Tourism Industry : ಸ್ವಂತ ಕಾರಿನಲ್ಲಿ ಪ್ರವಾಸ, ಸಣ್ಣ ಟೂರಿಸ್ಟ್‌ ಆಪರೇಟರ್‌ಗಳಿಗೆ ಪ್ರಯಾಸ, ಎಲ್‌ಟಿಸಿ ಸೌಲಭ್ಯ ವಿಸ್ತರಿಸಲು ಒತ್ತಾಯ Vistara News
Connect with us

ಆಟೋಮೊಬೈಲ್

Tourism Industry : ಸ್ವಂತ ಕಾರಿನಲ್ಲಿ ಪ್ರವಾಸ, ಸಣ್ಣ ಟೂರಿಸ್ಟ್‌ ಆಪರೇಟರ್‌ಗಳಿಗೆ ಪ್ರಯಾಸ, ಎಲ್‌ಟಿಸಿ ಸೌಲಭ್ಯ ವಿಸ್ತರಿಸಲು ಒತ್ತಾಯ

ರಜಾ ಕಾಲದ ಪ್ರಯಾಣ ಭತ್ಯೆ ವಿನಾಯಿತಿ ಸೌಲಭ್ಯವನ್ನು 5% ಜಿಎಸ್‌ಟಿ ಪಾವತಿಸುವ ಸಣ್ಣ ಟೂರಿಸ್ಟ್‌ ವಲಯಕ್ಕೂ ವಿಸ್ತರಿಸಬೇಕು (Tourism Industry) ಎಂದು ಆಪರೇಟರ್‌ಗಳ ಸಂಘಟನೆ ಒತ್ತಾಯಿಸಿದೆ. ವಿವರ ಇಲ್ಲಿದೆ.

VISTARANEWS.COM


on

cabs
Koo

ಬೆಂಗಳೂರು: ಒಂದೆಡೆ ಸ್ವಂತ ಕಾರಿನಲ್ಲಿ ಪ್ರವಾಸ ಮಾಡುತ್ತಿರುವ ಗ್ರಾಹಕರು, ಮತ್ತೊಂದು ಕಡೆ ರಜಾ ಕಾಲದ ಪ್ರಯಾಣ ಭತ್ಯೆ ವಿನಾಯಿತಿ (Leave Travel Concession) ನೀತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಆಗುತ್ತಿರುವ ನಷ್ಟದ ಪರಿಣಾಮ ಪ್ರವಾಸೋದ್ಯಮ ವಲಯದಲ್ಲಿ (Tourism Industry) ತೊಡಗಿಸಿಕೊಂಡಿರುವ 95% ಕ್ಕೂ ಹೆಚ್ಚು ಸಣ್ಣಪುಟ್ಟ ಟೂರಿಸ್ಟ್‌ ಆಪರೇಟರ್‌ಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಸರ್ಕಾರ 2019ರಲ್ಲಿ ಎಲ್‌ಟಿಎ ನೀತಿಯಲ್ಲಿ ಬದಲಾವಣೆ ಜಾರಿಗೊಳಿಸಿತ್ತು. 12% ಜಿಎಸ್‌ಟಿ ಶ್ರೇಣಿಗೆ ಬರುವ ದೊಡ್ಡ ಟೂರಿಸ್ಟ್‌ ಆಪರೇಟರ್‌ಗಳಲ್ಲಿ ಸೇವೆ ಪಡೆದುಕೊಂಡು ಬಿಲ್‌ ಪಾವತಿಸುವ ಪ್ರವಾಸಿಗರಿಗೆ ಮಾತ್ರ ಎಲ್‌ಟಿಎ ಸೌಲಭ್ಯದ ವೆಚ್ಚವನ್ನು ಆದಾಯ ತೆರಿಗೆ ವಿನಾಯಿತಿಗೆ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ 5% ಜಿಎಸ್‌ಟಿ ಸ್ಲ್ಯಾಬ್‌ಗೆ ಬರುವ ಟೂರಿಸ್ಟ್‌ ಆಪರೇಟರ್‌ಗಳಿಂದ ಸೇವೆ ಪಡೆದರೆ ಅಂಥ ಉದ್ಯೋಗಿಗಳಿಗೆ ಎಲ್‌ಟಿಎ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಉದ್ಯೋಗಿಗಳ ಎಲ್‌ಟಿಸಿ ಸೌಲಭ್ಯವನ್ನು 5% ಜಿಎಸ್‌ಟಿ ಶ್ರೇಣಿಗೆ ಬರುವ ಸಣ್ಣಪುಟ್ಟ ಟೂರಿಸ್ಟ್‌ ಆಪರೇಟರ್‌ಗಳಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಶನ್‌ (Karnataka state travel operators association) ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ತಿಳಿಸಿದ್ದಾರೆ.

ಎರಡನೆಯದಾಗಿ ಎಲ್‌ಟಿಸಿ ಅಡಿಯಲ್ಲಿ ಪ್ರವಾಸ ಕೈಗೊಳ್ಳದವರು ಎಲೆಕ್ಟ್ರಾನಿಕ್‌ ಉಪಕರಣಗಳನ್ನು, ಉದಾಹರಣೆಗೆ ರೆಫ್ರಿಜರೇಟರ್‌, ವಾಷಿಂಗ್‌ ಮೆಷೀನ್‌ ಇತ್ಯಾದಿಗಳನ್ನು ಖರೀದಿಸಬಹುದು ಎಂದು ನೀತಿಯಲ್ಲಿ ಬದಲಾವಣೆ ತರಲಾಗಿದೆ. ಇದರಿಂದಲೂ ಟೂರಿಸ್ಟ್‌ ವಲಯಕ್ಕೆ ಸಿಗಬೇಕಿದ್ದ ಉತ್ತೇಜನವನ್ನು ಕಿತ್ತುಕೊಂಡಂತಾಗಿದೆ ಎಂದು ರಾಧಾಕೃಷ್ಣ ಹೊಳ್ಳ ಅವರು ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.

ಬೇಡಿಕೆ ಏನು? ಪ್ರವಾಸೋದ್ಯಮ ವಲಯ ದೊಡ್ಡ ಪ್ರಮಾಣದಲ್ಲಿ ಸ್ವ ಉದ್ಯೋಗ ಸೃಷ್ಟಿಸುತ್ತದೆ. ಆದ್ದರಿಂದ ಸಣ್ಣಪುಟ್ಟ ಟೂರಿಸ್ಟ್‌ ಆಪರೇಟರ್‌ಗಳನ್ನು ಉತ್ತೇಜಿಸಲು ಎಲ್‌ಟಿಸಿ ಸೌಲಭ್ಯವನ್ನು 5% ಜಿಎಸ್‌ಟಿ ನೀಡುವ ಟೂರಿಸ್ಟ್‌ ಉದ್ದಿಮೆಗೂ ವಿಸ್ತರಿಸಬೇಕು. ಎರಡನೆಯದಾಗಿ ಎಲ್‌ಟಿಸಿ ಸೌಲಭ್ಯವನ್ನು ಎಲೆಕ್ಟ್ರಾನಿಕ್‌ ಉಪಕರಣ ಖರೀದಿಗೆ ನೀಡಬಾರದು. ಅದು ಟೂರಿಸ್ಟ್‌ ವಲಯಕ್ಕೇ ಸಿಗುವಂತಿರಬೇಕು ಎಂದು ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಆಟೋಮೊಬೈಲ್

Hyundai Motor : ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಬಿಡುಗಡೆ; ಬೆಲೆ, ಫೀಚರ್​ಗಳ ಬಗ್ಗೆ ಇಲ್ಲಿದ ಮಾಹಿತಿ

ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಭಾರತದ ರಸ್ತೆಗೆ ಇಳಿದಿದ್ದು ಹಲವಾರು ಹೊಸ ಫೀಚರ್​ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

VISTARANEWS.COM


on

New Generation Hyundai Verna Launched Here is the information about the price features
Koo

ನವ ದೆಹಲಿ: ದಕ್ಷಿಣ ಕೊರಿಯಾ ಮೂಲದ ಕಂಪನಿಯ ಹ್ಯುಂಡೈ ಮೋಟಾರ್​ (Hyundai Motor) ತನ್ನ ಜನಪ್ರಿಯ ಸೆಡಾನ್​ ಕಾರು ವೆರ್ನಾದ ನೂತನ ಆವೃತ್ತಿಯನ್ನು ಮಂಗಳವಾರ (ಮಾರ್ಚ್​ 21ರಂದು) ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು, ಟಾಪ್​ ಎಂಡ್​ ವೇರಿಯೆಂಟ್​ಗೆ 17.38 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ಕಾರಿನಲ್ಲಿ ಎಡಿಎಎಸ್ ಫೀಚರ್ ಸೇರ್ಪಡೆಯಾಗಿದೆ. ಆದರೆ ಡೀಸೆಲ್​ ವೇರಿಯೆಂಟ್​ ಕಾರನ್ನು ಬಿಡುಗಡೆ ಮಾಡಿಲ್ಲ. ಬಿಡುಗಡೆಗೆ ಮೊದಲೇ ಕಂಪನಿ ಬುಕಿಂಗ್​ ಆರಂಭ ಮಾಡಿತ್ತು. ಅಂತೆಯೇ ಮಂಗಳವಾರಕ್ಕೆ 8000 ಮಂದಿ ಆಸಕ್ತಿ ತೋರಿದ್ದಾರೆ. ಗ್ರಾಹಕರು 25 ಸಾವಿರ ರೂಪಾಯಿ ಪಾವತಿ ಮಾಡಿ ಅನ್​ಲೈನ್ ಅಥವಾ ಶೋ ರೂಮ್​ಗೆ ತೆರಳಿ ಕಾರನ್ನು ಬುಕ್ ಮಾಡಬಹುದು ಎಂದು ಹ್ಯುಂಡೈ ಮೋಟಾರ್​ ಹೇಳಿದೆ.

ಎಷ್ಟು ದೊಡ್ಡದಿದೆ ಹೊಸ ಸೆಡಾನ್​?

ಹೊಸ ಹ್ಯುಂಡೈ ವೆರ್ನಾ 1765 ಎಮ್​ಎಮ್​ (mili meter) ಅಗಲವಿದ್ದು, 2670 ಎಮ್​ಎಮ್​ ವೀಲ್​ ಬೇಸ್​ ಹೊಂದಿದೆ. ಕಾರಿನ ಒಟ್ಟಾರೆ ಉದ್ದ 4535 ಎಮ್​ಎಮ್​ ಹಾಗೂ 1, 475 ಎಮ್ಎಮ್​ ಎತ್ತರವಿದೆ. ಹೊಸ ವೆರ್ನಾದಲ್ಲಿ 528 ಲೀಟರ್​ ಬೂಟ್​ ಸ್ಪೇಸ್​ (ಡಿಕ್ಕಿ ಜಾಗ) ನೀಡಲಾಗಿದೆ.

ಬಣ್ಣಗಳು ಯಾವುದು?

ಇಎಕ್ಸ್​, ಎಸ್, ಎಸ್​ಎಕ್ಸ್, ಹಾಗೂ ಎಸ್ಎಕ್​ (ಓ) ಎಂಬ ನಾಲ್ಕು ವೇರಿಯೆಂಟ್​ಗಳಲ್ಲಿ ಕಾರು ಲಭ್ಯವಿದೆ. ಅದೇ ರೀತಿ 7 ಸಿಂಗಲ್​ ಟೋನ್​, ಎರಡು ಡ್ಯುಯಲ್​ ಟೋನ್ ಕಲರ್ ಆಯ್ಕೆ ನೀಡಲಾಗಿದೆ. ಬ್ಲ್ಯಾಕ್​ ಆ್ಯಂಡ್​ ಬೀಗ್​ ಹಾಗೂ ಬ್ಲ್ಯಾಕ್​ ಆ್ಯಂಡ್ ರೆಡ್​ ಎಂಬ ಎರಡು ಬಣ್ಣಗಳ ಇಂಟೀರಿಯರ್​ ಹೊಂದಿದೆ.

ವಿನ್ಯಾಸ ಹೇಗಿದೆ?

ಹ್ಯುಂಡೈ ಕಂಪನಿಯ ಸೆನ್ಸ್ಯುಯಸ್​ ಸ್ಪೋರ್ಟಿ ಲುಕ್​ ಅನ್ನು ವೆರ್ನಾ ಕಾರು ಕೂಡ ಹೊಂದಿದೆ. ಸ್ಪ್ಲಿಟ್​ ಹೆಡ್​ ಲ್ಯಾಂಪ್​ ಸೆಟ್​ಅಪ್​, ಪ್ಯಾರಾಮೆಟ್ರಿಕ್​ ಜ್ಯುಯೆಲ್​ ಗ್ರಿಲ್​, ಫುಲ್​ ವಿಡ್ತ್​ ಎಲ್​ಇಡಿ ಡಿಆರ್​ಎಲ್​ ಸ್ಟ್ರಿಪ್​ ಬಾನೆಟ್ ಹಾಗೂ ಬಂಪರ್​ ಅನ್ನು ಪ್ರತ್ಯೇಕಿಸುತ್ತದೆ. ಸ್ಟ್ರಾಂಗ್​ ಕ್ಯಾರೆಕ್ಟರ್​ ಲೈನ್​ನೊಂದಿಗೆ ಸೈಡ್​ಪ್ರೊಫೈಲ್​ ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ 16 ಇಂಚಿನ ಡೈಮಂಡ್​ ಕಟ್​ ಅಲಾಯ್ ವೀಲ್​ ಹೊಂದಿದೆ.

ಹಿಂಭಾಗದಲ್ಲಿ ಎಚ್ ಆಕೃತಿಯ ಕನೆಕ್ಟೆಡ್​ ಟೈಲ್ ಲ್ಯಾಂಪ್, ಎಲ್​ಇಡಿ ಲೈಟ್ ಬಾರ್​ ಹಿಂಭಾಗವನ್ನು ಪೂರ್ತಿ ಆವರಿಸಿಕೊಂಡಿದೆ. ಅದೇ ರೀತಿ ಡ್ಯುಯಲ್ ಟೋನ್​ ಬಂಪರ್​​ ಕೂಡ ಇದೆ.

ಹೊಸ ವೆರ್ನಾದ ಕ್ಯಾಬಿನ್​ನಲ್ಲಿ ಎರಡು ಟಚ್​ ಸ್ಕ್ರೀನ್ ಸೆಟ್​ಅಪ್​ ಹೊಂದಿದೆ. 10.25 ಇಂಚಿನ ಎಚ್​ಡಿ ಟಚ್​ ಸ್ಕ್ರೀನ್​ ಹಾಗೂ 10.25 ಇಂಚಿನ ಡಿಜಿಟಲ್​ ಇನ್​ಸ್ಟ್ರುಮೆಂಟ್ ಕ್ಲಸ್ಟರ್​ ಹೊಂದಿದೆ. 64 ಆಂಬಿಯೆಂಟ್ ಕಲರ್ ಲೈಟ್, ಪವರ್ ಅಡ್ಜೆಸ್ಟೆಬಲ್​ ಡ್ರೈವಿಂಗ್​ ಸೀಟ್​, ವೆಂಟಿಲೇಟೆಡ್ ಫ್ರಂಟ್ ಸೀಟ್ ಹೊಂದಿದೆ.

ಇದನ್ನೂ ಓದಿ : Oscar 2023 : ನಾಟು ನಾಟು ಹಾಡಿಗೆ ಡಾನ್ಸ್​ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ

10.25 ಇಂಚಿನ ಇನ್ಪೋಟೈನ್​​ಮೆಂಟ್​ ಸಿಸ್ಟಮ್​ನಲ್ಲಿ ಆಂಡ್ರಾಯ್ಡ್​ ಅಟೋ ಹಾಗೂ ಆ್ಯಪಲ್​ ಕಾರ್ ಪ್ಲೇ, ಬ್ಲೂ ಟೂತ್​ ಕನೆಕ್ಟಿವಿಟಿ ಸಿಸ್ಟಮ್​ ಹೊಂದಿದೆ. ಹಿಂದಿ ಹಾಗೂ ಇಂಗ್ಲಿಷ್​ ವಾಯ್ಸ್​ ಕಮಾಂಡ್​ ಮೂಲಕ ಸನ್​ರೂಫ್​, ವೆಂಟಿಲೇಟೆಡ್​ ಸೀಟ್, ಎಸಿ ಆನ್ ಮತ್ತಿತರ ಕೆಲಸಗಳನ್ನು ಮಾಡಲು ಸಾಧ್ಯವಿದೆ.

ಸೇಫ್ಟಿ ಎಷ್ಟಿದೆ?

ಹೊಸ ವೆರ್ನಾ ಡ್ರೈವರ್​ ಅಸಿಸ್ಟನ್ಸ್​ ಸಿಸ್ಟಮ್​ ಹೊಂದಿದೆ. ಆಟೋನೊಮಸ್​ ಎಮರ್ಜೆನ್ಸಿ ಬ್ರೇಕಿಂಗ್​, ಲೇನ್​ ಕೀಪ್​ ಅಸಿಸ್ಟ್​​, ಅಡಾಪ್ಟಿವ್​ ಕ್ರೂಸ್​ ಕಂಟ್ರೋಲ್​, ಸೇಫ್​ ಎಕ್ಸಿಟ್ ವಾರ್ನಿಂಗ್​ ಇತ್ಯಾದಿ ಫೀಚ್​ಗಳನ್ನು ಇದು ಹೊಂದಿದೆ. ಆರು ಏರ್​ ಬ್ಯಾಗ್​, ಎಬಿಎಸ್​ ವಿತ್​ ಇಬಿಡಿ, ಟ್ರ್ಯಾಕ್ಷನ್​ ಕಂಟ್ರೋಲ್​, ಟಿಪಿಎಮ್​ಎಸ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್​ ಸೆನ್ಸರ್​ ಹೊಂದಿದೆ.

ಎಂಜಿನ್​ ಸಾಮರ್ಥ್ಯ?

ಹೊಸ ಹ್ಯುಂಡೈ ಎಂಜಿನ್​ ಬಿಎಸ್​2 ಫೇಸ್​ 2ನ ಮಾನದಂಡಗಳಾದ ಆರ್​ಡಿಇ ಹಾಗೂ ಎ20 ಪೆಟ್ರೋಲ್ ಆಯ್ಕೆಗಳನ್ನು ಹೊಂದಿದೆ. 1.5 ಲೀಟರ್​ನ ಪೆಟ್ರೋಲ್​ ಎಂಜಿನ್​ 115 ಪಿಎಸ್​ ಪವರ್​ ಹಾಗೂ 144 ಎನ್​ಎಮ್​ ಟಾರ್ಕ್​​ ಬಿಡುಗಡೆ ಮಾಡುತ್ತದೆ. 1.5 ಲೀಟರ್​ನ ಟರ್ಬೊ ಪೆಟ್ರೋಲ್​ ಎಂಜಿನ್​ 160 ಪಿಎಸ್ ಪವರ್​ ಹಾಗೂ 253 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್​ನ ಮ್ಯಾನುಯಲ್​ ಗೇರ್​ ಬಾಕ್ಸ್​ ಹಾಗೂ 7 ಸ್ಪೀಡ್​ನ ಡಿಸಿಟಿ ಗೇರ್​ ಬಾಕ್ಸ್​ಗಳನ್ನು ಹೊಸ ವೆರ್ನಾ ಹೊಂದಿದೆ. ಡೀಸೆಲ್​ ಎಂಜಿನ್​ನ ಕಾರುಗಳನ್ನು ಹ್ಯುಂಡೈ ಬಿಡುಗಡೆ ಮಾಡಿಲ್ಲ.

ಮೈಲೇಜ್​ ಎಷ್ಟು?

1.5 ಲೀಟರ್​ನ ಎಮ್​ಪಿಐ ಪೆಟ್ರೋಲ್​ ಎಂಜಿನ್​ 18.60 ಕಿಲೋ ಮೀಟರ್​​ ಮೈಲೇಜ್​ ನೀಡುತ್ತದೆ ಎಂದು ಕಂಪನಿ ಹೇಳಿದೆ. ಐವಿಟಿ ಗೇರ್​ ಬಾಕ್ಸ್ ಹೊಂದಿರುವ ಕಾರುಗಳು 19.60 ಕಿಲೋ ಮೀಟರ್​ ಮೈಲೇಜ್​ ಕೊಡುತ್ತದೆ. ಜಿಡಿಐ ಎಂಜಿನ್​ ಹಾಗೂ ಮ್ಯಾನುಯಲ್​ ಗೇರ್​ ಬಾಕ್ಸ್​ ಹೊಂದಿರು ಕಾರು 20 ಕಿಲೋ ಮೀಟರ್​ ಹಾಗೂ ಡಿಸಿಟಿ ಗೇರ್​ ಬಾಕ್ಸ್​ ಹೊಂದಿರುವ ಕಾರು 20.60 ಕಿಲೋ ಮೀಟರ್​ ಮೈಲೇಜ್​ ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.

Continue Reading

ಆಟೋಮೊಬೈಲ್

Oscar 2023 : ನಾಟು ನಾಟು ಹಾಡಿಗೆ ಡಾನ್ಸ್​ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ

ಮ್ಯೂಸಿಕ್​ಗೆ ತಕ್ಕ ಹಾಗೆ ಕಾರಿನ ಎಲ್ಲ ಲೈಟ್​ಗಳನ್ನು ಫ್ಲ್ಯಾಶ್​ ಮಾಡುವ ಪ್ರೋಗ್ರಾಮ್​ ಮೂಲಕ ಟೆಸ್ಲಾ ಕಾರುಗಳ ಲೈಟ್ ಶೋ ನೀಡಿದೆ.

VISTARANEWS.COM


on

Tesla car gave a light show to the song
Koo

ನ್ಯೂಜೆರ್ಸಿ: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಹಾಡು ನಾಟು ನಾಟು ಹಾಡು, 2023ನೇ ಅವೃತ್ತಿಯ ಆಸ್ಕರ್​ನ (Oscar 2023) ಬೆಸ್ಟ್​ ಒರಿಜಿನಲ್​ ಸಾಂಗ್ ವಿಭಾಗದ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಆರ್​ಆರ್​ಆರ್​ ಸಿನಿಮಾದ ಹಾಗೂ ನಾಟುನಾಟು ಹಾಡಿನ ಖ್ಯಾತಿ ಜಗದಗಲಕ್ಕೆ ಹರಡಿದೆ. ಆ ಹಾಡಿನ ಎನರ್ಜಿ ಹಾಗೂ ಟೆಂಪೊಗೆ ಮೆಚ್ಚಿದ ಮಂದಿ ಮ್ಯೂಸಿಕ್​ ಕೇಳಿದ ತಕ್ಷಣ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್​ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್​ ಡ್ರೈವ್​) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿದೆ

ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್​ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.

ಇದನ್ನೂ ಓದಿ : Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್​ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್​ ಬರೆದಿದ್ದಾರೆ.

ಟೆಸ್ಲಾ ಟಾಯ್​ಬಾಕ್ಸ್​ ಫೀಚರ್​ (Tesla Toybox)

ಟೆಸ್ಲಾ ಕಾರಿನಲ್ಲಿ ಟಾಯ್​ ಬಾಕ್ಸ್​ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್​ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್​ ಮಾಡಿದರೆ ಕಾರಿನ ಹೆಡ್​ಲೈಟ್​, ಟೈಲ್ ಲೈಟ್​, ಇಂಡಿಕೇಟರ್​ಗಳು ಹಾಗೂ ಇಂಟೀರಿಯರ್ ಲೈಟ್​ಗಳು ಮ್ಯೂಸಿಕ್​​ಗೆ ತಕ್ಕ ಹಾಗೆ ಫ್ಲ್ಯಾಶ್​ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.

ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್​ ಪ್ರೋಗ್ರಾಮ್​ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್​ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್​ ಎಕ್ಸ್​, ಮಾಡೆಲ್​ ಎಸ್​ ಹಾಗೂ ಮಾಡೆಲ್​ 3ಯಲ್ಲಿ ಈ ಫಿಚರ್​ ಇದೆ.

Continue Reading

ಆಟೋಮೊಬೈಲ್

Tata Motors : ಕಾರುಗಳ ಎಂಜಿನ್​​ಗಳನ್ನು ಅಪ್​ಗ್ರೇಡ್​ ಮಾಡಿದ ಟಾಟಾ ಮೋಟಾರ್ಸ್​​

ಬಿಎಸ್​6 ಎರಡನೇ ಹಂತದ ಮಾನದಂಡಗಳನ್ನು Tata Motors ಪೂರೈಸಬೇಕಾಗಿರುವ ಕಾರಣ ಕಾರುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

VISTARANEWS.COM


on

Tata Motors has upgraded the engines of the cars
Koo

ಮುಂಬಯಿ: ಏಪ್ರಿಲ್ 1ರ ಬಳಿಕ ಪ್ರಯಾಣಿಕರ ಕಾರು ತಯಾರಿಕಾ ಕಂಪನಿಗಳು ಬಿಎಸ್​6 ಎರಡನೇ ಹಂತದ ಮಾನದಂಡಗಳನ್ನು ಪಾಲಿಸಬೇಕು ಎಂಬ ಕೇಂದ್ರ ಸರಕಾರದ ಸೂಚನೆಯ ಅನ್ವಯ ಟಾಟಾ ಮೋಟಾರ್ಸ್​ (Tata Motors) ತನ್ನೆಲ್ಲ ಕಾರುಗಳ ಎಂಜಿನ್​​ಗಳನ್ನು ಅಪ್​ಗ್ರೇಡ್​ ಮಾಡುತ್ತಿದೆ. ಭಾರತದಲ್ಲಿರುವ ಪ್ರಮುಖ ಕಾರು ತಯಾರಿಕ ಕಂಪನಿಗಳಾ ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಮಹೀಂದ್ರಾ ಈ ಮಾದರಿಯ ಅಪ್​​ಗ್ರೇಡ್​ ಮಾಡುತ್ತಿದೆ. ಅಂತೆಯೇ ಟಾಟಾ ಮೋಟಾರ್ಸ್​ ಕೂಡ ತನ್ನ ಕೆಲಸ ಆರಂಭಿಸಿದೆ. ಇದಕ್ಕಾಗಿ ಹೆಚ್ಚಿನ ಹೂಡಿಕೆ ಅಗತ್ಯವಿರುವ ಕಾರಣ ಏಪ್ರಿಲ್​ 1ರಿಂದ ಟಾಟಾ ಕಾರುಗಳ ಬೆಲೆ ಏರಿಕೆಯಾಗಲಿದೆ.

ಕಾರುಗಳಲ್ಲಿ ರಿಯಲ್​ ಟೈಮ್​ ಡ್ರೈವಿಂಗ್ ಎಮಿಷನ್​ ಪತ್ತೆಗೆ ಸಾಧನವನ್ನು ಅಳವಡಿಸಬೇಕು ಹಾಗೂ ಎಥನಾಲ್​ ಮಿಶ್ರಿತ ಇ20 ಪೆಟ್ರೋಲ್​ನಿಂದ ಚಲಿಸುವ ಎಂಜಿನ್​ಗಳನ್ನು ಸಿದ್ಧಪಡಿಸಬೇಕು ಎಂದು ಬಿಎಸ್​6 ಹೊಸ ಮಾನದಂಡದಲ್ಲಿ ಹೇಳಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಎಲ್ಲ ಕಾರು ಕಂಪನಿಗಳು ಇದನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಟಾಟಾ ಮೋಟಾರ್ಸ್​ ಕೂಡ ಎಂಜಿನ್​ ಉನ್ನತೀಕರಣದ ಕೆಲಸದಲ್ಲಿ ತೊಡಗಿದೆ.

ಟಾಟಾ ಮೋಟಾರ್ಸ್​​ನ ಮ್ಯಾನೇಜಿಂಗ್ ಡೈರೆಕ್ಟರ್​ ಶೈಲೇಶ್​ಚಂದ್ರ ಅವರು ಈ ಕುರಿತು ಮಾತನಾಡಿ, ಕಂಪನಿಯ ಎಲ್ಲ ಕಾರುಗಳ ಎಂಜಿನ್​ಗಳನ್ನು ಬಿಎಸ್​6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ತಯಾರಿಸಲಾಗುತ್ತದೆ. ಅದೇ ರೀತಿ ವಾಹನಗಳ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. ಹೊಸ ತಾಂತ್ರಿಕತೆ ಹಾಗೂ ಫೀಚರ್​ಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ. ಬೆಲೆ ಹೆಚ್ಚಳದ ಕುರಿತು ತಕ್ಷಣವೇ ಹೇಳವುದಕ್ಕೆ ಸಾಧ್ಯವಿಲ್ಲ. ಕಳೆದ ತಿಂಗಳು ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಮಾಡಲಾಗಿದೆ. ಮುಂದೆಯೂ ಸ್ವಲ್ಪ ಮಟ್ಟಿಗೆ ಏರಿಕೆ ಕಾಣಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : 7 Seater Cars : ಭಾರತದಲ್ಲಿ 15 ಲಕ್ಷ ರೂಪಾಯಿ ಒಳಗೆ ದೊರೆಯುವ ಏಳು ಸೀಟ್​ಗಳ​ ಕಾರುಗಳ ಪಟ್ಟಿ ಇಲ್ಲಿದೆ

ವಾಹನಗಳಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಕೇಂದ್ರ ಸರಕಾರ ಪಣ ತೊಟ್ಟಿದೆ. ಜತೆಗೆ ಹೆಚ್ಚುತ್ತಿರುವ ಪೆಟ್ರೋಲಿಯಮ್​ ಉತ್ಪನ್ನಗಳ ಬೇಡಿಕೆಯನ್ನು ನಿಭಾಯಿಸಲು ಪರಿಶ್ರಮಪಡುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಆರ್​ಡಿಇ ತಾಂತ್ರಿಕತೆಯನ್ನು ಬಳಸಲು ಸೂಚಿಸಿದೆ. ಕ್ಯಾಟಲಿಟಿಕ್​ ಕನ್ವರ್ಟರ್​ ಹಾಗೂ ಆಕ್ಸಿಜರ್ ಸೆನ್ಸರ್​ ಮೂಲಕ ವಾಹನಗಳು ಓಡುತ್ತಿರುವಾಗ ಎಷ್ಟು ಪ್ರಮಾಣದ ವಿಷಾನಿಲ ಹೊರಗೆ ಸೂಸುತ್ತಿವೆ ಎಂಬುದನ್ನು ಅರಿಯುವ ತಾಂತ್ರಿಕತೆ ಇದು. ಅದೇ ರೀತಿ ಭಾರತದಲ್ಲಿ ಪೆಟ್ರೋಲ್​ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ ಜೈವಿಕ ಅನಿಲವಾಗಿರುವ ಎಥೆನಾಲ್​ ಅನ್ನು ಶೇಕಡಾ 20ರಷ್ಟು ಸಾಮಾನ್ಯ ಪೆಟ್ರೋಲ್​ಗೆ ಮಿಶ್ರಣ ಮಾಡಿ ಬಳಸುವುದು ಸರಕಾರದ ಯೋಜನೆಯಾಗಿದೆ. ಅದಕ್ಕಾಗಿ ಎಂಜಿನ್​ನಲ್ಲಿ ಸಣ್ಣ ಮಾರ್ಪಾಟು ಮಾಡಲಾಗುತ್ತದೆ. ಹೊಸ ಮಾದರಿಯ ಎಂಜಿನ್​ಗಳಿಗೆ ಎಥೆನಾಲ್​ ಮಿಶ್ರಿತ ಪೆಟ್ರೋಲ್​ ಬಳಸಲು ಸಾಧ್ಯ.

Continue Reading

ಆಟೋಮೊಬೈಲ್

7 Seater Cars : ಭಾರತದಲ್ಲಿ 15 ಲಕ್ಷ ರೂಪಾಯಿ ಒಳಗೆ ದೊರೆಯುವ ಏಳು ಸೀಟ್​ಗಳ​ ಕಾರುಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ ಏಳು ಸೀಟ್​​ಗಳ (7 Seater Car) ಕಾರಿಗೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ಪೈಪೋಟಿಯೂ ಹೆಚ್ಚಾಗಿದೆ.

VISTARANEWS.COM


on

Here is a list of seven seater cars available in India under Rs 15 lakh
Koo

ಮುಂಬಯಿ: ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಇರುವ ದಂಪತಿಯ ಕುಟುಂಬದ ಪ್ರಯಾಣಕ್ಕೆ ಐದು ಸೀಟಿನ ಕಾರುಗಳು ಸಾಕಾಗುವುದಿಲ್ಲ. ಮಕ್ಕಳು ದೊಡ್ಡದಾಗುತ್ತಿದ್ದಂತೆ ಅವರನ್ನು ತೊಡೆಯ ಮೇಲೆ ಕೂರಿಸಿಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ಏಳು ಸೀಟಿನ ಕಾರುಗಳು ಬೇಕಾಗುತ್ತದೆ. ಅದೇ ಕಾರಣಕ್ಕೆ ಭಾರತದಲ್ಲಿ 7 ಸೀಟ್​ ಎಮ್​ಪಿವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜತೆಗೆ ಕಾರು ಕಂಪನಿಗಳು ಕೂಡ ಏಳು ಸೀಟ್​ನ ಕಾರು ಸೆಗ್ಮೆಂಟ್​ಗಳ ಕಡೆಗೆ ಗಮನ ಹರಿಸುತ್ತಿವೆ. ಇದರಿಂದಾಗಿ ಈ ಕಾರಿನ ಸೆಗ್ಮೆಂಟ್​ನಲ್ಲಿ ಪೈಪೋಟಿ ಹೆಚ್ಚಾಗಿದೆ. ಹಾಗಾದರೆ ಭಾರತದ ಮಾರಕಟ್ಟೆಯಲ್ಲಿ ಲಭ್ಯವಿರುವು ಏಳು ಸೀಟಿನಕಾರುಗಳು ಯಾವುದೆಲ್ಲ ಎಂದು ನೋಡೋಣ.

ರಿನೋ ಟ್ರೈಬರ್​ (Renault Triber)

ರಿನೋ ಕಂಪನಿಯ ಟ್ರೈಬರ್ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಏಳು ಸೀಟ್​ನ ಕಾರಾಗಿದೆ. ಈ ಕಾರಿನ ಆರಂಭಿಕ ಬೆಲೆ 6.33 ಲಕ್ಷ ರೂಪಾಯಿಗಳಾಗಿದ್ದು, ಟಾಪ್​ ಎಂಡ್ ಕಾರಿನ ಬೆಲೆ 8.97 ಲಕ್ಷ ರೂಪಾಯಿಗಳು. (ಎಕ್ಸ್​ಶೋರೂಮ್​). ಇದರಲ್ಲಿ 1.0 ಲೀಟರ್​ನ ಪೆಟ್ರೋಲ್ ಎಂಜಿನ್​ ಇದೆ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)

ಇದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಏಳು ಸೀಟಿನ ಕಾರು. ಇದರ ಆರಂಭಿಕ ಬೆಲೆ 8.35 ಲಕ್ಷ ರೂಪಾಯಿ. ಗರಿಷ್ಠ ಬೆಲೆ 12.79 ಲಕ್ಷ ರೂಪಾಯಿ. ಇದರಲ್ಲಿ 1.5 ಲೀಟರ್​ ಸಾಮರ್ಥ್ಯದ ಎಂಜಿನ್​ ಇದ್ದು, ಮ್ಯಾನುಯಲ್​ ಹಾಗೂ ಆಟೋಮ್ಯಾಟಿಕ್​ ಗೇರ್​ಬಾಕ್ಸ್ ಆಯ್ಕೆಯಿದೆ. ಇದರಲ್ಲಿ ಸಿಎನ್​ಜಿ ಕಿಟ್​ ಕೂಡ ಲಭ್ಯವಿದೆ.

ಮಹಿಂದ್ರಾ ಬೊಲೆರೊ ನಿಯೊ (Mahindra Bolero neo)

ಮಹೀಂದ್ರಾ ಬೊಲೆರೊ ಕಡಿಮೆ ಬೆಲೆಗೆ ದೊರೆಯುವ ಎಸ್​ಯುವಿ ಏಳು ಸೀಟಿನ ಕಾರು. ಇದರ ಆರಂಭಿಕ ಬೆಲೆ 9.63 ಲಕ್ಷ ರೂಪಾಯಿ. ಇದರಲ್ಲಿ ಲ್ಯಾಡರ್​ ಫ್ರೇಮ್​ ಹಾಗೂ ಆರ್​ಡಬ್ಲ್ಯುಡಿ ಕಾನ್ಫಿಗರೇಷನ್​ ಇರುತ್ತದೆ. ಇದರಲ್ಲಿ 1.5 ಲೀಟರ್​ನ ಡಿಸೆಲ್​ ಎಂಜಿನ್ ಇದೆ.

ಮಹೀಂದ್ರಾ ಬೊಲೆರೊ (Mahindra Bolero)

ಇದು ಮಹೀಂದ್ರಾ ಕಂಪನಿಯ ಅತಿ ಹೆಚ್ಚು ಮಾರಾಟ ಮಾಡುವ ಎಸ್​ಯುವಿ. ಈ ಕಾರಿನ ಆರಂಭಿಕ ಬೆಲೆ 9.87 ಲಕ್ಷ ರೂಪಾಯಿ. ಇದು 1.5 ಲೀಟರ್​ನ ಡಿಸೆಲ್​ ಎಂಜಿನ್ ಹೊಂದಿದೆ. ಆದರೆ, ಪವರ್​ ವಿಚಾರಕ್ಕೆ ಬಂದಾಗ ನಿಯೋಗಿಂತ ಸ್ವಲ್ಪ ಕಡಿಮೆಯಿದೆ.

ಕಿಯಾ ಕರೆನ್ಸ್​ (Kia Carens)

ಕಿಯಾ ಕಂಪನಿಯ ಕರೆನ್ಸ್​ಗೂ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಬರುತ್ತಿದೆ. ಇದರಲ್ಲಿ 1.5 ಲೀಟರ್​ ಸಾಮರ್ಥ್ಯದ ಟರ್ಬೊ ಎಂಜಿನ್​ ಇದೆ. ಈ ಎಂಪಿವಿ ಕಾರಿನ ಆರಂಭಿಕ ಬೆಲೆ 10.45 ಲಕ್ಷ ರೂಪಾಯಿ.

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್​ (Mahindra Scorpia Classic)

ಮಹೀಂದ್ರಾದ ಜನಪ್ರಿಯ ಕಾರು ಸ್ಕಾರ್ಪಿಯೊ ಕ್ಲಾಸಿಕ್​ನ ಆರಂಭಿಕ ಬೆಲೆ 12.64 ಲಕ್ಷ ರೂಪಾಯಿ. ಎಸ್​ ಹಾಗೂ ಎಸ್​11 ಎಂಬ ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಇದರಲ್ಲಿ 2.2 ಲೀಟರ್​ನ ಡೀಸೆಲ್​ ಎಂಜಿನ್​ ಇದ್ದು 132 ಪಿಎಸ್​ ಪವರ್​ ಹಾಗೂ 300 ಎನ್​ಎಮ್​ ಟಾರ್ಕ್​​ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ : Compact SUV’s | ಎಸ್​ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಈ ಎಲ್ಲ ಕಾರುಗಳು ಬೆಲೆ ಇಳಿಕೆ?

Continue Reading
Advertisement
ಕರ್ನಾಟಕ25 seconds ago

Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ

congress says cm basavraj bommai will not get chance to contest inkarnataka election
ಕರ್ನಾಟಕ12 mins ago

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

Azam peer Khadri
ಕರ್ನಾಟಕ23 mins ago

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಕಿರುತೆರೆ26 mins ago

Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

ಕರ್ನಾಟಕ28 mins ago

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

Tejasvi Surya says Rahul Gandhi is dependent on pocket money given by mother
ಕರ್ನಾಟಕ33 mins ago

BJP Yuva Morcha: ಅಮ್ಮ ನೀಡುವ ಪಾಕೆಟ್ ಮನಿ ಮೇಲೆಯೇ ರಾಹುಲ್ ಗಾಂಧಿ ಜೀವನ: ತೇಜಸ್ವಿ ಸೂರ್ಯ

WPL 2023: RCB ends campaign with defeat
ಕ್ರಿಕೆಟ್34 mins ago

WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

Bike Rally yallapur ugadi
ಉತ್ತರ ಕನ್ನಡ37 mins ago

Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ

Shobha Karandlaje criticizes congress guarantee
ಕರ್ನಾಟಕ38 mins ago

Congress Guarantee:‌ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಜಾರ್ಜ್‌ ಸೊರೊಸ್‌ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ

DC Prabhulinga Kavalikatti karwar
ಉತ್ತರ ಕನ್ನಡ38 mins ago

Karnataka Election 2023: ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಸೂಚನೆ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ14 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ2 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ6 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ7 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!