Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್! - Vistara News

ಕರ್ನಾಟಕ

Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್!

Kannada Name plate: ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದ್ದಕ್ಕೆ ಸರ್ಕಾರ ಬಂಧನ ಮಾಡಿರುವುದು ಖಂಡನಾರ್ಹ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ (TA Narayana Gowda) ಸೇರಿ ಕಾರ್ಯಕರ್ತರನ್ನು ಬಿಡುಗಡೆ ಮಾಡದಿದ್ದರೆ ಬೆಂಗಳೂರು ಬಂದ್‌ ಮಾಡಲಾಗುವುದು ಎಂದು ಕರವೇ ‌ಮತ್ತೊಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Karave protest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ (TA Narayana Gowda) ಸೇರಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಂಧನ ಆಗಿರುವವರನ್ನು ಶೀಘ್ರ ಬಿಡುಗಡೆ ಮಾಡದೆ ಹೋದರೆ ಬೆಂಗಳೂರು ಬಂದ್ ಮಾಡಲಾಗುವುದು ಎಂದು ಕರವೇ ಮತ್ತೊಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕನ್ನಡ ನಾಮಫಲಕ ಕಡ್ಡಾಯ (Kannada Name plate Compulsory) ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Kannada Rakshana Vedike) ಹೋರಾಟ ನಡೆಸಿದ್ದಕ್ಕೆ ಸರ್ಕಾರ ಬಂಧನ ಮಾಡಿರುವುದು ಖಂಡನಾರ್ಹ ಎಂದು ಕಿಡಿಕಾರಿದ್ದಾರೆ.

ಈ ಸಂಬಂಧ ಕರವೇ ಬಣಗಳು ಒಂದಾಗಿದ್ದು, ಕರವೇ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ವಸಂತ ನಗರದ ಟೆನ್ನಿಸ್ ಕ್ಲಬ್‌ನಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಸಾಹಿತಿಗಳು ಸೇರಿದಂತೆ ಕನ್ನಡಪರ ಸಂಘಟನೆಗಳವರು ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್ ಶೆಟ್ಟಿ, ನಮ್ಮಲ್ಲಿ ಸಾವಿರ ಭಿನಾಭಿಪ್ರಾಯಗಳು ಇರಬಹುದು. ಆದರೆ, ಕನ್ನಡದ ವಿಚಾರ ಬಂದಾಗ ನಾವೆಲ್ಲ ಒಂದೇ ಆಗಿದ್ದೇವೆ. ಅಮಾಯಕರನ್ನು ಇವತ್ತು ಜೈಲಿಗೆ ಹಾಕಿದ್ದಾರೆ. ವಾರಕ್ಕೆ ಮೂರು ಬಾರಿ ಕೋರ್ಟ್‌ನಲ್ಲಿ ಓಡಾಡುವ ಸ್ಥಿತಿ ಬಂದಿದೆ. ಯಾವುದೇ ರಾಜಕೀಯ ಪಕ್ಷಗಳು ವಿರೋಧ ಪಕ್ಷದಲ್ಲಿ ಇದ್ದಾಗ ನಮಗೆ ಬೆಂಬಲ ನೀಡುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ನಮ್ಮ ಮೇಲೆ ಲಾಠಿ ಏಟು ಕೊಡುತ್ತಾರೆ. ನಾವು ಉದ್ದೇಶಪೂರ್ವಕವಾಗಿ ಕಲ್ಲು ಹೊಡೆದಿಲ್ಲ. ಹೋರಾಟ ಮಾಡುವಾಗ ಒಂದೆರಡು ಕಲ್ಲು ಬಿಸಾಡಿರಬಹುದು. ಬೆಂಗಳೂರಿನಲ್ಲಿ ಕನ್ನಡಿಗರು ಬದುಕಲು ಆಗುತ್ತಿಲ್ಲ. ಧರ್ಮದ ಪರ ಹೋರಾಟ ಮಾಡಿದವರ ವಿರುದ್ಧ ಹಾಕಿರುವ ಕೇಸ್ ಅನ್ನು ವಾಪಸ್‌ ಪಡೆಯುತ್ತೀರಿ. ಅದೇ ರಾಜ್ಯಕ್ಕಾಗಿ, ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಹಾಕಲಾಗಿರುವ ಕೇಸ್‌ ಅನ್ನು ಏಕೆ ವಾಪಸ್‌ ತೆಗೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ವಾಣಿಜ್ಯ ಮಳಿಗೆಗಳಲ್ಲಿ ಶೇ. 60ರಷ್ಟು ಕನ್ನಡ ಬಳಸುವ ಕಾನೂನನ್ನು ಸರ್ಕಾರ ಮಾಡಿದೆ. ಆದರೆ, ಪ್ರತಿ ಸರ್ಕಾರವು ವಿರೋಧ ಪಕ್ಷದಲ್ಲಿದ್ದಾಗ ನಮಗೆ ಬೆಂಬಲ ನೀಡುತ್ತದೆ. ಆದರೆ, ಆಡಳಿತಕ್ಕೆ ಬಂದಾಗ ಬೂಟೇಟು ನೀಡುತ್ತದೆ. ನಮಗೂ ಹೆಂಡತಿ ಮಕ್ಕಳು ಇದ್ದಾರೆ ಸ್ವಾಮಿ. ಫೆಬ್ರವರಿ ಒಳಗೆ ಶೇ. 60ರಷ್ಟು ಕನ್ನಡ ನಾಮಫಲಕ ಜಾರಿಯಾಗಬೇಕು ಎಂದು ಪ್ರವೀಣ್‌ ಶೆಟ್ಟಿ ಆಗ್ರಹಿಸಿದರು.

ಹಳೇ ದಿನ ನೆನಪು ಮಾಡಿಕೊಳ್ಳಿ; ಸಿಎಂ-ಡಿಸಿಎಂಗೆ ದೊಡ್ಡರಂಗೇಗೌಡ ಸಲಹೆ

ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ವಿಷಮ ಸ್ಥಿತಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಇದೇ ವಿಷಮ ಸ್ಥಿತಿ ತಮಿಳುನಾಡಿಗೆ ಬಂದಿದ್ದರೆ ಅದರ ಕಥೆಯೇ ಬೇರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿಲುವು ಸರಿಯಲ್ಲ. ಹೋಗಿ ಹೋಗಿ ಕನ್ನಡದ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಅವರೆಲ್ಲ ತಮ್ಮ ತಾರುಣ್ಯದ ದಿನಗಳನ್ನು ನೆನಪು ಮಾಡಿಕೊಳ್ಳಲಿ ಎಂದು‌ ಕಿಡಿಕಾರಿದರು.

ಅವರೆಲ್ಲ ಹೋರಾಟ ಮಾಡುವಾಗ ಕನ್ನಡ ಇರಲಿಲ್ವಾ? ಈಗ ಅಧಿಕಾರ ಸಿಕ್ಕ ಕೂಡಲೇ ಕ್ರಮ ತೆಗೆದುಕೊಳ್ಳುವುದೇ? ನಾವು ಸುಮ್ಮನೆ ಜಗಳಕ್ಕೆ ಹೋಗಲ್ಲ. ಲಾಠಿ ಇದೆ ಅಂತಾ ಎಲ್ಲರನ್ನು ಹೊಡೆದುಕೊಂಡು ಬಂದರೆ ಸುಮ್ಮನೆ ಇರಲ್ಲ. ಸರ್ಕಾರ ಪ್ರತಿಭಟನೆಯನ್ನು ಕೊಂದು ಹಾಕುತ್ತಿದೆ. ಎಲ್ಲವೂ ಸುಸೂತ್ರವಾಗಿದ್ದರೆ ನಾವು ಹೋರಾಟ ಮಾಡುತ್ತೇವಾ? ಮುಗ್ದ ಕನ್ನಡಿಗರ ಮೇಲೆ ಲಾಠಿ ಪ್ರಹಾರ ಮಾಡುತ್ತೀರಾ? ಎಂದು ದೊಡ್ಡರಂಗೇಗೌಡ ಪ್ರಶ್ನೆ ಮಾಡಿದರು.

ನೀವು ಕನ್ನಡ ಕಲಿಯಲೇ ಬೇಕು!

ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವವರಿಗೆ ಒಂದು ಮಾತನ್ನು ಹೇಳುತ್ತೇನೆ. ನೀವು ಕನ್ನಡ ಕಲಿಯಲೇಬೇಕು, ಕಲಿಯುವ ಹಾಗೇ ನಾವು ಮಾಡುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ನಾವು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ. ನಮಗೂ ಸ್ವಾಭಿಮಾನ ಇದೆ. ಅಕ್ಕರೆಯ ಸ್ವಾಭಿಮಾನವೇ ನಮ್ಮ ಅಸ್ತ್ರ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳೋಕೆ ಸಾಧ್ಯ ಇಲ್ಲ. ಕನ್ನಡದ ಎಲ್ಲ ಶಕ್ತಿಗಳು ಇದನ್ನು ಖಂಡಿಸಬೇಕಾಗಿದೆ. ಸ್ಫೋಟವಾಗುವ ಕಾಲ ಸಮೀಪವಿದೆ. ನಾವು ಸುಮ್ಮ ಸುಮ್ಮನೆ ಕಾಲು ಕೆರದುಕೊಂಡು ಜಗಳಕ್ಕೆ ಬರೋದಿಲ್ಲ. ಈ ರೀತಿ ನಮ್ಮನ್ನು ಶೋಷಣೆ ಮಾಡಿ ಹಿಂಸೆ ಕೊಟ್ಟರೆ ನಾವು ಏನು ಮಾಡುವುದು? ಅನ್ಯಾಯ ಆಗುತ್ತಿರುವಾಗ ನಾವು ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ನಿಮ್ಮ ಸಂಕಲ್ಪವನ್ನು ಬದಲಿಸುವ ಮಾರ್ಗ ನಮಗೆ ಗೊತ್ತು

ಎಲ್ಲ ಸಾಹಿತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ. ಎಲ್ಲ ಮನೆ ಮನಗಳಲ್ಲಿ ಕನ್ನಡ ರಾರಾಜಿಸಬೇಕು. ಬೇರೆ ರಾಜ್ಯದಿಂದ ಬಂದು ಇಲ್ಲಿ ಇರುವವರು ಕನ್ನಡ ಕಲಿಯಲೇಬೇಕು. ಅನ್ನ ಕೊಡುವ ತಾಯಿಯನ್ನು ಲೆಕ್ಕಿಸದೆ ನೀವು ಇಲ್ಲಿ ಬದುಕುತ್ತಿದ್ದೀರಾ? ನಿಮ್ಮ ಸಂಕಲ್ಪವನ್ನು ಬದಲಿಸುವ ಮಾರ್ಗ ನಮಗೆ ಗೊತ್ತು. ನಾರಾಯಣ ಗೌಡರೇ ನಿಮ್ಮ ಜತೆ ನಾವಿದ್ದೇವೆ. ನಿಮಗೆ ಯಾವುದೇ ತೊಂದರೆ ಆಗದಂತೆ ನಾವಿದ್ದೇವೆ. ಪೊಲೀಸರೇ ಲಾಠಿ ಇದೆಯೆಂದು ಬೀಸುವುದಲ್ಲ. ನಾವು ಒಗ್ಗಟ್ಟಿನ ಬೆಂಬಲವನ್ನು ಕೊಡುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ಮಗನನ್ನು ಬಿಡದೇ ಇದ್ದರೆ ಅನ್ನ – ನೀರು ಬಿಟ್ಟು ಸಾಯುವೆ: ಗೌರಮ್ಮ

ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರ ತಾಯಿ ಗೌರಮ್ಮ ಮಾತನಾಡಿ, ನನ್ನ ಮಗ ಕನ್ನಡಪರ ಹೋರಾಟ ಮಾಡುತ್ತಿದ್ದಾನೆ. ನಿಮ್ಮಗೆ ನಾಚಿಕೆ ಆಗಲ್ವಾ? ನನ್ನ ಮಗನನ್ನು ಏಕೆ ಜೈಲಿಗೆ ಹಾಕಿದ್ದೀರಾ? ನನ್ನ ಮಗನನ್ನು ಬಿಡದೇ ಹೋದರೆ ನಾನು ಅನ್ನ ನೀರು ಬಿಟ್ಟು ಸಾಯುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೇವಲ ಪೇಪರ್‌ನಲ್ಲಿ ಆದೇಶ

ಚಿತ್ರ ನಿರ್ಮಾಪಕ ಸಾರಾ ಗೋವಿಂದ್ ಮಾತನಾಡಿ, ಡಾ.ರಾಜಕುಮಾರ್ ಅವರ ಜತೆ ಕನ್ನಡ ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ 41 ವರ್ಷಕ್ಕೆ ಕಾಲಿಟ್ಟಿದ್ದೇನೆ. ನಮ್ಮಲ್ಲಿ ಎಷ್ಟೇ ಭಿನಾಭಿಪ್ರಾಯ ಇರಲಿ. ಇಂತಹ ಸಂದರ್ಭದಲ್ಲಿ ನಾವೆಲ್ಲ ಕನ್ನಡ ಹೋರಾಟಗಾರರ ಪರವಾಗಿ ಇರಬೇಕು. ನಮ್ಮಲ್ಲಿಯೇ ಅಪಸ್ವರ ಇರಬಾರದು. ಕರ್ನಾಟಕ ಇವತ್ತು ಎಷ್ಟು ಬೆಳೆದಿದೆ ಎಂಬುದನ್ನು ಒಮ್ಮ ಅವಲೋಕನ ಮಾಡಿಕೊಳ್ಳಿ. ನಾನು ಒಬ್ಬ ಮುಖ್ಯಮಂತ್ರಿಗೆ ಹೇಳಲ್ಲ. ಎಲ್ಲ ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದೆಲ್ಲ ಇದುವರೆಗೂ ಎಲ್ಲರೂ ಆದೇಶ ಮಾಡಿದ್ದಾರೆ. ಇದು ಕೇವಲ‌ ಪೇಪರ್‌ನಲ್ಲಿ ಇರುವ ಆದೇಶವಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Karave Protest: ಇಂಗ್ಲಿಷ್‌ ನಾಮಫಲಕಕ್ಕೆ ಮಸಿ ಬಳಿಯಬೇಡಿ; ಹೀಗಾದ್ರೆ ಹೂಡಿಕೆಗೆ ಯಾರೂ ಬರಲ್ಲ: ಎಂ.ಬಿ. ಪಾಟೀಲ್

Karave protest
ಕರವೇ ಅಧ್ಯಕ್ಷ ನಾರಾಯಣಗೌಡರು ಮತ್ತು ಕಾರ್ಯಕರ್ತರನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಕನ್ನಡ ಪರ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಪ್ರತಿಭಟನೆ ನಡೆಸಿದರು. ಆಪ್‌ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಜತೆಗಿದ್ದರು.

ಕಾವೇರಿಗಾಗಿ ನಾವು ಹೋರಾಟ ಮಾಡಬೇಕು, ಕಳಸಾ ಬಂಡೂರಿಗಾಗಿಯೂ ನಾವೇ ಹೋರಾಟ ಮಾಡಬೇಕು. ಎಲ್ಲದಕ್ಕೂ ನಾವೇ ಹೋರಾಟ ಮಾಡಿದ್ದೇವೆ. ಆಗ ಕೆಲವರು ನೈತಿಕ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಅದೆಲ್ಲ ಈಗ ಬೇಡ ನಾವು ಈಗ ಜೈಲಿನಲ್ಲಿರುವವರ ಪರವಾಗಿ ನೇರವಾಗಿ ಬೆಂಬಲ ನೀಡುತ್ತಾ ಇದ್ದೇವೆ ಎಂದು ಸಾರಾ ಗೋವಿಂದ್‌ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕೊಡಗು

Murder Case : ತೆಲಂಗಾಣ ಉದ್ಯಮಿ ಕೊಲೆ ಕೇಸ್‌; ಸ್ಥಳ ಮಹಜರು ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತ ಆರೋಪಿ

Murder Case : ತೆಲಂಗಾಣ ಉದ್ಯಮಿ ಕೊಲೆ ಪ್ರಕರಣದ ಆರೋಪಿ ಸ್ಥಳ ಮಹಜರು ವೇಳೆ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

VISTARANEWS.COM


on

By

Murder Case
Koo

ಬೆಂಗಳೂರು: ಕೊಲೆ ಆರೋಪಿಯನ್ನು (Murder Case) ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣ ರಾಜ್ಯದ ಉಪ್ಪಳ್‌ನಲ್ಲಿ ನಡೆದಿದೆ. ತೆಲಂಗಾಣದಲ್ಲಿ ಉದ್ಯಮಿಯನ್ನು ಹತ್ಯೆ ನಡೆಸಿ ಬಳಿಕ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಪನ್ಯದ ಎಸ್ಟೇಟ್‌ನಲ್ಲಿ ಸುಟ್ಟುಹಾಕಿದ್ದರು. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದರು.

ಓರ್ವ ನ್ಯಾಯಾಂಗ ಬಂಧನವಾಗಿದ್ದು, ಉಳಿದ ಇಬ್ಬರು ಆರೋಪಿಗಳ ಪೈಕಿ ಅಂಕುರ್ ರಾಣಾ ಠಾಕೂರ್‌ನನ್ನು ಎರಡು ದಿನಗಳ ಹಿಂದೆ ತೆಲಂಗಾಣಕ್ಕೆ ಮಹಜರು ನಡೆಸಲು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆರೋಪಿ ಪರಾರಿ ಸಂಬಂಧ ತೆಲಂಗಾಣ ಉಪ್ಪಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ ಕೊಡಗಿನ ಎರಡು ಎಕ್ಸ್ ಪರ್ಟ್ ಟೀಮ್ ಕೂಡ ತೆಲಂಗಾಣಕ್ಕೆ ತೆರಳಿದ್ದು ಹುಟುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಕೊಡಗು: ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Murder case) ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಭೇದಿಸಿ ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.

ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದಲ್ಲಿ ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು.

Murder Case
ಬಂಧಿತ ಆರೋಪಿಗಳು

ನಿಹಾರಿಕ ತಾನು 10ನೇ ತರಗತಿಯಲ್ಲಿ ಇರುವಾಗಲೇ ಮದುವೆಯಾಗಿದ್ದಳು. ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋಸ್‌ ಕೊಟ್ಟು ದೂರವಾಗಿದ್ದಳು. ಬಳಿಕ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು. ಈ ಅಂಕುರ್‌ ಮೂಲಕ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ನಿಹಾರಿಕ, ನಿಖಿಲ್‌ ಜತೆಗೂ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದರು. ಆಸ್ತಿ ನೀಡದೇ ಇದ್ದದ್ದಕ್ಕೆ ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ.

Continue Reading

ಗದಗ

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

HK Patil: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ರಾಜಕಾರಣಿ ಹಾಗೂ ಸಚಿವ ಎಚ್.ಕೆ.ಪಾಟೀಲ್‌ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ ಡಿ.ಕೆ ಎಂದು ಹೇಳಿ ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

By

HK patil
Koo

ಗದಗ: ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ‌‌ ಮೇಲೆ ಎಲ್ಲರ ಕಣ್ಣಿದೆ. ಕಾರಣ ಮುಡಾ ಹಗರಣ‌‌ ಎದುರಿಸುತ್ತಿರುವ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಮುಡಾ ಹಗರಣದಿಂದ‌ ಖಾಲಿಯಾಗುತ್ತೆ ಅನ್ನೋ ಬಿಸಿ‌ಬಿಸಿ ಚರ್ಚೆ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿಕರೀಸುವಂತೆ ಗದಗದಲ್ಲಿ ಸಚಿವ ಎಚ್‌ಕೆ ಪಾಟೀಲ್‌ (HK Patil) ಮುಖ್ಯಮಂತ್ರಿ ಹೆಸರನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿ.ಕೆ ಶಿವಕುಮಾರ್‌ ಹೆಸರು ಪ್ರಸ್ತಾಪಿಸಿ, ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡಿದ್ದಾರೆ.

ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ‌ ಶುಕ್ರವಾರ ಅದ್ಧೂರಿ 66ನೇ ಕನ್ನಡ ರಾಜ್ಯೋತ್ಸವ ಜರುಗಿತು. ‌ಈ ವೇಳೆ ಜಿಲ್ಲಾ ಉಸ್ತುವಾರಿ‌ ಸಚಿವ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವೇದಿಕೆ ಮೇಲೆ ಭಾಷಣದ‌ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಬದಲಾಗಿ, ಡಿಕೆ ಎಂದು ಪ್ರಸ್ತಾಪಿಸಿ, ತಕ್ಷಣ ಎಚ್ಚೆತ್ತು,‌ ಸಿದ್ಧರಾಮಯ್ಯ‌ ಎಂದು ಮುಂದುವರೆದು,‌ ಉಪಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ್‌ ಅವರು ಎಂದೇಳಿ, ತಮ್ಮ ಭಾಷಣ ಮುಂದುವರೆಸಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ‌ ನಾಮಕರಣದ ಐವತ್ತರ‌ ಸಂಭ್ರಮಾಚರಣೆಯನ್ನು ಕಳೆದ ವರ್ಷ 2023ರ ನವಂಬರ್, 1,2,3 ರಂದು ಮೂರು‌ ದಿನಗಳ‌ ಕಾಲ ಗದಗ ನಗರದ ಸೊಸೈಟಿಯ ಆವರಣದಲ್ಲಿ ನಡೆದಿತ್ತು.‌ ಗತವೈಭವ ಮರುಕಳಿಸುವ ಹಾಗೆ, ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಎಲ್ಲ ಜನತೆ‌ ಸಾಕ್ಷಿಯಾಗಿದ್ದೀರಿ. ನಾಡಿನ ಮುಖ್ಯಮಂತ್ರಿಗಳಾದ ಡಿ.ಕೆ (ತಕ್ಷಣ ಎಚ್ಚೆತ್ತು ಭಾಷಣದ ಪ್ರತಿ ತೀಕ್ಷ್ಣವಾಗಿ ವೀಕ್ಷಿಸಿ) ಮಾನ್ಯ‌ ಸಿದ್ಧರಾಮಯ್ಯನವರು,‌ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ, ಸಚಿವ ಸಂಪುಟದ ಎಲ್ಲ‌ ಸಹೋದ್ಯೋಗಿಗಳು ಈ‌ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿ, ಮುಂದೆ ತಮ್ಮ ಭಾಷಣದ ಸಂದೇಶವನ್ನು ಮುಂದುವರಿಸಿದ್ದಾರೆ.

ಸಿದ್ದರಾಮಯ್ಯನವರ ಸಂಪುಟದಲ್ಲಿ ‌ಅತ್ಯಂತ‌ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಎಚ್.ಕೆ.ಪಾಟೀಲ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿಯೂ ಒಬ್ಬರಾಗಿದ್ದಾರೆ.‌ ದೀಪಾವಳಿ‌ ಶುಭ‌ ಸಂದರ್ಭದಲ್ಲಿ ಸಚಿವರ ಬಾಯಲ್ಲಿ, ಡಿಕೆಶಿ ಮುಖ್ಯಮಂತ್ರಿಯಾಗಿದ್ದು ಅಚಾನಕ್ ಆಗಿ ಆದ ಅಚಾತುರ್ಯವೋ,‌ ಅಥವಾ ಸಚಿವರ ಆಂತರ್ಯದ ನುಡಿಯೋ ಎಲ್ಲವೂ ಕಾಕತಾಳಿಯ‌ ಎಂಬಂತಿದೆ.

Continue Reading

ಸಿನಿಮಾ

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dolly Dhananjay : ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಜೋಡಿ ಹಸೆಮಣೆ ಏರಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಡಾಲಿ ಧನಂಜಯ್‌ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

VISTARANEWS.COM


on

By

Dolly Dhananjay
Koo

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನಟರಾಕ್ಷಸ ಡಾಲಿ ಧನಂಜಯ್‌ (Dolly Dhananjay) ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಹಲವು ದಿನಗಳ ಮೌನಕ್ಕೆ ತೆರೆ ಎಳೆದಿರುವ ಧನಂಜಯ್ ಬೆಳಕಿನ ಹಬ್ಬ ದೀಪಾವಳಿಯಂದು ಬಾಳ ಸಂಗತಿಯನ್ನು ಪರಿಚಯಿಸಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಡಾಕ್ಟರ್ ಧನ್ಯತಾ ಜತೆಗೆ ಸಪ್ತಪದಿ ತುಳಿಯಲಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16 ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year

ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನ್ಯತಾ ಹಾಗೂ ಧನಂಜಯ್‌ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಸೌತ್ ಸಿನಿಮಾ ಇಂಡಸ್ಟ್ರಿ ತಾರೆಯರು ಹಾಗು ಹಲವು ರಾಜಕೀಯ ಗಣ್ಯರು ಡಾಲಿ ಧನಂಜಯ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ವಿಭಿನ್ನ ರೀತಿಯ ಫೋಟೊಶೂಟ್‌ ನಡೆಸಿ ತಮ್ಮ ಹುಡುಗಿಯನ್ನು ಪರಿಚಯಿಸಿದ ಡಾಲಿ ಧನಂಜಯ್‌

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year
Continue Reading

ಸಿನಿಮಾ

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

Actor Darshan: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, 6 ವಾರಗಳ ನಂತ್ರ ಮತ್ತೆ ಸರೆಂಡರ್‌ ಆಗಬೇಕಿದೆ

VISTARANEWS.COM


on

By

Hc grants interim bail to actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶ ನೀಡಿದೆ.

ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಏನಿದು ಕೊಲೆ ಕೇಸ್‌?

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಪವಿತ್ರಾಗೌಡ ಖುಷಿ

ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.

Continue Reading
Advertisement
Murder Case
ಕೊಡಗು20 ಗಂಟೆಗಳು ago

Murder Case : ತೆಲಂಗಾಣ ಉದ್ಯಮಿ ಕೊಲೆ ಕೇಸ್‌; ಸ್ಥಳ ಮಹಜರು ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತ ಆರೋಪಿ

Dina Bhavishya
ಭವಿಷ್ಯ1 ದಿನ ago

Dina Bhavishya : ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸುವಿರಿ

HK patil
ಗದಗ2 ದಿನಗಳು ago

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

Dolly Dhananjay
ಸಿನಿಮಾ2 ದಿನಗಳು ago

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dina Bhavishya
ಭವಿಷ್ಯ2 ದಿನಗಳು ago

Dina Bhavishya : ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ4 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ4 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು5 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು5 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ತಿಂಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌