Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ - Vistara News

ಜವಾಹಿರಿ ಸಂಹಾರ

Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ

ಅಮೆರಿಕದ ಡ್ರೋನ್‌ ದಾಳಿಗೆ ಬಲಿಯಾಗಿರುವ ಅಲ್‌ ಖೈದಾ ಮುಖ್ಯಸ್ಥ ಜವಾಹಿರಿಯು ಒಸಾಮಾ ಬಿನ್‌ ಲಾಡೆನ್‌ನ ಉತ್ತರಾಧಿಕಾರಿಯಾಗಿದ್ದ ಈತನ ಭಯೋತ್ಪಾದಕ ಕೃತ್ಯಗಳಿಗೆ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಈತನ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.

VISTARANEWS.COM


on

jawahiri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್:‌ ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್‌ ದಾಳಿಗೆ ಹತ್ಯೆಗೀಡಾದ ಅಯೂಮನ್‌ ಅಲ್-ಜವಾಹಿರಿ, ಒಸಾಮಾ ಬಿನ್‌ ಲಾಡೆನ್‌ ಹತ್ಯೆಯಾದ ಬಳಿಕ ಅಲ್‌ಖೈದಾದ ನೇತೃತ್ವವನ್ನು ವಹಿಸಿದ್ದ. ಕಳೆದ ಹಲವಾರು ದಶಕಗಳಿಂದ ಜಗತ್ತಿನ ನಾನಾ ಕಡೆಗಳಲ್ಲಿ ಭಯೋತ್ಪಾದಕ ಕೃತ್ಯಗಳ ಸಂಚುಕೋರನಾಗಿದ್ದ. ಲಾಡೆನ್‌ ಇದ್ದಾಗ ಈತ ಎರಡನೇ ಪ್ರಮುಖನಾಗಿದ್ದ. ಅಮೆರಿಕ ೨೦೧೧ರಲ್ಲಿ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿತ್ತು.‌ ಬಳಿಕ ಈತನೇ ಅಲ್‌ ಖೈದಾದ ನಾಯಕತ್ವ ವಹಿಸಿದ್ದ.

ಒಸಾಮಾ ಬಿನ್‌ ಲಾಡೆನ್‌ನ ಮೆಚ್ಚಿನ ಬಂಟನಾಗಿದ್ದ ಜವಾಹಿರಿ ೨೦೦೧ರಲ್ಲಿ ಅಮೆರಿಕದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂಚಿನ ರೂವಾರಿಗಳಲ್ಲಿ ಒಬ್ಬನಾಗಿದ್ದ. ಅಮೆರಿಕ ಸರ್ಕಾರ ೨೦೦೧ರಲ್ಲಿ ಈತನ ತಲೆಗೆ ೨೫ ದಶಲಕ್ಷ ಡಾಲರ್‌ ಬಹುಮಾನ (ಅಂದಾಜು ೨೦೦ ಕೋಟಿ ರೂ.) ಬಹುಮಾನವನ್ನು ಘೋಷಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಜವಾಹಿರಿ ಅಲ್‌ ಖೈದಾದ ಪ್ರಮುಖ ವಕ್ತಾರನಾಗಿದ್ದ. ೨೦೦೭ರಲ್ಲಿ ೧೬ ವೀಡಿಯೊ ಮತ್ತು ಆಡಿಯೊ ಟೇಪ್‌ಗಳಲ್ಲಿ ಕಾಣಿಸಿಕೊಂಡಿದ್ದ. ಅಮೆರಿಕ ಈ ಹಿಂದೆ ಈತನ ಹತ್ಯೆಗೆ ಯತ್ನಿಸಿತ್ತು. ಆದರೆ ಕಳೆದ ಭಾನುವಾರ ಯಶಸ್ವಿಯಾಗಿದೆ. ೨೦೦೬ರ ಜನವರಿಯಲ್ಲಿ ಅಫಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಅಮೆರಿಕ ನಡೆಸಿದ ದಾಳಿಯ ಗುರಿ ಜವಾಹಿರಿಯೇ ಆಗಿದ್ದ. ಆದರೆ ಆತ ಆಗ ಬಚಾವಾಗಿದ್ದ.

ಸರ್ಜನ್‌ ಆಗಿದ್ದ ಜವಾಹಿರಿ!

ಈಜಿಪ್ತ್‌ನ ರಾಜಧಾನಿ ಕೈರೊದಲ್ಲಿ ೧೯೫೧ರ ಜೂನ್‌ ೧೯ರಂದು ಜನಿಸಿದ್ದ ಜವಾಹಿರಿ, ಮಧ್ಯಮ ವರ್ಗದ ಹಾಗೂ ವೈದ್ಯರು, ಶಿಕ್ಷಿತರನ್ನು ಒಳಗೊಂಡಿದ್ದ ಪ್ರಖ್ಯಾತ ಕುಟುಂಬವೊಂದರಲ್ಲಿ ಜನಿಸಿದ್ದ. ಈತನ ಅಜ್ಜ ರಬಿಯಾ ಜವಾಹಿರಿ ಮಧ್ಯಪ್ರಾಚ್ಯದ ಸುನ್ನಿ ಇಸ್ಲಾಮಿಕ್‌ ಕಲಿಕಾ ಕೇಂದ್ರದಲ್ಲಿ ಇಮಾಮ್ ಆಗಿದ್ದರು. ಈತನ ಸೋದರ ಸಂಬಂಧಿಯೊಬ್ಬರು ಅರಬ್‌ಲೀಗ್‌ನ ಮೊದಲ ಪ್ರಧಾನ ಕಾರ್ಯದರ್ಶಿ ಆಗಿದ್ದರು.

ಶಾಲೆಯಲ್ಲಿ ಓದುತ್ತಿದ್ದಾಗಲೇ ಈಜಿಪ್ತ್‌ನ ಹಳೆಯ ಮತ್ತು ದೊಡ್ಡ ಇಸ್ಲಾಮಿಕ್ ಸಂಘಟನೆಗಳಲ್ಲೊಂದಾಗಿದ್ದ ಮುಸ್ಲಿಮ್‌ ಬ್ರದರ್‌ಹುಡ್‌ನ ಚಟುವಟಿಕೆಗಳಲ್ಲಿ ಜವಾಹಿರಿ ಭಾಗವಹಿಸುತ್ತಿದ್ದ. ಬಳಿಕ ಕೈರೊ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಿದ್ದ. ನಾಲ್ಕು ವರ್ಷಗಳ ಓದಿನ ಬಳಿಕ ೧೯೭೪ರಲ್ಲಿ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ. ಆತನ ತಂದೆ ಮಹಮ್ಮದ್‌ ಅದೇ ಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿದ್ದ. ಆರಂಭದಲ್ಲಿ ಕುಟುಂಬದ ಕ್ಲಿನಿಕ್‌ ಅನ್ನು ಮುಂದುವರಿಸಿದ ಜವಾಹಿರಿ ಬಳಿಕ ಭಯೋತ್ಪಾದಕ ಚಟುವಟಿಕೆಗಳತ್ತ ಆಕರ್ಷಿತನಾದ. ೧೯೭೩ರಲ್ಲಿ ಈಜಿಪ್ತಿನಲ್ಲಿ ಜಿಹಾದ್‌ ಆರಂಭೌಆದಾಗ ಸಕ್ರಿಯನಾದ. ೧೯೮೧ರಲ್ಲಿ ಕೈರೊದಲ್ಲಿ ಈಜಿಪ್ತ್‌ ಅಧ್ಯಕ್ಷ ಅನ್ವರ್‌ ಸದಾತ್‌ ಹತ್ಯೆಯ ಸಂಚು ನಡೆಸಿದ ಆರೋಪ ಜವಾಹಿರಿ ಮೇಲೆ ಕೂಡ ಇತ್ತು. ಮಿಲಿಟರಿ ಪರೇಡ್‌ ವೇಳೆ ಸೈನಿಕರ ವೇಷದಲ್ಲಿ ಉಗ್ರರು ಪ್ರವೇಶಿಸಿ ಅಧ್ಯಕ್ಷರನ್ನು ಹತ್ಯೆಗೈದಿದ್ದರು. ಇಸ್ರೇಲ್‌ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ ಅನ್ವರ್‌ ಸದಾತ್‌ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಧ್ಯಕ್ಷರ ಹತ್ಯೆಯ ವಿಚಾರಣೆಯಲ್ಲಿ ಜವಾಹಿರಿ, ಹತ್ಯೆಯ ಸಮರ್ಥಕರ ನಾಯಕನಾಗಿ ಹೊರಹೊಮ್ಮಿದ್ದ. ಈ ಹತ್ಯೆ ಕೇಸ್‌ನಲ್ಲಿ ಜವಾಹಿರಿ ಖುಲಾಸೆಯಾಗಿದ್ದರೂ, ಇತರ ಪ್ರಕರಣಗಳಿಗೆ ಸಂಬಂಧಿಸಿ ಮೂರು ವರ್ಷ ಜೈಲುವಾಸದ ಶಿಕ್ಷೆ ನೀಡಲಾಗಿತ್ತು. ಈಜಿಪ್ತ್‌ನ ಜೈಲಿನಲ್ಲಿ ಜವಾಹಿರಿಗೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದರೆಂದು ಆತನ ಬೆಂಬಲಿಗರು ಹೇಳುತ್ತಾರೆ. ಈದಾದ ಬಳಿಕ ಜವಾಹಿರಿ ಉಗ್ರನಾಗಿ ಬದಲಾದ ಎಂಬ ವಾದವಿದೆ. ೧೯೮೫ರಲ್ಲಿ ಜೈಲಿನಿಂದ ಬಿಡುಗಡೆಯಾದ ಜವಾಹಿರಿ ಸೌದಿ ಅರೇಬಿಯಾಗೆ ತೆರಳಿದ. ಅಲ್ಲಿಂದ ಪಾಕಿಸ್ತಾನದ ಪೇಶಾವರ ಹಾಗೂ ಬಳಿಕ ಅಫಘಾನಿಸ್ತಾನಕ್ಕೆ ಸ್ಥಳಾಂತರವಾಗಿದ್ದ. ಸೋವಿಯತ್‌ ಒಕ್ಕೂಟವು ಅಫಘಾನಿಸ್ತಾನವನ್ನು ಅತಿಕ್ರಮಿಸಿದ್ದಾಗ ಈತ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅಪಘಾನಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಸಕ್ರಿಯನಾದ. ೧೯೯೩ರಲ್ಲಿ ಈಜಿಪ್ತ್‌ ಮೂಲದ ಭಯೋತ್ಪಾದಕ ಚಟುವಟಿಕೆಗಳ ನಾಯಕತ್ವ ಈತನಿಗೆ ಸಿಕ್ಕಿತು. ಪ್ರಧಾನಿ ಅತೀಫ್‌ ಸಿದ್ಧಿಕಿ ಸೇರಿ ಹಲವರ ಮೇಲೆ ದಾಳಿ ನಡೆಯಿತು. ೯೦ರ ದಶಕದ ಮಧ್ಯಭಾಗದಲ್ಲಿ ಈಜಿಪ್ತ್‌ ಸರ್ಕಾರ ಉರುಳಿಸಲು ನಡೆಸಿದ ಹಿಂಸಾಚಾರಕ್ಕೆ ೧,೨೦೦ ಈಜಿಪ್ತಿಯನ್ನರು ಸಾವಿಗೀಡಾಗಿದ್ದರು. ೧೯೯೯ರಲ್ಲಿ ಜವಾಹಿರಿಗೆ ಗಲ್ಲು ಶಿಕ್ಷೆಯನ್ನು ಈಜಿಪ್ತ್‌ ಕೋರ್ಟ್‌ ಪ್ರಕಟಿಸಿತ್ತು.

ಪಾಶ್ಚಿಮಾತ್ಯ ಗುರಿ: ಜವಾಹಿರಿ ೧೯೯೦ರ ಅವಧಿಯಲ್ಲಿ ಜಗತ್ತಿನ ನಾನಾ ಕಡೆಗಳಿಗೆ ಭೇಟಿ ನೀಡಿದ್ದ.ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಿಸುವುದು, ಕುಮ್ಮಕ್ಕು ಕೊಡುವುದು ಈತನ ದುರುದ್ದೇಶವಾಗಿತ್ತು. ನಕಲಿ ಪಾಸ್‌ಪೋರ್ಟ್‌ ಬಳಸಿ ಆಸ್ಟ್ರಿಯಾ, ಯೆಮನ್‌, ಇರಾಕ್‌, ಇರಾನ್‌, ಪಿಲಿಪ್ಪೀನ್ಸ್‌ಗೆ ಓಡಾಡಿದ್ದ. ೧೯೯೭ರಲ್ಲಿ ಅಫಘಾನಿಸ್ತಾನದ ಜಲಾಲಾಬಾದ್‌ಗೆ ತೆರಳಿದ. ಅದು ಒಸಾಮಾ ಬಿನ್‌ ಲಾಡೆನ್‌ನ ಅಡ್ಡೆಯಾಗಿತ್ತು. ಬಳಿಕ ಲಾಡೆನ್‌ನ ಅಲ್‌ ಖೈದಾ ಭಯೋತ್ಪಾದಕ ಸಂಘಟನೆಗೆ ಜವಾಹಿರಿ ಸೇರಿದ್ದ. ಅಲ್‌ ಖೈದಾ ಅಮೆರಿಕದ ನಾಗರಿಕರ ಹತ್ಯೆಗೆ, ರಾಯಭಾರ ಕಚೇರಿಗಳ ಮೇಲೆ ದಾಳಿಗೆ ಸಂಚು ನಡೆಸುತ್ತಿದ್ದಾಗ ಜವಾಹಿರಿ ಸಹಕರಿಸುತ್ತಿದ್ದ. ಕೀನ್ಯಾ ಮತ್ತು ತಾಂಝಾನಿಯಾದಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು. ಪಾಕಿಸ್ತಾನದಲ್ಲಿ ಈಜಿಪ್ತ್‌ ದೂತಾವಾಸದ ಮೇಲೆ ದಾಳಿ ನಡೆಸಲಾಗಿತ್ತು.

ಅಮೆರಿಕ ವಿರುದ್ಧದ ದಾಳಿ

ಅಮೆರಿಕದ ಮೇಲೆ ೨೦೦೧ರ ಸೆಪ್ಟೆಂಬರ್‌ ೧೧ರಂದು ನಡೆದ ಭೀಕರ ದಾಳಿಯಲ್ಲಿ ಸುಮಾರು ೩,೦೦೦ ಮಂದಿ ಸಾವಿಗೀಡಾಗಿದ್ದರು. ಇದರ ಸಂಚುಕೋರರಲ್ಲಿ ಜವಾಹಿರಿ ಒಬ್ಬನಾಗಿದ್ದ. ಲಾಡೆನ್‌ ಹತ್ಯೆಯ ಬಳಿಕ ೨೦೧೧ರಲ್ಲಿ ಜವಾಹಿರಿಯನ್ನು ಅಲ್‌ ಖೈದಾ ನಾಯಕ ಎಂದು ದೃಢಪಡಿಸಲಾಯಿತು. ಅಲ್‌ ಖೈದಾ ಬಗ್ಗೆ ಈತ ಒಂದು ಪುಸ್ತಕವನ್ನೂ ಬಿಡುಗಡೆಗೊಳಿಸಿದ್ದ.

ಹಿಜಾಬ್‌ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಜವಾಹಿರಿ! : ಕರ್ನಾಟಕದಲ್ಲಿ ಉಂಟಾಗಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಅಲ್‌ ಖೈದಾ ಮುಖ್ಯಸ್ಥ ಜವಾಹಿರಿ ಪ್ರತಿಕ್ರಿಯಿಸಿದ್ದ ವಿಡಿಯೊ ಸುದ್ದಿಯಾಗಿತ್ತು. ಮಂಡ್ಯದಲ್ಲಿ ಹಿಜಾಬ್‌ ವಿರೋಧಿಸಿ ಜೈ ಶ್ರೀರಾಮ್‌ ಘೋಷಿಸುತ್ತಿದ್ದವರಿಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮಸ್ಕಾನ್‌ ಖಾನ್‌ ಅವರನ್ನು ಜವಾಹಿರಿ ಹೊಗಳಿದ್ದ.

ಇದನ್ನೂ ಓದಿ : ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

EXPLAINER

ವಿಸ್ತಾರ Explainer | ಈಜಿಪ್ಟ್‌ ಅಧ್ಯಕ್ಷರನ್ನು ಕೊಂದಿದ್ದ ಜವಾಹಿರಿ, ಇಲ್ಲಿದೆ ಈತನ ಇನ್ನಷ್ಟು ವಿವರ

ಅಮೆರಿಕದ ಡ್ರೋನ್‌ ದಾಳಿಯಲ್ಲಿ ಮೃತನಾದ Ayman al Zawahiri ಕಳೆದ ಎರಡು ದಶಕಗಳಿಂದ ಅಮೆರಿಕಕ್ಕೆ ಬೇಕಾಗಿದ್ದಾನೆ. ಈಜಿಪ್ಟ್‌ನಿಂದ usವರೆಗೂ ಈತ ಎಬ್ಬಿಸಿದ ಹಾವಳಿ ಅಷ್ಟಿಷ್ಟಲ್ಲ.

VISTARANEWS.COM


on

zawahiri
Koo

ಅಫ್ಘಾನಿಸ್ತಾನದಲ್ಲಿ ಅಮೆರಿಕ ಡ್ರೋನ್ ದಾಳಿಗೆ ತುತ್ತಾದ ಐಮಾನ್‌ ಅಲ್ ಜವಾಹಿರಿ (Ayman al-Zawahiri) ಉಗ್ರ ಸಂಘಟನೆ ಅಲ್ ಖೈದಾದ ಮುಖ್ಯ ಐಡಿಯಾಲಜಿಸ್ಟ್‌ಗಳಲ್ಲಿ ಪ್ರಮುಖ. ಈತ ಪೂರ್ವಾಶ್ರಮದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಕನಾಗಿದ್ದ ಎಂಬುದು ವಿಶೇಷ. ಮೇ 2011ರಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು US ಪಡೆಗಳು ಕೊಂದ ನಂತರ ಜವಾಹಿರಿ ಅಲ್ ಖೈದಾದ ನಾಯಕತ್ವ ವಹಿಸಿಕೊಂಡಿದ್ದ.

ಅದಕ್ಕೂ ಮೊದಲು ಜವಾಹಿರಿಯನ್ನು ಬಿನ್ ಲಾಡೆನ್‌ನ ಬಲಗೈ ಬಂಟ ಎಂದು ಪರಿಗಣಿಸಲಾಗಿತ್ತು. ಅಮೆರಿಕದ ಅವಳಿ ಗೋಪುರಗಳ ಮೇಲೆ 11 ಸೆಪ್ಟೆಂಬರ್ 2001ರಂದು ನಡೆದ ವಿಮಾನ ದಾಳಿಯ ಹಿಂದಿನ ಮೆದುಳು ಇವನು ಎಂದು ತಜ್ಞರು ನಂಬಿದ್ದಾರೆ. 2001ರಲ್ಲಿ US ಸರ್ಕಾರ ಘೋಷಿಸಿದ 22 “ಮೋಸ್ಟ್ ವಾಂಟೆಡ್ ಭಯೋತ್ಪಾದಕರ” ಪಟ್ಟಿಯಲ್ಲಿ ಜವಾಹಿರಿ ಎರಡನೇ ಸ್ಥಾನದಲ್ಲಿದ್ದ. ಮೊದಲಿಗ ಬಿನ್ ಲಾಡೆನ್. ಇವನ ಮೇಲಿದ್ದ ತಲೆದಂಡದ ಮೊತ್ತ $ 25 ಮಿಲಿಯ (196 ಕೋಟಿ ರೂ.)

ಅಮೆರಿಕ ದಾಳಿಯ ನಂತರದ ವರ್ಷಗಳಲ್ಲಿ ಜವಾಹಿರಿ ಅಲ್ ಖೈದಾದ ಪ್ರಮುಖ ವಕ್ತಾರನಾದ. 2007ರಲ್ಲಿ ಸುಮಾರು 16 ವಿಡಿಯೊಗಳು ಮತ್ತು ಆಡಿಯೊ ಟೇಪ್‌ಗಳಲ್ಲಿ, ಬಿನ್ ಲಾಡೆನ್‌ಗಿಂತಲೂ ನಾಲ್ಕು ಪಟ್ಟು ಹೆಚ್ಚು ಕಾಣಿಸಿಕೊಂಡ. ವಿಶ್ವದಾದ್ಯಂತ ಅಲ್‌ ಖೈದಾಗೆ ಜಿಹಾದಿಗಳನ್ನು ಸೇರಿಸಿಕೊಳ್ಳಲು ಯತ್ನಿಸಿದ.

ಸಾವಿನಿಂದ ಹಲವು ಬಾರಿ ಬಚಾವಾಗಿದ್ದ

twin towers

ಜವಾಹಿರಿಯನ್ನು ಮುಗಿಸಲು ಅಮೆರಿಕ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2006ರ ಜನವರಿಯಲ್ಲಿ ಅಫ್ಘಾನಿಸ್ತಾನ- ಪಾಕಿಸ್ತಾನ ಗಡಿಯ ಬಳಿ ಕ್ಷಿಪಣಿ ದಾಳಿಗೆ ಗುರಿಯಾಗಿದ್ದ. ದಾಳಿಯಲ್ಲಿ ನಾಲ್ಕು ಅಲ್ ಖೈದಾ ಸದಸ್ಯರು ಸತ್ತರು. ಜವಾಹಿರಿ ಬದುಕುಳಿದ. ಎರಡು ವಾರ ಬಳಿಕ ವಿಡಿಯೊದಲ್ಲಿ ಕಾಣಿಸಿಕೊಂಡ. “ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನ ಸಾವನ್ನು ಒಂದು ಸೆಕೆಂಡ್ ಹತ್ತಿರ ತರಲೂ ಸಾಧ್ಯವಿಲ್ಲʼʼ ಎಂದ.

1951ರ ಜೂನ್ 19ರಂದು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಜನಿಸಿದ ಜವಾಹಿರಿ, ವೈದ್ಯರು ಮತ್ತು ವಿದ್ವಾಂಸರಿದ್ದ ಗೌರವಾನ್ವಿತ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಈತನ ಅಜ್ಜ, ರಬಿಯಾ ಅಲ್ ಜವಾಹಿರಿ, ಮಧ್ಯಪ್ರಾಚ್ಯದಲ್ಲಿ ಸುನ್ನಿ ಇಸ್ಲಾಮಿಕ್ ಕಲಿಕೆಯ ಕೇಂದ್ರವಾದ ಅಲ್ ಅಜರ್‌ನ ಹಿರಿಯ ಇಮಾಮ್ ಆಗಿದ್ದರೆ, ಚಿಕ್ಕಪ್ಪ ಅರಬ್ ಲೀಗ್‌ನ ಮೊದಲ ಸೆಕ್ರೆಟರಿ ಜನರಲ್ ಆಗಿದ್ದರು. ತಂದೆ ಮೊಹಮ್ಮದ್ ಔಷಧಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.

ಜವಾಹಿರಿ ಶಾಲೆಯಲ್ಲಿದ್ದಾಗಲೇ ರಾಜಕೀಯದಲ್ಲಿ ತೊಡಗಿಸಿಕೊಂಡ. ಈಜಿಪ್ಟ್‌ನ ಅತ್ಯಂತ ಹಳೆಯ ಮತ್ತು ದೊಡ್ಡ ಇಸ್ಲಾಮಿಸ್ಟ್ ಸಂಘಟನೆ, ಬಹಿಷ್ಕೃತ ಮುಸ್ಲಿಂ ಬ್ರದರ್‌ಹುಡ್‌ನ ಸದಸ್ಯನಾದ. ಇದಕ್ಕಾಗಿ 15ನೇ ವಯಸ್ಸಿನಲ್ಲಿ ಬಂಧಿಸಲಾಯಿತು. ಆದರೂ ಹೇಗೋ ಕೈರೋ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ. 1974ರಲ್ಲಿ ಪದವಿ ಪಡೆದ. ನಾಲ್ಕು ವರ್ಷ ನಂತರ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ.

ಈಜಿಪ್ಟ್‌ ಅಧ್ಯಕ್ಷರ ಹತ್ಯೆ, ಖುಲಾಸೆ

ಜವಾಹಿರಿ ಆರಂಭದಲ್ಲಿ ಕೌಟುಂಬಿಕ ಸಂಪ್ರದಾಯ ಮುಂದುವರೆಸಿದ. ಕೈರೋದಲ್ಲಿ ಕ್ಲಿನಿಕ್‌ ಆರಂಭಿಸಿದ. ಆದರೆ ಈಜಿಪ್ಟ್ ಸರ್ಕಾರವನ್ನು ಉರುಳಿಸಲು ಕರೆ ನೀಡುತ್ತಿದ್ದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳತ್ತ ಆಕರ್ಷಿತನಾದ. 1973ರಲ್ಲಿ ಈಜಿಪ್ಟ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಸ್ಥಾಪಿತಗೊಂಡಾಗ, ಅದನ್ನು ಸೇರಿದ. 1981ರಲ್ಲಿ, ಕೈರೋದಲ್ಲಿ ಮಿಲಿಟರಿ ಪರೇಡ್‌ನಲ್ಲಿ ಅಧ್ಯಕ್ಷ ಅನ್ವರ್ ಸಾದತ್ ಅವರನ್ನು ಈ ಸಂಘಟನೆ ಉಗ್ರರು ಹತ್ಯೆ ಮಾಡಿದರು. ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಸಾದತ್‌ ಮೇಲೆ ಉಗ್ರರಿಗೆ ಸಿಟ್ಟು ಬಂದಿತ್ತು. ಶಂಕೆಯಲ್ಲಿ ಜವಾಹಿರಿಯನ್ನೂ ಬಂಧಿಸಲಾಯಿತು.

ಸಾಮೂಹಿಕ ವಿಚಾರಣೆಯ ಸಮಯದಲ್ಲಿ, ಜವಾಹಿರಿ ಪ್ರತಿವಾದಿಗಳ ನಾಯಕನಾಗಿ ಹೊರಹೊಮ್ಮಿದ. “ನಾವು ನಮ್ಮ ಧರ್ಮವನ್ನು ನಂಬುತ್ತೇವೆ. ಇಸ್ಲಾಮಿಕ್ ರಾಜ್ಯ ಮತ್ತು ಇಸ್ಲಾಮಿಕ್ ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ.” ಎಂದು ಹೇಳಿಕೆ ನೀಡಿದ. ಆದರೆ ಸಾದತ್‌ ಹತ್ಯೆಯಲ್ಲಿ ಸಾಕ್ಷಿಗಳಿಲ್ಲದೆ ಖುಲಾಸೆಯಾದ. ಆದರೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ. ಜವಾಹಿರಿ ಈಜಿಪ್ಟ್‌ ಜೈಲಿನಲ್ಲಿದ್ದಾಗ ದೊರೆತ ನಿಯಮಿತ ಆತನನ್ನು ಇನ್ನಷ್ಟು ಮತಾಂಧ ಮತ್ತು ಹಿಂಸಾತ್ಮಕ ಉಗ್ರಗಾಮಿಯಾಗಿ ಪರಿವರ್ತಿಸಿತು.

1985ರಲ್ಲಿ ಬಿಡುಗಡೆಯಾದ ನಂತರ ಜವಾಹಿರಿ ಸೌದಿ ಅರೇಬಿಯಾಕ್ಕೆ ತೆರಳಿದ. ಅಲ್ಲಿಂದ ಪಾಕಿಸ್ತಾನದ ಪೇಶಾವರ್‌ ಮತ್ತು ನೆರೆಯ ಅಫ್ಘಾನಿಸ್ತಾನಕ್ಕೂ ಹೋದ. ಅಲ್ಲಿ ಸೋವಿಯತ್ ಆಕ್ರಮಣದ ಸಮಯದಲ್ಲಿ ವೈದ್ಯನಾಗಿ ಕೆಲಸ ಮಾಡಿದ. ಅದೇ ವೇಳೆ ಈಜಿಪ್ಟ್ ಇಸ್ಲಾಮಿಕ್ ಜಿಹಾದ್‌ನ ಇನ್ನೊಂದು ಬಣವನ್ನು ಸ್ಥಾಪಿಸಿದ. 1993ರಲ್ಲಿ ಇದರ ಚಟುವಟಿಕೆ ಜೋರಾಯಿತು. ಪ್ರಧಾನ ಮಂತ್ರಿ ಅತೀಫ್ ಸಿಡ್ಕಿ ಸೇರಿದಂತೆ ಈಜಿಪ್ಟ್ ಸರ್ಕಾರದ ಮಂತ್ರಿಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದ.

ಇನ್ನಷ್ಟು ವಿವರಗಳು: ವಿಸ್ತಾರ Explainer | ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್‌ ಕ್ಷಿಪಣಿ ಸಾಮರ್ಥ್ಯ ಅನೂಹ್ಯ!

1990ರ ದಶಕದ ಮಧ್ಯಭಾಗದಲ್ಲಿ ಈಜಿಪ್ಟ್‌ ಸರ್ಕಾರ ಉರುಳಿಸಲು ಮತ್ತು ದೇಶದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪಿಸಲು ಈತ ನಡೆಸಿದ ಅಭಿಯಾನ 1,200ಕ್ಕೂ ಹೆಚ್ಚು ಈಜಿಪ್ಟಿನವರ ಸಾವಿಗೆ ಕಾರಣವಾಯಿತು. ನಂತರ ವಿದೇಶಿ ಪ್ರವಾಸಿಗರ ಹತ್ಯಾಕಾಂಡ ನಡೆಸತೊಡಗಿದ. ಎರಡು ವರ್ಷಗಳ ನಂತರ, ಗುಂಪು ನಡೆಸಿದ ಅನೇಕ ದಾಳಿಗಳಲ್ಲಿ ಅವನ ಪಾತ್ರಕ್ಕಾಗಿ ಈಜಿಪ್ಟಿನ ಮಿಲಿಟರಿ ನ್ಯಾಯಾಲಯ ಅವನಿಗೆ ಮರಣದಂಡನೆ ನಿಗದಿಪಡಿಸಿತು.

ನಂತರ ಈತ ಈಜಿಪ್ಟ್‌ನಿಂದ ಪರಾರಿಯಾಗಿ ಉಗ್ರ ಸಂಘಟನೆಗೆ ಹಣ ಕಲೆಹಾಕಲು ಪ್ರಪಂಚದಾದ್ಯಂತ ಪ್ರಯಾಣಿಸಿದ. ಅಫ್ಘಾನಿಸ್ತಾನದ ಸೋವಿಯತ್ ಕದನದ ನಂತರದ ವರ್ಷಗಳಲ್ಲಿ ಬಲ್ಗೇರಿಯಾ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ವಾಸಿಸುತ್ತಿದ್ದ. ಕೆಲವೊಮ್ಮೆ ಬಾಲ್ಕನ್ಸ್, ಆಸ್ಟ್ರಿಯಾ, ಯೆಮೆನ್, ಇರಾಕ್, ಇರಾನ್ ಮತ್ತು ಫಿಲಿಪೈನ್ಸ್‌ಗೂ ಸುಳ್ಳು ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ. ಡಿಸೆಂಬರ್ 1996ರಲ್ಲಿ ಚೆಚೆನ್ಯಾದಲ್ಲಿ ವೀಸಾ ಇಲ್ಲದೆ ಸಿಕ್ಕಿಬಿದ್ದ. ಆರು ತಿಂಗಳು ರಷ್ಯಾದ ಬಂಧನದಲ್ಲಿದ್ದ.

ಲಾಡೆನ್‌ ಜತೆಗೆ ಜಲಾಲಾಬಾದ್‌ನಲ್ಲಿ

1997ರಲ್ಲಿ ಈತ ಒಸಾಮಾ ಬಿನ್ ಲಾಡೆನ್ ನೆಲೆಗೊಂಡಿದ್ದ ಆಫ್ಘನ್ ನಗರವಾದ ಜಲಾಲಾಬಾದ್‌ಗೆ ಸ್ಥಳಾಂತರಗೊಂಡ. ಒಂದು ವರ್ಷದ ನಂತರ, ಈಜಿಪ್ಟಿನ ಇಸ್ಲಾಮಿಕ್ ಜಿಹಾದಿಗಳು ಜಾಗತಿಕ ಸಂಘಟನೆ ರಚಿಸಲು ಒಟ್ಟಾದರು. ಅಲ್ ಖೈದಾ ಅದರಲ್ಲಿ ಸೇರಿತು. ಅಮೆರಿಕದ ನಾಗರಿಕರ ಹತ್ಯೆಗೆ ಫತ್ವಾ ನೀಡುತ್ತಿತ್ತು. ಕೀನ್ಯಾ ಮತ್ತು ತಾಂಜಾನಿಯಾದಲ್ಲಿನ US ರಾಯಭಾರ ಕಚೇರಿಗಳನ್ನು ನಾಶಪಡಿಸಿದರು. 223 ಜನ ಸಾವನ್ನಪ್ಪಿದರು.

ದಾಳಿಯ ಎರಡು ವಾರಗಳ ನಂತರ, ಅಫ್ಘಾನಿಸ್ತಾನದ ಗುಂಪಿನ ತರಬೇತಿ ಶಿಬಿರಗಳ ಮೇಲೆ US ಬಾಂಬ್ ದಾಳಿ ನಡೆಸಿತು. ಮರುದಿನ, ಜವಾಹಿರಿ ಪಾಕಿಸ್ತಾನಿ ಪತ್ರಕರ್ತರಿಗೆ ದೂರವಾಣಿ ಕರೆ ಮಾಡಿ ʼʼಯುದ್ಧವು ಈಗಷ್ಟೇ ಪ್ರಾರಂಭವಾಗಿದೆ” ಎಂದ. 2001ರಲ್ಲಿ, ಬಹು ನಿಖರವಾದ ಯೋಜನೆ ರೂಪಿಸಿ, ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದ. ಅಮೆರಿಕ ಪ್ರತೀಕಾರದ ಶಪಥ ತೊಟ್ಟಿತು. 2011ರಲ್ಲಿ ಲಾಡೆನ್‌ನನ್ನು ಮುಗಿಸಿತು. ಜವಾಹಿರಿ ಪರಾರಿಯಾದ. ಇತ್ತೀಚಿನ ವರ್ಷಗಳಲ್ಲಿ ಗುಪ್ತ ಸ್ಥಳಗಳಲ್ಲಿ ಅಡಗಿ ಕುಳಿತು ಸಾಂದರ್ಭಿಕವಾಗಿ ಸಂದೇಶಗಳನ್ನು ನೀಡುತ್ತಿದ್ದ. ಕರ್ನಾಟಕದಲ್ಲಿ ನಡೆದ ಹಿಜಾಬ್‌ ಗಲಾಟೆಗೂ ಈತ ಪ್ರತಿಕ್ರಿಯಿಸಿದ್ದನ್ನು ನೆನಪಿಸಿಕೊಳ್ಳಬಹುದು. ಇವನ ಪತ್ನಿಯರೂ ಈತನ ಪಾತಕ ಕೃತ್ಯಗಳಲ್ಲಿ ಸಹಕಾರ ನೀಡಿದ್ದಾರೆ.

ಇದನ್ನೂ ಓದಿ: Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

Continue Reading

EXPLAINER

ವಿಸ್ತಾರ Explainer | ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್‌ ಕ್ಷಿಪಣಿ ಸಾಮರ್ಥ್ಯ ಅನೂಹ್ಯ!

ಕಾಬೂಲ್‌ನಲ್ಲಿ ಅಡಗಿ ಕುಳಿತಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ Ayman al-Zawahiri ಯನ್ನು ಕೊಂದು ಮುಗಿಸಲು ಅಮೆರಿಕ ಬಳಸಿದ ನಿಖರ ಗುರಿಯ ಕ್ಷಿಪಣಿ ಹೇಗೆ ಕೆಲಸ ಮಾಡುತ್ತದೆ ಗೊತ್ತೆ?

VISTARANEWS.COM


on

hellfire
Koo

ಅಮೆರಿಕ ತನ್ನ ಮೇಲೆ ಘಾತಕ ದಾಳಿ (9/11) ನಡೆಸಿದ್ದ ಅಲ್‌ ಖೈದಾ ಮುಖ್ಯಸ್ಥ ಅಲ್‌ ಜವಾಹಿರಿಯನ್ನು ಬೇರೆ ಯಾವ ಜೀವಹಾನಿಯೂ ಇಲ್ಲದಂತೆ ಆಕಾಶದಿಂದಲೇ ಕೊಂದು ಮುಗಿಸಿದೆ. ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಜವಾಹಿರಿಯನ್ನು ಇಂಚು ಮಾತ್ರ ವ್ಯತ್ಯಾಸವೂ ಇಲ್ಲದಂತೆ ಬಡಿದು ಕೆಡಹಿದ ಆ ಡ್ರೋನ್‌ ಹಾಗೂ ಕ್ಷಿಪಣಿಯ ಬಗ್ಗೆ ಈಗ ಕುತೂಹಲವೆದ್ದಿದೆ.

zawahiri

ಇದರ ಹೆಸರು ಹೆಲ್‌ಫೈರ್‌ (Hellfire R9X) “ninja bombʼ ಅಂತಲೂ ಕರೆಯಲಾಗುತ್ತದೆ. ಜನನಿಬಿಡ ಪ್ರದೇಶದಲ್ಲಿರುವ ಭಯೋತ್ಪಾದಕ ಮುಖಂಡರನ್ನು ಕೆಡವಲು ಈ ಕ್ಷಿಪಣಿಯನ್ನು ಅಮೆರಿಕದ ಸೈನ್ಯ ಬಳಸುತ್ತ ಬಂದಿದೆ. ಎಎಫ್‌ಪಿ ವರದಿಯ ಪ್ರಕಾರ ಅಲ್-ಜವಾಹಿರಿ ನೆಲೆಸಿದ್ದ ಕಾಬೂಲ್‌ನ ಮನೆಯ ಮೇಲೆ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಆದರೆ ಸ್ಥಳದಲ್ಲಿ ಯಾವುದೇ ಸ್ಫೋಟ ಆಗಿಲ್ಲ. ಮತ್ತು ಬೇರೆ ಯಾರಿಗೂ ಹಾನಿ ಆಗಿಲ್ಲ.

ಸ್ಫೋಟಗೊಳ್ಳುವ ವಾರ್‌ಹೆಡ್‌ ಈ ಕ್ಷಿಪಣಿಯಲ್ಲಿ ಇಲ್ಲ. ಆದರೆ ಆರು ರೇಜರ್‌ನಂತಿರುವ ಬ್ಲೇಡ್‌ಗಳಿವೆ. ಗುರಿಯನ್ನು ತಲುಪಿದಾಗ ಈ ಕ್ಷಿಪಣಿ ಸ್ಫೋಟಗೊಳ್ಳದೆ ಬ್ಲೇಡ್‌ಗಳನ್ನು ಬಿಡುಗಡೆ ಮಾಡುತ್ತದೆ. ನಿಖರ ಗುರಿಯನ್ನೇ ಛೇದಿಸುತ್ತದೆ. ಇತರ ನಾಗರಿಕರಿಗೆ ಹಾನಿ ಉಂಟುಮಾಡುವುದಿಲ್ಲ. ಫ್ಲೈಯಿಂಗ್ ಗಿನ್ಸು (flying Ginsu) ಎಂದೂ ಕರೆಯಲಾಗುವ ಹೆಲ್‌ಫೈರ್ R9X, ಯಾವುದೇ ಸ್ಫೋಟಕ ಪೇಲೋಡ್ ಇಲ್ಲದ ಕಾರಣ ಇಡೀ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸುವುದಿಲ್ಲ. ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಅಮೆರಿಕ ಸೈನ್ಯ ಕಂಡುಕೊಂಡ ಆಯುಧವಿದು.

R9X ಮೊದಲ ಬಾರಿಗೆ ಮಾರ್ಚ್ 2017ರಲ್ಲಿ ಕಾಣಿಸಿಕೊಂಡಿತು, ಅಲ್‌ಖೈದಾ ಹಿರಿಯ ನಾಯಕ ಅಬು ಅಲ್-ಖೈರ್ ಅಲ್-ಮಸ್ರಿ ಸಿರಿಯಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತನ ಮೇಲೆ ಡ್ರೋನ್ ದಾಳಿ ನಡೆಸಿ ಕೊಂದು ಹಾಕಿತು. ಆದರೆ ಇದರ ಹೊಣೆಯನ್ನು ಅಮೆರಿಕದ ಮಿಲಿಟರಿ ಪೆಂಟಗನ್ ಅಥವಾ ಗುಪ್ತಚರ ಸಂಸ್ಥೆ CIA ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ.

ನಂತರ, ಅಮೆರಿಕ ಪಡೆಗಳು 2020ರಲ್ಲಿ ಸಿರಿಯಾದಲ್ಲಿ ಅಲ್ ಖೈದಾದ ತರಬೇತುದಾರನನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದವು. ಆಗ ಇವುಗಳ ಬಳಕೆಯಾಯಿತು.

ಹೆಲ್‌ಫೈರ್ R9X ಎಂದರೇನು?

AGM-114 ಹೆಲ್‌ಫೈರ್ ಕ್ಷಿಪಣಿಗಳು ಗಾಳಿಯಿಂದ ನೆಲಕ್ಕೆ ಪ್ರಯೋಗಿಸುವಂಥವು. ಇವುಗಳು ಲೇಸರ್‌ನಿಂದ ಮಾರ್ಗದರ್ಶಿತ, ಸಬ್‌ಸಾನಿಕ್ ವೇಗದ ಕ್ಷಿಪಣಿಗಳು. ಯುದ್ಧ ಟ್ಯಾಂಕ್‌ಗಳನ್ನೂ ಇವು ಛೇದಿಸಬಲ್ಲವು. ಸಿಡಿತಲೆ, ಮಾರ್ಗದರ್ಶನ ವ್ಯವಸ್ಥೆ ಮತ್ತು ಭೌತಿಕ ವ್ಯತ್ಯಾಸಗಳನ್ನು ಅವಲಂಬಿಸಿ ಹೆಲ್‌ಫೈರ್ ಕ್ಷಿಪಣಿಯಲ್ಲಿ ಹಲವಾರು ರೂಪಾಂತರಗಳಿವೆ. ಈ ಸಾಲಿಗೆ ಇತ್ತೀಚಿನ ಮತ್ತು ವಿಶಿಷ್ಟವಾದ ಸೇರ್ಪಡೆ ಎಂದರೆ ಹೆಲ್‌ಫೈರ್ R9X. ಇದು ಪಾಪ್-ಔಟ್ ಆಗುವ ಖಡ್ಗದಂಥ ಬ್ಲೇಡ್‌ಗಳನ್ನು ಬಳಸಿಕೊಂಡು ಗುರಿಯನ್ನು ಭೇದಿಸುತ್ತದೆ. ಬಹುಶಃ ಕಳೆದ ವರ್ಷ ಇರಾನ್‌ನ ಸೈನ್ಯದ ಜನರಲ್ ಖಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಬಳಸಿದ ಕ್ಷಿಪಣಿಯೂ ಇದರ ರೂಪಾಂತರವಾಗಿರಬಹುದು.

ಇದನ್ನೂ ಓದಿ: ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

ವಾಲ್ ಸ್ಟ್ರೀಟ್ ಜರ್ನಲ್ ಹೇಳುವ ಪ್ರಕಾರ, ಈ ಕ್ಷಿಪಣಿಯನ್ನು ರೂಪಿಸಿದ ಸಂದರ್ಭದಲ್ಲಿ ಬರಾಕ್‌ ಒಬಾಮಾ ಆಡಳಿತ ನಾಗರಿಕ ಸಾವು ನೋವುಗಳನ್ನು ಕಡಿಮೆ ಮಾಡುವತ್ತ ಗಮನಹರಿಸಿತ್ತು. ಬೈಡೆನ್‌ಗೂ ಸ್ಫೋಟ ಬೇಕಿರಲಿಲ್ಲ. ಕ್ಷಿಪಣಿಯಲ್ಲಿ ವಿಭಿನ್ನ ರೀತಿಯ ಪೇಲೋಡ್ ಇರುತ್ತದೆ. ಆರು ಉದ್ದನೆಯ ಬ್ಲೇಡ್‌ಗಳನ್ನು ಒಳಗೆ ಹುದುಗಿಸಲಾಗಿರುತ್ತದೆ. ಕ್ಷಿಪಣಿ ಗುರಿಯನ್ನು ನಾಟುವ ಕೆಲವೇ ಸೆಕೆಂಡುಗಳ ಮೊದಲು ಅದು ಬಿಡಿಸಿಕೊಂಡು ತನ್ನ ದಾರಿಯಲ್ಲಿ ಸಿಗುವುದನ್ನೆಲ್ಲ ಚೂರುಚೂರು ಮಾಡುತ್ತದೆ. ಸಾಂಪ್ರದಾಯಿಕ ಹೆಲ್‌ಫೈರ್ ಕ್ಷಿಪಣಿಯಂತೆ ಇದು ಯಾವುದೇ ಸ್ಫೋಟದ ಗುರುತುಗಳನ್ನು ಬಿಡುವುದಿಲ್ಲ. ಸುಟ್ಟಗಾಯಗಳೂ ಇರುವುದಿಲ್ಲ.

ನಿಂಜಾ ಬಾಂಬ್ ಸುಮಾರು 45 ಕೆಜಿ ತೂಗುತ್ತದೆ. ಈ ಕ್ಷಿಪಣಿಯನ್ನು ಡ್ರೋನ್ ಹೆಲಿಕಾಪ್ಟರ್‌ಗಳು, ಜೆಟ್‌ಗಳು ಮತ್ತು ಹಮ್‌ವೀ ಟ್ಯಾಂಕ್‌ಗಳಿಂದಲೂ ಉಡಾಯಿಸಬಹುದು. 500 ಮೀಟರ್‌ಗಳಿಂದ 11 ಕಿ.ಮೀವರೆಗೆ ಎಷ್ಟು ದೂರಕ್ಕೂ ಈ ಕ್ಷಿಪಣಿಯನ್ನು ಬಳಸಬಹುದು.

ಈ ಕಾರ್ಯಾಚರಣೆಯಲ್ಲಿ ಕ್ಷಿಪಣಿಯನ್ನು ಲಾಂಚ್‌ ಮಾಡಲು ಅಮೆರಿಕ ಡ್ರೋನ್ ಅನ್ನು ಬಳಸಿತು. ಮಾಜಿ ಅಧ್ಯಕ್ಷ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಡ್ರೋನ್ ದಾಳಿಗಳು ಹೆಚ್ಚಾದವು. ಡ್ರೋನ್‌ಗಳ ಮಿತಿಮೀರಿದ ಬಳಕೆಯಿಂದ ಟೀಕೆಗೂ ಗುರಿಯಾದದ್ದುಂಟು. ಆದರೆ ಹೆಲ್‌ಫೈರ್‌ನ ಬಳಕೆಯು ಹಾನಿಯನ್ನು ಕಡಿಮೆ ಮಾಡಿದೆ.

ಯಾವ ಡ್ರೋನ್‌ನಿಂದ ಉಡಾಯಿಸಲಾಯಿತು?

ಇವುಗಳನ್ನು MQ9 ರೀಪರ್‌ ಕ್ಷಿಪಣಿಯಿಂದ ಪರಿಣಾಮಕಾರಿಯಾಗಿ ಉಡಾಯಿಸಬಹುದು. ಇವನ್ನು ಪ್ರಿಡೇಟರ್ ಡ್ರೋನ್ಸ್ ಎಂದೂ ಕರೆಯುತ್ತಾರೆ. ಈ ಡ್ರೋನ್‌ಗಳು ತಮ್ಮ ಅಂತರ್ಗತ ಸೆನ್ಸರ್‌ಗಳು ಹಾಗೂ ರೇಡಾರ್‌ಗಳನ್ನು ಬಳಸಿಕೊಂಡು ಗುರಿಗಳನ್ನು ಪತ್ತೆ ಮಾಡುತ್ತವೆ. ಇದು ಒಮ್ಮೆ ಹಾರಿಬಿಟ್ಟರೆ 27 ಗಂಟೆಗಳಿಗೂ ಹೆಚ್ಚು ಕಾಲ ಗಾಳಿಯಲ್ಲಿರಬಲ್ಲದು. ಸುಮಾರು 1,700 ಕೆಜಿಗಳವರೆಗೆ ಪೇಲೋಡ್‌ ಹೊತ್ತು, 6,000 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ, 50,000 ಅಡಿಗಳಷ್ಟು ಎತ್ತರದಲ್ಲಿ ಹಾರಬಲ್ಲದು. ಮಾರಣಾಂತಿಕ ಹೆಲ್‌ಫೈರ್ ಕ್ಷಿಪಣಿಗಳು ಮತ್ತು ಲೇಸರ್-ಮಾರ್ಗದರ್ಶಿತ ಬಾಂಬುಗಳನ್ನು ಒಯ್ಯಬಲ್ಲದು.

ಇದನ್ನೂ ಓದಿ: Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

ಭಾರತಕ್ಕೂ ಬೇಕಿದೆ

ಎರಡು ಅಪಾಯಕಾರಿ ದೇಶಗಳ ಜತೆ ಗಡಿ ಹಂಚಿಕೊಂಡಿರುವ ಭಾರತಕ್ಕೂ ಇಂಥ ಕ್ಷಿಪಣಿ ಹಾಗೂ ಡ್ರೋನ್‌ಗಳು ಅಗತ್ಯವಾಗಿ ಬೇಕಿವೆ. ಸಶಸ್ತ್ರ ಡ್ರೋನ್‌ಗಳನ್ನು ಪಡೆಯಲು ಭಾರತವೂ ಆಸಕ್ತಿ ತೋರಿಸಿದೆ.

ಯುಎಸ್ ಕಂಪನಿ ಜನರಲ್ ಅಟಾಮಿಕ್ಸ್ ತಯಾರಿಸಿದ 30 ಸಶಸ್ತ್ರ ಡ್ರೋನ್‌ಗಳ ಖರೀದಿಗೆ $ 3 ಬಿಲಿಯ ಒಪ್ಪಂದ ನಡೆಯುತ್ತಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ತಲಾ 10 ಯುದ್ಧ ಡ್ರೋನ್‌ಗಳನ್ನು ಪಡೆಯಲು ಚಿಂತಿಸಲಾಗಿದೆ.

ಈ ಡ್ರೋನ್‌ಗಳು ಬಾಂಬ್‌ಗಳನ್ನು ಬೀಳಿಸಬಲ್ಲವು, ಕ್ಷಿಪಣಿಗಳನ್ನು ಹಾರಿಸಬಲ್ಲವು, ಅಥವಾ ಸಶಸ್ತ್ರ UAV ಅನ್ನು ಅಪ್ಪಳಿಸಿ ಧ್ವಂಸಗೊಳಿಸಬಲ್ಲವು. ಡ್ರೋನನ್ನು ಅಡಗಿಸುವ ಅಂತರ್ಗತ ವೈಶಿಷ್ಟ್ಯಗಳು ಇವುಗಳನ್ನು ವೈರಿ ರೇಡಾರ್‌ಗಳು ಪತ್ತೆ ಹಚ್ಚದಂತೆ ಮಾಡುತ್ತವೆ. ಜನನಿಬಿಡ ಪ್ರದೇಶದಲ್ಲೂ ಒಳಗೊಳಗೇ ನುಗ್ಗಿ ಇವು ಹೊಡೆಯಬಲ್ಲವು.

ಯುಎಸ್ ಪಡೆಗಳು ಕಡಿಮೆ ಸಾವುನೋವು ಖಚಿತಪಡಿಸಿಕೊಳ್ಳಲು ಡ್ರೋನ್ ಯುದ್ಧತಂತ್ರವನ್ನು ಅಳವಡಿಸಿಕೊಂಡಿವೆ. ತೀರಾ ಇತ್ತೀಚೆಗೆ, ಅರ್ಮೇನಿಯಾ ವಿರುದ್ಧ ಅಜೆರ್ಬೈಜಾನ್‌ ಸಶಸ್ತ್ರ ಡ್ರೋನ್‌ಗಳನ್ನು ಬಳಸಿತು. ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಇದನ್ನು ವ್ಯಾಪಕವಾಗಿ ಬಳಸಿತು.

ಒಸಾಮಾ ಬಿನ್ ಲಾಡೆನ್‌ನ ಹತ್ಯೆಯ ನಂತರ ಅಲ್ ಖೈದಾ ನಾಯಕತ್ವ ವಹಿಸಿಕೊಂಡ ಈಜಿಪ್ಟ್ ಮೂಲದ ಶಸ್ತ್ರಚಿಕಿತ್ಸಕ ಅಲ್ ಜವಾಹಿರಿ ಕ್ಷಿಪಣಿಗೆ ತುತ್ತಾಗುವಾಗ ಆತನಿಗೆ 71 ವರ್ಷವಾಗಿತ್ತು. ಅವನ ತಲೆಯ ಮೇಲೆ $25 ಮಿಲಿಯನ್ ತಲೆದಂಡವಿತ್ತು.

Continue Reading

ಜವಾಹಿರಿ ಸಂಹಾರ

Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

ಅಮೆರಿಕದ ಡ್ರೋನ್‌ ನಡೆಸಿದ ಮಿಸೈಲ್‌ ದಾಳಿ ಅದೆಷ್ಟು ಕರಾರುವಕ್ಕಾಗಿ ಇತ್ತೆಂದರೆ ಕೆಲವೇ ನಿಮಿಷಗಳಷ್ಟು ಹೊತ್ತು ಬಾಲ್ಕನಿಗೆ ಬಂದು ನಿಂತಿದ್ದ ಅಲ್‌ ಜವಾಹಿರಿ ಅಲ್ಲೇ ಹೆಣವಾಗಿ ಬಿದ್ದಿದ್ದ. ಮನೆಯ ಬೇರೆ ಯಾರಿಗೂ ಸಣ್ಣ ಗಾಯವೂ ಆಗಿಲ್ಲ

VISTARANEWS.COM


on

Al jawahiri
ಜವಾಹಿರಿ ವಾಸವಾಗಿದ್ದ ಎನ್ನಲಾದ ಕಾಬೂಲ್‌ನ ಮನೆ. ಇದೇ ಮನೆಯ ಬಾಲ್ಕನಿಗೆ ಮಿಸೈಲ್‌ ಬಡಿದಿದ್ದು.
Koo

ಕಾಬೂಲ್‌: ನೀನು ಎಲ್ಲೇ ಇರು, ಹೇಗೇ ಇರು. ಎಷ್ಟು ಕಾಲವೇ ಆಗಲಿ.. ಎಲ್ಲೇ ಅಡಗಿಕೊಂಡಿರು. ನಮ್ಮ ಜನರಿಗೆ ಬೆದರಿಕೆಯಾಗಿರುವ ನಿನ್ನನ್ನು ಅಮೆರಿಕ ಎಲ್ಲೇ ಇದ್ದರೂ ಹುಡುಕಿಕೊಂಡು ಬಂದು ಹೊಡೆದೇ ಹೊಡೆಯುತ್ತದೆ: ಹೀಗಂತ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಪ್ರತಿಜ್ಞೆ ಮಾಡಿದ್ದರು. ಅದು ಭಾನುವಾರ ಪೂರೈಸಿದೆ.

೨೦೦೧ರ ಸೆಪ್ಟೆಂಬರ್‌ ೧೧ರಂದು ಅವಳಿ ಗೋಪುರಗಳನ್ನು ವಿಮಾನ ನುಗ್ಗಿಸಿ ಒಡೆದು ಹಾಕಿದ್ದ ಅಲ್‌ ಖೈದಾ ದಾಳಿ ಅಮೆರಿಕವನ್ನು ತೀವ್ರವಾಗಿ ಕಾಡಿತ್ತು. ೨೦೧೧ರಲ್ಲಿ ಒಸಾಮಾ ಬಿನ್‌ ಲಾಡೆನ್‌ನ್ನು ಅವನು ಅಡಗಿದ್ದ ಗುಹೆಯಿಂದಲೇ ಹೊರಗೆಳೆದು ತಂದು ಕೊಂದು ಹಾಕಿದ್ದ ಅಮೆರಿಕನ್‌ ಸೇನೆಗೆ ಆವತ್ತಿನ ದಾಳಿಯ ಮಾಸ್ಟರ್‌ ಮೈಂಡ್‌ನನ್ನು ಹಿಡಿಯಲು ಮಾತ್ರ ೨೧ ವರ್ಷಗಳೇ ಬೇಕಾದವು. ಆದರೆ, ಅಮೆರಿಕ ಜವಾಹಿರಿಯ ಈ ಹತ್ಯೆಯ ಮೂಲಕ ತನ್ನ ಶಪಥವನ್ನು ಈಡೇರಿಸಿಕೊಂಡಿದೆ.
ಅವಳಿ ಗೋಪುರಗಳು ಒಡೆದು ತನ್ನ ಪ್ರತಿಷ್ಠೆಯೇ ಚೂರಾಗಿ ಹೋದ ಸಿಟ್ಟಿನಲ್ಲಿ ಕುದಿಯುತ್ತಿದ್ದ ಅಮೆರಿಕ ತಾಲಿಬಾನ್‌ ಮೇಲಿನ ಸಿಟ್ಟಿನಿಂದ ಇಡಿ ಅಫಘಾನಿಸ್ತಾನವನ್ನೇ ಸಾಕಷ್ಟು ನಾಶ ಮಾಡಿದೆ. ಈ ನಡುವೆ ಅಲ್ಲೊಂದು ಸರಕಾರವನ್ನು ರಚಿಸಿಯೂ ಇತ್ತು. ಆದರೆ, ಒಮ್ಮೆ ಅಮೆರಿಕನ್‌ ಸೇನೆ ಮರಳಿದ ಕೂಡಲೇ ಅಲ್ಲಿ ಮತ್ತೆ ತಾಲಿಬಾನ್‌ ಆಡಳಿತ ಶುರುವಾಗಿದೆ.

ನಿಜವೆಂದರೆ, ದೇಶ ಬಿಟ್ಟುಹೋಗುವಾಗ ತಾಲಿಬಾನ್‌ ಸರಕಾರಕ್ಕೆ ಅಮೆರಿಕ ನೀಡಿದ ಅತಿ ದೊಡ್ಡ ಎಚ್ಚರಿಕೆ ಏನೆಂದರೆ, ಯಾವ ಕಾರಣಕ್ಕೂ ಅಲ್‌ ಖೈದಾ ನಾಯಕರಿಗೆ ರಕ್ಷಣೆ ಕೊಡಬಾರದು ಎನ್ನುವುದು. ಆದರೆ, ಅಮೆರಿಕದ ಸೂಚನೆಯನ್ನು ಧಿಕ್ಕರಿಸಿದ ತಾಲಿಬಾನ್‌ ಸರಕಾರ ಅಲ್‌ ಖೈದಾದ ಎರಡನೇ ಸೇನಾ ನಾಯಕ ಅಲ್‌ ಜವಾಹಿರಿಯನ್ನು ರಾಜಧಾನಿ ಕಾಬೂಲಿನಲ್ಲೇ ಸುರಕ್ಷಿತವಾಗಿ ಇಟ್ಟುಕೊಂಡಿತ್ತು. ಆದರೆ, ಯಾವಾಗ ಇದು ಅಮೆರಿಕಕ್ಕೆ ಗೊತ್ತಾಯಿತೋ ಅಲ್ಲಿನ ಸಿಐಎ ಜವಾಹಿರಿಯ ಅಂತ್ಯಕ್ಕೆ ಸಿದ್ಧತೆಗಳನ್ನು ನಡೆಸಿಕೊಂಡಿತು

ನಿಜವೆಂದರೆ, ಜವಾಹಿರಿ ಸತ್ತೇ ಹೋಗಿದ್ದಾನೆ ಎಂಬೆಲ್ಲ ಸುದ್ದಿಗಳು ಹರಡಿಕೊಂಡಿದ್ದವು. ಆದರೆ, ೨೦೨೧ರ ಹೊತ್ತಿಗೆ ಮತ್ತೆ ವಿಡಿಯೊ ಮೂಲಕ ಕಾಣಿಸಿಕೊಂಡಿದ್ದ ಆತ ಇನ್ನೂ ಬದುಕಿದ್ದೇನೆ ಎಂದು ತೋರಿಸಿಕೊಟ್ಟಿದ್ದ. ೨೦೨೨ರ ಮಾರ್ಚ್‌ನಲ್ಲಿ ಕರ್ನಾಟಕದ ಹಿಜಾಬ್‌ ವಿವಾದಕ್ಕೆ ಪ್ರತಿಕ್ರಿಯಿಸುವ ಮೂಲಕ ಆತನ ಇರವು ಮತ್ತಷ್ಟು ಸ್ಪಷ್ಟಗೊಂಡಿತ್ತು. ಬಹುಶಃ ಅಮೆರಿಕ ಆತನನ್ನು ಬೆನ್ನಟ್ಟಲು ಇದೇ ಕಾರಣವಾಗಿರಲೂಬಹುದು.

ಭಾನುವಾರ ನಡೆದಿದ್ದೇನು?
ಮೂಲಗಳ ಪ್ರಕಾರ, ಅಮೆರಿಕದ ಸಿಐಎ ಕಳೆದ ಕೆಲವು ತಿಂಗಳುಗಳಿಂದ ಕಾಬೂಲ್‌ನ ಆ ಮನೆಯ ಮೇಲೆ ಕಣ್ಣಿಟ್ಟಿತ್ತು. ಅಲ್ಲಿದ್ದಾನೆಂದು ಹೇಳಲಾದ ಜವಾಹಿರಿಯ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ಭಾನುವಾರ ಅದಕ್ಕೊಂದು ಮುಹೂರ್ತ ಸಿಕ್ಕಿತು.

ಆ ಮನೆಯಲ್ಲಿ ಕುಟುಂಬದ ಕೆಲವು ಸದಸ್ಯರೊಂದಿಗೆ ಇದ್ದ ಅಲ್‌ ಜವಾಹಿರಿ ಮನೆಯ ಬಾಲ್ಕನಿಗೆ ಬರುವುದನ್ನೇ ಕಾದು ಕುಳಿತಿದ್ದ ಅಮೆರಿಕನ್‌ ಡ್ರೋನ್‌ ಒಂದು ಎರಡು ಮಿಸೈಲ್‌ಗಳನ್ನು ನೇರವಾಗಿ ಬಾಲ್ಕನಿಯನ್ನೇ ಗುರಿಯಾಗಿಟ್ಟು ಸಿಡಿಸಿದೆ. ಅದು ನೇರವಾಗಿ ಬಾಲ್ಕನಿಗೇ ಬಡಿದು ಜವಾಹಿರಿ ಉರುಳಿದ್ದಾನೆ.

ಹಾಗಂತ ಅಮೆರಿಕ ಎರಡು ದಿನ ಕಳೆದರೂ ತನ್ನ ದಾಳಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಯಾಕೆಂದರೆ, ದಾಳಿಗೆ ಒಳಗಾದವನು ನಿಜಕ್ಕೂ ಸತ್ತಿದ್ದಾನೋ ಎನ್ನುವುದಾಗಲಿ, ಸತ್ತವನು ಜವಾಹಿರಿಯೇ ಎನ್ನುವುದಾಗಲಿ ಅಮೆರಿಕಕ್ಕೆ ಸ್ಪಷ್ಟವಿರಲಿಲ್ಲ. ಹಾಗಾಗಿ, ಅಫಘಾನಿಸ್ತಾನದ ತಾಲಿಬಾನ್‌ ಸರಕಾರವೇ ಇದನ್ನು ದೃಢಪಡಿಸಲಿ ಎಂದು ಅದು ಕಾದು ಕುಳಿತಿತ್ತು. ಯಾವಾಗ ಸರಕಾರ ಜವಾಹಿರಿ ಸತ್ತಿದ್ದಾನೆ ಎಂದು ಘೋಷಿಸಿತೋ ಆಗ, ಸೋಮವಾರ ರಾತ್ರಿ ಅಮೆರಿಕ ದಾಳಿಯ ಮಾಹಿತಿ ಹೊರಹಾಕಿದೆ.

ಈ ಮನೆಯಲ್ಲಿ ಜವಾಹಿರಿಯ ಕೆಲವು ಬಂಧುಗಳು ಇದ್ದರಾದರೂ ಅವರಿಗೆ ಯಾರಿಗೂ ಅಪಾಯವಾಗಿಲ್ಲ. ಅಷ್ಟು ನಿಖರವಾಗಿ ಅಮೆರಿಕದ ಡ್ರೋನ್‌ಗಳು ತಮ್ಮ ಕೆಲಸವನ್ನು ಮುಗಿಸಿವೆ.
ಜವಾಹಿರಿಯ ಅಂತ್ಯ ೨೦೦೧ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡರ ಕುಟುಂಬಿಕರಿಗೆ ನ್ಯಾಯವನ್ನು ನೀಡಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಅದರ ಜತೆಗೆ ೨೦೦೦ನೇ ಇಸವಿಯ ಅಕ್ಟೋಬರ್‌ನಲ್ಲಿ ಅಡೆನ್‌ನಲ್ಲಿ ಅಮೆರಿಕದ ಕೋವೆಲ್‌ ನೇವಲ್‌ ಮೇಲೆ ಆತ್ಮಹತ್ಯಾ ದಾಳಿ ನಡೆಸಿ ೧೭ ಅಮೆರಿಕನ್‌ ನಾವಿಕರನ್ನು ಕೊಂದು ಹಾಕಿದ ಕೃತ್ಯಕ್ಕೂ ಪ್ರತಿಕಾರ ತೀರಿಸಿಕೊಂಡಂತಾಗಿದೆ ಎಂದು ಬೈಡನ್‌ ಹೇಳಿದ್ದಾರೆ.

ಇದನ್ನೂ ಓದಿ| Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ದಾಳಿಯ ಸಂಚುಕೋರ ಜವಾಹಿರಿ ಫಿನಿಶ್

Continue Reading

ಕರ್ನಾಟಕ

Al-Jawahiri Dead | ನಮ್ಮ ರಾಜ್ಯದ ಹಿಜಾಬ್‌ ವಿವಾದದಲ್ಲೂ ಮೂಗು ತೂರಿಸಿದ್ದ ಅಲ್-‌ ಜವಾಹಿರಿ!

ಅಮೆರಿಕದ ಪಡೆಗಳಿಂದ ಹತನಾದ ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಕಾಣಿಸಿಕೊಂಡ ಹಿಜಾಬ್‌ ವಿವಾದಕ್ಕೂ ತಲೆ ಹಾಕಿದ್ದ. ಏನು ಹೇಳಿದ್ದ ಅವನು?

VISTARANEWS.COM


on

Jawahiri
Koo

ಬೆಂಗಳೂರು: ಅಮೆರಿಕದ ಡ್ರೋನ್‌ ದಾಳಿಯಲ್ಲಿ ಹತನಾದ ಅಲ್‌ಖೈದಾ ನಾಯಕ ಅಯೂಮನ್‌ ಅಲ್‌-ಜವಾಹಿರಿ  ಕೆಲವು ತಿಂಗಳ ರಾಜ್ಯದಲ್ಲಿ ನಡೆದ ಹಿಜಾಬ್‌ ವಿವಾದದಲ್ಲೂ ತಲೆ ಹಾಕಿದ್ದ!

ಹೌದು, ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಕೆಲವು  ಮುಸ್ಲಿಂ ಪಿಯುಸಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಧರಿಸಿಕೊಂಡೇ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ದೊಡ್ಡ ಗಲಾಟೆ ಮಾಡಿದ್ದರು. ಆಗ ರಾಜ್ಯಾದ್ಯಂತ ಹಲವು ಕಡೆ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ವೇಳೆ ಅಲ್‌ ಜವಾಹಿರಿ ಕೂಡಾ ಎಂಟ್ರಿ ಕೊಟ್ಟಿದ್ದ.

ಪ್ರತಿಭಟನೆ, ಕಾನೂನು ಹೋರಾಟಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ, 2022ರ ಮಾರ್ಚ್‌ 24ರಂದು ಮಂಡ್ಯದ ಕಾಲೇಜು ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಕಾಲೇಜಿಗೆ ಹಾಲ್‌ ಟಿಕೆಟ್‌ ತೆಗೆದುಕೊಳ್ಳಲೆಂದು ಬಂದಾಗ ಕೆಲವು ಹುಡುಗರು ಜೈಶ್ರೀರಾಮ್‌ ಎನ್ನುತ್ತಾ ಆಕೆಯ ಬೆನ್ನು ಹತ್ತಿದ್ದರು. ಈ ವೇಳೆ ಆಕೆ ತಿರುಗಿ ನಿಂತು ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಅಲ್‌ಜವಾಹಿರಿ ಒಂಬತ್ತು ನಿಮಿಷಗಳ ಒಂದು ವಿಡಿಯೊ ಬಿಟ್ಟಿದ್ದ. ಅದರಲ್ಲಿ ಮುಸ್ಕಾನ್‌ ಖಾನ್‌ಳನ್ನು ಶ್ಲಾಘಿಸಲಾಗಿತ್ತು.

ಮಾದರಿ ಮಹಿಳೆ ಎಂದಿದ್ದ
ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಮುಸ್ಕಾನ್‌ ಖಾನ್‌ಳನ್ನು  ಹೊಗಳಿ

ಒಂದು ಕವನವನ್ನೇ ಓದಿಬಿಟ್ಟಿದ್ದ. ಅದರ ವಿಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾವೇ ಬಿಡುಗಡೆ ಮಾಡಿತ್ತು.   ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ. 

ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದಿದ್ದಾನೆ. ಅಲ್ಲದೆ, ಮುಸ್ಕಾನ್ ಹೊಗಳಿಕೆಯಲ್ಲಿ ಕವನ ಓದುತ್ತಿರುವುದಾಗಿಯೂ  ಹೇಳಿ ಕವನ  ಯಾಚಿಸಿದ್ದಾನೆ. ಅಲ್ಲದೆ ಕವಿತೆಯನ್ನು ಓದಿದ ನಂತರ, ಹಿಜಾಬ್  ಅನ್ನು ನಿಷೇಧಿಸಿದ  ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದ. ಈ ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳ ಮಿತ್ರರಾಷ್ಟ್ರಗಳು ಎಂದು ಕರೆದಿದ್ದಾನೆ.
ಈ ವಿಡಿಯೊ ಬಿಡುಗಡೆಯಾದ ಕೂಡಲೇ ಮುಸ್ಕಾನ್‌ ಖಾನ್‌ ಅವರ ತಂದೆ ಪ್ರತಿಕ್ರಿಯಿಸಿ ತಮಗೂ ಜವಾಹಿರಿಗೂ ಯಾವುದೇ ಸಂಬಂಧವಿಲ್ಲ. ಅವರೆಲ್ಲ ಇಲ್ಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಗಟ್ಟಿಯಾಗಿ ಹೇಳಿದ್ದರು.

ಕರ್ನಾಟಕದಲ್ಲಿ ಈ ವರ್ಷದ ಆರಂಭದಲ್ಲಿ ಎದ್ದಿದ್ದ ಹಿಜಾಬ್‌ ವಿವಾದಕ್ಕೆ ಅಲ್‌ ಜವಾಹಿರಿ ಪ್ರತಿಕ್ರಿಯೆ ನೀಡಿದ್ದ. ಮಂಡ್ಯದ ಹುಡುಗಿ ಮುಸ್ಕಾನ್‌ಳ ಧೈರ್ಯವನ್ನು ಮೆಚ್ಚಿದ್ದಾಗಿ ಹೇಳಿದ್ದ. ಮುಸ್ಕಾನ್‌ ಕುಟುಂಬವೂ ಇದನ್ನು ಆಕ್ಷೇಪಿಸಿತ್ತು.

ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

Continue Reading
Advertisement
Kodava Family Hockey Tournament Website Launched
ಕೊಡಗು2 ತಿಂಗಳುಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ತಿಂಗಳುಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ತಿಂಗಳುಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ತಿಂಗಳುಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ತಿಂಗಳುಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ತಿಂಗಳುಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ತಿಂಗಳುಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌