Viral news | ಪ್ರೇಮಿಗಳೋ, ಅಣ್ಣತಂಗಿಯರೋ? ಡಿಎನ್‌ಎ ವರದಿ ತಿಳಿಸಿತು ಅಸಲಿ ಸತ್ಯ! - Vistara News

ವೈರಲ್ ನ್ಯೂಸ್

Viral news | ಪ್ರೇಮಿಗಳೋ, ಅಣ್ಣತಂಗಿಯರೋ? ಡಿಎನ್‌ಎ ವರದಿ ತಿಳಿಸಿತು ಅಸಲಿ ಸತ್ಯ!

ಅವರಿಬ್ಬರೂ ಡೇಟಿಂಗ್‌ ತಾಣದಲ್ಲಿ ಭೇಟಿಯಾಗಿ ಆರು ವರ್ಷಗಳ ಕಾಲ ಪ್ರೀತಿಸಿದರು. ಕೊನೆಗೊಮ್ಮೆ ಡಿಎನ್‌ಎ ಪರೀಕ್ಷೆ ಮಾಡಿಸಿದಾಗ ಅವರ ಎದೆ ಒಡೆಯುವಂಥ ಸತ್ಯ ಹೊರಬಿತ್ತು.

VISTARANEWS.COM


on

viral news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದೊಂದು ವಿಚಿತ್ರ ಪ್ರೇಮಕಥೆ. ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲದ ಕಥೆ. ಇಲ್ಲಿ ಇಬ್ಬರು ಪ್ರೇಮಿಗಳಿಗೆ ಆರು ವರ್ಷಗಳ ಕಾಲ ಗಾಢವಾಗಿ ಪ್ರೀತಿಸಿದ ಮೇಲೆ ತಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ಗೊತ್ತಾಗಿದೆ! ಆಶ್ಚರ್ಯವೆನಿಸಿದರೂ ಸತ್ಯ. ಡೇಟಿಂಗ್‌ ಸೈಟ್‌ ಒಂದರಲ್ಲಿ ಪೋಸ್ಟ್‌ ಮಾಡಿದ ವಿಚಾರವೊಂದು ಮಿಲಿಯಗಟ್ಟಲೆ ವೀಕ್ಷಣೆ ಕಂಡು ಇದೀಗ ವೈರಲ್‌ ಆಗಿದೆ.

ಆಕೆಯ ವಯಸ್ಸು ೩೦, ಆತನದು ೩೨. ಇಬ್ಬರಿಗೂ ಸುಮಾರು ಆರು ವರ್ಷಗಳ ಹಿಂದೆ ಪ್ರೇಮಾಂಕುರವಾಗಿದೆ. ಎಲ್ಲ ಪ್ರೇಮಿಗಳಂತೆ ಇವರೂ ಗಾಢವಾಗಿ ಪ್ರೀತಿಸಿದ್ದಾರೆ. ಜೊತೆಗೇ ವಾಸಿಸುತ್ತಿದ್ದಾರೆ ಕೂಡಾ. ಮುಂದೆಯೂ ಮದುವೆಯಾಗಿ ಜೊತೆಗಿರುವ ಯೋಜನೆಯೇ ಇದೆ. ಆದರೆ, ಇತ್ತೀಚೆಗೆ ಇಬ್ಬರು ಸಣ್ಣ ಕುತೂಹಲಕ್ಕೆಂದು ಮಾಡಿಸಿದ ಡಿಎನ್‌ಎ ಪರೀಕ್ಷೆಯಿಂದ ಸತ್ಯ ಹೊರಬಿದ್ದು ಎಡವಟ್ಟಾಗಿದೆ.

ಆಕೆ ಹೇಳುವಂತೆ, ಇತ್ತೀಚೆಗೆ ನಮಗಿಬ್ಬರಿಗೂ, ಸುಮ್ಮನೆ ನಮ್ಮ ಹಿನ್ನೆಲೆ ತಿಳಿದುಕೊಳ್ಳುವ ಕುತೂಹಲವುಂಟಾಗಿ ಡಿಎನ್‌ಎ ಟೆಸ್ಟ್‌ ಮಾಡಿಸಿದೆವು. ರಿಪೋರ್ಟ್‌ ಪಡೆಯಲು ಹೋದ ನನಗೆ ಶಾಕ್‌ ಕಾದಿತ್ತು. ಅದು ಹೇಳುವಂತೆ ನಾವಿಬ್ಬರೂ ಅಣ್ಣ ತಂಗಿ. ಒಂದೇ ಅಪ್ಪ ಅಮ್ಮನಿಗೆ ಹುಟ್ಟಿದ ಮಕ್ಕಳು. ಈ ವರದಿ ನೋಡಿ ನನಗೆ ಆಕಾಶವೇ ತಲೆ ಕಳಚಿ ಬಿದ್ದಂತಾಯ್ತು. ಇಂಥದ್ದೊಂದು ವರದಿ ಬರಬಹುದೆಂಬ ಯಾವ ನಿರೀಕ್ಷೆಯೂ ನನಗೆ ಇರಲಿಲ್ಲ. ಬಹುಶಃ ಈ ವರದಿ ತಪ್ಪಿರಬಹುದು ಎಂದೂ ಯೋಚಿಸಿದೆ. ಹಾಗಾಗಿ ಮೊದಲು ಆತನಿಗೆ ತಿಳಿಸುವುದು ಬೇಡ ಎಂದುಕೊಂಡೆ. ಆದರೆ ಮತ್ತೆ ಇದು ಸತ್ಯವೆಂದು ಎಂದು ತಿಳಿದು ಕಂಗಾಲಾಗಿ ಹೋಗಿದ್ದೇನೆ. ಈಗ ಆತನಿಗೂ ಗೊತ್ತಾಗಿ, ಇದು ಶಾಕ್‌ ನೀಡಿದೆ. ಇನ್ನೊಮ್ಮೆ ಪರೀಕ್ಷೆ ಮಾಡುವ ಅಂದಿದ್ದಾನೆ. ಮುಂದೇನು ಮಾಡುವುದು ಎಂದು ತಿಳಿಯುತ್ತಿಲ್ಲ. ಈಗ ಆತನನ್ನು ಪ್ರೇಮಿಯ ಹಾಗೆ ಭಾವಿಸಿ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ” ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ವರದಿಯ ಹಿನ್ನೆಲೆಯಲ್ಲಿ ಈ ಇಬ್ಬರೂ ತಮ್ಮ ಪೂರ್ವಾಪರಗಳನ್ನು ಕೆದಕಿದ್ದಾರೆ ಕೂಡಾ. ಈ ವರದಿಯ ನಂತರವಷ್ಟೆ ನನಗೆ ನಾನು ದತ್ತುಪುತ್ರಿ ಎಂದು ತಿಳಿಯಿತು. ನನ್ನ ಸಾಕು ಅಪ್ಪ ಅಮ್ಮ ನನ್ನನ್ನು ಮುದ್ದಾಗಿ ಬೆಳೆಸಿದ್ದಾರೆ. ಅವರು ನಾನು ಅವರ ನಿಜವಾದ ಮಗಳಲ್ಲ, ಸಾಕುಮಗಳು ಎಂದು ಯಾವತ್ತೂ ಹೇಳಿಕೊಂಡಿರಲಿಲ್ಲ. ನನ್ನ ಸಂಗಾತಿಯ ಕಥೆ ಕೂಡಾ ಇದೇ. ಆತನೂ ದತ್ತು ಪುತ್ರ. ನಮ್ಮಿಬ್ಬರನ್ನೂ ಬೇರೆ ಬೇರೆ ಕುಟುಂಬಗಳಿಗೆ ದತ್ತು ಕೊಡಲಾಗಿತ್ತು. ಹೀಗಾಗಿ ಮಗುವಾಗಿದ್ದಾಗಿನಿಂದಲೇ ಬೇರೆಬೇರೆಯಾಗಿ ಬೆಳೆದೆವು. ಈಗ ಇಂಥ ಸನ್ನಿವೇಶದಲ್ಲಿ ಬಂದು ನಿಂತಿದ್ದೇವೆ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ | Viral Video | ಮಳೆಯಲ್ಲಿ ನಾಯಿಯ ಭರ್ಜರಿ ಡಾನ್ಸ್​; ಶ್ವಾನದ ಖುಷಿ ನೋಡಿ ಮೆಚ್ಚಿಕೊಂಡ ನೆಟ್ಟಿಗರು

ಆತನನ್ನು ಭೇಟಿಯಾದ ಕೂಡಲೇ ಆಕರ್ಷಿತಳಾಗಿದ್ದೆ. ಅಷ್ಟು ಬೇಗನೆ ನಾನು ಯಾವ ಹುಡುಗರ ಮೇಲೂ ಆಕರ್ಷಿತಳಾಗಿರಲಿಲ್ಲ. ಈತನನ್ನು ಬಹುಬೇಗನೆ ಹಚ್ಚಿಕೊಂಡೆ. ಆತನಿಲ್ಲದೆ ಜೀವನವಿಲ್ಲ ಎಂಬಲ್ಲಿವರೆಗೆ ಹಚ್ಚಿಕೊಂಡಿದ್ದೇನೆ. ನಮ್ಮಿಬ್ಬರ ಸಂಬಂಧ ಅತ್ಯುತ್ತಮವಾಗಿತ್ತು, ಈಗಲೂ ಇದೆ ಕೂಡಾ. ನಾವು ಲಿವ್‌ ಇನ್‌ನಲ್ಲಿದ್ದೇವೆ. ಇನ್ನೇನು ಮದುವೆಯಾಗಲೂ ಬಯಸಿದ್ದೆವು. ಈಗ ಮದುವೆ ಮಕ್ಕಳು ಎಂದೆಲ್ಲ ಯೋಚಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಾಗಿ ಮುಂದೊಂದು ದಿನ ಅವರಿಗೆ ತಮ್ಮ ಅಪ್ಪ ಅಮ್ಮ ಅಣ್ಣತಂಗಿ ಎಂದು ಗೊತ್ತಾದರೆಪರಿಸ್ಥಿತಿ ಹೇಗಿದ್ದೀತು ಎಂದು ಊಹಿಸಲೂ ಕಷ್ಟವಾಗುತ್ತಿದೆ. ಹಾಗಾಗಿ ನಮ್ಮನ್ನು ನಾವು ಇಂತಹ ಸ್ಥಿತಿಯಲ್ಲಿಡಲು ಬಯಸುತ್ತಿಲ್ಲ ಎಂದಿದ್ದಾಳೆ.

ನಮ್ಮನ್ನು ನೋಡಿ ಹಲವರು ಹೇಳುತ್ತಿದ್ದರು, ನೀವಿಬ್ಬರೂ ನೋಡಲು ಒಂದೇ ತರಹ ಇದ್ದೀರಿ ಎಂದು. ನನ್ನ ಹಲವು ಗೆಳತಿಯರು, ನಿನ್ನ ಮೇಲ್‌ ವರ್ಷನ್‌ ಆತ ಎನ್ನುತ್ತಿದ್ದರು. ಆದರೆ ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ ಎಂದಿದ್ದಾಳೆ.

ಈಕೆಯ ಪೋಸ್ಟ್‌ ಓದಿದ ಹಲವರು, ಅಯ್ಯೋ ಇದೆಂಥ ದುರ್ಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರೀತಿಸಿದ ಮೇಲೆ ಇಂಥ ಸತ್ಯ ತಿಳಿದಾಗ ಆಗುವ ಆಘಾತ ಊಹಿಸಬಲ್ಲೆವು. ಆದರೆ ಇದು ವಿಧಿ. ಇದಕ್ಕೆ‌ ಪರಿಹಾರ ಸೂಚಿಸುವುದು ಬಲು ಕಷ್ಟ ಎಂದೂ ಹೇಳಿದ್ದಾರೆ. ಇನ್ನೂ ಕೆಲವರು, ಖಂಡಿತ ಇದು ಬಹಳ ನೋವಿನ ಸಂಗತಿ. ಆದರೆ ನೀವು ಹೀಗೆಯೇ ಜೊತೆಯಾಗಿರಿ. ಆದರೆ, ಮಕ್ಕಳನ್ನು ಮಾಡಿಕೊಳ್ಳಬೇಡಿ. ಬಾಡಿಗೆ ತಾಯ್ತನವನ್ನು ಬೇಕಾದರೆ ಯೋಚಿಸಬಹುದು. ಆದರೆ, ಬೇರೆಯಾಗಬೇಡಿ, ಆ ಹಾಳು ವರದಿ ಹರಿದು ಬಿಸಾಕಿ, ಇಂಥದ್ದೊಂದು ಘಟನೆ ಜೀವನದಲ್ಲಿ ನಡೆದೇ ಇಲ್ಲವೆಂಬಂತೆ ಸಂತೋಷವಾಗಿ ಬಾಳಿ ಎಂದೂ ಜೋಡಿಗಳಿಗೆ ಕೆಲವರು ಹರಸಿದ್ದಾರೆ.

ಇದನ್ನೂ ಓದಿ | ಮೆಚ್ಚಿನ ಜನತೆಗೆ ಮುಗಿಲಿನಿಂದ ದರ್ಶನ ನೀಡಿದಳೇ ರಾಣಿ ಎಲಿಜಬೆತ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Shivraj Chouhan: ರೈಲಿನಲ್ಲಿ ಜನ ಸಾಮಾನ್ಯರಂತೆ ಪ್ರಯಾಣಿಸಿ ಸರಳತೆ ಮೆರೆದ ಶಿವರಾಜ್‌ ಸಿಂಗ್‌ ಚೌಹಾಣ್‌; ಸಚಿವರ ನಡೆಗೆ ವ್ಯಾಪಕ ಪ್ರಶಂಸೆ

Shivraj Chouhan: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾಗಿದ್ದಾರೆ. ದೆಹಲಿಯಿಂದ ಅವರು ಭೋಪಾಲ್‌ಗೆ ರೈಲಿನಲ್ಲಿ ತೆರಳಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜನ ಸಾಮಾನ್ಯರೊಂದಿಗೆ ಬೆರೆತು ಪ್ರಯಾಣ ಬೆಳೆಸಿದ ಅವರ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ಅವರ ವಿರುದ್ಧ ಬರೋಬ್ಬರಿ 8.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

VISTARANEWS.COM


on

Shivraj Chouhan
Koo

ಭೋಪಾಲ್‌: ಕೇಂದ್ರ ಸಚಿವ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Chouhan) ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಬೆಳೆಸಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ. ಕೇಂದ್ರ ಸಚಿವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ (Viral News). ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ವಿದಿಶಾದಿಂದ ಜಯಗಳಿಸಿರುವ ಅವರು ದೆಹಲಿಯಿಂದ ಭೋಪಾಲ್‌ಗೆ ರೈಲಿನಲ್ಲಿ ತೆರಳಿದರು.

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಮ್ಮ ಪತ್ನಿಯೊಂದಿಗೆ ದೆಹಲಿಯಿಂದ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಸಂಚರಿಸಿದ್ದು, ಪ್ರಯಾಣದ ವೇಳೆ ರೈಲಿನಲ್ಲಿದ್ದ ಸಹಯಾತ್ರಿಕರೊಂದಿಗೆ ನಗು ನಗುತ್ತಾ ಮಾತನಾಡಿದರು. ಚಿಕ್ಕ ಮಕ್ಕಳನ್ನು ಎತ್ತಿ ಮುದ್ದಾಡಿ, ಫೋಟೊಗಳಿಗೆ ಪೋಸ್ ನೀಡಿದರು. ಕೆಲವರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಸಹ ಕಂಡುಬಂತು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ರೈಲು ಪ್ರಯಾಣದ ಚಿತ್ರಗಳನ್ನು ಹಂಚಿಕೊಂಡಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ಭಾರತೀಯ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಮುಂದಾಳತ್ವದಲ್ಲಿ ಭಾರತೀಯ ರೈಲ್ವೆ ನಿರ್ವಹಣೆ ಮತ್ತು ಕಾರ್ಯಾಚರಣೆಯ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ನವ ಭಾರತದ ವೇಗದ ಅಗತ್ಯಗಳನ್ನು ಪೂರೈಸಲು ಮತ್ತು ಪ್ರಯಾಣವನ್ನು ಸುರಕ್ಷಿತ ಮತ್ತು ಆರಾಮದಾಯಕವಾಗಿಸಲು ಭಾರತೀಯ ರೈಲ್ವೆ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿಯಾಗಿ ಹಲವು ಜನಪರ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಖ್ಯಾತಿ ಅವರದ್ದು. ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಅವರು ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಆಯ್ಕೆಯಾಗಿದ್ದಾರೆ. ಬುಡಕಟ್ಟು ನಾಯಕ ಅರ್ಜುನ್ ಮುಂಡಾ ಅವರ ಬದಲಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಹೊಣೆ ಹೊತ್ತಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ಅವರ ವಿರುದ್ಧ ಬರೋಬ್ಬರಿ 8.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

ಶಿವರಾಜ್ ಸಿಂಗ್ ಚೌಹಾಣ್‌ಗೆ ಸಿಗದ ಸಿಎಂ ಹುದ್ದೆ; ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯರು!

ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದ್ದರೂ ಮುಖ್ಯಮಂತ್ರಿಯಾಗಿ ಹೊಸ ಮುಖ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಪಾಲ ಮುಂಗುಭಾಯ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿ ಹೊರ ಬಂದಾಗ ಮಹಿಳಾ ಅಭಿಮಾನಿಗಳು ಅವರನ್ನು ಭೇಟಿ ಮಾಡಿ ತಮ್ಮ ದುಃಖ ವ್ಯಕ್ತಪಡಿಸಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಪ್ಪಿಕೊಂಡ ಮಹಿಳೆಯರು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೊ ವೈರಲ್ ಆಗಿತ್ತು.

Continue Reading

ದೇಶ

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

ರಾಹುಲ್‌ ಗಾಂಧಿ ಅವರು ಬ್ಯಾಂಕ್‌ ಖಾತೆಗೆ ಒಂದು ಲಕ್ಷ ರೂ. ಜಮೆ ಮಾಡುತ್ತಾರೆ ಎಂದು ಕರ್ನಾಟಕದಲ್ಲಿ ಮುಸ್ಲಿಂ ಮಹಿಳೆಯರು ಪೋಸ್ಟ್‌ ಆಫೀಸ್‌ನಲ್ಲಿ ಬ್ಯಾಂಕ್‌ ಖಾತೆ ತೆರೆಯಲು ಮುಗಿಬಿದ್ದಿದ್ದರು. ಉತ್ತರ ಪ್ರದೇಶದಲ್ಲಂತೂ ಮಹಿಳೆಯರು ಕಾಂಗ್ರೆಸ್‌ಗೆ ಕಚೇರಿಗೆ ನುಗ್ಗಿದ್ದರು. ಈಗ ಬಿಹಾರದಲ್ಲೂ ಒಂದು ಲಕ್ಷ ರೂ. ಟಕಾಟಕ್‌ ಹಣಕ್ಕಾಗಿ ನೂರಾರು ಮಹಿಳೆಯರು ಬ್ಯಾಂಕ್‌ಗೆ ತೆರಳಿ, ನಿರಾಸೆಯಿಂದ ಮನೆಗೆ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Bihar Women
Koo

ಪಟನಾ: ಲೋಕಸಭೆ ಚುನಾವಣೆ (Lok Sabha Election 2024) ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತ ಹಿನ್ನೆಲೆಯಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರು ಖಾತೆ ಹಂಚಿಕೆಯನ್ನೂ ಮಾಡಿ ಇಟಲಿಗೆ ತೆರಳಿದ್ದಾರೆ. ಇಷ್ಟಾದರೂ, ರಾಹುಲ್‌ ಗಾಂಧಿ ಅವರು ತಮ್ಮ ಖಾತೆಗೆ ಹಣ ಹಾಕುತ್ತಾರೆ ಎಂದೇ ಮಹಿಳೆಯರು ಭಾವಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದಲ್ಲಿ ನೂರಾರು ಮಹಿಳೆಯರು ಪಾಸ್‌ಬುಕ್‌ ಹಿಡಿದುಕೊಂಡು, ನಮ್ಮ ಖಾತೆಗೆ ರಾಹುಲ್‌ ಗಾಂಧಿ (Rahul Gandhi) ಹೇಳಿದ ‘ಟಕಾಟಕ್’‌ 1 ಲಕ್ಷ ರೂ. ಜಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂದು ಮನೆಗೆ ತೆರಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರ ಬ್ಯಾಂಕ್‌ ಖಾತೆಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ಜಮೆ ಮಾಡಲಾಗುವುದು ಎಂದು ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದ್ದರು. ಬಿಹಾರದ ಕೈಮುರ್‌ನಲ್ಲಿ ರಾಹುಲ್‌ ಗಾಂಧಿ ಹೇಳಿದಂತೆ ಮಹಿಳೆಯರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂಬ ವದಂತಿ ಹರಡಿದೆ. ಇದನ್ನು ನಂಬಿದ ನೂರಾರು ಮಹಿಳೆಯರು ಬ್ಯಾಂಕ್‌ ಎದುರು ಪಾಸ್‌ಬುಕ್‌ ಹಿಡಿದು, ನಮ್ಮ ಖಾತೆಗೆ ಒಂದು ಲಕ್ಷ ರೂ. ಜಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಕೊನೆಗೆ ಪೊಲೀಸರು ಬಂದು ವಾಸ್ತವ ತಿಳಿಸಿದಾಗ ಮಹಿಳೆಯರು ಹಿಡಿಶಾಪ ಹಾಕುತ್ತ ಮನೆಗೆ ತೆರಳಿದರು ಎನ್ನಲಾಗಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಕುರಿತು ಹಲವು ಬಾರಿ ಘೋಷಣೆ ಮಾಡಿದ್ದರು. “ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗಳಿಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ದೇಶದ ಬಡ ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತದೆ. ಇದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ. ಟಕಾ ಟಕ್‌ ಅಂತ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ” ಎಂಬುದಾಗಿ ಹೇಳಿದ್ದರು. ಹಾಗಾಗಿ, ಚುನಾವಣೆ ಮುಗಿದ ಕೂಡಲೇ ಮುಸ್ಲಿಂ ಮಹಿಳೆಯರು ಉತ್ತರ ಪ್ರದೇಶದ ಲಖನೌನಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದರು.

ಕರ್ನಾಟಕದಲ್ಲೂ ಖಾತೆ ತೆರೆಯಲು ಕ್ಯೂ

ಕಾಂಗ್ರೆಸ್‌ನಿಂದ ಮಹಿಳೆಯರ ಬ್ಯಾಂಕ್‌ ಖಾತೆಗೆ 1 ಲಕ್ಷ ರೂ. ಜಮೆಯಾಗುತ್ತದೆ ಎಂದು ಭಾವಿಸಿ ಬೆಂಗಳೂರಿನ ಹಲವೆಡೆ ಮುಸ್ಲಿಂ ಮಹಿಳೆಯರು ಪೋಸ್ಟ್‌ ಆಫೀಸ್‌ ಎದುರು ಸಾಲಾಗಿ ನಿಂತಿರುವುದು ಕಂಡು ಬಂದಿತ್ತು. ಬೆಂಗಳೂರಿನ ಶಿವಾಜಿ ನಗರ, ವಸಂತನಗರ ಸೇರಿ ಹಲವೆಡೆ ಮುಸ್ಲಿಂ ಮಹಿಳೆಯರು ಬ್ಯಾಂಕ್‌ ಖಾತೆ ತೆರೆಯಲು ಪೋಸ್ಟ್‌ ಆಫೀಸ್‌ ಎದುರು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್‌ 1 ಲಕ್ಷ ರೂ. ಗ್ಯಾರಂಟಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ ಖಾತೆ ತೆರೆಯಲು ಮುಂದಾಗಿದ್ದರು.

ಇದನ್ನೂ ಓದಿ: Congress Guarantee: ಗ್ಯಾರಂಟಿಗಾಗಿ ದಾಖಲೆ ಅಪ್ಡೇಟ್‌; ಆಧಾರ್‌, ಬ್ಯಾಂಕ್‌, ಪೋಸ್ಟ್‌ ಆಫೀಸ್‌ಗೆ ಮುಗಿಬಿದ್ದ ಜನ

Continue Reading

Latest

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral News: ಕ್ರೀಂ, ಲೋಷನ್ ಹಚ್ಚಿ ಫೇಸ್ ಮಸಾಜ್ ಮಾಡುವುದರ ಬಗ್ಗೆ ಕೇಳಿರುತ್ತೀರಿ. ಆದರೆ ಉತ್ತರಪ್ರದೇಶದ ಈ ಮುಸ್ಲಿಂ ಕ್ಷೌರಿಕ ತನ್ನ ಬಳಿ ಫೇಸ್ ಮಸಾಜ್ ಮಾಡಿಸಿಕೊಳ್ಳಲು ಬಂದ ಯುವಕನ ಮುಖಕ್ಕೆ ಎಂಜಲು ಹಚ್ಚಿ ಮಸಾಜ್ ಮಾಡಿದ್ದಾನೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

VISTARANEWS.COM


on

Viral News
Koo

ಹುಡುಗಿಯರ ಹಾಗೇ ಹುಡುಗರಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಹುಡುಗಿಯರು ಬ್ಯೂಟಿ ಪಾರ್ಲರ್ ನಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಂಡ ಹಾಗೆ ಹುಡುಗರು ಕ್ಷೌರದ ಅಂಗಡಿಯಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಫೇಸ್‌ ಮಸಾಜ್‌ ಮಾಡಿಕೊಂಡರೆ ಮುಖದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ದಣಿದ ಮುಖಕ್ಕೆ ರಿಲೀಫ್‌ ಆಗುತ್ತೆ ಎಂದು ಕೆಲವರು ದುಡ್ಡು ಸುರಿದು ಮಸಾಜ್‌ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಕ್ಷೌರದಂಗಡಿಗೆ ವ್ಯಕ್ತಿಯೊಬ್ಬ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚಿ ಮುಖಕ್ಕೆ ಮಸಾಜ್‌ ಮಾಡುವುದರ ಬದಲು ಎಂಜಲು ಉಗಿದು ಮಸಾಜ್‌ ಮಾಡಿದ್ದಾನಂತೆ. . ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಅಮ್ಜದ್ ಎಂಬುದಾಗಿ ತಿಳಿದುಬಂದಿದೆ. @TruestoryUP ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈತನ ಘೋರ ಕೃತ್ಯದ ದೃಶ್ಯ ವೈರಲ್ ಆಗಿದ್ದು, ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

ಜೂನ್ 8ರಂದು ಈ ವಿಡಿಯೊ ಹಂಚಿಕೊಂಡಿದ್ದು, ಇದನ್ನು16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು ಈತನ ಕೃತ್ಯದ ವಿರುದ್ಧ ವೀಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

Continue Reading

Latest

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Viral Video: ವಾಕಿಂಗ್ ಮಾಡಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.ನಗರದ ಮಂದಿ ವಾಕಿಂಗ್‌ಗೆ ತಾವು ಪ್ರೀತಿಯಿಂದ ಸಾಕಿದ ನಾಯಿಯನ್ನು ಕೂಡ ಕರೆದುಕೊಂಡು ಹೋಗುವುದು ನಾವು ಕಂಡಿರುತ್ತೇವೆ. ಇಂತಹ ಸಾಕು ಪ್ರಾಣಿಯ ಜೊತೆ ಎಲ್ಲರೂ ವಾಕಿಂಗ್ ಹೋಗುತ್ತಾರೆ. ಆದರೆ ದುಬೈನ ಈ ಬೆಡಗಿ ಮಾತ್ರ ಮನುಷ್ಯರು ಬೆಚ್ಚಿಬೀಳುವ ಹುಲಿಯ ಜೊತೆ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿದರೆ ನೋಡಿದವರ ಎದೆ ಝಲ್ ಎನ್ನದೆ ಇರುತ್ತಾ ಹೇಳಿ!

VISTARANEWS.COM


on

Viral Video
Koo

ಹುಲಿ ಎಂದರೆ ಎಲ್ಲರೂ ಭಯಭೀತರಾಗುತ್ತಾರೆ. ಯಾಕೆಂದರೆ ಹುಲಿ ತನ್ನ ಆಹಾರಕ್ಕಾಗಿ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನೂ ಕೊಂದು ತಿನ್ನುತ್ತದೆ. ಹಾಗಾಗಿ ಹುಲಿಯನ್ನು ಎದುರು ನೋಡುವುದು ಬೇಡ ದೂರದಲ್ಲಿ ಅದರ ಗರ್ಜನೆ ಕೇಳಿದರೂ ಸಾಕು ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ. ಅಂತಹದರಲ್ಲಿ ದುಬೈನಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗಾಗಿ ಹುಲಿಯೊಂದಿಗೆ ನಡೆದುಕೊಂಡು ಬಂದರೆ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬೇಡ ಹೇಳಿ. ಈ ಮಹಿಳೆ ಹುಲಿ ಜೊತೆ ನಡೆದುಕೊಂಡು ಬರುವ ದೃಶ್ಯ ಎಲ್ಲರಲ್ಲೂ ಭಯವನ್ನು ಹುಟ್ಟಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ (Viral Video) ಆಗಿದೆ.

ನಾಯಿ ಕುತ್ತಿಗೆಗೆ ಚೈನ್‌ ಕಟ್ಟಿಕೊಂಡು ವಾಕಿಂಗ್‌ಗೆ ಹೋಗುವವರು ನಿಮಗೆ ರಸ್ತೆಯಲ್ಲಿ ನೂರಾರು ಜನರು ಸಿಗುತ್ತಾರೆ. ಆದರೆ ದುಬೈಯಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗೆ ಬರುವಾಗ ಕಾಡಿನಲ್ಲಿರಬೇಕಾದ ಹುಲಿಯನ್ನು ತನ್ನ ಜೊತೆ ಕರೆದುಕೊಂಡು ಬಂದರೆ ಹೇಗಿರಬೇಡ ಹೇಳಿ. ಹುಲಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ನಾಯಿಯಂತೆ ಕರೆದುಕೊಂಡು ಬರುತ್ತಿರುವ ಈಕೆಯ ಧೈರ್ಯ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ಹುಲಿಯ ಜೊತೆ ವಾಕಿಂಗ್‌ಗೆ ಹೋಗುವುದನ್ನು ವಿಡಿಯೊ ಮಾಡಿ “ ನನ್ನ ಮುದ್ದಿನ ಹುಲಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೇನೆ “ ಎಂದು ಶೀರ್ಷಿಕೆ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.

ಇವಳ್ಯಾರು ಎಂಬ ಕುತೂಹಲ ನಿಮಗೂ ಆಗಿರಬಹುದು ಅಲ್ವಾ…?ಈಕೆ ಇನ್ ಸ್ಟಾಗ್ರಾಂ, ಟಿಕ್ ಟಾಕ್ ಮತ್ತು ಯೂಟ್ಯೂಬ್ ನಲ್ಲಿ ಜಪ್ರಿಯರಾಗಿದ್ದ ನಾಡಿಯಾ ಖಾರ್ ಎನ್ನಲಾಗಿದೆ. ಈಕೆ ಫ್ಯಾಷನ್ ವಿಷಯಕ್ಕೆ ಹೆಸರುವಾಸಿಯಾಗಿದ್ದಾಳೆ. ಆಗಾಗ ಐಷರಾಮಿ ಕಾರುಗಳು, ವ್ಲಾಗ್ ಗಳು ಮತ್ತು ಕಿರು ವಿಡಿಯೊಗಳನ್ನು ಪ್ರದರ್ಶಿಸುತ್ತಿರುತ್ತಾಳೆ. ಇದೀಗ ಅವಳು ದುಬೈನಲ್ಲಿ ಹುಲಿಯ ಜೊತೆಗೆ ನಡೆದುಕೊಂಡು ಬರುತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾಳೆ. ವಿಡಿಯೊದಲ್ಲಿ ಅವಳು ಮೃಗಾಲಯದ ಒಳಗೆ ಮತ್ತು ದುಬೈನ ಸಾರ್ವಜನಿಕ ಉದ್ಯಾನವನದಲ್ಲಿ ಹುಲಿಯೊಂದಿಗೆ ನಡೆಯುತ್ತಿರುವ ವಿಡಿಯೊ ವೈರಲ್ ಆಗಿದೆ. ಇದಕ್ಕೆ 6 ಮಿಲಿಯನ್ ವೀಕ್ಷಣೆ ಮತ್ತು 100000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಹಾಗೇ ಈ ವಿಡಿಯೊಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿದ್ದು, ಕೆಲವರು ಹುಲಿಯನ್ನು ನಾಯಿಯಂತೆ ಸಾಕಿಕೊಂಡಿರುವುದಕ್ಕೆ ಆಕೆಯ ಕೃತ್ಯವನ್ನು ಟೀಕಿಸಿದರೆ, ಕೆಲವರು ಅದನ್ನು ಕಂಡು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು “ಪ್ರಾಣಿಗಳ ಕ್ರೌರ್ಯವನ್ನು ಕ್ಷಮಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ದುಬೈಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕು ಪ್ರಾಣಿಗಳಂತೆ ಸಾಕುತ್ತಾರೆ. ಇಲ್ಲಿ ಹುಲಿ, ಸಿಂಹ, ಕರಡಿಗಳಂತಹ ನರಭಕ್ಷಕ ಪ್ರಾಣಿಗಳನ್ನು ಪಳಗಿಸಿ ಖಾಸಗಿ ಮೃಗಾಲಯದಲ್ಲಿ ಸಾಕುತ್ತಾರೆ. ಅದರ ಜೊತೆಗೆ ಕೋತಿ ಮತ್ತು ಜಿರಾಫೆಗಳಂತಹ ಪ್ರಾಣಿಗಳಿಗೂ ವಸತಿ ನೀಡುತ್ತಾರೆ. ಇದು ಅವರಿಗೆ ಪ್ರಾಣಿಗಳ ಮೇಲಿದ್ದ ಕಾಳಜಿಯನ್ನು ತೋರಿಸುತ್ತದೆ.

ಈಗ ಸೋಷಿಯಲ್‌ ಮೀಡಿಯಾದ್ದೇ ಹವಾ. ತಿಂದಿದ್ದು, ಕುಡಿದಿದ್ದು, ಹೆತ್ತಿದ್ದು ಎಲ್ಲವನ್ನೂ ಇದರಲ್ಲಿ ಹಾಕುತ್ತಾರೆ. ಆ ದೇಶದಲ್ಲಿ ಬೆಡಗಿಯೊಬ್ಬಳು ಹಸಿ ಹಾವನ್ನೇ ತಟ್ಟೆಯಲ್ಲಿಟ್ಟುಕೊಂಡು ತಿಂದರೆ, ಮತ್ತೊಬ್ಬಳು ಹರೆಯದ ಹುಡುಗಿ ಅಜ್ಜನನ್ನೇ ಪ್ರೀತಿಸಿ ಮದುವೆಯಾದಳು. ಈಗ ಲೈಕ್ಸ್‌, ಕಾಮೆಂಟ್‌ಗಳಿಗಾಗಿ ಏನು ಬೇಕಾದರೂ ಮಾಡುವುದಕ್ಕೆ ಸೈ ಅನ್ನುವ ಹಂತದಲ್ಲಿ ನಾವಿದ್ದೇವೆ.

Continue Reading
Advertisement
Vijayanagara News
ವಿಜಯನಗರ11 mins ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Pakistan Cricket Team
ಕ್ರಿಕೆಟ್17 mins ago

Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

Madrasa
ದೇಶ25 mins ago

Madrasa: ಬಕ್ರೀದ್‌ ಹಿನ್ನೆಲೆ ಮದರಸಾದಲ್ಲೇ ಗೋವುಗಳ ಬಲಿ; ನೂರಾರು ಹಿಂದುಗಳಿಂದ ದಾಳಿ, ಸೆಕ್ಷನ್‌ 144 ಜಾರಿ!

Actor Darshan teacher Addanda Cariappa sad on arrested darshan
ಸಿನಿಮಾ26 mins ago

Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!

Shivraj Chouhan
ವೈರಲ್ ನ್ಯೂಸ್40 mins ago

Shivraj Chouhan: ರೈಲಿನಲ್ಲಿ ಜನ ಸಾಮಾನ್ಯರಂತೆ ಪ್ರಯಾಣಿಸಿ ಸರಳತೆ ಮೆರೆದ ಶಿವರಾಜ್‌ ಸಿಂಗ್‌ ಚೌಹಾಣ್‌; ಸಚಿವರ ನಡೆಗೆ ವ್ಯಾಪಕ ಪ್ರಶಂಸೆ

Electric shock
ಚಿಕ್ಕಮಗಳೂರು53 mins ago

Electric shock : ವಸತಿ ಶಾಲೆ ಆವರಣದಲ್ಲಿ ಕರೆಂಟ್‌ ಶಾಕ್‌ನಿಂದ ಬಾಲಕ ಸಾವು; 8 ಮಂದಿ ಅಮಾನತು

Grand Prix 2024 Competition
ಕ್ರೀಡೆ56 mins ago

Grand Prix 2024 Competition: ಬೆಳ್ಳಿ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್

Actor Darshan case pavithra Gowda manager Arrest
ಸ್ಯಾಂಡಲ್ ವುಡ್1 hour ago

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

Gold Rate Today
ಚಿನ್ನದ ದರ1 hour ago

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Tata Motors SUV Tata Nexon 7th Anniversary Benefit up to Rs 1 lakh for customers
ವಾಣಿಜ್ಯ2 hours ago

Tata Motors: ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ; ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಉಳಿತಾಯ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ11 mins ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ22 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌