SIIMA 2022 | ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್‌ ಭಾಜನ: ಜನಪ್ರಿಯ ಹಿಂದಿ ತಾರೆ ಪಟ್ಟ ಇವರಿಗೇ! - Vistara News

ಟಾಲಿವುಡ್

SIIMA 2022 | ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್‌ ಭಾಜನ: ಜನಪ್ರಿಯ ಹಿಂದಿ ತಾರೆ ಪಟ್ಟ ಇವರಿಗೇ!

ಸೈಮಾ 2022 (SIIMA 2022) ಅವಾರ್ಡ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್‌ ಭಾಜನರಾಗಿದ್ದಾರೆ. ತೆಲುಗು ಮತ್ತು ಕನ್ನಡ ಚಿತ್ರರಂಗದ ಪ್ರಶಸ್ತಿಗಳು ಈಗಾಗಲೇ ಪ್ರಕಟಗೊಂಡಿವೆ.

VISTARANEWS.COM


on

SIIMA 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಸೌಂತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ (ಸೈಮಾ 2022)(SIIMA 2022) ಇದೇ ಮೊದಲ ಬಾರಿ ಸೆ.10 ಹಾಗೂ ಸೆ.11ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ನಡೆಯುತ್ತಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಲವರಿಗೆ ಹಲವು ಅವಾರ್ಡ್‌ಗಳು ಅರಸಿ ಬಂದಿದೆ.

ಶನಿವಾರದಂದು ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ, ರಾಕಿಂಗ್‌ ಸ್ಟಾರ್‌ ಯಶ್ ಮುಂತಾದ ತಾರೆಯರು ಭಾಗಿಯಾಗಿದ್ದರು. ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಪ್ರಶಸ್ತಿಗಳು ಶನಿವಾರ ರಾತ್ರಿ ಪ್ರಕಟಗೊಂಡಿದ್ದು, ಭಾನುವಾರ (ಸೆ.11) ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಪ್ರಶಸ್ತಿಗಳು ಪ್ರಕಟಗೊಳ್ಳುತ್ತಿವೆ.

ಸೈಮಾ 2012ರಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ 10ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಪ್ರಶಸ್ತಿ ಅಡಿಯಲ್ಲಿ ಬರುತ್ತವೆ. ಪ್ರತಿ ಭಾಷೆಯಲ್ಲಿ ಸುಮಾರು 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ | Pushpa 2: The Rule | ಅಲ್ಲುಅರ್ಜುನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೆಟ್ಟೇರಲು ಸಜ್ಜಾದ ಪುಷ್ಪರಾಜ್‌!

ಈ ಬಾರಿ ಅಲ್ಲು ಅರ್ಜುನ್‌ ನಟನೆಯ ಪುಷ್ಪ: ದಿ ರೈಸ್‌ ಸಿನಿಮಾ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಸಿನಿಮಾಗೆ ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಪ್ರಶಸ್ತಿ ಸಂದರೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿಯೂ ಲಭ್ಯವಾಗಿದೆ. ಹಾಗೇ ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌ ಅವರಿಗೆ ನೀಡಲಾಗಿದೆ. ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಕೂಡ ‘ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಿಂದಿ ತಾರೆ’ ಆಗಿ ಹೊರಹೊಮ್ಮಿದ್ದಾರೆ.

ತೆಲುಗು ಸಿನಿಮಾ ಪ್ರಶಸ್ತಿಗಳ ಸುರಿಮಳೆ!

  • ಅತ್ಯುತ್ತಮ ಚಿತ್ರ: ಪುಷ್ಪ: ದಿ ರೈಸ್
  • ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್)
  • ಅತ್ಯುತ್ತಮ ನಟ ಕ್ರಿಟಿಕ್ಸ್‌, ಲೀಡಿಂಗ್‌ ರೋಲ್‌: ನವೀನ್ ಪೋಲಿಶೆಟ್ಟಿ
  • ಅತ್ಯುತ್ತಮ ನಟಿ: ಪೂಜಾ ಹೆಗ್ಡೆ (ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾ)
  • ಅತ್ಯುತ್ತಮ ನಿರ್ದೇಶಕ: ಸುಕುಮಾರ್‌ (ಪುಷ್ಪ: ದಿ ರೈಸ್ )
  • ಅತ್ಯುತ್ತಮ ಛಾಯಾಗ್ರಹಣ: ರಾಮಪ್ರಸಾದ್‌ (ಅಖಂಡ)
  • ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿಶ್ರೀ ಪ್ರಸಾದ್‌ (ಪುಷ್ಪ: ದಿ ರೈಸ್)
  • ಅತ್ಯುತ್ತಮ ಗೀತ ರಚನೆಕಾರ: ಚಂದ್ರಬೋಸ್‌ (ಪುಷ್ಪ: ದಿ ರೈಸ್ , ಶ್ರೀ ವಲ್ಲಿ ಹಾಡಿಗಾಗಿ)
  • ಯೂತ್‌ ಐಕಾನ್‌ ಪ್ರಶಸ್ತಿಗೆ ಪೂಜಾ ಹೆಗ್ಡೆ ಹಾಗೂ ವಿಜಯ್‌ ದೇವರಕೊಂಡ ಭಾಜನರಾಗಿದ್ದಾರೆ.

ಇದನ್ನೂ ಓದಿ | Rocking Star Yash | ರಾಕಿ ಬಾಯ್‌ ಯಶ್‌ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಟಾಲಿವುಡ್

Posani Krishna Murali: ಟಾಲಿವುಡ್‌ನಲ್ಲಿ ಪೋಸಾನಿ ಕೃಷ್ಣ ಮುರಳಿ ವೃತ್ತಿಜೀವನ ಅಂತ್ಯ?

Posani Krishna Murali: ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಜತೆ ಪೋಸಾನಿ ನಟಿಸಿದ್ದರೂ ಮೆಗಾ ಸಹೋದರರನ್ನು ಗೌರವಿಸಲೇ ಇಲ್ಲ. ಇತ್ತೀಚಿನವರೆಗೂ, ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ಪೋಸಾನಿ ಅವರು ಪವನ್ ಕಲ್ಯಾಣ್ ಅವರನ್ನು ಹೆಚ್ಚು ಟೀಕಿಸುತ್ತಲೇ ಇದ್ದರು. ಜಗನ್ ಅವರು ಪೋಸಾನಿನ ನಂಬಿ ಆಂಧ್ರಪ್ರದೇಶ ಫಿಲ್ಮ್​ ಡೆವಲಪ್​ಮೆಂಟ್​ನಲ್ಲಿ ಪ್ರಮುಖ ಪಾತ್ರ ನೀಡಿದರು. ಆದರೆ, ಪೋಸಾನಿ ಅವರ ಗಮನ ಅಲ್ಲಿರಲೇ ಇಲ್ಲ. ಈಗ ಟಿಡಿಪಿ ಮೈತ್ರಿ ಆಂಧ್ರ ಪ್ರದೇಶದಲ್ಲಿ ಗೆಲುವು ಕಂಡಿದೆ. ಹೀಗಾಗಿ ಈಗ ಪೋಸಾನಿ ಕೃಷ್ಣ ಮುರಳಿ ಅವರ ವೃತ್ತಿಜೀವನ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Posani Krishna Murali End of Career In Tollywood
Koo

ಬೆಂಗಳೂರು: ಪೋಸಾನಿ ಕೃಷ್ಣ ಮುರಳಿ (Posani Krishna Murali) ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಾಸ್ಯ ನಟನಾಗಿ, ವಿಲನ್ ಆಗಿ ಗಮನ ಸೆಳೆದಿದ್ದರು. ಚಲನಚಿತ್ರ ನಿರ್ಮಾಪಕರೂ ಆಗಿದ್ದು, ಕೆಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ಇದೇ ವೇಳೆ ಪೋಸಾನಿ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕೆಟ್ಟ ಹೆಸರು ಬಂತು.  ಆರಂಭದಲ್ಲಿ ʻಪ್ರಜಾರಾಜ್ಯಂʼ ಪಕ್ಷ ಸೇರಿ ಚುನಾವಣೆಯಲ್ಲಿ ಸೋತಿದ್ದರು. ನಂತರ ಅವರು ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್​ಆರ್​ಸಿಪಿ ಸೇರಿದರು. ಈಗ ನಾರಾ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅಧಿಕಾರಕ್ಕೆ ಬಂದಿದ್ದು ಪೋಸಾನಿ ಕೃಷ್ಣ ವೃತ್ತಿ ಜೀವನ ಕೊನೆ ಆಗಲಿದೆ ಎನ್ನಲಾಗುತ್ತಿದೆ.

ಪೋಸಾನಿ ವೈಎಸ್‌ಆರ್‌ಸಿಪಿಗೆ ಕಾಲಿಟ್ಟಾಗಿನಿಂದ ಕೆಟ್ಟ ಹೆಸರು ಗಳಿಸಿದ್ದರು. ನಾರಾ ಚಂದ್ರ ಬಾಬು ನಾಯ್ಡು ಅವರನ್ನು ಪೋಸಾನಿ ಟೀಕಿಸಿದರು ಆದರೆ, ಕಾಲಕ್ರಮೇಣ ಅವಕಾಶ ಸಿಕ್ಕಾಗಲೆಲ್ಲ ಮೆಗಾಸ್ಟಾರ್ ಚಿರಂಜೀವಿ ಅವರು ಟೀಕಿಸಿದರು. ಇದಾದ ಬಳಿಕ ಪೋಸಾನಿ ಕೃಷ್ಣ ಅವರಿಗೆ ಸಿನಿಮಾ ರಂಗದಲ್ಲಿ ಆಫರ್​ಗಳೇ ಇಲ್ಲದಂತೆ ಆಯಿತು. ಆ ಬಳಿಕ ಪೋಸಾನಿ ಕೃಷ್ಣ ಅವರು ಪವನ್ ಕಲ್ಯಾಣ್​ನ ಟೀಕಿಸಲು ಆರಂಭಿಸಿದರು. ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದರು.

ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಜತೆ ಪೋಸಾನಿ ನಟಿಸಿದ್ದರೂ ಮೆಗಾ ಸಹೋದರರನ್ನು ಗೌರವಿಸಲೇ ಇಲ್ಲ. ಇತ್ತೀಚಿನವರೆಗೂ, ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ಪೋಸಾನಿ ಅವರು ಪವನ್ ಕಲ್ಯಾಣ್ ಅವರನ್ನು ಹೆಚ್ಚು ಟೀಕಿಸುತ್ತಲೇ ಇದ್ದರು. ಜಗನ್ ಅವರು ಪೋಸಾನಿನ ನಂಬಿ ಆಂಧ್ರಪ್ರದೇಶ ಫಿಲ್ಮ್​ ಡೆವಲಪ್​ಮೆಂಟ್​ನಲ್ಲಿ ಪ್ರಮುಖ ಪಾತ್ರ ನೀಡಿದರು. ಆದರೆ, ಪೋಸಾನಿ ಅವರ ಗಮನ ಅಲ್ಲಿರಲೇ ಇಲ್ಲ. ಈಗ ಟಿಡಿಪಿ ಮೈತ್ರಿ ಆಂಧ್ರ ಪ್ರದೇಶದಲ್ಲಿ ಗೆಲುವು ಕಂಡಿದೆ. ಹೀಗಾಗಿ ಈಗ ಪೋಸಾನಿ ಕೃಷ್ಣ ಮುರಳಿ ಅವರ ವೃತ್ತಿಜೀವನ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು (N Chandrababu Naidu) ನೇತೃತ್ವದ ಟಿಡಿಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ನೇತೃತ್ವದ ಜೆಡಿಯು ಈಗಾಗಲೇ ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಎನ್‌ಡಿಎ (NDA) ಬಣದ ಅಡಿಯಲ್ಲಿ ಸ್ಪರ್ಧಿಸಿದ್ದ ಟಿಡಿಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಆಡಳಿತ ವಿರೋಧಿ ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ (AP Election Results 2024).

2019ರ ಚಿತ್ರಣ

2019ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್‌ ಕಲ್ಯಾಣ್‌ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಮುಖಭಂಗವಾಗಿದೆ.

Continue Reading

ಟಾಲಿವುಡ್

Varalaxmi Sarathkumar: ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Varalaxmi Sarathkumar: ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

VISTARANEWS.COM


on

Varalaxmi Sarathkumar invites Rajinikanth for her wedding
Koo

ಬೆಂಗಳೂರು: ತಮಿಳು-ತೆಲುಗು ನಟಿ ವರಲಕ್ಷ್ಮಿ ಶರತ್‌ಕುಮಾರ್ (aralaxmi Sarathkumar) ಅವರು ತಮ್ಮ ಕುಟುಂಬದೊಂದಿಗೆ ರಜನಿಕಾಂತ್, ಹಾಗೂ ಅವರ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರನ್ನು ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಮದುವೆಗೆ ಆಹ್ವಾನಿಸಿದರು. ವರಲಕ್ಷ್ಮಿ ಶರತ್‌ಕುಮಾರ್ ಜತೆ ತಂದೆ ಶರತ್‌ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜತೆಗೆ ಇತ್ತು.

ಭೇಟಿಯ ಫೋಟೋಗಳನ್ನು ಹಂಚಿಕೊಂಡಿರುವ ವರಲಕ್ಷ್ಮಿ, “ನಮ್ಮ ತಲೈವರ್ ರಜಿನಿಕಾಂತ್ ಸರ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮತ್ತು ಲತಾ ಆಂಟಿ ಅವರನ್ನು ಮದುವೆ ಆಹ್ವಾನಿಸಿದೆ. ಧನ್ಯವಾದಗಳು ಸರ್ʼʼಎಂದು ಬರೆದುಕೊಂಡಿದ್ದಾರೆ.

ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಇದನ್ನೂ ಓದಿ: Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ನಟ ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದರು.

aನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಪುಷ್ಪ 2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಅಜ್ಜಿ; ವಾವ್ಹ್‌ ಕ್ಯೂಟ್ ಎಂದ ನೆಟ್ಟಿಗರು

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಮುಂಬರುವ ಪುಷ್ಪ ೨ ಚಿತ್ರದ ಸೊಸಕಿ ಹಾಡಿಗೆ ನಗುಮೊಗದಿಂದ ಅಜ್ಜಿಯೊಬ್ಬರು ಹೆಜ್ಜೆ ಹಾಕಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಸಾಕಷ್ಟು ಮಂದಿ ಅಜ್ಜಿಯ ನೃತ್ಯವನ್ನು ನೋಡಿ ವಾವ್ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

VISTARANEWS.COM


on

By

Viral Video
Koo

ನಗುಮೊಗದ ಅಜ್ಜಿಯೊಬ್ಬರು (grandma) ಮುಂಬರುವ ಪುಷ್ಪ 2 (Pushpa 2) ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣವಾದ (social media) ಇನ್ ಸ್ಟಾಗ್ರಾಮ್ ನಲ್ಲಿ (instagram) ವೈರಲ್ (Viral Video) ಆಗಿದ್ದು ಅಜ್ಜಿಗೆ ಪ್ರಶಂಸೆಯ ಹೊಳೆಯೇ ಹರಿದು ಬರುತ್ತಿದೆ.

ಪುಷ್ಪ: ದಿ ರೂಲ್‌ನ ಇತ್ತೀಚಿನ ಸಂಗೀತ ಟ್ರ್ಯಾಕ್ ಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮಾಡಿರುವ ರೋಮ್ಯಾಂಟಿಕ್ ಡ್ಯಾನ್ಸ್ ಮೂವ್‌ಗಳನ್ನು ಅಜ್ಜಿಯೊಬ್ಬರು ಮಾಡಿ ಆನಂದಿಸುತ್ತಿರುವ ವಿಡಿಯೋ ಇದಾಗಿದೆ.
ವೈರಲ್ ಡ್ಯಾನ್ಸ್ ರೀಲ್‌ನಲ್ಲಿ ಪುಷ್ಪಾ 2 ರ ‘ಸೂಸೆಕಿ’ ಹಾಡನ್ನು ಅಜ್ಜಿ ಆನಂದಿಸುತ್ತಾ ಮಾಡಿದ್ದಾರೆ. ಅವರ ‘ಮುದ್ದಾದ’ ಪ್ರದರ್ಶನವನ್ನು ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

ಅನೇಕ ಇನ್ ಸ್ಟಾ ಬಳಕೆದಾರರು ಡ್ಯಾನ್ಸ್ ರೀಲ್‌ಗೆ ಉತ್ತರಿಸಿದ್ದು, ಅದನ್ನು “ಕ್ಯೂಟ್” ಎಂದು ಕರೆದಿದ್ದಾರೆ. ಅಜ್ಜಿಯ ಅಭಿನಯದ ಬಗ್ಗೆ ಅನೇಕರು ಸಂತೋಷ ವ್ಯಕ್ತಪಡಿಸಿದ್ದಾರೆ. “ಸೂಪರ್ ಅದ್ಬುತ… ಪಾಟಿ’ (ಪಾಟಿ ಎಂದರೆ ಬೆಂಕಿ) ಎಂದು ನೆಟಿಜನ್‌ಗಳು ಆಕೆ ಮತ್ತು ಆಕೆಯ ನೃತ್ಯದ ಭಂಗಿಯನ್ನು ಶ್ಲಾಘಿಸಿದ್ದಾರೆ.

ಅಜ್ಜಿಯು ರಶ್ಮಿಕಾ ಅವರ ನೃತ್ಯದ ಸರಳವಾದ ಹೆಜ್ಜೆಗಳನ್ನು ಹಾಕಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಕೆಮರಾದಲ್ಲಿ ಅವರು ಕೆಲವು ಶಾಸ್ತ್ರೀಯ ನೃತ್ಯ ಭಂಗಿಗಳನ್ನು ಪ್ರದರ್ಶಿಸಲು ಸೀರೆಯನ್ನು ಧರಿಸಿದ್ದಾರೆ.

ಅಜ್ಜಿ ತನ್ನ ಮುದ್ದಾದ ನಗುವಿನ ಮೂಲಕ ವಿಡಿಯೋವನ್ನು ಪ್ರಾರಂಭಿಸಿದ್ದಾರೆ. ನಿಧಾನವಾಗಿ ತಲೆಯಾಡಿಸುತ್ತಾ, ತಮ್ಮ ಬೆರಳುಗಳ ಮೂಲಕ ಉಂಗುರದಂತಹ ಸನ್ನೆಯನ್ನು ಮಾಡಿದ್ದಾರೆ. ಕಣ್ಣಿನ ದೃಷ್ಟಿಯನ್ನು ಅತ್ತಿತ್ತ ಹಾರಿಸುತ್ತ ಹಾಡಿಗೆ ತಕ್ಕನಾಗಿ ತಮ್ಮ ಹೆಜ್ಜೆಯನ್ನು ಹಾಕಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: Viral Video: ಹೃದಯ ಸ್ತಬ್ಧಗೊಳಿಸುವ ಈ 3ಡಿ ದೃಶ್ಯ ನೋಡಿ! ಇನ್ನಾದರು ಸುರಕ್ಷಿತವಾಗಿ ವಾಹನ ಚಲಾಯಿಸಿ

ಮುಂದಿನದು ಚಿತ್ರದ ಅತ್ಯಂತ ನಿರೀಕ್ಷಿತ ಭಂಗಿಯಾಗಿದೆ. ಅದು ಇಲ್ಲದೆ ಪ್ರದರ್ಶನವು ಅಪೂರ್ಣವಾಗಿ ಉಳಿಯುತ್ತದೆ. ಅಜ್ಜಿಗೆ ಇದರಲ್ಲಿ ಮೊಮ್ಮಗ ಅಕ್ಷಯ್ ಪಾರ್ಥ ಸಾಥಿಯಾಗಿದ್ದಾರೆ.

ಸೂಸೆಕಿ ಮೂಲತಃ ತೆಲುಗು ಹಾಡು. ಮುಂಬರುವ ಚಿತ್ರ ಪುಷ್ಪ: ದಿ ರೂಲ್‌ನಲ್ಲಿ ಗಣೇಶ್ ಆಚಾರ್ಯ ಅವರ ನೃತ್ಯ ಸಂಯೋಜನೆಯ ಈ ಹಾಡಿಗೆ ಪುಷ್ಪರಾಜ್ ಮತ್ತು ಶ್ರೀವಲ್ಲಿ ಜೋಡಿ ಹೆಜ್ಜೆ ಹಾಕಿದೆ.

Continue Reading

ಟಾಲಿವುಡ್

Miss You First Look Out: ಆಶಿಕಾ ರಂಗನಾಥ್‌ಗೆ ʻಮಿಸ್ ಯುʼ ಎಂದ ನಟ ಸಿದ್ಧಾರ್ಥ್!

Miss You First Look Out: ಸಿದ್ಧಾರ್ಥ್ ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವರದಿ ಇದೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್.

VISTARANEWS.COM


on

Miss You First Look Out Siddharth unveils intriguing poster
Koo

ಬೆಂಗಳೂರು: ಸಿದ್ಧಾರ್ಥ್ (Siddharth) ಅವರ ಮುಂದಿನ ಚಿತ್ರ `ಇಂಡಿಯನ್ 2′ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದೀಗ ನಟ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿದ್ಧಾರ್ಥ್ ಅವರ ಮುಂದಿನ ಚಿತ್ರ, ʻಮಿಸ್ ಯುʼ ಸಿನಿಮಾ (Miss You First Look Out). ಇದೀಗ ಮಿಸ್‌ ಯು ಸಿನಿಮಾ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದೆ ಪೋಸ್ಟರ್‌ನಲ್ಲಿ ನಟ ಟ್ರಾವೆಲ್‌ ಮೂಡ್‌ನಲ್ಲಿ ಇರುವಂತಿದೆ.

ʻಮಿಸ್ ಯುʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗೆ ಆರ್ ಮಾಧವನ್ ತಮಾಷೆಯ ಶೀರ್ಷಿಕೆಯನ್ನು ಬರೆದಿದ್ದಾರೆ, ʻಚಾಕ ಲೇಟ್ ಬಾಯ್ ಅಲ್ಲ.. ಆದರೆ ಲವರ್ ಮ್ಯಾನ್ ಸಿದ್ ಹೇಗೆ ಮರಳಿದ್ದಾರೆ ನೋಡಿʼʼಎಂದು ಬರೆದುಕೊಂಡಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನಟ ಶಿವ ಕಾರ್ತಿಕೇಯನ್ ಅವರು ಬಿಡುಗಡೆ ಮಾಡಿದರು. ಈ ಪೋಸ್ಟರ್ ನೋಡಿದರೆ ಸಿದ್ಧಾರ್ಥ್ ರೈಲ್ವೇ ನಿಲ್ದಾಣದಿಂದ ಹೊರ ಬರುತ್ತಿರುವಂತೆ ಕಾಣುತ್ತಿದ್ದಾರೆ.

7 ಮೈಲ್ಸ್ ಪರ್ ಸೆಕೆಂಡ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕರುಣಾಕರನ್, ಬಾಲಾ, ಸಾಸ್ತಿಕಾ ರಾಜೇಂದ್ರನ್ ಮುಂತಾದವರು ಈ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Indian 2 : ‘ಇಂಡಿಯನ್ 2ʼ ಸಿನಿಮಾದಲ್ಲಿ ಸಿದ್ಧಾರ್ಥ್: ಫಸ್ಟ್‌ ಲುಕ್‌ ಔಟ್‌!

ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರ

ಸಿದ್ಧಾರ್ಥ್ ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವರದಿ ಇದೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ. ಸಿದ್ಧಾರ್ಥ್ ಇತ್ತೀಚೆಗೆ ನಟಿ ಅದಿತಿ ರಾವ್ ಹೈದರಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅದಿತಿ ಅವರು ನೆಟ್‌ಫ್ಲಿಕ್ಸ್ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಂಡಿದ್ದರು.

ಸಿದ್ಧಾರ್ಥ್‌ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ ʻʻಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾದರೂ, ಬ್ಲಾಕ್ ಬಸ್ಟರ್ ಆಗಲಿದೆ. ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂತೋಷವಿದೆ. ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶಕರಾದ ಶಂಕರ್‌ ಹಾಗೂ ಕಮಲ್ ಹಾಸನ್‌ ಅವರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ನಿರ್ದೇಶಕರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದರು.

Continue Reading
Advertisement
Kangana Ranaut
ದೇಶ2 mins ago

Kangana Ranaut: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕುಲ್ವಿಂದರ್‌ ಕೌರ್‌ ಅರೆಸ್ಟ್‌

Narendra Modi
Lok Sabha Election 202437 mins ago

Narendra Modi: ಅಕೌಂಟ್‌ಗೆ ಲಕ್ಷ ರೂ. ಹಾಕ್ತೇವೆ ಎಂದರೂ ಜನ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ: ಮೋದಿ ವ್ಯಂಗ್ಯ

Prajwal Revanna Case
ಕರ್ನಾಟಕ57 mins ago

Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

Pesticides in Spices
ಕರ್ನಾಟಕ1 hour ago

Pesticides in Spices: MDH, Everest ಬೆನ್ನಲ್ಲೇ ರಾಜ್ಯದ ಮಸಾಲೆ ಪದಾರ್ಥಗಳಿಗೂ ತಟ್ಟಿದ ಬ್ಯಾನ್‌ ಬಿಸಿ

Narendra Modi
Lok Sabha Election 20241 hour ago

Narendra Modi: ಮುಂದಿನ ಹತ್ತು ವರ್ಷ ನಾವೇ: ನರೇಂದ್ರ ಮೋದಿ

Nikhil Kumaraswamy may Good Bye To Cinema
ಸ್ಯಾಂಡಲ್ ವುಡ್2 hours ago

Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

Road accident
ಬೆಂಗಳೂರು2 hours ago

Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

karnataka rain
ಮಳೆ2 hours ago

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

karnataka Rain
ಮಳೆ2 hours ago

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

T20 World Cup
ಕ್ರೀಡೆ2 hours ago

T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌