ಇರುವ ಕಡೆಗೆ ಭೇಟಿ ನೀಡಿ, ಮುಂದೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳನ್ನು ಶಿಫಾರಸು ಮಾಡುವಂತೆ ಸೂಚಿಸಲಾಗಿತ್ತು. ಈ ಸಮಿತಿ ಏಪ್ರಿಲ್‌ನಲ್ಲಿ ಆರಂಭಿಸಿದ್ದ ಕೆಲಸವನ್ನು ಈಗ ಮುಂದುವರಿಸಿದೆ.

ಕಸ್ತೂರಿ ರಂಗನ್‌ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿರುವ ಪಶ್ಚಿಮಘಟ್ಟದ ಅತಿ ಹೆಚ್ಚು ಭಾಗ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದ 56,825 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಆಶ್ಚರ್ಯವೆಂದರೆ, ಆದರೂ ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಸಚಿವಾಲಯ ಈ ಹೊಸ ಸಮಿತಿ ರಚಿಸಿರುವ ವಿಷಯ ಗೊತ್ತೇ ಇರಲಿಲ್ಲ!

ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾದ ಮೇಲೆಯೇ ಗೊತ್ತಾಗಿದ್ದು! ಈ ಸಮಿತಿ ರಚನೆಯಾಗಿರುವ ವಿಷಯ ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಿಂದೆಯೇ ಪ್ರಕಟವಾಗಿತ್ತು. ಅಲ್ಲದೆ ಸಮಿತಿಯ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿರುವ ವರದಿ ರಾಜ್ಯದ ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು. ಜು.12ರಂದೇ ಈ ಸಮಿತಿ ಕೇರಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವು ತಾಂತ್ರಿಕ ಕಾರಣಗಳಿಂದಾಗಿ ಕರಡು ಅಧಿಸೂಚನೆ ಹೊರಡಿಸಿದ ಮೇಲೇಯೇ ಈ ವಿಷಯದ ಕುರಿತು ಎಚ್ಚೆತ್ತುಕೊಂಡಿದ್ದು!

Kasturirangan Report
ತಾವು ಇಎಸ್‌ಎ ಕಮಿಟಿಯ ಅಧ್ಯಕ್ಷರಾಗಿರುವುದಾಗಿ ಏಪ್ರಿಲ್‌ನಲ್ಲಿಯೇ ಸಂಜಯ್‌ ಕುಮಾರ್‌ ಲಿಂಕ್ಡ್‌ ಇನ್‌ನಲ್ಲಿ ಪ್ರಕಟಿಸಿದ್ದರು.

ಕಸ್ತೂರಿ ರಂಗನ್‌ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಕೇಂದ್ರದ ಮುಂದೆ ಧೈರ್ಯವಾಗಿ ಹೇಳಲು ಬಂದಿದ್ದ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯದ ನಿಯೋಗಕ್ಕೆ ನಾಲ್ಕು ತಿಂಗಳ ಹಿಂದೆ ಸಮಿತಿ ರಚಿಸಿದ್ದ ಮಾಹಿತಿಯನ್ನು ನೀಡಿ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಸಾಗಹಾಕಿದ್ದಾರೆ. ಇನ್ನು ಈ ವರದಿಯ ಭಯವಿಲ್ಲ ಎಂದು ನಿಯೋಗ ʼದೊಡ್ಡ ಸಾಧನೆ ಮಾಡಿದಂತೆʼ ರಾಜ್ಯಕ್ಕೆ ಹಿಂದಿರುಗಿದೆ.

ಎನ್‌ಜಿಟಿ ತೀರ್ಪಿನ ಮೇಲೆ ಕಣ್ಣು

ರಾಜ್ಯಗಳು ವಿರೋಧಿಸುತ್ತಿದ್ದರೂ ಕೇಂದ್ರ ಸರ್ಕಾರ ಈ ವರದಿಯ ಜಾರಿಗೆ ಒಂದರ ಹಿಂದೊಂದರಂತೆ ಕರಡು ಅಧಿಸೂಚನೆ ಹೊರಡಿಸುತ್ತಲೇ ಇರುವುದಕ್ಕೆ ಕಾರಣ ನ್ಯಾಯಾಲಯ. ನಿಯೋಗದಲ್ಲಿದ್ದ ಮುಖ್ಯಮಂತ್ರಿ ಮತ್ತು ಇತರ ನಾಯಕರಿಗೆ ಈ ವಿಷಯ ಸ್ಪಷ್ಟವಾದಂತಿಲ್ಲ. ಕೇಂದ್ರ ಸರ್ಕಾರ ಹೆಚ್ಚು ಸುದ್ದಿಯಾಗದಂತೆ ತಜ್ಞ ಅಧಿಕಾರಿಗಳ ಸಮಿತಿ ರಚಿಸಿದ್ದು, ಈ ಅಧಿಸೂಚನೆಯನ್ನು ಅಂತಿಮಗೊಳಿಸಲೇ ಹೊರತು ಕಸ್ತೂರಿ ರಂಗನ್‌ ವರದಿಯನ್ನು ಕೈ ಬಿಡಲಲ್ಲ.

ಕೇಂದ್ರ ಸರ್ಕಾರವೇ ಈ ಹಿಂದೆ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿರುವುದರಿಂದ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದು, ಹೊರ ಬರುವ ದಾರಿ ಹುಡುಕುತ್ತಿದೆ. ಹೀಗಾಗಿಯೇ ಈ ಸಮಿತಿ ರಚನೆಯಾದ ಮೇಲೂ ಕರಡು ಅಧಿಸೂಚನೆಯನ್ನು ಹೊರಡಿಸಿ, ನ್ಯಾಯಾಲಯದ ಚಾಟಿ ಏಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ.

ಪ್ರಕರಣ ನ್ಯಾಯಾಲದ ಮೆಟ್ಟಿಲೇರಿದ್ದೇಕೆ?

ಬಾಹ್ಯಕಾಶ ವಿಜ್ಞಾನಿ ಕಸ್ತೂರಿ ರಂಗನ್‌ ಪಶ್ಚಿಮಘಟ್ಟ ಪರಿಸರ ಉಳಿಸಲು ಈ ವರದಿ ನೀಡಿದ್ದಾದರೂ ಏಕೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. (ಈ ಕುರಿತ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ) ವರದಿ ಜಾರಿಯಾಗಲು ಕಾರಣವಾಗಿದ್ದ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಈ ವಿಷಯವನ್ನು ನ್ಯಾಯಾಲಯದಕ್ಕೂ ಕೊಂಡೋಗಿವೆ.

ಮಾಧವ್‌ ಗಾಡ್ಗೀಳ್‌ ನೇತೃತ್ವದ ಸಮಿತಿಯು 2011 ಆ.31 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಈ ವರದಿಗೆ ಸರ್ಕಾರದ ಕಡೆಯಿಂದ ಸರಿಯಾದ ಮನ್ನಣೆ ದೊರೆತಿರಲಿಲ್ಲ. ಇದಕ್ಕೆ ಮುಖ್ಯ ಆಗ ಅರಣ್ಯ ಸಚಿವರು ಬದಲಾಗಿದ್ದು. ಬಹಳ ಆಸಕ್ತಿಯಿಂದ ಗಾಡ್ಗೀಳ್ ಸಮಿತಿ ರಚಿಸಿದ್ದ ಜಯರಾಮ್ ರಮೇಶ್ ಖಾತೆ ಕಳೆದುಕೊಂಡು, ಆ ಸ್ಥಾನಕ್ಕೆ ಜಯಂತಿ ನಟರಾಜ್ ಬಂದಿದ್ದರು.

ಅವರಿಗೆ ಈ ಬಗ್ಗೆ ಹೆಚ್ಚೇನು ಆಸಕ್ತಿ ಇರಲಿಲ್ಲ. ಆದರೆ ವರದಿಯ ಕುರಿತು ಪರಿಸರವಾದಿಗಳ ನಡುವೆ ಚರ್ಚೆ ನಡೆದೇ ಇತ್ತು. ವರದಿಯಲ್ಲಿ ಏನಿರಬಹುದೆಂಬ ಕುತೂಹಲ ಪಶ್ಚಿಮಘಟ್ಟದ ತಪ್ಪಲಿನ ಜನತೆಯದ್ದು. ಈ ಸಂದರ್ಭದಲ್ಲಿ ಈ ವರದಿಯನ್ನು ಬಹಿರಂಗ ಪಡಿಸಲು ಸರ್ಕಾರ ಹಿಂಜರಿದಿದ್ದು, ಎಲ್ಲಿಲ್ಲದ ಅನುಮಾನಗಳಿಗೆ ಕಾರಣವಾಗಿತ್ತು. ಇದರಲ್ಲೇನೋ ಜನವಿರೋಧಿ ವಿಷಯವಿದೆ ಅದಕ್ಕಾಗಿಯೇ ಮುಚ್ಚಿಡಲಾಗುತ್ತಿದೆ ಎಂಬುದು ಖಚಿತವಾಗುತ್ತಿದ್ದಂತೆಯೇ ಕೆಲವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋದರು. ಕೊನೆಗೆ ಆಯೋಗ ಸೂಚನೆ ನೀಡಿದ ಮೇಲಷ್ಟೇ (ಮಾರ್ಚ್, 2012) ಈ ವರದಿ ಬಹಿರಂಗ ಗೊಂಡಿದ್ದು.

ನಿರೀಕ್ಷೆಯಂತೆಯೇ, ಕೆಲ ಪರಿಸರವಾದಿಗಳ ದೃಷ್ಟಿಯಲ್ಲಿ ಕ್ರಾಂತಿಕಾರಕವೆನಿಸುವ ತೀರ್ಮಾನಗಳನ್ನು ಈ ವರದಿ ಹೊಂದಿತ್ತು. ಆದರೆ ವಿಷಯವನ್ನು ಓದಿ ಪಶ್ಚಿಮಘಟ್ಟದ ತಪ್ಪಲಿನ ಜನತೆ ಬಿಚ್ಚಿ ಬಿದ್ದಿದ್ದರು. ವರದಿ ವಿರೋಧಿಸಿ ಹೋರಾಟ ಆರಂಭವಾಯಿತು. ಕೇರಳದ ಜನತೆ ಒಂದು ಹೆಜ್ಜೆ ಮುಂದೆ ಹೋಗಿ (ಧಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಹೋರಾಟ ತೀವ್ರವಾಗಿತ್ತು) ವರದಿಯನ್ನು ಕೇಂದ್ರ ತಿರಸ್ಕರಿಸಲೇ ಬೇಕೆಂದು ಪಟ್ಟು ಹಿಡಿದು ಕುಳಿತರು.
ಈ ಸಂದರ್ಭದಲ್ಲಿ ಈ ಬಗ್ಗೆ  ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೇ ಕೇಂದ್ರ ಸರ್ಕಾರ ವರದಿಯನ್ನು ಕಪಾಟಿನಲ್ಲಿಟ್ಟು ಸುಮ್ಮನೆ ಕುಳಿತಿತು. ಆದರೆ ಜನತೆ ಸುಮ್ಮನಿರಲಿಲ್ಲ, 1750ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದರು.

Kasturirangan Report

ಕಷ್ಟಪಟ್ಟು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವಂತೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವಲ್ಲ ಎಂದು ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗುವ ತೀರ್ಮಾನಕ್ಕೆ ಬಂದರು. ಆಗಲೇ ಅಂದರೆ 2010ರಲ್ಲಿಯೇ, ಎನ್‌ಜಿಒಗಳ ಹೋರಾಟದ ಪ್ರತಿಫಲವಾಗಿಯೇ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಪೀಠ) ಸ್ಥಾಪಿಸಿತ್ತು. ಇದರ ಮುಂದೆ ಗೋವಾದಲ್ಲಿನ ಗಣಿಗಾರಿಕೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಗೋವಾ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ,(Application No 26/2012 (NGT at New Delhi) (Regarding Western Ghats Conservation) ಗಾಡ್ಗೀಳ್ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಗಮನ ಸೆಳೆಯಿತು.

ಗಾಡ್ಗೀಳ್ ವರದಿಯಲ್ಲಿನ ವಿಚಾರ ತಿಳಿದ ಹಸಿರು ನ್ಯಾಯ ಪೀಠ ಈ ಬಗ್ಗೆ ಕೇಂದ್ರ ಸರ್ಕಾರವನ್ನು ವಿಚಾರಿಸಿತು. ಆಗ ಎಚ್ಚೆತ್ತ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಗಾಡ್ಗೀಳ್ ವರದಿಯನ್ನು ಬದಿಗಿಟ್ಟು 2012 ಆ. 17ರಂದು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಕಾರ್ಯತಂಡ ರಚಿಸಿತು.

Western Ghats Ecology Expert Panel (WGEEP) ಎಂದರೆ ಮಾಧವ ಗಾಡ್ಗೀಳ್ ಸಮಿತಿ ನೀಡದ ವರದಿಯ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವರುಗಳು ನೀಡಿದ ಅಭಿಪ್ರಾಯನ್ನು ಗಣನೆಗೆ ತೆಗೆದುಕೊಂಡು ಪಶ್ಚಿಮ ಘಟ್ಟಗಳಲ್ಲಿನ ನೈಸರ್ಗಿಕ ಪರಿಸರ ವ್ಯವಸ್ಥೆಯ ಸಂರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಸರ್ವಾಂಗೀಣ ಮತ್ತು ಸುಸ್ಥಿರ ಅಭಿವೃದ್ಧಿ ಕಾರ್ಯಗಳನ್ನು ಶಿಫಾರಸು ಗೊಳಿಸುವ ಉದ್ದೇಶದಿಂದ ಉನ್ನತ ಮಟ್ಟದ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತನ್ನ ಈ ತೀರ್ಮಾನಕ್ಕೆ ವಿವರಣೆಯನ್ನೂ ನೀಡಿತು.

ಈ ವಿವರಣೆಯನ್ನೇ ನ್ಯಾಯಾಲಯಕ್ಕೂ ಸಲ್ಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಆದರೆ ಹೆಚ್ಚು ಸಮಯ ಸುಮ್ಮನಿರಲಾಗಲಿಲ್ಲ. ಏಕೆಂದರೆ ಕೇವಲ 10 ಸಭೆ, 4 ವೀಕ್ಷಣೆ, ನಾಲ್ಕು ರಾಜ್ಯಗಳ ಭೇಟಿ ನೀಡಿದ ಕಸ್ತೂರಿ ರಂಗನ್ ನೇತೃತ್ವದ ಸಮಿತಿ 8 ತಿಂಗಳಲ್ಲೇ ಅಂದರೆ ಏಪ್ರಿಲ್ ೧೫, ೨೦೧೩ರಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿಬಿಟ್ಟಿತು! ಈ ವರದಿಯಲ್ಲಿನ ಶಿಫಾರಸುಗಳ ಬಗ್ಗೆಯೂ ತೀವ್ರತರದ ಆಕ್ಷೇಪಣೆಗಳು ಕೇಳಿಬಂದವು. ಮತ್ತೆ ಕರ್ನಾಟಕ ಸೇರಿದಂತೆ ಪಶ್ಚಿಮಘಟ್ಟಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಯಿತು. ಆದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಎನ್‌ಜಿಒಗಳು ಸುಮ್ಮನಿರಲಿಲ್ಲ. ಮತ್ತೆ ನ್ಯಾಯಾಪೀಠದ ಗಮನ ಸೆಳೆದವು.

ಆಗ ನ್ಯಾಯಾಲಯ ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಎರಡು ವರದಿಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಕೇಂದ್ರ ಸರಕಾರ ಸಿಕ್ಕಿಬಿದ್ದಿತು. ಕೊನೆಗೆ ಕಸ್ತೂರಿ ರಂಗನ್ ವರದಿಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ ಆಗಸ್ಟ್ ೨೭, ೨೦೧೪ ರಂದು ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಒಪ್ಪಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತು.

Kasturirangan Report
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ

ಇದರ ಬೆನ್ನಲ್ಲೇ ಕಸ್ತೂರಿ ರಂಗನ್ ವರದಿಯಲ್ಲಿ ಹೇಳಿರುವಂತೆ ಅಧಿಸೂಚನೆ ಹೊರಡಿಸಲು ಕರಡು ಸಿದ್ಧಪಡಿಸಿದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಟ್ಟು, ಇದಕ್ಕೆ ಡಿಸೆಂಬರ್ ೧೫, ೨೦೧೪ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿತ್ತು. ಅಲ್ಲಿಂದ ಆರಂಭವಾದ ಈ ಕರಡು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ! ಜುಲೈ ೬ರಂದು ಸದ್ದಿಲ್ಲದೆ ಐದನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದೆ.

ಇಲ್ಲಿ ಒಂದಂತೂ ಸ್ಪಷ್ಟವಾಗಿದೆ. ಯಾವ ಕಾರಣದಿಂದಾಗಿಯಾದರೂ ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾಗಿರಲಿ, ಅದರಲ್ಲಿ ಎಷ್ಟೇ ಊನಗಳಿರಲಿ, ಅದರಲ್ಲಿಯೇ ಮಾರ್ಪಾಡುಗಳನ್ನು ಮಾಡಿ ಕೇಂದ್ರ ಸರ್ಕಾರ ಈ ವರದಿಯನ್ನು ಜಾರಿಗೆ ತರಲೇಬೇಕಿದೆ. ಏಕೆಂದರೆ ಈಗಾಗಲೇ ಈ ವರದಿಯನ್ನು ಒಪ್ಪಿಕೊಂಡು ಜಾರಿಗೆ ಕ್ರಮ ತೆಗೆದುಕೊಳ್ಳುತ್ತಿರು ವುದಾಗಿ ಅದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿಯಾಗಿದೆ!

ಇದನ್ನೂ ಓದಿ| ಒಂದು ವರ್ಷ ಕಸ್ತೂರಿ ರಂಗನ್‌ ವರದಿಗೆ ಬ್ರೇಕ್‌: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪರಿಸರ

Samyukta Hornad: ಸಿಂಚನ ಎಂಬ ಹುಲಿಯನ್ನೂ ದತ್ತು ಪಡೆದ ಸಂಯುಕ್ತ ಹೊರನಾಡು

Samyukta Hornad: ಸಂಯುಕ್ತ ಹೊರನಾಡು ಅವರು ಟೆಕೆಯಾನ್ ಸಂಸ್ಥೆ ಜೊತೆಗೂಡಿ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

VISTARANEWS.COM


on

Samyukta Hornad
Koo

ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತ ಹೊರನಾಡು (Samyukta Hornad). ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದವರು ಈ ನಟಿ. ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ನಾಯಿ, ಮೊಲ ಎಂದರೆ ಸಂಯುಕ್ತಾ ಹೊರನಾಡುಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

Samyukta Hornad

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೈ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು.

Samyukta Hornad adopted a tiger

ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನವನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು.

ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮಾತನಾಡಿ, ಡೈಮ್ಯಾಂಡ್ ಕ್ಲಾಸ್ ವಿಭಾಗದಲ್ಲಿ ಟೆಕೆಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು. ಟೆಕೆಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಘಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕೆಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ.

Continue Reading

ಪರಿಸರ

Areca Nut Price: ವಿದೇಶಿ ಅಕ್ರಮ ಅಡಿಕೆ ಸಾಗಾಣಿಕೆಯಿಂದ ದೇಶಿಯ ಅಡಿಕೆ ದರ ಕುಸಿತ; ರೈತರಲ್ಲಿ ಆತಂಕ

Domestic Areca Nut Price: ಕಳೆದ ಮೂರು ವರ್ಷಗಳ ಈ ವಿದೇಶಿ ಕಳ್ಳ ಸಾಗಾಣಿಕೆಯ ಸಂಖ್ಯೆ ಮತ್ತು ತೂಕದ ಪ್ರಮಾಣ ಗಮನಿಸಿದರೆ ಅದು ಸ್ಟಾಕ್ ಮಾರ್ಕೇಟ್‌ನ ಏರು ಗತಿಯ ಗ್ರಾಫ್‌ ನಂತೆಯೇ ಇದೆ! ಅಂದರೆ ದಿನದಿಂದ ದಿನಕ್ಕೆ ವಿದೇಶಿ ಕಳಪೆ ಗುಣ ಮಟ್ಟದ ಕಳ್ಳ ಅಡಿಕೆ ದೇಶದ ಒಳಗೆ ಬರುತ್ತಲೇ ಇದೆ. ದೇಶೀಯ ಅಡಿಕೆ ಜತೆ ಈ ಅಡಿಕೆಯನ್ನು ಮಿಶ್ರಣ ಮಾಡಿ ಮಾರುವ ಪ್ರಕ್ರಿಯೆ ಎಡಬಿಡದೆ ನೆಡೆಯುತ್ತಿದೆ. ಅಡಿಕೆ ಬೆಳೆಗಾರರನ್ನು ಇದು ಕಂಗಾಲು ಮಾಡಿದೆ.

VISTARANEWS.COM


on

Areca nut
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಇದು ಪ್ರತೀ ಅಡಿಕೆ ಬೆಳೆಗಾರನೂ ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಡಾ. ವೀರೇಂದ್ರ ಹೆಗ್ಗಡೆಯವರು ಸಂಸದ್‌ನಲ್ಲಿ ಕೇಳಿ ಪಡೆದ ಅಧಿಕೃತ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 184 ಪ್ರಕರಣಗಳಲ್ಲಿ ವಿದೇಶಿ ಅಡಿಕೆ ಕಳ್ಳ ದಾರಿಯಲ್ಲಿ ದೇಶದ ಒಳಗೆ ಬಂದು ಉದುರಿದೆ! ಮೂರು ತಿಂಗಳ ಹಿಂದಕ್ಕೆ ಹೋಗಿ ಕಳೆದ ಮೂರು ವರ್ಷಗಳ ಈ ವಿದೇಶಿ ಕಳ್ಳ ಸಾಗಾಣಿಕೆಯ ಸಂಖ್ಯೆ ಮತ್ತು ತೂಕದ ಪ್ರಮಾಣ ಗಮನಿಸಿದರೆ ಅದು ಸ್ಟಾಕ್ ಮಾರ್ಕೇಟ್‌ನ ಏರು ಗತಿಯ ಗ್ರಾಫ್‌ ನಂತೆಯೇ ಇದೆ! ಅಂದರೆ ದಿನದಿಂದ ದಿನಕ್ಕೆ ವಿದೇಶಿ ಕಳಪೆ ಗುಣ ಮಟ್ಟದ ಕಳ್ಳ ಅಡಿಕೆ ದೇಶದ (Areca Nut Price) ಒಳಗೆ ಬರುತ್ತಲೇ ಇದೆ. ದೇಶೀಯ ಅಡಿಕೆ ಜತೆ ಈ ಅಡಿಕೆಯನ್ನು ಮಿಶ್ರಣ ಮಾಡಿ ಮಾರುವ ಪ್ರಕ್ರಿಯೆ ಎಡಬಿಡದೆ ನೆಡೆಯುತ್ತಿದೆ.

184 ಪ್ರಕರಣಗಳು ಎನ್ನುವುದು ಸೆರೆ ಸಿಕ್ಕ ದಾಖಲಾದ ಪ್ರಕರಣಗಳು. ದಾಖಲಾಗದ ಪ್ರಕರಣಗಳು ಇದರ ಹತ್ತರಷ್ಟಿವೆಯೋ? ನೂರರಷ್ಟಿವೆಯೋ! ವಿದೇಶಿ ಅಕ್ರಮ ಅಡಿಕೆ ಆಮದಿನ ವಿಚಾರದಲ್ಲಿ ಸ್ಪಷ್ಟವಾದ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿಲ್ಲ ಎನ್ನುವುದು ಪ್ರಕರಣಗಳು ಹೆಚ್ಚುತ್ತಿರುವ ಮಾಹಿತಿಯಿಂದ ಸ್ಪಷ್ಟ. ವಿದೇಶಿ ಅಧಿಕೃತ ನೇರ ಆಮದು ಸಾಧ್ಯವೇ ಇಲ್ಲ. ಯಾಕೆಂದರೆ, ಆಮದು ದರ ₹.351 + 100% (₹.752 ಪ್ರತಿ ಕೆಜಿ) ಆಮದು ಸುಂಕ ಇರುವುದರಿಂದ ಯಾರೂ ವಿದೇಶಿ ಅಡಿಕೆಯನ್ನು ಅಷ್ಟು ದುಬಾರಿಯಲ್ಲಿ ಕೊಟ್ಟು ಖರೀಧಿಸುತ್ತಾರೆ? ಪರಿಣಾಮ ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರು ಹುಟ್ಟಿಕೊಂಡಿರುವುದು. ಅವರ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ಇಲ್ಲದಿರುವುದು ಮತ್ತು ಆ ಅಡಿಕೆ ಬರುತ್ತಿರುವ ಕಳ್ಳ ದಾರಿ ಗೆ ನಿಯಂತ್ರಣದ ಚಕ್ ಪೋಸ್ಟ್ ಇಲ್ಲದಿರುವುದು.

arecanut price

ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರ ಮೇಲೆ FIR, ವಿಚಾರಣೆ, ಜೈಲೂಟ, ಪ್ರಾಸಿಕ್ಯುಷನ್ ತನಿಖೆ ಅನುಮತಿ, ತನಿಖೆ ಆದೇಶ, ಜಾಮೀನು, ವಿಚಾರಣೆಗೆ ನೋಟೀಸು, ಪ್ರಕರಣ ಸಿವಿಲ್ ಕೋರ್ಟ್‌‌ನಿಂದ ಹೈ ಕೋರ್ಟಿಗೆ-ಸುಪ್ರೀಮ್ ಕೋರ್ಟ್‌ಗೆ, ಕಠಿಣ ಜೈಲು ಶಿಕ್ಷೆ…….. ಉಹೂಂ ಒಂದೇ ಒಂದು ಪ್ರಕರಣದ ಸುದ್ದಿ ಪತ್ರಿಕೆಗಳಲ್ಲಿ ಬಂದಿಲ್ಲ, ಟಿವಿಯಲ್ಲಿ ‘ದರ್ಶನ’ ವಾಗಿಲ್ಲ. ಎಷ್ಟು ‘ಶೆಡ್‌ಗಳಲ್ಲಿ’ ಈ ವಿದೇಶಿ ಅಕ್ರಮ ಅಡಿಕೆಯನ್ನು ಸಂಗ್ರಹಿಸಿಟ್ಟಿದ್ದರ ಮೇಲೆ ದಾಳಿ ಆದ ಸುದ್ದಿಗಳಿಲ್ಲ! ಎಲ್ಲದರ ಪರಿಣಾಮ ಕಳಪೆ ಗುಣಮಟ್ಟದ ಅಡಿಕೆ ಮಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ. ಅದನ್ನು ತಂದು ದೇಶೀಯ ರೈತರ ಅಡಿಕೆ ಜೊತೆ ಹದವಾಗಿ ಮಿಶ್ರಣ ಮಾಡಿ ಅಡಿಕೆ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗಿ, ಅಲ್ಲೇ ಸೈಲಂಟ್ ಆಗುವ ಉಡುಪಿ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಕಾಲೇಜ್‌ಗಳಲ್ಲಿನ ವಿದೇಶಿ ಡ್ರಗ್ಸ್ ದಂದೆಯಂತೆ, ಈ ವಿದೇಶಿ ಕಳಪೆ ಅಡಿಕೆ ಸುಲಭವಾಗಿ ದೊರೆಯುವಂತಾಗಿದೆ ಎನ್ನುವುದು ಸ್ಪಷ್ಟ. ವಿದೇಶಿ ಡ್ರಗ್ಸ್ ಮತ್ತು ವಿದೇಶಿ ಕಳ್ಳ ಅಡಿಕೆ ಅಮದು ನಿಲ್ಲಿಸಲು ಕೇಂದ್ರ ತನ್ನ ಭೀಮ ಶಕ್ತಿಯನ್ನು ಪ್ರಯೋಗಿಸಬೇಕಿದೆ. ಇಲ್ಲದೇ ಇದ್ದರೆ, ಅಡಿಕೆ ದರ ಇನ್ನಷ್ಟು ನೆಲ ಕಚ್ಚುವುದು ನಿಶ್ಚಿತ. ಮಲೆನಾಡು, ಕರಾವಳಿಯ ಎಲ್ಲ ಸಂಸದರು ಅಡಿಕೆ ಬೆಳೆಗಾರರ ಪರವಾಗಿ ಒಂದು ದಿಟ್ಟ ಕ್ರಮದ ಹೆಜ್ಜೆಗೆ ಮುಂದಾಗಬಹುದಾ?

ಇದನ್ನೂ ಓದಿ: Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

Continue Reading

ಪರಿಸರ

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

ಪ್ರತಿಯೊಂದು ಜೀವಿಗೂ (wildlife) ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Wildlife
Koo

ಭೂಮಿ ಮೇಲೆ ಅಸಂಖ್ಯಾತ ಜೀವಿಗಳಿವೆ. ಕಣ್ಣಿಗೆ ಕಾಣದ ಜೀವಿಗಳಿಂದ (wildlife) ಹಿಡಿದು ಬೃಹತ್ ಗಾತ್ರದವರೆಗಿನ ಜೀವರಾಶಿಗಳು ತಮ್ಮದೇ ಆದ ಜೀವನಶೈಲಿ (Lifestyle), ಆಹಾರ ಶೈಲಿಯನ್ನು (food style) ಹೊಂದಿದೆ. ಭೂಮಿ (earth) ಮೇಲೆ ಇರುವ ಎಲ್ಲ ಜೀವರಾಶಿಗಳ ಪರಿಚಯ ಮಾನವನಿಗೆ ಇನ್ನೂ ಆಗಿಲ್ಲ. ಕೆಲವು ಜೀವಿಗಳ ಪರಿಚಯವಿದ್ದರೆ ಇನ್ನು ಕೆಲವು ನಮಗೆ ತಿಳಿದೇ ಇಲ್ಲ. ನಾವು ಗುರುತಿಸಬಲ್ಲ ಅನೇಕ ಜೀವಿಗಳ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ.

ಪ್ರತಿಯೊಂದು ಜೀವಿಗೂ ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು.

Wildlife
Wildlife


ಹುಟ್ಟಿದ ಕ್ಷಣದಿಂದ ತಾಯಿಗೇ ಅಪಾಯವನ್ನುಂಟು ಮಾಡುವ ಜೀವಿಯೆಂದರೆ ಚೇಳು (scorpions). ಅತ್ಯಂತ ಪ್ರಬಲ ವಿಷವನ್ನು ಹೊಂದಿರುವ ಚೇಳಿನ ಸಣ್ಣ ಪ್ರಮಾಣ ವಿಷವೂ ಮನುಷ್ಯನಿಗೆ ಅಪಾಯ ತರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಚೇಳು ಕಡಿತವು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ಚೇಳುಗಳು ಸಾಮಾನ್ಯವಾಗಿ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಕುಟುಕು ಮೂಲಕ ತಮ್ಮ ವಿಷವನ್ನು ಉಣಿಸುತ್ತದೆ. ಈ ವಿಷವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚೇಳು ತನ್ನ ಬೇಟೆಯನ್ನು ಜೀವಂತವಾಗಿ ಸೇವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಣ್ಣು ಚೇಳುಗಳು ಒಂದೇ ಬಾರಿಗೆ ಸರಿಸುಮಾರು 100 ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳು ಸೇರಿ ಅಂತಿಮವಾಗಿ ತಾಯಿಯನ್ನೇ ತಿನ್ನುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ತಾಯಿ ಚೇಳು ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ರಕ್ಷಿಸುತ್ತದೆ.


ಹೆಣ್ಣು ಚೇಳು ಮರಿಗಳನ್ನು ಬೆನ್ನಿನ ಮೇಲೆ ಇರಿಸಿ ಸಾಕುತ್ತದೆ. ಕ್ರಮೇಣ ಅವುಗಳು ತಾಯಿಯನ್ನೇ ಸಂಪೂರ್ಣವಾಗಿ ತಿನ್ನುತ್ತವೆ. ಮರಿಗಳು ಜನನದ ಅನಂತರ ತಕ್ಷಣವೇ ತಾಯಿಯ ಬೆನ್ನಿಗೆ ಅಂಟಿಕೊಳ್ಳುತ್ತವೆ. ತಾಯಿ ಕ್ಷೀಣಿಸಿ ನಾಶವಾಗುವವರೆಗೆ ಅದರ ಮಾಂಸವನ್ನು ತಿನ್ನುತ್ತವೆ. ತಾಯಿಯ ಎಲ್ಲಾ ಮಾಂಸವನ್ನು ಕಬಳಿಸಿದ ಅನಂತರವೇ ಚೇಳುಗಳು ಬೆನ್ನಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕಲು ಪ್ರಾರಂಭಿಸುತ್ತವೆ!

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!


ಚೇಳುಗಳು ಸಾಮಾನ್ಯವಾಗಿ ಕೀಟಗಳು ಮತ್ತು ಇತರ ಅಕಶೇರುಕಗಳನ್ನು ಬೇಟೆಯಾಗಿ ಗುರಿಯಾಗಿಸಿಕೊಳ್ಳುತ್ತವೆ. ಆದರೆ ಕೆಲವು ಪ್ರಭೇದಗಳು ಕಶೇರುಕಗಳನ್ನು ಬೇಟೆಯಾಡುತ್ತವೆ. ಅವುಗಳ ವಿಷಕಾರಿ ಕುಟುಕು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಣಯದ ಸಮಯದಲ್ಲಿ ಗಂಡು ಮತ್ತು ಹೆಣ್ಣು ಚೇಳುಗಳು ನೃತ್ಯದಲ್ಲಿ ತೊಡಗುತ್ತವೆ. ಎಲ್ಲಾ ಪ್ರಭೇದದ ಚೇಳುಗಳು ಮರಿಗಳಿಗೆ ಜನ್ಮ ನೀಡುತ್ತವೆ.

Continue Reading

ಪರಿಸರ

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

International Cat Day: ನಿರ್ಭೀತ ಮತ್ತು ಸ್ನೇಹ ಮನೋಭಾವದಿಂದ ಮನೆಯಲ್ಲಿ ಎಲ್ಲರನ್ನೂ ಆಕರ್ಷಿಸುವ ಬೆಕ್ಕುಗಳ ಕುರಿತ ಹಲವು ಸಂಗತಿಗಳು ಕುತೂಹಲಕರ. ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಇಂದು ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆ (International Cat Day). ಈ ವಿಶೇಷ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

VISTARANEWS.COM


on

By

International Cat Day
Koo

ನಾವು ಸಾಕುವ ಮುದ್ದಿನ ಪ್ರಾಣಿಗಳಲ್ಲಿ ಬೆಕ್ಕು (cat) ಕೂಡ ಒಂದಾಗಿದೆ. ವಿಶ್ವದಾದ್ಯಂತ ಇಂದು ಬೆಕ್ಕಿನ ದಿನವನ್ನು (International Cat Day) ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 8ರಂದು ಆಚರಿಸಲಾಗುವ ಈ ದಿನದಂದು ಮಾನವನ ಅತ್ಯಂತ ಹಳೆಯ ಮತ್ತು ಪ್ರೀತಿಯ ಪ್ರಾಣಿ ಸಹಚರರಲ್ಲಿ ಒಂದಾದ ಬೆಕ್ಕನ್ನು ಗೌರವಿಸಲಾಗುತ್ತದೆ.

ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಕೂಡ ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಪ್ರಾಚೀನ ಈಜಿಪ್ಟ್‌ನಲ್ಲಿ ಬೆಕ್ಕುಗಳನ್ನು ದೈವಿಕ ಜೀವಿಯಾಗಿ ಪೂಜಿಸಲಾಗುತ್ತಿತ್ತು. ಅವುಗಳು ತಮ್ಮ ಸ್ವಾತಂತ್ರ್ಯ, ಕುತೂಹಲ ಮತ್ತು ನಿರ್ಭೀತ ಮನೋಭಾವದಿಂದ ಎಲ್ಲರನ್ನೂ ಆಕರ್ಷಿಸುತ್ತವೆ. ಅವುಗಳ ಸೊಗಸಾದ ದೈಹಿಕ ಲಕ್ಷಣಗಳು ಮತ್ತು ಸಣ್ಣಪುಟ್ಟ ಗಾಯ, ಆರೋಗ್ಯ ಸಮಸ್ಯೆಗಳನ್ನು ಸ್ವಯಂ ಗುಣಪಡಿಸುವ ಸಾಮರ್ಥ್ಯವು ಅವುಗಳನ್ನು ವಿಶೇಷವನ್ನಾಗಿ ಮಾಡಿವೆ.

ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆಯ ಈ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.


ಬೆಕ್ಕುಗಳ ವಯಸ್ಸು ಎಷ್ಟು?

ಸಾಮಾನ್ಯವಾಗಿ ಬೆಕ್ಕುಗಳು ಮಾನವನ ವಯಸ್ಸಿಗೆ ಹೋಲಿಸಿದರೆ 116 ವರ್ಷಗಳ ಕಾಲ ಬದುಕುತ್ತವೆ. ಅವುಗಳ ಜೀವನವು ಆರು ಹಂತಗಳನ್ನು ಹೊಂದಿರುತ್ತದೆ. ಅದರಲ್ಲಿ ಆರು ತಿಂಗಳವರೆಗೆ ಅದು ಮಗುವಾಗಿರುತ್ತದೆ. ಬಳಿಕ 7 ತಿಂಗಳಿನಿಂದ 2 ವರ್ಷಗಳವರೆಗೆ ಜೂನಿಯರ್, 3ರಿಂದ 6 ವರ್ಷಗಳವರೆಗೆ ವಯಸ್ಕ, 7 ರಿಂದ 10 ವರ್ಷಗಳವರೆಗೆ ಪ್ರಬುದ್ಧ, 11ರಿಂದ 14 ವರ್ಷಗಳವರೆಗೆ ಹಿರಿಯ, 15 ರಿಂದ 25 ವರ್ಷಗಳವರೆಗೆ ಬಹು ಹಿರಿಯ ವಯಸ್ಕ ಆಗಿರುತ್ತದೆ.


ವಿಶೇಷ ಸಾಮರ್ಥ್ಯ

ಬೆಕ್ಕುಗಳು ಹೆಚ್ಚು ಪ್ರಭಾವಶಾಲಿ ಕಿವಿಗಳ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ತಮ್ಮ ಕಿವಿಗಳನ್ನು 180 ಡಿಗ್ರಿಗಳಷ್ಟು ತಿರುಗಿಸಬಲ್ಲವು! ಪ್ರತಿ ಕಿವಿಯಲ್ಲಿ 32 ಸ್ನಾಯುಗಳಿವೆ. ಮಾನವನಲ್ಲಿ ಕೇವಲ ಆರು ಕಿವಿ ಸ್ನಾಯುಗಳಿವೆ. ಅವುಗಳು ಮನುಷ್ಯರಂತೆ ಶಬ್ದಗಳ ಮೂಲವನ್ನು ನಿಖರವಾಗಿ ಗುರುತಿಸುತ್ತವೆ.

ಅತ್ಯುತ್ತಮ ದೃಷ್ಟಿಯ ಹೊರತಾಗಿ ಬೆಕ್ಕುಗಳು ಉತ್ತಮ ಗ್ರಹಿಕಾ ಸಾಮರ್ಥ್ಯ ಹೊಂದಿರುತ್ತವೆ. ಬೇಟೆಯು ಸಮೀಪಿಸಿದಾಗ ಅವುಗಳ ವಾಸನೆಯ ಪ್ರಜ್ಞೆ ಜಾಗೃತವಾಗುತ್ತದೆ. ಅವುಗಳ ವಾಸನೆಯ ಅಸಾಧಾರಣ ಪ್ರಜ್ಞೆಯಿಂದ 200 ವಿಭಿನ್ನ ಪರಿಮಳಗಳನ್ನು ನೆನಪಿಸಿಕೊಳ್ಳುತ್ತವೆ.


ಬೆಕ್ಕುಗಳು ಕಾಲ್ಬೆರಳುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಹೆಚ್ಚುವರಿ ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಒಂದು ಬೆಕ್ಕಿನ ಮೇಲೆ ಅತಿ ಹೆಚ್ಚು ಕಾಲ್ಬೆರಳುಗಳ ದಾಖಲೆ 32 ಆಗಿದೆ.

ದಿನಚರಿ ಏನು?

ಸಾಕು ಬೆಕ್ಕುಗಳು ತಮ್ಮ ದಿನದಲ್ಲಿ ಶೇ. 70ರಷ್ಟು ಸಮಯವನ್ನು ನಿದ್ದೆಯಲ್ಲಿ ಕಳೆಯುತ್ತವೆ. ಶೇ. 15ರಷ್ಟು ಸಮಯವನ್ನು ಶೃಂಗಾರದಲ್ಲಿ ಕಳೆಯುತ್ತವೆ. ಮನೆಯಲ್ಲಿ ಬೇಟೆಯಾಡದೇ ಇದ್ದರೂ ಬೇಟೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸುತ್ತವೆ ಮತ್ತು ಶಕ್ತಿಯನ್ನು ಉಳಿಸುತ್ತದೆ. ವಯಸ್ಕ ಬೆಕ್ಕುಗಳು ದಿನಕ್ಕೆ 16- 20 ಗಂಟೆಗಳ ಕಾಲ ನಿದ್ರಿಸುತ್ತವೆ. ವಯಸ್ಸಾದ ಬೆಕ್ಕುಗಳು ಸುಮಾರು 24 ಗಂಟೆಗಳ ಕಾಲ ಮಲಗುವುದೂ ಉಂಟು!


ತಳಿಗಳು

ಬೆಕ್ಕುಗಳಲ್ಲಿ ಸೈಬೀರಿಯನ್, ರಾಗ್ಡಾಲ್, ಮೈನೆ ಕೂನ್ ಮತ್ತು ಬ್ರಿಟಿಷ್ ಶೋರ್ಥೈರ್‌ನಂತಹ ಪ್ರಮುಖ ತಳಿಗಳಿವೆ. ದೊಡ್ಡ ಗಂಡು ಬೆಕ್ಕುಗಳು ಸುಮಾರು 20 ಪೌಂಡ್ ತೂಗುತ್ತವೆ. ಈ ತಳಿಗಳು ತಮ್ಮ ದೊಡ್ಡ ಗಾತ್ರ ಮತ್ತು ಸ್ನೇಹಪರ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದೆ.


ಸಂವಹನ ಹೇಗೆ?

ಮಿಯಾಂವ್ ಎನ್ನುವುದು ಬೆಕ್ಕುಗಳಿಗೆ ಸಹಜ ಭಾಷೆಯಲ್ಲ. ಅವು ಮನುಷ್ಯರೊಂದಿಗೆ ಸಂವಹನ ನಡೆಸಲು ಇದನ್ನು ಅಭಿವೃದ್ಧಿಪಡಿಸಲಾಯಿತು. ಕಾಡಿನಲ್ಲಿ ವಯಸ್ಕ ಬೆಕ್ಕುಗಳು ವಾಸನೆ, ಮುಖದ ಅಭಿವ್ಯಕ್ತಿ, ದೇಹ ಭಾಷೆ ಮತ್ತು ಸ್ಪರ್ಶದಂತಹ ವಿವಿಧ ಮೌಖಿಕ ಸೂಚನೆಗಳೊಂದಿಗೆ ಸಂವಹನ ನಡೆಸುತ್ತವೆ. ಆದರೆ ಸಾಕು ಬೆಕ್ಕುಗಳು ತಮ್ಮ ಅಗತ್ಯಗಳನ್ನು ಮನುಷ್ಯರಿಗೆ ತಿಳಿಸಲು ಮಿಯಾಂವ್ ಶಬ್ದದ ಬಳಕೆ ಮಾಡುತ್ತವೆ.


ನಂಬಿಕೆ

ಅನೇಕ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬಿಳಿ ಬೆಕ್ಕುಗಳು ಶುದ್ಧತೆ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಬಿಳಿ ಬೆಕ್ಕಿನ ಕನಸು ಬಿದ್ದರೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ:International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

ಇದರ ಬಳಕೆ ಹೇಗೆ?

ಬೆಕ್ಕುಗಳನ್ನು ಸಂಚಾರ ಮತ್ತು ಸಂವಹನಕ್ಕೆ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ. ವಿಶೇಷ ಕೂದಲುಗಳಿರುವ ಬೆಕ್ಕುಗಳು ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಸಂದೇಶಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಬೆಕ್ಕಿನ ಮೀಸೆಯನ್ನು ಮುಂದಕ್ಕೆ ತೋರಿಸಿದಾಗ ಅದು ಆತ್ಮವಿಶ್ವಾಸ ಮತ್ತು ನಿರಾಳತೆಯ ಭಾವನೆಯನ್ನು ಸೂಚಿಸುತ್ತದೆ. ವ್ಯತಿರಿಕ್ತವಾಗಿ, ಅವುಗಳನ್ನು ಹಿಂದಕ್ಕೆ ಎಳೆದರೆ ಅದು ಹೆದರಿಕೆ ಅಥವಾ ಬೆದರಿಕೆಯನ್ನು ಅನುಭವಿಸುತ್ತಿದೆ ಎಂಬುದು ಅರ್ಥ.

ಬೆಕ್ಕುಗಳ ಗುಂಪನ್ನು “ಕ್ಲೋಡರ್” ಎಂದು ಕರೆಯಲಾಗುತ್ತದೆ ಮತ್ತು ಗಂಡು ಬೆಕ್ಕನ್ನು ಸಾಮಾನ್ಯವಾಗಿ “ಟಾಮ್” ಎಂದು ಕರೆಯಲಾಗುತ್ತದೆ. ಆದರೆ ಹೆಣ್ಣು ಬೆಕ್ಕನ್ನು ಸಾಮಾನ್ಯವಾಗಿ ʼರಾಣಿʼ ಎಂದು ಕರೆಯಲಾಗುತ್ತದೆ.

Continue Reading
Advertisement
Actor darshan
ಪ್ರಮುಖ ಸುದ್ದಿ3 ಗಂಟೆಗಳು ago

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

KEA UGCET 2024
ಬೆಂಗಳೂರು4 ಗಂಟೆಗಳು ago

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

ಚಿಕ್ಕೋಡಿ4 ಗಂಟೆಗಳು ago

Physical Abuse: ಬಾಲಕಿಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದಿದ್ದ ನೀಚನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌

BBMP plans to make arrangements for food in areas where stray dogs do not get food
ಬೆಂಗಳೂರು5 ಗಂಟೆಗಳು ago

Street Dogs : ಬೀದಿನಾಯಿಗಳ ಹಸಿವು ನೀಗಿಸಲು ಮುಂದಾದ ಬಿಬಿಎಂಪಿ; ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ

Cm Siddaramaiah
ಬೆಂಗಳೂರು5 ಗಂಟೆಗಳು ago

CM Siddaramaiah : ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

Mahalaya Amavasya on Gandhi Jayanti Poultry Association demands withdrawal of ban on sale of meat
ಬೆಂಗಳೂರು6 ಗಂಟೆಗಳು ago

Mahalaya Amavasya 2024: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ; ಮಾಂಸ ಮಾರಾಟ ನಿಷೇಧ ಹಿಂಪಡೆಯುವಂತೆ ಒತ್ತಾಯ

Road Accident
ಬೆಂಗಳೂರು8 ಗಂಟೆಗಳು ago

Road Accident : ಆಟೋಗೆ ಲೋಡ್‌ ತುಂಬಿದ್ದ ಲಾರಿ ಡಿಕ್ಕಿ; ಚಾಲಕನ ನಿದ್ರೆ ಮಂಪರಿಗೆ ಜೀವ ಬಿಟ್ಟಳು ಯುವತಿ

Techie robbery plans to delete her photo video from lovers mobile phone
ಬೆಂಗಳೂರು9 ಗಂಟೆಗಳು ago

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Hopcoms store loses charm in Bengaluru
ಬೆಂಗಳೂರು9 ಗಂಟೆಗಳು ago

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

fire accident
ಬೆಂಗಳೂರು ಗ್ರಾಮಾಂತರ10 ಗಂಟೆಗಳು ago

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌