Money Guide: ದುರ್ಬಲ ವರ್ಗಕ್ಕೆ ಆರ್ಥಿಕ ಶಕ್ತಿ ನೀಡುವ ಜನ ಧನ್‌ ಯೋಜನೆ; ಏನಿದರ ವೈಶಿಷ್ಟ್ಯ? - Vistara News

ಮನಿ-ಗೈಡ್

Money Guide: ದುರ್ಬಲ ವರ್ಗಕ್ಕೆ ಆರ್ಥಿಕ ಶಕ್ತಿ ನೀಡುವ ಜನ ಧನ್‌ ಯೋಜನೆ; ಏನಿದರ ವೈಶಿಷ್ಟ್ಯ?

Money Guide: ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಜನ ಧನ್‌ ಯೋಜನೆಯನ್ನು ಆರಂಭಿಸಲಾಗಿದೆ. ಇತ್ತೀಚೆಗೆ 9ನೇ ವರ್ಷ ಆಚರಿಸಿಕೊಂಡಿರುವ ಈ ಯೋಜನೆ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

jan dhan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ ಧನ್‌ ಯೋಜನೆ (PMJDY) ದೇಶದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಗುರಿ ಹೊಂದಿದೆ. 2014ರಲ್ಲಿ ಆರಂಭಿಸಲಾದ ಈ ಯೋಜನೆ ಮೂಲಕ ಇದುವರೆಗೆ ಸುಮಾರು 50 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯಿಂದ ಏನೇನು ಲಾಭಗಳಿಗೆ? ಯಾರೆಲ್ಲ ಖಾತೆ ತೆರೆಯಬಹುದು? ಮುಂತಾದ ಪ್ರಶ್ನೆಗಳಿಗೆ ಮನಿಗೈಡ್‌ (Money Guide) ಉತ್ತರಿಸಲಿದೆ.

9ನೇ ವರ್ಷಾಚರಣೆ

2014ರ ಆಗಸ್ಟ್‌ 28ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇತ್ತೀಚೆಗೆ 9ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಭಾರತದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪಿಎಂಜೆಡಿವೈ ಒಂದು ಉತ್ತಮ ಪ್ರಯತ್ನ ಎಂದು ಬಣ್ಣಿಸಲಾಗುತ್ತಿದೆ. ಬ್ಯಾಂಕ್ ಖಾತೆ ಇಲ್ಲದವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ಪಿಎಂಜೆಡಿವೈ ದೇಶದ ಮೇಲೆ ಗಣನೀಯ ಪ್ರಭಾವ ಬೀರಿದ್ದು, ಈ ವರ್ಷದ ಆಗಸ್ಟ್ 28ರ ವೇಳೆಗೆ ಇದರಲ್ಲಿ ಒಟ್ಟು 2.03 ಲಕ್ಷ ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರೆಲ್ಲ ಅರ್ಹರು?

ಮುಕ್ತ ದಾಖಲಾತಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಿಎಂಜೆಡಿವೈ ಯೋಜನೆಯ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಯಾವುದೇ ಭಾರತೀಯ ನಾಗರಿಕರು ವಯಸ್ಸಿನ ಬೇಧವಿಲ್ಲದೆ ಈ ಸರ್ಕಾರಿ ಯೋಜನೆಯಡಿ ಬ್ಯಾಂಕ್ ಖಾತೆಯನ್ನು ತೆರೆಯುವ ಹಕ್ಕು ಹೊಂದಿದ್ದಾರೆ. ಮುಖ್ಯವಾಗಿ ಸಮಾಜದಲ್ಲಿ ಆರ್ಥಿಕವಾಗಿ ಹೊರಗುಳಿದ ಕ್ಷೇತ್ರ, ಗ್ರಾಮೀಣ ಪ್ರದೇಶಗಳನ್ನು ಈ ಯೋಜನೆ ಗುರಿಯಾಗಿಸಿಕೊಂಡಿದೆ.

ಶೂನ್ಯ ಬ್ಯಾಲೆನ್ಸ್ ಖಾತೆ

ಪಿಎಂಜೆಡಿವೈ ಅಡಿಯಲ್ಲಿನ ಬ್ಯಾಂಕ್ ಖಾತೆಗಳು ಕನಿಷ್ಠ ಬ್ಯಾಲೆನ್ಸ್ ವಿಚಾರದಲ್ಲಿ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಾಂಪ್ರದಾಯಿಕ ಬ್ಯಾಂಕ್‌ ಖಾತೆಗಳಲ್ಲಿ ಆರಂಭಿಕ ಠೇವಣಿಯಾಗಿ ದೊಡ್ಡ ಮೊತ್ತ ಹೂಡಿಕೆ ಮಾಡಬೇಕಾಗುತ್ತದೆ. ಅಲ್ಲದೆ ಕನಿಷ್ಠ ಮಾಸಿಕ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಅಗತ್ಯ. ಪಿಎಂಜೆಡಿವೈ ಫಲಾನುಭವಿಗಳು ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಬಹುದು. ಬ್ಯಾಂಕ್‌ ಸೇವೆ ಪಡೆಯಲಾಗದ ಬಡ ಜನರಿಗೆ ಇದು ತುಂಬಾ ಅನುಕೂಲವಾಗುತ್ತದೆ.

ಪಿಎಂಜೆಡಿವೈಯ ಅನುಕೂಲಗಳೇನು?

ಪಿಎಂಜೆಡಿವೈ ಯೋಜನೆಯು ಬ್ಯಾಂಕಿಂಗ್ ಸೌಲಭ್ಯವಿಲ್ಲದ ವಲಯಗಳು ಮತ್ತು ಕಡಿಮೆ ಆದಾಯದ ಗುಂಪುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಯೋಜನೆಯಡಿ ಖಾತೆ ತೆರೆದರೆ ಲಭಿಸುವ ಅನುಕೂಲಗಳು ಯಾವೆಲ್ಲ ಎನ್ನುವುದರ ಮಾಹಿತಿ ಇಲ್ಲಿದೆ.

ಆರ್ಥಿಕವಾಗಿ ಹಿಂದುಳಿದವರ ಸೇರ್ಪಡೆ

ಇದು ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗಗಳಿಗೆ ಬ್ಯಾಂಕ್‌ ಖಾತೆ ತೆರೆಯುವ ಅವಕಾಶ ನೀಡಿ, ಸರ್ಕಾರದ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ನೆರವಾಗುತ್ತದೆ. ಜತೆಗೆ ಅವರ ಉಳಿತಾಯಕ್ಕೂ ದಾರಿ ಮಾಡಿಕೊಡುತ್ತದೆ.

ವಿಮಾ ರಕ್ಷಣೆ

ಪಿಎಂಜೆಡಿವೈ ಖಾತೆಗಳು ದುರ್ಬಲ ವರ್ಗಗಳಿಗೆ ವಿಮೆಯ ಮೂಲಕ ರಕ್ಷಣೆ ಒದಗಿಸುತ್ತವೆ. ಅಪಘಾತಗಳಂತಹ ತುರ್ತು ಪರಿಸ್ಥಿತಿಗಳಿಗೆ ಆರ್ಥಿಕ ನೆರವು ಒದಗಿಸುತ್ತವೆ.

ಓವರ್‌ ಡ್ರಾಫ್ಟ್‌ ಸೌಲಭ್ಯ

ಸಾಂಪ್ರದಾಯಿಕ ಬ್ಯಾಂಕಿಂಗ್ ಸಾಮಾನ್ಯವಾಗಿ ಓವರ್‌ ಡ್ರಾಫ್ಟ್‌ ಸೌಲಭ್ಯ ನೀಡುತ್ತದೆ. ಆದರೆ ಎಲ್ಲರೂ ಅದನ್ನು ಪಡೆಯಲು ಸಾಧ್ಯವಿಲ್ಲ. ಹೀಗಿದ್ದೂ ಪಿಎಂಜೆಡಿವೈ ಕಡಿಮೆ ಆದಾಯದ ಗುಂಪುಗಳಿಗೆ ತುರ್ತು ಸಂದರ್ಭಗಳಲ್ಲಿ ಓವರ್‌ ಡ್ರಾಫ್ಟ್‌ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಒದಗಿಸುತ್ತದೆ.

ಇದನ್ನೂ ಓದಿ: Money Guide: ಹಬ್ಬಕ್ಕೆ ಚಿನ್ನ ಖರೀದಿಸುತ್ತಿದ್ದೀರಾ? ಈ ಸಂಗತಿಗಳು ಗೊತ್ತಿರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Business Guide : ಕಡಿಮೆ ಬಂಡವಾಳದಲ್ಲಿ ಮಣ್ಣಿನ ಆಭರಣದ ಬಿಸಿನೆಸ್‌ ಮಾಡೋದು ಹೇಗೆ?

ಮನಸ್ಸಿದ್ದರೆ ಮಣ್ಣಿನ ಆಭರಣಗಳನ್ನು ತಯಾರಿಸಿ ಲಕ್ಷಾಂತರ ಆದಾಯ ( Business Guide) ಗಳಿಸಬಹುದು. ಹೇಗೆ ಎನ್ನುತ್ತೀರಾ? ಇಲ್ಲಿದೆ ವಿವರ.

VISTARANEWS.COM


on

Money
Koo

ಬೆಂಗಳೂರು: ಮನಸ್ಸಿದ್ದರೆ ಮಾರ್ಗ ಇದೆ ಎಂಬ ಮಾತಿದೆ. ನೀವು (Business Guide) ಯಾವುದಾದರೂ ಬಿಸಿನೆಸ್‌ ಮಾಡಬೇಕಿದ್ದರೆ ಎಷ್ಟು ಬಂಡವಾಳ ಬೇಕಾಗಬಹುದು ಎಂದು ಯೋಚಿಸುವುದು ಸಹಜ. ಆದರೆ ಒಂದು ಸಾವಿರ ರೂ. ಖರ್ಚಿನೊಳಗೆಯೇ ನೀವು ನಿಮ್ಮ ಮನೆ ಪಕ್ಕದ ಮಣ್ಣಿನಲ್ಲಿ ಆಭರಣಗಳನ್ನು ತಯಾರಿಸಿ ಮಾರಾಟ ಮಾಡಬಹುದು.

ಮೈಸೂರಿನ ಜ್ಯೋತಿ ಮಲ್ಲೇಶ್‌ ಎಂಬುವರು ತಮ್ಮ ಸೃಜನಶೀಲತೆ, ಆಸಕ್ತಿ ಮತ್ತು ಸಂಶೋಧನೆಯಿಂದ ಮಣ್ಣಿನ ಆಭರಣಗಳನ್ನು ತಯಾರಿಸಿ, ಮಾರಾಟ ಮಾಡಿ ಉತ್ತಮ ಆದಾಯವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಂತ ಕಡಿಮೆ ಬಂಡವಾಳದಲ್ಲಿ ಇದನ್ನು ಮಾಡಬಹುದು. ಲಾಭದಾಯಕ ಬಿಸಿನೆಸ್‌ ಮಾಡಬಹುದು. ನಿಮಗೆ ಇದರಲ್ಲಿ ಆಸಕ್ತಿ ಇರಬೇಕು. ಮಣ್ಣಿನ ಆಭರಣಗಳು ಒಂದು ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. ಗ್ರಾಹಕರ ಮನ ಗೆಲ್ಲುತ್ತದೆ. ಈಗಿನ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಸುಲಭವಾಗಿ ಪ್ರಚಾರ ಮಾಡಬಹುದು ಎನ್ನುತ್ತಾರೆ ಜ್ಯೋತಿ ಮಲ್ಲೇಶ್.

Continue Reading

ವಾಣಿಜ್ಯ

Money Guide : ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೀಗೆ ಹೂಡಿಕೆ ಮಾಡಿ

ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ( Money Guide) ಮೊತ್ತದ ಉಳಿತಾಯ ಮತ್ತು ಹೂಡಿಕೆ ಅಗತ್ಯವಾಗುತ್ತದೆ. ಇಲ್ಲಿದೆ ವಿವರ,

VISTARANEWS.COM


on

cash count
Koo

ಪೋಷಕರ ಆದಾಯದಲ್ಲಿ ಮಕ್ಕಳ ಭವಿಷ್ಯದ ಅಗತ್ಯಗಳಿಗೆ ದೊಡ್ಡ ಪಾಲು ಹೋಗುತ್ತದೆ. ( Money Guide) ಉನ್ನತ ಶಿಕ್ಷಣದ ಜತೆಗೆ ಮಕ್ಕಳ ವಿವಾಹಕ್ಕೂ ಖರ್ಚು ವೆಚ್ಚವಾಗುತ್ತದೆ. ಹೀಗಾಗಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಣಕಾಸು ಪ್ಲಾನ್‌ ಮಾಡೋದು ಹೇಗೆ? ವಿಸ್ತಾರ ಮನಿಪ್ಲಸ್‌ನಲ್ಲಿ ಈ ಬಗ್ಗೆ ನಾಲೆಡ್ಜ್‌ ಬೆಲ್‌ ಸಿಇಒ ವಿನೋದ್‌ ತಂತ್ರಿ ಅವರು ವಿವರಿಸಿದ್ದಾರೆ.

ಮಕ್ಕಳ ಭವಿಷ್ಯದ ಅಗತ್ಯತೆಗಳು ಹಲವು ಆಯಾಮಗಳನ್ನು ಒಳಗೊಂಡಿವೆ. ಆದ್ದರಿಂದ ಆದ್ಯತೆಯನ್ನು ಮಾಡಿಕೊಳ್ಳುವುದು ಮುಖ್ಯ. ಮಕ್ಕಳಿಗೆ ಬೈಕ್‌ ಕೊಡಿಸುವುದು ಮುಖ್ಯವೇ, ಅವರ ಶಿಕ್ಷಣ ಮುಖ್ಯವೇ ಎಂದು ಯೋಚಿಸಬೇಕು. ಇವತ್ತಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮೊತ್ತ ಹೋಗುತ್ತದೆ. ಆದ್ದರಿಂದ ಮೊದಲು ಆದ್ಯತೆ ಕೊಡಬೇಕು. ಬಳಿಕ ಹಣಕಾಸು ಪ್ಲಾನ್‌ ಮಾಡಬೇಕು. ಇವತ್ತು ಮಕ್ಕಳು ಹುಟ್ಟುವುದಕ್ಕಿಂತ ಮೊದಲೇ ಹಣಕಾಸು ಯೋಜನೆ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಆದಷ್ಟು ಬೇಗ ಪ್ಲಾನಿಂಗ್‌ ಮಾಡುವುದು ಉತ್ತಮ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಚಿಲ್ಡ್ರೆನ್ಸ್‌ ಪ್ಲಾನ್‌ ಇದೆ. ವಿಮೆಯಲ್ಲೂ ಚಿಲ್ಡ್ರೆನ್ಸ್‌ ಪ್ಲಾನ್‌ ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಇದೆ. ಆದರೆ ಚಿಲ್ಡ್ರೆನ್ಸ್‌ ಪ್ಲಾನ್‌ ಎಂಬ ಹೆಸರಿದ್ದ ತಕ್ಷಣ ವಿಮೆ ಉತ್ಪನ್ನದಲ್ಲಿ ಹೂಡಿಕೆ ಮಾಡಬೇಕೆಂದಿಲ್ಲ. ಪೋಷಕರಿಗೆ ಟರ್ಮ್‌ ವಿಮೆ ಸೂಕ್ತ. ಮಕ್ಕಳಿಗೆ ಇತರ ಆಯ್ಕೆಯನ್ನು ಪರಿಗಣಿಸಬಹುದು.

ಮಕ್ಕಳ ಭವಿಷ್ಯಕ್ಕಾಗಿ ದೀರ್ಘಕಾಲೀನ ಹೂಡಿಕೆ ಮಾಡುವುದರಿಂದ ಸಾಕಷ್ಟು ಟೈಮ್‌ ಸಿಗುತ್ತದೆ. ಈಕ್ವಿಟಿ ಮ್ಯೂಚುವಲ್‌ ಫಂಡ್‌ ಈ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುತ್ತಾರೆ ವಿನೋದ್‌ ತಂತ್ರಿ. ಪೋಷಕರಿಗೆ ಟರ್ಮ್‌ ಪ್ಲಾನ್‌ ಪಾಕೆಟ್‌ ಫ್ರೆಂಡ್ಲಿಯಾಗಿರುತ್ತದೆ. ವರ್ಷಕ್ಕೆ 30-40 ಸಾವಿರ ವೆಚ್ಚದಲ್ಲಿ ಒಂದು ಕೋಟಿ ರೂ. ಟರ್ಮ್‌ ಇನ್ಷೂರೆನ್ಸ್‌ ಸಿಗುತ್ತದೆ. ಆರೋಗ್ಯ ವಿಮೆಯನ್ನೂ ಹೊಂದಿರಬೇಕು. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ನೀವು ಇಡುವ ಹಣದ ರಕ್ಷಣೆಗೆ ಹೆಲ್ತ್‌ ಇನ್ಷೂರೆನ್ಸ್‌ ಅಗತ್ಯ. ಇಲ್ಲದಿದ್ದರೆ ಯಾರಿಗಾದರೂ ಅನಾರೋಗ್ಯವಾದಾಗ ಮಕ್ಕಳ ಭವಿಷ್ಯಕ್ಕೆ ಇಟ್ಟಿದ್ದ ಹಣವನ್ನು ತೆಗೆಯುವ ಸಾಧ್ಯತೆ ಇರುತ್ತದೆ.

ಮಕ್ಕಳ ಫೈನಾನ್ಸ್‌ ಪ್ಲಾನ್‌ ಸಲುವಾಗಿ ಸೈಟಿನಲ್ಲಿ ಹೂಡಿಕೆ ಉತ್ತಮವೇ? ಸಾಂಪ್ರದಾಯಿಕವಾಗಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಸಹಜ. ಮೊದಲು ಹೆಚ್ಚು ಆಯ್ಕೆ ಇಲ್ಲದಿದ್ದರಿಂದ ರಿಯಾಲ್ಟಿಯಲ್ಲಿ ಜನ ಹೂಡಿಕೆ ಮಾಡುತ್ತಿದ್ದರು. ಆದರೆ ಈಗ ಹಲವಾರು ಆಯ್ಕೆಗಳು ಇರುವುದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸುವುದು ಉತ್ತಮ.

Continue Reading

ಮನಿ-ಗೈಡ್

Business Guide : ಗಾಣದ ಎಣ್ಣೆಯ ಬಿಸಿನೆಸ್‌ನಲ್ಲಿ ಹೆಚ್ಚು ಲಾಭ ಮಾಡೋದು ಹೇಗೆ?

ಬೆಂಗಳೂರಿನ ನಿಸರ್ಗ ಫುಡ್ಸ್‌ ಆಂಡ್‌ ಬೇವರೇಜಸ್‌ ಮರದ ಗಾಣದ ಎಣ್ಣೆಯ ಘಟಕವನ್ನು ಯಶಸ್ವಿಯಾಗಿ ( Business Guide) ನಡೆಸುತ್ತಿದೆ. ಈ ಸಂಸ್ಥೆಯ ಸಕ್ಸಸ್‌ ಸ್ಟೋರಿ ಇಲ್ಲಿದೆ.

VISTARANEWS.COM


on

Olive Oil
Koo

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ( Business Guide) ನಿಸರ್ಗ ಫುಡ್ಸ್‌ ಆಂಡ್‌ ಬೇವರೇಜಸ್‌ ಸಂಸ್ಥೆಯಲ್ಲಿ ಮರದ ಗಾಣದಲ್ಲಿ ಗ್ರಾಹಕರಿಗೆ ಬೇಕಾಗುವ ಅಡುಗೆ ಎಣ್ಣೆಯನ್ನು ತಯಾರಿಸಿಕೊಡುತ್ತಾರೆ. ನೆಲಗಡಲೆ ಎಣ್ಣೆ, ತೆಂಗಿನ ಎಣ್ಣೆ, ಸೂರ್ಯಕಾಂತಿ, ಸಾಸಿವೆ, ಹರಳೆಣ್ಣೆ ಇತ್ಯಾದಿಗಳ ಜತೆಗೆ ಜೇನು, ತುಪ್ಪ ಇತ್ಯಾದಿ ಇತರ ಉತ್ಪನ್ನಗಳನ್ನೂ ಇಲ್ಲಿ ಖರೀದಿಸಬಹುದು. ನೀವು ತೈಲ ಬೀಜಗಳನ್ನು ತೆಗೆದುಕೊಂಡು ಹೋದರೆ, ಎಣ್ಣೆಯನ್ನೂ ನಿಮ್ಮ ಎದುರೇ ತಯಾರಿಸಿ ಕೊಡುತ್ತಾರೆ. ಮರದ ಗಾಣವಾದ್ದರಿಂದ ಬೀಜಗಳ ಪೋಷಕಾಂಶಗಳು ನಷ್ಟವಾಗುವುದಿಲ್ಲ ಎನ್ನುತ್ತಾರೆ ಕಂಪನಿಯ ಸ್ಥಾಪಕರಾದ ಶ್ರೀನಿವಾಸ್‌ ಪ್ರಸಾದ್‌ ಅವರು.

ಕೆಲ ವರ್ಷಗಳ ಹಿಂದೆ ಕೇವಲ 18 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ನಿಸರ್ಗ ಫುಡ್ಸ್‌ ಆಂಡ್‌ ಬೇವರೇಜಸ್‌ ಸಂಸ್ಥೆ ಈಗ ವಾರ್ಷಿಕ 3 ಕೋಟಿ ರೂ.ಗೂ ಅಧಿಕ ವಹಿವಾಟನ್ನು ನಡೆಸುತ್ತಿರುವುದು ವಿಶೇಷ.

ಅಡುಗೆ ಎಣ್ಣೆಯ ಬಿಸಿನೆಸ್‌ ಮಾಡುವವರು ಗ್ರಾಹಕರ ಪ್ರಶ್ನೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ರಿಫೈನ್ಡ್‌ ಆಯಿಲ್‌ ಮತ್ತು ಮರದ ಗಾಣದ ಎಣ್ಣೆಯ ನಡುವೆ ವ್ಯತ್ಯಾಸವೇನು ಎಂಬುದನ್ನು ಪಾರದರ್ಶಕವಾಗಿ ತಿಳಿಸಿಕೊಡಬೇಕು. ನಮ್ಮಲ್ಲಿ ಗ್ರಾಹಕರು ಅಡುಗೆ ಎಣ್ಣೆ ತಯಾರಿಸುವ ಎಲ್ಲ ಹಂತಗಳನ್ನೂ ಪರಿಶೀಲಿಸಬೇಕು.

ಅಡುಗೆ ಎಣ್ಣೆ ತಯಾರಿಸುವ ಸ್ಥಳದಲ್ಲಿ ಅಲ್ಪ ಸ್ವಲ್ಪ ಜಿಡ್ಡಿನ ಅಂಶ ಸಹಜ. ಆದರೆ ಒಟ್ಟಾರೆಯಾಗಿ ಸ್ವಚ್ಛತೆ ಕಾಪಾಡಬೇಕು. ಉತ್ಪನ್ನ ಹೇಗೆ ತಯಾರಾಗುತ್ತದೆ ಎಂಬುದನ್ನು ತೋರಿಸಬೇಕು. ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಉತ್ತಮ ವಹಿವಾಟು ನಡೆಸಬಹುದು. ಜನರಿಗೆ ಒಳ್ಳೆಯದನ್ನು ಕೊಡಬೇಕು. ವ್ಯಾಪಾರಂ ದ್ರೋಹ ಚಿಂತನಂ ಎನ್ನುತ್ತಾರೆ. ಆದರೆ ಈಗಿನ ಕಾಲಕ್ಕೆ ಅದು ಅನ್ವಯವಾಗದು. ಪ್ರಾಮಾಣಿಕತೆಯೇ ಯಶಸ್ಸಿನ ಗುಟ್ಟು ಎನ್ನುತ್ತಾರೆ ಶ್ರೀನಿವಾಸ ಪ್ರಸಾದ್.‌

ನಾಟಿ ಕಡ್ಲೆ ಬೀಜಗಳನ್ನು ಬಳಸಿ. ಕುಸುಬೆ ಎಂಬ ತೈಲ ಧಾನ್ಯವನ್ನು ಉತ್ತರ ಕರ್ನಾಟಕದಲ್ಲಿ ಬೆಳೆಸುತ್ತಾರೆ. ಆರೋಗ್ಯದಾಯಕ. ಅದನ್ನು ಬಳಸಿ. ಉತ್ತಮ ಧಾನ್ಯಗಳನ್ನು ಆಯ್ಕೆ ಮಾಡಿ. ಕಡಿಮೆ ರೇಟಿಗೆ ಸಿಗುತ್ತದೆ ಎಂದು ಕಳಪೆ ಕೊಬ್ಬರಿ ಖರೀದಿಸದಿರಿ. ಒಳ್ಳೆಯ ಬೀಜ ಕರ್ನಾಟಕದಲ್ಲಿಯೇ ಸಿಗುತ್ತದೆ ಎನ್ನುತ್ತಾರೆ ಅವರು.

Continue Reading

ವಾಣಿಜ್ಯ

Money Plus : ದುಡ್ಡು ಬಿತ್ತಿ ದುಡ್ಡನ್ನು ಬೆಳೆಸುವುದು ಹೇಗೆ?

ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರ (Money Plus ) ಬಹು ನಿರೀಕ್ಷಿತ ಎರಡನೇ ಪುಸ್ತಕ ದುಡ್ಡು ಬಿತ್ತಿ ದುಡ್ಡು ಬೆಳೆಯಿರಿ ಕೃತಿಯಲ್ಲೇನಿದೆ? ವರದಿ ಮತ್ತು ವಿಡಿಯೊ ವೀಕ್ಷಿಸಿ.

VISTARANEWS.COM


on

Money
Koo

ದುಡ್ಡು ಬಿತ್ತಿ ದುಡ್ಡು ಬೆಳೆಯಿರಿ…ಇದು (Money Plus) ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರು ಮ್ಯೂಚುವಲ್‌ ಫಂಡ್‌ ಬಗ್ಗೆ ಬರೆದಿರುವ ಮೊದಲ ಪುಸ್ತಕ. ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಎರಡನೇ ಪುಸ್ತಕವಾಗಿದೆ.

ಕನ್ನಡದಲ್ಲಿ ಮ್ಯೂಚುವಲ್‌ ಫಂಡ್‌ ಬಗ್ಗೆ ತಿಳಿದುಕೊಳ್ಳಲು ಮೌಲಿಕವಾದ ಕೃತಿಗಳ ಕೊರತೆ ಇದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ ಸಲುವಾಗಿ ಸಮಗ್ರವಾಗಿ ಕನ್ನಡಿಗರೇ, ಕನ್ನಡಿಗರಿಗಾಗಿ ಬರೆದಿರುವ ಪುಸ್ತಕ ಇದಾಗಿದೆ. ಇವತ್ತು ಮ್ಯೂಚುವಲ್‌ ಫಂಡ್‌ ಹಾಗೂ ಷೇರುಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬಷ್ಟರಮಟ್ಟಿಗೆ ಅನಿವಾರ್ಯವಾಗಿದೆ. ಏಕೆಂದರೆ ಸಾಂಪ್ರದಾಯಿಕ ಹೂಡಿಕೆಯ ಸಾಧನಗಳು ಈಗ ಹೂಡಿಕೆದಾರರಿಗೆ ಹಣದುಬ್ಬರದ ಎದುರು ನಿರೀಕ್ಷಿತ ಫಲ ನೀಡುತ್ತಿಲ್ಲ. ಇವತ್ತು ಬ್ಯಾಂಕಿನಲ್ಲಿ ಎಫ್‌ಡಿಯಲ್ಲಿ 7% ಬಡ್ಡಿ ಸಿಗುವುದಿದ್ದರೆ ಹಣದುಬ್ಬರದ ಪರಿಣಾಮ ವಾಸ್ತವವಾಗಿ ಏನೂ ಪ್ರತಿಫಲ ಸಿಗುವುದಿಲ್ಲ. ಆದರೆ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು 12-13% ಲಾಭಾಂಶ ನೀಡಿರುವ ಐತಿಹಾಸಿಕ ನಿದರ್ಶನಗಳು ಇವೆ.

ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಷೇರು ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಬೆಲೆ ಏರಿಕೆಯನ್ನು ಮೀರಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು. ಮಾತ್ರವಲ್ಲದೆ ಮ್ಯೂಚುವಲ್‌ ಫಂಡ್‌ಗಳಲ್ಲಿ ದುಡ್ಡು ಸೇಫಾ? ಹೇಗೆ ಹೂಡಿಕೆ ಮಾಡಬೇಕು ಇತ್ಯಾದಿ ಅಂಶಗಳನ್ನು 38 ಅಧ್ಯಾಯಗಳಲ್ಲಿ ಪುಸ್ತಕವನ್ನು ರಚಿಸಲಾಗಿದೆ.

ಈ ಪುಸ್ತಕದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬಹುದಾದ ಉದಾಹರಣೆಗಳನ್ನು ವಿವರಿಸಲಾಗಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ರಿಸ್ಕ್‌ ಇದೆಯೇ? ಇದ್ದರೆ ಎಷ್ಟಿದೆ? ಇದರಲ್ಲಿ ಏನು ಮಾಡಬೇಕು-ಏನು ಮಾಡಬಾರದು ಎಂಬುದನ್ನು ವಿವರಿಸಲಾಗಿದೆ.

Continue Reading
Advertisement
INDIA Alliance partners Congress and AAP Seal seat deal for Goa, Haryana, Gujarat
ದೇಶ28 mins ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ29 mins ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ35 mins ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು35 mins ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ54 mins ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ1 hour ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ1 hour ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Chakravarthi sulibele spoke in Namo Bharat programme at Kudligi
ವಿಜಯನಗರ1 hour ago

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

DY Chandrachud
ಪ್ರಮುಖ ಸುದ್ದಿ1 hour ago

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

Belagavi Airport recorded the lowest minimum temperature and Dry weather likely to prevail
ಮಳೆ1 hour ago

Karnataka Weather : ಬೆಂಗಳೂರಲ್ಲಿ ಸೂರ್ಯ ಮರೆಯಾದರೂ ಏರಲಿದೆ ತಾಪಮಾನ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು3 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ7 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌