ಆರು ಚಿನ್ನದ ಶೂಗಳ ಸ್ಟಾರ್, ಫುಟ್ಬಾಲರ್ ಲಿಯೊನೆಲ್‌ ಮೆಸ್ಸಿ ಜನ್ಮದಿನ‌‌ ಇಂದು - Vistara News

ಹ್ಯಾಪಿ ಬರ್ತ್ ಡೇ

ಆರು ಚಿನ್ನದ ಶೂಗಳ ಸ್ಟಾರ್, ಫುಟ್ಬಾಲರ್ ಲಿಯೊನೆಲ್‌ ಮೆಸ್ಸಿ ಜನ್ಮದಿನ‌‌ ಇಂದು

ಅರ್ಜೆಂಟೀನಾದ ಸ್ಟಾರ್‌ ಫುಟ್ಬಾಲರ್‌, ವಿಶ್ವದೆಲ್ಲೆಡೆ ಖ್ಯಾತಿ ಹೊಂದಿದ ಲಿಯೊನೆಲ್‌ ಮೆಸ್ಸಿ ಜನ್ಮದಿನದಂದು ಅವರ ಕುರಿತಾದ ಆಕರ್ಷಕ ಮಾಹಿತಿ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದನ್ನೂ ನೋಡಿ: ಖ್ಯಾತ ಫುಟ್‌ಬಾಲರ್‌ ಝಿಝು ಬಗ್ಗೆ ನಿಮಗಿದು ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

PM Modi Birthday: ನರೇಂದ್ರ ಮೋದಿಯ ಅಚ್ಚುಮೆಚ್ಚಿನ ಟಾಪ್‌ 10 ಖಾದ್ಯಗಳಿವು

ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರು ದಿರಸಿನ ವಿಚಾರದಲ್ಲಿ ಎಷ್ಟು ಆಕರ್ಷಕ ಉಡುಪುಗಳನ್ನು ಧರಿಸುತ್ತಾರೋ, ಆಹಾರದ ವಿಚಾರದಲ್ಲೂ ಅಷ್ಟೇ ರುಚಿ ಪ್ರಿಯರು. ಅವರು ಹೆಚ್ಚಾಗಿ ಇಷ್ಟಪಡುವ ಖಾದ್ಯಗಳು (Modi’s 10 Favourite Indian Dishes) ಯಾವವು? ಈ ಕುರಿತ ಪರಿಚಯ ಇಲ್ಲಿದೆ.

VISTARANEWS.COM


on

PM Modi Birthday
Koo

ಎಲ್ಲರಿಗೂ ಕೆಲವು ಇಷ್ಟವಾದ ತಿಂಡಿಗಳಿರುತ್ತವೆ. ಅದನ್ನೇ ಹೆಚ್ಚಾಗಿ ತಿನ್ನುವುದಕ್ಕೆ ಅವರು ಬಯಸುವುದು ಸಾಮಾನ್ಯ. ನಿಮ್ಮ ಕುಟುಂಬದಲ್ಲಿ ಯಾರಿಗೆ ಯಾವ ಖಾದ್ಯ ಹೆಚ್ಚು ಇಷ್ಟವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರಿಗೆ ಯಾವ ಖಾದ್ಯ (Modi’s 10 Favourite Indian Dishes) ಇಷ್ಟ ಎನ್ನುವುದರ ಬಗ್ಗೆ ತಿಳಿದಿದೆಯೆ? ಮೋದಿ ಅವರು ಇಷ್ಟ ಪಡುವ ಕೆಲವು ಖಾದ್ಯಗಳ ಕುತೂಹಲಕರ ಮಾಹಿತಿ ಇಲ್ಲಿದೆ.

Dhokla

ಧೋಕ್ಲಾ (Dhokla)

ಗುಜರಾತ್‌ ಮೂಲದವರಾದ ಮೋದಿ ಅವರಿಗೆ ಗುಜರಾತ್‌ನ ಪ್ರಸಿದ್ಧ ಖಾದ್ಯವಾದ ಧೋಕ್ಲಾವೆಂದರೆ ತುಂಬಾನೇ ಇಷ್ಟವಂತೆ. ಸಾಮಾನ್ಯವಾಗಿ ಈ ಧೋಕ್ಲಾವನ್ನು ಹಿಟ್ಟಿನಿಂದ ಅಥವಾ ರವೆಯಿಂದ ತಯಾರಿಸಲಾಗುತ್ತದೆ. ನೋಡುವುದಕ್ಕೆ ನಮ್ಮ ಮೈಸೂರು ಪಾಕ್‌ನಂತೆಯೇ ಕಾಣುವ ಧೋಕ್ಲಾವನ್ನು ಗುಜರಾತ್‌ನಲ್ಲಿ ಸ್ನ್ಯಾಕ್ಸ್‌ ರೀತಿಯಲ್ಲಿ ತಿನ್ನಲಾಗುತ್ತದೆ.

Veg Thali

ವೆಜ್ ಥಾಲಿ (Veg Thali)

ಸಂಸತ್‌ ಭವನದ ಕ್ಯಾಂಟೀನ್‌ನಲ್ಲಿ ಸದಸ್ಯರಿಗೆಂದು ವಿಧವಿಧದ ಅಡುಗೆ ಸಿದ್ಧವಿರುತ್ತದೆ. ಆದರೂ ಕೆಲವು ಸಚಿವರು ಅದನ್ನು ಇಷ್ಟಪಡದೆ ಹೊರಗಿನ ಆಹಾರ ತರಿಸಿಕೊಂಡು ತಿನ್ನುವವರಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್‌ ಭವನದ ಕ್ಯಾಂಟೀನ್‌ನ ವೆಜ್‌ ಥಾಲಿಯೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಅವರು ಸಂಸತ್‌ ಭವನದಲ್ಲಿದ್ದಾಗ ಹೆಚ್ಚಾಗಿ ಅದನ್ನೇ ಸೇವಿಸುತ್ತಾರಂತೆ. ಅದರಲ್ಲಿ ಅವರಿಗೆ ಪಲ್ಯ, ಸಬ್ಜಿ, ದಾಲ್‌, ರೊಟ್ಟಿ, ಸಲಾಡ್‌ ಸೇರಿ ವಿವಿಧ ರೀತಿಯ ಖಾದ್ಯಗಳು ಇರುತ್ತವೆ.

Fruit Salad

ಹಣ್ಣಿನ ಸಲಾಡ್ (Fruit Salad)

ಸಲಾಡ್‌ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ವಿಧ ವಿಧದ ಹಣ್ಣುಗಳನ್ನು ಹಾಕಿ ಮಾಡುವ ಫ್ರೂಟ್‌ ಸಲಾಡ್‌ ಪ್ರಧಾನಿ ಮೋದಿ ಅವರಿಗೂ ಬಲು ಇಷ್ಟವಾಗುತ್ತದೆ. ಹಲವಾರು ಹಣ್ಣುಗಳನ್ನು ಕತ್ತರಿಸಿ ಹಾಕಿ ಅದಕ್ಕೆ ಚಾಟ್‌ ಮಸಾಲೆ ಸೇರಿಸಿಕೊಂಡು ಮೋದಿ ಅವರು ಸೇವಿಸುತ್ತಾರಂತೆ. ಹೆಚ್ಚು ಸರಳವಾದ ಆಹಾರವನ್ನೇ ಅವರು ಸೇವಿಸಲು ಇಷ್ಟಪಡುತ್ತಾರಂತೆ.

Khichdi

ಖಿಚಡಿ (Khichdi)

ಮಾಡುವುದಕ್ಕೂ ಇದು ಸುಲಭ. ಹಾಗೆಯೇ ತಿನ್ನುವುದಕ್ಕೂ ಇಷ್ಟವಾಗುವ ಖಾದ್ಯ ಖಿಚಡಿ. ಗುಜರಾತ್‌ ಭಾಗದಲ್ಲಿ ಹೆಚ್ಚಾಗಿ ಮಾಡಲಾಗುವ ಖಿಚಡಿ ಮೋದಿ ಅವರಿಗೆ ಪ್ರೀತಿಯ ಆಹಾರವಂತೆ. ಹೆಸರು ಬೇಳೆ ಮತ್ತು ವಿವಿಧ ಸಣ್ಣ ಧಾನ್ಯಗಳಿಂದ ಮಾಡುವ ಖಿಚಡಿಯನ್ನು ಅವರು ಇಷ್ಟದಿಂದ ಸೇವಿಸುತ್ತಾರಂತೆ. ರಾಗಿಯಿಂದ ಮಾಡಿದ ಖಿಚಡಿ ಕೂಡ ಅವರಿಗೆ ಇಷ್ಟವಾಗುತ್ತದೆಯಂತೆ.

Srikhand

ಶ್ರೀಖಂಡ (Srikhand)

ಗುಜರಾತ್‌ನ ಪ್ರಸಿದ್ಧ ಸಿಹಿ ಖಾದ್ಯಗಳಲ್ಲಿ ಒಂದು ಶ್ರೀಖಂಡ. ಮೊಸರಿನಿಂದಲೇ ತಯಾರಾಗುವ ಈ ಖಾದ್ಯವನ್ನು ಪ್ರಧಾನಿ ಮೋದಿ ಅವರು ಇಷ್ಟ ಪಟ್ಟು ತಿನ್ನುತ್ತಾರಂತೆ. ಕೆಲವೊಮ್ಮೆ ಅದಕ್ಕೆ ವಿವಿಧ ಹಣ್ಣಗಳನ್ನೂ ಸೇರಿಸಿಕೊಂಡು ತಿನ್ನುವ ಅಭ್ಯಾಸ ಅವರಿಗಿದೆಯಂತೆ.

Sev Tameta

ಸೆವ್ ತಮೆಟಾ (Sev Tameta)

ಈ ವರ್ಷ ಜನವರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆದಿತ್ತು. ಆ ಸಭೆಯಲ್ಲಿನ ಊಟದ ಮೆನ್ಯು ಅನ್ನು ಮೋದಿ ಅವರ ಇಷ್ಟದಂತೆ ಮಾಡಲಾಗಿತ್ತು. ಅದರಲ್ಲಿ ಸೇವ್‌ ಟಮೆಟಾ ಕೂಡ ಒಂದಾಗಿತ್ತು. ಟೊಮೆಟೊ ಬಳಸಿಕೊಂಡು ಮಾಡುವ ಈ ಕರಿ ಗುಜರಾತ್‌ನಲ್ಲಿ ಹೆಚ್ಚು ಫೇಮಸ್‌ ಆಗಿರುವಂತಹ ಖಾದ್ಯ. ಇದೂ ಕೂಡ ಮೋದಿ ಅವರ ಇಷ್ಟದ ಖಾದ್ಯಗಳಲ್ಲಿ ಒಂದಾಗಿದೆ.

Marwari Pulao

ಮಾರ್ವಾಡಿ ಪುಲಾವ್ (Marwari Pulao)

ಪಲಾವ್‌ಗಳಲ್ಲಿ ಯಾವಾಗಲೂ ಸಾಕಷ್ಟು ಪೌಷ್ಟಿಕಾಂಶದ ಪದಾರ್ಥಗಳಿರುತ್ತದೆ. ಹಲವಾರು ವಿಧದ ತರಕಾರಿಗಳನ್ನು ಹೊಂದಿರುವ ಅದು ಹಲವರಿಗೆ ಇಷ್ಟದ ತಿಂಡಿ. ಹಾಗೆಯೇ ಮಾರ್ವಾಡಿ ಪಲಾವ್‌ ಕೂಡ ಅದರಲ್ಲಿ ಪ್ರಸಿದ್ಧವಾದ ಬಗೆಯಾಗಿದೆ. ಜೋಧ್‌ಪುರ ಭಾಗದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಈ ಮಾರ್ವಾಡಿ ಪಲಾವ್‌ನಲ್ಲಿ ಮೊಸರು, ಗೋಡಂಬಿ, ದಾಳಿಂಬೆ ಸೇರಿ ಹಲವು ರೀತಿಯ ಸಾಮಗ್ರಿಯನ್ನು ಹಾಕಲಾಗಿರುತ್ತದೆ. ರೈತಾದೊಂದಿಗೆ ಬಡಿಸಲಾಗುವ ಈ ಪಲಾವ್‌ ಮೋದಿ ಅವರ ಫೇವರಿಟ್‌ ಖಾದ್ಯಗಳಲ್ಲಿ ಒಂದಾಗಿದೆ.

Rawa Masala Dosa

ರವಾ ಮಸಾಲಾ ದೋಸೆ (Rawa Masala Dosa)

ದೋಸೆ ನಮ್ಮ ದಕ್ಷಿಣ ಭಾರತದ ಹೆಮ್ಮೆ. ಅದರಲ್ಲೂ ಮಸಾಲಾ ದೋಸೆ ಇಲ್ಲಿ ತುಂಬಾನೇ ಫೇಮಸ್‌. ಅದರಲ್ಲಿ ರವಾ ಮಸಾಲಾ ದೋಸೆಯನ್ನು ನೀವು ಮಾಡಿಕೊಂಡು ಸವಿದಿರುತ್ತೀರಿ. ಈ ರವಾ ಮಸಾಲಾ ದೋಸೆ ನಮ್ಮ ಪ್ರಧಾನಿ ಅವರಿಗೂ ಇಷ್ಟವಂತೆ. ದಕ್ಷಿಣ ಭಾರತದ ಖಾದ್ಯಗಳಲ್ಲಿ ಅವರು ಹೆಚ್ಚಾಗಿ ಇಷ್ಟಪಡುವುದು ಈ ರವಾ ಮಸಾಲಾ ದೋಸೆಯನ್ನೇ.

Ajwain Chapati

ಅಜ್ವೈನ್ ಚಪಾತಿ (Ajwain Chapati)

ಅಜ್ವೈನ್‌ ಬೀಜಗಳು ನಮ್ಮ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುವುದರ ಜತೆ ದೇಹವನ್ನು ತಂಪಾಗಿಸುವ ಗುಣಲಕ್ಷಣ ಹೊಂದಿದೆ. ಅದರಿಂದ ಮಾಡಲಾಗುವ ರೊಟ್ಟಿ/ಚಪಾತಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗೋಧಿ ಹಿಟ್ಟಿನೊಂದಿಗೆ ಅಜ್ವೈನ್‌ ಹಿಟ್ಟನ್ನು ಸೇರಿಸಿ ಮಾಡುವ ಚಪಾತಿ ಮೋದಿ ಅವರಿಗೆ ಇಷ್ಟವಂತೆ.

Bhindi Kadhi

ಭಿಂಡಿ ಕಧಿ (Bhindi Kadhi)

ಗುಜರಾತ್‌ನ ಪ್ರಮುಖ ಆಹಾರಗಳಲ್ಲಿ ಒಂದು ಭಿಂಡಿ ಕಧಿ. ಮೋದಿ ಅವರಿಗೆ ತಮ್ಮ ತವರು ರಾಜ್ಯದ ಈ ಖಾದ್ಯ ಇಷ್ಟವಾಗುತ್ತದೆಯಂತೆ. ಸ್ವಲ್ಪ ಸಿಹಿಯಾಗಿರುವ ಈ ಖಾದ್ಯವನ್ನು ಹುರಿದ ಬೆಂಡೆಕಾಯಿಯಿಂದ ತಯಾರಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ.

ಇದನ್ನೂ ಓದಿ: Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ

Continue Reading

ಕರ್ನಾಟಕ

Ramakrishna Hegde Birthday: ಮಾದರಿ ರಾಜಕಾರಣಿ ರಾಮಕೃಷ್ಣ ಹೆಗಡೆ; ಇಲ್ಲಿವೆ ಅವರ ಅಪರೂಪದ ಫೋಟೊಗಳು!

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (Ramakrishna Hegde Birthday) ಅವರು ಬದುಕಿದ್ದರೆ ಇಂದು 98ನೇ ವರ್ಷದ ಸಂಭ್ರಮದಲ್ಲಿರುತ್ತಿದ್ದರು. ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ್ದ ಹೆಗಡೆ ಅವರು, ತಮ್ಮ ಹುಟ್ಟೂರು ದೊಡ್ಮನೆ ಜತೆ ನಿಕಟ ನಂಟು ಹೊಂದಿದ್ದರು.

VISTARANEWS.COM


on

Ramakrishna Hegde Birthday
Koo

ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ: ಇವರು ನಾಡು ಕಂಡ ಅಪರೂಪದ ಮೌಲ್ಯಾಧಾರಿತ ರಾಜಕಾರಣಿ. ರಾಜಕೀಯ ಮುತ್ಸದ್ದಿ. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ ಇವರು, ಸೆರೆಮನೆ ವಾಸವನ್ನು ಅನುಭವಿಸಿದ್ದರು. ಕಿರಿಯ ವಯಸ್ಸಿನಲ್ಲೇ ರೈತ ಚಳವಳಿಯನ್ನು ರೂಪಿಸಿದ್ದರು. ಕೇವಲ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಸಿನಿಮಾ ರಂಗದಲ್ಲೂ ಮಿಂಚಿದ ಮಹಾನ್ ಚೇತನ…ಅವರೇ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

Ramakrishna Hegade is a rare values ​​based politician

ಇಂದು (ಆ.29) ಅವರ 98ನೇ ವರ್ಷದ ಹುಟ್ಟುಹಬ್ಬ. ರಾಜಕೀಯವಾಗಿ ಎಲ್ಲರಿಗೂ ಚಿರಪರಿಚಿತ ಆಗಿರುವ ಇವರ ಬಾಲ್ಯ ಜೀವನ ಶುರುವಾದದ್ದು ಪುಟ್ಟ ಗ್ರಾಮವಾದ ದೊಡ್ಮನೆ ಎಂಬಲ್ಲಿ. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಿಂದ 25 ಕಿಲೋ ಮೀಟರ್ ಹೋದರೆ ಸಿಗೋದೇ ದೊಡ್ಮನೆ ಗ್ರಾಮ. ಇಲ್ಲಿ ಅವರು ವಿದ್ಯಾಭ್ಯಾಸ ಮಾಡಿರುವ ಶಾಲೆ, ಅವರೇ ಕಟ್ಟಿಸಿದ ದೇವಸ್ಥಾನ ಕಾಣಿಸುತ್ತದೆ. ಮಹಾಬಲೇಶ್ವರ ಹೆಗಡೆ ಮತ್ತು ಸರಸ್ವತಿ ದಂಪತಿಯ ಪುತ್ರರಾಗಿ ಜನಿಸಿದ ಹೆಗಡೆ ಅವರು, ಪ್ರಾಥಮಿಕ ಶಿಕ್ಷಣವನ್ನು ದೊಡ್ಮನೆ ಗ್ರಾಮದ ಇದೇ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದರು. ಮುಂಚೆ ದೇವಾಲಯದ ಆವರಣದಲ್ಲಿ ಇದ್ದ ಶಾಲೆ ಈಗ ಬೇರೆಡೆ ತೆರೆಯಲಾಗಿದೆ.

ಗ್ರಾಮದಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೂ ಓದಿದ ಹೆಗಡೆ ಅವರು ಮುಂದಿನ ಅಭ್ಯಾಸಕ್ಕೆ ಸಿದ್ದಾಪುರಕ್ಕೆ ತೆರಳಿದರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದ ಹೆಗಡೆಯವರು ಬಾಲ್ಯದಿಂದಲೇ ಹೋರಾಟ ಸ್ವಭಾವ ಹೊಂದಿದ್ದವರು. ಚಿಕ್ಕಂದಿನಲ್ಲಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಅವರು ಮುಂದೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಜನ ಮಾನಸದಲ್ಲಿ ಉಳಿದಿದ್ದಾರೆ. ಪ್ರಾಥಮಿಕ ಶಿಕ್ಷಣ ನೀಡಿದ ಗುರುಗಳನ್ನು ಎಂದೂ ಮರೆಯದ ಹೆಗಡೆ ಅವರು, 1992ರಲ್ಲಿ ನಡೆದ ಶಾಲಾ ಶತಮಾನೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಅಘನಾಶಿನಿ ಶತಮಾನೋತ್ಸವ ಸ್ವರ್ಣ ಸಂಚಿಕೆಯನ್ನ ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮ ಗುರುಗಳ ಬಗ್ಗೆ ಹಿತನುಡಿಗಳನ್ನ ಕೂಡ ಬರೆದಿದ್ದಾರೆ. ವರ್ಷಕ್ಕೊಮ್ಮೆ ಆದರೂ ಊರಿಗೆ ಭೇಟಿ ನೀಡುತ್ತಿದ್ದ ಹೆಗಡೆ ಅವರು, ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ತಮ್ಮ ಮೂಲ ದೇವರಿಗೆ ವಂದಿಸಿ ಹೋಗುತ್ತಿದ್ದರು. ಅಲ್ಲದೆ ಒಡನಾಡಿಗಳಲ್ಲಿ ಉತ್ತಮ ಒಟನಾಟ ಬೆಳೆಸಿಕೊಂಡಿದ್ದವರು.

Once a year Hegade came to worship the clan god along with his wife Shakuntala and his family, he used to sit and chat for hours at the house of his relatives and friends.

ಮನೆಯಿಂದ ಹಾಗೆ ಕೊಂಚ ಮುಂದೆ ಹೋದರೆ ಸಿಗೋದೆ ಲಕ್ಷ್ಮೀ ನಾರಾಯಣ ದೇವಾಲಯ. ಇದು ಹೆಗಡೆ ಅವರ ಮೂಲ ದೇವರಂತೆ. ಪರಮ ಭಕ್ತರಾದ ಇವರು ತಮ್ಮ ಕುಲ ದೇವರನ್ನ ತಮ್ಮ ಊರಿನಲ್ಲೇ ಪ್ರತಿಷ್ಠಾಪಿಸಿದ್ದಾರೆ. ವರ್ಷಕ್ಕೊಮ್ಮೆ ಪತ್ನಿ ಶಕುಂತಲಾ ಹಾಗೂ ಕುಟುಂಬ ಸಹಿತ ಕುಲ ದೇವರಿಗೆ ಪೂಜೆ ಸಲ್ಲಿಸಲು ಬರುತ್ತಿದ್ದ ಹೆಗಡೆ ಅವರು, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಗಂಟೆಗಟ್ಟಲೆ ಕುಳಿತು ಹರಟೆ ಹೊಡಿಯುತ್ತಿದ್ದರಂತೆ. ಮೃದು ಸ್ವಭಾವ ಹೊಂದಿದ್ದ ಹೆಗಡೆ ಅವರು ಯಾರನ್ನೂ ದ್ವೇಷಿಸುತ್ತಿರಲ್ಲ.

Ramakrishna Hegade children

ಈ ಗ್ರಾಮಕ್ಕೆ ದೊಡ್ಮನೆ ಎಂದು ಹೆಸರು ಬರಲು ಇವರಿರುವ 325 ವರ್ಷದ ಮನೆಯೇ ಮೂಲ ಕಾರಣ. ಗ್ರಾಮದ ಮುಖ್ಯ ರಸ್ತೆಯಿಂದ ಕೊಂಚ ತೋಟ ದಾಟಿ ಮುಂದೆ ಹೋದರೆ ಸಿಗೋದೆ ಅವರ ಮೂಲ ಮನೆ. ಗ್ರಾಮಕ್ಕೆ ಅತಿ ದೊಡ್ಡ ಮನೆ ಹೊಂದಿದ್ದ ಇವರ ನಿವಾಸಕ್ಕೆ ದೊಡ್ಮನೆ ಎಂದು ಕರೆಯುತ್ತಿದ್ದರಂತೆ. ಅದೇ ದೊಡ್ಮನೆ ಗ್ರಾಮವಾಯ್ತು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ದೊಡ್ಮನೆಯಲ್ಲಿ ಮುಗಿಸಿದ ಅವರು, ಹೈಸ್ಕೂಲ್ ಗೆ ಬಂದದ್ದು ಸಿದ್ದಾಪುರಕ್ಕೆ.

ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಕಾಶಿ ವಿದ್ಯಾಪೀಠ, ಬನಾರಸ್ ಹಾಗೂ ಲಕ್ನೋ ಯುನಿವರ್ಸಿಟಿಗಳಲ್ಲಿ ಓದಿ ನ್ಯಾಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವವೂ ಕೂಡ ಬಲು ವರ್ಣರಂಜಿತ. ಅಂತಹ ಮಹಾನ್ ಚೇತನದ ಹುಟ್ಟುಹಬ್ಬವನ್ನ ವಿನೂತನವಾಗಿ ಆಚರಿಸುತ್ತಾ ಬಂದಿರುವ ಅವರ ಕುಟುಂಬಸ್ಥರು, ಅವರ ಹೆಸರಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ.

Ramakrishna Hegade death date

ದೇಶದ ಹಿರಿಯ ರಾಜಕೀಯ ನೇತಾರರಾದ ಹೆಗಡೆ, ಮೌಲ್ಯಾಧಾರಿತ ರಾಜಕಾರಣ ಮಾಡಿ ಕರ್ನಾಟಕವನ್ನು ದೇಶದ ನಕ್ಷೆಯಲ್ಲಿ ಒಂದು ಮಾದರಿ ರಾಜ್ಯವನ್ನಾಗಿ ಗುರುತಿಸುವಂತೆ ಮಾಡಿದ್ದರು. ರಾಮಕೃಷ್ಣ ಹೆಗಡೆಯವರು ದೇಶದಲ್ಲೇ ಪ್ರಥಮವಾಗಿ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ್ದರು. ಭ್ರಷ್ಟರ ಬೇಟೆಗಾಗಿ ಲೋಕಾಯುಕ್ತರನ್ನು ನೇಮಕ ಮಾಡಿದ್ದರು. ರಾಜಕೀಯ ಮಾತ್ರವಲ್ಲದೆ ಸಾಂಸ್ಕೃತಿಕ ವಲಯದಲ್ಲೂ ಸಕ್ರಿಯರಾಗಿದ್ದರು. ಮರಣ ಮೃದಂಗ ಮತ್ತು ಪ್ರಜಾಶಕ್ತಿ ಎಂಬ ಚಲನಚಿತ್ರಗಳಲ್ಲಿ ನಟಿಸಿದ್ದರು. ರಾಜ್ಯ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲೂ ಮುಂಚೂಣಿಯಲ್ಲಿದ್ದರು. ಇಂಥ ಮಹಾನ್ ಚೇತನ ಜನವರಿ 12, 2004ರಂದು ನಮ್ಮಿಂದ ದೂರವಾಯಿತು. ಆದರೆ ಅವರ ನೆನಪು ಮಾತ್ರ ಇಂದಿಗೂ ಅಮರ.

ಇದನ್ನೂ ಓದಿ: Ramakrishna Hegde BirthDay: ರಾಮಕೃಷ್ಣ ಹೆಗಡೆ ಕುರಿತ ಕುತೂಹಲಕಾರಿ ಸಂಗತಿಗಳಿವು

Continue Reading

ಕ್ರಿಕೆಟ್

Akshar Patel | ಜನುಮ ದಿನದ ಸಂಭ್ರಮದಲ್ಲಿ ಭಾರತ ತಂಡದ ಆಲ್​ರೌಂಡರ್​ ಅಕ್ಷರ್ ಪಟೇಲ್​

ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಹಾಗೂ ಸ್ಪಿನ್​ ಬೌಲರ್ ಅಕ್ಷರ್​ ಪಟೇಲ್ (Akshar Patel)​ ಜನವರಿ 20 ರಂದು 29 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಹ್ಯಾಪಿ ಬರ್ತ್​ಡೇ

VISTARANEWS.COM


on

Akshar Patel
Koo
Akshar Patel birthday
1/6
Akshar Patel birthday
2/6
Akshar Patel birthday
3/6
Akshar Patel birthday
4/6
Akshar Patel birthday
5/6
Akshar Patel birthday
6/6

ಇದನ್ನೂ ಓದಿ| Akshar Patel | ಜನುಮ ದಿನದ ಸಂಭ್ರಮದಲ್ಲಿ ಭಾರತ ತಂಡದ ಆಲ್​ರೌಂಡರ್​ ಅಕ್ಷರ್ ಪಟೇಲ್​

Continue Reading

ಫೋಟೊ

Shah Rukh Khan Birthday | 57ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಬಾಲಿವುಡ್‌ ಬಾದ್‌ಶಾ, ಬಾಲಿವುಡ್‌ ಕಿಂಗ್‌ ಮತ್ತು ಕಿಂಗ್‌ ಖಾನ್‌ ಎಂಬೆಲ್ಲ ಖ್ಯಾತಿ ಹೊಂದಿರುವ ಶಾರುಖ್‌ ಖಾನ್‌ ಅವರು ಬಾಲಿವುಡ್‌ನ ಹೆಸರಾಂತ ನಟ, ಚಲನಚಿತ್ರ ನಿರ್ಮಾಪಕ.

VISTARANEWS.COM


on

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌
Koo
ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಶಾರುಖ್ ಖಾನ್‌ 1965ರ ನವೆಂಬರ್ 2ರಂದು ನವ ದೆಹಲಿಯ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಶಾರುಖ್‌ 15 ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರು.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಶಾರುಖ್‌ ಖಾನ್ 1980ರ ದಶಕದಲ್ಲಿ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ವೃತ್ತಿಜೀವನ ಪ್ರಾರಂಭಿಸಿದ್ದರು.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ತಮ್ಮ ತಾಯಿಯ ಆಸೆಯಂತೆ ಸಿನಿಮಾ ಹೀರೋ ಆಗಲು ಮುಂದಾದ ಶಾರುಖ್‌ ಅವಕಾಶಕ್ಕಾಗಿ ಅಲೆದಾಡಿದ್ದರು. ಹಲವು ನಿರ್ದೇಶಕರ ಮನೆ ಬಾಗಿಲು ಕಾದಿದ್ದರು.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

1990ರಂದು ತಮ್ಮ ತಾಯಿಯನ್ನು ಕಳೆದುಕೊಂಡರು. ಆದರೆ ಅವರ ಭಿಲಾಷೆಯನ್ನು ತೀರಿಸುವ ಉದ್ದೇಶದಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರು.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಬಾಲಿವುಡ್‌ಗೆ ಪ್ರವೇಶ ಮಾಡುವುದಕ್ಕಿಂತ ಮೊದಲೇ ಅಂದರೆ, 1991ರಲ್ಲಿ ಗೌರಿ ಜತೆ ವಿವಾಹ ಆಗಿದ್ದರು. 1992ರಲ್ಲಿ ದೀವಾನಾ ಸಿನಿಮಾದಲ್ಲಿ ನೆಗೆಟಿವ್ ರೋಲ್ ಮೂಲಕ ಬಾಲಿವುಡ್‌ಗೆ ಪ್ರವೇಶ.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಶಾರುಖ್‌ ಖಾನ್‌ ಸುಮಾರು 80 ಚಲನಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ 7 ಸಿನಿಮಾಗಳಲ್ಲಿ ರಾಹುಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಶಾರುಖ್‌ ಅವರು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಪಡೆದಕೊಂಡಿದ್ದಾರೆ.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಶಾರುಖ್ ಖಾನ್ ಬಾಲಿವುಡ್ ಕ್ಷೇತ್ರದ ಶ್ರೀಮಂತ ನಟನಾಗಿದ್ದು, ಒಂದು ಸಿನಿಮಾಗೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

2018ರಲ್ಲಿ ಬಿಡುಗಡೆಯಾದ ಜೀರೋ ಸಿನಿಮಾ ಫ್ಲಾಪ್ ಆದ ಬಳಿಕ ಶಾರುಖ್‌ ಅವರು ಯಾವುದೇ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿಲ್ಲ.

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

ಪಠಾಣ್‌ ಎಂಬ ಹೊಸ ಕಥೆಯೊಂದಿಗೆ ಶಾರುಖ್ ಖಾನ್ ಕಮ್ ಬ್ಯಾಕ್ ಮಾಡಲಿದ್ದು, ಜವಾನ್‌, ಟೈಗರ್‌ 3, ಡಂಕಿ ಇವರ ಮುಂಬರುವ ಚಲನಚಿತ್ರಗಳು.

ಇದನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ ಶರ್ಮಿಳಾ ಮಾಂಡ್ರೆ

Continue Reading
Advertisement
Vijayalakshmi Darshan
ಕರ್ನಾಟಕ11 mins ago

Vijayalakshmi Darshan: ಜೈಲಲ್ಲಿ ದರ್ಶನ್‌ ಭೇಟಿ ಬೆನ್ನಲ್ಲೇ ಫ್ಯಾನ್ಸ್‌ಗೆ ದೊಡ್ಡ ಸಂದೇಶ ಕೊಟ್ಟ ವಿಜಯಲಕ್ಷ್ಮೀ; ಇಲ್ಲಿದೆ ಪೋಸ್ಟ್!

Monsoon Rain Boots Fashion
ಫ್ಯಾಷನ್33 mins ago

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Narendra Modi
ದೇಶ57 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ1 hour ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು1 hour ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ2 hours ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್2 hours ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ2 hours ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest2 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ3 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌