Rocketry: The Nambi Effect | ಸಿನಿಮಾಗಾಗಿ ಮನೆ ಕಳೆದುಕೊಂಡ್ರಾ ಮಾಧವನ್? ನಟ ಹೇಳಿದ್ದೇನು? - Vistara News

ಬಾಲಿವುಡ್

Rocketry: The Nambi Effect | ಸಿನಿಮಾಗಾಗಿ ಮನೆ ಕಳೆದುಕೊಂಡ್ರಾ ಮಾಧವನ್? ನಟ ಹೇಳಿದ್ದೇನು?

ಮಾಧವನ್‌ ನಟಿಸಿ ಹಾಗೂ ನಿರ್ದೇಶಿಸಿರುವ ‘ರಾಕೆಟ್ರಿ’ (Rocketry: The Nambi Effect) ಸಿನಿಮಾದಿಂದಾಗಿ ಮನೆ ಕಳೆದುಕೊಂಡಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಮಾತುಗಳು ಕೇಳಿಬಂದಿವೆ. ಇದಕ್ಕೆ ನಟ ಮಾಧವನ್‌ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

VISTARANEWS.COM


on

Rocketry The Nambi Effect
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಳೆದ ಜುಲೈ ೧ರಂದು ಬಿಡುಗಡೆಗೊಂಡಿದ್ದ ಆರ್‌ ಮಾಧವನ್‌ ನಿರ್ದೇಶಿಸಿ ನಟಿಸಿರುವ ‘ರಾಕೆಟ್ರಿ’ (Rocketry: The Nambi Effect) ಸಿನಿಮಾ ಅವರನ್ನು ಸಾಲದ ಸುಲಿಗೆ ಸಿಲುಕಿತ್ತಾ? ಅವರು ತಮ್ಮೆಲ್ಲಾ ಹಣ ಕಳೆದುಕೊಂಡು, ಮನೆಯನ್ನೂ ಕಳೆದುಕೊಂಡರಾ? ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದ್ದು, ಈ ಬಗ್ಗೆ ಸ್ವತಃ ಮಾಧವನ್‌ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.

‘ರಾಕೆಟ್ರಿ’ಯು ಭಾರತದ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್‌ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಸಿನಿಮಾ ಬಿಡುಗಡೆ ದಿನದಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಮಾಧವನ್‌ ಈ ಸಿನಿಮಾದ ಸೋಲಿನಿಂದ ತಮ್ಮೆಲ್ಲ ಹಣವನ್ನು ಕಳೆದುಕೊಂಡಿದ್ದಲ್ಲದೆ, ಮನೆಯನ್ನೂ ಕಳೆದುಕೊಂಡಿದ್ದಾರೆ ಎಂಬ ಚರ್ಚೆಗಳು ಟ್ವಿಟರ್‌ನಲ್ಲಿ ಹುಟ್ಟಿಕೊಂಡಿದ್ದವು. ಈ ಸುದ್ದಿ ಬಹುಬೇಗ ಎಲ್ಲೆಡೆ ಹರಡಿದೆ.

ʻʻರಾಕೆಟ್ರಿ: ದಿ ನಂಬಿ ಎಫೆಕ್ಟ್‌” ಚಿತ್ರದ ಮೂಲ ನಿರ್ದೇಶಕರು ಆಯ್ಕೆಯಿಂದ ಹೊರಗುಳಿದ ಕಾರಣಕ್ಕೆ ಮಾಧವನ್‌ ಅವರೇ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಆದರೆ, ಸಿನಿಮಾ ಸೋತು ಅವರು ನಷ್ಟಕ್ಕೆ ಸಿಲುಕಿದ್ದಾರೆʼʼಎಂಬಿತ್ಯಾದಿ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಮಾಧವನ್‌ ಹಾಗೇನೂ ಆಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Swimming | ನಟ ಮಾಧವನ್​ ಹೆಮ್ಮೆಪಡುವಂತೆ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪುತ್ರ ವೇದಾಂತ್​

“ನಾನು ನನ್ನ ಮನೆ ಅಥವಾ ಏನನ್ನೂ ಕಳೆದುಕೊಂಡಿಲ್ಲ. ವಾಸ್ತವವಾಗಿ ರಾಕೆಟ್ರಿ ಸಿನಿಮಾದಿಂದಾಗಿ ಲಾಭ ಗಳಿಸಿದ್ದೇನೆ. ಇದರಿಂದ ಬಂದ ಲಾಭದಿಂದಾಗಿ ನಾನು ಆದಾಯ ತೆರಿಗೆಯನ್ನೂ ಪಾವತಿ ಮಾಡಿದ್ದೇನೆ. ದೇವರ ಅನುಗ್ರಹದಿಂದ ನಾವೆಲ್ಲರೂ ಬಹಳ ಚೆನ್ನಾಗಿದ್ದೇವೆ. ನಾನು ನನ್ನ ಮನೆಯಲ್ಲಿಯೇ ವಾಸಿಸುತ್ತಿದ್ದೇನೆʼʼಎಂದು ರಿಟ್ವೀಟ್‌ ಮಾಡಿದ್ದಾರೆ.

ರಾಕೆಟ್ರಿಯಲ್ಲಿ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರ್.ಮಾಧವನ್ ತಮ್ಮ ಅಭಿನಯದ ಜತೆ ಜತೆಗೆ ನಿರ್ದೇಶನ ಕೌಶಲ್ಯಕ್ಕಾಗಿಯೂ ಪ್ರಶಂಸೆ ಗಳಿಸಿದ್ದರು. ಜುಲೈ ೧ರಂದು ಬಿಡುಗಡೆಗೊಂಡಿದ್ದ ಈ ಸಿನಿಮಾ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಪ್ರಪಂಚದಾದ್ಯಂತ ಆರು ಭಾಷೆಗಳಲ್ಲಿ ತೆರೆಕಂಡಿತ್ತು. ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಸುಳ್ಳು ಆಪಾದನೆ ಎದುರಿಸಿ 1994ರಿಂದ 1998ರವರೆಗೆ ಅನುಭವಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳ ಮತ್ತು ಕೊನೆಗೂ ಅವರು ದೋಷಮುಕ್ತಿಯಾದ ಕಥಾವಸ್ತು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ರಾಕೆಟ್ರಿಯು ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ ಹೀಗೆ ಅಂತಾರಾಷ್ಟ್ರೀಯ ಮಟ್ಟದ ನಟರನ್ನು ಒಳಗೊಂಡಿದೆ. ಅಲ್ಲದೆ, ರಾನ್ ಡೊನಾಚಿ, ಸೂಪರ್‌ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸೂರ್ಯ ಸಹ ವಿಶೇಷ ಪಾತ್ರಗಳಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ | Rocketry: The Nambi Effect | ಮಾಧವನ್ ನಿರ್ದೇಶಿಸಿ, ನಟಿಸಿರುವ ರಾಕೆಟ್ರಿ ಸಿನಿಮಾ ವೀಕ್ಷಿಸಿದ ಸಂಸದರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Amitabh Bachchan: ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು. ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Amitabh Bachchan vanity van ambition was to pee by Vidhu Vinod Chopra
Koo

ಬೆಂಗಳೂರು: ಬಾಲಿವುಡ್‌ ಫೇಮಸ್‌ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಭ್‌ ಬಚ್ಚನ್‌ (Amitabh Bachchan) ಅವರೊಂದಿಗಿನ ಅವರ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಹೃಷಿಕೇಶ್ ಮುಖರ್ಜಿಯವರ ಶಿಫಾರಸು ಮೇರೆಗೆ ಅಮಿತಾಭ್‌ ಅವರನ್ನು ಮೊದಲ ಬಾರಿ ಭೇಟಿ ಮಾಡಿದರು. ಆ ಬಳಿಕ ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು.

ಕೆಲ್ಲಾಗ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಲ್ಲಿ ನಡೆದ ಚಾಟ್‌ನಲ್ಲಿ ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಮಾತನಾಡಿ, “ಅಮಿತಾಭ್‌ ಅವರೊಂದಿಗೆ ಚಲನಚಿತ್ರ ಮಾಡುವುದು ಅವರ ವೈಯಕ್ತಿಕ ವಾಶ್‌ರೂಮ್‌ನಲ್ಲಿ ಮೂತ್ರ ವಿಸರ್ಜಿಸುವಷ್ಟು ಮುಖ್ಯವಾಗಿರಲಿಲ್ಲ” ಎಂದು ನಗುತ್ತ ಹೇಳಿದರು. “ನಾನು ಅಮಿತಾಭ್‌ ಅವರನ್ನು ಮೊದಲು ಅವರ ವ್ಯಾನಿಟಿ ವ್ಯಾನ್‌ನಲ್ಲಿ ಭೇಟಿಯಾದೆ. ಆ ಸಮಯದಲ್ಲಿ, ಅಮಿತಾಭ್‌ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯವಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಯ ಭೇಟಿಯಲ್ಲಿಯೇ ನಾನು ತುಂಬಾ ಅಸಭ್ಯವಾಗಿ ವರ್ತಿಸಿದೆ. ಅಮಿತಾಭ್‌ಗೆ ನಾನು ಹೀಗೆ ಹೇಳಿದೆ. ನನ್ನ ಹೆಸರು ತುಂಬಾ ಪ್ರಭಾವಶಾಲಿಯಾಗಿಲ್ಲದಿರಬಹುದು, ಆದರೆ ನನ್ನ ಚಿತ್ರ….ಇದೆʼʼಎಂದು ಹೇಳಿದಾಗ ಸ್ವಲ್ಪ ನನ್ನನ್ನು ದಿಟ್ಟಿಸಿ ನೋಡಿ ಕೊನೆಗೆ ಸಿನಿಮಾ ಮಾಡಲು ಒಪ್ಪಿದರು ಎಂದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

ಮಾತು ಮುಂದುವರಿಸಿ ʻʻಅಮಿತಾಭ್‌, ಹೃಷಿ ಮತ್ತು ನಟಿ ರೇಖಾ ಎಲ್ಲರೂ ಈಗ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಾಗ ಅವರ ಮಧ್ಯೆ ಕೆಲವು ವಾದಗಳು ನಡೆಯುತ್ತಿತ್ತು. ನಾನು ನನ್ನ ಸಿನಿಮಾ ಮರ್ಡರ್‌ ಅಟ್‌ ಮಂಕಿ ಹಿಲ್‌ (Murder at Monkey Hill) ಸಿನಿಮಾವನ್ನು ಅಮಿತಾಭ್‌ ಅವರಿಗೆ ತೋರಸಿಬೇಕಿತ್ತು. ಸಂಜೆ 4ರ ಸುಮಾರಿಗೆ ನನ್ನ ಸಿನಿಮಾ ಅಮಿತಾಭ್‌ಗೆ ನೋಡಲು ಸಮಯ ಇಲ್ಲ ಎಂದು ಅರಿತುಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಅಲ್ಲಿಂದ ಹೊರಟೆ. ನಾನು ಹೊರಗೆ ಕುಳಿತಿದ್ದೆ. ಆಗ ನನ್ನ ಭುಜದ ಮೇಲೆ ಒಂದು ಕೈ ಬಂತು. ಅದು ಯಾರದ್ದು ಅಲ್ಲ ಅಮಿತಾಭ್‌ ಅವರದ್ದು. ಅಮಿತಾಭ್ ನನ್ನ ಬಳಿ ಕೇಳಿದರು. ಥಿಯೇಟರ್‌ 5ರವರೆಗೆ ಬುಕ್ಕಿಂಗ್‌ ಆಗಿದೆಯಾ? ಇದ್ದರೆ ಹೋಗೋಣ ಎಂದು. ಮಾತ್ರವಲ್ಲ ನನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದರು. ಅದು ಯಾರು ಅಲ್ಲ. ರೇಖಾ ಆಗಿದ್ದರು. ಬಳಿಕ ನಾವೆಲ್ಲ ಸಿನಿಮಾ ನೋಡಲು ತಯಾರಾದೆವುʼʼಎಂದರು.

ಮಾತು ಮುಂದುವರಿಸಿ ʻʻಹೀಗೆ ನಾನು ಅಮಿತಾಭ್‌ ಅವರ ಬಳಿ ನಿಮ್ಮ ವ್ಯಾನಿಟಿ ವ್ಯಾನ್‌ ಶೌಚಾಲಯವನ್ನು ಬಳಸಬಹುದೇ?’ ಎಂದು ಕೇಳಿದೆ, ಅಮಿತಾಭ್‌ ಬಚ್ಚನ್ ಅವರ ವ್ಯಾನ್‌ನಲ್ಲಿ ಮೂತ್ರ ಮಾಡುವುದು ನನ್ನ ಜೀವನದ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತು. ಚಿತ್ರವು ವರ್ಕ್ ಔಟ್ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು, ಆದರೆ ಕನಿಷ್ಠ ಅವರ ವ್ಯಾಬಿಟಿ ವ್ಯಾನ್‌ನ ಶೌಚಾಲಯದಲ್ಲಿ ನಾನು ಮೂತ್ರ ವಿಸರ್ಜಿಸಿದ್ದೇನೆ ಅಂತಾದರೂ ಖುಷಿ ಇರತ್ತದಲ್ಲ ಎಂದು ಕೇಳಿದೆ. ಇದಾದ ಬಳಿಕ ಬಚ್ಚನ್ ಅಂತಿಮವಾಗಿ ನನ್ನ ಸಿನಿಮಾ ನೋಡಿದರು. ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದರು. ಕೊನೆಗೆ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ ಮಾಡಿದೆವು. ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತುʼʼಎಂದರು. ಸಿನಿಮಾ ಹಿಟ್‌ ಆದ ಬಳಿಕ ಬಚ್ಚನ್‌ ಅವರು ಚೋಪ್ರಾ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Continue Reading

ಬಾಲಿವುಡ್

Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Swara Bhasker : ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’.ಕಂಗನಾ ಹಲವಾರು ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಸ್ವರಾ ಅವರ ಜತೆ ವಾರ್‌ ಮಾಡಿದ್ದಾರೆ. ಸ್ವರಾ 2023ರಲ್ಲಿ ಸಂದರ್ಶನದ ಸಮಯದಲ್ಲಿ ಕಂಗನಾ ಅವರನ್ನು ಹೊಗಳಿದ್ದು ಇದೆ. ತನು ವೆಡ್ಸ್ ಮನು ಚಿತ್ರೀಕರಣದ ಸಮಯದಲ್ಲಿ ಕಂಗನಾ ಹಾಗೂ ಸ್ವರಾ ಉತ್ತಮ ಸ್ನೇಹಿತರಾಗಿದ್ದರು.

VISTARANEWS.COM


on

Swara Bhasker reveals big difference between Kangana Ranaut and herself
Koo

ಬೆಂಗಳೂರು: ಕಂಗನಾ ರಣಾವತ್ ( Kangana Ranaut ) ಅವರಿಗೆ ಹಿಂದಿ ಚಲನಚಿತ್ರೋದ್ಯಮದ ಅನೇಕ ನಟಿ ನಟಿಯರ ಜತೆ ವೈಮನಸ್ಸು ಇದೆ. ಅವರಲ್ಲಿ ಒಬ್ಬರು ಸ್ವರಾ ಭಾಸ್ಕರ್ (Swara Bhasker). ಕಂಗನಾ ಅವರು ಸ್ವರಾ ಅವರನ್ನು ‘ಬಿ-ಗ್ರೇಡ್ ನಟಿ’ ಎಂದು ಈ ಹಿಂದೆ ಕರೆದಿದ್ದರು. ನಟಿ ಮತ್ತು ರಾಜಕಾರಣಿ ಸ್ವರಾ ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಾಗೂ ಕಂಗನಾ ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದರು.

ಇದನ್ನೂ ಓದಿ: Parliament Flashback: ಸೋನಿಯಾ ಗಾಂಧಿ-ಸುಷ್ಮಾ ಸ್ವರಾಜ್‌ ಕದನಕ್ಕೆ ಅಖಾಡವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ

ರಾಹುಲ್ ಗಾಂಧಿ ನಾಯಕನಾಗಿ ಇಷ್ಟ

ವಿವಿಧ ರಾಜಕೀಯ ಪಕ್ಷಗಳಿಂದ ಆಫರ್‌ಗಳು ಬರುತ್ತಿರುವ ಬಗ್ಗೆ ಸ್ವರಾ ಮಾತನಾಡಿ ʻನೀವು ಮಾಧ್ಯಮಗಳನ್ನು ನೋಡುವುದಾದರೆ ಅವರ ಪ್ರಕಾರ ನನಗೆ ಹಲವಾರು ಪಕ್ಷಗಳಿಂದ ಆಫರ್‌ಗಳು ಬಂದಿವೆ. ಆದರೆ ಅವೆಲ್ಲ ಸುಳ್ಳು. ನಾನು ರಾಹುಲ್ ಗಾಂಧಿಯನ್ನು ನಾಯಕನಾಗಿ ಇಷ್ಟಪಡುತ್ತೇನೆ. ಅವರ ದೃಷ್ಟಿ, ಅವರು ಧ್ವನಿ ಎತ್ತುವ ಸಮಸ್ಯೆಗಳು ಮತ್ತು ಅವರ ಪ್ರಯತ್ನಗಳು ನಮ್ಮ ದೇಶಕ್ಕೆ ಬಹಳ ಮುಖ್ಯವೆಂದು ನಾನು ಭಾವಿಸುತ್ತೇನೆ. ನಮ್ಮ ದೇಶದ ಬಗ್ಗೆ ಪ್ರೀತಿ ಇರುವ ರಾಜಕಾರಣಿ ಯಾರೇ ಆಗಿರಲಿ ಅವರನ್ನು ನಾನು ಬೆಂಬಲಿಸುತ್ತೇನೆʼʼಎಂದರು.

ಕಂಗನಾ ಹಲವಾರು ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಸ್ವರಾ ಅವರ ಜತೆ ವಾರ್‌ ಮಾಡಿದ್ದಾರೆ. ಸ್ವರಾ 2023ರಲ್ಲಿ ಸಂದರ್ಶನದ ಸಮಯದಲ್ಲಿ ಕಂಗನಾ ಅವರನ್ನು ಹೊಗಳಿದ್ದು ಇದೆ. ತನು ವೆಡ್ಸ್ ಮನು ಚಿತ್ರೀಕರಣದ ಸಮಯದಲ್ಲಿ ಕಂಗನಾ ಹಾಗೂ ಸ್ವರಾ ಉತ್ತಮ ಸ್ನೇಹಿತರಾಗಿದ್ದರು. ಚಿತ್ರೀಕರಣದ ವೇಳೆ ನನ್ನ ಕೈ ಹಿಡಿದು ನಡೆಸುತ್ತಿದ್ದಳು ಎಂದು ಕಂಗನಾ ಬಗ್ಗೆ ಸ್ವರಾ ಅದೆಷ್ಟೋ ಬಾರಿ ಹೇಳಿಕೊಂಡಿದ್ದೂ ಇದೆ. ಆದರೆ ಬರಬರುತ್ತ ಇಬ್ಬರ ನುಡುವೆ ವೈಮನಸ್ಸು ಹೆಚ್ಚಾಯ್ತು.

ಲೋಕಸಭಾ ಚುನಾವಣೆಗೆ ನಟಿ ಕಂಗನಾ ಅವರು ಗಮನಾರ್ಹ ರಾಜಕೀಯ ಇತಿಹಾಸವನ್ನು ಹೊಂದಿರುವ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಂಡಿಯಲ್ಲಿ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದ ರಣಾವತ್ ಅವರಿಗೆ ಕಠಿಣ ಸವಾಲನ್ನು ಒಡ್ಡಿತ್ತು. ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ಗುರಿ ಹೊಂದಿರುವ ಬಿಜೆಪಿ 2019ರಂತೆ ತನ್ನ ಯಶಸ್ಸನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.

ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಗಾಗಿ ಸಜ್ಜಾಗುತ್ತಿದ್ದಾರೆ. ಇದು ಅವರ ನಿರ್ದೇಶನಕ ಚೊಚ್ಚಲ ಚಿತ್ರವಾಗಿದೆ. ಹಾಗೇ ನಟಿ ಇತ್ತೀಚೆಗೆ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟಿಸಲಾದ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ.

Continue Reading

ಬಾಲಿವುಡ್

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Parineeti Chopra: ರಾಘವ್ ಚಡ್ಡಾ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಸುದ್ದಿ ಬಂದಿದೆ. ರಾಘವ್ ಚಡ್ಡಾ ಕಣ್ಣಿನ ರೆಟಿನಾದಲ್ಲಿ ರಂಧ್ರವಿರುವ ಕಾರಣ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪರಿಣಿತಿ ಅವರು ಲಂಡನ್‌ನಲ್ಲೇ ಇದ್ದು ಪತಿ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆʼʼಎಂದು ವರದಿಯಾಗಿದೆ. ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು.

VISTARANEWS.COM


on

Parineeti Chopra husband Raghav Chadha doing well after eye surgery
Koo

ಬೆಂಗಳೂರು: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಆಮ್‌ ಆದ್ಮಿ ಪಕ್ಷದ ಸಂಸದ, ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜತೆ ಸಪ್ತಪದಿ ತುಳಿದಿದ್ದರು. ಚುನಾವಣೆ ಸಮಯದಲ್ಲಿ ರಾಘವ್ ಪ್ರಚಾರದಿಂದ ದೂರ ಉಳಿದಿದ್ದರು. ಈ ಬೆನ್ನಲ್ಲೇ ರಾಘವ್ ಚಡ್ಡಾ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಸುದ್ದಿ ಬಂದಿದೆ. ರಾಘವ್ ಚಡ್ಡಾ ಕಣ್ಣಿನ ರೆಟಿನಾದಲ್ಲಿ ರಂಧ್ರವಿರುವ ಕಾರಣ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಘವ್ ಚಡ್ಡಾ ಇನ್ನೂ ಲಂಡನ್‌ನಲ್ಲಿ ಬೆಡ್ ರೆಸ್ಟ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ರಾಘವ್ ಚಡ್ಡಾ ಅವರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮದ ವರದಿಗಳ ಪ್ರಕಾರ ರಾಘವ್ ಚಡ್ಡಾ ಅವರು ಗಂಭೀರವಾದ ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಸದ್ಯಕ್ಕೀಗ ಲಂಡನ್‌ನಲ್ಲಿ ಇದ್ದಾರೆ. ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ನೀಡಲಾಗಿದೆ. ಒಂದು ಕಣ್ಣಿನ ರೆಟಿನಾದಲ್ಲಿ ರಂಧ್ರವಿತ್ತು. ಇದರಿಂದ ರಾಘವ್ ಚಡ್ಡಾ ಕಣ್ಣನ್ನೇ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಹೀಗಾಗಿ ದಿಢೀರನೇ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯ್ತುʼʼಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆಯ ಮೊದಲು ಕಣ್ಣನ್ನು ಉಳ್ಳಿಸಿಕೊಳ್ಳುವ ಬಗ್ಗೆ ವೈದ್ಯರು ಗ್ಯಾರಂಟಿ ಕೂಡ ಕೊಟ್ಟಿರಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: Parineeti Chopra: ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನೆದು ಭಾವುಕರಾದ ಪರಿಣಿತಿ ಚೋಪ್ರಾ!

ಇದೀಗ ಮೂಲಗಳ ಪ್ರಕಾರ ʻʻಶಸ್ತ್ರ ಚಿಕಿತ್ಸೆ ಬಳಿಕ ರಾಘವ್‌ ಅವರು ಚೇತರಿಸಿಕೊಂಡಿದ್ದಾರೆ. ಸೂರ್ಯನ ಬೆಳಕಿನಲ್ಲಿ ಹೊರಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ. ಕಣ್ಣಿನ ಪರೀಕ್ಷೆ ಮತ್ತು ತಪಾಸಣೆಗಾಗಿ ಅವರು ವಾರಕ್ಕೆ ಎರಡು ಬಾರಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ವೈದ್ಯರು ಅನುಮತಿ ನೀಡಿದಾಗ ಮಾತ್ರ ಅವರು ಭಾರತಕ್ಕೆ ಬರುತ್ತಾರೆ. ಕೆಲಸಕ್ಕೆ ಮರಳಲು ಇನ್ನೂ ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಪರಿಣಿತಿ ಅವರು ಲಂಡನ್‌ನಲ್ಲೇ ಇದ್ದು ಪತಿ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆʼʼಎಂದು ವರದಿಯಾಗಿದೆ.

ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪರಿಣಿತಿ ಅವರ ಸೋದರಸಂಬಂಧಿ, ನಟ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ಭಾಗಿಯಾಗಿರಲಿಲ್ಲ. ಉದಯಪುರದಲ್ಲಿ ಪರಿಣಿತಿ ಮತ್ತು ರಾಘವ್ ಸ್ನೇಹಿತರು ಮತ್ತು ಕುಟುಂಬದವರಿಗೆ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಗಣ್ಯರು ಸಮರಾಂಭದಲ್ಲಿ ಸಾಕ್ಷಿಯಾಗಿದ್ದರು.

ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗಿತ್ತು.

Continue Reading

ಸಿನಿಮಾ

Aamir Khan: ಬಿಗ್ ಸ್ಕ್ರೀನ್ ಮೇಲೆ ಮೂವರು ಖಾನ್​ಗಳು ಕಾಣೋದು ಕನ್‌ಫರ್ಮ್‌! ಸಿನಿಮಾ ಯಾವಾಗ ಶುರು?

Aamir Khan: ಎರಡು ದಿನಗಳ ಹಿಂದಷ್ಟೇ ಶಾರುಖ್‌ ಮತ್ತು ಮತ್ತು ಸಲ್ಮಾನ್ ಅವರನ್ನು ಭೇಟಿಯಾದೆ ಎಂದು ಆಮೀರ್ ನೆನಪಿಸಿಕೊಂಡಿದ್ದಾರೆ. . ರಿಯಾಲಿಟಿ ಶೋಗಳಲ್ಲಿ (Reality Show), ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಆಮೀರ್ ಖಾನ್ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ. ಇದೀಗ ಕಪಿಲ್ ಶರ್ಮಾ ಶೋನಲ್ಲಿ ಕೆಲವು ವಿಚಾರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ . ಆಮೀರ್‌ ಮುಂದೆ ನಟ ಸಲ್ಮಾನ್ ಖಾನ್ (Salman Khan) ಮತ್ತು ಶಾರುಖ್ ಖಾನ್ ( Shah Rukh Khan) ಅವರೊಂದಿಗೆ ಚಿತ್ರದಲ್ಲಿ ನಟಿಸುತ್ತಾರಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Aamir Khan on collaborating with SRK, Salman Khan
Koo

ಬೆಂಗಳೂರು: ಆಮೀರ್ ಖಾನ್ (Aamir Khan) ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ‘ಗೆ ಅತಿಥಿಯಾಗಿ (The Great Indian Kapil Show) ಬಂದಿದ್ದರು. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಮಿಸ್ಟರ್​ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ನಟ ಆಮೀರ್ ಖಾನ್ (Aamir Khan)​ ಪ್ರಚಾರ ಬಯಸದ ವ್ಯಕ್ತಿ ಎನ್ನಬಹುದು. ರಿಯಾಲಿಟಿ ಶೋಗಳಲ್ಲಿ (Reality Show), ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಆಮೀರ್ ಖಾನ್ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ. ಇದೀಗ ಕಪಿಲ್ ಶರ್ಮಾ ಶೋನಲ್ಲಿ ಕೆಲವು ವಿಚಾರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ . ಆಮೀರ್‌ ಮುಂದೆ ನಟ ಸಲ್ಮಾನ್ ಖಾನ್ (Salman Khan) ಮತ್ತು ಶಾರುಖ್ ಖಾನ್ ( Shah Rukh Khan) ಅವರೊಂದಿಗೆ ಚಿತ್ರದಲ್ಲಿ ನಟಿಸುತ್ತಾರಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಶಾರುಖ್‌ ಮತ್ತು ಮತ್ತು ಸಲ್ಮಾನ್ ಅವರನ್ನು ಭೇಟಿಯಾದೆ ಎಂದು ಆಮೀರ್ ನೆನಪಿಸಿಕೊಂಡಿದ್ದಾರೆ. “ನಾನು ಇತ್ತೀಚೆಗೆ ಶಾರುಖ್ ಮತ್ತು ಸಲ್ಮಾನ್ ಅವರನ್ನು ಭೇಟಿ ಮಾಡಿ, ಇಷ್ಟು ವರ್ಷಗಳಿಂದ ನಾವು ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಒಟ್ಟಿಗೆ ಸಿನಿಮಾ ಮಾಡದಿದ್ದರೆ ಪ್ರೇಕ್ಷಕರಿಗೆ ಅನ್ಯಾಯವಾಗುತ್ತದೆ. ಕನಿಷ್ಠ ಒಂದು ಸಿನಿಮಾವನ್ನಾದರೂ ಒಟ್ಟಿಗೆ ಮಾಡಬೇಕುʼʼಎಂದು ಹೇಳಿದ್ದೆ ಎಂದು ಮಾತನಾಡಿದ್ದಾರೆ. ಮಾತು ಮುಂದುವರಿಸಿ ʻʻನಾವು ಮೂವರು ಒಳ್ಳೆಯ ಕಥೆ ಮತ್ತು ಚಿತ್ರಕಥೆಯನ್ನು ಹುಡುಕುತ್ತಿದ್ದೇವೆ” ಎಂದು ಹೇಳಿದರು. ಮಾತ್ರವಲ್ಲ ಶೋನಲ್ಲಿ ತಾನು ಧರಿಸಿದ್ದ ಜೀನ್ಸ್ ಅನ್ನು ಸಲ್ಮಾನ್ ಖಾನ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Aamir Khan: ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್‌ ಖಾನ್‌!

ನೆಟ್‌ಫ್ಲಿಕ್ಸ್ ಶೋನಲ್ಲಿ ಕಪಿಲ್ ಶರ್ಮಾ ಆಮೀರ್‌, ತುಂಬಾ ಯಂಗ್ ಆಗಿ ಕಾಣುವುದರ ಹಿಂದಿನ ರಹಸ್ಯದ ಬಗ್ಗೆ ಕೇಳಿದಾಗ, ಆಮೀರ್‌ ಪ್ರತಿಕ್ರಿಯಿಸಿದ್ದು ಹೀಗೆ. ʻʻನಾನು ಯಾವುದೇ ಕ್ರೀಮ್ ಬಳಸುವುದಿಲ್ಲʼʼಎಂದರು.

ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್‌ ಖಾನ್‌!

ನೆಟ್‌ಫ್ಲಿಕ್ಸ್‌ನ ʻದಿ ಗ್ರೇಟ್ ಇಂಡಿಯನ್ ಕಪಿಲ್ ಶೋʼನ (The Great Indian Kapil Show) ಇತ್ತೀಚಿನ ಸಂಚಿಕೆಯಲ್ಲಿ, ನಟ ತನ್ನ ವೃತ್ತಿಜೀವನದ ಕುರಿತು ಹೇಳಿಕೊಂಡರು. ಜತೆಗೆ ಪಂಜಾಬ್‌ ಜನರ ನಮ್ರತೆಯನ್ನು ಶ್ಲಾಘಿಸಿದರು. ʻʻನಾನು ಮುಸ್ಲಿಂನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಪಂಜಾಬ್‌ನಲ್ಲಿ ಚಿತ್ರೀಕರಣಕ್ಕೆಂದು ಎರಡೂವರೆ ತಿಂಗಳುಗಳನ್ನು ಕಳೆದ ನಂತರ, ನನಗೆ ‘ನಮಸ್ತೆ’ ಎಂದು ಕೈ ಮುಗಿದು ಹೇಳುವ ಶಕ್ತಿ ಅರ್ಥವಾಯಿತುʼʼಎಂದು ಹೇಳಿಕೊಂಡಿದ್ದಾರೆ.

v

ಆಮೀರ್‌ ಮಾತನಾಡಿ ʻʻಈ ಕತೆ ನನಗೆ ತುಂಬ ಹತ್ತಿರವಾದದ್ದು. ದಂಗಲ್‌ ಸಿನಿಮಾವನ್ನು ಪಂಜಾಬ್‌ನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿಯ ಜನರನ್ನು ನಿಜವಾಗಿಯೂ ಇಷ್ಟಪಟ್ಟೆ. ಪಂಜಾಬಿ ಸಂಸ್ಕೃತಿಯು ಪ್ರೀತಿಯಿಂದ ತುಂಬಿದೆ. ದಂಗಲ್‌ ಸಿನಿಮಾಗಾಗಿ ನಾವು ಅಲ್ಲಿ ಹೋದಾಗ ಚಿತ್ರೀಕರಣ ಮಾಡುತ್ತಿದ್ದ ಸ್ಥಳ ಒಂದು ಪಟ್ಟ ಹಳ್ಳಿ. ನಾವು ಆ ಸ್ಥಳದಲ್ಲಿ ಮತ್ತು ಆ ಮನೆಯಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಶೂಟ್ ಮಾಡಿದ್ದೇವೆ. ಅಲ್ಲಿ ಶೂಟ್‌ಗೆಂದು ಬೆಳಗ್ಗೆ 5 ಗಂಟೆಗೆ ಕಾರ್‌ನಲ್ಲಿ ತಲುಪುತ್ತಿದ್ದಾಗ ಜನ ನನಗೆ ಕೈ ಮುಗಿದು ಸ್ವಾಗತಿಸುತ್ತಿದ್ದರು. ಮನೆಯ ಹೊರಗೆ ನಿಂತು ‘ಸತ್ ಶ್ರೀ ಅಕಾಲ’ (ನಮಸ್ತೆ) ಎಂದು ಕೈ ಮುಗಿದು ಹೇಳುತ್ತಿದ್ದರು. ಶೂಟ್‌ ಆಗಿ ಪ್ಯಾಕ್‌ಅಪ್‌ ಆದ ಬಳಿಕವೂ ಮನೆ ಹೊರಗೆ ನಿಂತು ಕೈ ಮುಗಿದು ‘ಗುಡ್ ನೈಟ್’ ಎಂದು ಹೇಳುತ್ತಿದ್ದರುʼʼಎಂದರು.

ನಟ ಮಾತು ಮುಂದುವರಿಸಿ ʻʻನಾನು ಮುಸ್ಲಿಮನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಮುಸ್ಲಿಮರು ಪರಸ್ಪರ ಶುಭಾಶಯ ಹೇಳುವ ರೀತಿ ಕೈ ಎತ್ತಿ, ತಲೆ ಬಾಗಿಸಿ ಹೇಳುತ್ತಾರೆ. ಆದರೆ ಪಂಜಾಬ್‌ನಲ್ಲಿ ಆ ಎರಡೂವರೆ ತಿಂಗಳು ಕಳೆದ ನಂತರ, ನನಗೆ ‘ನಮಸ್ತೆ’ಯ ಶಕ್ತಿ ಅರ್ಥವಾಯಿತು. ಪಂಜಾಬ್‌ನ ಜನರು ಎಲ್ಲರಿಗೂ ತುಂಬಾ ಗೌರವ ನೀಡುತ್ತಾರೆʼʼಎಂದು ಹೇಳಿದರು. ಆಮೀರ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ (2022) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

Continue Reading
Advertisement
Sania Mirza
ಕ್ರೀಡೆ20 seconds ago

Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

T20 World Cup
ಪ್ರಮುಖ ಸುದ್ದಿ12 mins ago

T20 World Cup : ವಿಶ್ವ ಕಪ್​ ತಂಡದಿಂದ ಅರ್ಶ್​​ದೀಪ್​ ಕೈಬಿಡಲು ಆಗ್ರಹ; ಏನಾಯಿತು ಅವರಿಗೆ?

Viral News
ವೈರಲ್ ನ್ಯೂಸ್22 mins ago

Viral News: ದೂರದ ಇಂಗ್ಲೆಂಡ್‌ನಲ್ಲಿಯೂ ಕೇರಳ ಕಲರವ; ನೆಟ್ಟಿಗರ ಗಮನ ಸೆಳೆದ ವಿಡಿಯೊ ಇಲ್ಲಿದೆ

Prajwal Revanna Case Prajwal arrives in Dubai from Germany
ಕ್ರೈಂ24 mins ago

Prajwal Revanna Case: ಜರ್ಮನಿಯಿಂದ ದುಬೈಗೆ ಹಾರಿದ ಪ್ರಜ್ವಲ್‌ ರೇವಣ್ಣ! ತನಿಖೆ ದಿಕ್ಕು ತಪ್ಪಿಸಿ, ದಿನ ದೂಡಲು ತಂತ್ರ?

Karnataka Weather Forecast
ಮಳೆ33 mins ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

Chandrayaan 3
ದೇಶ45 mins ago

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Amitabh Bachchan vanity van ambition was to pee by Vidhu Vinod Chopra
ಬಾಲಿವುಡ್45 mins ago

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Prajwal Revanna Case Minister Zameer Ahmed close aide makes Prajwal obscene video pen drive viral
ರಾಜಕೀಯ50 mins ago

Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

T20 World Cup
ಕ್ರೀಡೆ55 mins ago

T20 World Cup: ರೋಹಿತ್​, ಅಗರ್ಕರ್​ ಜಂಟಿ ಸುದ್ದಿಗೋಷ್ಠಿಗೆ ಕ್ಷಣಗಣನೆ

Deepak Chahar
ಪ್ರಮುಖ ಸುದ್ದಿ56 mins ago

Deepak Chahar : ಸಹೋದರನನ್ನು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ದೀಪಕ್ ಚಾಹರ್​ ಸಹೋದರಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌