Dinesh Gundu Rao : ದಿನೇಶ್‌ ಗುಂಡೂರಾವ್‌ ಪುತ್ರಿಯ ʼಅನನ್ಯʼ ಸೇವೆ; ಗಾಂಧಿನಗರ ಅಂಗನವಾಡಿಗಳಿಗೆ ಹೈಟೆಕ್‌ ಟಚ್!‌ - Vistara News

ಕರ್ನಾಟಕ

Dinesh Gundu Rao : ದಿನೇಶ್‌ ಗುಂಡೂರಾವ್‌ ಪುತ್ರಿಯ ʼಅನನ್ಯʼ ಸೇವೆ; ಗಾಂಧಿನಗರ ಅಂಗನವಾಡಿಗಳಿಗೆ ಹೈಟೆಕ್‌ ಟಚ್!‌

Dinesh Gundu Rao : ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹಲವು ಅಂಗನವಾಡಿಗಳು ಈಗ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಅವುಗಳಿಗೆ ಹೈಟೆಕ್‌ ಟಚ್‌ ಕೊಡಲು ಆರ್. ಗುಂಡೂರಾವ್ ಫೌಂಡೇಶನ್ ಮುಂದಾಗಿದೆ. ಇದರ ಹಿಂದೆ ದಿನೇಶ್‌ ಗುಂಡೂರಾವ್‌ ಅವರ ಪುತ್ರಿ ಅನನ್ಯ ರಾವ್‌ ಇದ್ದಾರೆ.

VISTARANEWS.COM


on

Ananya Dinesh Gundu rao infront of Gandhinagara Anganawadi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಗಾಂಧಿನಗರದ ಅಂಗನವಾಡಿಗಳಿಗೆ (Anganwadi in Gandhinagar) ಈಗ ಹೈಟೆಕ್‌ ಟಚ್‌ ಸಿಗುತ್ತಿದೆ. ಬಡ ಮಕ್ಕಳ ನಲಿ ಕಲಿ ತಾಣವಾಗಿರುವ ಇಲ್ಲಿನ ಅಂಗನವಾಡಿಗಳೀಗ ಯಾವ ಖಾಸಗಿ ನರ್ಸರಿಗಳಿಗೆ ಕಮ್ಮಿ ಇಲ್ಲದಂತೆ ಕಂಗೊಳಿಸಲು ಸಜ್ಜಾಗುತ್ತಿವೆ. ಚಿಣ್ಣರ ಅಂಗನವಾಡಿಗಳಿಗೆ ಒಂದು ಚೆಂದದ ರೂಪ ನೀಡಲು ಮುಂದಾಗಲಾಗಿದೆ. ಈ ಭಾಗದ 85 ಅಂಗನವಾಡಿಗಳಿಗೆ ಹೊಸ ರೂಪ ದೊರೆಯಲಿದ್ದು, ಪ್ರತಿಯೊಂದಕ್ಕೂ ತಲಾ 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಹಾಗಂತ ಇದು ಯಾವುದೇ ಸರ್ಕಾರಿ ಯೋಜನೆ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಫೌಂಡೇಶನ್ (R Gundu Rao Foundation) ಈ ಕೆಲಸವನ್ನು ಮಾಡುತ್ತಿದೆ. ಈ ಹೈಟೆಕ್‌ ಪ್ಲ್ಯಾನ್‌ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಪುತ್ರಿ ಅನನ್ಯ ರಾವ್ (Ananya Rao) ಇದ್ದಾರೆ.

ಗಾಂಧಿನಗರದ 85 ಅಂಗನವಾಡಿಗಳನ್ನು ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನು ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ.‌ ದುಸ್ಥಿತಿಯಲ್ಲಿರುವ ಅಂಗನವಾಡಿಗಳನ್ನು ಆದ್ಯತೆಯ ಮೇರೆಗೆ ಮೊದಲು ಪುನಶ್ಚೇತನಗೊಳಿಸಲು ಯೋಜಿಸಲಾಗಿದೆ. ಅದಕ್ಕಾಗಿ ಪ್ರತಿ ಅಂಗನವಾಡಿಗೆ ತಗುಲುವ 2 ಲಕ್ಷ ರೂಪಾಯಿ ವರೆಗಿನ ವೆಚ್ಚವನ್ನು ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಭರಿಸಲು ಅನನ್ಯ ರಾವ್ ಮುಂದಾಗಿದ್ದಾರೆ. ಇವುಗಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದ್ದಾರೆ.

Dinesh gundurao and his daughter Ananya Dinesh Gundu rao infront of Gandhinagara Anganawadi

ಇದನ್ನೂ ಓದಿ: Chandrayaan- 3 : ಚಂದ್ರಯಾನ ಕುತೂಹಲಿಗಳು ತಿಳಿಯಲೇಬೇಕಾದ ಸಂಗತಿಗಳಿವು; ವಿಜ್ಞಾನಿ ಗುರುಪ್ರಸಾದ್‌ Exclusive Details​

ಪ್ರಸ್ತುತ ಆರ್. ಗುಂಡೂರಾವ್ ಫೌಂಡೇಶನ್ ಹೊಣೆ ಹೊತ್ತಿರುವ ಅನನ್ಯ ರಾವ್, ಅಂಗನವಾಡಿಗಳಿಗೆ ಆಸರೆಯಾಗಬೇಕು ಎಂಬ ಆಲೋಚನೆಯನ್ನು ತಂದೆ ದಿನೇಶ್ ಗುಂಡೂರಾವ್ ಬಳಿ ವ್ಯಕ್ತಪಡಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಒಂದು ಅಂಗನವಾಡಿಯನ್ನು ಮಾದರಿಯಾಗಿ ಸಿದ್ಧಪಡಿಸಿದರು. ಅದನ್ನು ಆರ್. ಗುಂಡೂರಾವ್ ಅವರ 30ನೇ ಪುಣ್ಯಸ್ಮರಣೆಯ ಅಂಗವಾಗಿ ದಿನೇಶ್ ಗುಂಡೂರಾವ್ ಅವರಿಂದ ಲೋಕಾರ್ಪಣೆಗೊಳಿಸಿ, ತಮ್ಮ ಮುಂದಿನ ಹಾದಿಯನ್ನು ತೆರೆದಿಟ್ಟಿದ್ದಾರೆ.

Dinesh gundurao daughter Ananya Dinesh Gundu rao in Gandhinagara Anganawadi and talk to old women

ಚಿಣ್ಣರ ಅಂಗಳ ಅಂಗನವಾಡಿಗಳು ಚೆಂದವಾಗಿರಬೇಕು. ಅಂಗನವಾಡಿಗಳು ಉತ್ತಮಗೊಂಡಷ್ಟೂ, ಮಕ್ಕಳಲ್ಲಿ ಆರಂಭದಲ್ಲಿಯೇ ಕಲಿಕಾ ಮನೋಭಾವವನ್ನು ಬೆಳೆಸಬಹುದು ಎಂಬ ಅಭಿಪ್ರಾಯವನ್ನು ಅನನ್ಯ ಅವರು ದಿನೇಶ್ ಗುಂಡೂರಾವ್ ಅವರ ಬಳಿ ವ್ಯಕ್ತಪಡಿಸಿದ್ದರು.

Dinesh gundurao and his daughter Ananya Dinesh Gundu rao in Gandhinagara Anganawadi

ಅಲ್ಲದೆ, ಈ ಕಾರ್ಯಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕೂಡ ಪ್ರೇರಣೆಯಾಗಿದ್ದಾರೆ. ಸಾಮಾನ್ಯ ಶಿಕ್ಷಕ ಕುಟುಂಬದಲ್ಲಿ ಜನಿಸಿದ್ದ ಆರ್. ಗುಂಡೂರಾವ್ ಶಿಕ್ಷಣದ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಸ್ಮರಣೆಯಲ್ಲಿ ಅಂಗನವಾಡಿಗಳಿಂದಲೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಅವರ ಹೆಸರಿನ ಫೌಂಡೇಷನ್‌ನಿಂದ ನೆರವೇರಿಸಬೇಕು ಎಂಬ ಅನನ್ಯ ಅವರ ಆಶಯಕ್ಕೆ ಸಚಿವ ದಿನೇಶ್ ಗುಂಡೂರಾವ್ ಬೆನ್ನುತಟ್ಟಿ ಬೆಂಬಲಿಸಿದ್ದಾರೆ.

Dinesh gundurao and his daughter Ananya Dinesh Gundu rao in Gandhinagara Anganawadi and gift gives to children

ಸಿಗುತ್ತಿದೆ ಹೈಟೆಕ್‌ ಟಚ್

ಅಂಗನವಾಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದರ ಜತೆಗೆ, ಗೋಡೆಗಳಿಗೆ ಪೇಂಟಿಂಗ್‌, ಚೆಂದದ ಚಿತ್ತಾರಗಳನ್ನು ಬಿಡಿಸಲು ಸಲಹೆ ನೀಡಿದ್ದಾರೆ.‌ ಪ್ರತಿ ಅಂಗನವಾಡಿಗಳಿಗೂ ಅಗತ್ಯ ಪರಿಕರಗಳು, ಆಟೋಪಕರಣಗಳನ್ನು ಫೌಂಡೇಶನ್ ವತಿಯಿಂದ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

Gandhinagara Anganawadi inside view and hitech touch given by Gundu rao foundation

ಇದನ್ನೂ ಓದಿ: India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ

ಅಂಗನವಾಡಿ ಶಿಕ್ಷಕರಿಗೂ ತರಬೇತಿ ನೀಡಲು ಚಿಂತನೆ

ವಿಶೇಷವಾಗಿ ಸೃಜನಾತ್ಮಕ ಗುಣಮಟ್ಟದ ಶಿಕ್ಷಣ ಅಗತ್ಯ. ಅಂಗನವಾಡಿಗಳಿಗೆ 15ರಿಂದ 20 ಮಕ್ಕಳು ಬಂದರೂ ಸಾಕು. ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಹಿಂದುಳಿಯಬಾರದು. ವಿಭಿನ್ನ ತಂತ್ರಗಳ ಮೂಲಕ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಪಾಠೋಪಕರಣಗಳನ್ನು ನೀಡುವುದರ ಜತೆಗೆ, ಶಿಕ್ಷಕರಿಗೂ ತರಬೇತಿ ನೀಡುವಂತೆ ದಿನೇಶ್ ಗುಂಡೂರಾವ್ ಅವರು ಫೌಂಡೇಷನ್‌ಗೆ ಸಲಹೆ ನೀಡಿದ್ದಾರೆ. ನುರಿತ ತಜ್ಞರನ್ನ ಕರೆಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲು ಸೂಚಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಇಂದು 2ನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕರ್ನಾಟಕ ಸೇರಿ ದೇಶದ ಹಲವೆಡೆ ಮಂಗಳವಾರ ಮತದಾನ ನಡೆಯಲಿದ್ದು, ಮತದಾರರಾರೂ ತಮ್ಮ ಹಕ್ಕು ಚಲಾವಣೆಗೆ ಉತ್ಸಾಹಿತರಾಗಿದ್ದಾರೆ. ಯಾವುದಕ್ಕೂ ಮತಗಟ್ಟೆಗೆ ಹೊರಡುವ ಮುನ್ನ ಮತದಾನ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಒಮ್ಮೆ ಚೆಕ್ ಮಾಡುವುದು ಉತ್ತಮ. ಮನೆಯಲ್ಲೇ ಕುಳಿತು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ.

VISTARANEWS.COM


on

Lok Sabha Election-2024
Koo

ಬೆಂಗಳೂರು: ಲೋಕಸಭಾ ಚುನಾವಣೆಯ (lok sabha election) ಮೂರನೇ ಹಂತದ ಮತದಾನವು ಇಂದು (ಮೇ 7) ನಡೆಯಲಿದೆ. ಕರ್ನಾಟದಲ್ಲಿ ಎರಡನೇ ಅಥವಾ ಕೊನೆಯ ಹಂತದ ಮತದಾನವೂ ಮಂಗಳವಾರವೇ ನಡೆಯಲಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲೊಮ್ಮೆ (voter list) ನಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಮತಗಟ್ಟೆಗೆ (election booth) ಹೋಗಬೇಕಾದ ಅವಶ್ಯಕತೆ ಈಗಿಲ್ಲ. ಸ್ಮಾರ್ಟ್ ಫೋನ್ (smart phone) ಕೈಯಲ್ಲಿ ಇದ್ದರೆ ಸಾಕು ಮನೆಯಲ್ಲೇ ಕುಳಿತು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ನಲ್ಲಿರುವ ಆನ್ ಲೈನ್ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ನಡೆಸಿ ಮತಗಟ್ಟೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈಗ ಅವಕಾಶವಿದೆ.

ಹೇಗೆ ನೋಡುವುದು?

ಸ್ಮಾರ್ಟ್ ಫೋನ್ ನಲ್ಲಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ಅನ್ನು ತೆರೆಯಿರಿ. ಬಳಿಕ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಮುಖ್ಯವಾಗಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿದ ಬಳಿಕ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವಂತೆ ನಿಮ್ಮ ಪೂರ್ಣ ಹೆಸರು ಮತ್ತು ತಂದೆಯ ಹೆಸರನ್ನು ನಮೂದಿಸಬೇಕು. ಬಳಿಕ ಹುಟ್ಟಿದ ದಿನಾಂಕವನ್ನು ಹಾಕಿ ಎಪಿಕ್ (ಎಪಿಐಸಿ) ಸಂಖ್ಯೆಯನ್ನು ಹಾಕಿದ ಬಳಿಕ ಸರ್ಚ್ ಬಟನ್ ಒತ್ತಿದರೆ ಫಲಿತಾಂಶ ಪುಟ ತೆರೆದುಕೊಳ್ಳುತ್ತದೆ.

Lok Sabha Election-2024

ಏನು ಮಾಹಿತಿ ?

ನಿಮ್ಮ ಹೆಸರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಇದ್ದರೆ ಎಪಿಕ್ ಸಂಖ್ಯೆ, ವಿಳಾಸ ಮತ್ತು ಮತಗಟ್ಟೆಯ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಮತಗಟ್ಟೆಯ ಸ್ಥಳವನ್ನು ಮ್ಯಾಪ್ ಮೂಲಕ ಕ್ಲಿಕ್ ಮಾಡಿ ನೋಡಲು ಅವಕಾಶವೂ ಇಲ್ಲಿ ಇದೆ.

ಎಸ್ ಎಂಎಸ್ ಮೂಲಕ ಪರಿಶೀಲಿಸಿ

ವೆಬ್ ಪೋರ್ಟಲ್ ಮಾತ್ರವಲ್ಲ ಈ ಎಲ್ಲ ಮಾಹಿತಿಯನ್ನು ಎಸ್ ಎಂಎಸ್ ಮೂಲಕವೂ ಪರಿಶೀಲನೆ ನಡೆಸಬಹುದು.
ಇದಕ್ಕಾಗಿ ಮೊಬೈಲ್ ಫೋನ್ ನಿಂದ 59191 ಕ್ಕೆ ಎಪಿಕ್ ಸಂಖ್ಯೆಯನ್ನು ಹೊಂದಿರುವ ಎಸ್ ಎಂಎಸ್ ಕಳುಹಿಸಿ ಅಥವಾ ಮತದಾರರ ಸಹಾಯವಾಣಿ 1800-111-950ಕ್ಕೆ ಕರೆ ಮಾಡಿ ಕೂಡ ಮಾಹಿತಿ ತಿಳಿದುಕೊಳ್ಳಬಹುದು.

ಯಾವಾಗ ಕೊನೆ ದಿನ?

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗೆ ಮತದಾನದ ಹಿಂದಿನ ದಿನ ಕೊನೆಯ ದಿನವಾಗಿದೆ. ಒಂದು ವೇಳೆ ಹೆಸರು ಇಲ್ಲದೇ ಇದ್ದರೆ ಹೊಸ ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್ ಸೈಟ್ ಅಥವಾ ಮತದಾರರ ಸೇವಾ ಪೋರ್ಟಲ್ ಗೆ ಭೇಟಿ ನೀಡಬಹುದು.

ಇದನ್ನೂ ಓದಿ: Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

Continue Reading

ಕರ್ನಾಟಕ

SSLC Exam Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೀಘ್ರ; ಇಲ್ಲಿದೆ ಮಹತ್ವದ ಮಾಹಿತಿ

SSLC Exam Result 2024: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಸೆಸ್ಸೆಲ್ಸಿ 2024ರ ಪರೀಕ್ಷೆ- 1ರ ಫಲಿತಾಂಶದ ಸಮಯ ಸನ್ನಿಹಿತವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಫಲಿತಾಂಶ ಪ್ರಕಟಣೆಗೆ ಮಂಡಳಿ ಮುಹೂರ್ತ ಫಿಕ್ಸ್‌ ಮಾಡಿದೆ.

VISTARANEWS.COM


on

SSLC exam results to be announced soon
Koo

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 (SSLC Exam Result 2024) ಬರೆದಿದ್ದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದುನೋಡುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆ ತಡವಾಗಿತ್ತು, ಆದರೆ, ರಾಜ್ಯದಲ್ಲಿ ಮಂಗಳವಾರ ಎರಡನೇ ಹಂತದ ಮತದಾನವೂ ಮುಗಿಲಿರುವ ಹಿನ್ನೆಲೆಯಲ್ಲಿ ಇನ್ನೊಂದು ವಾರದೊಳಗೆ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮೇ 7 ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿರುವುದರಿಂದ ಮೇ 9 ಮತ್ತು 10ರಂದು ಫಲಿತಾಂಶ ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (KSEAB) ಸಜ್ಜಾಗಿದೆ ಎನ್ನಲಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಸೆಸ್ಸೆಲ್ಸಿ 2024ರ (SSLC Result 2024) ಪರೀಕ್ಷೆ- 1ರ ಫಲಿತಾಂಶದ (SSLC exam Result 2024) ಸಮಯ ಸನ್ನಿಹಿತವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು (Students) ಕಾತರದಿಂದ ಕಾಯುತ್ತಿರುವ ಫಲಿತಾಂಶ ಪ್ರಕಟಣೆಗೆ ಮಂಡಳಿ ಮುಹೂರ್ತ ಫಿಕ್ಸ್‌ ಮಾಡಿದೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಇದ್ದಾರೆ.

ಫಲಿತಾಂಶ ಎಲ್ಲಿ ನೋಡಬಹುದು?

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ವೆಬ್‌ಸೈಟ್‌ನಲ್ಲಿ ನೋಡಬಹುದು. ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು. ಜತೆಗೆ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್‌ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಮುಖ ಹಂತವಾಗಿರುವುದರಿಂದ ಕಾತರ ಹೆಚ್ಚಿದೆ.

ಇದನ್ನೂ ಓದಿ | Village Administrative Officer: ತಾಂತ್ರಿಕ ಸಮಸ್ಯೆ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ಮೇ 15ರವರೆಗೆ ವಿಸ್ತರಣೆ

ಇನ್ನು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿಶಾಂಶವನ್ನು ಮೇ 08 ರಂದು ಬಿಡುಗಡೆ ಮಾಡಲಾಗಿತ್ತು. ಘೋಷಿಸಿತ್ತು. ಒಟ್ಟಾರ ಉತ್ತೀರ್ಣ ಪ್ರಮಾಣ ಶೇ 83.89 ದಾಖಲಾಗಿತ್ತು. ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರದಲ್ಲಿ 4,41,910 ಬಾಲಕರಾದರೆ, 4,28,058 ಬಾಲಕಿಯರು. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಸರ್ಕಾರಿ ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

Continue Reading

ಕರ್ನಾಟಕ

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ರಸ್ತೆಗಳು ಸೇರಿ 33 ಸ್ಥಳಗಳು ಜಲಾವೃತಗೊಂಡಿದ್ದು, 16 ಮರಗಳು ನೆಲಕ್ಕುರುಳಿವೆ. ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.

VISTARANEWS.COM


on

Bengaluru Rain
ಬೆಂಗಳೂರಿನ ಓಕಳೀಪುರಂನ ರಾಜೀವ್ ಗಾಂಧಿ ಅಷ್ಟಪಥ ಅಂಡರ್ ಪಾಸ್‌ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು.
Koo

ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ರಾತ್ರಿ ವರುಣ (Bengaluru Rain) ಆರ್ಭಟಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ರಸ್ತೆಗಳು ಸೇರಿ ನಗರದ 33 ಸ್ಥಳಗಳು ಜಲಾವೃತಗೊಂಡಿದ್ದು, 16 ಮರಗಳು ನೆಲಕ್ಕುರುಳಿವೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡಬೇಕಾಯಿತು.

ಬೆಂಗಳೂರಿನ ಓಕಳೀಪುರಂ, ಮಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆ.ಆರ್.ಮಾರ್ಕೆಟ್, ಮತ್ತಿಕೆರೆ, ಕತ್ತರಿಗುಪ್ಪೆ, ಆನೇಕಲ್‌, ಎಲೆಕ್ಟ್ರಾನಿಕ್‌ ಸಿಟಿ ಸೇರಿ ವಿವಿಧೆಡೆ ಮಳೆ ಅಬ್ಬರಿಸಿದೆ. ಓಕಳೀಪುರಂನ ರಾಜೀವ್ ಗಾಂಧಿ ಅಷ್ಟಪಥ ಅಂಡರ್ ಪಾಸ್‌ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು.

ಮೈಸೂರು ರಸ್ತೆಯ ಬ್ಯಾಟರಾಯನಪುರ, ಜೆಸಿ ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಲ್ಲೇಶ್ವರ, ಬಸವನಗುಡಿ, ಕತ್ತರಿಗುಪ್ಪೆ ಸರ್ಕಲ್‌, ರಾಜಾಜಿನಗರ ಭಾಷ್ಯಂ ಸರ್ಕಲ್‌ ಬಳಿ ಸೇರಿದಂತೆ 16 ಕಡೆ ಮರಗಳು ನೆಲಕ್ಕುರುಳಿವೆ. ಅದೃಷ್ಟವಾಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ.

ಮಲ್ಲೇಶ್ವರದಲ್ಲಿ ಮರ ಬಿದ್ದಿರುವುದು

ರಾಜಾಜಿನಗರದಲ್ಲಿ ಮರ ನೆಲಕ್ಕುರುಳಿರುವುದು

ಭಾರಿ ಗಾಳಿ ಮಳೆಗೆ ಹಾರಿದ ಅಂಗಡಿಗಳ ಹೊದಿಕೆ, ಶೀಟ್‌ಗಳು

ಆನೇಕಲ್: ಭಾರಿ ಗಾಳಿ ಮಳೆಯಿಂದ ಹೂ ಮತ್ತು ಹಣ್ಣಿನ ಅಂಗಡಿಗಳ ಹೊದಿಕೆ ಮತ್ತು ಶೀಟ್‌ಗಳು ಹಾರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆಯಿತು. ಚಂದಾಪುರ ಪುರಸಭೆ ಕಚೇರಿ ಮುಂದೆ ನೋಡ ನೋಡುತ್ತಿದ್ದಂತೆ ಅಂಗಡಿಗಳ ಶೀಟ್‌ಗಳು ಹಾರಿ ಹೋದವು. ಜತೆಗೆ ಹೂವು, ಹಣ್ಣು ನೀರುಪಾಲಾಗಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಧಾರಕಾರ ಮಳೆ ಸುರಿಯಿತು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

ಶಿಕ್ಷಣ ಎಂದರೆ ಮಕ್ಕಳು ನಲಿಯುತ್ತ ಕಲಿಯುವುದು. ಆಡುತ್ತ, ನಲಿಯುತ್ತ, ಎಲ್ಲರೊಂದಿಗೆ ಬೆರೆಯುತ್ತ ಜ್ಞಾನವನ್ನು ವೃದ್ಧಿಸಿಕೊಳ್ಳುವುದು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಅಂಕಗಳ ಹಿಂದೆ ಓಡಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸುವ, ಮೊದಲ ರ‍್ಯಾಂಕ್‌ ಪಡೆಯುವ, ಆಟ ಬಿಟ್ಟು ಪಾಠದತ್ತ ಹೆಚ್ಚು ಗಮನ ಹರಿಸುವ, ಎಫರ್ಟ್‌ ಹೆಸರಲ್ಲಿ, ಅಂಕ ಸಾಧನೆ ಹೆಸರಲ್ಲಿ ಇನ್ನಿಲ್ಲದ ಒತ್ತಡ ಅವರ ಮೇಲಿದೆ. ಇಂತಹ ಸಮಸ್ಯೆಗಳ ಮಧ್ಯೆಯೇ, ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುವುದು ಮಕ್ಕಳ ಶೈಕ್ಷಣಿಕ ಏಳಿಗೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ, ಇ-ಮೇಲ್‌ ಮೂಲಕ ಬೆದರಿಕೆ ಹಾಕುವ, ಭಯವನ್ನು ಹುಟ್ಟಿಸುವ ‘ಭಯೋತ್ಪಾದಕರಿಗೆ’ ತಕ್ಕ ಶಾಸ್ತಿ ಆಗಬೇಕಿದೆ.

VISTARANEWS.COM


on

School Children
Koo

ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ (E-Mail) ಮೂಲಕ ಬೆದರಿಕೆ ಒಡ್ಡುವುದು, ಆ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗುವುದು, ಇದರಿಂದ ಎಲ್ಲೆಡೆ ಇದು ಸುದ್ದಿಯಾಗುವಂತೆ ಮಾಡುವ ಹೀನಾತಿಹೀನ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಸೋಮವಾರ (ಮೇ 6) ಅಹಮದಾಬಾದ್‌ನಲ್ಲಿ ಹಲವು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಇನ್ನು, ಮೇ 1ರಂದು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NRC) ಸುಮಾರು 200ಕ್ಕೂ ಅಧಿಕ ಶಾಲೆಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಮೇಲ್‌ಗಳನ್ನು (Hoax Bomb Threat) ಕಳುಹಿಸಲಾಗಿತ್ತು. ಸಹಜವಾಗಿಯೇ ಇದು ದೇಶಾದ್ಯಂತ ಸುದ್ದಿಯಾಯಿತು. ಶಾಲೆಗಳಿಂದ ಮಕ್ಕಳನ್ನು ಕೂಡಲೇ ಮನೆಗೆ ಕಳುಹಿಸಲಾಯಿತು. ಪೋಷಕರೂ ಶಾಲೆಗಳಿಗೆ ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋದರು. ಈಗಲೂ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಕರೆಸಿಕೊಳ್ಳಲು ಶಿಕ್ಷಕರಿಗೂ ಧೈರ್ಯ ಸಾಲುತ್ತಿಲ್ಲ. ಒಟ್ಟಿನಲ್ಲಿ ಕಿಡಿಗೇಡಿಗಳು ಮಾಡುವ ಉಪದ್ವ್ಯಾಪದಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಮುಳುಗಿದ್ದಾರೆ. ಹಾಗಾಗಿ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆಯೊಡ್ಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನಾಮಧೇಯ ವ್ಯಕ್ತಿಗಳು ಮೇಲ್‌ ಮಾಡುವುದು, ತನಿಖೆ ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸುವುದು, ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿರುವುದರಿಂದ ಇದೊಂದು ದೊಡ್ಡ ವಿಷಯ ಅಲ್ಲ, ನಿರ್ಲಕ್ಷಿಸುವುದು ಒಳಿತು ಎಂದು ಎನಿಸಿದರು, ಹುಸಿ ಬೆದರಿಕೆಗಳು ಅತಿ ಹೆಚ್ಚು ಆತಂಕ ಸೃಷ್ಟಿಸುತ್ತಿವೆ, ಮಕ್ಕಳ ಜತೆಗೆ ಪೋಷಕರ ಮೇಲೂ ಪರಿಣಾಮ ಬೀರುತ್ತಿವೆ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ತುಂಬ ಮುಂದುವರಿದಿದೆ. ಸೈಬರ್‌ ಅಪರಾಧ ವಿಭಾಗವನ್ನೂ ತೆರೆಯಲಾಗಿದೆ. ಹಾಗಾಗಿ, ಸೈಬರ್‌ ಕ್ರೈಂ ಪೊಲೀಸರು ಇಂತಹ ಇ-ಮೇಲ್‌ ಕಡಿಗೇಡಿಗಳನ್ನು ಮಟ್ಟಹಾಕಬೇಕು. ಬೆಂಗಳೂರು, ಅಹಮದಾಬಾದ್‌, ದೆಹಲಿ ಎನ್ನದೆ, ದೇಶಾದ್ಯಂತ ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲ್ನೋಟಕ್ಕೆ ಬೇರೆ ದೇಶದ ವಿಪಿಎನ್‌ (VPN) ಬಳಸಿ ಇ-ಮೇಲ್‌ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗೊತ್ತಾದರೂ, ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಪದ್ವ್ಯಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಹುಸಿ ಬಾಂಬ್‌ ಬೆದರಿಕೆ ಕರೆಗಳು ಹತ್ತಾರು ಪರಿಣಾಮಗಳನ್ನು ಬೀರುತ್ತಿವೆ. ನಗರಗಳಲ್ಲಿ ಮಕ್ಕಳು ಪ್ರಾಣ ಭಯದಲ್ಲಿಯೇ ಶಾಲೆಗಳಿಗೆ ತೆರಳುವಂತಾಗಿದೆ. ಪೋಷಕರಂತೂ ಜೀವ ಹಿಡಿದುಕೊಂಡು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುಮಾರು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಇದು ನೂರಾರು ಶಾಲೆಗಳಲ್ಲಿ ಆತಂಕ ಸೃಷ್ಟಿಸಿತ್ತು. ಎಷ್ಟೋ ದಿನಗಳವರೆಗೆ ಪೋಷಕರು ಮಕ್ಕಳನ್ನು ಶಾಲೆಗಳಿಗೇ ಕಳುಹಿಸರಲಿಲ್ಲ. ಶಾಲೆಗಳ ಆಡಳಿತ ಮಂಡಳಿಗಳೂ ಅಷ್ಟೇ, ಸುಮ್ಮನೆ ಅಪಾಯವನ್ನು ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಮಕ್ಕಳನ್ನು ಹಲವು ದಿನಗಳವರೆಗೆ ಶಾಲೆಗೆ ಕರೆಸಿರಲಿಲ್ಲ. ಈಗ, ದೆಹಲಿ ಹಾಗೂ ಅಹಮದಾಬಾದ್‌ ಶಾಲೆಗಳು, ಮಕ್ಕಳು ಮತ್ತು ಪೋಷಕರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ.

ಮಕ್ಕಳಿಗೆ ಜೀವ ಭಯ, ಪೋಷಕರು ಹಾಗೂ ಶಿಕ್ಷಕರಿಗೆ ಆತಂಕ ಮಾತ್ರವಲ್ಲ, ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಮಕ್ಕಳ ಶೈಕ್ಷಣಿಕ ಏಳಿಗೆಯ ಮೇಲೆಯೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪದೇಪದೆ ಬೆದರಿಕೆ ಒಡ್ಡಿದರೆ ಮಕ್ಕಳು ಶಾಲೆಗಳಿಗೆ ಹೋಗುವುದಿಲ್ಲ. ಇದರಿಂದ ಅವರು ಪಠ್ಯವನ್ನು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಇನ್ನು, ಎಳೆಯ ವಯಸ್ಸಿನಲ್ಲೇ ಅವರು ಆತಂಕದಲ್ಲಿ ಶಾಲೆಗೆ ಹೋದರೆ, ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಯಾದ ಹೋಮ್‌ ವರ್ಕ್‌, ಆಟ-ಪಾಠಗಳಿಗೆ ಕಡಿಮೆ ಸಮಯ ಸಿಗುತ್ತಿದೆ. ಅತಿಯಾದ ಸ್ಪರ್ಧೆಯಿಂದ ಮಕ್ಕಳು ಅಂಕಗಳ ಹಿಂದೆ ಓಡಬೇಕಾದ, ರ‍್ಯಾಂಕ್‌ ಪಡೆಯಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದ ಮಕ್ಕಳು ನಾಲ್ಕೈದು ವರ್ಷದಿಂದಲೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಅಷ್ಟಕ್ಕೂ ಶಿಕ್ಷಣ ಎಂದರೆ, ನಲಿಯುತ್ತ ಕಲಿಯುವುದಾಗಿದೆ. ಒತ್ತಡವಿಲ್ಲದೆ, ಆಡುತ್ತ, ನಲಿಯುತ್ತ, ಬೆರೆಯುತ್ತ ಜ್ಞಾನ ಸಂಪಾದಿಸುವುದಾಗಿದೆ. ಆದರೆ, ಈಗ ಬಾಂಬ್‌ ಬೆದರಿಕೆಯ ಆತಂಕವೂ ಮಕ್ಕಳಲ್ಲಿ ಮೂಡಿದರೆ, ಅದು ಸುದೀರ್ಘ ಅವಧಿಗೆ ಅವರನ್ನು ಕಾಡಲಿದೆ. ಶೈಕ್ಷಣಿಕ ಏಳಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕವಾಗಿಯೂ ಅವರು ಕುಗ್ಗಿಹೋಗಲಿದ್ದಾರೆ. ಇದರ ಮಧ್ಯೆಯೇ, ಹುಸಿ ಬಾಂಬ್‌ ಬೆದರಿಕೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ, ಈ ಸಮಸ್ಯೆಗೊಂದು ಕ್ಷಿಪ್ರವಾಗಿ ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ, ಶೈಕ್ಷಣಿಕ ವಾತಾವರಣವನ್ನೇ ಹಾಳುತ್ತಿರುವ ‘ಇ-ಮೇಲ್‌ ಭಯೋತ್ಪಾದಕರಿಗೆ’ ಕಠಿಣ ಶಿಕ್ಷೆಯಾಗಬೇಕಿದೆ.

ಇದನ್ನೂ ಓದಿ: ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Continue Reading
Advertisement
Lok Sabha Election-2024
ಕರ್ನಾಟಕ18 mins ago

ಇಂದು 2ನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

SSLC exam results to be announced soon
ಕರ್ನಾಟಕ18 mins ago

SSLC Exam Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೀಘ್ರ; ಇಲ್ಲಿದೆ ಮಹತ್ವದ ಮಾಹಿತಿ

Lemon picking⁠
ಲೈಫ್‌ಸ್ಟೈಲ್18 mins ago

Tips To Find The Juiciest Lemon: ಜ್ಯೂಸಿಯಾದ ನಿಂಬೆಹಣ್ಣನ್ನು ಮಾರುಕಟ್ಟೆಯಿಂದ ಆರಿಸಿ ತರುವುದೂ ಒಂದು ಕಲೆ! ಇಲ್ಲಿವೆ ಟಿಪ್ಸ್

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಮಾತೇ ಕಂಟಕ; ಕುಟುಂಬದಲ್ಲಿ ಕಲಹ

Bengaluru Rain
ಕರ್ನಾಟಕ6 hours ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ6 hours ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ6 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ7 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ7 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ11 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ12 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ12 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌