ಸೋಮವಾರ ನಿಧನರಾದ ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರ ಹೆಸರನ್ನು ನಮೂದಿಸಲು ಸಾಕಷ್ಟು ವರ್ಷ ಪ್ರಯತ್ನ ನಡೆದಿತ್ತು.
ಬಿಕೆಎಸ್ ವರ್ಮ ಅವರದು ದೈವದತ್ತ ಪ್ರತಿಭೆ. ಕುಂಚ ಹಿಡಿದರೆ ದೇವರನ್ನೇ ಧರೆಗಿಳಿಸುವ ತಾಕತ್ತು ಹೊಂದಿದ್ದ ಅವರು ಅದಕ್ಕಷ್ಟೇ ಸೀಮಿತರಾಗದೆ ಬಹುಮುಖ ಸಾಧಕರಾಗಿ ಗಮನ ಸೆಳೆದರು.
ಕನ್ನಡದಲ್ಲಿ ಬಿಕೆಎಸ್ ವರ್ಮಾ ಅವರದೇ ಆದ ಒಂದು ಶೈಲಿ ಇದೆ. ಅದು ಇನ್ಯಾರೂ ಅನುಕರಿಸಲು ಸಾಧ್ಯವಾಗದಂಥದ್ದು, ಅವರದೇ ಒಂದು ವಿಭಿನ್ನ ಲೋಕ ಎಂದು ಸಹ ಕಲಾವಿದ ಪ.ಸ ಕುಮಾರ್ ಅಗಲಿದ ಗೆಳೆಯನನ್ನು ಸ್ಮರಿಸಿಕೊಂಡಿದ್ದಾರೆ.
ಖ್ಯಾತ ವರ್ಣಚಿತ್ರ ಕಲಾವಿದ ಬಿಕೆಎಸ್ ವರ್ಮಾ (BKS Varma) ಅವರ ದೇವಾನುದೇವತೆಗಳ ಕಲಾಕೃತಿಗಳು ದೇಶದ ನಾನಾ ಸೆಲೆಬ್ರಿಟಿಗಳ ಮನ ಸೆಳೆದಿದ್ದವು. ರಜನಿಕಾಂತ್ (Rajanikanth) ಮಾಡಿಸಿದ ರಾಘವೇಂದ್ರ ಸ್ವಾಮಿ ಕಲಾಕೃತಿ ಅದಕ್ಕೊಂದು ಉದಾಹರಣೆ.