ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಮೂರನೇ ಮದುವೆಯಲ್ಲಿ ಮೊದಲ ಗಂಡನ ಕಿರಿಕಿರಿ - Vistara News

ವಿದೇಶ

ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಮೂರನೇ ಮದುವೆಯಲ್ಲಿ ಮೊದಲ ಗಂಡನ ಕಿರಿಕಿರಿ

ಪಾಪ್‌ ತಾರೆಯರಾದ ಬ್ರಿಟ್ನಿ ಸ್ಪಿಯರ್ಸ್ ಮತ್ತು ಸ್ಯಾಮ್ ಅಸ್ಘಾರಿ ಗುರುವಾರ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇದು ಬ್ರಿಟ್ನಿಯ ಮೂರನೇ ಮದುವೆ. ಈ ವೇಳೆ ಮೊದಲ ಗಂಡ ಬಂದು ಸ್ವಲ್ಪ ಕಿರಿಕಿರಿ ಮಾಡಿದ್ದಾನಂತೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಸ್ ಏಂಜಲೀಸ್: ಖ್ಯಾತ ಪಾಪ್‌ ತಾರೆ ಬ್ರಿಟ್ನಿ ಸ್ಪಿಯರ್ಸ್‌ ಮತ್ತು ಸ್ಯಾಮ್‌ ಅಸ್ಘಾರಿ ಅವರ ಮದುವೆ ಕಳೆದ ಗುರುವಾರ (ಜೂ. 9) ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಈ ವೇಳೆ, ಬ್ರಿಟ್ನಿ ಸ್ಪಿಯರ್ಸ್‌ ಮಾಜಿ ಗಂಡ ಜೇಸನ್‌ ಅಲೆಕ್ಸಾಂಡರ್‌ ಬಂದು ʻನಿಲ್ಲಿಸಿʼ ಎನ್ನುವ ಮಾದರಿಯಲ್ಲಿ ಕಿರಿಕಿರಿ ಮಾಡಿದ್ದ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಕೆಲವು ಸಮಯದಿಂದ ಸಂಗಾತಿಗಳಾಗಿದ್ದ ಈ ಪಾಪ್‌ ತಾರಾ ಜೋಡಿ ಈಗ ವೈವಾಹಿಕ ಬದುಕನ್ನು ಪ್ರವೇಶಿಸಿದ್ದಾರೆ. ಅದರ ಬೆರಗುಗೊಳಿಸುವ ಫೋಟೊಗಳನ್ನು ಇನ್‌ಸ್ಟಾ ಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

“ನಾವು ಅಂದಕೊಂಡಂತೆ ನಾವು ಮದುವೆಯಾಗಿದ್ದೇವೆ. ಇವತ್ತು ಅತ್ಯಂತ ಅದ್ಭುತವಾದ ದಿನವಾಗಿತ್ತು. ನಾನು ಬೆಳಿಗ್ಗೆಯೆಲ್ಲಾ ತುಂಬಾ ನರ್ವಸ್ ಆಗಿದ್ದೆ, ಆದರೆ ಮಧ್ಯಾಹ್ನ 2:00 ಗಂಟೆಯ ಹೊತ್ತಿಗೆ ತುಂಬಾ ಖುಷಿಯಾಯಿತು, ಎಲ್ಲವೂ ನಾವು ಎಣಿಸಿಕೊಂಡ ಹಾಗೇ ಅಗಿದೆ ನಾವು ಮದುವೆಯಾಗುತ್ತಿದ್ದೇವೆ. ನಮ್ಮ ಮನೆಯನ್ನು ಅಕ್ಷರಶಃ ಕನಸಿನ ಕೋಟೆಯಾಗಿ ಸೃಷ್ಟಿಸಿದ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು. ಸಮಾರಂಭ ಮತ್ತು ಪಾರ್ಟಿ ಕನಸೇ ನನಸಾದಂತೆ ಕಾಣುತಿತ್ತು” ಎಂದು ಬರೆದುಕೊಂಡಿದ್ದಾರೆ. 44 ಸೆಕೆಂಡುಗಳ ವಿಡಿಯೊ ಸಹ ಪೋಸ್ಟ್ ಮಾಡಿದ್ದಾರೆ,

ಕುತೂಹಲಕಾರಿ ಸಂಗತಿ ಎಂದರೆ, ಗುರುವಾರ ನಡೆದ ಬ್ರಿಟ್ನಿ ಸ್ಪಿಯರ್ಸ್ ಅವರ ಮೂರನೇ ಮದುವೆಗೆ ಎರಡನೇ ಗಂಡ ಜೇಸನ್‌ ಅಲೆಕ್ಸಾಂಡರ್‌ ಬಂದಿದ್ದ. ಅತ್ತ ಬ್ರಿಟ್ನಿ ಮತ್ತು ಸ್ಯಾಮ್‌ ಅಸ್ಘಾರಿ ಮದುವೆಗೆ ಸಿದ್ಧವಾಗುತ್ತಿದ್ದರೆ ಇತ್ತ ಸಮಾರಂಭದ ಜಾಗಕ್ಕೆ ಜೇಸನ್‌ ಬಂದಿದ್ದ. ಬಂದವನೇ ʻಬ್ರಿಟ್ನಿ ಎಲ್ಲಿʼ ಎಂದು ಕೇಳಿದ್ದಾನೆ. ಬಳಿಕ ಹೂವಿನಿಂದ ಅಲಂಕರಿಸಿದ ಪಿಂಕ್‌ ಟೆಂಟ್‌ ಒಂದಕ್ಕೆ ಹೋದ ಆತ, ʻಛೇ ಇದೆಂತ ಬುಲ್ಶೀಟ್‌ ಮದುವೆ,ʼ ಅಂತ ರಂಪಾಟ ಮಾಡಿದ್ದಾನೆ. ʻನನಗೆ ಬ್ರಿಟ್ನಿಯೇ ಮದುವೆಗೆ ಬರಲು ಹೇಳಿದ್ದಾಳೆʼ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಭದ್ರತಾ ಸಿಬ್ಬಂದಿ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆತನನ್ನು ಹಿಡಿದುಕೊಂಡು ಹೋಗಿದ್ದಾರೆ. ಕೊನೆಗೆ ನೋಡಿದರೆ ಆತನ ವಿರುದ್ಧ ಇನ್ನೊಂದು ಫೋಲೀಸ್‌ ಠಾಣೆಯಲ್ಲಿ ಪ್ರಕರಣವೊಂದು ಬಾಕಿ ಇತ್ತು. ಅದಕ್ಕಾಗಿ ಆತನನ್ನು ಅಲ್ಲಿಗೆ ಹಸ್ತಾಂತರಿಸಲಾಗಿದೆ.

ಯಾರಿವನು ಜೇಸನ್‌ ಅಲೆಕ್ಸಾಂಡರ್‌?
ಬ್ರಿಟ್ನಿ ಸ್ಪಿಯರ್ಸ್‌ 24ನೇ ವಯಸ್ಸಿನಲ್ಲಿ ಕೆಲವು ತಿಂಗಳ ಮಟ್ಟಿಗೆ ಜೇಸನ್‌ ಅಲೆಕ್ಸಾಂಡರ್‌ನನ್ನು ಮದುವೆಯಾಗಿದ್ದರು. ಬಳಿಕ 2004ರಿಂದ 2007ರವರೆಗೆ ಕೆವಿನ್‌ ಫೆಡರ್ಲಿನ್‌ಗೆ ಪತ್ನಿಯಾಗಿದ್ದರು. ಮುಂದಿನ ಒಂಬತ್ತು ವರ್ಷ ಬ್ರಿಟ್ನಿ ಸ್ಪಿಯರ್ಸ್‌ ಒಂಟಿಯಾಗಿಯೇ ಇದ್ದರು. ಗುರುವಾರ ಮದುವೆಯಾದ ಸ್ಯಾಮ್‌ ಅಸ್ಘಾರಿ ಮೂರನೇ ಗಂಡ. ಆರು ವರ್ಷಗಳ ಡೇಟಿಂಗ್‌ ಬಳಿಕ ಅವರಿಬ್ಬರೂ ಒಂದಾಗಿದ್ದಾರೆ.

ಈ ನಡುವೆ ಕೆಲವು ತಿಂಗಳ ಹಿಂದೆ ಬ್ರಿಟ್ನಿ ತಾನು ಗರ್ಭಿಣಿ ಎಂದು ಘೋಷಿಸಿಕೊಂಡಿದ್ದರು. ಆದರೆ, ಕೆಲವು ವಾರಗಳ ಹಿಂದೆ ತಾನು ಗರ್ಭಪಾತ ಮಾಡಿಕೊಂಡಿದ್ದೇನೆ ಎಂದು ಸಾರಿದರು. ಇದಾಗಿ ಕೆಲವೇ ದಿನಗಳಲ್ಲಿ ಮದುವೆ ಅಂತ ಘೋಷಣೆ. ನಿಜವೆಂದರೆ ಬ್ರಿಟ್ನಿ-ಅಸ್ಘಾರ್‌ ಮದುವೆ ಈ ಕಾರ್ಯಕ್ರಮ ನಡೆಯುವ ಒಂದು ಗಂಟೆ ಮೊದಲಷ್ಟೇ ಹೊರ ಜಗತ್ತಿಗೆ ಗೊತ್ತಾಯಿತಂತೆ!

Britney Spears and Sam Asghari arrive at the Los Angeles premiere of “Once Upon a Time in Hollywood,” at the TCL Chinese Theatre, Monday, July 22, 2019. Spears announced on Instagram on Sunday, Sept. 12, 2021, that she and Asghari are engaged. The couple met on the set of her “Slumber Party” music video in 2016. (Photo by Jordan Strauss/Invision/AP, File)

ಇದನ್ನೂ ಓದಿ:ತನ್ನನ್ನೇ ತಾನು ಮದುವೆ ಆಗಲಿರುವ ಯುವತಿ; ಹನಿಮೂನ್‌ಗೆ ಒಬ್ಬಳೇ ಗೋವಾಕ್ಕೆ ಹೋಗೋ ಪ್ಲ್ಯಾನ್‌ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Hinduja Family: ಪ್ರಕಾಶ್‌ ಹಿಂದುಜಾ ಹಾಗೂ ಅವರ ಕುಟುಂಬಸ್ಥರು ಮನೆಗೆಲಸದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ದಿನಕ್ಕೆ 18 ಗಂಟೆ ಕೆಲಸ ಮಾಡಿಸುವುದು ಸೇರಿ ಹಲವು ರೀತಿಯ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಸ್ಟಿಟ್ಜರ್‌ಲ್ಯಾಂಡ್‌ ಕೋರ್ಟ್‌ನಲ್ಲಿ ಸಾಬೀತಾಗಿದೆ. ಹಾಗಾಗಿ, ನ್ಯಾಯಾಲಯವು ಪ್ರಕಾಶ್‌ ಹಿಂದುಜಾ ಸೇರಿ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Hinduja Family
Koo

ಜಿನೀವಾ:‌ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ (Prakash Hinduja) ಸೇರಿ ಅವರ ಕುಟುಂಬದ (Hinduja Family) ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯವು (Swiss Court) ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ಸಾಕಿದ ನಾಯಿಗೆ ವ್ಯಯಿಸುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸುವುದು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ಎಸಗಿದ ಕಾರಣ ನಾಲ್ವರಿಗೂ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬದ ಉದ್ಯಮಿ ಪ್ರಕಾಶ್‌ ಹಿಂದುಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ, ಹಿಂದುಜಾ ಕುಟುಂಬದ ಮ್ಯಾನೇಜರ್‌ ನಜೀಬ್‌ ಜಿಯಾಜಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡಿದ್ದಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದುಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಮಹಿಳೆಯು ಕೋರ್ಟ್‌ ಮೊರೆ ಹೋಗಿದ್ದರು. ಅವರ ಪರವಾಗಿ ಸ್ವಿಟ್ಜರ್‌ಲ್ಯಾಂಡ್ ನ್ಯಾಯಾಲಯದ ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದರು.

ಅಷ್ಟೇ ಅಲ್ಲದೇ ಹಿಂದುಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಈಗ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಬ್ರಿಟನ್‌ನಲ್ಲಿ ಹಿಂದುಜಾ ಕುಟುಂಬವೇ ಶ್ರೀಮಂತ ಕುಟುಂಬ

ಕೆಲ ತಿಂಗಳ ಹಿಂದಷ್ಟೇ, ಭಾರತ ಮೂಲದ ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Continue Reading

ವಿದೇಶ

Sexual Assault Case: ಲೈಂಗಿಕ ದೌರ್ಜನ್ಯ; ಕೋಕಕೋಲಾ ಕಂಪನಿ ಉತ್ತರಾಧಿಕಾರಿಗೆ 7,200 ಕೋಟಿ ರೂ. ದಂಡ!

ಲೈಂಗಿಕ ದೌರ್ಜನ್ಯ ಆರೋಪಿಯಾಗಿರುವ (Sexual Assault Case) ಕೋಕ-ಕೋಲಾ ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ ತನ್ನ ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ ಪಾವತಿಸಲು ಲಾಸ್ ಏಂಜಲೀಸ್ ನ್ಯಾಯ ಮಂಡಳಿ ತೀರ್ಪು ನೀಡಿದೆ. ಇತಿಹಾಸದಲ್ಲೇ ಇದು ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ.

VISTARANEWS.COM


on

By

Sexual Assault Case
Koo

ಲಾಸ್ ಏಂಜಲೀಸ್: ಕೋಕ-ಕೋಲಾ (Coca-Cola) ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ (Alki David) ವಿರುದ್ಧ ಲೈಂಗಿಕ ದೌರ್ಜನ್ಯ (Sexual Assault Case) ಆರೋಪ ಸಾಬೀತಾಗಿದ್ದು, ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ (7,200 ಕೋಟಿ ರೂ.) ಪಾವತಿಸಲು ಲಾಸ್ ಏಂಜಲೀಸ್ (Los Angeles) ನ್ಯಾಯ ಮಂಡಳಿ ತೀರ್ಪು ನೀಡಿದೆ. ಇದು ಇತಿಹಾಸದಲ್ಲಿ ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ ಎನ್ನಲಾಗಿದೆ.

ವಕೀಲರ ಪ್ರಕಾರ 2016- 2019ರ ನಡುವೆ ಮೂರು ವರ್ಷಗಳ ಕಾಲ ಜೇನ್ ಡೋ ಎಂಬ ಮಹಿಳೆ ಅಲ್ಕಿ ಡೇವಿಡ್ ಅವರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಮಾಜಿ ನಿರ್ಮಾಣ ಸಹಾಯಕ ಮಹಿಮ್ ಖಾನ್ 2019ರಲ್ಲಿ ಡೇವಿಡ್ ವಿರುದ್ಧ ದೂರು ನೀಡಿದ್ದು, ಬಳಿಕ ಡೇವಿಡ್‌ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಲೈಂಗಿಕ ದುರ್ವರ್ತನೆಯನ್ನು ಒಳಗೊಂಡ ಹಲವಾರು ಇತರ ಪ್ರಕರಣಗಳಲ್ಲಿ ಡೇವಿಡ್ ತಪ್ಪಿತಸ್ಥರೆಂದು ಕಂಡುಬಂದಿದೆ. ಕಂಪನಿಗಳು ಇವರ ವಿರುದ್ಧ ಸುಮಾರು 70 ಮಿಲಿಯನ್ ಡಾಲರ್‌ನಷ್ಟು ಮೊತ್ತದ ಹಾನಿಯನ್ನು ಪಾವತಿಸಲು ಒತ್ತಾಯಿಸಿವೆ.

ಜೇನ್ ಡೋ ಪ್ರಕರಣ

ಮೂವತ್ತು ವರ್ಷದ ಮಾಡೆಲ್ ಜೇನ್ ಡೋ ಅವರು ಹೊಲೊಗ್ರಾಮ್ ಯುಎಸ್‌ಎನಲ್ಲಿ ಡೇವಿಡ್‌ಗಾಗಿ ಕೆಲಸ ಮಾಡಿದ್ದರು. ಕೆಲಸದ ಆರಂಭದಿಂದಲೂ ಕಚೇರಿಯಲ್ಲಿ ಡೇವಿಡ್‌ನ ವರ್ತನೆಯ ಬಗ್ಗೆ ಜೇನ್ ಡೋ ಬಗ್ಗೆ ಅನುಮಾನವಿತ್ತು. ಯಾಕೆಂದರೆ ಡೇವಿಡ್ ತಮ್ಮ ಇಚ್ಛೆಗೆ ವಿರುದ್ಧವಾಗಿ ಚುಂಬಿಸಿದ್ದಾರೆ ಎಂದು ಮಹಿಳಾ ಸಹೋದ್ಯೋಗಿಯೊಬ್ಬರು ಡೋಗೆ ತಿಳಿಸಿದ್ದರು.

2016ರಲ್ಲಿ ಗ್ರೀಸ್‌ನಲ್ಲಿರುವ ಖಾಸಗಿ ದ್ವೀಪಕ್ಕೆ ವ್ಯಾಪಾರ ಪ್ರವಾಸದಲ್ಲಿದ್ದಾಗ ಡೋ ಗೆ ಡೇವಿಡ್ ಚುಂಬಿಸಲು ಪ್ರಯತ್ನಿಸಿದ್ದರು. ಅದನ್ನು ಡೋ ನಿರಾಕರಿಸಿದ್ದರು. ಬಳಿಕ ಡೇವಿಡ್‌ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: Accident Case : ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು; ಫುಟ್‌ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ

ಆ ಬಳಿಕ ಆಕೆಯನ್ನು ವಜಾಗೊಳಿಸಲಾಯಿತು. 2018ರವರೆಗೆ ಡೇವಿಡ್‌ನೊಂದಿಗೆ ಸಂವಹನ ನಡೆಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಅದರ ಅನಂತರ ಡೇವಿಡ್ ತನ್ನ ಗಾಂಜಾ ಉತ್ಪಾದನಾ ಸಂಸ್ಥೆಯಾದ ಸ್ವಿಸ್-ಎಕ್ಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುವ ಪ್ರಸ್ತಾಪವನ್ನು ಮಾಡಿದರು. ಮಹಿಳೆ ಕೆಲಸವನ್ನು ಒಪ್ಪಿಕೊಂಡ ಅನಂತರ ತನ್ನ ಹೊಟೇಲ್‌ಗೆ ಆಕೆಯನ್ನು ಕರೆಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿತ್ತು. ಅಲ್ಲದೇ 2019ರಲ್ಲಿ ಸಣ್ಣ ಕೋಣೆಯಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಾರ್ಷಿಕ ಶ್ರೀಮಂತ ಪಟ್ಟಿಯ ಪ್ರಕಾರ ಡೇವಿಡ್ ಅವರ ಪ್ರಸ್ತುತ 3.7 ಶತಕೋಟಿ ಡಾಲರ್ ಸಂಪತ್ತಿನ ಮಾಲೀಕ ಎನ್ನಲಾಗಿದೆ.

Continue Reading

ದೇಶ

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜಾರ್‌ಗೆ ಕೆನಡಾ ಸಂಸತ್ತು ಗೌರವ; ಭಾರತ ಆಕ್ರೋಶ

Hardeep Singh Nijjar: ಕೆನಡಾದಲ್ಲಿದ್ದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಖಲಿಸ್ತಾನಿ ಪರ ಹೋರಾಟಗಾರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತನಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಮಂಗಳವಾರ (ಜೂನ್‌ 18) ಹೌಸ್ ಆಫ್ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಆತನಿಗೆ ಗೌರವ ಸಲ್ಲಿಸಿದೆ. ಕೆನಡಾ ನಿರ್ಧಾರಕ್ಕೆ ಭಾರತ ಈಗ ತೀವ್ರ ಖಂಡನೆ ವ್ಯಕ್ತಪಡಿಸಿದೆ.

VISTARANEWS.COM


on

Hardeep Singh Nijjar
Koo

ನವದೆಹಲಿ: ಖಲಿಸ್ತಾನಿ ಉಗ್ರ, ಖಲಿಸ್ತಾನಿ ಟೈಗರ್ ಫೋರ್ಸ್‌ನ (Khalistani Tiger Force) ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Hardeep Singh Nijjar) ಹತ್ಯೆಗೀಡಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸಂಸತ್‌ನಲ್ಲಿಯೇ ಆತನಿಗೆ ‘ಮೌನಾಚರಣೆ’ ಮೂಲಕ ಗೌರವ ಸಲ್ಲಿಸಿರುವುದನ್ನು ಭಾರತ ಸರ್ಕಾರವು (India) ತೀರ್ವವಾಗಿ ಖಂಡಿಸಿದೆ. ಕೆನಡಾದ (Canada) ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಕಳೆದ ಮಂಗಳವಾರ (ಜೂನ್‌ 18) ಎಲ್ಲರೂ ಎದ್ದು ನಿಂತು, ಮೌನಾಚರಣೆ ಮೂಲಕ ನಿಜ್ಜಾರ್‌ಗೆ ಗೌರವ ಸಲ್ಲಿಸಿದ್ದರು. ಇದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

“ತೀವ್ರವಾದಕ್ಕೆ ರಾಜಕೀಯ ವ್ಯವಸ್ಥೆಯಲ್ಲಿ ಜಾಗ ನೀಡುವುದನ್ನು ನಾವು ನಿಶ್ಚಿತವಾಗಿಯೂ ಖಂಡಿಸುತ್ತೇವೆ. ಯಾರು ಹಿಂಸಾಚಾರದ ಪರವಾಗಿದ್ದಾರೋ, ಯಾರು ತೀವ್ರವಾದದಲ್ಲಿ ನಂಬಿಕೆ ಇರಿಸಿದ್ದಾರೋ, ಅಂತಹವರಿಗೆ ರಾಜಕೀಯ ಕ್ಷೇತ್ರದಲ್ಲಿ ಜಾಗ ನೀಡುವುದನ್ನು ಭಾರತ ವಿರೋಧಿಸುತ್ತದೆ. ಇದು ನಮ್ಮ ನಿಲುವಾಗಿದೆ” ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಈ ಬಗ್ಗೆ ಸ್ಪೀಕರ್ ಗ್ರೆಗ್ ಫರ್ಗುಸ್ ಮಾತನಾಡಿ, “ಒಂದು ವರ್ಷದ ಹಿಂದೆ ಸುರ‍್ರೆ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸ್ಮರಣಾರ್ಥ ಮೌನ ಆಚರಿಸೋಣʼʼ ಎಂದು ಘೋಷಿಸಿದರು. ಅದರಂತೆ ಎಲ್ಲ ಸದಸ್ಯರು ಎದ್ದು ನಿಂತುಕೊಳ್ಳುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಖಲಿಸ್ತಾನಿ ಉಗ್ರ, ಖಲಿಸ್ತಾನ್‌ ನಾಯಕ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು.

ಇದನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

Continue Reading

ವಿದೇಶ

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Israel-Hamas Conflict: ಅಹ್ಮದ್ ಅಲ್ಸೌರ್ಕಾ ಹಮಾಸ್ ನುಖ್ಬಾ ಪಡೆಗಳಲ್ಲಿ ಕಮಾಂಡರ್ ಆಗಿದ್ದ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದ. ಈ ಹತ್ಯಾಕಾಂಡದಲ್ಲಿ 1,189 ಜನರು ಸಾವನ್ನಪ್ಪಿದ್ದರು. IDF ಮತ್ತು ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ (ISA)ಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಸ್ರೇಲಿ ವಾಯುಪಡೆಯು ಕಾರ್ಯಾಚರಣೆಯನ್ನು ನಡೆಸಿತು.

VISTARANEWS.COM


on

Israel-Hamas Conflict
Koo

ಗಾಜಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಸಂಘರ್ಷ(Israel-Hamas Conflict) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇಸ್ರೇಲ್‌ ಸೇನೆ(Israeli Air Force) ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಉಗ್ರರ ಕಮಾಂಡರ್‌(Hamas Commander) ಅಹ್ಮದ್ ಹಸನ್ ಸಲಾಮೆ ಅಲ್ಸೌರ್ಕಾನನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಗಳು ಅಧಿಕೃತ ಘೋಷಣೆ ಹೊರಡಿಸಿದೆ.

ಅಹ್ಮದ್ ಅಲ್ಸೌರ್ಕಾ ಹಮಾಸ್ ನುಖ್ಬಾ ಪಡೆಗಳಲ್ಲಿ ಕಮಾಂಡರ್ ಆಗಿದ್ದ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದ. ಈ ಹತ್ಯಾಕಾಂಡದಲ್ಲಿ 1,189 ಜನರು ಸಾವನ್ನಪ್ಪಿದ್ದರು. IDF ಮತ್ತು ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ (ISA)ಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಸ್ರೇಲಿ ವಾಯುಪಡೆಯು ಕಾರ್ಯಾಚರಣೆಯನ್ನು ನಡೆಸಿತು. ಉತ್ತರ ಗಾಜಾದ ಬೀಟ್ ಹನೌನ್ ಪ್ರದೇಶದಲ್ಲಿ ಅಲ್ಸೌರ್ಕಾ ತನ್ನ ಪಡೆಗಳೊಂದಿಗೆ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದವು. ಇನ್ನು ಈ ಕಾರ್ಯಾಚರಣೆ ವಿಡಿಯೋ ಸಿಸಿಟಿವಿಯನ್ನು ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಘಟನೆಯಲ್ಲಿ ನಾಗರಿಕರಿಗೆ ಯಾವುದೇ ಹಾನಿಗಳಾಗದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌ ಪ್ರಜೆಗಳನ್ನು ರಕ್ಷಿಸಲಾಗಿತ್ತು. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿತ್ತು. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದನ್ನೂ ಓದಿ: International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

Continue Reading
Advertisement
Kalki 2898 AD Final Trailer Released
ಕರ್ನಾಟಕ2 hours ago

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Sonakshi Sinha
ಬಾಲಿವುಡ್2 hours ago

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

Suryakumar Yadav
ಪ್ರಮುಖ ಸುದ್ದಿ3 hours ago

Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

Central Government monitoring wheat price stability: Union Minister Pralhad Joshi
ಕರ್ನಾಟಕ3 hours ago

Pralhad Joshi: ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರದ ಕ್ರಮ; ಪ್ರಲ್ಹಾದ್‌ ಜೋಶಿ

regional Laboratory sanctioned to Kims Hubballi
ಕರ್ನಾಟಕ3 hours ago

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Hinduja Family
ವಿದೇಶ3 hours ago

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Gautam Gambhir
ಪ್ರಮುಖ ಸುದ್ದಿ3 hours ago

Gautam Gambhir : ಕೋಚ್​ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್​!

Rishabh Pant
ಪ್ರಮುಖ ಸುದ್ದಿ4 hours ago

Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

Parking Complex
ಬೆಂಗಳೂರು4 hours ago

Parking Complex: ಬೆಂಗಳೂರಿನಲ್ಲಿ ಸುಸಜ್ಜಿತ ಪಾರ್ಕಿಂಗ್‌ ಕಾಂಪ್ಲೆಕ್ಸ್;‌ ಶುಲ್ಕದ ಕುರಿತ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ13 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 day ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ7 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌