Urfi Javed | ಉರ್ಫಿ ಜಾವೇದ್‌ ವಿರುದ್ಧ ದೂರು ಸಲ್ಲಿಕೆ: ಸೀರೆಯಿಂದ ಟ್ರೋಲ್‌ ಆಗಿದ್ಯಾಕೆ ನಟಿ? - Vistara News

ಬಾಲಿವುಡ್

Urfi Javed | ಉರ್ಫಿ ಜಾವೇದ್‌ ವಿರುದ್ಧ ದೂರು ಸಲ್ಲಿಕೆ: ಸೀರೆಯಿಂದ ಟ್ರೋಲ್‌ ಆಗಿದ್ಯಾಕೆ ನಟಿ?

ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಬಾಹಿರ ಮತ್ತು ಅಶ್ಲೀಲತೆ ಪ್ರತಿಬಿಂಬಿಸುತ್ತಿರುವ ಆರೋಪದ ಮೇಲೆ ಉರ್ಫಿ ಜಾವೇದ್‌ (Urfi Javed) ವಿರುದ್ಧ ಲಿಖಿತ ದೂರು ಸಲ್ಲಿಕೆಯಾಗಿದೆ .

VISTARANEWS.COM


on

Urfi Javed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಟಿ ಉರ್ಫಿ ಜಾವೇದ್ (Urfi Javed ) ಈ ಹಿಂದೆ ಅನೇಕ ಸಂದರ್ಭಗಳಲ್ಲಿ ತಮ್ಮ ಬಟ್ಟೆ ವಿಚಾರವಾಗಿ ಹಲವರಿಂದ ಟೀಕಿಸಲ್ಪಟ್ಟಿದ್ದಾರೆ. ಉರ್ಫಿ ವಿಮಾನ ನಿಲ್ದಾಣವೊಂದರಲ್ಲಿ ಬಣ್ಣ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕ ರೀತಿಯಲ್ಲಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳು, ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಬಾಹಿರ ಮತ್ತು ಅಶ್ಲೀಲತೆ ಪ್ರತಿಬಿಂಬಿಸುತ್ತಿರುವ ಆರೋಪದ ಮೇಲೆ ಉರ್ಫಿ ಜಾವೇದ್‌ ವಿರುದ್ಧ ಲಿಖಿತ ದೂರು ಸಲ್ಲಿಕೆಯಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಧೇರಿ ಪೊಲೀಸ್ ಠಾಣೆಯಲ್ಲಿ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಲಿಖಿತ ದೂರು ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆಯೇ ದೂರು ಸ್ವೀಕರಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಉರ್ಫಿ ಜಾವೇದ್ ಮೇಲೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಅರೆಬರೆ ಡ್ರೆಸ್ ಹಾಕಿ, ಸಮಾಜದ ನೋಟವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು.

ಇದನ್ನೂ ಓದಿ | Urfi Javed | ಲೇಖಕ ಚೇತನ್‌ ಭಗತ್‌ ಮೇಲೆ ಗರಂ ಆದ ಉರ್ಫಿ ಜಾವೇದ್‌: ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌!

ಸೀರೆಯಿಂದ ಟ್ರೋಲ್‌ ಆದ್ರು ಉರ್ಫಿ
ಉರ್ಫಿ ಜಾವೇದ್ ಅವರು ವಿಮಾನ ನಿಲ್ದಾಣವೊಂದರಲ್ಲಿ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಉರ್ಫಿ ಜಾವೇದ್​ ಅವರು ಬಣ್ಣ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಆದರೆ ಸೀರೆಯ ಸೆರೆಗು ಮಾತ್ರ ಅವರ ಮೈಮೇಲೆ ನಿಲ್ಲುತ್ತಿಲ್ಲ. ಅವರು ಪ್ರತಿ ಬಾರಿ ಮೇಲೆ ಹಾಕಿಕೊಂಡಾಗಲೂ ಸೀರೆ ಸೆರಗು ಕೆಳಗೆ ಜಾರಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಟ್ರೋಲಿಗರು ಕಮೆಂಟ್‌ ಮಾಡಿದ್ದಾರೆ. ʻʻಉರ್ಫಿ ಜಾವೇದ್‌ ನಿಮ್ಮ ಬಳಿ ಪಿನ್ನು ಇಲ್ಲವೇ?ʼʼಎಂದು ಕಮೆಂಟ್‌ ಮೂಲಕ ಉರ್ಫಿ ಕಾಲೆಳೆದಿದ್ದಾರೆ.

ಈ ಹಿಂದೆಯಷ್ಟೇ ಲೇಖಕ ಚೇತನ್‌ ಭಗತ್‌ ಅವರು ಉರ್ಫಿ ಕುರಿತಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡು ಉರ್ಫಿ ಜಾವೇದ್‌ ಗರಂ ಆಗಿ, ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಶೇರ್ ಮಾಡಿಕೊಂಡು ಸಖತ್‌ ಸುದ್ದಿಯಲ್ಲಿದ್ದರು.

ಇದನ್ನೂ ಓದಿ | Urfi Javed | ʻಭಾರತದಿಂದ ಹೊರಗಟ್ಟಿʼ ಅಂದ್ರು ನೆಟ್ಟಿಗರು: ಬೇಕಾಬಿಟ್ಟಿ ಡ್ರೆಸ್‌ ಹಾಕುವ ಉರ್ಫಿಗೆ ವಾರ್ನಿಂಗ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Deepika Padukone: ಫೇಕ್ ಬೇಬಿ ಬಂಪ್ ಎಂದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಬಿಟೌನ್ ಪದ್ಮಾವತಿ..!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಬೇಬಿ ಬಂಪ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Koo
Deepika Padukone
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Deepika Padukone
ಪ್ರೆಗ್ನೆಸಿಯ ಸ್ಟನ್ನಿಂಗ್​ ಫೋಟೋಗಳನ್ನು ದೀಪಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Deepika Padukone
ಬ್ಲ್ಯಾಕ್ ಥೀಮ್​ನಲ್ಲಿ ಬೋಲ್ಡ್ ಬೇಬಿ ಬಂಪ್ ಶೂಟ್ ಮಾಡಿಸಿರೋ ದೀಪಿಕಾ ನಟ್ಟಿಗರ ಮನ ಸೆಳೆದಿದ್ದಾರೆ.
Deepika Padukone
ಫೋಟೋಶೂಟ್‌ನಲ್ಲಿ ರಣವೀರ್ ಸಿಂಗ್ ಸಹ ದೀಪಿಕಾಗೆ ಸಾಥ್ ನೀಡಿದ್ದಾರೆ.
Deepika Padukone
ನಟಿಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್ ನೀಡಲಾಗಿದ್ದು ಸೌತ್ ಬಾಂಬೆ ಆಸ್ಪತ್ರೆಯಲ್ಲಿ ದೀಪಿಕಾ ಡೆಲಿವರಿ ಆಗಲಿದೆ ಎಂದು ಹೇಳಿದ್ದಾರೆ.
Deepika Padukone
ಸದ್ಯ ದೀಪಿಕಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಮಾರ್ಚ್ ತನಕವೂ ಡಿಪ್ಪಿ ಮೆಟರ್ನಿಟಿ ಲೀವ್‌ನಲ್ಲಿ ಇದ್ದಾರೆ.

ಇದನ್ನೂ ಓದಿ: Pranitha Subhash: 2ನೇ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಪ್ರಣೀತಾ ಸುಭಾಷ್; ಮತ್ತೆ ಬೇಬಿ ಬಂಪ್ ಫೋಟೋಶೂಟ್

Continue Reading

ರಾಜಕೀಯ

Kangana Ranaut: ದೂರದೃಷ್ಟಿಯೇ ಇಲ್ಲದ ರಾಹುಲ್ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ: ಕಂಗನಾ

ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ. ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್ (Kangana Ranaut), ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

VISTARANEWS.COM


on

By

Kangana Ranaut
Koo

ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿ (Rahul Gandhi) ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದೆ (BJP MP), ನಟಿ ಕಂಗನಾ ರಣಾವತ್ (Kangana Ranaut), ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ ಮತ್ತು ನಿರಂತರವಾಗಿ ಮಾರ್ಗವನ್ನು ಬದಲಾಯಿಸುತ್ತಾರೆ. ಕಾಂಗ್ರೆಸ್ ಸಂಸದರು ಒಂದು ಕೊಳಕು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ, ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಯಾವುದೇ “ಸಂಘಟಿತ ಕಲ್ಪನೆ” ಕಾಣಲಿಲ್ಲ ಮತ್ತು ಅವರು ನಿರಂತರವಾಗಿ ಮಾರ್ಗಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅವರು ನಾಯಕರಾಗಿ ಯಾರು ಎಂಬ ನಿರ್ಣಾಯಕ ಕಲ್ಪನೆಯನ್ನು ಹೊಂದಿಲ್ಲ ಎಂದು ತೋರುತ್ತದೆ. ಕೇವಲ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಮತ್ತು ಪ್ರತಿ ಬಾರಿ ಅವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು.

ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಂಗನಾ, ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ನಾಗರಿಕ ಅಶಾಂತಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಸಂಸದೆ ಕಂಗನಾ ರಣಾವತ್‌ ರೈತರ ಪ್ರತಿಭಟನೆ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕೇಂದ್ರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದು ಹೇಳಿಕೆ ನೀಡಿ ಮತ್ತೊಮ್ಮೆ ರೈತರ ಕೋಪಕ್ಕೆ ಕಾರಣವಾಗಿದ್ದರು.

ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಂಗನಾ ರಣಾವತ್‌‌ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಮಯದಲ್ಲಿ, “ಶವಗಳನ್ನು ನೇತುಹಾಕುತ್ತಿರುವುದು ಕಂಡುಬಂದಿದೆ ಮತ್ತು ಅತ್ಯಾಚಾರಗಳು ನಡೆಯುತ್ತಿದ್ದವು,” ಎಂದು ಆರೋಪಿಸಿದ್ದರು. ಕಾನೂನುಗಳನ್ನು ಹಿಂತೆಗೆದುಕೊಂಡ ನಂತರವೂ ಪ್ರತಿಭಟನೆಗಳು ಮುಂದುವರಿಯುತ್ತಿರುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು “ವಿದೇಶಿ ಶಕ್ತಿಗಳೇ ” ಕಾರಣ ಎಂದು ದೂಷಿಸಿದ್ದರು.

ಇದನ್ನೂ ಓದಿ: Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಕಂಗನಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ಪ್ರಚಾರ ಯಂತ್ರವು “ನಿರಂತರವಾಗಿ ರೈತರನ್ನು ಅವಮಾನಿಸುತ್ತಿದೆ” ಎಂದು ಆರೋಪಿಸಿದರು.


ಈ ಕುರಿತು ಎಕ್ಸ್ ನಲಿ ಪೋಸ್ಟ್ ಮಾಡಿರುವ ಅವರು, 378 ದಿನಗಳ ಮ್ಯಾರಥಾನ್ ಹೋರಾಟದಲ್ಲಿ 700 ಸಹೋದ್ಯೋಗಿಗಳನ್ನು ಬಲಿಕೊಟ್ಟ ರೈತರನ್ನು ಬಿಜೆಪಿ ಸಂಸದರು ಅತ್ಯಾಚಾರಿಗಳು ಮತ್ತು ವಿದೇಶಿ ಶಕ್ತಿಗಳ ಪ್ರತಿನಿಧಿಗಳು ಎಂದು ಕರೆಯುವುದು ಬಿಜೆಪಿಯ ರೈತ ವಿರೋಧಿ ನೀತಿ ಮತ್ತು ಉದ್ದೇಶಗಳಿಗೆ ಮತ್ತೊಂದು ಪುರಾವೆಯಾಗಿದೆ ಎಂದು ತಿಳಿಸಿದ್ದು, ರೈತ ಸಂಸ್ಥೆಗಳು ಮತ್ತು ರಾಜಕಾರಣಿಗಳ ಕುರಿತು ನಟಿಯ ಹೇಳಿಕೆಗಳನ್ನು ಖಂಡಿಸಿದ್ದಾರೆ.

Continue Reading

ಸಿನಿಮಾ

Kangana Ranaut: ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೂ ಮುನ್ನ ಶಿರಚ್ಛೇದದ ಬೆದರಿಕೆ; ಪೊಲೀಸರ ಸಹಾಯ ಕೇಳಿದ ಕಂಗನಾ

ಸೆಪ್ಟೆಂಬರ್ 6 ರಂದು ಚಿತ್ರಮಂದಿರಗಳಲ್ಲಿ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಸಾಮಾಜಿಕ ಮಾಧ್ಯಮದ ಮೂಲಕ ಕಂಗನಾ ರಣಾವತ್ ಗೆ (Kangana Ranaut) ಶಿರಚ್ಛೇದದ ಬೆದರಿಕೆ ಬಂದಿದ್ದು, ಅವರು ಪೊಲೀಸರ ರಕ್ಷಣೆ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

VISTARANEWS.COM


on

By

Kangana Ranaut
Koo

ಮುಂಬೈ: ಬಹುನಿರೀಕ್ಷಿತ ಬಾಲಿವುಡ್‌ನ ʼಎಮರ್ಜೆನ್ಸಿʼ ಚಿತ್ರ (Emergency Movie) ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದ (Social media) ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನಟಿ (actress), ಬಿಜೆಪಿ ಸಂಸದೆ (BJP MP) ಕಂಗನಾ ರಣಾವತ್ (Kangana Ranaut) ಪೊಲೀಸರ ಸಹಾಯವನ್ನು ಕೋರಿದ್ದಾರೆ. ಸೆಪ್ಟೆಂಬರ್ 6ರಂದು ʼಎಮರ್ಜೆನ್ಸಿʼ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ನಟಿಸುವ ಜತೆಗೆ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ಒಂದು ವೇಳೆ ಈ ಚಿತ್ರ ಬಿಡುಗಡೆಯಾದರೆ ನೀವು ಸರ್ದಾರರಿಂದ ಚಪ್ಪಲಿ ಏಟು ಪಡೆಯುತ್ತೀರಿ. ನಾನು ಅತ್ಯಂತ ಹೆಮ್ಮೆಯ ಭಾರತೀಯ. ನನ್ನ ದೇಶದಲ್ಲಿ, ನನ್ನ ಮಹಾರಾಷ್ಟ್ರದಲ್ಲಿ ನಾನು ಎಲ್ಲಿಯಾದರೂ ನಿಮ್ಮನ್ನು ಕಂಡರೆ ನಾನು ಸಿಖ್ ಮತ್ತು ಹೆಮ್ಮೆಯ ಮರಾಠಿ ಎಂದು ಹೇಳುತ್ತೇನೆ. ನನ್ನ ಎಲ್ಲ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರು ಸಹ ಚಪ್ಪಲಿಗಳೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.

ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಕಂಗನಾ, “ದಯವಿಟ್ಟು ಇದನ್ನು ನೋಡಿ” ಎಂದು ಬರೆದು ಹಿಮಾಚಲ, ಮಹಾರಾಷ್ಟ್ರ ಮತ್ತು ಪಂಜಾಬ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.


ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಚಿತ್ರದಲ್ಲಿ ಸಿಖ್ಖರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದಾರೆ. ಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ನಿಜವಾಗಿ ಆಗಿದೆಯೇ? ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಯಾರೆಂದು ನೆನಪಿಸಿಕೊಳ್ಳಿ. ಯಾರ ಮೇಲೆ ನಾವು ಬೆರಳು ತೋರಿಸುತ್ತೇವೆಯೋ ಉಳಿದ ಬೆರಳು ಗಳು ನಮ್ಮನ್ನು ತೋರಿಸುತ್ತವೆ. ನಮಗೆ ತಲೆಯ ಬಲಿ ನೀಡಲೂ ಗೊತ್ತಿದೆ, ತಲೆ ಕಡಿಯಲು ಗೊತ್ತಿದೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೂಡಲೇ ಕಂಗನಾ ಸುರಕ್ಷತೆಯ ಬಗ್ಗೆ ಹಲವು ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು, ನಮ್ಮ ರಾಷ್ಟ್ರದಲ್ಲಿ ಏನಾಗುತ್ತಿದೆ? ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಜನರು ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸರಳವಾಗಿ ಭಾರತದ ಇತಿಹಾಸವನ್ನು ಚಿತ್ರಿಸಲು, ದೇಶದ ಬಲಿಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರೆಂದು ಹೇಳಿಕೊಳ್ಳುವ ಭಾರತದ ಉಕ್ಕಿನ ಮಹಿಳೆಯ ಕಥೆಯನ್ನು ಹೇಳುವುದು ತಪ್ಪೇ? ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸುರಕ್ಷತೆಗಾಗಿ ನಾವು ನಿಜವಾಗಿಯೂ ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

Continue Reading

ಸಿನಿಮಾ

Aamir Khan: ಕುಟುಂಬಕ್ಕಾಗಿ ಬಾಲಿವುಡ್ ತೊರೆಯಲು ಮುಂದಾಗಿದ್ದ ಎಂದ ಅಮೀರ್ ಖಾನ್

ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್‌ನ ಇತ್ತೀಚಿನ ಚಾಟ್‌ನಲ್ಲಿ ಅಮೀರ್ ಖಾನ್ (Aamir Khan) ಮಾತನಾಡಿ, ಕಿರಣ್ ರಾವ್ ಮತ್ತು ಅವರ ಮಕ್ಕಳೊಂದಿಗೆ ಕುಟುಂಬದ ಸಮಯವನ್ನು ಕೇಂದ್ರೀಕರಿಸಲು ಬಾಲಿವುಡ್ ಅನ್ನು ತೊರೆಯಲು ಸಿದ್ಧ ಎಂದು ತಿಳಿಸಿದರು. ಆದರೆ ಇದು ಅವರ ಕುಟುಂಬಕ್ಕೆ ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುವಂತೆ ಮಾಡಿತು. ಅವರೊಂದಿಗೆ ಮಾತನಾಡಿ, ಸಿನಿಮಾದಿಂದ ದೂರ ಸರಿಯದಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ.

VISTARANEWS.COM


on

By

Aamir Khan
Koo

ಬೆಂಗಳೂರು: ಮಾಜಿ ಪತ್ನಿ ಕಿರಣ್ ರಾವ್ (Kiran Rao) ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಬಾಲಿವುಡ್ (bollywood) ತೊರೆಯಲು ಸಿದ್ದ ಎಂದು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ (Mr. Perfect of Bollywood) ಅಮೀರ್ ಖಾನ್ (Aamir Khan) ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಿಯಾ ಚಕ್ರವರ್ತಿ (Rhea Chakraborty) ಅವರ ಪಾಡ್ ಕಾಸ್ಟ್‌‌ನಲ್ಲಿ ಮಾತನಾಡಿರುವ ಅಮೀರ್ ಖಾನ್, ಸಿನಿಮಾ ಉದ್ಯಮ ತೊರೆಯುವ ಕುರಿತು ಮಾತನಾಡಿದರು.

ಕಿರಣ್ ರಾವ್ ಮತ್ತು ಅವರ ಮಕ್ಕಳೊಂದಿಗೆ ಕುಟುಂಬದ ಸಮಯ ಮೀಸಲಿಡಲು ಬಾಲಿವುಡ್ ಅನ್ನು ತೊರೆಯಲು ಸಿದ್ಧ ಎಂದು ತಿಳಿಸಿದ್ದಾರೆ, ಆದರೆ ಇದು ಅವರ ಕುಟುಂಬಕ್ಕೆ ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುವಂತೆ ಮಾಡಿತು. ಅವರೊಂದಿಗೆ ಮಾತನಾಡಿ, ಸಿನಿಮಾದಿಂದ ದೂರ ಸರಿಯದಂತೆ ಒತ್ತಾಯಿಸಿದರು. ಪಾಡ್‌ಕ್ಯಾಸ್ಟ್‌‌ನಲ್ಲಿ ಅಮೀರ್ ಖಾನ್ ಅವರ ಕುಟುಂಬವು ಚಲನಚಿತ್ರಗಳನ್ನು ತೊರೆಯದಂತೆ ತಾಕೀತು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ಮೂರು ವರ್ಷಗಳ ಹಿಂದೆ ಚಲನಚಿತ್ರಗಳನ್ನು ತೊರೆಯುತ್ತಿದ್ದೇನೆ ಎಂದು ಹೇಳಿದಾಗ ಕುಟುಂಬದವರ ಪ್ರತಿಕ್ರಿಯೆ ಹೀಗಿತ್ತು, ನೀವು ಚಲನಚಿತ್ರಗಳನ್ನು ಹೇಗೆ ಬಿಡುತ್ತೀರಿ? ಕಳೆದ 30 ವರ್ಷಗಳಿಂದ ಹುಚ್ಚರಂತೆ ಅದರಲ್ಲೇ ತೊಡಗಿಸಿಕೊಂಡಿದ್ದೀರಿ. ಈಗ ಭಾವುಕರಾಗಿ ಹೀಗೆ ಹೇಳುತ್ತಿರಬೇಕು. ಆದರೆ ನಿಮಗೆ ಅದು ಸಾಧ್ಯವಾಗುವುದಿಲ್ಲ ಎಂದಿದ್ದರು ಎಂದು ಹೇಳಿದ್ದಾರೆ.

ನಂತರ ನಾನು ನನ್ನ ತಂಡ, ನಿರ್ಮಾಣ ತಂಡವನ್ನು ಕರೆದೆ. ಅದರಲ್ಲಿ ಕಿರಣ್ ಕೂಡ ಇದ್ದರು. ನಾನು ಇನ್ನು ಮುಂದೆ ಈ ಕಂಪನಿಯಲ್ಲಿ ಇರುವುದಿಲ್ಲ ಎಂದು ಹೇಳಿದೆ. ಯಾಕೆಂದರೆ ನಾನು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುತ್ತೇನೆ. ನೀವು ನನ್ನಿಂದ ಕಂಪನಿಯನ್ನು ತೆಗೆದುಕೊಂಡು ಚಲನಚಿತ್ರಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು.


ಲಾಲ್ ಸಿಂಗ್ ಚಡ್ಡಾದಲ್ಲಿ ಕೊನೆಯದಾಗಿ ನಟಿಸಿದ ಅಮೀರ್, ತನ್ನ ನಿರ್ಧಾರದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು, ಅದೇ ರೀತಿ ಅಸಮಾಧಾನಗೊಂಡಿದ್ದರು. ಕಿರಣ್ ರಾವ್‌, ನಮ್ಮೆಲ್ಲರನ್ನೂ ಬಿಟ್ಟು ಹೋಗುತ್ತೀಯ ಎಂದು ಕೇಳಿದ್ದರು. ನಾನು ಇಲ್ಲ, ನಾನು ಚಲನಚಿತ್ರಗಳನ್ನು ಬಿಡುತ್ತಿದ್ದೇನೆ. ನಿಮ್ಮೆಲ್ಲರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಹೇಳಿದೆ.

ಇದನ್ನೂ ಓದಿ: Mollywood Sex Mafia: ಸ್ಟಾರ್‌ ನಟ, ನಿರ್ದೇಶಕನ ವಿರುದ್ಧ ಕಾಸ್ಟ್‌ ಕೌಚಿಂಗ್‌ ಆರೋಪ; SIT ತನಿಖೆಗೆ ಆದೇಶ

ಆಗ ಕಿರಣ್ , ನನಗೆ ಅರ್ಥವಾಗುತ್ತಿಲ್ಲ. ನೀನು ಸಿನಿಮಾಕ್ಕೆಂದೇ ಹುಟ್ಟಿದ ಮಗು. ನೀನು ಅದನ್ನು ತೊರೆದರೆ ಜೀವನ ಮತ್ತು ಜಗತ್ತನ್ನು ಬಿಡುತ್ತಿಯ. ನಾನು ಆ ಲೋಕದ ಭಾಗವಾಗಿದ್ದೇನೆ. ಹೀಗಾಗಿ ನೀನು ನಮ್ಮನ್ನು ಬಿಟ್ಟು ಹೋಗುತ್ತಿದ್ದೀಯ ಎಂದು ಅಳುತ್ತಿದ್ದಳು. ಆಗ ನಾನು ಅವಳಿಗೆ ಹೇಳಿದೆ, ನೀನು ತಪ್ಪಾಗಿ ಗ್ರಹಿಸುತ್ತಿದ್ದೀಯ ಎಂದೆ. ಆದರೆ ಅವಳು ಸರಿಯಾಗಿ ಹೇಳಿದ್ದಳು. ಎಂದು ಆಗ ನನಗೆ ತಿಳಿದಿರಲಿಲ್ಲ.

ಅಮೀರ್ ಖಾನ್ ಸದ್ಯ ಸಿತಾರೆ ಜಮೀನ್ ಪರ್ ಸಿನಿಮಾದಲ್ಲಿದ್ದಾರೆ. ವೈಯಕ್ತಿಕವಾಗಿ, ಅಮೀರ್ ಖಾನ್ ಮತ್ತು ಕಿರಣ್ ರಾವ್ 2005 ರಲ್ಲಿ ವಿವಾಹವಾಗಿದ್ದು, 2021ರಲ್ಲಿ ವಿಚ್ಛೇದನ ಪಡೆಯುವುದಾಗಿ ಘೋಷಿಸಿದರು.

Continue Reading
Advertisement
ಸಿನಿಮಾ1 hour ago

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

Theft case
ಬೆಂಗಳೂರು ಗ್ರಾಮಾಂತರ2 hours ago

Theft Case : ಪ್ರೇಯಸಿಯ ಜತೆಗೆ ಹೈಫೈ ಲೈಫ್‌ ಎಂಜಾಯ್‌ ಮಾಡಲು ಮನೆಗಳ್ಳತನಕ್ಕೆ ಇಳಿದ ಪ್ರೇಮಖೈದಿ!

karnataka weather Forecast
ಮಳೆ4 hours ago

Karnataka Weather : ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಿನಲ್ಲಿ ಹೇಗೆ?

Dina Bhavishya
ಭವಿಷ್ಯ4 hours ago

Dina Bhavishya : ಈ ದಿನ ನಿಮ್ಮನ್ನು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ; ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ

TA Sharavana
ಕರ್ನಾಟಕ15 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ16 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ17 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು18 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ20 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ21 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್6 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌