Solo Travel: ಏಕಾಂಗಿ ಪ್ರವಾಸಿ ಮಧುರವಾಗಬೇಕಾದರೆ ಈ 15 ಸೂತ್ರ ಪಾಲಿಸಿ! - Vistara News

ಪ್ರವಾಸ

Solo Travel: ಏಕಾಂಗಿ ಪ್ರವಾಸಿ ಮಧುರವಾಗಬೇಕಾದರೆ ಈ 15 ಸೂತ್ರ ಪಾಲಿಸಿ!

ಏಕಾಂಗಿ ಪ್ರಯಾಣ (Solo Travel) ಎಂಬುದೊಂದು ಮಧುರಾನುಭೂತಿ. ಸರಿಯಾಗಿ ಯೋಜಿಸಿ ಎಚ್ಚರದಿಂದ ಮುಂದುವರಿದರೆ ಜೀವಮಾನದ ನೆನಪುಗಳು ನಿಮ್ಮವಾದಾವು. ಅದಕ್ಕೆ ಕೆಲವು ಸೂತ್ರಗಳು ಇಲ್ಲಿವೆ.

VISTARANEWS.COM


on

solo travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೋಲೋ ಟ್ರಾವೆಲ್ ಈಗ ಟ್ರೆಂಡ್.‌ ಅದರಲ್ಲೂ ಮಹಿಳೆಯರು ಸೋಲೋ ಕಡೆ ಈಗ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಾರೆ. ಪ್ರವಾಸಕ್ಕೊಂದು ಬೇರೆಯೇ ಅರ್ಥ ಕೊಡುವ ನಮ್ಮನ್ನು ನಾವು ಸಂಪೂರ್ಣವಾಗಿ ಅರಿಯುವ, ಆತ್ಮವಿಶ್ವಾಸವನ್ನು ಹೆಚ್ಚಿಸುವ, ನಮ್ಮದೇ ಕಂಫರ್ಟ್‌ ಝೋನ್‌ನಿಂದ ನಮ್ಮನ್ನು ಹೊರತಂದು ಪ್ರಪಂಚ ತೋರಿಸುವ, ಬದುಕನ್ನು ಸರಳವಾಗಿ ಅರಿತುಕೊಳ್ಳುವ ಪ್ರಯತ್ನ ಮಾಡಿಸುವ ಈ ಸೋಲೋ ತೆರೆದಿಡುವ ಪ್ರಪಂಚವೇ ಅದ್ಭುತ. ಹಾಗಾಗಿ ಪ್ರವಾಸ ಲೋಕದಲ್ಲಿ ಸೋಲೋಗೆ ಅದರದ್ದೇ ಆದ ಸ್ಥಾನವಿದೆ.

ಆದರೆ, ಮೊದಲು ಸೋಲೋಗೆ ಹೊರಡುವವರಿಗೆ ಗೊಂದಲಗಳಿರುತ್ತವೆ. ಹೊರಡುವ ತಯಾರಿಯಿಂದ ಹಿಡಿದು ಒಬ್ಬರೇ ಉಳಿದುಕೊಳ್ಳುವವರೆಗೆ ಅನೇಕರಿಗೆ ಹಲವಾರು ಪ್ರಶ್ನೆಗಳಿರುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಹೋಗಲು ಆಸೆಯಿದ್ದರೂ ತಾನು ಒಬ್ಬಳೇ ಹೋದಾಗ ಸುರಕ್ಷಿತವಾಗಿ ಉಳಿದುಕೊಳ್ಳುವುದು ಹೇಗೆ ಎಂಬುದೂ ಸಮಸ್ಯೆಯಾಗಿ ಕಾಡುತ್ತದೆ. ಹಾಗಾಗಿ, ಸೋಲೋ ಟ್ರಾವೆಲ್‌ ಮಾಡುವವರು ಮಾಡಬೇಕಾದ ತಯಾರಿ ಹಾಗೂ ಅನುಸರಿಸಬೇಕಾದ ಸರಳ ಸೂತ್ರಗಳು (solo travel tips) ಇಲ್ಲಿವೆ.

೧. ಸೋಲೋಗೆ ಮುಂಗಡ ಬುಕ್ಕಿಂಗ್‌ ಅತ್ಯಗತ್ಯ. ಮೊದಲ ಬಾರಿ ಸೋಲೋ ಹೊರಡುತ್ತಿದ್ದರೆ ಉಳಿದುಕೊಳ್ಳುವ ವ್ಯವಸ್ಥೆ ಮೊದಲೇ ಮಾಡಿಕೊಂಡರೆ, ಚಿಂತೆಯಿರುವುದಿಲ್ಲ.

೨. ಎಷ್ಟೇ ದಿನಗಳ ಟ್ರಿಪ್‌ ಇರಲಿ, ಆದಷ್ಟು ಕಡಿಮೆ ಲಗ್ಗೇಜು ಪ್ಯಾಕು ಮಾಡಿಕೊಳ್ಳೋದು ಒಳ್ಳೇದು.

೩. ಹೊಸ ಊರಿಗೆ ತಡರಾತ್ರಿ ತಲುಪುವಂತಹ ರೈಲು, ವಿಮಾನಗಳನ್ನು ಬುಕ್‌ ಮಾಡದಿರುವುದೇ ಒಳ್ಳೆಯದು. ಆದಷ್ಟೂ, ಹಗಲು ಹೊತ್ತಿನಲ್ಲಿ ತಲುಪುವಂತಿದ್ದರೆ ಒಳ್ಳೆಯದು.

೪. ನಿಮ್ಮ ಕಂಫರ್ಟ್‌ ಝೋನ್‌ನಿಂದ ಹೊರ ಬನ್ನಿ. ಹೊಸಬರ ಜೊತೆ ಮಾತಾಡಿ. ಇಂತಹ ಪ್ರಯಾಣಗಳೇ ಜೀವನ ಪರ್ಯಂತ ಮರೆಯದ ಅನುಬಂಧಗಳನ್ನು ಸೃಷ್ಟಿಸುತ್ತದೆ.

೫. ಸುತ್ತಮುತ್ತಲ ಪ್ರಪಂಚವನ್ನು ತೆರೆದ ಕಣ್ಣು ಮನಸ್ಸಿನಿಂದ ಗಮನಿಸಿ. ಹೊಸ ಜನರು, ಅವರ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಯಿರಿ. ಸಾಧ್ಯವಾದರೆ ಅವುಗಳಲ್ಲಿ ಭಾಗಿಯಾಗಿ.

೬. ಒಬ್ಬರೇ ಊಟ ಮಾಡುವುದು, ಒಬ್ಬರೇ ಶಾಪಿಂಗ್‌ ಮಾಡೋದು, ಒಬ್ಬರೇ ಬೀದಿ ಬೀದಿ ಅಲೆಯೋದು, ಒಬ್ಬರೇ ರೂಮಿಗೆ ಬಂದು ಮಲಗೋದು ಎಲ್ಲವೂ ತೆರೆದಿಡುವ ಪ್ರಪಂಚ ಬದುಕಿಗೆ ಬಹುದೊಡ್ಡ ಪಾಠ. ಇವೆಲ್ಲವನ್ನು ಸಂಪೂರ್ಣ ಮನಸ್ಸಿನಿಂದ ಅನುಭವಿಸಿ.

೭. ಎಲ್ಲರೂ ಹೋಗುವ ಪ್ರವಾಸಿ ತಾಣಗಳಿಗಿಂತ, ಆಯಾ ಪ್ರದೇಶದ ಹೊಸ ಜಾಗಗಳನ್ನು ಶೋಧಿಸಿ. ಈ ಹುಡುಕಾಟಗಳು ನಿಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ.

ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

೮. ಬೇಸಿಕ್‌ ಔಷಧಿಗಳಿಂದ ಹಿಡಿದು ಐಡಿ ಕಾರ್ಡ್‌ವರೆಗೆ ಎಲ್ಲವನ್ನೂ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯ. ಒಂದೇ ಜಾಗದಲ್ಲಿ ಹಣ ಇಟ್ಟುಕೊಳ್ಳುವ ಬದಲು ಬೇರೆ ಬೇರೆ ಜಾಗಗಳಲ್ಲಿ ಇಟ್ಟುಕೊಳ್ಳಿ.

೯. ಮುಖದಲ್ಲಿ ಮಂದಹಾಸವಿರಲಿ. ನಗು ನಮ್ಮ ಆತ್ಮವಿಶ್ವಾಸವನ್ನು ತೋರುವುದಲ್ಲದೆ, ಎಂಥ ಜಾಗದಲ್ಲೂ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ದೇಶ, ಭಾಷೆ, ಗಡಿಗಳ ಹಂಗನ್ನು ಮೀರಿ ನಿಲ್ಲುವುದು ಇದೇ ನಗು.

೧೦. ಮ್ಯಾಪ್‌ ಬಳಕೆ, ನಾವೆಲ್ಲಿದ್ದೇವೆಂಬ ಜ್ಞಾನ, ಹೋಗಲಿರುವ ಜಾಗಗಳ ದೂರ, ತಲುಪಲು ಬೇಕಾದ ಗಂಟೆಗಳು ಇತ್ಯಾದಿಗಳ ಬಗ್ಗೆ ಅರಿವಿರುವುದು ಅತೀ ಮುಖ್ಯ.

೧೧. ಹೋದ ಹಾಗು ಇರುವ ಜಾಗಗಳ ಬಗ್ಗೆ ನಿಮ್ಮ ಆಪ್ತರಿಗೆ, ಮನೆಯವರಿಗೆ ಮಾಹಿತಿಯಿರಲಿ. ಆಗಾಗ ಅಪ್‌ಡೇಟ್‌ ಮಾಡುತ್ತಿರಿ.

೧೨. ಸಾರ್ವಜನಿಕ ಸಾರಿಗೆಗಳನ್ನು ಆದಷ್ಟು ಬಳಸಿ. ನಿಮ್ಮದು ಬಜೆಟ್‌ ಟ್ರಿಪ್‌ ಆಗಿದ್ದಲ್ಲಿ ಇದರಿಂದ ಹಣವೂ ಉಳಿತಾಯವಾಗುತ್ತದೆ.

೧೩. ಸರಳವಾಗಿರಿ. ಶಿಸ್ತು ಕೂಡಾ ಅಷ್ಟೇ ಮುಖ್ಯ. ಇತರರೊಂದಿಗೆ ನಿಮ್ಮ ನಡತೆಯೂ ಅಷ್ಟೇ ಮುಖ್ಯವಾಗುತ್ತದೆ.

೧೪. ಹೊಸ ಊರಿನಲ್ಲಿ ನಾವು ಸಭ್ಯತೆಯಿಂದ ನಡೆದುಕೊಳ್ಳುವುದು ಅತ್ಯಗತ್ಯ. ನಾವು ಧರಿಸುವ ದಿರಿಸಿನಲ್ಲೂ ಸಭ್ಯತೆಯಿರಲಿ. ಆಯಾ ಜಾಗಗಳ ನಿಯಮಗಳ ಪಾಲನೆಯೂ ಬಹಳ ಮುಖ್ಯ.

೧೫. ಸಂಶಯಗಳಿದ್ದಲ್ಲಿ, ಸರಿಯಲ್ಲ ಎನಿಸಿದಲ್ಲಿ ಧಾರಾಳವಾಗಿ ಪ್ರಶ್ನೆ ಮಾಡಿ. ಹೇಳಿದ್ದನ್ನು ಕೂಡಲೇ, ಒಪ್ಪಿ ತಲೆಯಾಡಿಸುವುದು ಮೂರ್ಖತನದ ಪರಮಾವಧಿ. ಪ್ರಶ್ನೆ ಮಾಡುವುದೂ ಕೂಡಾ ಆತ್ಮವಿಶ್ವಾಸದ ಇನ್ನೊಂದು ಮುಖ. ಎಲ್ಲಿ ಹೇಗೆ ಪ್ರಶ್ನಿಸಬೇಕೆಂಬ ಸಾಮಾನ್ಯ ಜ್ಞಾನದ ಅರಿಯೂ ಇರಲಿ. ಇದು ಅಪರಿಚಿತ ಊರಲ್ಲಿ ಮೋಸ ಹೋಗುವುದನ್ನೂ ತಪ್ಪಿಸುತ್ತದೆ.

ಇದನ್ನೂ ಓದಿ| ಜಲಪಾತ ನೋಡುವಾಗ ಎಚ್ಚರ ತಪ್ಪಿದರೆ ಪ್ರಪಾತ: ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಪ್ರವಾಸಿಗರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ. ಈ ಎಂಟು ಅದ್ಭುತ ಹಳ್ಳಿಗಳ ಪರಿಚಯ ಇಲ್ಲಿದೆ.

VISTARANEWS.COM


on

Summer Tour
Koo

ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್‌ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್‌ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.

Sikkim

ಝುಲುಕ್, ಸಿಕ್ಕಿಂ

ಪೂರ್ವ ಸಿಕ್ಕಿಂನ ಝುಲುಕ್‌ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್‌ ರೂಟ್‌ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.

Chitkool, Himachal Pradesh

ಚಿತ್ಕೂಲ್‌, ಹಿಮಾಚಲ ಪ್ರದೇಶ

ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್‌. ಕಿನೌರ್‌ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.

Naggar, Himachal Pradesh

ನಗ್ಗರ್‌, ಹಿಮಾಚಲ ಪ್ರದೇಶ

ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್‌ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.

Pelling, Sikkim

ಪೆಲ್ಲಿಂಗ್‌, ಸಿಕ್ಕಿಂ

ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್‌ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್‌ ಬಹಳ ಇಷ್ಟವಾಗಬಹುದು.

Malana, Himachal Pradesh

ಮಲಾನಾ, ಹಿಮಾಚಲ ಪ್ರದೇಶ

ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್‌ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

Zero, Arunachal Pradesh

ಝೀರೋ, ಅರುಣಾಚಲ ಪ್ರದೇಶ

ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.

Mawlynnong, Meghalaya

ಮಾವ್ಲಿನಾಂಗ್‌, ಮೇಘಾಲಯ

ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading

ಪ್ರವಾಸ

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Porbandar Tour: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿರುವ ಪೋರ್ ಬಂದರ್ ಇತಿಹಾಸದ ಹಿನ್ನಲೆಯಿರುವ ಸ್ಥಳವಾಗಿದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ ಭೇಟಿ ನೀಡಿ. ಪೋರ್ ಬಂದರ್ ನ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Porbandar Tour
Koo

ಗುಜರಾತ್: ಕರಾವಳಿ ನಗರವಾದ ಪೋರ್ ಬಂದರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿದೆ. ಇತಿಹಾಸದ ಹಿನ್ನೆಲೆಯಿರುವ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ (Porbandar Tour) ಭೇಟಿ ನೀಡಿ. ಇಲ್ಲಿನ ಅದ್ಭುತ ಸ್ಥಳಗಳನ್ನು ಆನಂದಿಸಿ.

Porbandar Tour

ಕೀರ್ತಿ ಮಂದಿರ

ಇದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವಾಗಿದೆ. ಇದು ಪೋರ್ ಬಂದರಿನಲ್ಲಿದೆ. ಇದು ಪೋರ್ ಬಂದರಿನ ಮೊದಲ ಹೆಗ್ಗುರುತಾಗಿದೆ. ಗಾಂಧೀಜಿಯವರ ಸೋದರಳಿಯನಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕದಲ್ಲಿ ಗಾಂಧಿಯವರ ಅಸಾಧಾರಣ ಜೀವನವನ್ನು ವಿವರಿಸುವ ವಸ್ತು ಸಂಗ್ರಹಾಲಯ, ದೇವಾಲಯ, ಉದ್ಯಾನಗಳನ್ನು ಹೊಂದಿದೆ.

Porbandar Tour

ಪೋರ್ ಬಂದರ್ ಬೀಚ್

ವಿಶ್ರಾಂತಿ ಪಡೆಯಲು ಬಯಸುವವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ಚಿನ್ನದಂತೆ ಹೊಳೆಯುವ ಮರಳುಗಳು, ಸೌಮ್ಯವಾದ ಅಲೆಗಳು ಮತ್ತು ಕಣ್ಮನ ಸೆಳೆಯುವ ಸೂರ್ಯೋದಯವನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ನಡೆದಾಡುವ ಮೂಲಕ ತಾಜಾ ಗಾಳಿಯನ್ನು ಉಸಿರಾಡಬಹುದು. ಹಾಗೇ ಇಲ್ಲಿ ಮೀನುಗಾರರು, ಒಂಟೆಗಳು ಸುತ್ತಾಡುತ್ತಿರುತ್ತದೆ. ಡೌನ್ ಚೌಪಟ್ಟಿರಸ್ತೆಯ ಮಾದರಿ ಖಾದ್ಯಗಳಾದ ಮೆಥಿ ಗೋಟಾ ಬಜ್ಜಿಗಳನ್ನು ಬಣ್ಣ ಬಣ್ಣದ ಬಲ್ಪ್ ಗಳಿಂದ ಅಲಂಕರಿಸಿದ ಸ್ಟಾಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Porbandar Tour

ಸುದಾಮ ಮಂದಿರ

ಪೋರ್ ಬಂದರಿನ ಸಿಟಿ ಸೆಂಟರ್ ನಲ್ಲಿ ಕಂಡುಬರುವ ಈ ಪುರಾತನ ದೇವಾಲಯದಲ್ಲಿ ಹಿಂದೂ ದೇವರಾದ ಕೃಷ್ಣನ ಜೊತೆ ಆತನ ಬಾಲ್ಯದ ಸ್ನೇಹಿತ ಸುದಾಮನನ್ನು ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಕೃಷ್ಣ ಆತನ ಪತ್ನಿ ರುಕ್ಮಿಣಿ , ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮನನ್ನು ಗೌರವಿಸಲಾಗುತ್ತದೆ. ಗುರುಕುಲದಲ್ಲಿ ಕೃಷ್ಣ –ಸುದಾಮರು ಒಟ್ಟಿಗೆ ಕಳೆದ ಸಮಯವನ್ನು ಚಿತ್ರಿಸುವ ಭಿತ್ತಿ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

Porbandar Tour

ಪೋರ್ ಬಂದರ್ ಚೌಪಟ್ಟಿ

ರೋಮಾಂಚಕವಾದ ಚೌಪಟ್ಟಿ ಬೀಚ್ ನಲ್ಲಿ ವಾಯು ವಿಹಾರ ಮಾಡುವಾಗ ಸ್ಥಳೀಯ ಖಾದ್ಯಗಳ ರುಚಿ ಮತ್ತು ಹಬ್ಬದ ಸಂಭ್ರಮವನ್ನು ನೀವು ಆನಂದಿಸದೆ ಇರಲಾಗುವುದಿಲ್ಲ. ದೀಪಗಳಿಂದ ಅಲಂಕಾರಗೊಂಡ ಮಳಿಗೆಗಳಲ್ಲಿ ಧೋಕ್ಲಾಗಳು, ಖಾಂಡ್ವಿಗಳು ಮತ್ತು ಹುರಿದ ಮಸಾಲೆಯುಕ್ತ ತಿಂಡಿಗಳಂತಹ ಪ್ರಮುಖ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚೌಪಟ್ಟಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಗಾಳಿಪಟವನ್ನು ಹಾರಿಸುವ ಉತ್ಸವ ನಡೆಯುತ್ತದೆ.

ತಾರಾ ಮಂದಿರ ತಾರಾಲಯ

1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಈ ತಾರಾಲಯವನ್ನು ಉದ್ಘಾಟಿಸಿದರು. ಇಲ್ಲಿ ಖಗೋಳಶಾಸ್ತ್ರ, ಪ್ರದರ್ಶನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಗ್ರಹಣದಿಂದ ನಕ್ಷತ್ರ ಪುಂಜಗಳವರೆಗೆ ಕಾಸ್ಮಿಕ್ ವಿದ್ಯಮಾನಗಳನ್ನು ವಿವರಿಸುವ ಪ್ರದರ್ಶನಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

Porbandar Tour

ಭಾರತ್ ಮಂದಿರ

19ನೇ ಶತಮಾನದ ಈ ದೇವಾಲಯವು ಭಾರತವನ್ನು ಗೌರವಿಸುತ್ತದೆ. ಪುರಾಣಗಳಲ್ಲಿ ಭಗವಾನ್ ರಾಮನ ಸದ್ಗುಣಗಳನ್ನು ಕಂಡು ಹಿಂದೂಗಳು ರಾಮನನ್ನು ಆದರ್ಶವಾಗಿ ಕಾಣುತ್ತಾರೆ. ಹಾಗಾಗಿ ಈ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇಲ್ಲಿ ಸ್ವರ್ಣ ಲೇಪಿತ ಗುಮ್ಮಟಗಳು, ಲ್ಯಾಟಿಸ್ಡ್ ಗೋಡೆಗಳು ಮತ್ತು ಸ್ತಂಭದ ಮಂಟಪ ಸಭಾಂಗಣಗಳು ದೂರ ದೂರದಿಂದ ಭಕ್ತರನ್ನು ಆಕರ್ಷಿಸುತ್ತದೆ.

Porbandar Tour

ನೆಹರು ತಾರಾಲಯ

ಖಗೋಳಶಾಸ್ತ್ರದ ಬಗ್ಗೆ ಮನೋರಂಜನೆಯನ್ನು ನೀಡುವಂತಹ ಪೋರ್ ಬಂದರ್ ನ ಈ ತಾರಾಲಯ ನಕ್ಷತ್ರಾಕಾರದಲ್ಲಿದೆ. ಇಲ್ಲಿ ಭೂಮಿಯ ಆಚೆಗಿನ ರಹಸ್ಯಗಳನ್ನು ಅನ್ವೇಷಿಸುವ ಹೈಟೆಕ್ ಪ್ರದರ್ಶನಗಳನ್ನು ನೀಡುತ್ತದೆ. ಆಧುನಿಕ ಗ್ಯಾಜೆಟ್ರಿಯೊಂದಿಗೆ ಸುಸಜ್ಜಿತವಾದ 40 ಅಡಿಗಳ ಅರ್ಧಗೋಳದ ಥಿಯೇಟರ್ ಒಳಗೆ ಡಿಜಿಟೈಸ್ಡ್ ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಗಳು ಪ್ರಜ್ವಲಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Porbandar Tour

ಪೋರ್ ಬಂದರ್ ಪಕ್ಷಿಧಾಮ

ಅಪರೂಪದ ಜಲವಾಸಿಗಳನ್ನೊಳಗೊಂಡ ಈ ಅಭಯಾರಣ್ಯಕ್ಕೆ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು. ಪೋರ್ ಬಂದರ್ ನಿಂದ ಕೇವಲ 2ಕಿಮೀ ದೂರದಲ್ಲಿರುವ ಇದು ಮ್ಯಾಂಗ್ರೋವ್ ಗಳನ್ನು ರಕ್ಷಣೆ ನೀಡುತ್ತದೆ ಮತ್ತು ವರ್ಷದಲ್ಲಿ ಸುಮಾರು 200 ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆ. ಇಲ್ಲಿ ಸುಂದರವಾದ ಭೂದೃಶ್ಯಗಳು ಮತ್ತು ತಾಜಾ ಗಾಳಿಯು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

Continue Reading

ಕರ್ನಾಟಕ

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

VISTARANEWS.COM


on

Wonderla Bengaluru
Koo

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla Bengaluru) ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ (Summer Fiesta 2024) ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಆಫರ್‌ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದ್ದು, ಅನೇಕ ಮೋಜಿನ ರೈಡ್‌, ವಾಟರ್‌ ಗೇಮ್‌ಗಳು, ಫುಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತೆ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿವೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ.

ಇನ್ನು ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಆಫರ್‌ಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು. ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ ಹೊಸ ವಿಶೇಷ ಪಾನೀಯ ಕೌಂಟರ್‌ಗಳೊಂದಿಗೆ ಈ ಬೇಸಿಗೆಯ ಶಾಖವನ್ನು ತಣಿಸಲು ತಾಜಾ ಹಣ್ಣಿನ ಜ್ಯೂಸ್‌ಗಳು, ಋತುವಿನ ಅತ್ಯುತ್ತಮ ಆಮ್ರಾಸ್‌, ತಂಪಾದ ಮಜ್ಜಿಗೆ ಮತ್ತು ಬೇಸಿಗೆಯ ಪಾನೀಯಗಳು ಲಭ್ಯವಿರಲಿದೆ.

ಇದನ್ನೂ ಓದಿ | E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

ಆಫರ್‌ಗಳ ವಿವರ ಇಲ್ಲಿದೆ

  • ವಂಡರ್‌ಲಾಗೆ ಭೇಟಿ ನೀಡಲು ಬಯಸುವವರಿಗೆ Early Bird ಹೆಸರಿನಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆ(Offer) ಪಡೆಯಲು ಮೂರು ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು.
  • ಜನ್ಮದಿನದ ಆಫರ್‌, ವಿಶೇಷವಾಗಿ ಮೇ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.
  • ಇನ್ನು, ವಿದ್ಯಾರ್ಥಿಗಳಿಗಾಗಿ ಹಾಲ್ ಟಿಕೆಟ್ ಆಫರ್ ಸಹ ಚಾಲ್ತಿಯಲ್ಲಿದೆ. 2023-2024ರ ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಿ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 35ರಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ (16-24 ವರ್ಷ ವಯಸ್ಸಿನವರು) ತಮ್ಮ ಕಾಲೇಜು ಐಡಿ ಕಾರ್ಡ್‌ಗಳನ್ನು ಪ್ರಸ್ತುತಪಡಿಸಿದರೆ ಶೇ. 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ, ಜೊತೆಗೆ, ವಿದ್ಯಾರ್ಥಿಗಳು ಆಹಾರ ಆಯ್ಕೆಗಳನ್ನು ಒಳಗೊಂಡಿರುವ ಕಾಂಬೊ ಪ್ಯಾಕೇಜ್‌ಗಳನ್ನು ಸಹ ಪಡೆಯಬಹುದು. ಆರಂಭಿಕ ಅರ್ಲಿ ಬರ್ಡ್‌ ಕೊಡುಗೆಯನ್ನು ಹೊರತುಪಡಿಸಿ, ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತವೆ. ಅತಿಥಿಗಳು ತಮ್ಮ ವಂಡರ್ಲಾ ಸಮ್ಮರ್ಲಾ ಫಿಯೆಸ್ಟಾ ಭಾಗವಾಗಿ ಮೇ 31 ರವರೆಗೆ ಪ್ರತಿ ಶನಿವಾರ ನಡೆಯುವ ವಂಡರ್ಲಾ ವಿಶೇಷ ಪೂಲ್ ಪಾರ್ಟಿಗಳೊಂದಿಗೆ ಭಾಗವಹಿಸಬಹುದು.

ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಬೇಸಿಗೆ ರಜೆಯನ್ನು ಇನ್ನಷ್ಟು ಉತ್ಸಾಹ ಭರಿತವನ್ನಾಗಿದಲು ವಂಡರ್‌ಲಾ “ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ. ಈ ಸಮ್ಮರ್ಲಾದಲ್ಲಿ ಇಡೀ ಕುಟುಂಬಗಳು, ಕಾಲೇಜು ಸ್ನೇಹಿತರು, ಮಕ್ಕಳು ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ಆಗಮಿಸಿ, ಆನಂದಿಸಬಹುದು.

ಸಮ್ಮರ್‌ಲಾ ಭಾಗವಾಗಿ ಫುಡ್‌ಫೆಸ್ಟಿವಲ್‌, ಸಾಂಸ್ಕೃತಿಕ ಮೆರವಣಿಗೆ, ಡಿಜೆ ಮ್ಯೂಸಿಕ್‌ ಸೇರಿದಂತೆ ಇನ್ನೂ ಅನೇಕ ಮನರಂಜನೆಗಳು ಇರಲಿವೆ. ಈ ಎಲ್ಲಾ ಮನರಂಜನೆಯೊಂದಿಗೆ ನಿಮ್ಮ ಸವಿನೆನಪನ್ನು ಅಚ್ಚಳಿಯದಂತೆ ಮಾಡುವುದೇ ನಮ್ಮ ವಂಡರ್‌ಲಾದ ಪ್ರಮುಖ ಉದ್ದೇಶ ಎಂದು ಹೇಳಿದರು.

ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಸಮ್ಮರ್ಲಾವನ್ನು ಆನಂದಿಸಿ.

ಇದನ್ನೂ ಓದಿ | Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, www.wonderla.com ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಅನ್ನು ಸಂಪರ್ಕಿಸಿ.

Continue Reading

ಪ್ರವಾಸ

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

Summer Tour: ಕಾಶ್ಮೀರಕ್ಕೆ ಭೇಟಿ ನೀಡಲು ಈಗ ಸೂಕ್ತ ಸಮಯ. ಹಿಮದಿಂದ ಆವೃತವಾದ ಸುಂದರ ಭೂದೃಶ್ಯಗಳನ್ನು ಈಗ ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ಐಆರ್ ಟಿಸಿ ಯು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಪ್ಯಾಕೇಜ್ ಘೋಷಿಸಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Summer Tour
Koo

ಧರೆಯ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರಕ್ಕೆ (kashmir) ಪ್ರವಾಸ (tour) ಹೊರಡಲು ಈಗ ಸೂಕ್ತ ಸಮಯ. ಬೇಸಿಗೆಯ ಬಿಸಿಲಿನಿಂದ (Summer Tour) ಕಂಗೆಟ್ಟ ಜನರು ತಂಪಾದ ಪ್ರದೇಶದಲ್ಲಿ ಹೋಗಿ ಕೆಲ ಕಾಲ ಇದ್ದು ಬರಬೇಕು ಎಂದು ಬಯಸಿದರೆ ಐಆರ್ ಟಿಸಿ (IRTC) ವತಿಯಿಂದ ಟೂರ್ ಪ್ಯಾಕೇಜ್ ಘೋಷಣೆಯಾಗಿದೆ. ಆಸಕ್ತರು ಬ್ಯಾಗ್ ಪ್ಯಾಕ್ ,ಮಾಡಿ ಹೊರಡಲು ಸಿದ್ಧತೆ ನಡೆಸಬಹುದು.

ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತವು ಕಣಿವೆ ಪ್ರದೇಶಕ್ಕೆ ಸಂಪೂರ್ಣವಾಗಿ ಬಿಳಿ ಬಣ್ಣ ಎರಕ ಹೊಯ್ದಂತೆ ಮಾಡಿದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಉತ್ಸಾಹವನ್ನು ಪುನರುಜ್ಜೀವನಗೊಳಿಸಿದೆ. ಈಗಾಗಲೇ ಅನೇಕ ಪ್ರವಾಸಿಗರು ಕಾಶ್ಮೀರಕ್ಕೆ ಹೊರಡುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಮೋಡಿ ಮಾಡುವ ಭೂದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ಆಗಮನಕ್ಕೆ ಕಾಶ್ಮೀರವೂ ಕಾಯುವಂತಿದೆ.

ಪ್ರವಾಸಿಗರ ಉತ್ಸಾಹವನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ವು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಎಂಬ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಹೊರತಂದಿದೆ.


ಇದನ್ನೂ ಓದಿ: Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಈ ಪ್ಯಾಕೇಜ್ ಕಾಶ್ಮೀರದ ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಬಯಸುವವರಿಗೆ ಹೇಳಿ ಮಾಡಲ್ಪಟ್ಟಿದೆ. ಐದು ರಾತ್ರಿ ಮತ್ತು ಆರು- ದಿನಗಳ ಸಮಗ್ರ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಮೊದಲಾದ ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್‌ಗಳು, ಹೊಟೇಲ್ ವಸತಿ, ಊಟ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಅವರೊಂದಿಗೆ ಬರುವ ಮಕ್ಕಳ ವಯಸ್ಸನ್ನು ಪರಿಗಣಿಸಿ ವಿಭಿನ್ನ ಪ್ರಯಾಣದ ಅನುಭವಕ್ಕೆ ಸರಿಹೊಂದಿಸಲು ಬೆಲೆಗಳನ್ನು ನಿಗದಿಪಡಿಸಲಾಗಿದೆ.


ಪ್ರವಾಸದ ದಿನ

ಮೇ ತಿಂಗಳಲ್ಲಿ 11, 15, 18, 25 ಜೂನ್ ತಿಂಗಳಲ್ಲಿ 1, 9, 15, 23, 26ರಂದು ಪ್ರವಾಸ ಹೊರಡುವ ಯೋಜನೆ ರೂಪಿಸಿಕೊಳ್ಳಬಹುದು. ಹೊಟೇಲ್ ವಾಸ್ತವ್ಯ ನಾಲ್ಕು ರಾತ್ರಿ ಶ್ರೀನಗರದಲ್ಲಿ ಮತ್ತು ಒಂದು ರಾತ್ರಿ ಪಹಲ್ಗಾಮ್ ನಲ್ಲಿ.

ದರ ಇಂತಿದೆ

ಒಬ್ಬರಿಗೆ 63,400 ರೂ., ಇಬ್ಬರಿಗೆ ಪ್ಯಾಕೇಜ್ ನಡಿಯಲ್ಲಿ ತಲಾ 54,100, ಮೂವರಿಗೆ ತಲಾ 50,700, 5 ರಿಂದ 11 ವರ್ಷದ ಒಳಗಿನ ಪ್ರತಿ ಮಕ್ಕಳಿಗೆ 48,400 ರೂ. ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳು

ಟೂರ್ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಸುಪ್ರಸಿದ್ದ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪಹಲ್ಗಾಮ್ , ಬೇತಾಬ್ ವಾಲಿ, ಅರು ವಾಲಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೊದಲ ದಿನ ಭೇಟಿ ನೀಡಲಾಗುತ್ತದೆ. ಎರಡನೇ ದಿನ ದಾಲ್ ಸರೋವರದ ದಡದಲ್ಲಿರುವ ಹಾಜ್ರತ್ ಬಾಲ್ ಶ್ರೀನಿ ಗೆ ಭೇಟಿ ನೀಡಲಾಗುತ್ತದೆ. ಮೂರನೇ ದಿನ ಅವಂತೀಪುರ್, ಮೊಘಲ್ ಗಾರ್ಡನ್, ಶಂಕರಾಚಾರ್ಯ ಟೆಂಪಲ್, ಶಿಖರ ರೈಡ್ ಅನ್ನು ಒಳಗೊಂಡಿರುತ್ತದೆ. ನಾಲ್ಕನೇ ದಿನ ದೂದ್ ಪೆಟ್ರಿಯಲ್ಲಿ , ಐದನೇ ದಿನ ಗುಲ್ಮಾರ್ಗ್ ನಲ್ಲಿ ಕಳೆಯಲಾಗುತ್ತದೆ. ಆರನೇ ದಿನ ವಿಮಾನದಲ್ಲಿ ಮುಂಬಯಿ ತಲುಪುವುದರೊಂದಿಗೆ ಪ್ರವಾಸ ಕೊನೆಗೊಳ್ಳುತ್ತದೆ.

Continue Reading
Advertisement
HD Revanna
ಕರ್ನಾಟಕ48 mins ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Road Accident
ಕರ್ನಾಟಕ53 mins ago

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Virat kohli
ಪ್ರಮುಖ ಸುದ್ದಿ53 mins ago

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024
ಕ್ರೀಡೆ1 hour ago

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

HD Revanna
ಕರ್ನಾಟಕ1 hour ago

HD Revanna: ಎಸ್‌ಐಟಿ ಸೆಲ್‌ನಲ್ಲೇ ‘ಮೊದಲ ರಾತ್ರಿ’ ಕಳೆಯಲಿರುವ ರೇವಣ್ಣ; ಬೆಳಗ್ಗೆ ಜಡ್ಜ್‌ ಎದುರು ಹಾಜರ್!

IPL 2024
ಕ್ರೀಡೆ2 hours ago

IPL 2024 : ಅಭಿಮಾನಿಗಳಿಗೆ ಸತಾಯಿಸಿ ಖುಷಿ ಕೊಟ್ಟ ಆರ್​ಸಿಬಿ, ಗುಜರಾತ್​ ವಿರುದ್ಧ 4 ವಿಕೆಟ್​ ಜಯ

Dingaleshwar Swamiji
ಕರ್ನಾಟಕ2 hours ago

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Virat kohli
ಕ್ರೀಡೆ2 hours ago

Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

Prajwal Revanna Case
ಕರ್ನಾಟಕ2 hours ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ2 hours ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌