ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್‌ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ - Vistara News

ಬೆಂಗಳೂರು

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್‌ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ

ಅನಂತಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ, ಹಂತದಲ್ಲಿ ನಾಯಕತ್ವವನ್ನು ವಹಿಸುವ ನೈಜ ನಾಯಕ ಎನಿಸಿಕೊಳ್ಳುತ್ತಾರೆ ಎಂದು ಸಿಎಂ ಹೇಳಿದರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಜಯನಗರ ಬಡಾವಣೆಯ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತಕುಮಾರ್ ಅವರು ಪ್ರಮುಖ ಪಾತ್ರ ವಾಹಿಸಿದ್ದಾರೆ. ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿ ಕೇಂದ್ರದಿಂದ ಆಗಬೇಕಾದ ಬೆಂಗಳೂರಿನ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ನೀಡಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅನಂತಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ, ಹಂತದಲ್ಲಿ ನಾಯಕತ್ವವನ್ನು ವಹಿಸುವ ನೈಜ ನಾಯಕ ಎನಿಸಿಕೊಳ್ಳುತ್ತಾರೆ. ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಆಂದೋಲನದಲ್ಲಿ, ಮುಂದೆ ಎಬಿವಿಪಿ ಸಂಘಟನೆಗಳಲ್ಲಿ ನಾಯಕತ್ವ ವಹಿಸಿದರು. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ನಾಯಕತ್ವ ವಹಿಸಿ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಲಪಡಿಸುವುದರಲ್ಲಿ, ಹತ್ತು ಜನ ಇದ್ದಾಗಲೂ, ಹತ್ತು ಲಕ್ಷ ಜನ ಇದ್ದಾಗಲೂ ನಾಯಕತ್ವ ವಹಿಸಿದ್ದರು. ಬಹಳ ಅಪರೂಪದ ನಾಯಕತ್ವ ಅವರದ್ದು ಹಾಗು ಕೃಷ್ಣಾ ಟ್ರಿಬ್ಯುನಲ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿ ಕರ್ನಾಟಕದ ಹಿತ ಕಾಪಾಡಿದ್ದಾರೆ. ಆ ಮೂಲಕ ರಾಜ್ಯದ ಆಪತ್ತನ್ನು ಅವರು ತಪ್ಪಿಸಿದರು ಎಂದರು.

ಇದನ್ನೂ ಓದಿ: ನೇಕಾರರ, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ : CM ಬಸವರಾಜ ಬೊಮ್ಮಾಯಿ

ಯಾವ ಉದ್ದೇಶಕ್ಕಾಗಿ ಬದುಕು ನಡೆಸಿದರೊ ಅದಕ್ಕಾಗಿ ಅವರು ಹೋರಾಟವನ್ನು ಮಾಡಿದವರು ಅನಂತಕುಮಾರ್. ತೇಜಸ್ವಿನಿ ಅನಂತಕುಮಾರ್ ಅವರ ಸಾಮಾಜಿಕ ಚಟುವಟಿಕೆಗಳು, ಅದಮ್ಯಚೇತನದ ಕೆಲಸ, ಸಸ್ಯಾಗ್ರಹ ಕಾರ್ಯಕ್ರಮ ಎಲ್ಲವೂ ಮುಂದುವರೆದಿರುವುದು ಶ್ಲಾಘನೀಯ. ಅನಂತಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

VISTARANEWS.COM


on

ನವದೆಹಲಿ: ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ನಂತರ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸಲ್‌ ಬೆಲೆ ಹೇಚ್ಚಾಗಬಹುದು ಎಂಬ ಮಾಧ್ಯಮಗಳ ವರದಿಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.


ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ X ನಲ್ಲಿ ಮಾಡಿರುವ ಪೋಸ್ಟ್‌ ನಲ್ಲಿ ಸ್ಪಷ್ಟೀಕರಣ ನೀಡಿದೆ.


ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.


ಐದು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮತದಾನ ನಡೆಯುತ್ತಿದ್ದು, ಏಪ್ರಿಲ್‌ 29 ರಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಏಪ್ರಿಲ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ. ನಂತರ ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಏರಿಕೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.


ಕೇಂದ್ರದ ಈ ಸ್ಪಷ್ಟನೆ ವಾಹನ ಸವಾರರೂ ಸೇರಿದಂತೆ ದೇಶದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

Continue Reading

Latest

ಪಶ್ಚಿಮ ಬಂಗಾಳದ ಚುನಾಣಾ ಜಂಗಿ ಕುಸ್ತಿಯಲ್ಲಿ ಗೆಲವು ಯಾರಿಗೆ?

VISTARANEWS.COM


on

ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು ಚುರುಕಿನಿಂದ ಸಾಗಿದೆ. ತಮಿಳುನಾಡಿನ ಎಲ್ಲಾ 234 ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ 152 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದಿನ ವಿಧಾನಭೆ ಚುನಾವಣೆಯಲ್ಲಿ ಮೊದಲ ಹಂತದ 122 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಚುನಾವಣೆಯಲ್ಲಿ ಟಿಎಂಸಿ ಶೇ.47ರಷ್ಟು ಮತಗಳನ್ನು ಪಡೆದಿತ್ತು.

ಆದರೆ ಶೇ.40ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 59 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಂದರೆ ಕಳೆದ ಚುನಾವಣೆಯಲ್ಲಿ ಈಗ ಮೊದಲ ಹಂತದ ಮತದಾನ ನಡೆಯುತ್ತಿರುವ 152 ಕ್ಷೇತ್ರಗಳಲ್ಲಿ, ಟಿಎಂಸಿ ಮತ್ತು ಬಿಜೆಪಿ ನಡುವೆ ಶೇ.7ರಷ್ಟು ಮತಗಳ ಅಂತರವಿತ್ತು. ಕಾಂಗ್ರೆಸ್ ಶೇ 4.33 ಹಾಗೂ ಸಿಪಿಎಂ ಶೇ.3.26ರಷ್ಟು ಮತಗಳಿಕೆಗಷ್ಟೇ ಸೀಮಿತವಾಗಿದ್ದವು. ಆದರೆ ಚಲಾವಣೆಯಾದ ಮತಗಳ ಒಟ್ಟು ಪ್ರಮಾಣ ಶೇ.82.64 ರಷ್ಟಿತ್ತು.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಿಆರ್ ಪಿಎಫ್ ಮತ್ತಿತರ ಪ್ಯಾರ ಮಿಲಿಟರಿ ಪಡೆ ಯೋಧರನ್ನು ನಿಯೋಜಿಸಿದೆ.

ಪೊಲೀಸ್ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಸ್ವಯಿಚ್ಚೆ ಮೇರೆಗೆ ಬೇರೆಡೆ ವರ್ಗವಾಗಿದ್ದಾರೆ. ಗಮನಾರ್ಹ ವಿಷಯವೇನೆಂದರೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 122 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ತಲಾ 9 ಸಾವಿರ ಮಂದಿಯಂತೆ ಒಟ್ಟು 14 ಲಕ್ಷ ಮತದಾರರ ಹೆಸರಗಳನ್ನು ಸಾವನ್ನಪ್ಪಿರುವುದೂ, ನಕಲಿ ಮತದಾರರು ಸೇರಿದಂತೆ ವಿವಿಧ ಕಾರಣಗಳ ಮೇರೆಗೆ ಕೈ ಬಿಡಲಾಗಿದೆ.

ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ನಿರ್ಭೀತ ವಾತಾವರಣದಲ್ಲಿ ಶುದ್ಧ ಮತದಾರರಷ್ಟೇ ಮತಚಲಾಯಿಸುತ್ತಾರೆ ಎನ್ನುವುದಾದರೆ, ಒಟ್ಟಾರೆ ಮತ ಚಲಾವಣೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗಬೇಕು, ಅದಾಗದಿದ್ದರೆ ಚುನಾವಣಾ ಆಯೋಗದ ವೈಫಲ್ಯವೇಂದೇ ಪರಿಗಣಿಸಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮೊದಲ ಹಂತದ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಕ್ಕರ್ ಕೊಡಲು ಸಾಧ್ಯ ಎಂದು ಹೇಳಲಾಗುತ್ತಿದೆ. ಏಕೆಂದರೆ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಟಿಎಂಸಿಯ ಪ್ರಾಬಲ್ಯವಿದೆ ಎಂದೆನ್ನಲಾಗುತ್ತಿದೆ.

ಇನ್ನು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ನಡುವಿನ ಬಲಾಬಲ ಮತ್ತು ದೌರ್ಬಲ್ಯಗಳನ್ನು ಅವಲೋಕಿಸುವುದಾರೆ, ಬಿಜೆಪಿ ಕೇಂದ್ರದಲ್ಲಿ ಆಡಳಿತರೂಢ ಪಕ್ಷವಾಗಿರುವುದರಿಂದ ಸಹಜವಾಗಿ ಸಿಬಿಐ, ಇ.ಡಿ ನಂತಹ ತನಿಖಾ ಸಂಸ್ಥೆಗಳು ಹಾಗೂ ಸಿಆರ್ ಪಿ ಎಫ್ ಮತ್ತಿತರ ಪ್ಯಾರಾಮಿಲಿಟರಿ ಪಡೆಗಳು ಮಿಗಿಲಾಗಿ ಚುನಾವಣಾ ಆಯೋಗ ನೀಡಿರುವ ಸಾಥ್ ಮತ್ತಿತರ ಅಂಶಗಳು ಬಿಜೆಪಿ ಪಾಲಿಗೆ ವರವಾಗಬಹುದು ಎಂದೆನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿಗೆ ಆಡಳಿತ ವಿರೋಧಿ ಅಲೆಯ ಆತಂಕವಿದೆ. ಮುಖ್ಯವಾಗಿ ಮಹಿಳೆಯರಿಗೆ ಮಮತಾ ಸರ್ಕಾರ ನೀಡುತ್ತಿರುವ ಮಾಸಿಕ ಒಂದೂವರೆ ಸಾವಿರ ರೂಪಾಯಿ ಮೊತ್ತವನ್ನು ಮಾಸಿಕ ಮೂರು ಸಾವಿರ ರೂಪಾಯಿಗೇರಿಸುವ ಭರವಸೆಯನ್ನು ಕಮಲ ಪಾಳೆಯ ನೀಡಿರುವುದು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಹಾಗೆ ನೋಡಿದರೆ ಪಶ್ಚಿಮಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಕೇಡರ್ ಗಳ ತೀವ್ರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕಡಿತ ಟಿಎಂಸಿ ಪಕ್ಷದ ನಿದ್ದೆಗೆಡಿಸಿದೆ ಎನ್ನಲಾಗಿದೆ.

ಒಟ್ಟಾರೆ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಪ್ರಮಾಣದ ಜಂಗಿ ಕುಸ್ತಿ ನಡೆದಿದೆ. ಯಾರೇ ಗೆದ್ದರೂ ಮತಗಳಿಕೆಯ ಪ್ರಮಾಣ ಅತ್ಯಲ್ಪ ಎಂದೆನ್ನಲಾಗುತ್ತಿದೆ.

Continue Reading

Latest

ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್‌! ಪೂರೈಕೆ ಕಟ್, ದರ ಡಬಲ್ – ಕಂಗಾಲಾದ ಗ್ರಾಹಕ

VISTARANEWS.COM


on

ಬೇಸಿಗೆಯ ತೀವ್ರ ಶಾಖ ಮತ್ತು ಬಿಸಿಗಾಳಿಯ ನಡುವೆ ದೇಹವನ್ನು ತಂಪು ಮಾಡಿಕೊಳ್ಳಲು ಬಯಸುವ ಜನರಿಗೆ ನಿಂಬೆಹಣ್ಣಿನ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ. ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆಹಣ್ಣಿನ ಬೆಲೆ ಬರೋಬ್ಬರಿ ₹250ರ ಗಡಿಯನ್ನು ದಾಟಿದ್ದು, ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಪೂರೈಕೆಯಾಗುತ್ತಿದ್ದ ನಿಂಬೆಹಣ್ಣಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕೇವಲ ಒಂದು ತಿಂಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ₹70 ರಿಂದ ₹100ರ ಆಸುಪಾಸಿನಲ್ಲಿದ್ದ ನಿಂಬೆಹಣ್ಣಿನ ದರ, ಈಗ ಗಾತ್ರಕ್ಕೆ ಅನುಗುಣವಾಗಿ ₹120 ರಿಂದ ₹220ರವರೆಗೆ ಜಿಗಿದಿದೆ. ದಕ್ಷಿಣ ಭಾರತದಾದ್ಯಂತ ಬೀಸುತ್ತಿರುವ ತೀವ್ರ ಬಿಸಿಗಾಳಿಯಿಂದಾಗಿ ನಿಂಬೆ ಇಳುವರಿ ಕುಂಠಿತಗೊಂಡಿದ್ದು, ಮಾರುಕಟ್ಟೆಗೆ ಬರುತ್ತಿರುವ ಲೋಡ್‌ಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಬೇಸಿಗೆಯ ದಾಹ ಹಾಗೂ ಸಾಲು ಸಾಲು ಮದುವೆ ಸಮಾರಂಭಗಳಿರುವುದರಿಂದ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಮತ್ತು ಬೇಡಿಕೆಯ ನಡುವಿನ ಈ ಅಂತರವು ಬೆಲೆಯನ್ನು ಅಭೂತಪೂರ್ವ ಮಟ್ಟಕ್ಕೆ ಕೊಂಡೊಯ್ದಿದೆ.

ಈ ಬೆಲೆ ಏರಿಕೆಯ ಬಿಸಿ ರಸ್ತೆ ಬದಿಯ ಜ್ಯೂಸ್ ಸೆಂಟರ್‌ಗಳ ಮೇಲೂ ಬಿದ್ದಿದೆ. ಈ ಹಿಂದೆ ₹15ಕ್ಕೆ ಸಿಗುತ್ತಿದ್ದ ಒಂದು ಲೋಟ ನಿಂಬೆ ರಸದ ಬೆಲೆ ಈಗ ₹25ಕ್ಕೆ ಏರಿಕೆಯಾಗಿದ್ದರೆ, ಸೋಡಾ ಸರ್ಬಾತ್ ದರ ₹30ರ ಗಡಿ ತಲುಪಿದೆ. ಆರೋಗ್ಯ ಅಧಿಕಾರಿಗಳು ನಿರ್ಜಲೀಕರಣ ತಡೆಯಲು ನಿಂಬೆ ನೀರನ್ನು ಶಿಫಾರಸು ಮಾಡುತ್ತಿದ್ದಾರಾದರೂ, ಜನಸಾಮಾನ್ಯರಿಗೆ ಈಗ ಇದು ಪ್ಯಾಕ್ ಮಾಡಿದ ಪಾನೀಯಗಳಿಗಿಂತಲೂ ದುಬಾರಿಯಾಗಿ ಪರಿಣಮಿಸಿದೆ. ಹವಾಮಾನ ಪರಿಸ್ಥಿತಿ ಸುಧಾರಿಸಿ ಉತ್ಪಾದನೆ ಹೆಚ್ಚಾಗುವವರೆಗೂ ಗ್ರಾಹಕರು ಈ ಬೆಲೆ ಏರಿಕೆಯ ಹೊರೆಯನ್ನು ಅನುಭವಿಸುವುದು ಅನಿವಾರ್ಯವಾಗಿದೆ.

Continue Reading

Latest

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

VISTARANEWS.COM


on

ಬೆಂಗಳೂರು: ನಗರದ ಜೈಲಿನಲ್ಲಿದ್ದುಕೊಂಡೇ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳ ಎಸೆಗಲು ಸಂಚು ರೂಪಿಸಿದ್ದ ಲಷ್ಕರ್‌ ಎ ತೊಬ್ಯಾ ಸಂಪರ್ಕಿತ ಏಳು ಆರೋಪಿಗಳಿಗೆ ಎನ್‌ ಐ ಎ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.
ಅಪರಾಧಿಗಳಾದ ಲಷ್ಕರ್‌ – ಎ-ತೊಯ್ಬಾ ಸಂಪರ್ಕಿತ ಉಗ್ರ ಟಿ.ನಾಸಿರ್‌ ನೇತೃತ್ವದಲ್ಲಿ ಸಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸಯ್ಯದ್ ಮುದಸ್ಸಿರ್ ಪಾಶಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್ ಶಿಕ್ಷೆಗೆ ಗುರಿಯಾದವರು. ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.
ಇವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದುಕೊಂಡೇ ಯುವಕರನ್ನು ಉಗ್ರವಾದದತ್ತ ಆಕರ್ಷಿಸಿ, ಮತಾಂತರಗೊಳಿಸಿ ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ಸೇರಿದಂತೆ 48 ಸಾವಿರ ರೂಪಾಯಿ ದಂಡ ವಿಧಿಸಿದೆ.
2023ರ ಜುಲೈನಲ್ಲಿ ಶಸ್ತ್ರಾಸ್ತ್ರಗಳು, ಗುಂಡುಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಈ ಬಗ್ಗೆ ಪ್ರಕರಣ ದಾಖಲಿಸಿತ್ತು. ಇವರು ಬೆಂಗಳೂರಿನಲ್ಲಿಯೂ ಉಗ್ರ ದಾಳಿಗಳನ್ನು ನಡೆಸುವ ಯೋಜನೆ ರೂಪಿಸಿದ್ದರು ಎಂಬುದು ಬಯಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.
2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಟಿ. ನಾಸೀರ್ ಅದಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಎಂಬುದು ಗಮನಾರ್ಹ. ಬಂಧಿತರಲ್ಲಿ ಸಲ್ಮಾನ್ ಖಾನ್ ಎಂಬಾತನನ್ನು ರುವಾಂಡಾ ಗಣರಾಜ್ಯದಿಂದ ಹಸ್ತಾಂತರದ ಮೂಲಕ ಭಾರತಕ್ಕೆ ತರಲಾಗಿತ್ತು.
ಈ ಪ್ರಕರಣದಲ್ಲಿ 11 ಮಂದಿ ಬಂಧಿತ ಆರೋಪಿಗಳು ಹಾಗೂ ಪರಾರಿಯಾಗಿರುವ ಜುನೈದ್ ಅಹ್ಮದ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

Continue Reading
Advertisement
Latest7 minutes ago

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

Latest10 minutes ago

ಯಡಿಯೂರಪ್ಪ ರಾಜಕೀಯ ಪ್ರವೇಶಿಸಿ 50 ವರ್ಷ: ಮೇ 9 ರಂದು ಅಭಿಮಾನೋತ್ಸವ: ಸಂಸದ ಗೋವಿಂದ ಕಾರಜೋಳ

Fact Check10 minutes ago

ವಾಹನ ಸವಾರರಿಗೆ ಬಿಗ್ ರಿಲೀಫ್: ಪೆಟ್ರೋಲ್-ಡೀಸೆಲ್ ದರ ಏರಿಕೆ ವದಂತಿಗೆ ಕೇಂದ್ರ ಸರ್ಕಾರ ಬ್ರೇಕ್!

Latest31 minutes ago

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ; ಭಾರತ, ಚೀನಾ ವಿರುದ್ಧ ಟ್ರಂಪ್ ಆಕ್ರೋಶ

Latest44 minutes ago

ನೇಪಾಳದಲ್ಲಿ ‘ರ‍್ಯಾಪರ್’ ಪ್ರಧಾನಿ ಬಾಲೆನ್ ಶಾ ಕ್ರಾಂತಿ: ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಆರೋಪ ಕೇಳಿಬಂದ 26 ದಿನಕ್ಕೇ ಇಬ್ಬರು ಸಚಿವರ ಔಟ್!

Latest1 hour ago

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುರುಕುಗೊಂಡ ಮತದಾನ; ಮುರ್ಶಿದಾಬಾದ್‌ನಲ್ಲಿ ಕಚ್ಚಾ ಬಾಂಬ್ ಸ್ಫೋಟ

Latest1 hour ago

ಸ್ಟೇಜ್ ಪರ್ಫಾರ್ಮೆನ್ಸ್ ವೇಳೆ ಲಿಪ್‌ಸಿಂಕ್‌ ಮಾಡಿದ ‘ಧುರಂಧರ್‌’ ಗಾಯಕಿ: ನೆಟ್ಟಿಗರು ಫುಲ್ ಗರಂ!

Narendra Modi
Latest1 hour ago

ಪಶ್ಚಿಮ ಬಂಗಾಳ-ತಮಿಳುನಾಡುಗಳಲ್ಲಿ ದಾಖಲೆ ಮತದಾನ: ಪ್ರಧಾನಿ ಮೋದಿ ವಿಶ್ವಾಸ

Latest1 hour ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು: ಪ್ರಧಾನಿ ಮೋದಿ ವಿಶ್ವಾಸ

Latest2 hours ago

ಎಸ್‌ಎಸ್‌ಎಲ್‌ಸಿ ಮರುಪರೀಕ್ಷೆ ದಿನಾಂಕ ಪ್ರಕಟ: ಅನುತ್ತೀರ್ಣರಾದವರಿಗೆ ಉಚಿತವಾಗಿ ಪರೀಕ್ಷೆ ಬರೆಯಲು ಅವಕಾಶ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌