Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌ - Vistara News

ಸಿನಿಮಾ

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

Rishab Shetty And NTR: ಮಂಗಳೂರು ಏರ್‌ಪೋರ್ಟ್‌ನಲ್ಲಿ ಕುಂದಾಪುರ ಬಾಯ್ಸ್ ದರ್ಶನ ಕೊಟ್ಟಿದ್ದಾರೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ರಿಷಬ್ ಶೆಟ್ಟಿ ಮತ್ತು ಜೂ. ಎನ್.ಟಿ.ಆರ್ ಭೇಟಿಯಾದರು. ಇದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

VISTARANEWS.COM


on

Rishab Shetty And NTR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

Rishab Shetty And NTR: ಇಂದು (ಆಗಸ್ಟ್‌ 31) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ರಿಷಬ್ ಶೆಟ್ಟಿ ಮತ್ತು ಜ್ಯೂ. ಎನ್‌ಟಿಆರ್ (Rishab Shetty And NTR) ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

Rishab Shetty And NTR with family

ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಸ್ಟಾರ್ ನಟರು ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದರು.

NTR and Rishab Shetty

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಮೊದಲು ರಿಷಬ್ ಶೆಟ್ಟಿ ಮತ್ತು ಜೂ. ಎನ್.ಟಿ.ಆರ್ ಮಂಗಳೂರು ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದರು ಮತ್ತು ಡಿವೈನ್ ಸ್ಟಾರ್, ಟೈಗರ್‌ನನ್ನು ಸ್ವಾಗತಿಸಿದ್ದರು.

ಸೆ.2ರಂದು ನನ್ನ ತಾಯಿ ಹುಟ್ಟುಹಬ್ಬ ಇದೆ. ಅವರ ತವರು ಕುಂದಾಪುರಕ್ಕೆ ಬರಬೇಕೆಂಬ ಮಹಾದಾಸೆ ಇತ್ತು. ಮಗನಾಗಿ ಅವರ ಸಣ್ಣ ಆಸೆಯನ್ನು ಈಡೇರಿಸುವುದೇ ನನ್ನ ಭಾಗ್ಯ. ಅವರ ಹುಟ್ಟುಹಬ್ಬಕ್ಕೆ ಇದೇ ದೊಡ್ಡ ಗಿಫ್ಟ್‌. ಅಮ್ಮನನ್ನು ಕರೆದುಕೊಂಡು ಬಂದಿದ್ದು ಖುಷಿ ಆಯಿತು. ಜತೆಗೆ ಆಸೆ ಈಡೇರಿಸಿ ಎಂಬ ನೆಮ್ಮದಿ ಇದೆ ಎಂದು ಟಾಲಿವುಡ್‌ ನಟ ಜ್ಯೂ.ಎನ್‌ಟಿಆರ್‌ ತಿಳಿಸಿದರು.

Rishab Shetty And NTR photo

ಇವರಿಬ್ಬರ ದಿಢೀರ್ ಭೇಟಿ ನೋಡಿ “ತಾರಕ್ ಕಾಂತಾರದಲ್ಲಿ ನಟಿಸುತ್ತಾರಾ?” “ರಿಷಬ್ ಸಿಂಹಾದ್ರಿ ಭೇಟಿ ಏನು ಸೀಕ್ರೆಟ್ ಏನು?” ಹೀಗೆ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದ್ದವು.

ಇದನ್ನೂ ಓದಿ: Sonal Monteiro: ಚರ್ಚ್ ವೆಡ್ಡಿಂಗ್‌ಗೂ ಮುನ್ನ ಸೋನಲ್ ಮನೆಯಲ್ಲಿ Roce Celebration

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ

Actor Darshan : ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮುಂದುವರಿದಿದ್ದು, ನಾಲ್ಕು ದಿನಗಳು ಜೈಲೆಗತಿಯಾಗಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅರ್ಜಿ ಸಂಬಂಧ ನ್ಯಾಯಾಲಯದ ಒಂದಷ್ಟು ಕಾರ್ಯವಿಧಾನಗಳು ಬಾಕಿ ಇರುವ ಕಾರಣ ಮತ್ತಷ್ಟು ದಿನಗಳವರೆಗೆ ದರ್ಶನ್‌ ಗ್ಯಾಂಗ್‌ಗೆ (Actor Darshan) ಜೈಲೇ ದಿಕ್ಕು . ಜಾಮೀನು ಅರ್ಜಿಗೆ ರಜೆ ದಿನಗಳೇ ಅಡ್ಡಿಯಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಮೂರು ದಿನಗಳ ಕಾಲ ನ್ಯಾಯಾಲಯವು ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಆದೇಶ ನೀಡಿತ್ತು. ನಿನ್ನೆ ಗುರುವಾರ ಕೂಡ ಒಂದು ದಿನ ಜ್ಯೂಡಿಷಿಯಲ್ ಕಷ್ಟಡಿಗೆ ಒಳಪಡಿಸಲಾಗಿತ್ತು. ಇಂದು ಶುಕ್ರವಾರ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿ ಪಡೆದ ಕೋರ್ಟ್‌ ಸೆ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ: Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಗಣೇಶ ಹಬ್ಬ ಹಾಗು ರಜಾದಿನಗಳು ಬ್ಯಾಕ್ ಟು ಬ್ಯಾಕ್ ಬಂದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಕೂಡ ಆರೋಪಿಗಳ ಕೈ ಸೇರಿರಲಿಲ್ಲ . ಸೋಮವಾರ ಆರೋಪಿಗಳಿಗೆ ಚಾರ್ಜ್ ಶೀಟ್ ಸಿಕ್ಕಿದರೂ ಮುಖ್ಯವಾಗಿ ಬೇಕಾದ ಟೆಕ್ನಿಕಲ್ ಎವಿಡೆನ್ಸ್‌ಗಳು ಹಾಗು ಅದರ ವರದಿ ಸಿಕ್ಕಿರಲಿಲ್ಲ, ಈಗಲೂ ಸಿಕ್ಕಿಲ್ಲ. ಇದೆಲ್ಲಾವೂ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ವಿಳಂಬವಾಗುತ್ತಿದೆ.

ಇನ್ನು ಚಾರ್ಜ್ ಶೀಟ್ ಹಾಗೂ ಡಿಜಿಟಲ್ ಎವಿಡೆನ್ಸ್ ವರದಿಗಳನ್ನು ಅನಾಲೈಝ್ ಮಾಡಿದ ಬಳಿಕವಷ್ಟೇ ಮೂವ್ ಆಗಬಹುದು. ಅದಾದ ಬಳಿಕ ಈ ಪ್ರಕರಣವನ್ನು ಸೆಷನ್ ಕೋರ್ಟ್‌ಗೆ ವರ್ಗಾವಣೆಯಾಗಿ, ಅಲ್ಲಿ ನ್ಯಾಯಾಲಯದ ಅನುಮತಿ ಪಡೆದು ಜಾಮೀನು ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಇದೇ ವೇಳೆ ದರ್ಶನ್ ಪರ ವಕೀಲ ಆದಷ್ಟು ಬೇಗ ವರದಿಗಳನ್ನು ನೀಡಬೇಕು ಜಾಮೀನು ಸಲ್ಲಿಕೆ ಮಾಡುವುದು ಆರೋಪಿಯ ಫಂಡಮೆಂಟಲ್ ರೈಟ್ಸ್ ಎಂದು ವಾದ ಮಂಡಿಸಿದರು. ಸದ್ಯ ನಾಲ್ಕು ದಿನಗಳಲ್ಲಿ ಕೋರ್ಟ್‌ನ ಪೆಂಡಿಂಗ್ ಕೆಲಸಗಳು ಕ್ಲಿಯರ್ ಆದರೆ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿವರೆಗೂ ಕೊಲೆ ಆರೋಪಿಗಳಿಗೆ ಜೈಲೇ ಗತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Suvarna Celebrity League : ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸತನದ ಸಂಚಲನವನ್ನು ಸೃಷ್ಟಿಸಲು ಸ್ಟಾರ್ ಸುವರ್ಣ ವಾಹಿನಿ ಭರ್ಜರಿಯಾಗಿ ಸಜ್ಜಾಗಿದೆ . ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊಚ್ಚ ಹೊಸ ಶೋ “ಸುವರ್ಣ ಸೆಲೆಬ್ರಿಟಿ ಲೀಗ್” ಹೊತ್ತು ತರ್ತಿದೆ.

VISTARANEWS.COM


on

By

Suvarna Celebrity League a reality show launched on Star Suvarna
Koo

ಬೆಂಗಳೂರು: ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” (Suvarna Celebrity League) ಇದೇ ಭಾನುವಾರದಿಂದ (ಸೆ.15) ರಾತ್ರಿ 7 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೊಂದು ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಒಳಗೊಂಡ ವಿನೂತನ ರೀತಿಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ ಒಟ್ಟು 2 ತಂಡಗಳು ಇರಲಿದ್ದು, 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. ಈ ಜಟಾಪಟಿಯಲ್ಲಿ ಯಾವ ತಂಡ ಗೆದ್ದು “ಸುವರ್ಣ ಸೆಲೆಬ್ರಿಟಿ ಲೀಗ್” ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಎಂಬುದು ಈ ಕಾರ್ಯಕ್ರಮದ ಶೈಲಿಯಾಗಿದೆ. ಜತೆಗೆ ಮೋಜು-ಮಸ್ತಿ, ತರ್ಲೆ ತುಂಟಾಟದ ಜತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ.

ನಿರೂಪಕರಾಗಿ ಮಿಂಚಲಿರುವ ಕಾರ್ತಿಕ್‌ ಮಹೇಶ್‌

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಅದ್ಧೂರಿಯಾಗಿ ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್‌’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಆಗಿದೆ.

‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್‌ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. 10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ ಹಾಗೂ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಯ ಚಂದು ಗೌಡ, ‘ಆಸೆ’ ಧಾರಾವಾಹಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ, ‘ಗೌರಿಶಂಕರ’ ಧಾರಾವಾಹಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ ‘ಕಾಮಿಡಿ ಗ್ಯಾಂಗ್ಸ್’ನ ಹಿತೇಶ್ ಭಾಗವಹಿಸಲಿದ್ದಾರೆ.

Suvarna Celebrity League a reality show launched on Star Suvarna
Suvarna Celebrity League a reality show launched on Star Suvarna

ಇನ್ಮುಂದೆ ವಾರಾಂತ್ಯದಲ್ಲಿ ಶುರುವಾಗಲಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ಪ್ರತೀ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Continue Reading

ಸಿನಿಮಾ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಒಂದು ದಿನದ ನ್ಯಾಯಾಂಗ ಬಂಧನ ಮುಂದುವರಿದಿದೆ. ಸೆ.13ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್‌ ಆದೇಶ ಹೊರಡಿಸಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ನ (Actor Darshan) ನ್ಯಾಯಾಂಗ ಬಂಧನ ಅವಧಿ ಗುರುವಾರ ಮುಕ್ತಾಯವಾದ ಈ ಹಿನ್ನೆಲೆಯಲ್ಲಿ ಇಂದು 24ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ನಟ ದರ್ಶನ್ ಪರ ವಕೀಲ ಶಿವಕುಮಾರ್ ಹಾಜರಾಗಿದ್ದರು. ಈ ವೇಳೆ ಕಮಿಟಲ್ ಆದೇಶಕ್ಕೆ ಆರೋಪಿಗಳ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಟೆಕ್ನಿಕಲ್‌ ಎವಿಡೆನ್ಸ್‌ಗಳನ್ನು ಆರೋಪಿಗಳಿಗೆ ಕೊಟ್ಟ ನಂತರ ಕಮಿಟಲ್ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆರೋಪಿಗಳ ಪರ ವಕೀಲರ ಅಬ್ಜೆಕ್ಷನ್ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದ್ದು, ನಾಳೆ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ. ಇದೇ ವೇಳೆ ಕೊಲೆ ಪ್ರಕರಣವನ್ನು ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆ ಮಾಡುವುದಾಗಿ ನ್ಯಾಯಾಧೀಶರು ಹೇಳಿದರು. ಈ ವೇಳೆ ಡಿಜಿಟಲ್ ಎವಿಡೆನ್ಸ್ ನೀಡಿದ ಬಳಿಕ ಸೆಷನ್ಸ್‌ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಆರೋಪಿ ಪರ ವಕೀಲ ಮನವಿ ಮಾಡಿದರು. ಈ ವೇಳೆ ಡಿಜಿಟಲ್ ಎವಿಡೆನ್ಸ್ ನೀಡಲು ಒಂದು ವಾರ ಸಮಯ ಬೇಕಾಗುತ್ತೆ ಎಂದು ಎಸ್‌ಪಿಪಿ ವಾದಿಸಿದರು.

ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ. ಡಾಕ್ಯುಮೆಂಟ್ಸ್, ಪೆನ್ ಡ್ರೈವ್‌, ಸಿಡಿ, ಡಿವಿಆರ್ ಕೊಟ್ಟಿಲ್ಲ ಅದನ್ನೂ ನಾಳೆಗೆ ಕೇಳಿದ್ದೇವೆ. ಕಮಿಟಲ್ ಆರ್ಡರ್ ಆದ ನಂತರ ಸೆಷನ್ ಕೋರ್ಟ್‌ಗೆ ಜಾಮೀನಿಗೆ ಅರ್ಜಿ ಹಾಕಲಾಗುತ್ತದೆ ಎಂದು ದರ್ಶನ್ ಪರ ವಕೀಲ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನಟ ದರ್ಶನ್‌, ಪವಿತ್ರಾಗೌಡ ಸೇರಿ ವಿವಿಧ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ಸೆ.13ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

Assault Case : ನಟ ಧ್ರುವ ಸರ್ಜಾ (Dhruva Sarja) ಅವರ ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿ (Gym Trainer) ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಮಾಸ್ಟರ್‌ ಮೈಂಡ್‌ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ (Manager) ಎಂಬಾತನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Assault case Actor Dhruva Sarjas manager arrested for hitting gym trainer
Koo

ಬೆಂಗಳೂರು: ನಟ ಧ್ರುವ ಸರ್ಜಾ (Dhruva Sarja) ಮ್ಯಾನೇಜರ್ (Manager) ಅಶ್ವಿನ್‌ ಎಂಬಾತನನ್ನು ಬನಶಂಕರಿ ಪೊಲೀಸರು (Banashankari Police) ಬಂಧನ ಮಾಡಿದ್ದಾರೆ. ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ (Assault case) ನಡೆಸಲು ಈತ ಕೂಡ ಕಾರಣ ಎಂಬ ವಿಚಾರ ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಅಶ್ವಿನ್‌ನನ್ನು ಬಂಧನ ಮಾಡಲಾಗಿದೆ.

ಮೂರು ತಿಂಗಳ ಹಿಂದೆ ಅಂದರೆ ಮೇ 26ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರು ದಾಖಲಿಸಿದ ಬಳಿಕ ಅವರಿಬ್ಬರನ್ನು ಬಂಧನ ಮಾಡಲಾಗಿತ್ತು. ಇದೀಗ ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂದು ತಿಳಿದುಬಂದಿದೆ. ಬಂಧಿತ ಅಶ್ವಿನ್‌ ಸೇರಿ ಇಲ್ಲಿವರೆಗೆ ನಾಲ್ವರನ್ನು ಬಂಧನ ಮಾಡಲಾಗಿದೆ.

ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿಗೆ ಸರ್ಪೈಸ್‌ ಗಿಫ್ಟ್‌ ಕೊಟ್ಟಿದ್ದ ಸರ್ಜಾ

ಈ ಅಶ್ವಿನ್ ಹಲವು ವರ್ಷಗಳಿಂದ ನಟ ಧೃವ ಸರ್ಜಾ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಜಿಮ್ ಟ್ರೈನರ್ ಆಗಿದ್ದು, ನಟ ಧೃವ ಸರ್ಜಾ ಅವರಿಗೆ ಇತ್ತೀಚಿಗೆ ಹತ್ತಿರವಾಗಿದ್ದ. ಜಿಮ್ ವಿಚಾರದಲ್ಲಿ ಧೃವ ಸರ್ಜಾರನ್ನು ಕೇರ್ ಮಾಡುತ್ತಿದ್ದ . ಹೀಗಾಗಿ ಸಹಜವಾಗಿಯೇ ನಟ ಧೃವ ಸರ್ಜಾಗೆ ಪ್ರಶಾಂತ್‌ ಪೂಜಾರಿ ಆತ್ಮೀಯನಾಗಿದ್ದ.‌ ಮಾತ್ರವಲ್ಲ ನಟ ಧೃವ ಸರ್ಜಾಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಸರ್ಪೈಸ್‌ ಆಗಿ ಕೊಟ್ಟಿದ್ದರು‌.

Actor Dhruva Sarjas manager arrested for hitting gym trainer
Actor Dhruva Sarjas manager arrested for hitting gym trainer

ಇದು ಮ್ಯಾನೇಜರ್‌ ಅಶ್ವಿನ್‌ ಹಾಗೂ ಆತನ ಆಪ್ತ ವಲಯಕ್ಕೆ ಸಹಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೃವ ಸರ್ಜಾ ಜತೆಗಿನ ಆತ್ಮೀಯತೆಯನ್ನು ಹೇಗಾದರೂ ಕಟ್ ಮಾಡಬೇಕು ಎಂದು ಕೊಂಡಿದ್ದರು. ಈ ಕಾರಣಕ್ಕೆ ನಟ ಧೃವ ಸರ್ಜಾ ಕಾರು ಚಾಲಕ ನಾಗೇಂದ್ರನ ಜತೆ ಸೇರಿ ಪ್ಲಾನ್ ಮಾಡಿ ಕನಕಪುರದ ಇಬ್ಬರು ಹುಡುಗರನ್ನು ಬಿಟ್ಟು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು. ಈ ಮೊದಲು ಡ್ರೈವರ್‌ ನಾಗೇಂದ್ರನೇ ಮಾಸ್ಟರ್ ಮೈಂಡ್ ಎಂದು ಹೇಳಲಾಗಿತ್ತು. ಆದರೆ ಆತನ ಜತೆ ಅಶ್ವಿನ್‌ ಕೂಡ ಇರುವುದು ತನಿಖೆಯಿಂದ ಸಾಬೀತಾಗಿದೆ. ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣದಲ್ಲಿ ನಾಲ್ವರು ಬಂಧನ ಮಾಡಲಾಗಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ

Nagamangala case
ಮಂಡ್ಯ2 hours ago

Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು

Nagamangala Case
ಮಂಡ್ಯ3 hours ago

Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ; ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು- ಎಚ್‌ಡಿ ಕುಮಾರಸ್ವಾಮಿ

Road Accident
ಬಾಗಲಕೋಟೆ3 hours ago

Road Accident : ಸ್ಕೂಟಿಗೆ ಗುದ್ದಿ ಬೈಕ್‌ನಿಂದ ಹಾರಿ ಬಿದ್ದ ಸವಾರರು; ಸ್ಥಳದಲ್ಲೇ ಓರ್ವ ಸಾವು, ಮತ್ತಿಬ್ಬರು ಗಾಯ

theft case
ಬೆಂಗಳೂರು4 hours ago

Theft case : ಬೆಂಗಳೂರಿನಲ್ಲಿ ದೇವರನ್ನೇ ಕದ್ದ ಖದೀಮರು! ಸಿಸಿ ಕ್ಯಾಮೆರಾದಲ್ಲಿ ಸೆರೆ

theft case
ಬೆಂಗಳೂರು5 hours ago

Theft case : ಆನ್‌ಲೈನ್‌ ಬೆಟ್ಟಿಂಗ್‌ ಗೀಳು; ಅಣ್ಣನ ಮದುವೆಗೆ ತಂದಿದ್ದ ಚಿನ್ನ ಕದ್ದು ಸಿಕ್ಕಿಬಿದ್ದ ತಮ್ಮ!

Physical Abuse
ಯಾದಗಿರಿ6 hours ago

Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

accident case
ಉತ್ತರ ಕನ್ನಡ6 hours ago

Accident Case : ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಶವವಾಗಿ ತೇಲಿ ಬಂದ!

Fire Accident
ಬೆಂಗಳೂರು7 hours ago

Fire Accident : ಅಂಗಡಿ ಉಳಿಸಿಕೊಳ್ಳಲು ಸಿಲಿಂಡರ್ ಹೊರಗೆಸೆದ ಕಬಾಬ್ ಮಾಲೀಕ; ಆಟೋ ಸೇರಿ 5 ಬೈಕ್‌ಗಳು ಬೆಂಕಿಗಾಹುತಿ

Karnataka Weather Forecast Cloudy weather in Bengaluru Moderate rainfall in coastal and Malnad regions
ಮಳೆ13 hours ago

Karnataka Weather : ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ; ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 year ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌