Ration Card : ವಿದೇಶಿಯರಿಗೂ ರೇಷನ್‌ ಕಾರ್ಡ್; ಸಿಬಿಐಗೆ ಅಕ್ರಮ ಪ್ರಕರಣ ವಹಿಸಲು ಬಿಜೆಪಿ ಆಗ್ರಹ - Vistara News

ಕರ್ನಾಟಕ

Ration Card : ವಿದೇಶಿಯರಿಗೂ ರೇಷನ್‌ ಕಾರ್ಡ್; ಸಿಬಿಐಗೆ ಅಕ್ರಮ ಪ್ರಕರಣ ವಹಿಸಲು ಬಿಜೆಪಿ ಆಗ್ರಹ

Ration Card : ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಲು ಕೋರಲಾಗುವುದು ಎಂದು ಎಸ್. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

VISTARANEWS.COM


on

Ration card CBI logo
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಕಲಿ ವೋಟರ್‌ ಐಡಿ (Fake voter ID) ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಲ್ಲದೆ, ಹೊರದೇಶದಿಂದ ಬಂದವರಿಗೂ ರೇಷನ್‌ ಕಾರ್ಡ್‌‌ (Ration Card) ಕೊಡಲಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಇಲ್ಲವೇ ಎನ್‍ಐಎ ತನಿಖೆಗೆ (CBI or NIA probe) ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (Former minister Suresh Kumar), ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಿಬಿಐ ಅಥವಾ ಎನ್‍ಐಎ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Congress Politics : ಅಭಿವೃದ್ಧಿ ಬಗ್ಗೆ ಮಾಧ್ಯಮ ಚರ್ಚೆಗೆ ಬನ್ನಿ; ಎಚ್‌ಡಿಕೆಗೆ ಡಿಕೆಶಿ ಸವಾಲು

ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‍ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ. ಸಮಾಜದ ಅಳಿವು – ಉಳಿವಿನ ಪ್ರಶ್ನೆ ಎಂದು ಎಸ್. ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ ಎಂದರೆ, ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು? ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಚುನಾವಣಾ ಗೆಲುವಿಗಾಗಿ ಮಾಡಿಸಿದ್ದಾರೆ. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಲು ಕೋರಲಿದ್ದೇವೆ ಎಂದು ಎಸ್. ಸುರೇಶ್ ಕುಮಾರ್ ತಿಳಿಸಿದರು.

Ration card CBI logo and Suresh kumar press meet

ಬೈರತಿ ಸುರೇಶ್‌ ವಿಚಾರಣೆಯೂ ನಡೆಯಲಿ

ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ. ಈ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ವಿಚಾರಣೆಯೂ ನಡೆಯಬೇಕು ಎಂದು ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಅವರು ಇದೇ 19ರಂದು ಆರ್‌ಟಿ ನಗರದ ಸುಲ್ತಾನ್‌ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್‌ನ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್‌ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು ಎಂದು ಎಸ್. ಸುರೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: Karnataka Politics : ಸಿದ್ದರಾಮಯ್ಯ ನೋವಿನಲ್ಲಿದ್ದಾರೆ; ನಿಮ್ಮ ತಪ್ಪಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಸಿಪಿವೈ

ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಅಪರಾಧ

ಸೆಕ್ಷನ್ 420 ಸೇರಿ ಹಲವು ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಶಾಸಕ- ಸಚಿವ ಬೈರತಿ ಸುರೇಶ್ ಅವರು ನಿಕಟವರ್ತಿಗಳು ಎಂದು ಆರೋಪಿಸಿದ ಎಸ್. ಸುರೇಶ್ ಕುಮಾರ್, ಮೌನೇಶ್ ಸ್ಕೂಟರ್ ರೈಡ್ ಮಾಡುತ್ತಿದ್ದು, ಬೈರತಿ ಸುರೇಶ್ ಹಿಂದೆ ಕುಳಿತಿದ್ದ ಫೋಟೊವನ್ನು ಇದೇ ವೇಳೆ ಪ್ರದರ್ಶಿಸಿದರು.

ನಕಲಿ ಮತದಾರರ ಗುರುತು ಚೀಟಿ ಸಿದ್ಧಪಡಿಸುವುದು ಕೂಡ ರಾಷ್ಟ್ರೀಯ ಅಪರಾಧ. ರಾಷ್ಟ್ರೀಯ ಭದ್ರತೆಯ ವಿರುದ್ಧ ನಡೆದ ಕುಕೃತ್ಯದ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ. ಬೈರತಿ ಸುರೇಶ್ ಅವರು ಸಿಎಂಗೆ ಹತ್ತಿರದವರೆಂದು ಯಾರೂ ಮಾತನಾಡುತ್ತಿಲ್ಲ ಎಂದು ಎಸ್. ಸುರೇಶ್ ಕುಮಾರ್ ಆರೋಪಿಸಿದರು.

ವಿದೇಶಿಗರಿಗೆ ಸುಲಭವಾಗಿ ನಕಲಿ ಗುರುತಿನ ಚೀಟಿ: ವಿವೇಕ್ ರೆಡ್ಡಿ

ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಮಾತನಾಡಿ, ಭಾರತದಲ್ಲಿ ಪೌರತ್ವ ಗುರುತು ಚೀಟಿ ಇಲ್ಲ; ಅದಕ್ಕೆ ಹತ್ತಿರದ ಹೋಲಿಕೆಯ ಕಾರ್ಡ್ ಎಂದರೆ ಆಧಾರ್ ಕಾರ್ಡ್ ಆಗಿದೆ. ಇದರ ಮೂಲಕ ಹಲವಾರು ಸೌಲಭ್ಯಗಳನ್ನು ಪಡೆಯಬಹುದು. ಬಾಂಗ್ಲಾದೇಶದಿಂದ ಬಂದ ನಿವಾಸಿಗಳು ಅತ್ಯಂತ ಸುಲಭವಾಗಿ ಇಂಥ ನಕಲಿ ಗುರುತಿನ ಚೀಟಿ ಪಡೆಯುವಂತಾಗಿದೆ ಎಂದು ಆಕ್ಷೇಪಿಸಿದರು.

ಭಾರತೀಯ ನಿವಾಸಿಗಳು ಕೆಲವು ಸಂದರ್ಭಗಳಲ್ಲಿ ಕೋರ್ಟಿಗೆ ಹೋಗಿ, ಪುರಾವೆ ನೀಡಿ ಅತ್ಯಂತ ಕಷ್ಟದಿಂದ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಇಲ್ಲಿ ಬೇರೆ ದೇಶದವರು ಸಲೀಸಾಗಿ ನಕಲಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ವಿವೇಕ್ ರೆಡ್ಡಿ ಟೀಕಿಸಿದರು.

ಇದನ್ನೂ ಓದಿ: Karnataka Politics : ಬಿಜೆಪಿ ಮೈತ್ರಿ ಹಿಂಪಡೆಯದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರೇ ಬದಲು!

ಸರ್ಕಾರ ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು. ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕು ಎಂದು‌ ವಿವೇಕ್ ರೆಡ್ಡಿ ಒತ್ತಾಯಿಸಿದರು. ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ನಾಯ್ಡು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Physical Abuse : ಮಕ್ಕಳಿಗೆ ಗುಡ್ ಆ್ಯಂಡ್ ಬ್ಯಾಡ್ ಟಚ್ ಬಗ್ಗೆ ಹೇಳಿ ಕೋಡಬೇಕಾದವರೆ ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ರಾಕ್ಷಸಿ ಪ್ರವೃತಿ ತೋರಿದ್ದಾಳೆ. ಬಾಲಕಿಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ, ವಿಕೃತಿ ಮೆರೆದಿದ್ದಾಳೆ. ಲೈಂಗಿಕ ದೌರ್ಜನ್ಯ ನಡೆಸಿರುವ ಕಾಮುಕಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

VISTARANEWS.COM


on

By

Physical Abuse
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ (Physical Abuse) ನಡೆದಿದೆ. ಶಾಲೆಗೆ‌ ಸೇರಿದ 8 ದಿನಕ್ಕೆ ಶಿಕ್ಷಕಿಯೊಬ್ಬಳು ಬಾಲಕಿಗೆ ನರಕ ತೋರಿಸಿದ್ದಾಳೆ. ವೆಂಕಟೇಶ್ವರ ಪುರದ ಅನ್ವರ್ ಲೇಔಟ್‌ನ ಖಾಸಗಿ ಶಾಲೆಯಲ್ಲಿ ನರ್ಸರಿ ಓದುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮನ ಮೇಲೆ ಲೈಂಗಿಕ ‌ಕಿರುಕುಳ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಸ್ಕೂಲಿಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದ 3 ವರ್ಷದ ಬಾಲಕಿ ಹೊಟ್ಟೆನೋವು ಎಂದು ಯಾತನೆ ಪಡುತ್ತಿದ್ದಳು. ಜತೆಗೆ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ನೋವಾಗುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಳು. ಇದರಿಂದ ಗಾಬರಿಯಾದ ಮಗುವಿನ ತಾಯಿ ಕೂಡಲೇ ಆಸ್ಪತ್ರೆಗೆ ‌ಕರೆದುಕೊಂಡು‌ ಹೋಗಿದ್ದಾರೆ. ಚಿಕಿತ್ಸೆ ‌ನೀಡಿದ ವೈದ್ಯರು, ಸರ್ಕಾರಿ ‌ಆಸ್ಪತ್ರೆಗೆ‌ ಹೋಗಲು ಸೂಚಿಸಿದ್ದರು. ಹೀಗಾಗಿ ಅಲ್ಲಿಂದ ನೇರವಾಗಿ ವಾಣಿವಿಲಾಸ್ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ‌ಹೋಗಿದ್ದರು.

ಆದರೆ ಹೀಗೆ ಹೋದ ಪೋಷಕರಿಗೆ ಶಾಕ್‌ ಕಾದಿತ್ತು. ಯಾಕೆಂದರೆ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೃಢಪಡಿಸಿದ್ದರು. ದೇಹದ ಖಾಸಗಿ ಅಂಗಗಳಲ್ಲಿ‌ ಗಾಯವಾಗಿ ರಕ್ತಸ್ರಾವವಾಗಿತ್ತು. ನೋವಿನಿಂದ ನರಕಯಾತನೆ ಪಡುತ್ತಿರುವ ನಡೆಯಲು ಆಗದೆ ಕಷ್ಟ ಪಡುತ್ತಿತ್ತು.

ಟೀಚರ್ ಮಾಡಿದ ಕೃತ್ಯದ ಬಗ್ಗೆ ತೊದಲು ಮಾತಿನಿಂದಲೇ ಬಾಲಕಿ ಎಲ್ಲವನ್ನೂ ಹೇಳಿದ್ದಾಳೆ. ಮಕ್ಕಳಿಗೆ ಗುಡ್ ಆ್ಯಂಡ್ ಬ್ಯಾಡ್ ಟಚ್ ಬಗ್ಗೆ ಹೇಳಿ ಕೋಡಬೇಕಾದವರೆ ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ರಾಕ್ಷಸಿ ಪ್ರವೃತಿ ತೋರಿದ್ದಾಳೆ. ಸದ್ಯ ಪೋಷಕರು ಕೆಜೆ‌ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್‌ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್‌ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

Self Harming : ಬೆಂಗಳೂರಲ್ಲಿ ವಿವಾಹಿತ ಟೆಕ್ಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಕುಟುಂಬಸ್ಥರ ವರದಕ್ಷಿಣಿ ಕಿರುಕುಳವೇ (Dowry case) ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

By

Self Harming in bengaluru
Koo

ಬೆಂಗಳೂರು: ವರದಕ್ಷಿಣಿ ಕಿರುಕುಳಕ್ಕೆ ಬೇಸತ್ತು (Dowry case) ಟೆಕ್ಕಿಯೊಬ್ಬರು ಬೆಂಗಳೂರಲ್ಲಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಪೂಜಾ (22) ಮೃತ ದುರ್ದೈವಿ.

ಮನೆಯಲ್ಲಿ ಯಾರು ಇಲ್ಲದ ವೇಳೆ ಪೂಜಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಗಂಗಮ್ಮನ ಗುಡಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

ಪೂಜಾ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತೆಗ್ಗಿ ಬಸಾಪುರ ಮೂಲದವರು. 2022ರಲ್ಲಿ ಸುನೀಲ್‌ ಎಂಬುವವರ ಜತೆಗೆ ಪೂಜಾಳ ವಿವಾಹವಾಗಿತ್ತು. ಆದರೆ ಪತಿ ಸುನೀಲ್ ಹಾಗೂ ಮೈದುನಾ ಅನಿಲ್ ವರದಕ್ಷಿಣಿ ಕಿರುಕುಳ ಆರೋಪ ಕೇಳಿ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೀಡಾದ ಟೆಕ್ಕಿ ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Self Harming

ಮೂರು ಎಕರೆ ಜಮೀನು, ಚಿನ್ನಾಭರಣ ತರುವಂತೆ ಪತಿ ಸುನೀಲ್ ಕಿರುಕುಳ ನೀಡುತ್ತಿದ್ದಂತೆ. ಪೂಜಾಗೆ ಬರುತ್ತಿದ್ದ 40 ಸಾವಿರ ಸಂಬಳದಲ್ಲಿ ದಿನಕ್ಕೆ 500 ರೂ. ಹಣ ಮಾತ್ರ ಖರ್ಚಿಗೆ ನೀಡುತ್ತಿದ್ದನಂತೆ. ಉಳಿದ ಸಂಬಳ ಭಾಮೈದುನಾ ಅನಿಲ್‌ಗೆ ನೀಡಬೇಕಿತ್ತು. ಪೂಜಾಗೆ ಮನೆಯಲ್ಲಿ ಊಟ ಮಾಡುವ ವಿಚಾರಕ್ಕೂ ಅವಮಾನ ಮಾಡುತ್ತಿದ್ದರಂತೆ. ಪೂಜಾ ಊಟ ಮಾಡುವ ವೇಳೆ ಜಾಸ್ತಿ ತಿನ್ನಬೇಡ ದಪ್ಪ ಆಗ್ತಿಯಾ ಎನ್ನುತ್ತಿದ್ದರಂತೆ. ಈ ಬಗ್ಗೆ ಪತಿ ಸುನೀಲ್ ಬಳಿ ಹೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಸುನೀಲ್‌ನನ್ನು ವಶಕ್ಕೆ ಪಡೆದು ಗಂಗಮ್ಮ ಗುಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!  

ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಮೆಟ್ಟಿಲಿನಿಂದ ಹಾರಿ ಅದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅದು ನಿಷ್ಕ್ರಿಯವಾಗಿದೆ. ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ (Suicide) ಬಳಿಕ ದಕ್ಷಿಣ ಕೊರಿಯಾ (South Korea) ನಗರದ ಜನತೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮಿ ಸಿಟಿ ಕೌನ್ಸಿಲ್ ನ ( Gumi City Council ) ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು.

ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೋಬೋಟ್ ನ ತುಂಡುಗಳನ್ನು ಸಂಗ್ರಹಿಸಲಾಗಿದೆ. ಕಂಪನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಬೋಟ್ ಶ್ರದ್ಧೆಯಿಂದ ಸೇವೆ ಸಲ್ಲಿಸಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ಈಗ ರೋಬೋಟ್‌ಗೆ ನಿಭಾಯಿಸಲು ಕೆಲಸದ ಹೊರೆ ಹೆಚ್ಚು ಎಂದು ಹೇಳಿದ್ದಾರೆ.


ಕೆಲಸದ ಹೊರೆ ಜಾಸ್ತಿಯಾಗಿ ತುಂಬಾ ಹೊತ್ತು ತಿರುಗಿ ಮೆಟ್ಟಿಲಿನಿಂದ ಹಾರಿತು ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಬೋಟಿಕ್ ಸಹಾಯಕವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಎಂಬ ಸ್ಟಾರ್ಟಪ್ ತಯಾರಿಸಿದೆ. ಅದು ಉದ್ಯೋಗಿ ಕಾರ್ಡ್ ಅನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು. ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ ಸಾಮಾನ್ಯವಾಗಿ ಒಂದು ಮಹಡಿಯನ್ನು ಮಾತ್ರ ಬಳಸುತ್ತಿತ್ತು. ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ದಕ್ಷಿಣ ಕೊರಿಯಾವು ವಿವಿಧ ವೃತ್ತಿಗಳಲ್ಲಿ ರೋಬೋಟ್‌ಗಳನ್ನು ಬಳಸುವುದಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: PM Modi Russia Visit: ಜುಲೈ 8ರಿಂದ ಮೋದಿ ರಷ್ಯಾ ಪ್ರವಾಸ; ಉಕ್ರೇನ್‌ ಆಕ್ರಮಣದ ಬಳಿಕ ಮೊದಲ ಭೇಟಿ

ಈ ಹಿಂದೆ ವಾಷಿಂಗ್ಟನ್ ಡಿಸಿಯ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಭದ್ರತಾ ರೋಬೋಟ್ ಸ್ಟೀವ್ ಎಂದು ಕರೆಯಲಾಗುತ್ತಿತ್ತು. ಆದರೆ ಅದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

Salary Hike: ಸದ್ಯ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ.

VISTARANEWS.COM


on

salary hike cm siddaramaiah
Koo

ಬೆಂಗಳೂರು: ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ (Cabinet meeting) ಸರಕಾರಿ ನೌಕರರ (Govt Employees) ವೇತನ ಹೆಚ್ಚಳದ (Salary Hike) ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಸಲವಾದರೂ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ (guarantee Schemes) ಹೆಚ್ಚಿನ ಹಣ ಹರಿದುಹೋಗುತ್ತಿರುವುದರಿಂದ ಹಾಗೂ ವಿವಿಧ ಮೂಲಗಳಿಂದ ನಿರೀಕ್ಷಣ ಪ್ರಮಾಣದ ಹಣಕಾಸು (Finance) ಬರುತ್ತಿಲ್ಲವಾದ್ದರಿಂದ ಸದ್ಯ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಜಿಎಸ್‌ಟಿ ಸೇರಿ, ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಹರಿದುಹೋಗುತ್ತಿದೆ. ಹೀಗಾಗಿ ವೇತನ ಪರಿಷ್ಕರಣೆ ಸದ್ಯದ ಮಟ್ಟಿಗೆ ಸಾಧ್ಯವಾಗದು ಎಂದು ಅಧಿಕಾರಿಗಳು ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ವೇತನ ಪರಿಷ್ಕರಣೆ, ಹೊಸ ಪಿಂಚಣಿ ಯೋಜನೆಯಲ್ಲಿ ಇರುವವರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆ ಸಹ ಈಡೇರಿಸಲು ಸಾಧ್ಯವಾಗದು. ಈ ಬೇಡಿಕೆ ಈಡೇರಿಸಿದರೆ ಪ್ರತಿ ತಿಂಗಳು ವಿವಿಧ ಬಾಬುಗಳಿಗೆ ಹಣವನ್ನು ಹೊಂದಿಸಲು ಕಷ್ಟ ಆಗಬಹುದು ಎಂದು ಅಧಿಕಾರಿಗಳ ತಂಡ ಸಂಪುಟ ಸದಸ್ಯರಿಗೆ ವಿವರಿಸಿದೆ.

ಹಣದ ಕೊರತೆ ಇದೆ ಎಂದ ಮಾತ್ರಕ್ಕೆ ವೇತನ ಪರಿಷ್ಕರಣೆ ಮಾಡದೇ ಇರಲು ಸಾಧ್ಯವಿಲ್ಲ. ತಕ್ಷಣಕ್ಕೆ ಆಗದೇ ಇದ್ದರೂ ಮುಂದೆ ಮಾಡಲೇಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶೇ 27.50ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಮಾರ್ಚ್ 16ರಂದು ಮುಖ್ಯಮಂತ್ರಿಗೆ ಸಲ್ಲಿಸಿತ್ತು. ಏಳನೇ ವೇತನ ಆಯೋಗವು ಶೇ. 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ದಿನದಿಂದಲೇ ಚುನಾವಣೆಯ ನೀತಿ ಸಂಹಿತೆ ಆರಂಭವಾದ ಕಾರಣ ಶಿಫಾರಸು ಜಾರಿ ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ನೌಕರರ ಆರೋಪ.

29ರಿಂದ ಬೀದಿಗಿಳಿಯಲಿರುವ ಸರ್ಕಾರಿ ನೌಕರರು

7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ. ಆಯೋಗ ವರದಿ ನೀಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಾ ಬಂದಿದೆ. ರಾಜ್ಯದ ಎಲ್ಲ ಇಲಾಖೆಗಳ ನೌಕರರು ಹೋರಾಟ ಆರಂಭಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡು, ಮುಷ್ಕರದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ವೇತನ ಆಯೋಗದ ಶಿಫಾರಸುಗಳ ಜಾರಿ ಜೊತೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು. ಹಳೇ ಪಿಂಚಣಿ ಯೋಜನೆ
ಮರು ಜಾರಿಗೊಳಿಸಬೇಕು. ನೌಕರರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಮುಷ್ಕರ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

Continue Reading

ಪ್ರಮುಖ ಸುದ್ದಿ

IAS Transfer: ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಯಾರ್ಯಾರು ಎಲ್ಲಿಗೆ?

IAS Transfer: ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

VISTARANEWS.COM


on

IAS Transfer
Koo

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ (Mysore Deputy Commissioner) ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಜಿಲ್ಲಾಧಿಕಾರಿಗಳು, ಐಎಎಸ್‌ (IAS officers) ಅಧಿಕಾರಿಗಳನ್ನು ವರ್ಗಾವಣೆ (IAS Transfer) ಮಾಡಲಾಗಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

ವರ್ಗಾವಣೆ ಹೊಂದಿದ ಅಧಿಕಾರಿಗಳ ವಿವರ:

ಅಧಿಕಾರಿಯ ಹೆಸರುಎಲ್ಲಿಂದ ಎಲ್ಲಿಗೆ
ಡಾ. ರಾಜೇಂದ್ರ ಕೆ.ವಿ ಮೈಸೂರು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಡಾ. ರಾಮ್‌ ಪ್ರಸಾದ್‌ ಮನೋಹರ್‌ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ನಿತೇಶ್‌ ಪಾಟೀಲ್‌
ಬೆಳಗಾವಿ ಜಿಲ್ಲಾಧಿಕಾರಿ ಎಂಎಸ್‌ಎಂಇ ನಿರ್ದೇಶಕ
ಡಾ. ಅರುಂಧತಿ ಚಂದ್ರಶೇಖರ್‌ ಖಜಾನೆ ಕಮಿಷನರ್‌ ಪಂಚಾಯತ್‌ರಾಜ್‌ ಕಮಿಷನರ್‌
ಚಂದ್ರಶೇಖರ ನಾಯಕ ಎಲ್.‌ ರಾಯಚೂರು ಜಿಲ್ಲಾಧಿಕಾರಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ ಎಂಎಸ್‌ಎಂಇ ನಿರ್ದೇಶಕ ಹಾವೇರಿ ಜಿಲ್ಲಾಧಿಕಾರಿ
ಗೋವಿಂದ ರೆಡ್ಡಿ
ಬೀದರ್‌ ಜಿಲ್ಲಾಧಿಕಾರಿ ಗದಗ ಜಿಲ್ಲಾಧಿಕಾರಿ
ರಘುನಂದನ್‌ ಮೂರ್ತಿ
ಹಾವೇರಿ ಜಿಲ್ಲಾಧಿಕಾರಿ ಖಜಾನೆ ಆಯುಕ್ತ ಬೆಂಗಳೂರು
ಡಾ. ಗಂಗಾಧರಸ್ವಾಮಿ
ಕೃಷಿ ಮಾರ್ಕೆಟಿಂಗ್‌ ನಿರ್ದೇಶಕ ದಾವಣಗೆರೆ ಜಿಲ್ಲಾಧಿಕಾರಿ
ಲಕ್ಷ್ಮೀಕಾಂತ ರೆಡ್ಡಿ
ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕ ಮೈಸೂರು ಜಿಲ್ಲಾಧಿಕಾರಿ
ನಿತೀಶ್‌ ಕೆ.
ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ರಾಯಚೂರು ಜಿಲ್ಲಾಧಿಕಾರಿ
ಮೊಹಮ್ಮದ್‌ ರೋಶನ್‌
ಹೆಸ್ಕಾಂ ನಿರ್ವಹಣಾ ನಿರ್ದೇಶಕ ಬೆಳಗಾವಿ ಜಿಲ್ಲಾಧಿಕಾರಿ
ಶಿಲ್ಪಾ ಶರ್ಮಾ
ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ ಬೀದರ್‌ ಜಿಲ್ಲಾಧಿಕಾರಿ
ದಿಲೇಶ್‌ ಸಸಿ
ಎಡಿಸಿಎಸ್‌ ನಿರ್ದೇಶಕ ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು
ಲೋಖಂಡೆ ಸ್ನೇಹಲ್‌ ಸುಧಾಕರ್‌ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ
ಶ್ರೀರೂಪಾ
ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ
ಜಿಟ್ಟೆ ಮಾಧವ ವಿಠಲ ರಾವ್
ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿ ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌
ಹೇಮಂತ್‌ ಎನ್.‌
ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ ಶಿವಮೊಗ್ಗ ಜಿ.ಪಂ ಸಿಇಒ
ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ
ಹಿರಿಯ ಸಹಾಯಕ ಆಯುಕ್ತ ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ
ಜ್ಯೋತಿ ಕೆ.
ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ
ಶ್ರೀಧರ ಸಿ.ಎನ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ

ಇದನ್ನೂ ಓದಿ: IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Continue Reading
Advertisement
Bigg Boss Telugu 8 Astrologer Venu Swamy A Contestant
ಟಾಲಿವುಡ್2 mins ago

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Gold Rate Today
ಚಿನ್ನದ ದರ17 mins ago

Gold Rate Today: ಇಂದು ಏರಿಕೆಯಾಗಿಲ್ಲ ಚಿನ್ನದ ದರ; ಬೆಲೆ ಎಷ್ಟಿದೆ ನೋಡಿ

Physical Abuse
ಬೆಂಗಳೂರು22 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್29 mins ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ36 mins ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್37 mins ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Brain-Eating Mmoeba
ಆರೋಗ್ಯ44 mins ago

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Self Harming in bengaluru
ಬೆಂಗಳೂರು57 mins ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

salary hike cm siddaramaiah
ಪ್ರಮುಖ ಸುದ್ದಿ59 mins ago

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

Chaithra J Achar Kittale Roopanthara Raj B Shetty out
ಸ್ಯಾಂಡಲ್ ವುಡ್1 hour ago

Chaithra J Achar: ʻರೂಪಾಂತರʼ ಸಿನಿಮಾದ ಹಾಡು ರಿಲೀಸ್‌; ಇಳಕಲ್‌ ಸೀರೆಯಲ್ಲಿ ಮಿಂಚಿದ ಚೈತ್ರಾ ಆಚಾರ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ5 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ19 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ20 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ22 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ22 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ24 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌