ಕರ್ನಾಟಕ
Liquor shop : ಡಿಸಿ ಸಾಹೇಬರೇ.. ನಮಗೊಂದು ವೈನ್ ಶಾಪ್ ಕೊಡಿ! ಇದು ಕುಡುಕರ ಬೇಡಿಕೆ
Liquor Shop : ಊರಿಗೆ ಬಾರ್ ಶಾಪ್ ಬೇಕೆಂದು ಜಿಲ್ಲಾಡಳಿತ ಭವನದ ಎದುರು ಮದ್ಯ ಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
ಕೊಪ್ಪಳ: ಕೊಪ್ಪಳದ ಜಿಲ್ಲಾಡಳಿತ ಭವನದ ಎದುರಿಗೆ ಇಂದು ತಂಡೋಪತಂಡವಾಗಿ ಬಂದಿದ್ದರು. ಅಲ್ಲಿದ್ದ ಸಿಬ್ಬಂದಿ ಗ್ರಾಮದಲ್ಲಿ ನೀರಿನ ಸಮಸ್ಯೆನೋ, ರಸ್ತೆ ಸಮಸ್ಯೆ ಅಥವಾ ಬೇರೆನೋ ಸಮಸ್ಯೆ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಸಿಬ್ಬಂದಿ ಹತ್ತಿರಕ್ಕೆ ಹೋದಾಗಲೇ ತಿಳಿದಿದ್ದು, ಕುಡುಕರು ಒಗ್ಗಟಾಗಿ ಸೇರಿ ಬಾರ್ ಬೇಕೆಂದು (Liquor shop) ಬೇಡಿಕೆ ಇಟ್ಟಿದ್ದಾರೆ ಎಂದು.
ಸಾಮಾನ್ಯವಾಗಿ ಮೂಲಭೂತ ಸೌಲಭ್ಯಗಳ ಕಲ್ಪಿಸಿ ಎಂದೋ, ಸಮಸ್ಯೆಗಳನ್ನು ಪರಿಹರಿಸಿ ಎಂದೋ ಪ್ರತಿಭಟನೆ, ಮನವಿ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಆದರೆ ತಮ್ಮೂರಲ್ಲಿ ಬಾರ್ ಆರಂಭಿಸುವಂತೆ ಜನರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಮದ್ಯಪ್ರಿಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಬಾರ್ ಓಪನ್ ಮಾಡಿ ಎಂದು ಪಟ್ಟು ಹಿಡಿದರು. ಕುದರಿಮೋತಿ ಗ್ರಾಮದಲ್ಲಿ ಶ್ರೀ ಲಿಕ್ಕರ್ಸ್ ಎನ್ನುವ ಮದ್ಯದ ಅಂಗಡಿ ಮಂಜೂರಾಗಿದೆ. ಆದರೆ ಗ್ರಾಮದ ಕೆಲವರು ಇದನ್ನು ಆರಂಭಿಸಲು ಬಿಡುತ್ತಿಲ್ಲ. ಇದರಿಂದಾಗಿ ಗ್ರಾಮದ ಮದ್ಯಪ್ರಿಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ ಬಾರ್ ಆರಂಭಿಸಬೇಕು.
ನಾವು ಬೇರೆ ಕಡೆಯಿಂದ ದುಬಾರಿ ಹಣಕ್ಕೆ ಮದ್ಯ ಖರೀದಿ ಮಾಡಬೇಕು. ಮದ್ಯ ಖರೀದಿಗೆ ಬೇರೆ ಕಡೆ ಹೋಗಬೇಕು. ಇದರಿಂದ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿಯೇ ಮದ್ಯದ ಅಂಗಡಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಬಾರ್ ಬೇಕೇ ಬೇಕು ಎಂದು ಮದ್ಯಪ್ರಿಯರು ಘೋಷಣೆ ಕೂಗಿದರು. ಅಲ್ಲದೆ ಬಾರ್ ಆರಂಭಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಉಪವಿಭಾಗಾಧಿಕಾರಿ ಮದ್ಯಪ್ರಿಯರು ಮನವಿ ಸಲ್ಲಿಸಿದರು.
ತಮ್ಮೂರಿಗೆ ಮದ್ಯದಂಗಡಿ ಬೇಕು. ಮಂಜೂರಾಗಿರುವ ಮದ್ಯದಂಗಡಿಯನ್ನು ಓಪನ್ ಮಾಡಿಸಬೇಕು ಎಂದು ಕುದರಿಮೋತಿ ಗ್ರಾಮದ ಮದ್ಯಪ್ರಿಯರು ಸಲ್ಲಿಸಿರುವ ಮನವಿಯನ್ನು ಖುದ್ದು ಕೊಪ್ಪಳ ಉಪವಿಭಾಗಾಧಿಕಾರಿ ಸ್ವೀಕರಿಸಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕುದರಿಮೋತಿ ಗ್ರಾಮದ ಮದ್ಯಪ್ರಿಯರಿಗೆ ಭರವಸೆ ನೀಡಿ ಕಳಿಸಿದ್ದಾರೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಆದರೆ ಸಕ್ರಮ ಮದ್ಯ ಮಾರಾಟಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Congress Politics : ಕೆ.ಎನ್. ರಾಜಣ್ಣಗೆ ಖಡಕ್ ವಾರ್ನಿಂಗ್ ಕೊಟ್ಟ ಸುರ್ಜೇವಾಲ!
Congress Politics : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಇದ್ದರೆ ರಾಜ್ಯ ಸರ್ಕಾರ ಪತನ ಆಗುತ್ತದೆ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಗಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ನವ ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಆದರೆ, ಪಕ್ಷದ ಆಂತರಿಕ ರಾಜಕೀಯ (Congress Politics) ಮಾತ್ರ ಹದಗೆಟ್ಟಿದೆ. ಒಬ್ಬರಾದ ಮೇಲೆ ಒಬ್ಬರು ಸರ್ಕಾರ ಹಾಗೂ ಸಚಿವರ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದು ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ಸಚಿವರ ವಿರುದ್ಧವೇ ಭ್ರಷ್ಟಾಚಾರ, ವರ್ಗಾವಣೆ ದಂಧೆ ಬಗ್ಗೆ ಆರೋಪಿಸಿ ಹಿರಿಯ ಶಾಸಕರು ಪತ್ರ ಬರೆದಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಮಾತುಗಳನ್ನಾಡಿದ್ದರು. ಈಚೆಗೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಹೋದರೆ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ಗದ್ದಲವನ್ನು ಎಬ್ಬಿಸಿತ್ತು. ಪ್ರತಿಪಕ್ಷಗಳಿಗೆ ಆಹಾರವೂ ಆಗಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Congress state in-charge Randeep Singh Surjewala) ಅವರು ಕೆ.ಎನ್. ರಾಜಣ್ಣ ಸಹಿತ ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿಯೇ ವಾರ್ನಿಂಗ್ ನೀಡಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಮೂರು ಡಿಸಿಎಂ ಸೃಷ್ಟಿ ಮಾಡಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಈಗಾಗಲೇ ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಸೂಚನೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಕೆಲ ನಾಯಕರಿಂದ ಈ ರೀತಿಯ ಹೇಳಿಕೆ ಹೊರಬರುತ್ತಿದೆ. ನಾವು ಕರ್ನಾಟಕ ಸರ್ಕಾರದ ಯೋಜನೆ ಮತ್ತು ಮಾಡೆಲ್ ಬಗ್ಗೆ ಮಾತನಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಂತ್ರ ಮಾಡುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ವಾರ್ನಿಂಗ್ ಕೊಡುತ್ತಿದ್ದೇನೆ. ಈ ರೀತಿಯ ವಿಚಾರ ಪಕ್ಷದ ಒಳಗೆಯಾಗಲಿ, ಹೊರಗಡೆಯಾಗಲಿ ಹೇಳಿಕೆ ಕೊಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ಮುಂದೆ ಹೇಳಿಕೆ ನೀಡದಂತೆ ಎಚ್ಚರಿಕೆ
ನಾನು ಈಗಾಗಲೇ ಇಂತಹ ಹೇಳಿಕೆ ಬಗ್ಗೆ ಕೆ.ಎನ್. ರಾಜಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಹೇಳಿಕೆಯನ್ನು ಮುಂದೆ ನೀಡದಿರಲು ಸೂಚನೆ ನೀಡಿದ್ದೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗಳಿಗೆ ತಿಳಿಸಿದರು.
ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೇವಾಲ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹಿಂದಿನಿಂದಲೇ ಹೇಳುತ್ತಿದ್ದೆ. ಅದು ಈಗ ಬಹಿರಂಗವಾಗಿ ಹೊರ ಬಂದಿದೆ. ಇದು ಅವಕಾಶವಾದಿ ಮೈತ್ರಿಯಾಗಿದೆ. ಸೋತ ಇಬ್ಬರಿಂದ ಮೈತ್ರಿಯಾಗಿದೆ. ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ ಎಂದು ಟಾಂಗ್ ನೀಡಿದರು.
ಹೊಸ ಮಾಡೆಲ್ ನಿರ್ಮಾಣ ಮಾಡಿದ ಕರ್ನಾಟಕ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಹೊಸ ಮಾಡೆಲ್ ಅನ್ನು ನಿರ್ಮಾಣವಾಗಿದೆ. ಇದು ಈಗ ದೇಶದ ಮಾಡೆಲ್ ಆಗಿ ಹೊರಹೊಮ್ಮಿದೆ. ನಮ್ಮ ಯೋಜನೆಗಳೆಲ್ಲವನ್ನೂ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳವರು ನಮ್ಮ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ತರುತ್ತಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!
ಭವಿಷ್ಯವನ್ನಷ್ಟೇ ನೋಡುತ್ತೇವೆ
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿರುವ ವಿಚಾರದ ಬಗ್ಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಾವು ಹಿಂದಿನದರ ಬಗ್ಗೆ ನೋಡಲ್ಲ, ಭವಿಷ್ಯದ ಬಗ್ಗೆ ನೋಡುತೇವೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ಪ್ರಮುಖ ಸುದ್ದಿ
Actor Darshan : ನಾವಷ್ಟೇ ಕಾಣ್ಸೋದಾ? ಹೇಳಿಕೆಯಿಂದ ರೈತರ ಕೆಂಗಣ್ಣಿಗೆ ಗುರಿಯಾದ ನಟ ದರ್ಶನ್; ಕ್ಷಮೆ ಯಾಚನೆಗೆ ಆಗ್ರಹ
Actor Darshan : ಕಾವೇರಿ ಹೋರಾಟ ಅಂದರೆ ನಾವು ಮಾತ್ರ ಕಾಣ್ಸೋದಾ? ೩೬ ಕೋಟಿ ಮಾಡಿದೋನು ಕಾಣಿಸೊಲ್ವಾ ಎಂಬ ನಟ ದರ್ಶನ್ ಹೇಳಿಕೆ ವಿವಾದವಾಗಿದೆ. ರೈತರು ದರ್ಶನ್ ಕ್ಷಮೆ ಯಾಚನೆಗೆ ಒತ್ತಾಯಿಸಿದ್ದಾರೆ.
ಮಂಡ್ಯ: ಕಾವೇರಿ ಹೋರಾಟ (Cauvery protest) ಎಂದ ಕೂಡಲೇ ನಿಮ್ಮ ಕಣ್ಣಿಗೆ ದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ಕಾಣೋದಾ? ಬೇರೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತಿಲ್ವ? ಎಂಬ ನಟ ದರ್ಶನ್ (Actor Darshan) ಅವರ ಹೇಳಿಕೆ ಮಂಡ್ಯದ ರೈತರ (Farmers of Mandya) ಕೆಂಗಣ್ಣಿಗೆ ಗುರಿಯಾಗಿದೆ.
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ (Mandya Jilla raitha hitha rakshana samiti) ಮಂಡ್ಯದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ದರ್ಶನ್ ಅವರ ಹೇಳಿಕೆ ಪ್ರಸ್ತಾಪವಾಗಿದೆ. ಇದೊಂದು ಬೇಜವಾಬ್ದಾರಿತನ ಹೇಳಿಕೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ನಟ ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಹೋರಾಟ ವೇಳೆ ಮಾತನಾಡಿದ ಪ್ರತಿಭಟನಾಕಾರರು, ದರ್ಶನ್ ಅವರು ರೀತಿ ಮಾತನಾಡಬಾರದಿತ್ತು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದ್ರೆ ಬಲಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನೀವು ನಮ್ಮನ್ನೇ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹೋರಾಟಕ್ಕೆ ನೀಡಿದ ಆಮಂತ್ರಣವನ್ನೇ ತಪ್ಪಾಗಿ ಭಾವಿಸಿ ಈ ರೀತಿಯಾಗಿ ಮಾತನಾಡಿದ್ದು ತಪ್ಪು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದು ಹೇಳಿದ ಪ್ರತಿಭಟನಾಕಾರರು, ನಟ ದರ್ಶನ್ ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಒಬ್ಬ ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿ ಎಂದು ಆಗ್ರಹಿಸಿದರು.
ಏನು ಹೇಳಿದ್ದರು ನಟ ದರ್ಶನ್?
ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚಿತ್ರ ನಟರು ಯಾರೂ ಯಾಕೆ ಭಾಗವಹಿಸುತ್ತಿಲ್ಲ, ಅವರೇಕೆ ಮೌನ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನೆ ಮಾಡಿದ್ದರು. ಈ ಮಾತು ಬರುತ್ತಿದ್ದಂತೆಯೇ ಚಿತ್ರ ನಟರೆಲ್ಲ ಟ್ವೀಟ್ ಮಾಡುವ ಮೂಲಕ ಬೆಂಬಲ ಸಾರಿದ್ದರು. ನಟ ದರ್ಶನ್ ಕೂಡಾ ತಮ್ಮ ಬೆಂಬಲ ನೀಡಿದ್ದರು.
ಈ ನಡುವೆ ಮೈಸೂರಿನ ಟಿ. ನರಸೀಪುರದ ಬನ್ನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು ವಿವಾದಕ್ಕೆ ತಿರುಗಿದೆ. ನನ್ನ ಈ ಮಾತು ವಿವಾದಕ್ಕೆ ಒಳಗಾಗುತ್ತದೆ, ವಿವಾದಾತ್ಮಕ ಮಾತನ್ನೇ ಆಡುತ್ತೇನೆ ಎಂದೇ ಪ್ರಸ್ತಾವಿಸಿ ಈ ಮಾತುಗಳನ್ನು ಹೇಳಿದ್ದರು.
ಇದನ್ನೂ ಓದಿ: Actor Darshan : ಕಾವೇರಿ ಹೋರಾಟಕ್ಕೆ ನಾನು, ಸುದೀಪ್, ಶಿವಣ್ಣ, ಯಶ್ ಮಾತ್ರಾ ಕಾಣ್ಸೋದಾ?; ನಟ ದರ್ಶನ್ ಆಕ್ರೋಶ
ನಟ ದರ್ಶನ್ ಅವರು ಹೇಳಿದ್ದು ಇಷ್ಟು….
- ದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಬೇರೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತಿಲ್ವ?
- ಇತ್ತೀಚೆಗೆ ತಮಿಳು ಸಿನಿಮಾ ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ ಹಂಚಿಕೆಗೆ 6 ಕೋಟಿ ರೂ. ಖರೀದಿ ಮಾಡಿದರು (ಜೈಲರ್ ಸಿನಿಮಾ ವಿತರಣೆ ಮಾಡಿದ್ದು ಜಯಣ್ಣ). ಆದರೆ ಅವರು 36-37 ಕೋಟಿ ರೂ. ಸಂಪಾದಿಸಿದರು. ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂ. ಕೊಂಡೊಯ್ಯಲು ಬಿಟ್ಟು ಈಗ ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ?
- 3.ತಮಿಳು ಸಿನಿಮಾಕ್ಕೆ 37 ಕೋಟಿ ರೂ. ಕೊಟ್ರಲ್ಲಾ ಅವರನ್ನು ಹೋರಾಟಕ್ಕೆ ಕರೆಯಿರಿ. ಕನ್ನಡಿಗರು ಕನ್ನಡ ಸಿನಿಮಾನೆ ನೋಡಲ್ಲ. ತಮಿಳು ಸಿನಿಮಾಗೆ 37 ಕೋಟಿ ಕೊಡ್ತೀರಿ. ಇಷ್ಟೆಲ್ಲ ಹಣ ಕನ್ನಡಿಗರು ಸಿನಿಮಾ ನೋಡಿದ್ರಿಂದ ತಾನೆ ಬಂದಿದ್ದು. ಕನ್ನಡಿಗರು ಸಿನಿಮಾ ಮಾಡಿದ್ರೆ ಅದನ್ನ ನೀವು ನೋಡಲ್ಲ. ನೀವು ಬೇರೆ ಭಾಷೆಗೆ ತೋರಿಸುವ ಪ್ರೀತಿ ನಮ್ಮ ಸಿನಿಮಾಗೂ ತೋರಿಸಿ. ಆ ಮೇಲೆ ಕನ್ನಡ ಕಲಾವಿದರನ್ನು ಕರೆಯಿರಿ
ಕರ್ನಾಟಕ
Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!
Cauvery water dispute : ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಜಲ ಶಕ್ತಿ ಸಚಿವಾಲಯದಿಂದ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಪತ್ರ ಬರೆದಿರುವುದನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ವಾಗತಿಸಿದ್ದಾರೆ. ಅಲ್ಲದೆ, ದೇವೇಗೌಡರ ನಡೆಯಂತೆ ಬಿಜೆಪಿಯವರೂ ಈ ವಿಚಾರವಾಗಿ ವರ್ತಿಸಲಿ ಎಂದು ಸಲಹೆ ನೀಡಿದ್ದಾರೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Cauvery water dispute : ನಾಳೆ ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ ಎಂದು ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಎಚ್.ಡಿ. ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯ ಪ್ರವೇಶಕ್ಕೆ ಒತ್ತಡ ಹೇರಬೇಕು. ಅತಿ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವಂತೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: CM Siddaramaiah : 2ನೇ ಅವಧಿಗೆ ಚಾಮರಾಜನಗರಕ್ಕೆ ಸಿಎಂ ಭೇಟಿ; ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ
ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್ ಮೂಲಕ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ್ದಾರೆ.
ಕರ್ನಾಟಕ
Cauvery Protest : ಸೆ. 27ಕ್ಕೆ ಚಾಮರಾಜನಗರ ಬಂದ್, ಸಿಎಂ ಸಿದ್ದರಾಮಯ್ಯ ಭೇಟಿಯ ದಿನವೇ ಬಿಸಿ ಮುಟ್ಟಿಸಲು ಪ್ಲ್ಯಾನ್
Cauvery Protest : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವ ಚಾಮರಾಜನಗರದಲ್ಲಿ ಈಗ ಸೆ. 27ರಂದು ಬಂದ್‌ಗೆ ಕರೆ ನೀಡಲಾಗಿದೆ. ಇದು ಸಿಎಂ ಆಗಮನದ ದಿನವೇ ಆಗಿರುವುದು ವಿಶೇಷ.
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Dispute) ಮಾಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಚಾಮರಾಜ ನಗರದಲ್ಲಿ ಪ್ರತಿಭಟನೆ (Cauvery protest) ಜೋರಾಗಿದೆ. ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ತಮಿಳುನಾಡಿನಿಂದ ಬರುವ ವಾಹನಗಳನ್ನು ತಡೆಯುವುದೂ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಇದೀಗ ಸೆಪ್ಟೆಂಬರ್ 27ರಂದು ಬಂದ್‌ಗೆ (Chamarajanagar bandh on Sep. 27) ಕರೆ ನೀಡಲಾಗಿದೆ. ಅಂದೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ಬಿಸಿ ಮುಟ್ಟಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.
ಚಾಮರಾಜನಗರದಲ್ಲಿ ಬರದ ತೀವ್ರತೆ ಜೋರಾಗಿದೆ. ಇಲ್ಲಿ ಮನುಷ್ಯರಿಗೆ ಮತ್ತು ಪ್ರಾಣಿಗಳೂ ನೀರಿಲ್ಲದ, ಮೇವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಿದ್ದರೂ ತಮಿಳುನಾಡಿಗೆ ನೀರು ಬಿಡುತ್ತಿರುವ ಕ್ರಮದ ವಿರುದ್ಧ ಬಂದ್‌ಗೆ ಕರೆ ನೀಡಲಾಗಿದೆ.
20ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್‌ನ ನಿರ್ಧಾರ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು, ವರ್ತಕರ ಸಂಘ, ರಾಜ್ಯ ರೈತ ಸಂಘ, ಎಸ್ ಡಿಪಿಐ, ಆಟೋ ಚಾಲಕರ ಸಂಘ ಸೇರಿದಂತೆ ಇತರ ಸಂಘಟನೆಗಳು ಇದರಲ್ಲಿ ಸೇರಿವೆ.
ನೀರು ನಿಲ್ಲಿಸಿ ಬಂದರೆ ಓಕೆ, ಇಲ್ಲವಾದರೆ ಶಕ್ತಿ ತೋರಿಸುತ್ತೇವೆ
ಸೆ. 27ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜೇಶ್ವರ ದೇವಾಲಯದಿಂದ ಮೆರವಣಿಗೆ ನಡೆಸಲು ನಿರ್ಧಾರ ಮಾಡಲಾಗಿದೆ. ಅಂದೇ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಅವರು ಕಬಿನಿ, ಕಾವೇರಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ಜಿಲ್ಲೆಗೆ ಬರಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಇಲ್ಲವಾದರೆ ಚಾಮರಾಜನಗರ ರೈತರ ಶಕ್ತಿ ಏನೆಂದು ತೋರಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇದೇವೇಳೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆಯನ್ನೂ ಕೊಡಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಬಂದ್ ನಿರ್ಣಯ ಕೈಗೊಳ್ಳಲಾಗಿದ್ದು, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಾಗ್ಯರಾಜು ನೇತೃತ್ವದಲ್ಲಿ ಬಂದ್ ಗೆ ತಯಾರಿ ನಡೆದಿದೆ.
ಉಸ್ತುವಾರಿ ಸಚಿವ ಕೆ. ವೆಂಕಟೇಶ್ ವಿರುದ್ಧ ಆಕ್ರೋಶ
ಸೋಮವಾರ ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಪ್ರತಿಭಟನೆಯ ಬಿಸಿ ಎದುರಿಸಿದರು.
ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿಗೆ ಕೆ. ವೆಂಕಟೇಶ್ ಅವರು ಬರಲಿಲ್ಲ. ತಮ್ಮ ಅಹವಾಲು ಆಲಿಸಿಲ್ಲ ಎಂದು ಅವರು ಸಿಟ್ಟಿಗೆದ್ದಿದ್ದರು.
ಕೈಯಲ್ಲಿ ಮಡಿಕೆ ಹಿಡಿದು ಧಿಕ್ಕಾರ ಕೂಗಿದ ರೈತರು ಪ್ರತಿಭಟನಾ ಸ್ಥಳಕ್ಕೆ ಸಚಿವರು ಬರಲೇ ಬೇಕು ಎಂದು ಪಟ್ಟು ಹಿಡಿದರು. ಬಳಿಕ ಕೆ. ವೆಂಕಟೇಶ್ ಅವರು ಅವರ ಅಹವಾಲು ಆಲಿಸಿದರು.
ಬೃಹತ್ ಗಾತ್ರದ ಗಂಟೆ ಬಾರಿಸುವ ಮೂಲಕ ಪ್ರತಿಭಟನೆ
ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳಿಂದ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ನೀರು ಬಿಡುಗಡೆ ವಿರುದ್ಧ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಎಷ್ಟೇ ಹೋರಾಟ ಮಾಡುತ್ತಿದ್ದರೂ ಅವರಿಗೆ ಕೇಳಿಸುತ್ತಿಲ್ಲ ಎಂದು ಗಂಟೆ ಬಾರಿಸಿ ಚಳುವಳಿ ನಡೆಸಲಾಯಿತು.
ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಕಾರ್ಯಕ್ರಮವೇನು?
ಸೆ. 26-27ರಂದು ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರಿಂದ ಸಕಲ ಸಿದ್ಧತೆ ನಡೆಯುತ್ತಿದೆ. ಎಸ್ಪಿ ಪದ್ಮಿನಿ ಸಾಹೋ, ಎಡಿಸಿ ಗೀತಾ ಹುಡೇದ ಹಾಗು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಸಿಎಂ ಅವರು ಸೆ. 26ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದು, ಸೆ. 27ರ ಬೆಳಗ್ಗೆ ಮ.ಬೆಟ್ಟ ಪ್ರಾಧಿಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
-
ಕ್ರಿಕೆಟ್22 hours ago
IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ6 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ21 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ20 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಕರ್ನಾಟಕ23 hours ago
Janata Darshan: ನಾಳೆ ರಾಜ್ಯಾದ್ಯಂತ ಏಕ ಕಾಲಕ್ಕೆ ʼಜನತಾ ದರ್ಶನʼ
-
ಕ್ರಿಕೆಟ್23 hours ago
IND vs AUS: ಅಯ್ಯರ್ ಬ್ಯಾಟಿಂಗ್ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ
-
ಅಂಕಣ6 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?