ಕರ್ನಾಟಕ
Mysore News : ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿದ ಚಾಲಕ!
Mysore News : ಅಧಿಕಾರಿಯೊಬ್ಬನ ಕಿರುಕುಳಕ್ಕೆ ಬೇಸತ್ತು ಅರಣ್ಯ ಇಲಾಖೆಯ ಜೀಪ್ ಡ್ರೈವರ್ ಆತ್ಮಹತ್ಯೆಗೆ (Assault Case) ಯತ್ನಿಸಿದ್ದಾರೆ. ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡ ಚಾಲಕನನ್ನು ಇತರೆ ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೈಸೂರು: ಅರಣ್ಯ ಇಲಾಖೆಯ ಚಾಲಕನೊಬ್ಬ ಅಧಿಕಾರಿಯ ಕಿರುಕುಳವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಆತ್ಮಹತ್ಯೆಗೆ (Mysore News) ಯತ್ನಿಸಿದವನು.
ವಿನೋದ್ ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್‌ನ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಕ್ರಿಮಿನಾಶಕ ಸೇವಿಸಿ ನಿತ್ರಾಣಗೊಂಡಿದ್ದ. ಇದನ್ನೂ ಗಮನಿಸಿದ ಇತರೆ ಸಹೋದ್ಯೋಗಿಗಳು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಜೀಪ್ ಡ್ರೈವರ್ ಆಗಿದ್ದ ವಿನೋದ್‌ಗೆ ಜೀಪ್ ಟೈರ್ ಪಂಚರ್ ಆಗಿದ್ದಕ್ಕೆ ಡಿಆರ್‌ಎಫ್‌ಒ ನವೀನ್ ಎಂಬಾತ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಬೇಸೆತ್ತು ವಿನೋದ್ ಕ್ರಿಮಿನಾಶಕ ಸೇವಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Actor Nagabhushan: ರಕ್ಷಿತ್ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್ ಅಭಿನಯದ ʻಟಗರು ಪಲ್ಯʼ ರಿಲೀಸ್!
ಸರ್ಕಾರದ ಹಣ ದುರುಪಯೋಗ
ಇನ್ನು 15 ಮಂದಿ ಆನೆ ಕಾವಲು ಪಡೆಯಲ್ಲಿ 10 ಮಂದಿಯನ್ನು ನಿಯೋಜಿಸಿ ಉಳಿದ 6 ಮಂದಿ ತಮ್ಮ ಸಂಬಂಧಿಕರನ್ನೇ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದಾರೆ. ಅವರು ಕರ್ತವ್ಯಕ್ಕೆ ಬಾರದೆ ಇದ್ದರೂ ವೇತನ ನೀಡುತ್ತಿದ್ದಾರೆ ಎಂದು ಇತರೆ ತಂಡದ ಸದಸ್ಯರು ಆರೋಪಿಸಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಆನೆ ಕಾವಲು ಪಡೆ ತಂಡದ ಯುವಕರಿಗೆ ನವೀನ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಕಾವಲು ಪಡೆ ತಂಡದ ಸದಸ್ಯರು ಬೇಸರಗೊಂಡಿದ್ದಾರೆ.
ಈ ಬಗ್ಗೆ ನವೀನ್ ಕೂಡ ಪ್ರತಿಕ್ರಿಯಿಸಿದ್ದು, ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ಹಲ್ಲೆ ಮಾಡುವ ಹಕ್ಕು ನಮ್ಮಗಿಲ್ಲ. ಜೀಪ್ ಟೈರ್ ಪಂಚ್ ಆದಾಗ ನಿನ್ನದೆ ಜವಾಬ್ದಾರಿ ಎಂದು ಹೇಳಿದ್ದೆ ಅಷ್ಟೇ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಲು ಹೋಗಿದ್ದರು. ಆದರೆ ಅಲ್ಲಿ ಏನು ಆಯಿತೋ ಏನೋ, ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಘಟನೆ ಬೆನ್ನಲ್ಲೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ಕೊಡಗು
Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ
Kodagu News : ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.
ಕೊಡಗು: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ (Kodagu News ) ನಡೆಯಿತು. ಪ್ರತಿ ವರ್ಷ ಕೂಡ ಒಂದೊಂದು ಕುಟುಂಬಗಳು ಪಂದ್ಯಾಟ ಆಯೋಜಿಸುವ ಜವಬ್ದಾರಿ ಹೊತ್ತುಕೊಳ್ಳುತ್ತೆ. ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.
ಮೊದಲಿಗೆ ದೀಪ ಬೆಳಗುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ 2025 ನೇ ಮುದಂಡ ಕ್ರಿಕೇಟ್ ಪಂದ್ಯಾವಳಿಯ ವೆಬ್ ಸೈಟ್ ಲಾಂಚ್ ಮಾಡಿದ್ದು ಎಲ್ಲಾ ರೀತಿಯ ಮಾಹಿತಿಯನ್ನ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡಿ ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ.
ಕಾರ್ಯಕ್ರಮದಲ್ಲಿ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಸ್ಥಳೀಯ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ,ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ,ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ,
ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ,ಆದ್ಯ ಪೊನ್ನಣ್ಣ ,ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ ಪ್ರಮುಖರು ಇದ್ದರು
ಬೆಂಗಳೂರು
Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟ ಹಳ್ಳಿಹೈದ
Bengaluru News : 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರು: ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ, ಮಿಸ್ಟರ್ ಅಂಡ್ ಮಿಸ್ ಐಡಲ್ ಆಫ್ ಇಂಡಿಯಾ 2024 ಕಳೆದ ಅಕ್ಟೋಬರ್ 27 ರಂದು ತರಳು ಎಸ್ಟೇಟ್‌ನ ವಿಂಟೇಜ್ ಫಾರ್ಮ್ಸ್ನಲ್ಲಿ (Bengaluru News) ನಡೆಯಿತು. ಈ ಕಾರ್ಯಕ್ರಮವನ್ನು ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ ಕೌಶಿಕ್ ಆರ್ ಅವರು ಕೌಶಲ್ಯದಿಂದ ನಿರ್ದೇಶಿಸಿದರು. ಅವರು ಕೇವಲ 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಜಯ್ ಪ್ರಸಾದ್, ರಾವುಲ್, ಶರತ್, ಕಾತಿ೯ಕ್ ಮತ್ತು ಕೆಎಸ್‌ಎಚ್ ಗ್ರೂಪ್ಸ್ ( Ksh Groups) ಸಹಕಾರ ನೀಡಿದರು.
ಈ ಸ್ಪರ್ಧೆಯು ಭಾರತದಾದ್ಯಂತದ ಪ್ರತಿಭಾವಂತ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಅವರ ಸೌಂದರ್ಯ, ಪ್ರತಿಭೆ ಮತ್ತು ವರ್ಚಸ್ಸನ್ನು ಪ್ರದರ್ಶಿಸಿತು. ಮಹತ್ವಾಕಾಂಕ್ಷಿ ಮಾದರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿತ್ತು.
ರ‍್ಯಾಂಪ್ ವಾಕ್, ನೃತ್ಯ ಮತ್ತು ಪ್ರಶ್ನೆ-ಉತ್ತರಗಳಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಸ್ಪರ್ಧಿಗಳು ಕಠಿಣ ತರಬೇತಿ ಮತ್ತು ಅಂದಗೊಳಿಸುವ ಸೆಷನ್ಗಳಿಗೆ ಒಳಗಾದರು. ಪ್ರಸಿದ್ಧ ಉದ್ಯಮ ತಜ್ಞರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಸ್ಪರ್ಧಿಗಳ ಪ್ರದರ್ಶನವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿತು.
ಆರ್. ಸಿ. ರೋಹಿತ್ ಮಿಸ್ಟರ್ ಐಡಲ್ ಆಫ್ ಇಂಡಿಯಾ 2024 ಕಿರೀಟವನ್ನು ಪಡೆದರೆ, ವರ್ಷಿತಾ ಮಿಸ್ ಐಡಲ್ ಆಫ್ ಇಂಡಿಯಾ 2024 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಜೇತರಿಗೆ ಪ್ರತಿಷ್ಠಿತ ಬಹುಮಾನಗಳು ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶಗಳನ್ನು ನೀಡಲಾಯಿತು. ಕೌಶಿಕ್ ಅವರ ಗಮನಾರ್ಹ ಸಾಧನೆಯು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಈವೆಂಟ್ ನಿರ್ವಹಣೆಯ ನವೀನ ವಿಧಾನಕ್ಕೆ ಸಾಕ್ಷಿಯಾಗಿದೆ.
21 ವರ್ಷ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯನ್ನು ನಿರ್ದೇಶಿಸುವ ಮೂಲಕ, ಅವರು ಯುವ ಉದ್ಯಮಿಗಳು ಮತ್ತು ಈವೆಂಟ್ ವೃತ್ತಿಪರರಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರ್ದೇಶಿಸುವ ಮತ್ತು ಇತಿಹಾಸ ನಿರ್ಮಿಸುವ ಅವಕಾಶ ದೊರೆತಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಎಂದು ಕೌಶಿಕ್ ಆರ್ ಹೇಳಿದರು.
ಗದಗ
Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!
Family Dispute : ಕೌಟುಂಬಿಕ ಕಲಹಕ್ಕೆ ತಂದೆಯೊಬ್ಬ ತನ್ನ ಮೂವರು ಮಕ್ಕಳುನ್ನು ನದಿಗೆ ಎಸೆದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗದಲ್ಲಿ (Gadag News) ನಡೆದಿದೆ
ಗದಗ: ಕೌಟುಂಬಿಕ ಕಲಹಕ್ಕೆ ಬೇಸತ್ತು ತನ್ನ ಮೂವರು ಮಕ್ಕಳನ್ನು ನದಿಗೆ ಎಸೆದು, ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ (Gadag News) ನಡೆದಿದೆ.
ಮುಂಡರಗಿ ತಾಲೂಕಿನ ಮುಕ್ತುಂಪುರ ಗ್ರಾಮದ ನಿವಾಸಿ, ಮಂಜುನಾಥ ಅರಕೇರಿ ಹಾಗೂ ಮೂವರು ಮಕ್ಕಳು ನದಿ ಪಾಲಾಗಿದ್ದಾರೆ. ಪುಟ್ಟ ಮಕ್ಕಳಾದ ವೇದಾಂತ (3), ಪವನ (4), ಹಾಗೂ ಧನ್ಯಾ (6) ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ಎಸೆದು ಬಳಿಕ ಮಂಜುನಾಥ್ ತಾನೂ ಸಹ ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲೀಸರ ದೌಡಾಯಿಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು
Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್ ವಿಂಗ್ಸ್; 2ನಲ್ಲಿ ಅತಿದೊಡ್ಡ ವರ್ಟಿಕಲ್ ಗಾರ್ಡನ್ ಅನಾವರಣ
Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಅತಿದೊಡ್ಡ ವರ್ಟಿಕಲ್ ಗಾರ್ಡನ್ ಅನಾವರಣಗೊಂಡಿದೆ.
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ಟರ್ಮಿನಲ್ 2 ನಲ್ಲಿ ‘ಟೈಗರ್ ವಿಂಗ್ಸ್’ ಶೀರ್ಷಿಕೆಯ “ವರ್ಟಿಕಲ್ ಗಾರ್ಡನ್”ನನ್ನು ಅನಾವರಣಗೊಳಿಸಲಾಗಿದೆ. ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ ಈ ವರ್ಟಿಕಲ್ ಗಾರ್ಡನ್‌ನನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
ಟರ್ಮಿನಲ್ 2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್ ಗಾರ್ಡನ್ 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ)ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದು ಇದೇ ಮೊದಲು, ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ. ಈ ಮೂಲಕ ಟಿ2 ನ ಅಡಿಪಾಯದ ಮೂಲತತ್ವವನ್ನು ಉದಾರಿಸಿದೆ. ‘ಟೈಗರ್ ವಿಂಗ್ಸ್’ ನ ಈ ವರ್ಟಿಕಲ್ ಗಾರ್ಡನ್ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನವನ್ನು ನಿರ್ಮಿಸಿದ್ದಾರೆ.
ಈ ಗೋಡೆ ಉದ್ಯಾನವನ್ನು ಮಣ್ಣು ರಹಿತವಾಗಿ ನಿರ್ಮಿಸಲಾಗಿದ್ದು, ಈ ಟೆಕ್ನಾಲಜಿಯನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ಈ ವರ್ಟಿಕಲ್ ಗಾರ್ಡನ್‌ಗೆ ‘ಟೈಗರ್ ವಿಂಗ್ಸ್’ ಎಂದು ಹೆಸರಿಡಲಾಗಿದೆ. ಶತಾವರಿ ಸಸ್ಯಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಗುರುತಿಸುತ್ತದೆ. ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಟೈಗರ್ ವಿಂಗ್ಸ್
- ಭಾರತದಲ್ಲಿ ಪ್ಯಾಟ್ರಿಕ್ ಬ್ಲಾಂಕ್ ಅವರ ಅತಿದೊಡ್ಡ ಗೋಡೆ ಉದ್ಯಾನ ಇದೇ ಮೊದಲು
- 4000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.
- 15000 ಗಿಡಗಳನ್ನು ಒಳಗೊಂಡಿದೆ
- 150ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇವೆ.
- ಮಣ್ಣುರಹಿತ ತಂತ್ರಜ್ಞಾನವನ್ನು ಬಳಸಲಾಗಿದೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ. ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.
ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, “ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ಸಾಕಾರಗೊಳ್ಳುವ ಸ್ವಪ್ನವಾಗಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಕೇವಲ ವಿಮಾನ ನಿಲ್ದಾಣದ ದೃಶ್ಯವನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ.
ಈ ವರ್ಟಿಕಲ್ ಉದ್ಯಾನವು ಹೆಚ್ಚು ನೀರಿನ-ಸಮರ್ಥವಾಗಿದೆ, ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ ನೀರಾವರಿ ವ್ಯವಸ್ಥೆಯನ್ನು ಬಳಸಲಾಗಿದ್ದು, ಪದರಗಳ ಮೂಲಕ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸುತ್ತದೆ. ಈ ವಿಧಾನವು ಹೆಚ್ಚು ಸಮರ್ಥನೀಯವಾಗಿದ್ದು, ನೈಸರ್ಗಿಕ ಬಂಡೆ ಅಥವಾ ಕಲ್ಲಿನ ಗೋಡೆಗಳ ಮೇಲೆ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತೋರಿಸುತ್ತದೆ. ಇಂತಹ ಸ್ಥಳಗಳಲ್ಲಿ ನೀರು ಮತ್ತು ಪೋಷಕಾಂಶಗಳು ಕಡಿಮೆ ಇದ್ದರೂ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಬ್ಲಾಂಕ್‌ನ ಅವರ ಹೈಡ್ರೋಪೋನಿಕ್ ವಿಧಾನವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳನ್ನು ಕಾಂಪ್ಯಾಕ್ಟ್ ಲಂಬ ಜಾಗದಲ್ಲಿ ಸಹಬಾಳ್ವೆ ಮಾಡಲು ಅನುವು ಮಾಡಿಕೊಡುತ್ತದೆ, ಇದು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಿ, ತಂಪಾದ, ಹೆಚ್ಚು ಆಹ್ಲಾದಕರ ವಾತಾವರಣಕ್ಕೆ ಕೊಡುಗೆ ನೀಡುವ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಈ ಸಸ್ಯಶಾಸ್ತ್ರೀಯ ಮೇರುಕೃತಿಯು ಭಾರತದ ವನ್ಯಜೀವಿ ಪರಂಪರೆಯನ್ನು ವೈಭವೀಕರಿಸುವುದರಲ್ಲೆ, ಆಧುನಿಕ, ಪರಿಸರ ಸ್ನೇಹಿ ಸ್ಥಳವಾಗಿ BLR ವಿಮಾನ ನಿಲ್ದಾಣದ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ, ಕರ್ನಾಟಕದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ಬೆಂಗಳೂರಿನ ಪ್ರಮುಖ ಟ್ರಾವೆಲ್ ಹಬ್ ಆಗಿ ಪರಿವರ್ತಿಸುತ್ತದೆ.