ಜಗನ್ನಾಥ ರಾವ್ ಜೋಶಿ ಧೀಮಂತ ಹಿರಿಯ ರಾಜಕಾರಣಿ: ದು.ಗು.ಲಕ್ಷ್ಮಣ - Vistara News

ಬೆಂಗಳೂರು

ಜಗನ್ನಾಥ ರಾವ್ ಜೋಶಿ ಧೀಮಂತ ಹಿರಿಯ ರಾಜಕಾರಣಿ: ದು.ಗು.ಲಕ್ಷ್ಮಣ

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ʼಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಶಿʼ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

VISTARANEWS.COM


on

Karnataka Kesari Sri Jagannatha Rao Joshi book released
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜಗನ್ನಾಥ ರಾವ್ ಜೋಶಿ ಅವರು ಒಬ್ಬ ಧೀಮಂತ ಹಿರಿಯ ರಾಜಕಾರಣಿ. ರಾಜ್ಯದಲ್ಲಿ ಭಾರತೀಯ ಜನಸಂಘ ಹಾಗೂ ಬಿಜೆಪಿ ಬೆಳವಣಿಗೆಯಲ್ಲಿ ಜಗನ್ನಾಥ ರಾವ್ ಜೋಶಿ ಮತ್ತು ಭಾವುರಾವ್ ದೇಶಪಾಂಡೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪ್ರಾತಃಸ್ಮರಣೀಯರು ಎಂದು ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶುಕ್ರವಾರ ಆಯೋಜಿಸಿದ್ದ ʼಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಶಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅದ್ಭುತ ವಿಚಾರ, ಸರಳತೆಯೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ಜಗನ್ನಾಥ ರಾವ್ ಜೋಶಿ ಅವರ ಸಮಗಾತ್ರದ ಪುಸ್ತಕ ಹೊರಬರದೆ ಇರುವುದು ಬೇಸರದ ವಿಚಾರ. ವೈಚಾರಿಕತೆ, ಪ್ರಬುದ್ಧತೆ, ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಅವರು ಎರಡು ಬಾರಿ ಲೋಕಸಭಾ ಸದಸ್ಯ ಮತ್ತು ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. ಜೋಶಿ ಅವರು ಸ್ವಾರಸ್ಯಕರ ಚರ್ಚೆಗೆ ಪ್ರಸಿದ್ಧಿ ಪಡೆದಿದ್ದರು. ಅವರ ಬದುಕು ಸರಳತೆಗೆ ಮಾದರಿ ಆಗಿತ್ತು ಎಂದು ತಿಳಿಸಿದರು.

ಸಂಘದ ಪ್ರಚಾರಕರಾಗಿದ್ದಾಗ ಗಣವೇಷದಲ್ಲಿ ಸ್ಫೂರ್ತಿಯಿಂದ ಅವರು ಮಾತನಾಡುತ್ತಿದ್ದರು. ಸಂಘದ ಶಿಕ್ಷಾ ವರ್ಗದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅವರೆಂದೂ ತಾವೊಬ್ಬ ಲೀಡರ್ ಅಂತ ಅಂದುಕೊಂಡಿರಲಿಲ್ಲ. ಪ್ರಾಕ್ಟಿಕಲ್ ಮ್ಯಾನ್ ಆಗಿದ್ದು, ಪ್ರಯತ್ನಶೀಲ ಪ್ರವೃತ್ತಿ, ಸಮರ್ಪಣಾ ಮನೋಭಾವಕ್ಕೆ ಹೆಸರು ಪಡೆದಿದ್ದರು ಎಂದು ದು.ಗು. ಲಕ್ಷ್ಮಣ ಹೇಳಿದರು.

ಇದನ್ನೂ ಓದಿ | Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ 2ನೇ ಹುಚ್ಚ ವೆಂಕಟ್‌ ಎಂದ ಸಂಸದ ಮುನಿಸ್ವಾಮಿ

ಜೋಶಿ ಅವರ ಭಾಷಣ ರಸದೌತಣ, ರಸಗವಳದಂತಿತ್ತು. ಅದ್ಭುತ ಭಾಷಣಶೈಲಿ, ವಾಕ್ ಪಟುತ್ವ ಇದ್ದ ಅವರು, ಮರಾಠಿ, ಹಿಂದಿ, ಕನ್ನಡ ಸೇರಿ ಬಹುಭಾಷಾ ಪಾಂಡಿತ್ಯ ಹೊಂದಿದ್ದರು. ಎಲ್ಲ ಪಕ್ಷದವರ ಜತೆ ಉತ್ತಮ ಮಾನವೀಯ ಸಂಬಂಧ ಇದ್ದರೂ ಸೈದ್ಧಾಂತಿಕ ಬದ್ಧತೆಯಲ್ಲಿ ರಾಜಿ ಇರಲಿಲ್ಲ. ಅವರು ದೀನ್ ದಯಾಳ್ ಜೀ ಅವರನ್ನು ಪಿತೃ ಸಮಾನರಾಗಿ ಕಾಣುತ್ತಿದ್ದವರು ಎಂದು ಸ್ಮರಿಸಿದರು.

ಜಗನ್ನಾಥ ರಾವ್ ಜೋಶಿ ಅವರು ಪಕ್ಷ ಸದೃಢಗೊಳಿಸಲು ರಾಜ್ಯಪಾಲರ ಹುದ್ದೆ ತಿರಸ್ಕರಿಸಿದ ಮತ್ಸದ್ಧಿ. ಅನೇಕರನ್ನು ಬೆಳೆಸಿದ ರಾಜಕೀಯ ಅವಧೂತ- ಸಂತ. ಅವರೆಂದೂ ರಾಜಕೀಯ ಬಚ್ಚಲು ಮನೆಯಲ್ಲಿ ಜಾರಲೇ ಇಲ್ಲ, ವ್ಯಕ್ತಿತ್ವ, ಚಾರಿತ್ರ್ಯದಲ್ಲಿ ಜಾರಲೇ ಇಲ್ಲ ಎಂದು ಮೆಚ್ಚುಗೆ ಸೂಚಿಸಿದರು.

ಪಕ್ಷ, ದೇಶ, ಮಾತೃಭೂಮಿಗಾಗಿ ನಿರಂತರ ದುಡಿದದ್ದು ಮಾತ್ರವಲ್ಲದೆ, ಗೋವಾ ವಿಮೋಚನೆಗೆ ಹೋರಾಡಿದ ಮೇರು ಸ್ವಾತಂತ್ರ್ಯ ಹೋರಾಟಗಾರರಾದ ಅವರ ಜೀವನದಿಂದ ಕಾರ್ಯಕರ್ತರು ಪ್ರೇರಣೆ ಪಡೆಯಲಿ ಎಂದು ಆಶಿಸಿದರು.

ಬಿಜೆಪಿ ರಾಜ್ಯ ವಕ್ತಾರ ಹಾಗೂ ಮಾಜಿ ಶಾಸಕ ಪಿ.ರಾಜೀವ್ ಅವರು ಮಾತನಾಡಿ, ಕಾಲಗರ್ಭದ ರತ್ನ- ಅಪರೂಪದ ವ್ಯಕ್ತಿತ್ವ ಜೋಶಿ ಅವರದು. ಈ ಪುಸ್ತಕವು 78 ಪುಟದ್ದಾಗಿದೆ. ಜೋಶಿಯವರ ಜೀವನ ಸಾಧನೆ, ಅಪರೂಪದ ಭಾವಚಿತ್ರಗಳು, ಬದುಕಿನ ಸ್ವಾರಸ್ಯಕರ ಪ್ರಸಂಗಗಳು ಇದರಲ್ಲಿವೆ. ಸತತ ಓದಿಸಿಕೊಂಡು ಹೋಗುವ ಪುಸ್ತಕ ಇದೆಂದು ಮಾಹಿತಿ ನೀಡಿದರು.

ಇದನ್ನೂ ಓದಿ | Legislative Assembly: ಕಾಂಗ್ರೆಸ್‌ ಸರ್ಕಾರ ಬಂದ ನಂತರ ಅಣಬೆಗಳು ಹುಟ್ಟಿಕೊಳ್ಳುತ್ತಿವೆ: ಸಾಹಿತಿಗಳ ಕುರಿತು ತೇಜಸ್ವಿ ಸೂರ್ಯ ಟೀಕೆ

ಬಿಜೆಪಿ ಪ್ರಬುದ್ಧರ ಪ್ರಕೋಷ್ಠ, ಮಾಧ್ಯಮ ಪ್ರಕೋಷ್ಠ, ಪ್ರಕಾಶನ ಪ್ರಕೋಷ್ಠ, ಸಾಮಾಜಿಕ ಜಾಲತಾಣ ಪ್ರಕೋಷ್ಠದಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಮತ್ತು ಲೇಖಕ ತಿಮ್ಮಣ್ಣ ಭಟ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು ಪ್ರಕಾಶಕ ಸಂಸ್ಥೆ ಅಯೋಧ್ಯಾ ಪ್ರಕಾಶನದ ನಿರ್ದೇಶಕ ರೋಹಿತ್ ಚಕ್ರತೀರ್ಥ ಅವರು ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bomb Threat: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಸಂದೇಶ; ಆತಂಕ ಸೃಷ್ಟಿ

Bomb Threat: ಬೆಂಗಳೂರು ಏರ್‌ಪೋರ್ಟ್‌ನ ಅಲ್ಪಾ 2ರ ಆಡಳಿತ ಕಚೇರಿಯ ಬಾತ್ ರೂಮ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಬರೆದಿದ್ದ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

VISTARANEWS.COM


on

Bomb Threat
Koo

ದೇವನಹಳ್ಳಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ (Bomb Threat) ಸಂದೇಶ ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅನಾಮಿಕ ವ್ಯಕ್ತಿಯೊಬ್ಬ ಏರ್‌ಪೋರ್ಟ್‌ನ ಬಾತ್ ರೂಮ್‌ನ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಏರ್‌ಪೋರ್ಟ್‌ನ ಅಲ್ಪಾ 2ರ ಆಡಳಿತ ಕಚೇರಿಯ ಬಾತ್ ರೂಮ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಬರೆದಿದ್ದ. ತಕ್ಷಣ ಶ್ವಾನದಳ, ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಸಂದೇಶ ಅಂತ ಗೊತ್ತಾಗಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚೆಗೆ ಪದೇಪದೆ ಕೆಲ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ | Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ, ನಾಳೆ ಮಧ್ಯರಾತ್ರಿಯೇ ಪ್ರಜ್ವಲ್‌ ರೇವಣ್ಣ ವಶಕ್ಕೆ

Prajwal Revanna Case

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP ‌Prajwal Revanna Case) ಭಾರತಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿರುವ ಎಸ್‌ಐಟಿ (SIT) ತಂಡ, ಏರ್‌ಪೋರ್ಟ್‌ನಲ್ಲಿಯೇ (Kempegowda International Airport – KIA) ಸದ್ಯ ಠಿಕಾಣಿ ಹಾಕಿದೆ.

ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ ಅದಕ್ಕೂ ಮುನ್ನವೇ, ಅಂದರೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಆರೆಸ್ಟ್‌ ಮಾಡಲು ಎಸ್‌ಐಟಿ ಸಜ್ಜಾಗಿದೆ.

ನಾಳೆ ರಾತ್ರಿ 12.35ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಜರ್ಮನಿಯಿಂದ ಬರಲಿರುವ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್‌ ಲ್ಯಾಂಡ್ ಆಗಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನದಿಂದ ಇಳಿದ ಬಳಿಕ ಪ್ರಜ್ವಲ್‌ ಇಮಿಗ್ರೇಷನ್‌‌‌‌‌ ಡೆಸ್ಕ್‌‌ಗೆ ಬರಬೇಕು. ಪಾಸ್‌ಪೋರ್ಟ್‌ಗೆ ಸ್ಟಾಂಪ್‌‌‌ ಹಾಕಿಸಬೇಕು. ಈಗ ಲುಕೌಟ್‌ ನೋಟೀಸ್‌ ಇರುವುದರಿಂದ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಏರ್‌‌ಪೋರ್ಟ್‌ ಅಧಿಕಾರಿಗಳಿಂದ SITಗೆ ಪ್ರಜ್ವಲ್ ಹಸ್ತಾಂತರ ನಡೆಯಲಿದೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್‌ ಟಿಕೆಟ್ ಕಾಯ್ದಿರಿಸಿರುವುದರಿಂದ ಅಲರ್ಟ್ ಆಗಿರುವ ಎಸ್ಐಟಿ ತಂಡ, ಏರ್‌ಪೋರ್ಟ್‌ನಲ್ಲಿಯೇ ಠಿಕಾಣಿ ಹೂಡಿದೆ. ಎರಡು ಮೂರು ಬಾರಿ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿ‌ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಾಗಾಗಿ ಎಸ್ಐಟಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಏರ್ಪೋರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 31ರಂದು ಬರುದಾಗಿ ಹೇಳಿ ಒಂದು ದಿನ ಮುಂಚಿತವಾಗಿಯೇ ಬಂದ್ರೆ ಕಷ್ಟ ಎಂದು ಏರ್ಪೋರ್ಟ್‌ನಲ್ಲಿ ಎರಡೆರಡು ತಂಡಗಳು ಕಾಯುತ್ತಿವೆ.

ಬಂದ ಬಳಿಕ ಏನೇನು?

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಬಳಿಕ ಮೆಡಿಕಲ್ ಟೆಸ್ಟ್‌ ಮತ್ತಿತರ ಅಗತ್ಯ ವಿಧಿವಿಧಾನಗಳು ನಡೆಯಲಿವೆ. ನಂತರ ತನಿಖೆ ನಡೆಸಲು ಎಸ್ಐಟಿ ತಯಾರಿ ಮಾಡಿಕೊಳ್ಳುತ್ತಿದೆ. ಎರಡು ಕೋನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ತರಹದ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದ್ದು, ತಪ್ಪು ಒಪ್ಪಿಕೊಳ್ಳಬಹುದು ಅಥವಾ ತಾನು ಮಾಡಿಯೇ ಇಲ್ಲ ಅನ್ನಬಹುದು. ಈ ಎರಡೂ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ಮಾಡಬೇಕಿದೆ.

ಪ್ರಜ್ವಲ್ ರೇವಣ್ಣ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ಕೆಲಸ ಸರಾಗವಾಗಲಿದೆ. ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗುತ್ತದೆ. ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ನೀಡಿರುವ ಹೇಳಿಕೆ ಆಧಾರದಲ್ಲಿ ಕರೆದೊಯ್ದು ಸ್ಥಳ ಮಹಜರು ಮಾಡುತ್ತಾರೆ. ಎಂಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

ಪ್ರಜ್ವಲ್‌ ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದರೆ ಸಂತ್ರಸ್ತೆ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಆಕೆಯ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ನಡೆಯುತ್ತದೆ. ಈಗಾಗಲೇ ಸಂತ್ರಸ್ತೆ ಹೇಳಿಕೆ ದಾಖಲಿಸಿರುವ ಎಸ್ಐಟಿ, ಜೊತೆಗೆ ಸ್ಥಳ ಮಹಜರು ನಡೆಸಿ ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ಇದರ ಜೊತೆಗೆ ಆರೋಪಿ ಹೇಳಿಕೆಯನ್ನೂ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.

Continue Reading

ಕರ್ನಾಟಕ

Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Prajwal Revanna Case: ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ. ಅವರು ಬೆಂಗಳೂರಿಗೆ ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಮೇ 31ರಂದು ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು, ಇದೀಗ ಬೆಂಗಳೂರಿಗೆ ಟಿಕೆಟ್‌ ಮಾಡಿರುವುದು ಕಂಡುಬಂದಿದೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ.

ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಗುರುವಾರ ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ ಎಂದು ಈಗಾಗಲೇ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮೇ 27ರಂದು ವಿಡಿಯೊದಲ್ಲಿ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ, ನಾನು ಶುಕ್ರವಾರ (ಮೇ 31) ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂಬುದಾಗಿ ಹೇಳಿದ್ದರು.

ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ

ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP ‌Prajwal Revanna Case) ಭಾರತಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿರುವ ಎಸ್‌ಐಟಿ (SIT) ತಂಡ, ಏರ್‌ಪೋರ್ಟ್‌ನಲ್ಲಿಯೇ (Kempegowda International Airport – KIA) ಸದ್ಯ ಠಿಕಾಣಿ ಹಾಕಿದೆ.

ಇದನ್ನೂ ಓದಿ | Prajwal Revanna Case: ಎರಡು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್.ಡಿ.ರೇವಣ್ಣ ಅರ್ಜಿ

ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ ಅದಕ್ಕೂ ಮುನ್ನವೇ, ಅಂದರೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಆರೆಸ್ಟ್‌ ಮಾಡಲು ಎಸ್‌ಐಟಿ ಸಜ್ಜಾಗಿದೆ.

ನಾಳೆ ರಾತ್ರಿ 12.35ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಜರ್ಮನಿಯಿಂದ ಬರಲಿರುವ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್‌ ಲ್ಯಾಂಡ್ ಆಗಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನದಿಂದ ಇಳಿದ ಬಳಿಕ ಪ್ರಜ್ವಲ್‌ ಇಮಿಗ್ರೇಷನ್‌‌‌‌‌ ಡೆಸ್ಕ್‌‌ಗೆ ಬರಬೇಕು. ಪಾಸ್‌ಪೋರ್ಟ್‌ಗೆ ಸ್ಟಾಂಪ್‌‌‌ ಹಾಕಿಸಬೇಕು. ಈಗ ಲುಕೌಟ್‌ ನೋಟೀಸ್‌ ಇರುವುದರಿಂದ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಏರ್‌‌ಪೋರ್ಟ್‌ ಅಧಿಕಾರಿಗಳಿಂದ SITಗೆ ಪ್ರಜ್ವಲ್ ಹಸ್ತಾಂತರ ನಡೆಯಲಿದೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್‌ ಟಿಕೆಟ್ ಕಾಯ್ದಿರಿಸಿರುವುದರಿಂದ ಅಲರ್ಟ್ ಆಗಿರುವ ಎಸ್ಐಟಿ ತಂಡ, ಏರ್‌ಪೋರ್ಟ್‌ನಲ್ಲಿಯೇ ಠಿಕಾಣಿ ಹೂಡಿದೆ. ಎರಡು ಮೂರು ಬಾರಿ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿ‌ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಾಗಾಗಿ ಎಸ್ಐಟಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಏರ್ಪೋರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 31ರಂದು ಬರುದಾಗಿ ಹೇಳಿ ಒಂದು ದಿನ ಮುಂಚಿತವಾಗಿಯೇ ಬಂದ್ರೆ ಕಷ್ಟ ಎಂದು ಏರ್ಪೋರ್ಟ್‌ನಲ್ಲಿ ಎರಡೆರಡು ತಂಡಗಳು ಕಾಯುತ್ತಿವೆ.

ಪ್ರಜ್ವಲ್‌ ಬಂದ ಬಳಿಕ ನಡೆಯುವ ಪ್ರಕ್ರಿಯೆ ಏನು?

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಬಳಿಕ ಮೆಡಿಕಲ್ ಟೆಸ್ಟ್‌ ಮತ್ತಿತರ ಅಗತ್ಯ ವಿಧಿವಿಧಾನಗಳು ನಡೆಯಲಿವೆ. ನಂತರ ತನಿಖೆ ನಡೆಸಲು ಎಸ್ಐಟಿ ತಯಾರಿ ಮಾಡಿಕೊಳ್ಳುತ್ತಿದೆ. ಎರಡು ಕೋನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ತರಹದ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದ್ದು, ತಪ್ಪು ಒಪ್ಪಿಕೊಳ್ಳಬಹುದು ಅಥವಾ ತಾನು ಮಾಡಿಯೇ ಇಲ್ಲ ಅನ್ನಬಹುದು. ಈ ಎರಡೂ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ಮಾಡಬೇಕಿದೆ.

ಪ್ರಜ್ವಲ್ ರೇವಣ್ಣ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ಕೆಲಸ ಸರಾಗವಾಗಲಿದೆ. ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗುತ್ತದೆ. ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ನೀಡಿರುವ ಹೇಳಿಕೆ ಆಧಾರದಲ್ಲಿ ಕರೆದೊಯ್ದು ಸ್ಥಳ ಮಹಜರು ಮಾಡುತ್ತಾರೆ. ಎಂಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ | Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

ಪ್ರಜ್ವಲ್‌ ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದರೆ ಸಂತ್ರಸ್ತೆ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಆಕೆಯ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ನಡೆಯುತ್ತದೆ. ಈಗಾಗಲೇ ಸಂತ್ರಸ್ತೆ ಹೇಳಿಕೆ ದಾಖಲಿಸಿರುವ ಎಸ್ಐಟಿ, ಜೊತೆಗೆ ಸ್ಥಳ ಮಹಜರು ನಡೆಸಿ ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ಇದರ ಜೊತೆಗೆ ಆರೋಪಿ ಹೇಳಿಕೆಯನ್ನೂ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.

VISTARANEWS.COM


on

ರಾಹುಲ್‌ ಗಾಂಧಿ rahul gandhi ippb account 2
Koo

ವಿಶೇಷ ವರದಿ: ಅಭಿಷೇಕ್ ಬಿ.ವಿ, ವಿಸ್ತಾರ ನ್ಯೂಸ್

ಬೆಂಗಳೂರು: ಇಂಡಿಯಾ ಮೈತ್ರಿಕೂಟ (INDIA bloc) ಅಧಿಕಾರಕ್ಕೆ ಬಂದ ನಂತರದ ದಿನವೇ ಮಹಿಳೆಯರ (women) ಖಾತೆಗೆ ʼಟಕಾ ಟಕ್ ಹಣʼ ಜಮಾವಣೆ ಮಾಡಲಾಗುವುದು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಣೆ ಪರಿಣಾಮ, ಪೋಸ್ಟ್‌ ಆಫೀಸ್‌ಗಳಲ್ಲಿ (Post Office) ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಇವರಲ್ಲಿ ಹೆಚ್ಚಾಗಿ ಮುಸ್ಲಿಂ ಮಹಿಳೆಯರೇ ಕಂಡು ಬರುತ್ತಿದ್ದಾರೆ.

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ಇಂಡಿಯಾ ಒಕ್ಕೂಟ, ಅಧಿಕಾರ ಬಂದ ಕೂಡಲೇ ಸರ್ಕಾರ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.

ಮಹಿಳೆಯರ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿ ಟೋಕ‌ನ್ ವಿತರಿಸಲು ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಟೋಕನ್ ವಿತರಣೆ ಆರಂಭವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಮಹಿಳೆಯರು ಟೋಕನ್ ಪಡೆಯುತ್ತಿದ್ದಾರೆ.

ಖಾತೆ ತೆರೆಯುತ್ತಿರುವ ಮಹಿಳೆಯರಿಗೂ ಹಣ ಬರುವ ಬಗ್ಗೆ ಖಚಿತ ಮಾಹಿತಿ ಇಲ್ಲ! “ಅಕೌಂಟ್‌ಗೆ ಹಣ ಬರುತ್ತೆ ಅಂತ ಅಕ್ಕಪಕ್ಕದವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹಣ ನೀಡುತ್ತಾರಂತೆ. ಮೋದಿ ಬಂದ್ರೆ 2 ಸಾವಿರ ನೀಡುತ್ತಾರಂತೆ. ಯಾರು ಬಂದ್ರೇನು ನಮಗೆ ಹಣ ಬರುತ್ತೆ ಅಂತ ಹೇಳಿದ್ರು. ಅದಕ್ಕೆ ಬಂದಿದ್ದೇವೆ. ಬೆಳಗ್ಗೆ 5 ಗಂಟೆಗೆ ಬಂದಿದ್ದೇವೆ. ಯಾವ ಅಧಿಕಾರಿಗಳೂ ಹೇಳಿಲ್ಲ, ನೆರೆಮನೆಯವರು, ಸ್ಥಳೀಯರು ಹೇಳಿದರು” ಎಂಬುದು ಖಾತೆಗಾಗಿ ಕ್ಯೂ ನಿಂತ ಮಹಿಳೆಯರ ಹೇಳಿಕೆ.

ಹೆಡ್‌ ಪೋಸ್ಟ್‌ ಮಾಸ್ಟರ್‌ ಹೇಳೋದೇನು?

“ನಮ್ಮಲ್ಲಿ ಮೊದಲಿನಿಂದಲೂ IPPB ಖಾತೆ ಮಾಡುತ್ತಿದ್ದೇವೆ. ಆದರೆ ಕೆಲ ದಿನಗಳಿಂದ ಜನರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಕೌಂಟ್‌ಗೆ ಹಣ ಹಾಕ್ತಾರೆ ಅಂತ ಜನ ಬರುತ್ತಿದ್ದಾರೆ. ಹಣ ಬರುವ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ. ಆದರೆ ವದಂತಿ ಹರಡಿ ಜನರು ಜಾಸ್ತಿ ಜಾಸ್ತಿ ಬರ್ತಿದ್ದಾರೆ” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಹೇಳಿದ್ದಾರೆ.

“ಈ ಖಾತೆಯಿಂದ ಬೇರೆ ಬೇರೆ ಪ್ರಾಧಿಕಾರಗಳಿಗೆ ಹಣ ಕಟ್ಟಬಹುದು. 200 ರೂ. ಮಾತ್ರ ಜಮಾ ಮಾಡಿಸಿ ಖಾತೆ ತೆರೆಯುತ್ತಿದ್ದೇವೆ. ಜನರು ಹೆಚ್ಚಾಗಿದ್ದರಿಂದ ಈಗ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದೇವೆ. ನಿತ್ಯ 1 ಸಾವಿರ ಅಕೌಂಟ್ ಮಾಡಿ ಕೊಡ್ತಿದ್ದೇವೆ. ಜನರಿಗೆ ಮಾಹಿತಿ ಕೊರತೆ ಇರೋದರಿಂದ ಮುಗಿಬೀಳ್ತಿದ್ದಾರೆ. ಇದಕ್ಕೆ ಯಾವುದೇ ಕೊನೆ ದಿನಾಂಕ ಇಲ್ಲ. ಯಾವ ಅಂಚೆ ಕಚೇರಿಯಲ್ಲಾದರೂ ಅಕೌಂಟ್ ಮಾಡಿಸಬಹುದು” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

Continue Reading

ಪ್ರಮುಖ ಸುದ್ದಿ

Prajwal Revanna Case: ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ, ನಾಳೆ ಮಧ್ಯರಾತ್ರಿಯೇ ಪ್ರಜ್ವಲ್‌ ರೇವಣ್ಣ ವಶಕ್ಕೆ

Prajwal Revanna Case: ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ.

VISTARANEWS.COM


on

Prajwal Revanna case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP ‌Prajwal Revanna Case) ಭಾರತಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿರುವ ಎಸ್‌ಐಟಿ (SIT) ತಂಡ, ಏರ್‌ಪೋರ್ಟ್‌ನಲ್ಲಿಯೇ (Kempegowda International Airport – KIA) ಸದ್ಯ ಠಿಕಾಣಿ ಹಾಕಿದೆ.

ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ ಅದಕ್ಕೂ ಮುನ್ನವೇ, ಅಂದರೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಆರೆಸ್ಟ್‌ ಮಾಡಲು ಎಸ್‌ಐಟಿ ಸಜ್ಜಾಗಿದೆ.

ನಾಳೆ ರಾತ್ರಿ 12.35ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಜರ್ಮನಿಯಿಂದ ಬರಲಿರುವ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್‌ ಲ್ಯಾಂಡ್ ಆಗಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನದಿಂದ ಇಳಿದ ಬಳಿಕ ಪ್ರಜ್ವಲ್‌ ಇಮಿಗ್ರೇಷನ್‌‌‌‌‌ ಡೆಸ್ಕ್‌‌ಗೆ ಬರಬೇಕು. ಪಾಸ್‌ಪೋರ್ಟ್‌ಗೆ ಸ್ಟಾಂಪ್‌‌‌ ಹಾಕಿಸಬೇಕು. ಈಗ ಲುಕೌಟ್‌ ನೋಟೀಸ್‌ ಇರುವುದರಿಂದ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಏರ್‌‌ಪೋರ್ಟ್‌ ಅಧಿಕಾರಿಗಳಿಂದ SITಗೆ ಪ್ರಜ್ವಲ್ ಹಸ್ತಾಂತರ ನಡೆಯಲಿದೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್‌ ಟಿಕೆಟ್ ಕಾಯ್ದಿರಿಸಿರುವುದರಿಂದ ಅಲರ್ಟ್ ಆಗಿರುವ ಎಸ್ಐಟಿ ತಂಡ, ಏರ್‌ಪೋರ್ಟ್‌ನಲ್ಲಿಯೇ ಠಿಕಾಣಿ ಹೂಡಿದೆ. ಎರಡು ಮೂರು ಬಾರಿ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿ‌ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಾಗಾಗಿ ಎಸ್ಐಟಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಏರ್ಪೋರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 31ರಂದು ಬರುದಾಗಿ ಹೇಳಿ ಒಂದು ದಿನ ಮುಂಚಿತವಾಗಿಯೇ ಬಂದ್ರೆ ಕಷ್ಟ ಎಂದು ಏರ್ಪೋರ್ಟ್‌ನಲ್ಲಿ ಎರಡೆರಡು ತಂಡಗಳು ಕಾಯುತ್ತಿವೆ.

ಬಂದ ಬಳಿಕ ಏನೇನು?

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಬಳಿಕ ಮೆಡಿಕಲ್ ಟೆಸ್ಟ್‌ ಮತ್ತಿತರ ಅಗತ್ಯ ವಿಧಿವಿಧಾನಗಳು ನಡೆಯಲಿವೆ. ನಂತರ ತನಿಖೆ ನಡೆಸಲು ಎಸ್ಐಟಿ ತಯಾರಿ ಮಾಡಿಕೊಳ್ಳುತ್ತಿದೆ. ಎರಡು ಕೋನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ತರಹದ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದ್ದು, ತಪ್ಪು ಒಪ್ಪಿಕೊಳ್ಳಬಹುದು ಅಥವಾ ತಾನು ಮಾಡಿಯೇ ಇಲ್ಲ ಅನ್ನಬಹುದು. ಈ ಎರಡೂ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ಮಾಡಬೇಕಿದೆ.

ಪ್ರಜ್ವಲ್ ರೇವಣ್ಣ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ಕೆಲಸ ಸರಾಗವಾಗಲಿದೆ. ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗುತ್ತದೆ. ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ನೀಡಿರುವ ಹೇಳಿಕೆ ಆಧಾರದಲ್ಲಿ ಕರೆದೊಯ್ದು ಸ್ಥಳ ಮಹಜರು ಮಾಡುತ್ತಾರೆ. ಎಂಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಿದ್ದಾರೆ.

ಪ್ರಜ್ವಲ್‌ ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದರೆ ಸಂತ್ರಸ್ತೆ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಆಕೆಯ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ನಡೆಯುತ್ತದೆ. ಈಗಾಗಲೇ ಸಂತ್ರಸ್ತೆ ಹೇಳಿಕೆ ದಾಖಲಿಸಿರುವ ಎಸ್ಐಟಿ, ಜೊತೆಗೆ ಸ್ಥಳ ಮಹಜರು ನಡೆಸಿ ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ಇದರ ಜೊತೆಗೆ ಆರೋಪಿ ಹೇಳಿಕೆಯನ್ನೂ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

Continue Reading
Advertisement
Ambareesh Birthday during Sumalatha Ambareesh Talks About Abhishek Ambareesh And Aviva
ಸ್ಯಾಂಡಲ್ ವುಡ್35 seconds ago

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

All Eyes on Rafah
ರಾಜಕೀಯ5 mins ago

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

Bomb Threat
ಪ್ರಮುಖ ಸುದ್ದಿ7 mins ago

Bomb Threat: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಸಂದೇಶ; ಆತಂಕ ಸೃಷ್ಟಿ

Hardik Pandya
ಕ್ರೀಡೆ37 mins ago

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Viral Video
ವೈರಲ್ ನ್ಯೂಸ್1 hour ago

Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ

TOP 5 Movies big budget Movie in OTT
ಒಟಿಟಿ1 hour ago

TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

panjurli daiva sharat shetty murder
ದಕ್ಷಿಣ ಕನ್ನಡ1 hour ago

Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

Money Guide
ಮನಿ-ಗೈಡ್2 hours ago

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್‌ ಮಾಡಿ

Prajwal Revanna Case
ಕರ್ನಾಟಕ2 hours ago

Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Gold Rate Today
ಚಿನ್ನದ ದರ2 hours ago

Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌