Startup investment| ಬೆಂಗಳೂರಿನ ಐಸ್ಟೆಮ್‌ನಲ್ಲಿ 51 ಕೋಟಿ ರೂ. ಹೂಡಿಕೆ - Vistara News

ವಾಣಿಜ್ಯ

Startup investment| ಬೆಂಗಳೂರಿನ ಐಸ್ಟೆಮ್‌ನಲ್ಲಿ 51 ಕೋಟಿ ರೂ. ಹೂಡಿಕೆ

ಬೆಂಗಳೂರು ಮೂಲದ ಸೆಲ್‌ ಥೆರಪಿ ಸ್ಟಾರ್ಟಪ್‌ ಆಗಿರುವ ಐಸ್ಟೆಮ್‌ ಹೂಡಿಕೆದಾರರಿಂದ ಹೊಸತಾಗಿ 51 ಕೋಟಿ ರೂ. ಹೂಡಿಕೆ ಗಳಿಸಿದೆ.

VISTARANEWS.COM


on

eyestem
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರು ಮೂಲದ ಸೆಲ್‌ ಥೆರಪಿ ಕಂಪನಿಯಾದ ಐಸ್ಟೆಮ್‌ ನಲ್ಲಿ (Eyestem) ಮೂರು ಔಷಧ ಕಂಪನಿಗಳು ೫೧ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಿವೆ.

ಬಯೊಲಾಜಿಕಲ್‌ ಇ (ಬಿಇ), ಅಲ್ಕೆಮ್‌, ನ್ಯಾಟ್ಕೊ ಮತ್ತು ಕೆಮ್‌ವೆಲ್‌ ಬಯೊಫಾರ್ಮಾದ ಪ್ರವರ್ತಕರಾದ ಅನುರಾಗ್‌ ಮತ್ತು ಕರಣ್‌ ಬಗಾರಿಯಾ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.

ಹಾಲಿ ಹೂಡಿಕೆದಾರರಾದ ಎಂಡಿಯಾ ಪಾರ್ಟ್‌ನರ್ಸ್‌ ಮತ್ತು ಕೋಟಕ್‌ ಪ್ರೈವೇಟ್‌ ಈಕ್ವಿಟಿ ಕೂಡ ಈ ಸುತ್ತಿನಲ್ಲಿ ಭಾಗವಹಿಸಿವೆ. ಇದರೊಂದಿಗೆ ಸಂಸ್ಥೆಯ ಒಟ್ಟು ಮೌಲ್ಯ ೩೭೧ ಕೋಟಿ ರೂ.ಗೆ ಏರಿಕೆಯಾಗಿದೆ.

೨೦೧೬ರಲ್ಲಿ ಸ್ಥಾಪನೆಯಾದ ಐಸ್ಟೆಮ್‌, ಕ್ಲಿನಿಕಲ್‌ ಸಂಶೋಧನೆ, ಔಷಧ ಉತ್ಪಾದನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

Money Guide: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ  ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಈ ವರ್ಷ ಸರ್ಕಾರ ಪಿಎಫ್‌ ಖಾತೆಗಳಿಗೆ ಸಂಬಂಧಿಸಿದ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇನು ಎನ್ನುವ ವಿವರ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಕೆಲವೊಮ್ಮೆ ತೀರಾ ಅನಿವಾರ್ಯ ಸಂದರ್ಭದಲ್ಲಿ ಕೆಲವೊಂದಷ್ಟು ಮೊತ್ತವನ್ನು ಹಿಂಪಡೆಯಬಹುದು. ಹೀಗಾಗಿ ಪಿಎಫ್‌ ಉದ್ಯೋಗಿಗಳ ಪಾಲಿಗೆ ಆಪತ್ಬಾಂಧವ ಎನಿಸಿಕೊಂಡಿದೆ. ಈ ವರ್ಷ ಸರ್ಕಾರ ಪಿಎಫ್‌ ಖಾತೆಗಳಿಗೆ ಸಂಬಂಧಿಸಿದ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇನು ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಅಟೋ ಸೆಟಲ್‌ಮೆಂಟ್‌

ಹೊಸದಾಗಿ ಅಟೋ ಸೆಟಲ್‌ಮೆಂಟ್‌ ಸೌಲಭ್ಯವನ್ನು ಇಪಿಎಫ್ಒ ಇತ್ತೀಚೆಗೆ ಪರಿಚಯಿಸಿದೆ. ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್‌ನಲ್ಲಿ ಅಟೋ ಸೆಟಲ್‌ಮೆಂಟ್‌ ಮೋಡ್ ಅನ್ನು ಪರಿಚಯಿಸಲಾಗಿತ್ತು. ಈಗ ಈ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಮತ್ತು ಮದುವೆಯ ಆಯ್ಕೆಯನ್ನೂ ಪರಿಚಯಿಸಲಾಗಿದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಇದನ್ನು ಸ್ವಯಂ ಪ್ರಕ್ರಿಯೆಗೊಳಿಸಲಾಗುತ್ತದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಐಟಿ ವ್ಯವಸ್ಥೆಯಿಂದ ಇಂತಹ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಮಲ್ಟಿ ಲೊಕೇಷನ್‌ ಕ್ಲೈಮ್‌ ಸೆಟಲ್‌ಮೆಂಟ್‌

ಇಪಿಎಫ್ ಕ್ಲೈಮ್ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ಇಪಿಎಫ್ಒ ಬಹು-ಸ್ಥಳ ಇತ್ಯರ್ಥಕ್ಕಾಗಿ ಲಿಂಕ್ ಕಚೇರಿ ಸೆಟಪ್ ಪರಿಚಯಿಸಿದೆ. ಇದರೊಂದಿಗೆ ಕ್ಲೈಮ್‌ಗೆ ಸಂಬಂಧಿಸಿದ ಹೊರೆಯನ್ನು ಕಡಿಮೆ ಮಾಡಬಹುದು. ಇದು ಕ್ಲೈಮ್‌ ಪ್ರಕ್ರಿಯೆಯನ್ನೂ ವೇಗಗೊಳಿಸುತ್ತದೆ.

ಆಧಾರ್ ವಿವರ ಇಲ್ಲದೆ ಇಪಿಎಫ್ ಡೆತ್ ಕ್ಲೈಮ್‌

ಒಂದು ವೇಳೆ ಪಿಎಫ್‌ ಗ್ರಾಹಕ ಮೃತಪಟ್ಟರೆ ಆಧಾರ್ ವಿವರಗಳನ್ನು ನೀಡದೆ ಡೆತ್‌ ಕ್ಲೈಮ್‌ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಆಯ್ಕೆಯನ್ನು ಪರಿಚಯಿಸಲಾಗಿದೆ. ಇದನ್ನು ತಾತ್ಕಾಲಿಕ ಕ್ರಮವಾಗಿ ಜಾರಿಗೆ ತರಲಾಗಿದೆ. ಜತೆಗೆ ಇದಕ್ಕೆ ಒಐಸಿ (OIC)ಯಿಂದ ಸರಿಯಾದ ಅನುಮೋದನೆಯ ಅಗತ್ಯವಿದೆ.

ಚೆಕ್ ಲೀಫ್ ಕಡ್ಡಾಯ ಅಪ್‌ಲೋಡ್‌ ನಿಯಮ ಸಡಿಲಿಕೆ

2024ರ ಮೇ 28ರ ಸುತ್ತೋಲೆಯಲ್ಲಿ ಇಪಿಎಫ್ಒ ಕೆಲವು ಸಂದರ್ಭಗಳಲ್ಲಿ ಚೆಕ್ ಲೀಫ್ ಇಮೇಜ್ ಅಥವಾ ದೃಢೀಕರಿಸಿದ ಬ್ಯಾಂಕ್ ಪಾಸ್‌ಬುಕ್‌ ಅನ್ನು ಅಪ್‌ಲೋಡ್‌ ಮಾಡುವ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದೆ. ಈ ಕ್ರಮವು ಆನ್‌ಲೈನ್ ಕ್ಲೈಮ್ ಪ್ರಕ್ರಿಯೆಯನ್ನು ಹೆಚ್ಚು ತ್ವರಿತವಾಗಿ ಸುಗಮಗೊಳಿಸುತ್ತದೆ. ಜತೆಗೆ ಕ್ಲೈಮ್‌ ವಿಫಲವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆಧರೆ ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ವಾಣಿಜ್ಯ

Stock Market: ಫಲಿತಾಂಶದ ಬಳಿಕ ಷೇರು ಪೇಟೆ ನೆಗೆತ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಲಾಭ

Stock Market: ಬಿಎಸ್‌ಇ ಸೆನ್ಸೆಕ್ಸ್‌ 1,618 ಪಾಯಿಂಟ್‌ಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 76693 ಪಾಯಿಂಟ್ಸ್‌ಗೆ ಏರಿಕೆಯಾಯಿತು. ಇನ್ನು ಎನ್‌ಎಸ್‌ಇ ನಿಫ್ಟಿಯು 468 ಪಾಯಿಂಟ್‌ಗಳ ಏರಿಕೆಯೊಂದಿಗೆ ಕಳೆದ ಒಂದು ವರ್ಷದಲ್ಲಿಯೇ ದಾಖಲೆಯ 23,290 ಪಾಯಿಂಟ್‌ಗಳನ್ನು ತಲುಪಿತು. ಇದರಿಂದಾಗಿ, ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದರು ಎಂದು ತಿಳಿದುಬಂದಿದೆ.

VISTARANEWS.COM


on

Stock Market
Koo

ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶದ ದಿನ (ಜೂನ್‌ 4) (Lok Sabha Election Result 2024) ಷೇರು ಮಾರುಕಟ್ಟೆಯಲ್ಲಿ (Stock Market) ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ, ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾದ ಬೆನ್ನಲ್ಲೇ ಷೇರುಪೇಟೆಯು ಲಯಕ್ಕೆ ಮರಳಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಶುಕ್ರವಾರ ಶುಭ ಶುಕ್ರವಾರ ಆಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ಹಾಗೂ ಎನ್‌ಎಸ್‌ಇ ನಿಫ್ಟಿ ದಾಖಲೆಯ ಏರಿಕೆಯಿಂದಾಗಿ ಶುಕ್ರವಾರ ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಸುಮಾರು 21 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ತಿಳಿದುಬಂದಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,618 ಪಾಯಿಂಟ್‌ಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 76693 ಪಾಯಿಂಟ್ಸ್‌ಗೆ ಏರಿಕೆಯಾಯಿತು. ಇನ್ನು ಎನ್‌ಎಸ್‌ಇ ನಿಫ್ಟಿಯು 468 ಪಾಯಿಂಟ್‌ಗಳ ಏರಿಕೆಯೊಂದಿಗೆ ಕಳೆದ ಒಂದು ವರ್ಷದಲ್ಲಿಯೇ ದಾಖಲೆಯ 23,290 ಪಾಯಿಂಟ್‌ಗಳನ್ನು ತಲುಪಿತು. ಇದರಿಂದಾಗಿ, ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದರು ಎಂದು ತಿಳಿದುಬಂದಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಷೇರು ಮಾರುಕಟ್ಟೆಯು ಮತ್ತೆ ಲಯಕ್ಕೆ ಮರಳಿದಂತಾಗಿದೆ.

ಬಿಎಸ್‌ಇ ಸೆನ್ಸೆಕ್ಸ್‌ ಪಾಯಿಂಟ್‌ಗಳ ಏರಿಕೆಯಾದ ಕಾರಣ ಮಾರುಕಟ್ಟೆಯ ಬಂಡವಾಳವು 415 ಲಕ್ಷ ಕೋಟಿ ರೂಪಾಯಿಯಿಂದ 423 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಹೂಡಿಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುವುದು ಖಚಿತವಾದ ಕಾರಣ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಮುಂದುವರಿದಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಲಯದ ಭರವಸೆ ಇದೆ ಎನ್ನಲಾಗಿದೆ.

ನಿಫ್ಟಿ ಐಟಿಯ ಷೇರುಗಳ ಮೌಲ್ಯವು ಶೇ.3.5ರಷ್ಟು ಏರಿಕೆಯಾದ ಕಾರಣ ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಹಾಗೂ ಟಿಸಿಎಸ್‌ ಸೇರಿ ಹಲವು ಕಂಪನಿಗಳು ಉತ್ತಮ ಲಾಭ ಗಳಿಸಿವೆ. ಶೋಭಾ ಲಿಮಿಟೆಡ್‌, ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌, ಟಿವಿಎಸ್‌ ಮೋಟರ್‌ ಲಿಮಿಟೆಡ್‌, ರಿಲಯನ್ಸ್‌, ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌ ಸೇರಿ ಹಲವು ಕಂಪನಿಗಳು ಭಾರಿ ಪ್ರಮಾಣದಲ್ಲಿ ಲಾಭ ಗಳಿಸಿವೆ.

ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Continue Reading

ಚಿನ್ನದ ದರ

Gold Rate Today: ಸತತ ಎರಡನೇ ದಿನವೂ ದುಬಾರಿಯಾದ ಚಿನ್ನ; ಇಂದಿನ ದರದ ಮಾಹಿತಿ ಇಲ್ಲಿದೆ

Gold Rate Today: ಆಭರಣಕೊಳ್ಳುವವರಿಗೆ ಸತತ ಎರಡನೇ ಸಿನ ಬೆಲೆ ಏರಿಕೆಯ ಬಿಸಿ. ರಾಜ್ಯ ರಾಜಧಾನಿಯಲ್ಲಿ ಚಿನ್ನದ ದರ ಏರಿಕೆಯಾಗಿದೆ. ಇಂದು (ಶುಕ್ರವಾರ) 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ ಕ್ರಮವಾಗಿ ₹ 30 ಮತ್ತು ₹ 33 ಏರಿಕೆಯಾಗಿದೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

VISTARANEWS.COM


on

Gold Rate Today
Koo

ಬೆಂಗಳೂರು: ಆಭರಣಕೊಳ್ಳುವವರಿಗೆ ಸತತ ಎರಡನೇ ಸಿನ ಬೆಲೆ ಏರಿಕೆಯ ಬಿಸಿ. ರಾಜ್ಯ ರಾಜಧಾನಿಯಲ್ಲಿ ಚಿನ್ನದ ದರ ಏರಿಕೆಯಾಗಿದೆ (Gold Rate Today). ಇಂದು (ಶುಕ್ರವಾರ) 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ ಕ್ರಮವಾಗಿ ₹ 30 ಮತ್ತು ₹ 33 ಏರಿಕೆಯಾಗಿದೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,760 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,375 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 54,080 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,600 ಮತ್ತು ₹ 6,76,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹ 7,375 ಆಗಿದ್ದು, ಎಂಟು ಗ್ರಾಂ ಬೆಲೆ ₹ 59,000 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 73,750 ಮತ್ತು ₹ 7,37,500 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (10 ಗ್ರಾಂ)24 ಕ್ಯಾರಟ್ (10 ಗ್ರಾಂ)
ದಿಲ್ಲಿ₹ 68,400₹ 74,620
ಮುಂಬೈ₹ 67,600₹ 73,750
ಬೆಂಗಳೂರು₹ 6,760₹ 7,375
ಚೆನ್ನೈ₹ 68,000₹ 74,180

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಹೆಚ್ಚಳವಾಗಿದೆ. ಒಂದು ಗ್ರಾಂಗೆ ₹ 93.25 ಹಾಗೂ 8 ಗ್ರಾಂಗೆ ₹ 746 ಇದೆ. 10 ಗ್ರಾಂಗೆ ₹ 932.5 ಹಾಗೂ 1 ಕಿಲೋಗ್ರಾಂಗೆ ₹ 93,250 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: RBI Monetary Policy: ಸತತ 8ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡ ರೆಪೋ ದರ

Continue Reading

ವಾಣಿಜ್ಯ

RBI Monetary Policy: ಸತತ 8ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡ ರೆಪೋ ದರ

RBI Monetary Policy: ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI) ಮುಂದುವರಿಸಿದೆ.

VISTARANEWS.COM


on

RBI Monetary Policy
Koo

ಮುಂಬೈ: ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI) ಮುಂದುವರಿಸಿದೆ. ಆರ್‌ಬಿಐ ತನ್ನ ಮೂರು ದಿನಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯನ್ನು ಜೂನ್ 5ರಂದು ಪ್ರಾರಂಭಿಸಿತ್ತು. ಇಂದು ತನ್ನ ನಿರ್ಧಾರವನ್ನು ಹಂಚಿಕೊಂಡಿದೆ. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಶಕ್ತಿಕಾಂತ ದಾಸ್‌ ಮಾತನಾಡಿ, ʼʼಹಣಕಾಸು ನೀತಿ ಸಮಿತಿಯು 4:2 ಬಹುಮತದಿಂದ ರೆಪೊ ದರವನ್ನು ಯಥಾಸ್ಥಿಯಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF) ದರವು ಶೇ. 6.25 ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರವು ಶೇ. 6.75ರಷ್ಟು ಇರಲಿದೆʼʼ ಎಂದು ತಿಳಿಸಿದ್ದಾರೆ.

ಗೃಹ ಸಾಲದ ಮೇಲೆ ಪರಿಣಾಮ ಬೀರುವುದಿಲ್ಲ

ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆಯಾಗುವುದಿಲ್ಲ. ಇತ್ತ 2025ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಆರ್‌ಬಿಐ ನೀಡಿದ್ದರಿಂದ ಹೆಚ್ಚಿಸಿದ್ದರಿಂದ ಸೆನ್ಸೆಕ್ಸ್ 600 ಅಂಕ ಜಿಗಿತ ಕಂಡಿದೆ.

ರೆಪೋ ದರವನ್ನು ಬದಲಾಯಿಸದೆ ಇರಿಸುವುದರಿಂದ ಮನೆ ಖರೀದಿದಾರರು ನಿರಾಳರಾಗಲಿದ್ದಾರೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ವಿಶೇಷವಾಗಿ ಆಹಾರ ಹಣದುಬ್ಬರ ದರವು ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎಂದು ಆರ್‌ಬಿಐ ಹೇಳಿದೆ.

ರೆಪೋ ದರ ಎಂದರೇನು?

ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್‌ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Continue Reading
Advertisement
T20 World Cup
ಪ್ರಮುಖ ಸುದ್ದಿ2 hours ago

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

Narendra Modi
ದೇಶ3 hours ago

Narendra Modi: ಹಂಗಾಮಿ ಪ್ರಧಾನಿ ಮೋದಿಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

Narendra Modi
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ3 hours ago

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ3 hours ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Gas leak
ಪ್ರಮುಖ ಸುದ್ದಿ4 hours ago

Gas Leakage : ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

soraba BJP Mandala president prakash talakaalukoppa pressmeet
ಶಿವಮೊಗ್ಗ4 hours ago

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Chandrababu Naidu
ದೇಶ4 hours ago

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Shreyas Iyer
ಕ್ರೀಡೆ5 hours ago

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

assault case
ಕ್ರೈಂ5 hours ago

Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ8 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ9 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌