JEE Advanced Result | ಜೆಇಇ​​ನಲ್ಲಿ 9ನೇ ಶ್ರೇಯಾಂಕ ಪಡೆದ ಮಹಿತ್​​​​ಗೆ ಪುಷ್ಪಾ ಸಿನಿಮಾದ ಡೈಲಾಗ್​ ಸ್ಫೂರ್ತಿ ! - Vistara News

ಶಿಕ್ಷಣ

JEE Advanced Result | ಜೆಇಇ​​ನಲ್ಲಿ 9ನೇ ಶ್ರೇಯಾಂಕ ಪಡೆದ ಮಹಿತ್​​​​ಗೆ ಪುಷ್ಪಾ ಸಿನಿಮಾದ ಡೈಲಾಗ್​ ಸ್ಫೂರ್ತಿ !

ಮಹಿತ್​ ಗಢಿವಾಲಾ ನೀಟ್​ ಪರೀಕ್ಷೆಯನ್ನೂ ಬರೆದು ಅದರಲ್ಲಿ 720 ಅಂಕಕ್ಕೆ 600 ಅಂಕ ಗಳಿಸಿದ್ದರು. ಆದರೆ ತನಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ ಎಂದೂ ಹೇಳಿದ್ದಾರೆ.

VISTARANEWS.COM


on

JEE Advanced
ಮಹಿತ್​ ಗಢಿವಾಲಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಐಐಟಿ ಬಾಂಬೆ ಇಂದು ಜೆಇಇ ಅಡ್ವಾನ್ಸ್ಡ್​​ ಪರೀಕ್ಷೆ ಫಲಿತಾಂಶ (JEE Advanced Result ) ಪ್ರಕಟಿಸಿದ್ದು, ಅದರಲ್ಲಿ ಸೂರತ್​​ನ ಮಹಿತ್​ ಗಢಿವಾಲಾ 9ನೇ ಶ್ರೇಯಾಂಕ ಪಡೆದು ಸಾಧನೆ ಮಾಡಿದ್ದಾರೆ. ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್​​ನಲ್ಲಿ 360ಕ್ಕೆ 285 ಅಂಕ ಗಳಿಸಿದ್ದಾರೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಜೆಇಇ ಅಡ್ವಾನ್ಸ್ಡ್​ ಪರೀಕ್ಷೆ ಕಠಿಣ ಇತ್ತು. ಆದರೆ ನನ್ನಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದು ‘ಪುಷ್ಪಾ’ ಸಿನಿಮಾದ ಸಿಗ್ನೇಚರ್​ ಡೈಲಾಗ್​ ಎನ್ನಿಸಿಕೊಂಡ ‘main jhukega nahi’ (ನಾನು ತಲೆ ಬಾಗುವುದಿಲ್ಲ ಎಂಬ ವಾಕ್ಯ’ ಎಂದು ತಿಳಿಸಿದ್ದಾರೆ.

2021ರ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್​​ನಲ್ಲಿ ಎರಡು ಬೆಳ್ಳಿ ಪದಕ​ ಮತ್ತು 2022ರಲ್ಲಿ ನಡೆದ ಭೌತಶಾಸ್ತ್ರ ಒಲಿಂಪಿಯಾಡ್​​ನಲ್ಲಿ ಕಂಚಿನ ಪದಕ ಗೆದ್ದಿರುವ ಮಹಿತ್,​​​ ನೀಟ್​ ಪರೀಕ್ಷೆಯನ್ನೂ ಬರೆದು ಅದರಲ್ಲಿ 720ಕ್ಕೆ 600 ಅಂಕ ಗಳಿಸಿದ್ದರು. ‘ನನಗೆ ಗುಜರಾತ್​ ಸರ್ಕಾರಿ ಮೆಡಿಕಲ್​ ಕಾಲೇಜಿನಲ್ಲಿ ಸೀಟ್ ಸಿಗುತ್ತಿತ್ತೋ ಏನೋ, ಆದರೆ ನನಗೆ ಕಂಪ್ಯೂಟರ್​ ಸೈನ್ಸ್​ ಬಗ್ಗೆ ಇರುವಷ್ಟು ಆಸಕ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲ. ಹಾಗಾಗಿ ಪ್ರಯತ್ನ ಮಾಡಲಿಲ್ಲ. ಇದೀಗ ಜೆಇಇ ರಿಸಲ್ಟ್ ಬಂದಿದೆ. ಈಗಾಗಲೇ ಯುಎಸ್​ ಮತ್ತು ಕೆನಡಾದ ಕೆಲವು ಯೂನಿವರ್ಸಿಟಿಗಳಿಂದ ಆಫರ್ ಕೂಡ ಬಂದಿದೆ. ಆದರೆ ನಾನು ಅಲ್ಲಿಗೆ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನಸು ನನಸು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಪರೀಕ್ಷೆಯ ಬಗೆಗಿನ ಒತ್ತಡದ ಬಗ್ಗೆ ಮಾತನಾಡಿದ ಮಹಿತ್​​​, ‘ನಾನು ಓದುತ್ತಿದ್ದೆ. ಸಹಜವಾಗಿಯೇ ಒತ್ತಡ ಆಗುತ್ತಿತ್ತು. ಆಗೆಲ್ಲ ನನ್ನ ಆಯ್ಕೆ ಪುಷ್ಪಾ ಸಿನಿಮಾ ನೋಡುವುದೇ ಆಗಿತ್ತು. ಒಟಿಟಿಯಲ್ಲಿ ಅದನ್ನು ನೋಡುತ್ತಿದೆ. ಅಂದರೆ ಓದಿನ ನಂತರ ಊಟಕ್ಕೆ ಬಿಡುವು ಪಡೆದಾಗ ಪುಷ್ಪಾ ಚಲನಚಿತ್ರ ನೋಡುತ್ತಿದ್ದೆ. ಅದರಲ್ಲಿ ನಾಯಕ ಸದಾ ಹೇಳುವ main jhukega nahi ಡೈಲಾಗ್​ ನನಗೆ ಸದಾ ಸ್ಫೂರ್ತಿ ಕೊಡುತ್ತಿತ್ತು. ಪರೀಕ್ಷೆ ಬರೆಯುವಾಗ ಪ್ರಶ್ನೆ ಕಠಿಣವಿದ್ದರೂ ನಾನು ಇದೇ ಡೈಲಾಗ್​ ನೆನಪಿಸಿಕೊಂಡು, ಆತ್ಮ ವಿಶ್ವಾಸದಿಂದ ಬರೆದೆ’ ಎಂದಿದ್ದಾರೆ.

ಇದನ್ನೂ ಓದಿ: JEE Advanced Result 2022 | ಜೆಇಇ ಅಡ್ವಾನ್ಸ್ಡ್​​ ಪರೀಕ್ಷೆ ಫಲಿತಾಂಶ ಪ್ರಕಟ; ಬೆಂಗಳೂರು ಹುಡುಗ ಟಾಪರ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

2nd Puc Exam : ಆನ್‌ಲೈನ್‌ನಲ್ಲೆ ಸಿಗುತ್ತೆ ಪಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

2nd Puc Exam : ದ್ವಿತೀಯ ಪರೀಕ್ಷೆ 2ರ ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿ ಪಡೆಯಲು, ಮರು ಮೌಲ್ಯಮಾಪನ, ಮರು ಎಣಿಕೆಗೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ದಿನಾಂಕಗಳನ್ನು ಪ್ರಕಟಿಸಲಾಗಿದೆ.

VISTARANEWS.COM


on

By

2nd Pux Exam
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಏಪ್ರಿಲ್ 29 ರಿಂದ ಮೇ 16ರವರೆಗೆ ನಡೆದಿದ್ದ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (2nd Puc Exam) ಫಲಿತಾಂಶ ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ 2ರ ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿ ಪಡೆಯಲು, ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಮೇ 21ರಿಂದ 23ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಡ್ಡಾಯವಾಗಿ ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಂತಹವರು ಮೇ 22ರಿಂದ 25ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಯನ್ನು Kseab.karnataka.gov.in ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ ಮಾಡಿಕೊಳ್ಳಲು ಮೇ 22ರಿಂದ 24ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮರು ಮೌಲ್ಯಮಾಪನದ ಶುಲ್ಕದ ಪ್ರತಿ ವಿಷಯಕ್ಕೆ 1,670 ರೂ. ಇದೆ. ಇನ್ನೂ ಯಾವುದೇ ಅಭ್ಯರ್ಥಿಗಳು ಪರೀಕ್ಷೆ 3ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ. ಮರು ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳೇ ಪರೀಕ್ಷೆ 2ರ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತದೆ. ಇನ್ನೂ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶವನ್ನು , ಮಂಡಲಿಯ ವೆಬ್‌ಸೈಟ್‌ Kseab.karnataka.gov.in ಪ್ರಕಟಿಸಲಾಗುತ್ತದೆ. ಅಂಕಗಳ ಮರುಎಣಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಮೊಬೈಲ್‌ನಲ್ಲೇ ನೋಡಿ

ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ; ನೋಂದಣಿಗೂ ಡೇಟ್‌ ಫಿಕ್ಸ್‌

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (2nd PUC Exam) 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್‌ 24ರಿಂದ ಜುಲೈ 5ರವರೆಗೆ ಪರೀಕ್ಷೆಯು ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ


ದಿನಾಂಕ- ವಿಷಯ
ಜೂನ್‌ 24- ಕನ್ನಡ, ಅರೇಬಿಕ್
ಜೂನ್‌ 25- ಇಂಗ್ಲೀಷ್‌
ಜೂನ್‌ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್‌ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್‌ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್‌ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್‌, ಆಟೋ ಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌

ಪರೀಕ್ಷೆ -3ಕ್ಕೆ ನೋಂದಾಯಿಸಿಕೊಳ್ಳಲು ಹೀಗೆ ಮಾಡಿ

2023-24ನೇ ಸಾಲಿನ ಫಲಿತಾಂಶ ಪೂರ್ಣಗೊಂಡಿರದ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಹೊಸಬರು ಮತ್ತು ಖಾಸಗಿಯಾಗಿ ನೋಂದಾವಣೆಯಾದ ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್‌ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದು. ಒಂದು ವೇಳೆ ಮೇ 28ರೊಳಗೆ ಅರ್ಜಿ ಸಲ್ಲಿಸದೇ ಹೋದರೆ ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಕೆಎಸ್‌ಇಎಬಿ ತಂತ್ರಾಂಶದಲ್ಲಿ ಸಲ್ಲಿಸಬೇಕು. ಮೇ 23ರಿಂದ ಮ28ರ ಒಳಗಾಗಿ ಇಂದೀಕರಿಸಬೇಕು. ಕೊನೆ ದಿನವನ್ನು ಮೀರಿದರೆ ದಂಡ ಸಹಿತ ಮೇ 29ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.

2024ರ ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕವನ್ನು ನಿಗಧಿಸಲಾಗಿದೆ. ಒಂದು ವಿಷಯಕ್ಕೆ 140 ರೂ ಹಾಗೂ ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ 3ಕ್ಕೆ ಮೇ 24ರಿಂದ 28ರವರೆಗೆ ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್‌ ಮುಖಾಂತರ ನೋಂದಾಯಿಸಿಕೊಳ್ಳಬಹುದು. ಇನ್ನೂ ಫಲಿತಾಂಶ ತಿರಸ್ಕರಣಾ ಪದ್ಧತಿಯನ್ನು ರದ್ದುಪಡಿಸಲಾಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ 3ರಲ್ಲಿ ಹಾಜರಾಗಬೇಕಾದರೆ ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

2nd PUC Exam : ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ; ನೋಂದಣಿಗೂ ಡೇಟ್‌ ಫಿಕ್ಸ್‌

2nd PUC Exam : ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶದ ಬೆನ್ನಲ್ಲೇ ಪರೀಕ್ಷೆ 3ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್‌ 24ರಿಂದ ಜುಲೈ 5ರವರಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆ 3ಕ್ಕೆ ಮೇ 24ರಿಂದ 28ರವರೆಗೆ ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್‌ ಮುಖಾಂತರ ನೋಂದಾಯಿಸಿಕೊಳ್ಳಬಹುದು.

VISTARANEWS.COM


on

By

2nd Puc Exam
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (2nd PUC Exam) 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್‌ 24ರಿಂದ ಜುಲೈ 5ರವರೆಗೆ ಪರೀಕ್ಷೆಯು ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ


ದಿನಾಂಕ- ವಿಷಯ
ಜೂನ್‌ 24- ಕನ್ನಡ, ಅರೇಬಿಕ್
ಜೂನ್‌ 25- ಇಂಗ್ಲೀಷ್‌
ಜೂನ್‌ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್‌ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್‌ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್‌ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್‌, ಆಟೋ ಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಮೊಬೈಲ್‌ನಲ್ಲೇ ನೋಡಿ

ಪರೀಕ್ಷೆ -3ಕ್ಕೆ ನೋಂದಾಯಿಸಿಕೊಳ್ಳಲು ಹೀಗೆ ಮಾಡಿ

2023-24ನೇ ಸಾಲಿನ ಫಲಿತಾಂಶ ಪೂರ್ಣಗೊಂಡಿರದ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಹೊಸಬರು ಮತ್ತು ಖಾಸಗಿಯಾಗಿ ನೋಂದಾವಣೆಯಾದ ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್‌ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದು. ಒಂದು ವೇಳೆ ಮೇ 28ರೊಳಗೆ ಅರ್ಜಿ ಸಲ್ಲಿಸದೇ ಹೋದರೆ ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಕೆಎಸ್‌ಇಎಬಿ ತಂತ್ರಾಂಶದಲ್ಲಿ ಸಲ್ಲಿಸಬೇಕು. ಮೇ 23ರಿಂದ ಮ28ರ ಒಳಗಾಗಿ ಇಂದೀಕರಿಸಬೇಕು. ಕೊನೆ ದಿನವನ್ನು ಮೀರಿದರೆ ದಂಡ ಸಹಿತ ಮೇ 29ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.

2024ರ ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕವನ್ನು ನಿಗಧಿಸಲಾಗಿದೆ. ಒಂದು ವಿಷಯಕ್ಕೆ 140 ರೂ ಹಾಗೂ ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ 3ಕ್ಕೆ ಮೇ 24ರಿಂದ 28ರವರೆಗೆ ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್‌ ಮುಖಾಂತರ ನೋಂದಾಯಿಸಿಕೊಳ್ಳಬಹುದು. ಇನ್ನೂ ಫಲಿತಾಂಶ ತಿರಸ್ಕರಣಾ ಪದ್ಧತಿಯನ್ನು ರದ್ದುಪಡಿಸಲಾಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ 3ರಲ್ಲಿ ಹಾಜರಾಗಬೇಕಾದರೆ ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

India Skills: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೋಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

VISTARANEWS.COM


on

India Skills National Competition 2024 Grand Finale 58 Winners to Represent India at World Skills
Koo

ಬೆಂಗಳೂರು: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ (India Skills National Competition 2024) ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಾಲ್ಕು ದಿನಗಳ ಕಾಲ ನಡೆದ ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧೆಯಲ್ಲಿ ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೊಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಬಾಲಕಿಯರದೇ ಮೇಲುಗೈ

ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನದಲ್ಲಿವೆ. 17 ಚಿನ್ನ, 13 ಬೆಳ್ಳಿ, 9 ಕಂಚಿನ ಪದಕಗಳನ್ನು ಮತ್ತು 12 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿ ಪಡೆಯುವುದರೊಂದಿಗೆ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದೆ. ಕರ್ನಾಟಕ ರಾಜ್ಯವು 13 ಚಿನ್ನ, 12 ಬೆಳ್ಳಿ, 3 ಕಂಚಿನ ಪದಕ ಮತ್ತು 19 ಶ್ರೇಷ್ಠತಾ ಪ್ರಶಸ್ತಿ, ತಮಿಳುನಾಡು 6 ಚಿನ್ನ, 8 ಬೆಳ್ಳಿ, 9 ಕಂಚು ಮತ್ತು 17 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಹಾರಾಷ್ಟ್ರ 3 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕ ಮತ್ತು 14 ಶ್ರೇಷ್ಠತಾ ಪ್ರಶಸ್ತಿ, ಉತ್ತರ ಪ್ರದೇಶ ರಾಜ್ಯವು 3 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳು ಮತ್ತು 16 ಶ್ರೇಷ್ಠತಾ ಪ್ರಶಸ್ತಿ, ದೆಹಲಿ 5 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕಗಳು ಮತ್ತು 10 ಶ್ರೇಷ್ಠತಾ ಪ್ರಶಸ್ತಿ, ರಾಜಸ್ಥಾನ ರಾಜ್ಯವು 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕಗಳು, ಮತ್ತು 9 ಶ್ರೇಷ್ಠತಾ ಪ್ರಶಸ್ತಿ, ಹರಿಯಾಣ 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳು ಮತ್ತು 13 ಶ್ರೇಷ್ಠತಾ ಪ್ರಶಸ್ತಿ, ಮಧ್ಯಪ್ರದೇಶ 1 ಚಿನ್ನ, 2 ಬೆಳ್ಳಿ, 4 ಕಂಚು, ಮತ್ತು 11 ಶ್ರೇಷ್ಠತಾ ಪ್ರಶಸ್ತಿ, ಬಿಹಾರ ರಾಜ್ಯವು 3 ಚಿನ್ನ, 1 ಬೆಳ್ಳಿ, 3 ಕಂಚು ಮತ್ತು 6 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

47 ಕೌಶಲ್ಯ ಸ್ಪರ್ಧೆಗಳನ್ನು ಆನ್‌ಸೈಟ್‌ನಲ್ಲಿ ನಡೆಸಿದರೆ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಫ್‌ಸೈಟ್‌ನಲ್ಲಿ 14 ಕೌಶಲ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ 86 ಸ್ಪರ್ಧಿಗಳೊಂದಿಗೆ ತಮಿಳುನಾಡು ಗರಿಷ್ಠ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ನಂತರ ಒಡಿಶಾ (64), ಕರ್ನಾಟಕ (61), ಪಂಜಾಬ್ (53), ಮತ್ತು ಹರಿಯಾಣದಿಂದ 47 ಸ್ಪರ್ಧಿಗಳು ಭಾಗವಹಿಸಿದ್ದರು.

ಈ ವೇಳೆ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮಾತನಾಡಿ, ಸ್ಪರ್ಧೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯು ನಿಖರವಾಗಿತ್ತು ಮಾತ್ರವಲ್ಲದೆ ಭಾಗವಹಿಸುವವರು, ಮಾರ್ಗದರ್ಶಕರು, ಉದ್ಯಮದ ವೃತ್ತಿಪರರು, ಸಾರ್ವಜನಿಕರಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಖ್ಯಾತ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ರಮೇಶ್ ಸಿಪ್ಪಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ. ನಿರ್ಮಲಜೀತ್ ಸಿಂಗ್ ಕಲ್ಸಿ ವೇದ್ ಮಣಿ ತಿವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಬೆಂಗಳೂರು

2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಮೊಬೈಲ್‌ನಲ್ಲೇ ನೋಡಿ

2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. 52,505 ವಿದ್ಯಾರ್ಥಿಗಳು ಪಾಸಾಗಿದ್ದು, 35.25ರಷ್ಟು ಶೇಕಡವಾರು ಫಲಿತಾಂಶ ಬಂದಿದೆ.

VISTARANEWS.COM


on

By

2nd Puc Result
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಮೇ 21ರ ಮಧ್ಯಾಹ್ನ 3ಗಂಟೆಗೆ ಪ್ರಕಟಗೊಂಡಿದೆ. ರಾಜ್ಯಾದ್ಯಂತ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 29 ರಿಂದ ಮೇ 16ರವರೆಗೆ 2ನೇ ಪರೀಕ್ಷೆ ನಡೆದಿತ್ತು. 7,875 ಮೌಲ್ಯಮಾಪಕರಿಂದ 28 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿತ್ತು. ಪರೀಕ್ಷೆ 2ಕ್ಕೆ 1,49,824 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, 52,505 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 35.25ರಷ್ಟು ಶೇಕಡವಾರು ಫಲಿತಾಂಶ ಬಂದಿದೆ. 26,496 ಬಾಲಕರು, 26,009 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್‌ karresults.nic.in ನಲ್ಲಿ ನೋಡಬಹುದಾಗಿದೆ.

ಇನ್ನೂ ಪರೀಕ್ಷೆ 1 ಮತ್ತು ಪರೀಕ್ಷೆ 2ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ರೋಲ್ ನಂಬರ್ ಆಧರಿಸಿ ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು..

ಹಂತಗಳು ಏನು?

-karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್‌ಗೆ ಭೇಟಿ ನೀಡಿ.
-ಮುಖಪುಟದಲ್ಲಿ ನೀಡಲಾದ ಪಿಯುಸಿ 2 ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ತೆರೆಯಿರಿ.
-ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಒದಗಿಸಿ; ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ)
-ನಿಮ್ಮ 2ನೇ ಪಿಯುಸಿ ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪರಿಶೀಲಿಸಿ.

ಇದನ್ನೂ ಓದಿ: CET Result: ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ; ಮೇ 30 ಅಥವಾ 31ಕ್ಕೆ ಪ್ರಕಟ?

ಸಂಯೋಜನೆವಾರು ಫಲಿತಾಂಶ

ಸಂಯೋಜನೆಹಾಜರಾದವರುಉತ್ತೀರ್ಣರಾದವರುಶೇಕಡವಾರು
ಕಲಾ52,12011,58922.24
ವಾಣಿಜ್ಯ39,4748,70922.06
ವಿಜ್ಞಾನ57,34832,20756.16
ಒಟ್ಟು1,48,94252,50535.25

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರಲ್ಲಿ ಕೆಲವರು ಅನುತ್ತೀರ್ಣರಾಗಿದ್ದರೆ, ಮತ್ತೆ ಕೆಲವರಿಗೆ ಅಂಕ ಕಡಿಮೆ ಬಂದಿದೆ ಎಂಬ ಅಸಮಾಧಾನ ಇದ್ದವರಿಗಾಗಿ ಈ ಅವಕಾಶ ಕಲ್ಪಿಸಲಾಗಿತ್ತು. 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಫಲಿತಾಂಶ ಉತ್ತಮಪಡಿಸಿಕೊಳ್ಳಲು 32,940 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಮೇ 21ರಿಂದ 23ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಡ್ಡಾಯವಾಗಿ ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಮೇ 22ರಿಂದ 25ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530ರೂ .ಶುಲ್ಕ ನಿಗದಿ ಮಾಡಲಾಗಿದೆ. ಮರುಮೌಲ್ಯಮಾಪನದ ಶುಲ್ಕದ ಪ್ರತಿ ವಿಷಯಕ್ಕೆ 1,670 ರೂ. ಇದೆ. ಇನ್ನೂ ಯಾವುದೇ ಅಭ್ಯರ್ಥಿಗಳು ಪರೀಕ್ಷೆ 3ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Porsche Crash
ದೇಶ2 mins ago

Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಅಪಘಾತ ಮಾಡಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

IPL 2024
ಕ್ರೀಡೆ10 mins ago

IPL 2024 : ಕೊಹ್ಲಿಯನ್ನೂ ಟೀಕಿಸುವುದರ ನಡುವೆಯೂ ಆರ್​​ಸಿಬಿ ಕಪ್​ ಗೆಲ್ಲುತ್ತದೆ ಎಂದ ಗವಾಸ್ಕರ್​

Road Accident
ಶಿವಮೊಗ್ಗ19 mins ago

Road Accident: ಮರಕ್ಕೆ ಬಸ್‌ ಡಿಕ್ಕಿಯಾಗಿ ಹಲವರಿಗೆ ಗಾಯ; ಆಟೋ ಪಲ್ಟಿಯಾಗಿ ಚಾಲಕ ಸಾವು

Dwayne Bravo
ಪ್ರಮುಖ ಸುದ್ದಿ36 mins ago

Dwayne Bravo : ಅಫಘಾನಿಸ್ತಾನ ತಂಡದಲ್ಲಿ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಡ್ವೇನ್ ಬ್ರಾವೊ

Narendra Modi
ಪ್ರಮುಖ ಸುದ್ದಿ48 mins ago

Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Self Harming
ಕರ್ನಾಟಕ1 hour ago

Self Harming: ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಜೋಡಿ; ಅನೈತಿಕ ಸಂಬಂಧ ಶಂಕೆ

HD Kumaraswamy attack on DK Shivakumar and he gives reason for Devaraje Gowda fears for his life in jail
ರಾಜಕೀಯ2 hours ago

HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

Wedding Fashion
ಫ್ಯಾಷನ್2 hours ago

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

Sambit Patra
ದೇಶ2 hours ago

‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

2024 Bajaj Pulsar F250
ಪ್ರಮುಖ ಸುದ್ದಿ2 hours ago

2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು8 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌