Janatha Darshan : QR ಕೋಡ್‌ ಬಳಸಿ ಸಿಎಂಗೆ ದೂರು ನೀಡಿ ಎಂದ ಸಿಎಂ ಕಾರ್ಯಾಲಯ; ಈ ಸೇವೆ ಇಲ್ಲವೆಂದ 1902! - Vistara News

ಕರ್ನಾಟಕ

Janatha Darshan : QR ಕೋಡ್‌ ಬಳಸಿ ಸಿಎಂಗೆ ದೂರು ನೀಡಿ ಎಂದ ಸಿಎಂ ಕಾರ್ಯಾಲಯ; ಈ ಸೇವೆ ಇಲ್ಲವೆಂದ 1902!

Janatha Darshan : ಸಿಎಂ ಸಿದ್ದರಾಮಯ್ಯ ಅವರ ಜನತಾ ದರ್ಶನಕ್ಕೆ ಸ್ಥಳಕ್ಕೆ ಹೋಗಿ ದೂರು ನೀಡಬೇಕೆಂದೇನೂ ಇಲ್ಲ. ಅದಕ್ಕಾಗಿ ಕ್ಯೂಆರ್‌ ಕೋಡ್‌ ಸೃಷಿಸಲಾಗಿದ್ದು, ಅದರ ಮೂಲಕ ದೂರು ನೀಡಿ ಎಂದು ಸಿಎಂ ಕಾರ್ಯಾಲಯ ಪ್ರಕಟಣೆ ಮೂಲಕ ಹೊರಡಿಸಿತ್ತು. ಆದರೆ, ಈ ಬಗ್ಗೆ 1902 ಸಹಾಯವಾಣಿಯನ್ನು ಪ್ರಶ್ನೆ ಮಾಡಿದಾಗ ಅಂತಹ ಯಾವುದೇ ಸೂಚನೆ ತಮಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.

VISTARANEWS.COM


on

CM Siddaramaiah Janatha Darshan QR Code
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜನತಾ ದರ್ಶನವನ್ನು (Janatha Darshan) ಸೋಮವಾರ (ನ. 27) ಪ್ರಾರಂಭ ಮಾಡಿದ್ದಾರೆ. ಇಲ್ಲಿ ದೂರು ಸಲ್ಲಿಸಲು ಕಷ್ಟಪಟ್ಟು ಬರಬೇಕಿಲ್ಲ. ಮನೆಯಲ್ಲಿಯೇ ಕುಳಿತು ದೂರು ನೀಡಬಹುದಾಗಿದೆ. ಇದಕ್ಕಾಗಿ ಕ್ಯೂಆರ್‌ ಕೋಡ್‌ (QR Code) ಬಳಸಿದರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯವು ಪ್ರಕಟಣೆ ಮೂಲಕ ವಿಷಯ ತಿಳಿಸಿತ್ತು. ಆದರೆ, ಈ ಬಗ್ಗೆ ವಿಸ್ತಾರ ನ್ಯೂಸ್‌ ರಿಯಾಲಿಟಿ ಚೆಕ್‌ (Vistara News Reality Check) ಮಾಡಿದಾಗ ಈ ಸೇವೆಯನ್ನು ಸದ್ಯಕ್ಕೆ ನೀಡಲಾಗಿಲ್ಲ ಎಂದು ಸಹಾಯವಾಣಿ (Helpline Number) 1902 ಸಿಬ್ಬಂದಿ ಹೇಳಿದ್ದಾರೆ. ಸಿಎಂಗೆ ಜನತಾ ದರ್ಶನದಲ್ಲಿ ದೂರು ನೀಡಬೇಕಾದರೆ ಸಿಎಂ ಗೃಹ ಕಚೇರಿಗೇ ಹೋಗಬೇಕು. ಇಲ್ಲವಾದಲ್ಲಿ ತಮ್ಮ ಬಳಿಯೇ ದೂರು ಹೇಳಿದರೆ ಸಿಎಂ ಜನತಾ ದರ್ಶನ ಕೆಟಗರಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ, ಕ್ಯೂಆರ್‌ ಕೋಡ್‌ ಬಳಸಿ ದೂರು ನೀಡುವ ಸೌಲಭ್ಯವನ್ನು ಮಾತ್ರ ಕಲ್ಪಿಸಲಾಗಿಲ್ಲ.

ಮನೆಯಲ್ಲೇ ಕುಳಿತು ಕುಂದುಕೊರತೆ/ಅಹವಾಲು ದಾಖಲಿಸಲು ಅನುವಾಗುವಂತೆ ಪ್ರತ್ಯೇಕ ಕ್ಯೂಆರ್‌ ಕೋಡ್‌ (QR Code) ಸೃಜಿಸಲಾಗಿದೆ. ಇದನ್ನು ಸ್ಕಾನ್‌ ಮಾಡಿ ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸಬಹುದು. ಇದನ್ನು ಮಾನ್ಯ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೇ ಸ್ವೀಕೃತವಾದ ಅಹವಾಲೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಕಾರ್ಯಾಲಯದಿಂದ ಪ್ರಕಟಣೆಯೊಂದು ಹೊರಬಿದ್ದಿತ್ತು.

ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ ಸಹಾಯವಾಣೀ 1902ಗೆ ಸಂಪರ್ಕಿಸಿ, ಕ್ಯೂಆರ್‌ ಕೋಡ್‌ ಎಲ್ಲಿ ಲಭ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದೆ. ಆಗ ಅಲ್ಲಿನ ಸಿಬ್ಬಂದಿ ಆ ರೀತಿಯ ಸೇವೆ ಪ್ರಾರಂಭವಾಗಿಲ್ಲ. ಸಿಎಂಗೆ ಜನತಾ ದರ್ಶನದ ಅಡಿ ದೂರು ನೀಡಬೇಕಿದ್ದರೆ ಸ್ವತಃ ಅಲ್ಲಿಗೇ ಹೋಗಿ ನೀಡಬೇಕು. ಒಂದು ವೇಳೆ ಅಲ್ಲಿಗೆ ಹೋಗಿ ದೂರು ನೀಡಲು ಸಾಧ್ಯವಾಗದೇ ಇದ್ದು, ಅನಿವಾರ್ಯ ಇದ್ದಲ್ಲಿ ತಮಗೇ ಸಮಸ್ಯೆಗಳನ್ನು ತಿಳಿಸಿದಲ್ಲಿ ದೂರನ್ನು ಸ್ವೀಕಾರ ಮಾಡಲಾಗುವುದು. ಇದಕ್ಕಾಗಿ ಇನ್ನೂ ಯಾವುದೇ ಕ್ಯೂ ಆರ್‌ ಕೋಡ್‌ ಅನ್ನು ಇದಕ್ಕಾಗಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

1902ಗೆ ಕರೆ ಮಾಡಿ ದೂರು ದಾಖಲಿಸಿ

1902 ಸಹಾಯವಾಣಿಯನ್ನು ರಾಜ್ಯ ಸರ್ಕಾರ ಈಗಾಗಲೇ ತೆರೆದಿದೆ. ಜನತಾ ದರ್ಶನಕ್ಕೆ ದೂರದ ಊರಿನಿಂದ ಹೋಗಲು ಆಗದವರು, ತೀವ್ರ ಸಮಸ್ಯೆ ಎದುರಿಸುತ್ತಿರುವವರು ಯಾರಾದರೂ ಇದ್ದರೆ ಸಿಎಂ ಗಮನಕ್ಕೆ ತರುವ ಸಂಬಂಧ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಬೇಕು. ಅವರು ನಿಮ್ಮ ಅಹವಾಲುಗಳನ್ನು ಆಧರಿಸಿ ಅದನ್ನು ಜನತಾ ದರ್ಶನ ಕೆಟಗರಿ ಅಡಿ ದೂರು ದಾಖಲು ಮಾಡಿಕೊಳ್ಳುತ್ತಾರೆ.

ಹೀಗೆ ದೂರು ದಾಖಲು ಮಾಡುವಾಗ ನಿಮ್ಮ ಸಮಸ್ಯೆ, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಪಡೆದು ಅದರಲ್ಲಿ ನಮೂದು ಮಾಡಲಾಗುತ್ತದೆ. ಈ ದೂರು ಸಿಎಂ ಜನತಾ ದರ್ಶನ ಕೆಟಗರಿ ಮೂಲಕ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಲಾಗುತ್ತದೆ. ಆದರೆ, ಮುಂದಿನ ಹಂತದ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗಿಲ್ಲ.

ಮುಂದಿನ ಕ್ರಮ ಏನು?

ಒಂದು ವೇಳೆ 1092 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಾದರೆ ನಿಮಗೊಂದು ಐಡಿ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ದಾಖಲು ಮಾಡಲಾದ ದೂರು ಸಿಎಂ ಕಾರ್ಯಾಲಯಕ್ಕೆ ಹೋಗುತ್ತದೆ. ಅಲ್ಲಿಂದ ಮುಂದಿನ ಪ್ರಕ್ರಿಯೆ ಏನು? ನಿಮ್ಮ ದೂರಿನ ಸ್ಥಿತಿ-ಗತಿ ಏನಾಯಿತು ಎಂಬ ಬಗ್ಗೆ ತಿಳಿಯಬೇಕು ಎಂದಿದ್ದರೆ, ಜನಸ್ಪಂದನ ಪೋರ್ಟಲ್‌ ಅಥವಾ ಜನಸ್ಪಂದನ ಪಿಜಿಆರ್‌ಎಸ್‌ ಪೋರ್ಟಲ್‌ಗೆ ಭೇಟಿ ನೀಡಿ ಅಲ್ಲಿ ಸಿಪಿಗ್ರಾಮ್ಸ್‌ ಕುಂದುಕೊರತೆ ಸ್ಥಿತಿಯನ್ನು ಪರಿಶೀಲಿಸಿ” ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ನಿಮ್ಮ ಸಿಪಿಗ್ರಾಮ್ಸ್‌ ಗ್ರೀವಿಯನ್ಸ್‌ ನಂಬರ್‌ (CPGRAMS Grievance Number) ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಿದರೆ ಅಲ್ಲಿ ಅಹವಾಲು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇಲ್ಲವೇ ನೇರವಾಗಿ 1902 ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಅಲ್ಲಿನ ಸಿಬ್ಬಂದಿ ಸಹ ಅಹವಾಲಿನ ಸ್ಟೇಟಸ್‌ ಬಗ್ಗೆ ತಿಳಿಸಿಕೊಡಲಿದ್ದಾರೆ.

ಪ್ರಕ್ರಿಯೆ ಹೇಗಿರಲಿದೆ?

ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲವೇ? ಹಾಗಾದರೆ ದೂರು ಕೊಡೋಕೆ ರೆಡಿ ಆಗಿ!

ಎಪಿಐ ಮೂಲಕ ನಿರ್ವಹಣೆ

ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್‌ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ-ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ. ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡ್ಯಾಶ್‌ಬೋರ್ಡ್‌ ಅಭಿವೃದ್ಧಿಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder Case: ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

Murder Case: ಹರ್ಷವರ್ಧನ್ (34) ಕೊಲೆಯಾದ ವ್ಯಕ್ತಿ. ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ವಾಸವಿದ್ದ ಹರ್ಷವರ್ಧನ್, ಗುಲ್ಬರ್ಗಾ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು.

VISTARANEWS.COM


on

murder case anekal
Koo

ಆನೇಕಲ್:‌ ಬಾರ್‌ನಲ್ಲಿ ಗುರಾಯಿಸಿ ನೋಡಿದ ಎಂಬ ಕಾರಣಕ್ಕಾಗಿ ಬರ್ಬರವಾಗಿ ಒಬ್ಬ ವ್ಯಕ್ತಿಯ ಹತ್ಯೆ (Murder Case) ಮಾಡಲಾಗಿದೆ. ಈ ಘಟನೆ ನಡೆದಿರುವುದು ಆನೆಕಲ್‌ (Anekal Murder) ತಾಲೂಕಿನ ಕಲ್ಕೆರೆಯ ಎಸ್.ಕೆ.ಆರ್ ಬಾರ್‌ನಲ್ಲಿ. ಬಿಯರ್ (Beer bottle) ಬಾಟಲಿಯಿಂದ ತಲೆಗೆ ಹೊಡೆದು, ಹೊಟ್ಟೆಗೆ ಚುಚ್ಚಿ ಕೊಲೆ ಮಾಡಲಾಗಿದೆ.

ಹರ್ಷವರ್ಧನ್ (34) ಕೊಲೆಯಾದ ವ್ಯಕ್ತಿ. ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ವಾಸವಿದ್ದ ಹರ್ಷವರ್ಧನ್, ಗುಲ್ಬರ್ಗಾ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.

ನಿನ್ನೆ ಸಂಜೆ ಕೆಲಸ ಮುಗಿಸಿ ಶಾಲೆಯಿಂದ ನೇರ ಕಲ್ಕೆರೆಯ ಎಸ್.ಕೆ.ಆರ್ ಬಾರ್ ಕಡೆ ಹೋಗಿದ್ದರು. ಅಲ್ಲಿ ಮದ್ಯ ಸೇವಿಸುವ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮತ್ತಿಬ್ಬರು ಆಸಾಮಿಗಳ ಕೂಗಾಟದಿಂದ ಬೇಸತ್ತು ಆಕ್ಷೇಪಿಸುವಂತೆ ಅವರತ್ತ ನೋಡಿದ್ದರು. ʼಏನೋ ಗುರಾಯಿಸ್ತೀಯಾ?ʼ ಎಂದು ಜಗಳ ತೆಗೆದ ಪುಂಡರು ಬಿಯರ್ ಬಾಟಲಿಯಿಂದ ಹರ್ಷವರ್ಧನ್‌ ತಲೆಗೆ ಹೊಡೆದಿದ್ದಲ್ಲದೆ, ಬಳಿಕ ಚಾಕು ಮತ್ತೆ ಬಿಯರ್ ಬಾಟಲಿಯಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾರೆ. ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಬಾರ್‌ನ ಸಿಸಿಟಿವಿಯಲ್ಲಿ ಕೊಲೆಗಾರರ ಕೃತ್ಯ ದಾಖಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೆಲಸದಿಂದ ತೆಗೆದಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ

ಮೈಸೂರು: ಕಂಪನಿಯಲ್ಲಿ ಕೆಲಸದಿಂದ ತೆಗೆದು ಕಿರುಕುಳ ನೀಡಿದ್ದಾರೆ ಎಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಿರಣ್ (28) ಮೃತ ಯುವಕ.

ತಿ.ನರಸೀಪುರದ ಸಾಯಿ ಗಾರ್ಮೆಂಟ್ಸ್‌ನಲ್ಲಿ ಯುವಕ ಕಿರಣ್‌ ಕೆಲಸ ಮಾಡುತ್ತಿದ್ದ. ಆದರೆ, ಕಂಪನಿಯಲ್ಲಿ ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಸಾವಿಗೆ ಕಂಪನಿಯ ಕ್ವಾಲಿಟಿ ಎ.ಜಿ.ಎಂ ಲೋಕೇಶ್‌ ಹಾಗೂ ಎಚ್.ಆರ್. ಎ.ಜಿ.ಎಂ ಅನಿಲ್ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಯುವಕ ಉಲ್ಲೇಖಿಸಿದ್ದಾನೆ.

ನನ್ನನ್ನು ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಬಗ್ಗೆ ಬೇರೆ ಕಡೆ ಕೆಟ್ಟ ಫೀಡ್ ಬ್ಯಾಕ್ ಕೊಟ್ಟು ಎಲ್ಲೂ ಕೆಲಸಕ್ಕೆ ತೆಗೆದುಕೊಳ್ಳದ ಹಾಗೆ ಮಾಡಿದ್ದಾರೆ. ಲೋಕೇಶ್‌ ಮತ್ತು ಅನಿಲ್‌ ಅವರಿಂದ ಕೆಲಸ ಸಿಗದ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಮೃತ ಕಿರಣ್ ಉಲ್ಲೇಖ ಮಾಡಿದ್ದಾನೆ. ಈ ಬಗ್ಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

Continue Reading

ಕರ್ನಾಟಕ

Karnataka Weather: ಇಂದು ಕೊಡಗು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ; ಹಲವೆಡೆ ಶಾಲೆಗಳಿಗೆ ರಜೆ!

Karnataka Weather: ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು (ಜೂನ್‌ 26) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಕೊಡಗಿನ ವಿರಾಜಪೇಟೆ ತಾಲೂಕು, ಪೊನ್ನಂಪೇಟೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

VISTARANEWS.COM


on

Karnataka Weather
ಬುಧವಾರ ಸುರಿದ ಮಳೆಗೆ ಮಂಗಳೂರಿನ ಪಡೀಲು ರೈಲ್ವೆ ಅಂಡರ್‌ ಪಾಸ್ ಜಲಾವೃತವಾಗಿರುವುದು.
Koo

ಬೆಂಗಳೂರು: ರಾಜ್ಯದಲ್ಲಿ ಇಂದು (ಜೂನ್‌ 27) ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ (Rain News) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಕೊಡಗು ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಗುರುವಾರ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ (45-55 kmph) ಸಂಭವಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ದ.ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು(ಜೂ.27) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.

ಇನ್ನು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸಲು ಮಾಹಿತಿ ನೀಡಲಾಗಿದೆ. ದ.ಕ‌ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಕೊಡಗಿನ 2 ತಾಲೂಕುಗಳಲ್ಲಿ ರಜೆ

ಕೊಡಗು: ಜಿಲ್ಲೆಯಲ್ಲಿ ಹಲವೆಡೆ ವರುಣಾರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು (ಗುರುವಾರ) ರಜೆ ಘೋಷಿಸಲಾಗಿದೆ.

ಇನ್ನು ಜೂನ್ 28ರಂದು ಕೂಡ ಕರಾವಳಿ ಜಿಲ್ಲೆಗಳ ಪ್ರತ್ಯೇಕ ಕಡೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕ ಕಡೆ ಭಾರಿ ಮಳೆ ಸಾಧ್ಯತೆಯಿದೆ. ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳು. ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ (45-55 kmph) ಆಗುವ ಸಾಧ್ಯತೆಯಿದೆ. ಜೂನ್‌ 30ರವರೆಗೆ ಇದೇ ರೀತಿಯ ಸ್ಥಿತಿ ಕರಾವಳಿ ಜಿಲ್ಲೆಗಳಲ್ಲಿ ಇರಲಿದೆ.

ಮೀನುಗಾರರಿಗೆ ಎಚ್ಚರಿಕೆ

ಕರ್ನಾಟಕ ಕರಾವಳಿಯಲ್ಲಿ ಗುರುವಾರ ತೀವ್ರ ಬಿರುಗಾಳಿ (ಗಂಟೆಗೆ 35ರಿಂದ 55 ಮಿ.ಮೀ ವೇಗ) ಬೀಸುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡದ ಮುಲ್ಕಿಯಿಂದ ಮಂಗಳೂರಿನವರೆಗೆ ಬೆಳಗ್ಗೆ 8:30ರಿಂದ ರಾತ್ರಿ 11.30ರವರೆಗೆ 3.4 ರಿಂದ 3.5 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇದೆ.

ಉಡುಪಿ ಹೈ ವೇವ್ ಎಚ್ಚರಿಕೆ: ಬೈಂದೂರಿನಿಂದ ಕಾಪುವರೆಗಿನ ಕರಾವಳಿಯಲ್ಲಿ ಸಂಜೆ 5.30ರಿಂದ ರಾತ್ರಿ 11:30 ಗಂಟೆಗಳವರೆಗೆ 3.5 ರಿಂದ 3.7 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಉಂಟಾಗಲಿವೆ.

ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ ಸಂಜೆ 5.30ರಿಂದ ರಾತ್ರಿ 11.30ರವರೆಗೆ 3.7ರಿಂದ 3.9 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಹೀಗಾಗಿ ಸಣ್ಣ ಹಡಗುಗಳು ಸಂಚರಿಸದಂತೆ ಹಾಗೂ ಮನರಂಜನಾ ಚಟುವಟಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ | Rain News: ಕೊಡಗು, ಚಿಕ್ಕಮಗಳೂರು, ಕಾರವಾರದಲ್ಲಿ ವರುಣಾರ್ಭಟ; ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ!

ಬೆಂಗಳೂರು ಮತ್ತು ಸುತಮುತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಅಕಾಶವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ (30-40 kmph) ತುಂಬಾ ಸಾಧ್ಯತೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 C ಮತ್ತು 21C ಇರಲಿದೆ.

Continue Reading

ಕರ್ನಾಟಕ

Bengaluru News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ; ಕರವೇಯಿಂದ ಜು.1ರಂದು ಬೃಹತ್ ಧರಣಿ ಸತ್ಯಾಗ್ರಹ

Bengaluru News: ಕರ್ನಾಟಕ ರಕ್ಷಣಾ ವೇದಿಕೆಯಿಂದ ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 1 ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದು, ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

VISTARANEWS.COM


on

Demand to provide job reservation for Kannadigas; Massive Dharani sathyagraha on July 1 from Karave
Koo

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯಿಂದ ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 1ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದು, ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (Bengaluru News) ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತೀವ್ರ ಸ್ವರೂಪ ಪಡೆದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಮಹಾನಗರಗಳು ವಲಸಿಗರ ಹಾವಳಿಯಿಂದ ಸಂಪೂರ್ಣ ಬದಲಾಗುತ್ತಿವೆ. ಕನ್ನಡಿಗರ ಉದ್ಯೋಗಗಳನ್ನು ಹೊರರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಲು ಆಗ್ರಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: MEIL: ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆ ಜಾರಿ ಅವಕಾಶ ಗಿಟ್ಟಿಸಿದ ಎಂ.ಇ.ಐ.ಎಲ್‌

ಹಕ್ಕೊತ್ತಾಯಗಳು

ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100 ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು.

ಎಲ್ಲ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಹದಿನೈದು ವರ್ಷ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.

ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ, ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು.

ಇದನ್ನೂ ಓದಿ: Bengaluru News: ಗೋ ಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ಗೋಪ್ರೇಮಿ ಮಹೇಂದ್ರ ಮುನ್ನೋತ್

ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಹೊರತಾದ ಉಳಿದೆಲ್ಲ ಹುದ್ದೆಗಳಲ್ಲೂ ಶೇ. 90ರಷ್ಟು ಮೀಸಲಾತಿ ನೀಡಬೇಕು.

ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Continue Reading

ಕರ್ನಾಟಕ

Attica Babu: ಕದ್ದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ

Attica Babu: ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ಅಟ್ಟಿಕಾ ಆಬು ವಿರುದ್ಧ ತುರುವೇಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್‌ ಬಿ.ಎನ್‌ ಹಾಗೂ ತಂಡದಿಂದ ಬಂಧಿಸಲಾಗಿದೆ.

VISTARANEWS.COM


on

Attica Babu
Koo

ತುಮಕೂರು: ಖ್ಯಾತ ಚಿನ್ನದ ವ್ಯಾಪಾರಿ, ಅಟ್ಟಿಕಾ ಗೋಲ್ಡ್‌ ಕಂಪನಿ (Attica Gold Company) ಮಾಲೀಕ ಅಟ್ಟಿಕಾ ಬಾಬು (Attica Babu) ಅಲಿಯಾಸ್‌ ಬೊಮ್ಮನಹಳ್ಳಿ ಬಾಬು ಅವರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು (Turuvekere Police) ಬುಧವಾರ (ಜೂನ್‌ 26) ಬಂಧಿಸಿದ್ದಾರೆ. ಕದ್ದ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ (Bengaluru) ಫ್ರೇಜರ್‌ ಟೌನ್‌ ನಿವಾಸದ ಬಳಿ ಅಟ್ಟಿಕಾ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್‌ ಬಿ.ಎನ್‌ ಹಾಗೂ ತಂಡದಿಂದ ಬಂಧಿಸಲಾಗಿದೆ. ಹಗಲು ಕಳ್ಳತನದ ಆರೋಪಿ ಉದಯ್‌ ಅಲಿಯಾಸ್‌ ಅಶೋಕ್‌, ತನ್ನ ಹೆಂಡತಿ ಶಾರದಾ ಮೂಲಕ ಅಟ್ಟಿಕಾ ಬಾಬುಗೆ ಚಿನ್ನ ಮಾರಾಟ ಮಾಡಿಸುತ್ತಿದ್ದ ತುರುವೇಕೆರೆ ವ್ಯಾಪ್ತಿಯಲ್ಲಿ ಕದ್ದ ಚಿನ್ನವನ್ನು ಅಟ್ಟಿಕಾ ಬಾಬು ಖರೀದಿ ಮಾಡುತ್ತಿರುವ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

ಶಾರದಾ ಮೂಲಕ ಜಿಗಣಿಯಲ್ಲಿರುವ ಅಟ್ಟಿಕಾ ಗೋಲ್ಡ್‌ ಕಂಪನಿಯಲ್ಲಿ ಉದಯ್‌ ಅಲಿಯಾಸ್‌ ಅಶೋಕ್‌ ಮಾರಾಟ ಮಾಡಿಸಿದ್ದ. ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ಮಾಡಿದ್ದರು. ಕಳ್ಳತನ ಮಾಡಿದ ಚಿನ್ನಾಭರಣವನ್ನು ಖರೀದಿಸಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರ ತಂಡವು ಬೆಂಗಳೂರಿಗೆ ಆಗಮಿಸಿ, ಅಟ್ಟಿಕಾ ಬಾಬು ಅವರನ್ನು ಬಂಧಿಸಿದ್ದಾರೆ. ಪೊಲೀಸರು ಅಟ್ಟಿಕಾ ಬಾಬು ಅವರನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

2022ರಲ್ಲೂ ಬಂಧಿಸಲಾಗಿತ್ತು

ಎರಡನೇ ಮದುವೆಯಾಗಿ, ಮೋಸ ಮಾಡಿದ್ದಾರೆ ಎಂಬುದಾಗಿ ಮಹಿಳೆಯೊಬ್ಬರು ದೂರು ನೀಡಿದ ಕಾರಣ 2022ರಲ್ಲೂ ಅಟ್ಟಿಕಾ ಬಾಬು ಅವರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದರು. ಶೇಖ್‌ ಮಿನಾಜ್‌ ಎಂಬ ಮಹಿಳೆಯು ಹಲ್ಲೆ ಹಾಗೂ ಮೋಸ ಮಾಡಿದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬು ವಿರುದ್ಧ ಹಲ್ಲೆ, ವರದಕ್ಷಿಣೆ ಕಿರುಕುಳದ ಪ್ರಕರಣ ಕೂಡ ದಾಖಲಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅಟ್ಟಿಕಾ ಬಾಬು ಬಿಡುಗಡೆಯಾಗಿದ್ದರು.

ಇದನ್ನೂ ಓದಿ: Actor Darshan: ಪ್ರಥಮ್‌, ಉಮಾಪತಿಗೆ ಬೆದರಿಕೆ ಹಾಕಿದ ಡಿ ಬಾಸ್‌ ಫ್ಯಾನ್‌ ಬಂಧನ

Continue Reading
Advertisement
murder case anekal
ಕ್ರೈಂ14 mins ago

Murder Case: ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

lk advani
ಪ್ರಮುಖ ಸುದ್ದಿ36 mins ago

LK Advani: ಮಾಜಿ ಉಪ ಪ್ರಧಾನಿ ಎಲ್‌ ಕೆ ಆಡ್ವಾಣಿ ಅಸ್ವಸ್ಥ, ಏಮ್ಸ್‌ಗೆ ದಾಖಲು

Smoking Effects
ಆರೋಗ್ಯ46 mins ago

Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Vastu Tips
ಧಾರ್ಮಿಕ1 hour ago

Vastu Tips: ಬಾತ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಕುಟುಂಬಕ್ಕೆ ಭಾರಿ ಸಂಕಷ್ಟ!

Karnataka Weather
ಕರ್ನಾಟಕ1 hour ago

Karnataka Weather: ಇಂದು ಕೊಡಗು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ; ಹಲವೆಡೆ ಶಾಲೆಗಳಿಗೆ ರಜೆ!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಈ ರಾಶಿಯವರು ತಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸುವುದು ಬೇಡ!

ollie robinson
ಪ್ರಮುಖ ಸುದ್ದಿ8 hours ago

Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

Serial Bride
ದೇಶ8 hours ago

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Demand to provide job reservation for Kannadigas; Massive Dharani sathyagraha on July 1 from Karave
ಕರ್ನಾಟಕ9 hours ago

Bengaluru News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ; ಕರವೇಯಿಂದ ಜು.1ರಂದು ಬೃಹತ್ ಧರಣಿ ಸತ್ಯಾಗ್ರಹ

Attica Babu
ಕರ್ನಾಟಕ10 hours ago

Attica Babu: ಕದ್ದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌