Lok Sabha Election 2024: ಈ ‘ಐಡೆಂಟಿಟಿ’ ಮೇಲೆ ಮೋದಿಯವರ ಬಿಜೆಪಿ ಪ್ರಾಬಲ್ಯವನ್ನು ಗಂಭೀರವಾಗಿ ಚಾಲೆಂಜ್ ಮಾಡಲಿದೆಯೇ ಕಾಂಗ್ರೆಸ್? - Vistara News

Lok Sabha Election 2024

Lok Sabha Election 2024: ಈ ‘ಐಡೆಂಟಿಟಿ’ ಮೇಲೆ ಮೋದಿಯವರ ಬಿಜೆಪಿ ಪ್ರಾಬಲ್ಯವನ್ನು ಗಂಭೀರವಾಗಿ ಚಾಲೆಂಜ್ ಮಾಡಲಿದೆಯೇ ಕಾಂಗ್ರೆಸ್?

ಈ ಹತ್ತು ವರ್ಷಗಳಲ್ಲಿ (Lok Sabha Election 2024) ನರೇಂದ್ರ ಮೋದಿ ತುಂಬ ನಾಜೂಕಿನಿಂದ ಕಟ್ಟಿ ನಿಲ್ಲಿಸಿರುವ ಇನ್ನೊಂದು ‘ಐಡೆಂಟಿಟಿ’ಯ ಕೋಟೆಗೆ ತಾನು ಲಗ್ಗೆ ಹಾಕುವ ನಿಟ್ಟಿನಲ್ಲಿ ಮಾತ್ರ ಕಾಂಗ್ರೆಸ್ ಒಂದಿಷ್ಟು ಪರಿಣಾಮಕಾರಿ ಸಿದ್ಧತೆ ಮಾಡಿದೆ ಎಂದು ಹೇಳಬಹುದು. ಈ ಐಡೆಂಟಿಟಿಯ ಮತಬ್ಯಾಂಕಿನ ಮೇಲೆ ಮೋದಿಯ ಬಿಜೆಪಿಗಿರುವ ಪಾರಮ್ಯವನ್ನು ಮುರಿಯಬೇಕಿರುವುದು ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ಸಿಗೆ ತುಂಬ ಅನಿವಾರ್ಯವೇ ಹೌದು.  ಯಾವುದು ಆ ಐಡಿಂಟಿಟಿ? ಪತ್ರಕರ್ತ ಚೈತನ್ಯ ಹೆಗಡೆ ಇಲ್ಲಿ ವಿಶ್ಲೇಷಿಸಿದ್ದಾರೆ.

VISTARANEWS.COM


on

Lok Sabha Election 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಚೈತನ್ಯ ಹೆಗಡೆ, ಬೆಂಗಳೂರು
ಜಾತಿ ಐಡೆಂಟಿಟಿ, ಹಿಂದುತ್ವದ ಐಡೆಂಟಿಟಿ, ಮುಸ್ಲಿಂ ಐಡೆಂಟಿಟಿ…
ಭಾರತದಲ್ಲಿ ಯಾವುದೇ ಚುನಾವಣೆಗಳ ಸಂದರ್ಭದಲ್ಲಿ (Lok Sabha Election 2024) ಚಿಂತನಕ್ಕೊಳಪಡುವ, ಚರ್ಚೆಯಾಗುವ ಐಡೆಂಟಿಟಿಗಳ ಪೈಕಿ ಇವು ಇದ್ದದ್ದೇ. ಇದರ ಸುತ್ತಲೇ ಪಕ್ಷಗಳು ಸಹ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಮೆಸೇಜಿಂಗ್‌ವರೆಗೆ ಅನೇಕ ಕಾರ್ಯತಂತ್ರಗಳನ್ನು ಹೆಣೆಯುತ್ತವೆ. ಈಗ ಲೋಕಸಭೆ ಸಂದರ್ಭದಲ್ಲೂ ಇವೆಲ್ಲ ಚರ್ಚೆಯಾಗುವ ಸಂಗತಿಗಳೇ.

ಜಾತಿಯ ಕಾರ್ಡ್ ಇವತ್ತಿಗೂ ಪ್ರಬಲವೇ. ಆದರೆ ಇದು ತುಂಬ ಕಲಸಿಹೋಗಿದೆ. ಕೇಂದ್ರದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುವವರೆಗೂ ಮುಸ್ಲಿಂ ಐಡೆಂಟಿಟಿಯನ್ನು ದೊಡ್ಡಮಟ್ಟದಲ್ಲಿ ಖುಷಿಪಡಿಸಿಕೊಂಡು ಸೆಳೆದುಕೊಳ್ಳುತ್ತ, ಮೇಲ್ವರ್ಗದವರು ನಿಮ್ಮ ಮೇಲೆ ಅಪಚಾರ ಮಾಡಿದ್ದಾರೆಂಬ ಕಥಾನಕದಲ್ಲಿ ಹಿಂದುಗಳಲ್ಲಿನ ದಲಿತ ಮತ್ತು ಒಬಿಸಿ ಜಾತಿಗಳನ್ನು ಜೋಡಿಸಿಕೊಂಡು ಗೆಲ್ಲುವ ಸಮೀಕರಣವೊಂದಿತ್ತು. ಕಾಂಗ್ರೆಸ್ ಹಾಗೂ ಜಾತಿ ಆಧರಿತ, ಕುಟುಂಬಾಧರಿತ ಪಕ್ಷಗಳು ತಮ್ಮ ಸಾಮರ್ಥ್ಯಾನುಸಾರ ಈ ಸಮೀಕರಣದಲ್ಲಿ ಯಶ ಕಂಡು, ನಂತರ ‘ಕೋಮುವಾದಿ’ ಬಿಜೆಪಿಯನ್ನು ದೂರವಿಡಲು ಒಂದುಗೂಡುತ್ತಿದ್ದದ್ದು ಇದರ ಒಟ್ಟಾರೆ ತಿರುಳು. 

ಎರಡು ಬಗೆಯಲ್ಲಿ ಇವತ್ತಿನ ಬಿಜೆಪಿ ಆ ಕಥಾನಕವನ್ನು ದಶಕಗಳ ಹಿಂದೆ ಧ್ವಂಸ ಮಾಡಿತು. ಹಿಂದುತ್ವದ ದೊಡ್ಡ ಐಡೆಂಟಿಟಿಯಲ್ಲಿ ಕೆಲವಷ್ಟಾದರೂ ಜಾತಿಯ ಐಡೆಂಟಿಟಿಗಳು ಕೊನೆಪಕ್ಷ ಚುನಾವಣೆ ಅವಧಿಯಲ್ಲಿ ಕರಗಿಹೋಗುವಂತೆ ವ್ಯಾಖ್ಯಾನ ಕಟ್ಟಿದ್ದೊಂದೆಡೆ. ಅಧಿಕಾರಕ್ಕೆ ಬಂದ ನಂತರ ಆವಾಸ್, ಶೌಚಾಲಯ, ಉಜ್ವಲಾ, ಮುದ್ರಾ ಇತ್ಯಾದಿಗಳಲ್ಲಿ ಎಲ್ಲ ಜಾತಿಗಳಲ್ಲಿ ಫಲಾನುಭವಿಗಳ ವರ್ಗವನ್ನು ಸೃಷ್ಟಿಸಿ ಹಾಗೆ ರೂಪುಗೊಂಡ ಫಲಾನುಭವಿಗಳ ಐಡೆಂಟಿಟಿಯಲ್ಲಿ ಜಾತಿಯನ್ನು ತುಸು ಮರೆಯುವಂತೆ ಮಾಡಿ ಆ ಮಾದರಿ ಗಟ್ಟಿಗೊಳಿಸಲಾಯಿತು. ಹಲವು ಒಬಿಸಿ ಮತ್ತು ದಲಿತರನ್ನು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಮುಖ ಸ್ಥಾನಗಳಿಗೆ ನೇಮಿಸುವವರೆಗೆ ಕಾಳಜಿ ವಹಿಸಿದ ಬಿಜೆಪಿಯನ್ನೀಗ ಮೊದಲಿನ ರೀತಿಯಲ್ಲಿ ಬ್ರಾಹ್ಮಣ-ಬನಿಯಾಗಳ ಪಾರ್ಟಿ ಎಂದರೆ ಆ ಟೀಕೆ ಕೇಳುವವರ ಪೈಕಿ ಯಾರ ಎದೆಗೂ ನಾಟುವುದಿಲ್ಲ. ಹಾಗೆಂದೇ, ಈಗೊಂದು ನಾಲ್ಕು ತಿಂಗಳ ಹಿಂದೆ ಈ ಬಾರಿ ಲೋಕಸಭೆ ಚುನಾವಣೆಯನ್ನು ಜಾತಿ ಗಣತಿ ಎಂಬ ಅಸ್ತ್ರದಿಂದಲೇ ಪ್ರಮುಖವಾಗಿ ಎದುರಿಸುವ ರೀತಿಯಲ್ಲಿ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಮಾತಾಡುತ್ತಿದ್ದವು. ಆದರೆ, ಈ ಜಾತಿ ಲೆಕ್ಕಾಚಾರ ಹಾಕುವುದರಲ್ಲಿ ಇವತ್ತಿನ ಬಿಜೆಪಿ ತನ್ನಂತೆಯೇ ಪಳಗಿದೆ ಎಂಬುದು ಅರಿವಿಗೆ ತಂದುಕೊಂಡವರಂತೆ ಆ ಧ್ವನಿಯ ಅಬ್ಬರವನ್ನು ಕಾಂಗ್ರೆಸ್ ತಗ್ಗಿಸಿತು. ಜಾತಿ ಗಣತಿಯ ವರದಿಯೇ ಬಿಜೆಪಿಯನ್ನು ಎದುರಿಸಲಿಕ್ಕಿರುವ ಟ್ರಂಪ್ ಕಾರ್ಡ್ ಎಂಬಂತೆ ಮಾತನಾಡಿದ್ದ ನಿತೀಶ ಕುಮಾರ, ಅದೇನೂ ತಾನಂದುಕೊಂಡ ಪರಿಣಾಮ ಬೀರಿಲ್ಲ ಎಂದುಕೊಂಡೋ ಏನೋ, ಎನ್‌ಡಿಎಗೆ ಬಂದಿದ್ದಾಯ್ತು.

ಜಾತಿ ಕಾರ್ಡ್ ನಡೆಯುವುದಿಲ್ಲವೆ?

2024ರ ಲೋಕಸಭೆ ಚುನಾವಣೆಯಲ್ಲಿ ಜಾತಿ ಕಾರ್ಡ್ ನಡೆಯುವುದಿಲ್ಲ ಎಂದೇನೂ ಅಲ್ಲ. ಆದರೆ ಅದೊಂದೇ ಇಡಿಇಡಿಯಾಗಿ ಯಾರ ಪರವೋ ವಿರುದ್ಧವೋ ಅಲೆ ಸೃಷ್ಟಿಸುವ ಮಟ್ಟದಲ್ಲಿಲ್ಲ. ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಎಲ್ಲ ಜಾತಿಗಳಲ್ಲಿ ಕಾಣಬಹುದಾದ ಫಲಾನುಭವಿಗಳು ಇವೆಲ್ಲದರ ಮೂಲಕ ಬಿಜೆಪಿಯೂ ಜಾತಿ ಐಡೆಂಟಿಟಿ ಪ್ರಜ್ವಲಿಸದಂತೆ ಹಿಂದುತ್ವದ ಧ್ರುವೀಕರಣ ಮಾಡಬಲ್ಲದು. ಇನ್ನು ಕೆಲವು ಸ್ಥಾನಗಳಲ್ಲಿ ಜಾತಿಯೇ ನಿರ್ಣಾಯಕ ಎಂಬಂತಿರುವಲ್ಲಿ ಅದು ಆ ಸ್ಥಳೀಯ ವ್ಯಾಪ್ತಿಗೆ ಸೀಮಿತವಾದ ಜಾತಿ ರಾಜಕಾರಣವನ್ನು ತಾನೂ ಆಡಬಲ್ಲದು. ಏಕೆಂದರೆ ಬಿಜೆಪಿಯ ಕೇಡರಿನಲ್ಲಿ ಈಗ ಎಲ್ಲ ವರ್ಗದವರಿದ್ದಾರೆ. 

ಈ ನಡುವೆ ತಥಾಕಥಿತ ಸೆಕ್ಯುಲರ್ ಪಾಳೆಯದ ರಾಜಕೀಯ ಮಂತ್ರವನ್ನೇ ರಿವರ್ಸ್ ಎಂಜಿನಿಯರಿಂಗ್ ಮಾಡಿದ ಆಟದ ಝಲಕನ್ನೂ ನರೇಂದ್ರ ಮೋದಿ ಒಂದಿಷ್ಟು ದಿನ ತೋರಿದರು. ಹೇಗೆ ಕಾಂಗ್ರೆಸ್-ಎಸ್ಪಿ-ಆರ್‌ಜೆಡಿ ಇತ್ಯಾದಿ ಪಕ್ಷಗಳು ಹಿಂದುಗಳ ಒಂದಿಷ್ಟು ಜಾತಿಗಳನ್ನಷ್ಟೇ ಪ್ರತ್ಯೇಕಿಸಿ ಮುಸ್ಲಿಮರ ಜತೆ ಜೋಡಿಸಿಕೊಂಡು ಚುನಾವಣಾ ರಾಜಕಾರಣದ ಆಟವಾಡಿದವೋ, ಹಾಗೆಯೇ ಒಂದಿಷ್ಟು ದಿನ ನರೇಂದ್ರ ಮೋದಿ ಹೋದಲ್ಲಿ-ಬಂದಲ್ಲಿ ಪಸ್ಮಂದಾ ಮುಸ್ಲಿಂಮರ ಬಗ್ಗೆ ಕಕ್ಕುಲಾತಿಯಿಂದ ಮಾತನಾಡಲು ತೊಡಗಿದ್ದರು. ಮುಸ್ಲಿಮರಲ್ಲಿ ಕೆಳಜಾತಿಗಳಿಂದ ಮತಾಂತರವಾಗಿ ಬಂದವರು ಎಂಬಂತಿರುವ ಈ ಸಮೂಹವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದಿರುವುದನ್ನು ಉಪಯೋಗಿಸಿಕೊಂಡು ಅದನ್ನು ಮುಸ್ಲಿಂ ಮತಬ್ಯಾಂಕಿನಿಂದ ಈಚೆ ಸೆಳೆದು ತರುವ ಯತ್ನದಂತೆ ಇತ್ತದು. ಆದರೆ, ಕಟ್ಟರ್ ಹಿಂದು ಅನುಯಾಯಿಗಳಿಗೆ ಇದು ತುಷ್ಟೀಕರಣದಂತೆ ಕಂಡಿದ್ದರಿಂದಲೋ ಅಥವಾ ಬಿಜೆಪಿಗೆ ಅದರಿಂದ ಮತಗಳೇನೂ ಬರದು ಎಂಬುದು ಪಕ್ಕಾ ಆಗಿದ್ದರಿಂದಲೋ, ಒಟ್ಟಿನಲ್ಲಿ ಪಸ್ಮಂದಾ ಮುಸ್ಲಿಮರ ಉಲ್ಲೇಖದ ತೀವ್ರತೆ ಕಮ್ಮಿ ಆಯಿತು. 
ಹೀಗಾಗಿ, ಒಬಿಸಿ- ಎಸ್ಸಿಎಸ್ಟಿ – ಮುಸ್ಲಿಮರು ಈ ಎಲ್ಲ ವಿಭಾಗಗಳಲ್ಲಿ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಪಕ್ಷಗಳ ಆಟ ಮತ್ತು ಸಮೀಕರಣಗಳು ಮುಂದುವರಿದಿವೆಯಾದರೂ ಅಲ್ಲೆಲ್ಲ ತುಂಬ ಪ್ರತಿಫಲ ಸಿಗುವ ನಿರೀಕ್ಷೆ ಏನಿಲ್ಲ. 

ಆದರೆ…

ಈ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ತುಂಬ ನಾಜೂಕಿನಿಂದ ಕಟ್ಟಿ ನಿಲ್ಲಿಸಿರುವ ಇನ್ನೊಂದು ‘ಐಡೆಂಟಿಟಿ’ಯ ಕೋಟೆಗೆ ತಾನು ಲಗ್ಗೆ ಹಾಕುವ ನಿಟ್ಟಿನಲ್ಲಿ ಮಾತ್ರ ಕಾಂಗ್ರೆಸ್ ಒಂದಿಷ್ಟು ಪರಿಣಾಮಕಾರಿ ಸಿದ್ಧತೆ ಮಾಡಿದೆ ಎಂದು ಹೇಳಬಹುದು. ಈ ಐಡೆಂಟಿಟಿಯ ಮತಬ್ಯಾಂಕಿನ ಮೇಲೆ ಮೋದಿಯ ಬಿಜೆಪಿಗಿರುವ ಪಾರಮ್ಯವನ್ನು ಮುರಿಯಬೇಕಿರುವುದು ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ಸಿಗೆ ತುಂಬ ಅನಿವಾರ್ಯವೇ ಹೌದು. 

ಯಾವುದದು ಮತಬ್ಯಾಂಕಿನ ಸಮೀಕರಣದ ಹೊಸ ಐಡೆಂಟಿಟಿ? ಆ ಐಡೆಂಟಿಟಿ ಎಂದರೆ- ಮಹಿಳೆ!:
ಗಮನಿಸಿ. ನಾವಿಲ್ಲಿ ರಾಜಕಾರಣ ಮತ್ತು ಮತಬ್ಯಾಂಕಿಗೆ ಸಂಬಂಧಿಸಿ ಐಡೆಂಟಿಟಿ ಎಂದು ಮಾತನಾಡುವುದರ ಅರ್ಥ ಏನೆಂದರೆ- ಅದು ಒಂದು ಸಮೂಹವಾಗಿ ಯಾರದ್ದೋ ಒಬ್ಬರ ಬೆನ್ನಿಗೆ ಪ್ರಬಲವಾಗಿ ನಿಲ್ಲುತ್ತದೆ ಎಂಬರ್ಥದಲ್ಲಿ. ಮಹಿಳೆಯ ವಿಚಾರದಲ್ಲಿ ಮತಬ್ಯಾಂಕ್ ಐಡೆಂಟಿಟಿ ಎಂಬ ಪರಿಕಲ್ಪನೆ ಏಕೆಂದರೆ, ಆಕೆ ತನ್ನ ಜಾತಿ, ಪ್ರದೇಶ ಇತ್ಯಾದಿ ಐಡೆಂಟಿಟಿಗಳನ್ನೆಲ್ಲ ಗೌಣವಾಗಿಸಿ ಮತದಾನದ ಸಂದರ್ಭದಲ್ಲಿ ತಾನೊಬ್ಬ ಮಹಿಳೆಯಾಗಿ ಇಂಥವರ ಬೆನ್ನಿಗೆ ನಿಲ್ಲುತ್ತೇನೆ, ಮತ ಚಲಾಯಿಸುತ್ತೇನೆ ಎಂದು ನಿರ್ಧರಿಸಿದಾಗ ಅದೊಂದು ಮತಬ್ಯಾಂಕ್ ಐಡೆಂಟಿಟಿ ಎಂದಾಗುತ್ತದೆ. 

2019ರ ಲೋಕಸಭೆ ಫಲಿತಾಂಶವನ್ನು ವಿಶ್ಲೇಷಿಸಿ ಬಂದಿರುವ ಕೆಲವು ಅಧ್ಯಯನ ವರದಿಗಳು ಆ ಚುನಾವಣೆಯಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರು ಎಂಬುದನ್ನು ಸಾರಿವೆ. ಉತ್ತರ ಪ್ರದೇಶ ಸೇರಿದಂತೆ ಹಿಂದಿ ಭಾಷಿಕ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಸಹ ಮಹಿಳೆಯರು ಪುರುಷರನ್ನು ಮೀರಿಸುವ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಂಡಲ್ಲೆಲ್ಲ ಬಿಜೆಪಿ ಗೆದ್ದಿರುವುದನ್ನು ಎಕ್ಸಿಸ್-ಮೈ ಇಂಡಿಯಾ ಹಾಗೂ ಲೋಕನೀತಿ-ಸಿ ಎಸ್ ಡಿ ಎಸ್ ಇತ್ಯಾದಿ ಸರ್ವೆಗಳು ವಿಶ್ಲೇಷಿಸಿವೆ. 

ಯಾರು ಯಾವ ಪಕ್ಷಕ್ಕೆ ಮತ ಹಾಕಿದರು ಎಂಬ ಅಂಕಿಸಂಖ್ಯೆಗಳೇನೂ ಯಾರಿಗೂ ಸಿಕ್ಕುವುದಿಲ್ಲವಾದರೂ ಈ ಮೇಲೆ ಉದಾಹರಿಸಿದ ಸರ್ವೆಗಳು ಕೆಲವು ತರ್ಕಗಳನ್ನಿಟ್ಟುಕೊಂಡು ಚುನಾವಣೋತ್ತರವಾಗಿ ಈ ಲೆಕ್ಕಾಚಾರ ಮಾಡಿರುತ್ತವೆ. 1962ರಿಂದ ಚುನಾವಣಾ ಆಯೋಗವು ಒಂದು ಪ್ರದೇಶದಲ್ಲಾದ ಮತದಾನದಲ್ಲಿ ಮಹಿಳೆಯರ ಪಾಲೆಷ್ಟು, ಪುರುಷರ ಪಾಲೆಷ್ಟು ಎಂಬ ಸಂಖ್ಯೆಯನ್ನಂತೂ ಕೊಡುತ್ತದೆ. ಇದನ್ನಿಟ್ಟುಕೊಂಡು, ಒಂದು ನಿರ್ದಿಷ್ಟ ಮತಕ್ಷೇತ್ರದಲ್ಲಿ ಬಿಜೆಪಿ ಇಂತಿಷ್ಟು ಮತದಿಂದ ಗೆದ್ದಿರಬೇಕಾದರೆ ಅದರಲ್ಲಿ ಮಹಿಳೆಯರ ಮತಗಳೆಷ್ಟಿರುತ್ತವೆ ಎಂದು ಲೆಕ್ಕ ಹಾಕಬಹುದು. ಹೀಗಾಗಿ, ಮೋದಿ ಪ್ರಣೀತ ಬಿಜೆಪಿಗೆ ಮತ ಹಾಕುವಾಗ ಮಹಿಳೆಯರ ದೊಡ್ಡವರ್ಗವೊಂದು ತಾನ್ಯಾವ ಜಾತಿ-ಅಭ್ಯರ್ಥಿಯದ್ಯಾವ ಜಾತಿ ಎಂಬುದನ್ನು ಮೀರಿ ಮಹಿಳೆಯಾಗಿ ಯೋಚಿಸುತ್ತಿದೆ ಎಂದಾಯಿತು.

ಇದೇಕೆ ಹೀಗೆ ಎಂಬುದಕ್ಕೆ ನಮಗೆ ತರ್ಕಗಳೂ ಸಿಗುತ್ತ ಹೋಗುತ್ತವೆ. ಪ್ರಧಾನಿ ಮೋದಿಯವರ ಬಾಯಿಂದ ಬರುವ ಕೆಲವು ಪದಪುಂಜಗಳನ್ನು ಕೇಳಿದರೆ ಹೊಳಹು ಸಿಗುತ್ತದೆ. ಇಜ್ಜತ್ ಘರ್ ಎಂಬ ಪದವನ್ನು ಶೌಚಾಲಯಗಳಿಗೆ ಟಂಕಿಸಿದರು ಮೋದಿ. ಅಂದರೆ, ಗ್ರಾಮೀಣ ಭಾಗದ 10 ಕೋಟಿ ಮನೆಗಳಿಗೆ ಕೇವಲ ಶೌಚಾಲಯ ಕಟ್ಟಿಸಿಕೊಟ್ಟಿಲ್ಲ, ಬದಲಿಗೆ ಆ ಮೂಲಕವಾಗಿ ಬೆಳಕು ಹರಿಯುವ ಮೊದಲೇ ಬಯಲಲ್ಲಿ ಶೌಚಕ್ಕೆ ಕೂರಬೇಕಿದ್ದ ಮಹಿಳೆಯ ಸಮ್ಮಾನ ರಕ್ಷಿಸುವ ಇಟ್ಟಿಗೆಯ ಗೂಡದು ಎಂಬ ಭಾವಸಂದೇಶ ಅಲ್ಲಿದೆ. ಅದು ಮನೆ ಕೊಡುವ ಆವಾಸ್ ಯೋಜನೆ ಇದ್ದಿರಬಹುದು, ಗ್ಯಾಸ್-ಜನಧನ ಖಾತೆಗಳಿದ್ದಿರಬಹುದು ಅಲ್ಲೆಲ್ಲ ಬಿಪಿಎಲ್ ಮಹಿಳೆಯನ್ನೇ ಮುಖ್ಯಸ್ಥೆಯನ್ನಾಗಿಸಲಾಗುತ್ತಿದೆ. 

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

ಲಖ್ ಪತಿ ದೀದಿ…ಮೋದಿಯವರ ಬಾಯಿಂದ ಆಗೀಗ ಕೇಳುವ ಮತ್ತೊಂದು ಪದಪುಂಜ. ಕೇಂದ್ರ ಸರ್ಕಾರದ ಪ್ರೋತ್ಸಾಹವನ್ನು ಹೊಂದಿರುವ ಮಹಿಳಾ ಸ್ವಸಹಾಯ ಸಂಘಗಳಿಂದ ಯಾರೆಲ್ಲ ಮಹಿಳೆಯರು ವಾರ್ಷಿಕವಾಗಿ 1 ಲಕ್ಷ ರುಪಾಯಿಗಳಿಗಿಂತ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೋ ಅವರೆಲ್ಲ ಲಖ್ ಪತಿ ದೀದಿಯರು. ಇವರ ಮಾಸಿಕ ಆದಾಯ 10,000 ರುಪಾಯಿಗಳ ಸರಾಸರಿಯನ್ನು ಕನಿಷ್ಠ ನಾಲ್ಕು ಕೃಷಿ ಋತುವಿನವರೆಗೆ ಅಥವಾ 4 ವ್ಯವಹಾರದ ಸೀಸನ್‌ವರೆಗೆ ಕಾಪಾಡಿಕೊಂಡಿರಬೇಕು. ಅದಾಗಲೇ ಅಂಥ 1 ಕೋಟಿ ಲಖ್ ಪತಿ ದೀದಿಯರು ದೇಶದಲ್ಲಿ ಸೃಷ್ಟಿಯಾಗಿದ್ದಾರೆ. ಸ್ವಯಂ ಉದ್ಯೋಗ ಹಾಗೂ ವಹಿವಾಟು ನಿರ್ವಹಣೆಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯನ್ನು ಗಟ್ಟಿಗೊಳಿಸಿ 3 ಕೋಟಿ ಲಖ್ ಪತಿ ದೀದಿಯರನ್ನು ಸೃಷ್ಟಿಯಾಗಿಸಬೇಕೆಂಬುದು ಈ ಯೋಜನೆಯ ಗುರಿ. ಎಸ್ ಬಿ ಐ ವರದಿಯೊಂದರ ಪ್ರಕಾರ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರ ಆದಾಯವು 2019 ಮತ್ತು 2024ರ ನಡುವೆ ಶೇಕಡ 207ರ ಏರಿಕೆ ಕಂಡಿದೆ.

ಮೋದಿ ಮುಖ ನೋಡಿ ಮತ ಹಾಕುವ ಸಂದರ್ಭ ಬಂದಾಗ ತಾನು ಜಾಟಳೋ, ಕುಮ್ರಿಯೊ, ಒಕ್ಕಲಿಗಳೋ, ದಲಿತೆಯೋ ಎಂದು ತಲೆಕೆಡಿಸಿಕೊಳ್ಳದೇ ತನ್ನನ್ನು ಕೇವಲ ಫಲಾನುಭವಿಯಾಗಿ ನೋಡಿಕೊಳ್ಳುವಂತೆ ಮೇಲೆ ವಿವರಿಸಿದ ಹೆಜ್ಜೆಗಳು ನೋಡಿಕೊಳ್ಳುತ್ತವೆ. 

ಹೀಗೆಲ್ಲ ಮೋದಿ ಕಟ್ಟಿಕೊಂಡಿರುವ ಕೋಟೆಯನ್ನು ಗುರುತಿಸಿ ಅದಕ್ಕೆ ಲಗ್ಗೆ ಹಾಕುವ ಯತ್ನವನ್ನು ಕಾಂಗ್ರೆಸ್ ವಿಧಾನಸಭೆ ಚುನಾವಣೆ ಹಂತದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿ ಮಾಡಿದೆ. ಇಲ್ಲೆಲ್ಲ ಅದು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಹಲವು ಭಾಗ್ಯಗಳನ್ನು ಪ್ರಕಟಿಸಿತು. ಕರ್ನಾಟಕದಲ್ಲಿ ಬಿಜೆಪಿ ವೈಫಲ್ಯದ ವಿರುದ್ಧ ಜನ ಮತ ಕೊಟ್ಟರು ಹೊರತು ಗ್ಯಾರಂಟಿಗಲ್ಲ ಎಂದೆಲ್ಲ ವಾದಿಸುವ ಅವಕಾಶಗಳಿದೆಯಾದರೂ, ಗೃಹಲಕ್ಷ್ಮೀ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಗಳನ್ನು ಬಹುತೇಕರು ಖುಷಿಯಿಂದಲೇ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಯಾರಿಗೂ ತೋರುವ ಸತ್ಯ. ಅಲ್ಲದೇ, ಮಹಿಳೆಯರ ಕೈಗೆ ಹಣ ಇಡುವ ಯಾವುದೇ ಯೋಜನೆ ದುಂದು ಅಥವಾ ಪುಕ್ಕಟೆ ಅಲ್ಲ, ಅದನ್ನಾಕೆ ಕುಟುಂಬದ ಆರ್ಥಿಕ ಉನ್ನತಿಗೆ ಸೂಕ್ತವಾಗಿಯೇ ಬಳಸಿಕೊಳ್ಳುತ್ತಾಳೆ ಎಂಬ ವಾದವೀಗ ಗಟ್ಟಿಯಾಗಿದೆ. 
ಇದರ ಮುಂದುವರಿದ ಭಾಗ ಎಂಬಂತೆ, ಕಾಂಗ್ರೆಸ್ ತನ್ನ ಲೋಕಸಭೆ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ನೀಡಿರುವ ಭರವಸೆಗಳನ್ನು ಗಮನಿಸಬೇಕು. 

ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

ಯಾವುದೇ ಷರತ್ತಿಲ್ಲದೇ ಬಡ ಕುಟುಂಬದ ಪ್ರತಿ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರುಪಾಯಿಗಳನ್ನು ನೇರ ವರ್ಗಾವಣೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಬಡವರೆಂದರೆ ಯಾರೆಲ್ಲ? ದುಡಿಯುವುದೇ ಬೇಡವೇ? ಇದಕ್ಕೆ ಹಣವನ್ನು ಯಾರಿಗೆ ತೆರಿಗೆ ಹಾಕಿ ಹೊಂದಿಸುತ್ತಾರೆ ಎಂದೆಲ್ಲ ಚರ್ಚಿಸಬಹುದು. ಆದರೆ ಕೊನೆಗೂ ಮುಖ್ಯವಾಗುವುದು ಈ ಪ್ರಲೋಭನೆಯನ್ನು ಕಾಂಗ್ರೆಸ್ ಆರ್ಥಿಕವಾಗಿ ಬಡವಾಗಿರುವ ಮಹಿಳೆಗೆ ಪರಿಣಾಮಕಾರಿಯಾಗಿ ನಾಟಿಸಿ ಮತ ಸೆಳೆಯುತ್ತದಾ ಇಲ್ಲವಾ ಎಂಬುದರಲ್ಲಷ್ಟೆ. 2025ರ ನಂತರ ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಮಹಿಳೆಗೆ ಶೇ. 50ರ ಮೀಸಲು ಎಂಬ ಇನ್ನೊಂದು ಭರವಸೆಯ ಅಸ್ತ್ರವನ್ನೂ ಕಾಂಗ್ರೆಸ್ ಪ್ರಯೋಗಿಸಿದೆ. 

ಅಂತೂ ಮಹಿಳಾ ಮತದಾರರ ವರ್ಗ ಎಂಬುದೀಗ ಎಲ್ಲ ಪಕ್ಷಗಳಿಗೆ ರಣಕಣ. ಹೀಗೆಲ್ಲ ಮಹಿಳೆಯರನ್ನು ಖುಷಿಗೊಳಿಸುತ್ತಿರುವ ಮಾದರಿಗಳ ಪೈಕಿ ಮೋದಿಯದ್ದು ಸರಿಯಾ ಅಥವಾ ಕಾಂಗ್ರೆಸ್ಸಿನದ್ದಾ, ಯಾವುದು ಬಿಟ್ಟಿ, ಇನ್ಯಾವುದು ಬಲವರ್ಧನೆ ಎಂಬುದನ್ನೆಲ್ಲ ಆಸಕ್ತರು ಅವರವರ ಭಾವಕ್ಕೆ ತಕ್ಕಂತೆ ಚರ್ಚಿಸಬಹುದು. ಆದರೆ ಭಾರತೀಯ ರಾಜಕಾರಣದಲ್ಲಿ ಮಹಿಳಾ ಮತಬ್ಯಾಂಕ್ ಅನ್ನು ಕ್ರೋಢಿಕರಿಸಿ ತಮ್ಮತ್ತ ಸೆಳೆದುಕೊಳ್ಳುವ ಟ್ರೆಂಡ್ ಮತ್ತು ಈ ಕುರಿತಾದ ಹಣಾಹಣಿ ಇನ್ನೂ ಹಲವು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂಬುದನ್ನಂತೂ ಅರ್ಥಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಹ ಗಂಡ ಸೂಚಿಸಿದ ಅಭ್ಯರ್ಥಿಗೆ ಹೆಂಡತಿಯ ಮತ ಎಂಬಂತಹ ಸನ್ನಿವೇಶ ಹೆಚ್ಚೂಕಡಿಮೆ ಇಲ್ಲವಾಗಿದೆ. ಹಲವು ಬಗೆಯ ಇಷ್ಟಾನಿಷ್ಟ, ಆ ಹೊತ್ತಿನ ಪ್ರಲೋಭನೆ, ಜಾತಿ ಸೇರಿದಂತೆ ಹಲವು ಐಡೆಂಟಿಟಿಗಳಲ್ಲಿ ಅಗಾಧವಾಗಿ ವಿಭಜಿತವಾಗಿರುವ ಪುರುಷ, ಕೇವಲ ಪುರುಷ ಎಂಬ ಐಡೆಂಟಿಟಿಯಲ್ಲಿ ಮತಬ್ಯಾಂಕ್ ಆಗಲಾರ. ಇವರಿಗೆ ಹೋಲಿಸಿದರೆ ಫಲಾನುಭವಿ ಮಹಿಳೆ ಒಂದು ಕ್ರೋಢೀಕೃತ ಮತಬ್ಯಾಂಕ್ ಆಗುವ ಅವಕಾಶ ಹೆಚ್ಚು. ಅದಲ್ಲದೇ, ಮೋದಿ ಸರ್ಕಾರವೇ ಸಂಸತ್ತಿನಲ್ಲಿ ಪಾಸು ಮಾಡಿರುವ ಮಹಿಳಾ ಮೀಸಲು ವಿಧೇಯಕವು, ಜನಗಣತಿ ಮುಗಿಯುತ್ತಲೇ ಜಾರಿಗೆ ಬರುವ ಹಂತದಲ್ಲಿದೆ. ಆಗ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಕಡ್ಡಾಯ 33 ಶೇಕಡ ಸ್ಥಾನಗಳು ಇರಬೇಕಾಗುತ್ತವೆ. ಹಾಗೆಂದೇ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿರುವ ಚುನಾವಣಾ ರಾಜಕಾರಣದ ಧ್ರುವೀಕರಣದ ಆಟಗಳು ಈಗಷ್ಟೇ ಪ್ರಾರಂಭವಾಗಿವೆ. ಈ ವಿಚಾರದಲ್ಲಿ ಮೋದಿಯ ಮುನ್ನಡೆಗೆ ಪ್ರತಿಪಕ್ಷ ಮೈತ್ರಿಗಳು 2024ರ ಲೋಕಸಭೆ ಚುನಾವಣೆಯಲ್ಲಿ ಗಂಭೀರ ಸವಾಲೊಡ್ಡಿಯಾವಾ ಎಂಬುದು ಈಗಿರುವ ಕುತೂಹಲ. 

ಅಂದಹಾಗೆ, ರಾಜಕಾರಣದ ಚರ್ಚೆ ಅಂದರೆ ಅದು ತಮಗೆ ಮಾತ್ರ ಸಂಬಂಧಿಸಿದ್ದು, ಮಹಿಳೆಯರಿಗೆ ನೋಡುವುದಕ್ಕೆ-ಚರ್ಚಿಸುವುದಕ್ಕೆ ಟಿವಿ ಧಾರಾವಾಹಿಗಳಿವೆ ಅಂತ ಅಂದುಕೊಂಡಿರುವ ಗಂಡಸಿರಿಗೆಲ್ಲ ಗೊತ್ತಿರಬೇಕು…ಮತಬ್ಯಾಂಕ್ ರಾಜಕಾರಣದ ಸ್ಕ್ರಿಪ್ಟ್ ಅದಾಗಲೇ ಬದಲಾಗಿಬಿಟ್ಟಿದೆ!

ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: 75 ವರ್ಷ ದಾಟಿದರೂ ಮೋದಿ ಪ್ರಧಾನಿ ಸ್ಥಾನದಲ್ಲಿರುತ್ತಾರಾ? ಅಮಿತ್‌ ಶಾ ಹೇಳಿದ್ದಿಷ್ಟು

Narendra Modi: ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ವರ್ಷ ತುಂಬುತ್ತದೆ. ಅದಾದ ಬಳಿಕ ಅವರು ಪ್ರಧಾನಿ ಸ್ಥಾನದಲ್ಲಿ ಇರಲ್ಲ ಎಂದು ಅರವಿಂದ್‌ ಕೇಜ್ರಿವಾಲ್‌ ಅವರು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಅಮಿತ್‌ ಶಾ (Amit Shah), “ನರೇಂದ್ರ ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುತ್ತಾರೆ” ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಇದನ್ನೇ ಹೇಳಿದ್ದಾರೆ.

VISTARANEWS.COM


on

Narendra Modi
Koo

ಹೈದರಾಬಾದ್: ಅಬಕಾರಿ ನೀತಿ ಜಾರಿ ಹಗರಣದಲ್ಲಿ ಜೈಲುಪಾಲಾಗಿ, ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿ ಹೊರಬರುತ್ತಲೇ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ವರ್ಷ ತುಂಬುತ್ತದೆ. ಅದಾದ ಬಳಿಕ ಅವರು ಪ್ರಧಾನಿ ಸ್ಥಾನದಲ್ಲಿ ಇರಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಮಿತ್‌ ಶಾ (Amit Shah), “ನರೇಂದ್ರ ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುತ್ತಾರೆ” ಎಂದಿದ್ದಾರೆ.

“ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನಾನೊಂದು ವಿಷಯ ತಿಳಿಸುತ್ತೇನೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಹಾಗೂ ಮೂರನೇ ಅವಧಿಯನ್ನು ಅವರು ಪೂರ್ಣಗೊಳಿಸುತ್ತಾರೆ. ಇಂಡಿಯಾ ಒಕ್ಕೂಟವೂ ಅಷ್ಟೇ, ಮೋದಿ ಅವರಿಗೆ 75 ವರ್ಷ ತುಂಬುತ್ತದೆ ಎಂಬ ಖುಷಿ ಬೇಡ. 75 ವರ್ಷ ದಾಟಿದ ನಂತರ ಎಲ್ಲೂ ಪ್ರಧಾನಿಯಾಗಬಾರದು ಎಂಬ ನಿಯಮಗಳು ಬಿಜೆಪಿ ಸಂವಿಧಾನದಲ್ಲಿ ಪ್ರಸ್ತಾಪಿಸಿಲ್ಲ. ಹಾಗಾಗಿ, ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುವುದು ನಿಶ್ಚಿತ” ಎಂದು ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‌ನಡ್ಡಾ ಕೂಡ ಪ್ರತಿಕ್ರಿಯೆ

ಅರವಿಂದ್‌ ಕೇಜ್ರಿವಾಲ್‌ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ನರೇಂದ್ರ ಮೋದಿ ಅವರನ್ನು ಸೋಲಿಸಲಾಗದವರು ಈಗ ವಯಸ್ಸಿನ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಆದರೆ, ಪ್ರಧಾನಿಯಾಗಿ ಮುಂದುವರಿಯಲು ವಯಸ್ಸಿನ ಮಿತಿ ಕುರಿತು ಬಿಜೆಪಿ ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ. ನರೇಂದ್ರ ಮೋದಿ ಅವರೇ ನಮ್ಮ ನಾಯಕ ಹಾಗೂ ಭವಿಷ್ಯದಲ್ಲೂ ಅವರೇ ನಾಯಕರಾಗಿ ಇರಲಿದ್ದಾರೆ” ಎಂದಿದ್ದಾರೆ.

ಕೇಜ್ರಿವಾಲ್‌ ನಡೆಸಿದ ವಾಗ್ದಾಳಿ ಹೀಗಿತ್ತು…

ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್‌, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆರೋಪ ಮಾಡಿದರು. “ನರೇಂದ್ರ ಮೋದಿ ಅವರಿಗೆ ಬೇರೆಯವರು ಬೆಳೆಯುವುದು ಇಷ್ಟವಿಲ್ಲ. ದೇಶಕ್ಕೆ ಒಬ್ಬನೇ ನಾಯಕ ಬೇಕು, ಅದು ಅವರೇ ಆಗಿರಬೇಕು. ಈಗಾಗಲೇ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್‌ ಸಿಂಗ್‌ ಚೌಹಾಣ್‌, ವಸುಂಧರಾ ರಾಜೆ, ಮನೋಹರ ಲಾಲ್‌ ಖಟ್ಟರ್‌, ರಮಣ್‌ ಸಿಂಗ್‌ ಸೇರಿ ಹಲವು ನಾಯಕರ ರಾಜಕೀಯ ಜೀವನವನ್ನು ಮೋದಿ ಕೊನೆಗೊಳಿಸಿದ್ದಾರೆ. ಶೀಘ್ರದಲ್ಲೇ, ಯೋಗಿ ಆದಿತ್ಯನಾಥ್‌ ಅವರ ರಾಜಕೀಯ ಜೀವನವನ್ನೂ ಇವರು ಕೊನೆಗಾಣಿಸಲಿದ್ದಾರೆ” ಎಂದು ದೂರಿದರು.

“ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್‌ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ. ಆದರೆ, ನಮ್ಮ ದೇಶದ ಇತಿಹಾಸವೇ ಬೇರೆ ಇದೆ. ದೇಶದಲ್ಲಿ ಇದುವರೆಗೆ ಯಾರೆಲ್ಲ ಸರ್ವಾಧಿಕಾರ ಮಾಡಲು ಹೊರಟಿದ್ದರೋ, ಅವರನ್ನೆಲ್ಲ ಜನ ಮನೆಗೆ ಕಳುಹಿಸಿದ್ದಾರೆ. ಈಗ ಮತ್ತೆ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದೇ ನನ್ನ ಮನವಿಯಾಗಿದೆ” ಎಂದರು.

ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Continue Reading

ದೇಶ

Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Lok Sabha Election: ಮೂರನೇ ಹಂತದಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಶೇ.85.45, ಗೋವಾದಲ್ಲಿ ಶೇ.76.06, ಉತ್ತರ ಪ್ರದೇಶ ಶೇ.57.55 ಹಾಗೂ ಬಿಹಾರದಲ್ಲಿ ಶೇ.59.15ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಕರ್ನಾಟಕದಲ್ಲಿ ಶೇ.71.84ರಷ್ಟು ಮತದಾನ ದಾಖಲಾಗಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು ಮೇ 7ರಂದು ನಡೆದಿದ್ದು, ಮತದಾನ ಪ್ರಮಾಣದ (Voter Turnout) ಕುರಿತು ಚುನಾವಣೆ ಆಯೋಗವು ನಿಖರ ಮಾಹಿತಿ ಒದಗಿಸಿದೆ. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದಲ್ಲಿ ಶೇ.71.84ರಷ್ಟು ಮತದಾನ ದಾಖಲಾಗಿದೆ ಎಂಬುದಾಗಿ ಚುನಾವಣೆ ಆಯೋಗವು (Election Commission) ಮಾಹಿತಿ ನೀಡಿದೆ.

ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ

ಮೂರನೇ ಹಂತದಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಶೇ.85.45, ಗೋವಾದಲ್ಲಿ ಶೇ.76.06, ಉತ್ತರ ಪ್ರದೇಶ ಶೇ.57.55 ಹಾಗೂ ಬಿಹಾರದಲ್ಲಿ ಶೇ.59.15ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಪಶ್ಚಿಮ ಬಂಗಾಳ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿಯೇ ಮತದಾನ ನಡೆದಿತ್ತು.

ರಾಜ್ಯವಾರು ಮತದಾನ ಪ್ರಮಾಣ

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಮತದಾನ ಪ್ರಮಾಣ

ಮೇ 13ರಂದು 4ನೇ ಹಂತದ ಮತದಾನ

ಮೇ 13ರಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 10 ರಾಜ್ಯಗಳ 96 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Continue Reading

ದೇಶ

Navneet Rana: ಮೋದಿಯವರ ಸಿಂಹಗಳು, ರಾಮಭಕ್ತರು ಗಲ್ಲಿ ಗಲ್ಲಿಯಲ್ಲಿದ್ದಾರೆ ಹುಷಾರ್‌!- ಓವೈಸಿಗೆ ಮತ್ತೆ ನವನೀತ್‌ ರಾಣಾ ಟಾಂಗ್

Navneet Rana:15 ನಿಮಿಷಗಳ ಕಾಲ ಪೊಲೀಸ್‌ ಭದ್ರತೆ ತೆಗೆದರೆ ಓವೈಸಿ ಸಹೋದರರು ಎಲ್ಲಿಂದ ಬಂದರು ಎಲ್ಲಿಗೆ ಹೋದರು ಎಂಬುದೇ ತಿಳಿಯದಂತೆ ಮಾಡುತ್ತೇನೆ ಎಂದಿದ್ದ ನವನೀತ್‌ ರಾಣಾ, ಇದೀಗ ಮತ್ತೆ ಓವೈಸಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓವೈಸಿ ಅವರು ತಮ್ಮ ನಿಯಂತ್ರಣದಲ್ಲಿ ತಾವಿದ್ದರೆ ಉತ್ತಮ. ಇಲ್ಲದಿದ್ದರೆ ಪ್ರಧಾನಿ ಮೋದಿಯವರ ಸಿಂಹಗಳು ಮತ್ತು ರಾಮ ಭಕ್ತರು ಗಲ್ಲಿ ಗಲ್ಲಿಯಲ್ಲಿ ತಿರುಗಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Navneet Rana
Koo

ಹೈದರಾಬಾದ್‌: ಬಿಜೆಪಿ ನಾಯಕಿ ನವನೀತ್‌ ರಾಣಾ(Navneet Rana) ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ(Asaduddin Owaisi) ನಡುವಿನ ವಾಕ್ಸಮರ ಮುಂದುವರೆದಿದೆ. 15 ನಿಮಿಷಗಳ ಕಾಲ ಪೊಲೀಸ್‌ ಭದ್ರತೆ ತೆಗೆದರೆ ಓವೈಸಿ ಸಹೋದರರು ಎಲ್ಲಿಂದ ಬಂದರು ಎಲ್ಲಿಗೆ ಹೋದರು ಎಂಬುದೇ ತಿಳಿಯದಂತೆ ಮಾಡುತ್ತೇನೆ ಎಂದಿದ್ದ ನವನೀತ್‌ ರಾಣಾ, ಇದೀಗ ಮತ್ತೆ ಓವೈಸಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓವೈಸಿ ಅವರು ತಮ್ಮ ನಿಯಂತ್ರಣದಲ್ಲಿ ತಾವಿದ್ದರೆ ಉತ್ತಮ. ಇಲ್ಲದಿದ್ದರೆ ಪ್ರಧಾನಿ ಮೋದಿಯವರ ಸಿಂಹಗಳು ಮತ್ತು ರಾಮ ಭಕ್ತರು ಗಲ್ಲಿ ಗಲ್ಲಿಯಲ್ಲಿ ತಿರುಗಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮನನ್ನು ನಾನು ಮಾತ್ರ ನಿಯಂತ್ರಿಸಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಸಹೋದರ ಅಸಾದುದ್ದೀನ್‌ ಓವೈಸಿ ಹೇಳುತ್ತಿದ್ದಾರೆ. ಇದು ಒಳ್ಳೆಯ ವಿಚಾರ. ಇದು ನಿಮಗೆ ಅರ್ಥ ಆಗಿದ್ದು ಒಳ್ಳೆಯದ್ದಾಯಿತು. ಇಲ್ಲದಿದರೆ ರಾಮ ಭಕ್ತರು ಮತ್ತು ಮೋದಿಯವರ ಸಿಂಹಗಳು ತಿರುಗಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನೆ ಮೂಡಿಸಿದೆ.

‍ಘಟಾನುಘಟಿಗಳ ಸ್ಪರ್ಧೆಯ ಕಾರಣದಿಂದ ಹೈದರಾಬಾದ್‌ ಲೋಕಸಭಾ ಕ್ಷೇತ್ರ ಈ ಬಾರಿ ದೇಶದ ಗಮನ ಸೆಳೆದಿದೆ. ಇಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ಮಾಧವಿ ಲತಾ ಅವರು ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi)  ವಿರುದ್ಧ ಕಣಕ್ಕಿಳಿದಿದ್ದಾರೆ. ಅಸಾದುದ್ದೀನ್‌ ಓವೈಸಿ ಅವರ ಸಹೋದರ ಈ ಅಕ್ಬರುದ್ದೀನ್ ಓವೈಸಿ ಅವರು 2013ರಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ʼʼ15 ನಿಮಿಷ ಪೊಲೀಸರನ್ನು ತೆರವುಗೊಳಿಸಿ ನೋಡಿ. 100 ಕೋಟಿ ಹಿಂದುಗಳಿಗೆ ನಾವು ಏನು ಎಂಬುದನ್ನು ತೋರಿಸುತ್ತೇವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನವನೀತ್‌ ರಾಣಾ ಈ 15 ಸೆಕೆಂಡ್‌ಗಳ ಹೇಳಿಕೆ ನೀಡಿದ್ದಾರೆ. ʼʼಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರಿಬ್ಬರೂ ಅಣ್ಣ-ತಮ್ಮಂದಿರು ತಾನೇ. ಈ ಹಿಂದೆ ಅಕ್ಬುರುದ್ದೀನ್ ಓವೈಸಿ 15 ನಿಮಿಷ ಪೊಲೀಸರನ್ನು ತೆರವುಗೊಳಿಸಿದರೆ, ನಾವೇನೆಂದು ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ನಾವು ಹೇಳುತ್ತೇವೆ. ನಮಗೆ 15 ನಿಮಿಷ ಬೇಡ, 15 ಸೆಕೆಂಡು ಸಾಕು. 15 ಸೆಕೆಂಡು ಕಾಲ ಪೊಲೀಸರನ್ನು ತೆರವುಗೊಳಿಸಿದರೂ ಸಾಕು, ಅಣ್ಣ ತಮ್ಮಂದಿರಿಬ್ಬರು ಎಲ್ಲಿಂದ ಬಂದಿದ್ದಾರೆ, ಎಲ್ಲಿಗೆ ಹೋದರು ಎಂಬುದೂ ತಿಳಿಯಬಾರದು. ಹಾಗೆ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ ನಾನು ಇಲ್ಲೇ ನಿಂತಿದ್ದೇನೆ ಅದೇನು ಮಾಡುತ್ತೀರೋ ಮಾಡಿ ಎಂದು ಟಾಂಗ್‌ ಕೊಟ್ಟಿದ್ದರು. ಮಹಾರಾಷ್ಟ್ರದಿಂದ ಬಂದ ಎಂಪಿ ಸಾಹೇಬರು ಇಲ್ಲಿ ನಮ್ಮ ವಿರುದ್ಧ ಏನೇನೋ ಮಾತನಾಡುತ್ತಿದ್ದಾರೆ. ನನ್ನ ತಮ್ಮ ಅಕ್ಬರುದ್ದೀನ್‌ ಓವೈಸಿ ಪರಿಸ್ಥಿತಿಯನ್ನು ಅವನದ್ದೇ ರೀತಿಯಲ್ಲಿ ತಿಳಿಗೊಳಿಸಲು ಮುಂದಾಗಿದ್ದ. ಆದರೆ ನಾನೇ ಅವನನ್ನು ತಡೆದು ನಿಲ್ಲಿಸಿದೆ ಎಂದು ಹೇಳಿದ್ದರು.

Continue Reading

ದೇಶ

Arvind Kejriwal: ಜೈಲಿನಿಂದ ಬಂದ ಕೇಜ್ರಿವಾಲ್‌ಗೆ ಆರತಿ ಬೆಳಗಿ, ಹೂ ಹಾರ ಹಾಕಿ ಸ್ವಾಗತಿಸಿದ ತಾಯಿ! ವಿಡಿಯೊ ನೋಡಿ

Arvind Kejriwal: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್‌ ಅವರು ಜೈಲಿನಿಂದ ಹೊರಬರುತ್ತಲೇ ಆಪ್‌ ಕಾರ್ಯಕರ್ತರು ಜೈಕಾರ ಕೂಗಿ ಅವರನ್ನು ಸ್ವಾಗತಿಸಿದರು. ಜತೆಗೆ ತಾಯಿ ಅವರನ್ನು ಹೂ ಮಾಲೆ ಹಾಕಿ ಮನೆಯೊಳಗೆ ಬರಮಾಡಿಕೊಂಡರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ದೆಹಲಿ ಅಬಕಾರಿ ನೀತಿ (Delhi Excise policy) ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ (ED) ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ (Aam Admi Party) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್ (Supreme court) ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಏಳು ಹಂತದ ಲೋಕಸಭೆ ಚುನಾವಣೆಯ (Lok Sabha Election 2024) ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್‌ ಸಿಕ್ಕಿದೆ. ಹೀಗಾಗಿ ಕೇಜ್ರಿವಾಲ್‌ ಅವರು ಜೈಲಿನಿಂದ ಹೊರಬರುತ್ತಲೇ ಆಪ್‌ ಕಾರ್ಯಕರ್ತರು ಜೈಕಾರ ಕೂಗಿ ಅವರನ್ನು ಸ್ವಾಗತಿಸಿದರು. ಜತೆಗೆ ತಾಯಿ ಅವರನ್ನು ಹೂ ಮಾಲೆ ಹಾಕಿ ಮನೆಯೊಳಗೆ ಬರಮಾಡಿಕೊಂಡರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ತಿಹಾರ್‌ ಜೈಲಿನಿಂದ ಕೇಜ್ರಿವಾಲ್‌ ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಹೊರ ಬಂದರು. ನೆರೆದಿದ್ದ ಸಾವಿರಾರು ಕಾರ್ಯಕರ್ತರು ಜಯಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಕೇಜ್ರಿವಾಲ್‌ ಮನೆಗೆ ಆಗಮಿಸುತ್ತಿದ್ದಂತೆ ಆಪ್‌ ಸಂಸದ ಸಂಜಯ್‌ ಸಿಂಗ್‌ ಎದುರುಗೊಂಡರು. ಜತೆಗೆ ಅರವಿಂದ್ ಕೇಜ್ರಿವಾಲ್ ಅವರ ತಾಯಿ ಮತ್ತು ಪತ್ನಿ ಆರತಿ ಬೆಳಗಿ, ಹಾರ ಹಾಕಿ ಮನೆಗೆ ಸ್ವಾಗತಿಸಿದರು.

ಬಾಗಿಲ್ಲೇ ಕಾದು ನಿಂತಿದ್ದ ತಾಯಿ

ಮಗನ ಬರುವಿಕೆಗಾಗಿ ಕೇಜ್ರಿವಾಲ್‌ ಅವರ ತಾಯಿ ಮನೆ ಬಾಗಿಲ ಬಳಿಯಲ್ಲೇ ಹೂ ಹಾರ ಹಿಡಿದು ಕಾದು ನಿಂತಿದ್ದರು. ಸಂಬಂಧಿಕರು ಆರತಿ ಎತ್ತಿದರು. ಒಳ ಬರುತ್ತಲೇ ಕೇಜ್ರಿವಾಲ್‌ ತಮ್ಮ ತಾಯಿ, ತಂದೆಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಕೇಜ್ರಿವಾಲ್ ಅವರ ತಂದೆ ಮಗನನ್ನು ತಬ್ಬಿಕೊಂಡರು. ಮಗನ ಬೆನ್ನನ್ನು ಆತ್ಮೀಯವಾಗಿ ತಟ್ಟಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಕೇಜ್ರಿವಾಲ್‌

ಅರವಿಂದ್‌ ಕೇಜ್ರಿವಾಲ್‌ ಇಂದು (ಶನಿವಾರ) ದೆಹಲಿಯ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಲೋಕಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದರು. ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಅವರೊಂದಿಗಿದ್ದರು.

ಷರತ್ತು ಅನ್ವಯ

ಜಾಮೀನು ನೀಡುವ ಮೊದಲು ನ್ಯಾಯಾಲಯ ಯಾವುದೇ ಕಡತಗಳಿಗೆ ಸಹಿ ಹಾಕಬಾರದು ಎಂಬುದು ಸೇರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಕೇಜ್ರಿವಾಲ್‌, “ನಾನು ನಿಮಗೆಲ್ಲ ಧನ್ಯವಾದ ಹೇಳಲು ಬಯಸುತ್ತೇನೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿದ್ದೀರಿ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿಯೇ ನಾನು ಈಗ ಜೈಲಿನಿಂದ ಬಿಡುಗಡೆಯಾಗಿದ್ದೇನೆ. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಹೋರಾಡೋಣ” ಎಂದು ಹೇಳಿದರು.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. 

ಇದನ್ನೂ ಓದಿ: Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

Continue Reading
Advertisement
Nijjar Killing Case
ವಿದೇಶ6 mins ago

Nijjar Killing Case: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ; ನಾಲ್ಕನೇ ಆರೋಪಿ ಅರೆಸ್ಟ್‌

HD Revanna
ಪ್ರಮುಖ ಸುದ್ದಿ7 mins ago

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

Maggi Tragedy
ದೇಶ42 mins ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Viral News
ವೈರಲ್ ನ್ಯೂಸ್49 mins ago

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Morning Tips
ಲೈಫ್‌ಸ್ಟೈಲ್2 hours ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ3 hours ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Solar
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Protein Supplements
ಆರೋಗ್ಯ4 hours ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ4 hours ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ4 hours ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು18 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌