world cup ಗೆದ್ದ ಅಪೂರ್ವ ಕ್ಷಣಕ್ಕೆ 39 ವರ್ಷ - Vistara News

ಕ್ರಿಕೆಟ್

world cup ಗೆದ್ದ ಅಪೂರ್ವ ಕ್ಷಣಕ್ಕೆ 39 ವರ್ಷ

ಭಾರತ ಕ್ರಿಕೆಟ್‌ ತಂಡ ಮೊದಲ ಏಕದಿನ world cup ಗೆದ್ದಿರುವುದು1983ರ ಜೂನ್ 25ರಂದು. ಆ ಐತಿಹಾಸಿಕ ದಿನವನ್ನು ಇಲ್ಲಿ ಸ್ಮರಿಸಲಾಗಿದೆ.

VISTARANEWS.COM


on

world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನನಗೆ ಈ ದೃಶ್ಯ ಕೊಟ್ಟಷ್ಟು ಪ್ರೇರಣೆಯನ್ನು ಬೇರೆ ಯಾವುದೂ ಕೊಡಲು ಸಾಧ್ಯವೇ ಇಲ್ಲ. ಕಾರ್ಕಳದ ನಮ್ಮ ಮನೆಯ ಜಗಲಿಯಲ್ಲಿ ನಾವು ಒಂದಿಷ್ಟು ಗೆಳೆಯರು ಕಿವಿಗೆ ಪುಟ್ಟ ರೇಡಿಯೋ ಹಚ್ಚಿ ವೀಕ್ಷಕ ವಿವರಣೆ ಕೇಳಿದ ನೆನಪು ಮರೆತು ಹೋಗುವುದಿಲ್ಲ. ಭಾರತ ಗೆದ್ದಾಗ ಮಧ್ಯರಾತ್ರಿಯ ಹೊತ್ತು ಎಲ್ಲರೂ ಸೇರಿ ಒಂದಿಷ್ಟು ದುಡ್ಡು ಒಟ್ಟು ಮಾಡಿ ಕಾರ್ಕಳದ ಪಟಾಕಿ ಅಂಗಡಿಯವರನ್ನು ಎಬ್ಬಿಸಿ ಪಟಾಕಿ ತಂದು ರಸ್ತೆಯುದ್ದಕ್ಕೂ ಸಿಡಿಸಿದ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ.

ಆ ಘಟನೆ ನಡೆಯದೆ ಹೋಗಿದ್ದರೆ.

ಭಾರತ ಗೆದ್ದ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅದು. ಅದರಿಂದಾಗಿ ಮುಂದೆ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು. ಭಾರತದ ಕ್ರಿಕೆಟಿಗರು ಜನಪ್ರಿಯತೆ ಗಳಿಸಿದರು ಹಾಗೂ ಶ್ರೀಮಂತರಾದರು. ಸಚಿನ್ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಜಾವಗಲ್ ಶ್ರೀನಾಥ್, ಮಹೇಂದ್ರ ಸಿಂಗ್‌ ಧೋನಿ, ಯುವರಾಜ್, ವೀರೇಂದ್ರ ಸೆಹ್ವಾಗ್‌, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್‌ ದ್ರಾವಿಡ್, ಸೌರವ್‌ ಗಂಗೂಲಿ, ಗೌತಮ್‌ ಗಂಭೀರ್ ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಬೆಳೆದರು. ಅಂದು ಕಪಿಲ್‌ ದೇವ್‌ ಅವರ ಹುಡುಗರು ವಿಶ್ವ ಕಪ್‌ ಗೆಲ್ಲದೇ ಹೋಗಿದ್ದರೆ ಐಪಿಎಲ್ ಪಂದ್ಯಾಟವು ಭಾರತದಲ್ಲಿ ಆರಂಭ ಆಗುತ್ತಲೇ ಇರಲಿಲ್ಲ. ಇನ್ನೂ ಮುಂದಕ್ಕೆ ಹೋಗುವುದಾದರೆ ಅಂದು ವಿಶ್ವ ಕಪ್‌ ಗೆಲ್ಲದೇ ಹೋಗಿದ್ದರೆ ಭಾರತದಲ್ಲಿ ಕ್ರಿಕೆಟ್ ‘ಒಂದು ಧರ್ಮ’ ಆಗುತ್ತಲೇ ಇರಲಿಲ್ಲ.

ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ ಕ್ಷಣ

ಅಂಡರ್ ಡಾಗ್ ಆಗಿತ್ತು ಭಾರತ!

1983ರ ವಿಶ್ವಕಪ್ ಆರಂಭ ಆಗುವ ಮೊದಲು ಭಾರತ ತಂಡದ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಕಾರಣ ಹಿಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ಭಾರತದ ನಿರ್ವಹಣೆ ತುಂಬಾನೇ ಕಳಪೆಯಾಗಿತ್ತು. ಭಾರತೀಯ ಆಟಗಾರರು ಟೆಸ್ಟ್ ಮಾದರಿಯ ಡಿಫೆನ್ಸಿವ್ ಮೈಂಡ್ ಸೆಟನಿಂದ ಹೊರಬರಲು ಕಷ್ಟ ಪಡುತ್ತಿದ್ದರು.

ಮತ್ತೊಂದು ಕಡೆ ಬಲಿಷ್ಠ ವೆಸ್ಟ್ ಇಂಡೀಸ್ ಹಿಂದಿನ ಎರಡೂ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದ ಕೀರ್ತಿ ಪಡೆದಿತ್ತು. ಹೆಚ್ಚು ಕಡಿಮೆ ಅದೇ ಸ್ಟಾರ್ ಆಟಗಾರರು ಆ ತಂಡದಲ್ಲಿ ಇದ್ದರು. ಕ್ಲೈವ್ ಲಾಯ್ಡ್ ಎಂಬ ಬಲಾಢ್ಯ ಕ್ಯಾಪ್ಟನ್ ಕಟ್ಟಿದ ತಂಡ ಅದು. ಜಗತ್ತಿನ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ಗಳು ಮತ್ತು ಬ್ಯಾಟಿಂಗ್ ದೈತ್ಯರು ಆ ತಂಡದಲ್ಲಿ ಇದ್ದರು.
ಭಾರತ ತಂಡಕ್ಕೆ ಹೊಸ ಕ್ಯಾಪ್ಟನ್ ಕಪಿಲ್ ದೇವ್ ಸಾರಥ್ಯ. ಯಾವ ಆಟಗಾರನಿಗೂ ಸ್ಟಾರ್ ವ್ಯಾಲ್ಯೂ ಇರಲಿಲ್ಲ. ಆದರೆ ಹೆಚ್ಚಿನವರು ಆಲರೌಂಡರ್ ಆಟಗಾರರು. ಫೈಟಿಂಗ್ ಸ್ಪಿರಿಟ್ ಇದ್ದವರು. ಆದರೆ…ಕಪಿಲ್ ನಾಯಕತ್ವವೇ ಅದ್ಭುತ.
ತನ್ನ ಯುವ ಪಡೆಯನ್ನು ಇಂಗ್ಲೆಂಡ್‌ಗೆ ತಂದು ಇಳಿಸಿದಾಗ ಕಪಿಲ್ ದೇವ್ ಹೇಳಿದ ಮಾತು ತುಂಬಾ ಪ್ರೇರಣಾದಾಯಕವಾಗಿತ್ತು.

“ಹುಡುಗರೇ. ನಮ್ಮ ತಂಡದ ಮೇಲೆ ಯಾರಿಗೆ ಕೂಡ ದೊಡ್ಡ ನಿರೀಕ್ಷೆ ಇಲ್ಲ. ಸೋತರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ, ಆದರೆ ವೆಸ್ಟ್ ಇಂಡೀಸ್‌ ಚಾಂಪಿಯನ್ ತಂಡ. ಅವರಿಗೆ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಅದೇ ನಮಗೆ ಈ ಬಾರಿ ಬಂಡವಾಳ ಆಗಬೇಕು” ಎಂದಿದ್ದರು. ಅದೇ ನಮ್ಮ ತಂಡಕ್ಕೆ ಟಾನಿಕ್ ಆಗಿತ್ತು. ಇಡೀ ವಿಶ್ವ ಕಪ್ ಟೂರ್ನಿಯಲ್ಲಿ ಕಪಿಲದೇವ್ ಅವರ ಸ್ಫೂರ್ತಿಯುತವಾದ ನಾಯಕತ್ವವೇ ಭಾರತವನ್ನು ಗೆಲ್ಲಿಸಿದ್ದು.

ಮರೆಯಲಾಗದ ಜಿಂಬಾಬ್ವೆ ಪಂದ್ಯ!

ಆ ಟೂರ್ನಿಯಲ್ಲಿ ಇದ್ದ ತಂಡಗಳು ಒಟ್ಟು ಎಂಟು. ಅದರಲ್ಲಿ ದುರ್ಬಲ ತಂಡ ಅಂದರೆ ಜಿಂಬಾಬ್ವೆ. ಆದರೆ ಭಾರತಕ್ಕೆ ಆ ಜಿಂಬಾಬ್ವೆ ವಿರುದ್ಧದ ಪಂದ್ಯವೇ ಬಿಸಿ ತುಪ್ಪ ಆಯಿತು. ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 17 ರನ್‌ಗೆ ೫ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಉಳಿದವರು ಕೇವಲ ಬಾಲಂಗೋಚಿಗಳು. ಆಗ ಬ್ಯಾಟ್ ಹಿಡಿದು ಬಂದ ಕಪಿಲ್‌ ದೇವ್ ಮೈಗೆ ಆವೇಶ ಬಂದ ಹಾಗಿತ್ತು.

ಮೈದಾನದ ಎಲ್ಲ ಕಡೆ ಚೆಂಡನ್ನು ಅಟ್ಟಿಸುತ್ತಾ ಕಪಿಲ್ ಅಂದು ಗಳಿಸಿದ್ದು ಅಜೇಯ 175 ರನ್. 16 ಬೌಂಡರಿಗಳು ಮತ್ತು 6 ಮನಮೋಹಕ ಸಿಕ್ಸರ್‌ಗಳು. ಅಂದು ಭಾರತ ಸೋತಿದ್ದರೆ ಭಾರತಕ್ಕೆ ಗಂಟು ಮೂಟೆ ಕಟ್ಟಬೇಕಾಗಿತ್ತು. ಆದರೆ ತನ್ನ ವೀರೋಚಿತ ಇನಿಂಗ್ಸ್‌ ಮೂಲಕ ಕಪಿಲ್‌ದೇವ್ ಭಾರತವನ್ನು ಗೆಲ್ಲಿಸಿದ್ದರು.

ಆಗ ವಿಶ್ವ ಕಪ್ ಟೂರ್ನಿಯ ಎಲ್ಲ ಪಂದ್ಯಗಳು ಟಿವಿಯಲ್ಲಿ ನೇರ ಪ್ರಸಾರ ಆಗುತ್ತಿದ್ದವು. ಆದರೆ ಜಿಂಬಾಬ್ವೆ ಪಂದ್ಯದ ದಿನ ಬಿಬಿಸಿಯ ಸ್ಟಾಫ್ ಮುಷ್ಕರ ಹೂಡಿದ್ದ ಕಾರಣ ಆ ಪಂದ್ಯದ ವೈಭವ ಮತ್ತು ಕಪಿಲ್ ದೇವ್ ಅವರ ಸಾಹಸವನ್ನು ಕ್ರಿಕೆಟ್ ಜಗತ್ತು ನೋಡಲು ಸಾಧ್ಯ ಆಗಲಿಲ್ಲ!

ಸೆಮಿಫೈನಲ್ ಪಂದ್ಯಗಳು

ಒಂದು ಕಡೆ ಪಾಕ್ ತಂಡವನ್ನು ಸೋಲಿಸಿ ವಿಂಡೀಸ್ ತಂಡ ನಿರೀಕ್ಷೆಯಂತೆ ಫೈನಲ್‌ಗೆ ಟಿಕೆಟ್ ಪಡೆಯಿತು. ಮತ್ತೊಂದು ಕಡೆ ಭಾರತ ತಂಡವು ಕ್ರಿಕೆಟ್ ಜನಕರಾದ ಇಂಗ್ಲೆಂಡ್‌ ತಂಡವನ್ನು ಅವರದೇ ನೆಲದಲ್ಲಿ ೬ ವಿಕೆಟ್‌ಗಳ ಅಂತರದಲ್ಲಿ ಬಗ್ಗು ಬಡಿದು ಫೈನಲ್ ಪ್ರವೇಶ ಪಡೆಯಿತು. ವಿಂಡೀಸ್ ತಂಡಕ್ಕೆ ಅದು ಮೂರನೇ ಫೈನಲ್. ಭಾರತಕ್ಕೆ ಅದು ಚೊಚ್ಚಲ ಫೈನಲ್.

1983ರ ಜೂನ್ 25ರಂದು ಏನಾಯಿತು?

ಅದು ಕ್ರಿಕೆಟ್ ಸ್ವರ್ಗ ಎಂದು ಕರೆಸಿಕೊಂಡಿದ್ದ ಲಾರ್ಡ್ಸ್ ಮೈದಾನ. ಅಂದು ಮೈದಾನದ ತುಂಬಾ ವಿಂಡೀಸ್ ಬೆಂಬಲಿಗರು ತುಂಬಿದ್ದರು. ಭಾರತದ ಬೆಂಬಲಿಗರು 10% ಕೂಡ ಇರಲಿಲ್ಲ. ಭಾರತ ಟ್ರೋಫಿ ಗೆಲ್ಲುವ ಭರವಸೆಯೇ ಭಾರತೀಯರಿಗೇ ಇರಲಿಲ್ಲ!

ಆ ಟೂರ್ನಿಯಲ್ಲಿ ನಡೆದ ಪ್ರತೀ ಪಂದ್ಯವೂ 60 ಓವರ್ ಪಂದ್ಯ ಆಗಿತ್ತು. ಟಾಸ್ ಗೆದ್ದ ವಿಂಡೀಸ್ ನಾಯಕ ಭಾರತಕ್ಕೆ ಮೊದಲು ಬ್ಯಾಟ್ ಮಾಡಲು ಆಹ್ವಾನ ನೀಡಿತು. ಭಾರತ ಕುಂಟುತ್ತಾ 183 ರನ್ ಮಾಡಿತು. ಶ್ರೀಕಾಂತ್ 38 ಮಾಡಿದ್ದೆ ಗರಿಷ್ಠ ಸ್ಕೋರ್. ಸಂದೀಪ್ ಪಾಟೀಲ್ ಮತ್ತು ಮೋಹಿಂದರ್ ಅಮರನಾಥ್ ತಕ್ಕಮಟ್ಟಿಗೆ ಆಡಿದರು. ಅದಕ್ಕೆ ಕಾರಣ ವಿಂಡೀಸ್ ತಂಡದ ವೇಗದ ಬೌಲಿಂಗ್ ಪವರ್‌ . ಆ್ಯಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ದೈತ್ಯ ಜಾಯಲ್ ಗಾರ್ನರ್, ಲಾರಿ ಗೊಮ್ಸ್ ಇವರೆಲ್ಲರೂ ತಂಡವನ್ನು ಕಟ್ಟಿ ಹಾಕಿದ್ದರು.

ದೈತ್ಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗಾರ್ಡನ್ ಗ್ರಿನೀಜ್ ಮತ್ತು ಡೆಸ್ಮಂಡ್ ಹೇನ್ಸ್‌ ಆ ಕಾಲಕ್ಕೆ ವಿಶ್ವದಾಖಲೆ ಹೊಂದಿದ್ದವರು. ಗ್ರೀನೀಜ್ ಕ್ರೀಸಿಗೆ ಹೋಗುವಾಗ ತಮ್ಮ ತಂಡದ ಇತರ ಸದಸ್ಯರಿಗೆ “ನೀವು ಪ್ಯಾಡ್ ಕಟ್ಟುವ ಅಗತ್ಯವೇ ಇಲ್ಲ. ನಾವಿಬ್ಬರೇ ಮ್ಯಾಚನ್ನು ಗೆಲ್ಲಿಸಿ ಬರುತ್ತೇವೆ,” ಎಂದು ಹೇಳಿ ಕ್ರೀಸಿಗೆ ಇಳಿದಿದ್ದರು.

ಆದರೆ ಭಾರತದ ಯುವ ಬೌಲರ್‌ಗಳು ಅಂದು ಅದ್ಭುತವನ್ನೇ ಮಾಡಿದರು. ಮೊದಲ ವಿಕೆಟ್ ಕಡಿಮೆ ಮೊತ್ತಕ್ಕೆ ಉರುಳಿದಾಗ ಭಾರವಾದ ಬ್ಯಾಟ್ ಹಿಡಿದು ಕ್ರೀಸಿಗೆ ಬಂದವರು ವಿಂಡೀಸ್ ಬ್ಯಾಟಿಂಗ್ ಲೆಜೆಂಡ್ ವಿವಿಯನ್‌ ರಿಚರ್ಡ್ಸ್. ನಿರಂತರ ಬೌಂಡರಿಗಳ ಸದ್ದು ಬಂದಾಗ ವಿಂಡೀಸ್ ಮೂರನೇ ಟ್ರೋಫಿ ಎತ್ತಿ ಬಿಟ್ಟಿತ್ತು ಅನಿಸಲು ತೊಡಗಿತ್ತು. ಆದರೆ ಕಪಿಲ್ ದೇವ್ ಸುಮಾರು 30 ಹೆಜ್ಜೆ ಹಿಂದಕ್ಕೆ ಓಡಿ ಹಿಡಿದ ಒಂದು ಕ್ಯಾಚ್ ರಿಚರ್ಡ್ಸ್ ಅವರ ಇನಿಂಗ್ಸ್‌ಗೆ ಮಂಗಳ ಹಾಡಿತು. ಅಲ್ಲಿಂದ ಮುಂದೆ ನಡೆದದ್ದು ಭಾರತದ್ದೇ ಕಾರುಬಾರು.

ಚಾಂಪಿಯನ್ ವಿಂಡೀಸ್ ತಂಡ 140ಕ್ಕೆ ಆಲೌಟ್. ಭಾರತ ತಂಡಕ್ಕೆ 43 ರನ್ ವಿಜಯ. ಅಂದು ಮದನ್‌ಲಾಲ್ ಮತ್ತು ಮೋಹಿಂದರ್‌ ಅಮರನಾಥ್ ತಲಾ ೩ ವಿಕೆಟ್ ಪಡೆದಿದ್ದರು. ಟೂರ್ನಿ ಆರಂಭ ಆಗುವ ಮೊದಲು ಅಂಡರ್ ಡಾಗ್ ಎಂದು ಕರೆಸಿಕೊಂಡಿದ್ದ ಭಾರತದ ಯುವ ತಂಡವು ಕ್ರಿಕೆಟ್ ದೈತ್ಯರಾದ ವಿಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಹೆಡೆಮುರಿ ಕಟ್ಟಿಬಿಟ್ಟಿತ್ತು. ಇದು ಯಾರೂ ಊಹೆ ಕೂಡ ಮಾಡದ ಗೆಲುವು ಎಂದೇ ಹೇಳಬಹುದು.

ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಕಪಿಲ್‌ದೇವ್ ನೀಲಿ ಬಣ್ಣದ ಬ್ಲೇಜರ್ ಧರಿಸಿ ಪ್ರುಡೆನ್ಶಿಯಲ್ ಕಪ್ ಎತ್ತಿಹಿಡಿದ ಫೋಟೋ ಇಡೀ ಭಾರತೀಯ ಕ್ರಿಕೆಟ್ ರಂಗದ ವೈಭವದ ಮುನ್ಸೂಚನೆ ಆಗಿತ್ತು.

ಭಾರತಕ್ಕೆನಿಜವಾಗಿ ಸ್ಫೂರ್ತಿಯ ಸೆಲೆ!

ಭಾರತ ಹಾಕಿ ತಂಡವು ಆ ಮೊದಲೇ ಎಂಟು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ಸಾಧನೆ ಮಾಡಿತ್ತು. ಹಾಕಿ ಮಾಂತ್ರಿಕ ಧ್ಯಾನ್‌ ಚಂದ್ ಅವರು ಆಗಲೇ ಭಾರತದ ಐಕಾನ್ ಆಗಿದ್ದರು. ಹಾಗೆಯೇ ಮುಂದೆ ಭಾರತದ ಕ್ರಿಕೆಟ್ ತಂಡ ಹಲವು ವಿಶ್ವಮಟ್ಟದ ಟ್ರೋಫಿಗಳನ್ನು ಗೆದ್ದಿತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಟಾರ್‌ ಆಟಗಾರರು ಬಂದರು. ಆದರೆ ಆ ಚೊಚ್ಚಲ ವಿಶ್ವಕಪ್ ವಿಜಯವು ಭಾರತಕ್ಕೆ ಒಂದು ಚಿನ್ನದ ಪ್ರಭಾವಳಿ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದು ನಮಗೆಲ್ಲ ಸ್ಮರಣೀಯ. ಅದರ ಪೂರ್ತಿ ಶ್ರೇಯಸ್ಸು ಕಪಿಲ್ ದೇವ್ ಮತ್ತು ಅವರ ಹುಡುಗರಿಗೆ ಸಲ್ಲಬೇಕು.
ರಾಜೇಂದ್ರ ಭಟ್ ಕೆ.
ಲೇಖಕರು ಶಿಕ್ಷಕರು ಹಾಗೂ ಜೆಸಿ ಅಂತಾರಾಷ್ಟ್ರೀಯ ತರಬೇತುದಾರರು.

ಇದನ್ನೂ ಓದಿ| Team India ಹಿಟ್ಟರ್‌ ರೋಹಿತ್‌ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Sanjiv Goenka: ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಲ್‌ಎಸ್‌ಜಿಯು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಹೀನಾಯವಾಗಿ ಸೋತ ಬಳಿಕ ನಾಯಕ ರಾಹುಲ್‌ ಅವರಿಗೆ ಬೈದಿದ್ದಾರೆ. ಈ ಕುರಿತು ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ತುಸು ಮುಂಗೋಪಿಯಾಗಿರುವ ಸಂಜೀವ್‌ ಗೋಯೆಂಕಾ ಅವರು 2017ರಲ್ಲೂ ಧೋನಿ ಅವರನ್ನೇ ನಾಯಕತ್ವದಿಂದ ವಜಾಗೊಳಿಸಿದ್ದರು.

VISTARANEWS.COM


on

Sanjiv Goenka
Koo

ನವದೆಹಲಿ: ಸನ್‌ ರೈಸರ್ಸ್‌ ಹೈದರಾಬಾದ್‌ (Sun Risers Hyderabad) ತಂಡದ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಮಹತ್ವದ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಎಲ್‌ಎಸ್‌ಜಿ ಮಾಲೀಕ ಸಂಜೀವ್‌ ಗೋಯೆಂಕಾ (Sanjiv Goenka) ಅವರು ನಾಯಕ ಕೆ.ಎಲ್.ರಾಹುಲ್‌ (KL Rahul) ಜತೆ ಬಹಿರಂಗವಾಗಿಯೇ ವಾಗ್ವಾದ ನಡೆಸಿದ, ಟೀಕಿಸಿದ ವಿಡಿಯೊ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಕೆ.ಎಲ್‌.ರಾಹುಲ್‌ ಅವರನ್ನು ಎಲ್‌ಎಸ್‌ಜಿ ನಾಯಕತ್ವದಿಂದ ವಜಾಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂಜೀವ್‌ ಗೋಯೆಂಕಾ, 7 ವರ್ಷದ ಹಿಂದೆ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅವರನ್ನೇ ನಾಯಕತ್ವದಿಂದ ವಜಾಗೊಳಿಸಿದ್ದರು. ಧೋನಿ ನಾಯಕತ್ವವನ್ನೇ ಪ್ರಶ್ನಿಸಿ ಅವರು ಇಂತಹ ತೀರ್ಮಾನ ತೆಗೆದುಕೊಂಡಿದ್ದರು.

ಹೌದು, 2017ರಲ್ಲಿ ಸಂಜೀವ್‌ ಗೋಯೆಂಕಾ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ (RPS) ತಂಡದ ಮಾಲೀಕರಾಗಿದ್ದರು. ಅವರು ಇದೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಸ್ಟೀವ್‌ ಸ್ಮಿತ್‌ ಅವರನ್ನು ಆರ್‌ಪಿಎಸ್‌ ನಾಯಕನನ್ನಾಗಿ ಘೋಷಿಸಿದರು. 2016ನೇ ಆವೃತ್ತಿಯ ಕೊನೆಗೆ ಧೋನಿ ನಾಯಕತ್ವದಲ್ಲಿ ಆರ್‌ಪಿಎಸ್‌ 7ನೇ ಸ್ಥಾನ ಪಡೆದ ಕಾರಣದಿಂದಾಗಿ ಗೋಯೆಂಕಾ ಅವರು ಧೋನಿ ಅವರನ್ನು ಮುಂದಿನ ಆವೃತ್ತಿಯಲ್ಲಿ ನಾಯಕತ್ವದಿಂದ ವಜಾಗೊಳಿಸಿದ್ದರು.

ಸಂಜೀವ್‌ ಗೋಯೆಂಕಾ ಅವರು 2017ರಲ್ಲಿ ಸ್ಟೀವ್‌ ಸ್ಮಿತ್‌ ಅವರಿಗೆ ನಾಯಕತ್ವ ನೀಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮಹೇಂದ್ರ ಸಿಂಗ್‌ ಧೋನಿ ಅಭಿಮಾನಿಗಳು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, 2017ರಲ್ಲಿ ಸ್ಟೀವ್‌ ಸ್ಮಿತ್‌ ನಾಯಕತ್ವದಲ್ಲಿ ಆರ್‌ಪಿಎಸ್‌ ತಂಡವು ಫೈನಲ್‌ ತಲುಪಿತ್ತು. ಆದರೆ, ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಪಿಎಸ್‌ ಕೇವಲ ಒಂದು ರನ್‌ನಿಂದ ಸೋತು ರನ್ನರ್‌ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಯಿತು. ಸಿಎಸ್‌ಕೆ ಬ್ಯಾನ್‌ ಆದ ಕಾರಣ 2016, 2017ರಲ್ಲಿ ಆರ್‌ಪಿಎಸ್‌ ಪರವಾಗಿ ಆಡಿದ್ದ ಧೋನಿ, 2018ರಲ್ಲಿ ಸಿಎಸ್‌ಕೆಗೆ ಮರಳಿದರು. ಮಹತ್ವದ ವಿಚಾರ ಎಂದರೆ, ಧೋನಿ ನಾಯಕತ್ವದಲ್ಲಿ 2018ರಿಂದ 2023ರ ಅವಧಿಯಲ್ಲಿ ಸಿಎಸ್‌ಕೆ ಮೂರು ಬಾರಿ ಚಾಂಪಿಯನ್‌ ಆಯಿತು.

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಲ್‌ಎಸ್‌ಜಿಯು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಹೀನಾಯವಾಗಿ ಸೋತ ಬಳಿಕ ನಾಯಕ ರಾಹುಲ್‌ ಅವರಿಗೆ ಬೈದಿದ್ದಾರೆ. ಈ ಕುರಿತು ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಾದರೂ, ಮೊಂಡುತನ ಬಿಡದ ಗೋಯೆಂಕಾ, ಪ್ರಸಕ್ತ ಸೀಸನ್‌ನ ಕೊನೆಯ ಎರಡು ಪಂದ್ಯಗಳಿಗೆ ರಾಹುಲ್‌ ಬದಲಿಗೆ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 2025ರಲ್ಲೂ ಬೇರೆ ನಾಯಕನನ್ನು ನೇಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Continue Reading

ಐಪಿಎಲ್ 2024

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

IPL 2024: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

VISTARANEWS.COM


on

IPL 2024
Koo

ಧರ್ಮಶಾಲಾ: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

ಸದ್ಯ ಕೋಲ್ಕತ್ತಾ ನೂಟ್‌ ರೈಡರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಲಾ 16 ಅಂಕಗಳನ್ನು ಕಲೆ ಹಾಕಿ ಮೊದಲೆರಡು ಸ್ಥಾನಗಳಲ್ಲಿವೆ. ಇವೆರಡು ಪ್ಲೇ ಆಫ್​ ಪ್ರವೇಶಿಸುವುದು ಬಹುತೇಕ ಖಚಿತ. ಇತ್ತ 14 ಅಂಕ ಕಲೆ ಹಾಕಿರುವ ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೆ ಸಾಕು. ಪ್ಲೇ ಆಫ್‌ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ತೀವ್ರ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ. ಸದ್ಯ ಐದನೇ ಗೆಲುವು ಸಾಧಿಸಿರುವ ಆರ್‌ಸಿಬಿ, ಡೆಲ್ಲಿ, ಚೆನ್ನೈ ಮತ್ತು ಲಕ್ನೋ ನಡುವೆ ತೀವ್ರ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಹೈದರಾಬಾದ್​127514 (+0.406)
ಚೆನ್ನೈ116512 (+0.700)
ಡೆಲ್ಲಿ126612 (-0.316)
ಲಕ್ನೋ126612 (-0.769)
ಆರ್​ಸಿಬಿ125710 (+0.217)
ಮುಂಬೈ12488 (-0.212)
ಪಂಜಾಬ್‌12488 (-0.423)
ಗುಜರಾತ್​11478 (-1.320)

ಆರ್‌ಸಿಬಿಗೆ ಭರ್ಜರಿ ಜಯ

ಆರಂಭದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಆರ್‌ಸಿಬಿ ಭರ್ಜರಿ ಕಂಬ್ಯಾಕ್‌ ಮಾಡಿದೆ. ಸತತ ಗೆಲುವಿನ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಗುರುವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ವಿರಾಟ್‌ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಶತಕದ ಅಂಚಿನಲ್ಲಿ ಎಡವಿದ ಅವರು 47 ಬಾಲ್‌ಗೆ 92 ರನ್‌ ಕಲೆ ಹಾಕಿದರು. ಇದು 6 ಭರ್ಜರಿ ಸಿಕ್ಸರ್‌ ಮತ್ತು 7 ಫೋರ್‌ ಅನ್ನು ಒಳಗೊಂಡಿತ್ತು. ಇವರಿಗೆ ಉತ್ತಮ ಸಾಥ್‌ ನೀಡಿದ ರಜತ್‌ ಪಾಟಿದಾರ್‌ ಕೇವಲ 23 ಎಸೆತಗಳಲ್ಲಿ 55 ರನ್‌ ಚಚ್ಚಿದರು (6 ಸಿಕ್ಸ್‌, 3 ಫೋರ್‌).

ಇನ್ನು ಬೌಲಿಂಗ್‌ನಲ್ಲಿಯೂ ಉತ್ತಮ ದಾಳಿ ಸಂಘಟಿಸಿದ ಬೆಂಗಳೂರು ತಂಡ ಪಂಜಾಬ್‌ ತಂಡವನ್ನು 17 ಓವರ್‌ಗೆ 181 ರನ್‌ಗೆ ಆಲೌಟ್‌ ಮಾಡಿತು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

Continue Reading

ಐಪಿಎಲ್ 2024

Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Virat Kohli: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೀಲಿ ರುಸ್ಸೊ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಾಚರಿಸಿದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರೀಲಿ ರುಸ್ಸೋ ಔಟಾದರು. ರುಸ್ಸೋ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಸಂಭ್ರಮಿಸುವ ಮೂಲಕ ಅವರಿಗೆ ತಿರುಗೇಟು ನೀಡಿದರು.

VISTARANEWS.COM


on

Virat Kohli
Koo

ಧರ್ಮಶಾಲಾ: ಮೈದಾನದಲ್ಲಿ ವಿರಾಟ್‌ ಕೊಹ್ಲಿ (Virat Kohli) ಇರುವುದೇ ಹಾಗೆ. ಅದು ಗೌತಮ್‌ ಗಂಭೀರ್‌ ಇರಲಿ, ಸ್ಟ್ರೈಕ್‌ ರೇಟ್‌ ಕುರಿತು ಕಾಮೆಂಟರಿ ನೀಡಿದ ಸುನೀಲ್‌ ಗವಾಸ್ಕರ್ ಇರಲಿ, ಹೆಲ್ಮೆಟ್‌ ಬಿಸಾಡಿದ ಆವೇಶ್‌ ಖಾನ್‌ ಇರಲಿ, ನವೀನ್‌ ಹುಲ್‌ ಹಕ್‌ ಇರಲಿ. ಅವರು ಮೈದಾನದಲ್ಲಿಯೇ ತಿರುಗೇಟು ನೀಡದೆ ಬಿಡುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪ್ರಸಕ್ತ ಐಪಿಎಲ್‌ ಆವೃತ್ತಿಯ (IPL 2024) ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ರೀಲಿ ರುಸ್ಸೊ (Rilee Rossouw) ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಆರ್‌ಸಿಬಿ ನೀಡಿದ 242 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತುವಾಗ ರೀಲಿ ರುಸ್ಸೊ ಅವರು ಬಿರುಸಿನ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಾಚರಿಸಿದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರೀಲಿ ರುಸ್ಸೊ ಔಟಾದರು. ರುಸ್ಸೊ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಸಂಭ್ರಮಿಸುವ ಮೂಲಕ ಅವರಿಗೆ ತಿರುಗೇಟು ನೀಡಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು. ಇದರೊಂದಿಗೆ ಆರ್‌ಸಿಬಿಯು ಸತತ ನಾಲ್ಕನೇ ಜಯ ದಾಖಲಿಸಿತು.

ಕೊಹ್ಲಿಯ ಪ್ರದರ್ಶನ ‘ಕಿಂಗ್’

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

IPL 2024: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು.

VISTARANEWS.COM


on

IPL 2024
Koo

ಧರ್ಮಶಾಲಾ: ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ಬಲದಿಂದ ಮಿಂಚಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 17ನೇ (IPL 2024 ) ಆವೃತ್ತಿಯ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದು ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತಂಡಕ್ಕೆ ಐದನೇ ಗೆಲುವಾಗಿದೆ. ಇದರೊಂದಿಗೆ ಒಟ್ಟಾರೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಉಳಿದಿಗೆ. ಗೆಲುವಿನ ಹೊರತಾಗಿಯೂ ಆರ್​ಸಿಬಿ ತಂಡದ ಸ್ಥಾನ ಪಲ್ಲಟವೇನೂ ಆಗಿಲ್ಲ. ಇದೇ ವೇಳೆ 8ನೇ ಸೋಲಿಗೆ ಗುರಿಯಾದ ಪಂಜಾಬ್ ಕಿಂಗ್ಸ್​ ತಂಡ 9ನೇ ಸ್ಥಾನಕ್ಕೆ ಜಾರಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು.

ಕೊಹ್ಲಿಯ ದಾಖಲೆಯ ಪ್ರದರ್ಶನ

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ಪಂಜಾಬ್ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು.

ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

Continue Reading
Advertisement
pm narendra modi basava jayanti 2024
ಪ್ರಮುಖ ಸುದ್ದಿ31 mins ago

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

Sharia law
ವಿದೇಶ43 mins ago

Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Rain Effect In karnataka
ಮಳೆ47 mins ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

NEET-UG
ದೇಶ49 mins ago

NEET-UG: ನೀಟ್‌ ಪರೀಕ್ಷೆ ವೇಳೆ ವಂಚನೆ; 10 ಲಕ್ಷ ರೂ.ಗೆ ಬೇಡಿಕೆ ಇಟ್ಟ ಶಿಕ್ಷಕ ಸೇರಿ ಮೂವರ ವಿರುದ್ಧ ಬಿತ್ತು ಕೇಸು

prajwal revanna case women
ಪ್ರಮುಖ ಸುದ್ದಿ1 hour ago

Prajwal Revanna Case: “ಟ್ರಾನ್ಸ್‌ಫರ್‌ಗಾಗಿ ಪೀಡಿಸಿ ತಿಂದ…” ಪ್ರಜ್ವಲ್‌ ವಿಡಿಯೋದಲ್ಲಿದ್ದ ಸರ್ಕಾರಿ ಅಧಿಕಾರಿಣಿಯರಿಂದಲೂ ಈಗ ದೂರು!

Dog Bite in Belgavi
ಬೆಳಗಾವಿ1 hour ago

Dog Bite : ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ಅಟ್ಯಾಕ್‌

Indian Sailors Released
ವಿದೇಶ2 hours ago

Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

Sanjiv Goenka
ಪ್ರಮುಖ ಸುದ್ದಿ2 hours ago

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Solar Power
ದೇಶ2 hours ago

Solar Power: ಜಾಗತಿಕವಾಗಿ ಮತ್ತೊಮ್ಮೆ ಬೆಳಗಿದ ಭಾರತ; ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಜಪಾನ್‌ನನ್ನೂ ಮೀರಿದ ಸಾಧನೆ

sslc result 2024 vaishnavi self harming
ಕ್ರೈಂ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect In karnataka
ಮಳೆ47 mins ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ7 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ14 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ15 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ16 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ23 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ23 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ23 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು24 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ24 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಟ್ರೆಂಡಿಂಗ್‌