White hair trend | ನಾವಿರೋದೇ ಹೀಗೆ! ತಲೆಯಲ್ಲಿ ಮೂಡುವ ಬೆಳ್ಳಿಕೂದಲೆಂಬ ಆತ್ಮವಿಶ್ವಾಸ! - Vistara News

ಫ್ಯಾಷನ್

White hair trend | ನಾವಿರೋದೇ ಹೀಗೆ! ತಲೆಯಲ್ಲಿ ಮೂಡುವ ಬೆಳ್ಳಿಕೂದಲೆಂಬ ಆತ್ಮವಿಶ್ವಾಸ!

ತಲೆಯಲ್ಲಿ ಮೂಡುವ ಬೆಳ್ಳಿಕೂದಲನ್ನು ಅಡಗಿಸಿಡುವ ಕಾಲ ಒಂದಿತ್ತು. ರಾಜಾರೋಷವಾಗಿ ಕಾಣಿಸುವ, ಅದೇ ಒಂದು ಟ್ರೆಂಡ್‌ ಆಗಿರುವ ಕಾಲ ಇದೀಗ.

VISTARANEWS.COM


on

white hair trend
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೂ, ವಯಸ್ಸಾಗುವ ಮುನ್ನವೇ ಕೂದಲು ನೆರೆಯತೊಡಗುತ್ತದೆ. ೩೦ ದಾಟುವಾಗಲೇ ಒಂದೊಂದೇ ಕರಿಗೂದಲು ಬೆಳ್ಳಿಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಿರುವ ಅತಿಯಾದ ಕೆಲಸದ ಒತ್ತಡ, ಸ್ಥಳ ಬದಲಾವಣೆ, ನಗರ ಪ್ರದೇಶದ ನೀರು, ತಲೆಗೆ ಹೆಚ್ಚು ರಾಸಾಯನಿಕಯುಕ್ತ ಕ್ರೀಮು ಹಾಗೂ ಸ್ಟೈಲಿಂಗ್‌ ಪ್ರಾಡಕ್ಟ್‌ಗಳ ಬಳಕೆ ಹೀಗೆ ಸಣ್ಣ ವಯಸ್ಸಿಗೆ ಕೂದಲು ನೆರೆಯಲು ಕಾರಣ ಹಲವು. ಬಹಳಷ್ಟು ಮಂದಿ ಬಣ್ಣಗಳ ಮೊರೆ ಹೋಗಿ ಬಣ್ಣ, ಮೆಹೆಂದಿ ಹೀಗೆ ನಾನಾ ಪ್ರಯೋಗಗಳನ್ನು ಮಾಡಿದರೆ, ಇನ್ನೂ ಕೆಲವರು ತಮ್ಮ ನೈಸರ್ಗಿಕ ನೆರೆಗೂದಲನ್ನು ಹಾಗೆಯೇ ಇರಲು ಬಿಡುವವರೂ ಇದ್ದಾರೆ. ಇತ್ತೀಚೆಗೆ, ಕಪ್ಪು ಬಿಳುಪಿನ ಮಿಶ್ರಣವಾದ ಸಾಲ್ಟ್‌ ಅಂಡ್‌ ಪೆಪ್ಪರ್‌ ಸ್ಟೈಲ್‌ ಹಾಗೂ ಬೆಳ್ಳಿ ಕೂದಲನ್ನು ಹಾಗೆಯೇ ಇರಗೊಳಿಸುವ ಟ್ರೆಂಡ್‌ ಕೂಡಾ ಈಗ ಚಾಲ್ತಿಯಲ್ಲಿದೆ!

ಕೆಂಚುಕೂದಲು, ಬಣ್ಣದ ಕೂದಲು, ಹೊಂಬಣ್ಣದ ಕೂದಲು, ಬಣ್ಣ ಹಾಕಿದ ಕೂದಲು, ಕಡುಗಪ್ಪು ಕೂದಲು ಹೀಗೆ ಬಹುತೇಕ ಎಲ್ಲ ಬಣ್ಣಗಳನ್ನು ಹೇಗೆ ಸೌಂದರ್ಯದ ಪ್ರತೀಕ ಎಂದು ಭಾವಿಸುತ್ತಾರೋ, ಹಾಗೆಯೇ ಬಿಳಿಗೂದಲನ್ನೂ ಸೌಂದರ್ಯದ ಭಾಗವಾಗಿ ಏಕೆ ಪರಿಗಣಿಸುವುದಿಲ್ಲ ಎಂಬುದು ಬಿಳಿಗೂದಲ ಮಂದಿಯ ನೇರ ಪ್ರಶ್ನೆ. ಬಿಳಿಕೂದಲಲ್ಲೂ ಸೌಂದರ್ಯವಿದೆ, ಬಣ್ಣ ಯಾಕೆ ಹಾಕಬೇಕು, ಹಾಗೆಯೇ ಇರಬಿಟ್ಟರೆ ಚಂದ ಕಾಣಿಸುತ್ತದೆಯಲ್ಲವೇ ಎಂಬ ವಾದ ಅವರದ್ದು.

ಬಹಳಷ್ಟು ಮಂದಿ, ʻಬಣ್ಣ ಹಾಕುವುದನ್ನು ನಾವು ಬಿಟ್ಟಿದ್ದೇವೆ. ಇನ್ನು ಏನಿದ್ದರೂ, ನಾವಿರೋದೇ ಹೀಗೆ, ಹೀಗೆಯೇ ನಾವು ಚಂದವಿದ್ದೇವೆʼ ಎಂದು ಧೈರ್ಯದಿಂದ ಬಿಳಿಕೂದಲ ಸ್ಮಾರ್ಟ್‌ ಲುಕ್ಕನ್ನು ಜಗತ್ತಿನ ಮುಂದಿಡುತ್ತಿದ್ದಾರೆ.

ಕೂದಲು ಬೆಳ್ಳಗಾಗುವುದೆಂದರೆ, ನೈಸರ್ಗಿಕವಾಗಿ ನಮಗೆ ವಯಸ್ಸಾಗುತ್ತಿದೆ, ಹಾಗೂ ನಾವು ಈ ಪ್ರಕ್ರಿಯೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ ಎಂದು ಇಂದು ಜಗತ್ತಿಗೆ ಧೈರ್ಯವಾಗಿ ಹೇಳಬಯಸುವ ಮಂದಿ ಹೆಚ್ಚಾಗುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಕೂದಲನ್ನು ಕಪ್ಪಾಗಿಸಿಕೊಂಡು ಬಣ್ಣ ಹಚ್ಚಿಕೊಂಡು ಹೊರಗೆ ಕಾಲಿಡುತ್ತಿದ್ದ ಮಂದಿ, ನಾನಿರುವುದೇ ಹೀಗೆ ಎಂದು ಮಿರಮಿರ ಮಿಂಚುವ ಬಿಳಿ ಕೂದಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಳಿಕೂದಲನ್ನು ಹಾಗೆಯೇ ಬಿಡುವುದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಕೂದಲಿಗೆ ಬಣ್ಣ ಹಾಕುವ ಪ್ರಕ್ರಿಯೆಯಲ್ಲಿ ನಿಮ್ಮ ಕೂದಲ ಬೇರಿಗೆ ರಾಸಾನಿಕಯುಕ್ತ ಬಣ್ಣ ಹಾಕಬೇಕಾಯಿತು ಎಂಬ ಕೊರಗು ಇರುವುದಿಲ್ಲ. ಬಿಳಿ ಕೂದಲು ಎಂದರೆ ಧೈರ್ಯ, ಆತ್ಮವಿಶ್ವಾಸ. ತನ್ನ ಕೂದಲು ಬೆಳ್ಳಗಾಗಿದೆ ಹಾಗೂ ಅದರ ಬಗ್ಗೆ ನನಗಾವ ಚಿಂತೆಯೂ ಇಲ್ಲ, ಬದಲಾಗಿ ಹೆಮ್ಮೆಯಿದೆ ಎನ್ನುವ ಆತ್ಮವಿಶ್ವಾಸದ ಖದರ್ರೇ ಬೇರೆ! ಬಣ್ಣದ ಲೋಕದಿಂದ ಹೊರಬಂದು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಇದು ಮೊದಲ ಮೆಟ್ಟಿಲು ಕೂಡಾ.‌

ಇದನ್ನೂ ಓದಿ | Weekend Style| ಟ್ರೆಂಡ್‌ಗೆ ತಕ್ಕಂತೆ ಫ್ಯಾಷನ್ ಪಾಲಿಸುವ ದೀಪ್ತಿ ಮೋಹನ್

ನಿಜವಾಗಿ ನೋಡಿದರೆ, ಕೂದಲಿಗೆ ಬಣ್ಣ ನೀಡುವ ಮೆಲನಿನ್‌ ಪಿಗ್ಮೆಂಟ್‌ ನಿಧಾನವಾಗಿ ಮಾಯವಾಗಿ, ಕೂದಲು ಪಾರದರ್ಶಕವಾಗಿ ಬಿಡುತ್ತದೆ. ಹೀಗೆ ಪಾರದರ್ಶಕವಾದ ಕೂದಲೇ ಬಿಳಿಗೂದಲು. ಮೆಲನಿನ್‌ ತನ್ನ ಉತ್ಪಾದನೆಯನ್ನು ನಿಲ್ಲಿಸಿಬಿಟ್ಟಾಗ ಕೂದಲು ಬಿಳಿಯಾಗುತ್ತದೆ. ಈ ಮೆಲನಿನ್‌ ಕೂದಲಿಗೆ ಬಣ್ಣ ನೀಡುತ್ತದೆ. ಸಾಮಾನ್ಯವಾಗಿ ವಯಸ್ಸಾದಾಗ ಇದು ನಡೆಯುತ್ತದೆ. ಆದರೆ ಇದಕ್ಕೆ ವಂಶವಾಹಿನಿಗಳು, ಒತ್ತಡ, ಹಾರ್ಮೋನು ಕೂಡಾ ಈ ಮೆಲನಿನ್‌ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಈ ಬಗ್ಗೆ ಕೆಲವು ತಪ್ಪು ನಂಬಿಕೆಗಳೂ ಇವೆ. ಕಪ್ಪಾಗಿ ದಟ್ಟವಾಗಿ ಇರುವ ಕೂದಲು ಬೇಗ ಬಿಳಿಯಾಗುತ್ತದೆ ಎಂದು ಆಡುಮಾತಿನಲ್ಲಿ ಜನರ ಬಾಯಿಂದ ಬಾಯಿಗೆ ಹರಿದು ಬಂದ ಪ್ರಾಚೀನ ನಂಬಿಕೆ. ಆದರೆ, ಇದು ಹಾಗಲ್ಲ. ದಟ್ಟ ಕಪ್ಪು ಕೂದಲಿನೆಡೆಯಲ್ಲಿ ಎರಡು ಕೂದಲು ಬೆಳ್ಳಗಾದರೂ ಎದ್ದು ಕಾಣುವ ಕಾರಣ ಬೇಗ ಬಿಳಿಯಾದಂತೆ ಅನಿಸುತ್ತದೆಯೇ ಹೊರತು, ಈ ನಂಬಿಕೆಯಲ್ಲಿ ಹುರುಳಿಲ್ಲ.

ಹಾಗಂತ ಕೂದಲು ಬೆಳ್ಳಗಾಗಿದೆ, ಇನ್ನು ಹೆಚ್ಚು ಕಾಳಜಿಯ ಅಗತ್ಯವಿಲ್ಲ ಎಂದು ಅಂದುಕೊಳ್ಳುವುದು ತಪ್ಪು. ಬಿಳಿಕೂದಲಿಗೂ ಕಪ್ಪು ಕೂದಲ ಹಾಗೆಯೇ ಕಾಳಜಿ ಮಾಡಬೇಕಾಗುತ್ತದೆ. ಉತ್ತಮವಾದ ಹಾನಿಕಾರಕ ರಾಸಾಯನಿಕ ರಹಿತ ಶಾಂಪೂವಿಂದ ತೊಳೆದುಕೊಂಡು ಕಂಡೀಶನ್‌ ಕೂಡಾ ಮಾಡಬೇಕು. ಧೂಳು, ಮಾಲಿನ್ಯಕ್ಕೆ ಪದೇ ಪದೇ ಒಡ್ಡುವ ಬಿಳಿ ಕೂದಲು ಬೇಗ ಹಳದಿ ಬಣ್ಣಕ್ಕೆ ತಿರುಗುವ ಸಮಸ್ಯೆಯೂ ಕಾಣಬಹುದು. ಹಾಗಾಗಿ ಕಾಳಜಿ ಅತೀ ಅಗತ್ಯ.

ಬಿಳಿಕೂದಲ ಜೊತೆಗೆ ಟ್ರೆಂಡೀ ಆಗಿರುವುದೂ ಬಹಳ ಮುಖ್ಯ. ಕೂದಲು ಬೆಳ್ಳಗಾಯಿತಲ್ಲ, ಇನ್ನೇನು ಸ್ಟೈಲ್‌ ಮಾಡಿದರೂ ಏನು ಪ್ರಯೋಜನ ಎಂಬ ನಿರಾಶಾವಾದಿತನ ಖಂಡಿತ ನಿಮ್ಮನ್ನು ಆಕರ್ಷಕ ವ್ಯಕ್ತಿಯಾಗಿ ಸಮಾಜಕ್ಕೆ ತೋರಿಸಲಾರದು. ಟ್ರೆಂಡೀ ಲುಕ್‌, ಚಂದದ ಹೇರ್‌ಕಟ್‌ ಬಿಳಿಕೂದಲಿಗೆ ಚೆನ್ನಾಗಿ ಒಪ್ಪುತ್ತದೆ. ಚಿಕ್ಕದಾಗಿ ಚೊಕ್ಕವಾಗಿ ಕತ್ತಿರಿಸಕೊಂಡ ಬಿಳಿಕೂದಲು ಆತ್ಮವಿಶ್ವಾಸಿ ಮಹಿಳೆಯಾಗಿ ಸ್ಮಾರ್ಟ್‌ ಆಗಿ ಕಾಣಿಸುವಂತೆ ಮಾಡುತ್ತದೆ. ಮಹಿಳೆಯರಿಗಾದರೆ, ಕ್ಲಾಸಿಕ್‌ ಬಾಬ್‌, ಚಾಪ್ಪೀ ಪಿಕ್ಸೀ, ಕರ್ಲೀ ಶಾರ್ಟ್‌ ಕಟ್‌, ಈಸೀ ಲೋಬ್‌ ಮತ್ತಿತರ ಕಟ್‌ಗಳು ಸುಂದರಬಾಗಿ ಕಾಣಿಸುತ್ತದೆ. ಪುರುಷರಿಗೂ ಆಕರ್ಷಕವಾಗಿ ಕಾಣುವ, ಸಾಲ್ಟ್‌ ಎಂಡ್‌ ಪೆಪ್ಪರ್‌ ಲುಕ್‌ ಹಾಗೂ ಕಂಪ್ಲೀಟ್‌ ಗ್ರೇ ಲುಕ್‌ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ, ಗಡ್ಡ ಹಾಗೂ ಮೀಸೆಯ ಲುಕ್‌ಗೆ ಅನುಗುಣವಾಗಿ ಸ್ಟೈಲ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ | ಮಿಸೆಸ್‌ ಇಂಡಿಯಾ ಕರ್ನಾಟಕ 2022 ಫ್ಯಾಷನ್‌ ಶೋ: ಏಜ್‌ ಇಸ್‌ ಜಸ್ಟ್‌ ನಂಬರ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಮ್ಯಾಂಗೋ ನೇಲ್‌ ಆರ್ಟ್ (Mango Nail Art) ಟ್ರೆಂಡಿಯಾಗಿದೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.

VISTARANEWS.COM


on

Mango Nail Art
ಚಿತ್ರಕೃಪೆ: ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮ್ಯಾಂಗೋ ನೇಲ್‌ ಆರ್ಟ್ ಸದ್ಯ ನೇಲ್‌ ಆರ್ಟ್ (Mango Nail Art) ಲೋಕದಲ್ಲಿ ಟ್ರೆಂಡಿಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಾನಾ ಬಗೆಯ ಮಾವಿನ ಹಣ್ಣಿನ ಚಿತ್ತಾರಗಳು ನೇಲ್‌ ಆರ್ಟ್ ಡಿಸೈನ್‌ನಲ್ಲಿ ಮೂಡಿ ಬಂದಿದ್ದು, ಬ್ಯೂಟಿ ಪ್ರಿಯರು ತಮ್ಮ ಊಹೆಗೆ ತಕ್ಕಂತೆ ಬಗೆಬಗೆಯ ಡಿಸೈನ್‌ನಲ್ಲಿ ಇವುಗಳ ಚಿತ್ತಾರವನ್ನು ಬೆರಳುಗಳ ಉಗುರುಗಳ ಮೇಲೆ ಮೂಡಿಸತೊಡಗಿದ್ದಾರೆ.

Mango Nail Art

ಸೀಸನ್‌ಗೆ ಬಂತು ಮಾವಿನ ಚಿತ್ತಾರ

“ನೇಲ್‌ ಆರ್ಟ್ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಯಾ ಸೀಸನ್‌ನಲ್ಲಿ ಪ್ರಚಲಿತದಲ್ಲಿರುವ ಟಾಪಿಕ್‌ ಆಗಬಹುದು, ಕಲರ್‌ ಆಗಬಹುದು, ಹಬ್ಬ ಆಗಬಹುದು ಅಥವಾ ಹಣ್ಣು-ತರಕಾರಿಯೂ ಆಗಬಹುದು. ಇನ್ನು ಈ ಸೀಸನ್‌ನಲ್ಲಿ ಎಲ್ಲರಿಗೂ ತಿಳಿದಿರುವಂತೆ ಮಾವಿನ ಹಣ್ಣುಗಳ ಅಬ್ಬರ. ಇದಕ್ಕೆ ಪೂರಕ ಎಂಬಂತೆ, ನಾನಾ ಜಾತಿಯ ಅಂದರೇ, ವೆರೈಟಿ ಮಾವಿನ ಹಣ್ಣಿನ ರೂಪಗಳು ಮಿನಿಯೇಚರ್‌ ರೂಪದಲ್ಲಿ ಉಗುರುಗಳ ಮೇಲೆ ಸಿಂಗಾರಗೊಳ್ಳುತ್ತಿವೆ. ಕೆಲವರು, ನೇಲ್‌ ಪಾರ್ಲರ್‌ಗೆ ಹೋಗಿ ಡಿಸೈನ್‌ ಮಾಡಿಸಿಕೊಂಡರೇ, ಇನ್ನು ಕೆಲವರು ಖುದ್ದು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇಲ್ಲವೇ ತಮ್ಮ ಆಪ್ತರಿಗೆ ಸಹೋದರಿಯರಿಗೆ ತಾವೇ ಬಿಡಿಸುತ್ತಾರೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಪ್ರಕಾರ, ಯಾವುದೇ ಡಿಸೈನ್‌ ಮೂಡಿಸಲು ಕಲಾವಿದರ ಮನಸ್ಸು ಅಗತ್ಯ ಎನ್ನುತ್ತಾರೆ.

Mango Nail Art

ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆರಂಭವಾದ ಟ್ರೆಂಡ್‌

ಈ ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಇದೀಗ ನೇಲ್‌ ಆರ್ಟ್ ಪ್ರಿಯರು ಮ್ಯಾಂಗೋ ನೇಲ್‌ ಆರ್ಟ್ ಚಿತ್ತಾರಗಳಿಗೆ ಮನ ಸೋತಿದ್ದಾರೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್‌ ಇನ್ಫೂಯೆನ್ಸರ್ಸ್ ತಮ್ಮ ನೇಲ್‌ ಆರ್ಟ್‌ಗಳನ್ನು ಪ್ರದರ್ಶಿಸುತ್ತಿರುವುದು ಟ್ರೆಂಡ್‌ಗೆ ಕಾರಣವಾಗಿದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.

Mango Nail Art

ಪ್ರಯೋಗಾತ್ಮಕ ವಿನ್ಯಾಸ

ಇನ್ನು, ಪ್ರಯೋಗಾತ್ಮಕ ಶೇಡ್‌ ಚಿತ್ತಾರ ಮೂಡಿಸಿರುವ ಕೆಲವು ನೇಲ್‌ ಆರ್ಟ್‌ ಪ್ರೇಮಿಗಳು ಸೋಷಿಯಲ್‌ ಮೀಡಿಯಾದ ತಮ್ಮ ಬ್ಯೂಟಿ ಪೇಜ್‌ಗಳಲ್ಲಿ, ಬೆರಳ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಫ್ರೂಟ್ಸ್‌ ನೇಲ್‌ ಆರ್ಟ್‌ ಡಿಸೈನ್‌ನಲ್ಲಿ ಮಾವಿನ ಹಣ್ಣಿನ ಡಿಸೈನ್‌ ಟ್ರೆಂಡಿಯಾಗಿದೆ. ಹಾಗೆಂದು ಇಂಟರ್‌ನ್ಯಾಷನಲ್‌ ಫ್ಯಾಷನ್‌ನಲ್ಲಿ ಸದ್ಯಕ್ಕೆ ಇದು ಇಲ್ಲ. ಈ ಡಿಸೈನ್‌ ಏನಿದ್ದರೂ ನಮ್ಮ ರಾಷ್ಟ್ರದಲ್ಲಿ ಮಾತ್ರ. ಅದರಲ್ಲೂ ಸೌತ್‌ ಇಂಡಿಯಾದಲ್ಲಿ ಎಂಬುದು ಗೊತ್ತಿರಲಿ ಎನ್ನುತ್ತಾರೆ ಡಿಸೈನರ್ಸ್‌.

ಇದನ್ನೂ ಓದಿ: Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಮ್ಯಾಂಗೋ ನೇಲ್‌ ಆರ್ಟ್ ಟಿಪ್ಸ್

  • ಸನ್‌ ಕಲರ್‌ ಹಾಗೂ ಗ್ರೀನ್‌ ನೇಲ್‌ ಕಲರ್‌ ಬಳಸಿ.
  • ಒಂದು ಉಗುರಿಗೆ ಮಾತ್ರ ಡಿಸೈನ್‌ ಮಾಡುವ ಟ್ರೆಂಡ್‌ ಕೂಡ ಇದೆ.
  • ಮ್ಯಾಂಗೋ ಡಿಸೈನ್‌ ಮಾಡುವುದಿದ್ದಲ್ಲಿ ಮೊದಲೇ ಯಾವ ಬಗೆಯದ್ದನ್ನು ಚಿತ್ರಿಸಬೇಕು ಎಂಬುದನ್ನು ಮೊದಲೇ ಡಿಸೈಡ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಇದೀಗ ಎಂಬ್ರಾಯ್ಡರಿ, ಸಿಕ್ವೀನ್ಸ್ ಹಾಗೂ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಆಕರ್ಷಕ ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ. ಏನಿದು ಕಟ್‌ ವರ್ಕ್ ಸೀರೆಗಳು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು (Saree Fashion) ಇಲ್ಲಿ ಡಿಟೇಲ್ಸ್ ನೀಡಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಜರೀನ್‌ ಖಾನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಟ್‌ ವರ್ಕ್ ಬಾರ್ಡರ್‌ ಪಾರ್ಟಿವೇರ್‌ ಸೀರೆಗಳು (Saree Fashion) ಇದೀಗ ಮಾನಿನಿಯರ ಮನ ಗೆದ್ದಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಪಾರ್ಟಿವೇರ್‌ ಡಿಸೈನರ್‌ ಸೀರೆಗಳ ಕೆಟಗರಿಯಲ್ಲಿಬಿಡುಗಡೆಗೊಂಡಿವೆ. “ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಡಿಸೈನ್‌ನಲ್ಲಿ ಅಥವಾ ಹೊಸ ರೂಪದಲ್ಲಿ ಪಾರ್ಟಿವೇರ್‌ ಸೀರೆಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕೆಲವು ಜಗಮಗಿಸುವ ಪ್ರಿಂಟ್ಸ್‌ನಲ್ಲಿ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಡಿಸೆಂಟ್‌ ಲುಕ್‌ ನೀಡುವಂತವು, ಮತ್ತೆ ಕೆಲವು ಪ್ರಿಂಟೆಡ್‌ ಶೈಲಿಯವು ಚಾಲ್ತಿಗೆ ಬರುತ್ತವೆ. ಮಹಿಳೆಯರು ಕೂಡ ತಮ್ಮ ಮನೋಭಿಲಾಷೆಗೆ ತಕ್ಕಂತೆ ಸೀರೆಗಳ ಆಯ್ಕೆ ಮಾಡುತ್ತಾರೆ. ನೋಡಲು ಡಿಸೆಂಟಾಗಿಯೂ ಕಾಣಿಸಬೇಕು. ಹೆಚ್ಚು ಎದ್ದು ಕಾಣುವಂತಹ ಡಿಸೈನ್‌ ಇರಬಾರದು, ಆಕರ್ಷಕ ಡಿಸೈನ್‌ ಕೂಡ ಇರಬೇಕು ಎನ್ನುವವರು ಈ ರೀತಿಯ ಸಾದಾ ಸೀರೆ ಅದರಲ್ಲಿ ಕಟ್‌ ವರ್ಕ್ ಬಾರ್ಡರ್‌ ಇರುವಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆಂದೇ ನಾನಾ ಶೈಲಿಯ ಕಟ್‌ ವರ್ಕ್ ಬಾರ್ಡರ್‌ ಸೀರೆಗಳು ಹಲವು ವಿನ್ಯಾಸದಲ್ಲಿ ಬಂದಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫ ರ್ಟ್ ಜೀವಿತಾ. ಅವರ ಪ್ರಕಾರ, ಈ ಶೈಲಿಯ ಬಾರ್ಡರ್‌ ಸೀರೆಗಳು ಯೂನಿಕ್‌ ಲುಕ್‌ ನೀಡುತ್ತವಂತೆ.

Saree Fashion

ಏನಿದು ಕಟ್‌ ವರ್ಕ್ ಬಾರ್ಡರ್ ಸೀರೆ?

ಅಂಚು ಅಂದರೇ, ಬಾರ್ಡರ್ ಕಟ್‌ ಆಗಿರುವಂತಹ ವಿನ್ಯಾಸಗೊಂಡಿರುವಂತಹ ಶೈಲಿಯಲ್ಲಿರುತ್ತವೆ. ಇತರೇ ಬಾರ್ಡರ್‌ಗಳಂತೆ ಒಂದೇ ಲೈನ್‌ನಲ್ಲಿರುವುದಿಲ್ಲ! ಕೆಲವು ಅಟ್ಯಾಚ್‌ ಆದಂತೆ ಕಾಣಿಸುತ್ತವೆ. ಈ ಕಟ್ವರ್ಕ್ ಡಿಸೈನ್‌ ಇಡೀ ಸೀರೆಯ ಲುಕ್ಕನ್ನು ಬದಲಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Saree Fashion

ಟ್ರೆಂಡಿಯಾಗಿರುವ ಕಟ್‌ ವರ್ಕ್ ಬಾರ್ಡರ್ ಪಾರ್ಟಿವೇರ್‌ ಸೀರೆ

ಇದೀಗ ಬಾರ್ಡರ್‌ನಲ್ಲಿ ಹ್ಯಾಂಡ್‌ ವರ್ಕ್ ಅಥವಾ ಮೆಷಿನ್‌ ವರ್ಕ್ ಇರುವಂತಹ ನಾನಾ ಬಗೆಯ ಎಂಬ್ರಾಯ್ಡರಿ ಡಿಸೈನ್ಸ್, ಬಗೆಬಗೆಯ ಶೇಡ್‌ನ ಅಥವಾ ಮಾನೋಕ್ರೋಮ್‌ ವರ್ಣದ ಸಿಕ್ವೀನ್ಸ್ ಹಾಗೂ ವೆರೈಟಿ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

Saree Fashion

ಕಟ್‌ ವರ್ಕ್ ಬಾರ್ಡರ್ ಸೀರೆ ಬಗ್ಗೆ ತಿಳಿದಿರಬೇಕಾದ 3 ಸಂಗತಿಗಳು

  • ಜಾರ್ಜೆಟ್ ಸೀರೆಯಲ್ಲಿ ಕಟ್‌ ವರ್ಕ್ ಡಿಸೈನ್ಸ್ ಹೆಚ್ಚು ಹೈಲೈಟಾಗುತ್ತವೆ.
  • ಸೀರೆಯ ಫ್ಯಾಬ್ರಿಕ್‌ ನೋಡಿ, ಖರೀದಿಸುವುದು ಉತ್ತಮ.
  • ಸಾದಾ ಸೀರೆಯಲ್ಲಾದಲ್ಲಿ ಈ ಕಟ್‌ ವರ್ಕ್ ಡಿಸೈನ್ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

Continue Reading

ಫ್ಯಾಷನ್

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

ಜೀನ್ಸ್ ಪ್ಯಾಂಟ್‌ (Jeans Fashion) ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ ನೀಡಬೇಕೆಂದು ಬಯಸುತ್ತಿದ್ದೀರಾ! ಹಾಗಾದಲ್ಲಿ ಈ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ ಎನ್ನುವ ಸ್ಟೈಲಿಸ್ಟ್‌ಗಳು ಹುಡುಗಿಯರಿಗೆ ಇಲ್ಲಿ 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Jeans Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೀನ್ಸ್ ಪ್ಯಾಂಟ್‌ಗೆ (Jeans Fashion) ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಟ್ರೆಂಡ್‌ ಇದೀಗ ಚಾಲ್ತಿಯಲ್ಲಿದೆ. ನೋಡಲು ಮಾಡರ್ನ್ ಲುಕ್‌ ಜೊತೆಜೊತೆಗೆ ದೇಸಿ ಔಟ್‌ಫಿಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಇದೀಗ ಜೆನ್‌ ಜಿ ಹುಡುಗಿಯರಲ್ಲಿ ಹೆಚ್ಚಾಗಿದೆ. “ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇಂದಿನ ಫ್ಯಾಷನ್‌ನಲ್ಲ! ದಶಕಗಳಿಂದಲೂ ಇದೆ. ಆದರೆ, ಆಗಾಗ್ಗೆ ಮರೆಯಾಗಿ ಹೊಸ ರೂಪದಲ್ಲಿ ಬಿಡುಗಡೆಗೊಳ್ಳುತ್ತಿರುತ್ತದೆ. ಸಿನಿಮಾ ತಾರೆಯರಿಂದ ಮರು ಹುಟ್ಟು ಪಡೆಯುತ್ತಿರುತ್ತದೆ” ಎನ್ನುತ್ತಾರೆ ಪ್ಯಾಷನಿಸ್ಟ್‌ಗಳು. ಇನ್ನು, ನೀವೂ ಕೂಡ ಜೀನ್ಸ್ ಪ್ಯಾಂಟ್‌ ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದೀರಾ! ಹಾಗಾದಲ್ಲಿ, ಯೋಚಿಸಬೇಡಿ, ಈ ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ನೀವೂ ಕೂಡ ಮಾಡಿ ಎನ್ನುವ ಸ್ಟೈಲಿಸ್ಟ್ ಜಾನ್‌ ಒಂದಿಷ್ಟು ಸಿಂಪಲ್‌ ಮಿಕ್ಸ್ ಮ್ಯಾಚ್‌ ಐಡಿಯಾ ನೀಡಿದ್ದಾರೆ.

Jeans Fashion

ಆಕರ್ಷಕ ಎಥ್ನಿಕ್‌ ಜಾಕೆಟ್‌

ನೀವು ಧರಿಸುವ ಯಾವುದೇ ಜಿನ್ಸ್ ಪ್ಯಾಂಟ್‌ಗೆ ಫಾರ್ಮಲ್‌ ಅಥವಾ ವೈಟ್‌ ಟೀ ಶರ್ಟ್ ಧರಿಸಿ. ಅದರ ಮೇಲೆ ರಾಜಸ್ಥಾನಿ ಶೈಲಿಯ ಎಥ್ನಿಕ್‌ ಟಚ್‌ ನೀಡುವ ವೇಸ್ಟ್ಕೋಟ್‌ ಆಯ್ಕೆ ಮಾಡಿ ಧರಿಸಿ. ಇದು ನೋಡಲು ಕ್ಲಾಸಿ ಲುಕ್‌ ನೀಡುತ್ತದೆ. ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ಸುಲಭವಾಗಿ ನೀಡುತ್ತದೆ.

Jeans Fashion

ಸ್ಲಿವ್‌ಲೆಸ್‌ ಟ್ರೆಡಿಷನಲ್‌ ಜಾಕೆಟ್‌

ಟ್ರೆಡಿಷನಲ್‌ ಲುಕ್‌ ನೀಡುವ ಯಾವುದೇ ಡಿಸೈನ್‌ನ ಅಥವಾ ಪ್ರಿಂಟ್ಸ್‌ನ ಸ್ಲಿವ್‌ಲೆಸ್‌ ಜಾಕೆಟ್‌ ಚೂಸ್‌ ಮಾಡಿ. ಧರಿಸಿರು ಜೀನ್ಸ್ ಪ್ಯಾಂಟ್‌ ಮೇಲೆ ಧರಿಸಿ. ಆದರೆ, ಈ ಜಾಕೆಟ್‌ ಒಳಗೆ ಧರಿಸುವ ಟೀ ಶರ್ಟ್ ಅಥವಾ ಶರ್ಟ್ ಮಾತ್ರ ಲೈಟ್‌ ಕಲರ್‌ನದ್ದಾಗಬೇಕು. ಕಾಂಟ್ರಾಸ್ಟ್ ಶೇಡ್‌ನದ್ದನ್ನು ಬಳಸಬಹುದು.

Jeans Fashion

ಕ್ವಿಲ್ಟೆಡ್‌ ಜಾಕೆಟ್‌

ಹ್ಯಾಂಡ್‌ಮೇಡ್‌ ಕ್ವಿಲ್ಟೆಡ್‌ ಜಾಕೆಟ್‌ಗಳು ನಾನಾ ಶೈಲಿಯಲ್ಲಿ ಲಭ್ಯ. ಬಟನ್‌ ಹಾಗೂ ಟೈಯಿಂಗ್‌ ಡಿಸೈನ್‌ನಲ್ಲೂ ದೊರೆಯುವ ಈ ಜಾಕೆಟ್‌ಗಳನ್ನು ಜೀನ್ಸ್‌ ಪ್ಯಾಂಟ್‌ ಹಾಗೂ ಡಾರ್ಕ್ ಟಾಪ್‌ ಮೇಲೆ ಧರಿಸಬಹುದು. ಇದು ಪಕ್ಕಾ ಟ್ರೆಡಿಷನಲ್‌ ಪ್ಲಸ್‌ ವೆಸ್ಟರ್ನ್ ಲುಕ್‌ ನೀಡುವಲ್ಲಿ ಸಹಕಾರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Continue Reading

ಫ್ಯಾಷನ್

Fashion Show News: ಬಿಎಂಎಸ್‌ ಕಾಲೇಜಿನಲ್ಲಿ ನೋಡುಗರನ್ನು ಸೆಳೆದ ವಿದ್ಯಾರ್ಥಿಗಳ ಫ್ಯಾಷನ್‌ ಶೋ

ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಥೀಮ್‌ ಆಧಾರಿತ ಫ್ಯಾಷನ್‌ ಶೋನ (Fashion Show News) ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡ ಹುಡುಗಿಯರು ಹಾಗೂ ಹುಡುಗರು ಪ್ರೊಫೆಷನಲ್‌ ಮಾಡೆಲ್‌ಗಳಂತೆ ವಾಕ್‌ ಮಾಡಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Show news
ಚಿತ್ರಗಳು: ಬಿಎಂಎಸ್‌ ಕಾಲೇಜಿನಲ್ಲಿ ನಡೆದ ಫ್ಯಾಷನ್‌ ಶೋನ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲೇಜಿನ ಹುಡುಗಿಯರು ಹಾಗೂ ಹುಡುಗರು ರ‍್ಯಾಂಪ್‌ (Fashion Show News) ಮೇಲೆ ಹೆಜ್ಜೆ ಹಾಕುತ್ತಿದ್ದರೇ, ನೋಡುಗರ ಕಣ್ಣು ಕುಕ್ಕುವಂತಿತ್ತು. ಒಬ್ಬೊಬ್ಬರದು ಒಂದೊಂದು ಬಗೆಯ ಥೀಮ್‌! ಆ ಥೀಮ್‌ಗೆ ತಕ್ಕಂತೆ ಕಾಸ್ಟ್ಯೂಮ್ಸ್! ಇವನ್ನು ಧರಿಸಿದ ಯಂಗ್‌ಸ್ಟರ್ಸ್ ವೇದಿಕೆ ಮೇಲೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿ ನೆರೆದಿದ್ದ ಕಾಲೇಜಿನ ಆಡಳಿತ ವರ್ಗವನ್ನು ಮಾತ್ರವಲ್ಲದೇ, ವಿದ್ಯಾರ್ಥಿಗಳ ಮನ ಗೆದ್ದರು. ಅಂದಹಾಗೆ, ಈ ಫ್ಯಾಷನ್‌ ಶೋ ನಡೆದದ್ದು, ಉದ್ಯಾನನಗರಿಯ ಬಿ ಎಂ ಎಸ್‌ ಕಾಲೇಜಿನ ಆವರಣದಲ್ಲಿ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದ, ಈ ಫ್ಯಾಷನ್‌ ಶೋ ನಾನಾ ರೌಂಡ್‌ಗಳಲ್ಲಿ ನಡೆಯಿತು.

Fashion Show news

ಆದರ್ಶ್ ಜೈನ್‌ ಕೊರಿಯಾಗ್ರಾಫಿ & ಜಡ್ಜ್

ಕೊರಿಯಾಗ್ರಾಫರ್‌ ಹಾಗೂ ಫ್ಯಾಷನ್‌ ಶೋಗಳ ಡೈರೆಕ್ಟರ್‌ ಆದರ್ಶ್ ಜೈನ್‌ ಬಿ ಎಂ ಎಸ್‌ ಕಾಲೇಜಿನ ಫ್ಯಾಷನ್‌ ಶೋಗಳಿಗೆ ಜ್ಯೂರಿಯಲ್ಲಿದ್ದರು. ಇವರೊಂದಿಗೆ ಮಾಡೆಲ್‌ ಕಾವ್ಯಾ ಕೂಡ ಜ್ಯೂರಿ ಪಾನೆಲ್‌ನಲ್ಲಿದ್ದರು. ರ‍್ಯಾಂಪ್‌ ಮೇಲೆ ವಾಕ್‌ ಮಾಡಿದ ಕಾಲೇಜಿನ ಗ್ರೂಪ್‌ಗಳಿಗೆ ಪ್ರಶಂಸೆಯ ಸುರಿಮಳೆಯೊಂದಿಗೆ ಅವರ ರ‍್ಯಾಂಪ್‌ ವಾಕ್‌, ಟ್ಯಾಲೆಂಟ್‌ ಹಾಗೂ ಕಾಸ್ಟ್ಯೂಮ್ಸ್ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಜಡ್ಜ್‌ ಮಾಡಿದರು.

Fashion Show news

ಆದರ್ಶ್ ಜೈನ್‌ ಫ್ಯಾಷನ್‌ ಟಾಕ್‌

ವಿದ್ಯಾರ್ಥಿಗಳ ಈ ಫ್ಯಾಷನ್‌ ಶೋ ನೋಡಲು, ಪಕ್ಕಾ ಪ್ರೊಫೆಷನಲ್‌ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌ನಂತಿತ್ತು. ಆಯೋಜನೆ ಕೂಡ ಪರ್ಫೆಕ್ಟಾಗಿತ್ತು. ಇಂದು ನಡೆದ ವಿದ್ಯಾರ್ಥಿಗಳು ಮುಂದೊಮ್ಮೆ ಮಾಡೆಲ್‌ಗಳಾಗಿ ಯಶಸ್ವಿಯೂ ಆಗಬಹುದು. ಇದು ಅವರೆಲ್ಲರ ಮೊದಲ ಹೆಜ್ಜೆ” ಎಂದು ಫ್ಯಾಷನ್‌ ಕೊರಿಯಾಗ್ರಾಫರ್‌ ಆದರ್ಶ್ ಜೈನ್‌ ಹೇಳಿದರು.

Fashion Show news

ಸಂಸ್ಕೃತಿ-ಫ್ಯಾಷನ್‌ ಶೋ ಪ್ಲಸ್‌ ಟ್ಯಾಲೆಂಟ್‌ ಶೋ

ಫ್ಯಾಷನ್‌ ಶೋ ಮಾತ್ರವಲ್ಲದೇ, ಇದರೊಂದಿಗೆ ಹುಡುಗ-ಹುಡುಗಿಯರ ಟ್ಯಾಲೆಂಟ್‌ ಕಂಡು ಹಿಡಿಯುವ ಟ್ಯಾಲೆಂಟ್‌ ಶೋವನ್ನು ಜೊತೆಜೊತೆಗೆ ಆಯೋಜಿಸಲಾಗಿತ್ತು. ಸಂಸ್ಕೃತಿ ಹೆಸರಿನಲ್ಲಿ ನಡೆದ ಈ ಟ್ಯಾಲೆಂಟ್‌ ಶೋನಲ್ಲಿ ಕಾಲೇಜು ಹುಡುಗ-ಹುಡುಗಿಯರು ನಾನಾ ಕಾಯ್ರಕ್ರಮಗಳನ್ನು ನೀಡಿದರು. ಎಲ್ಲಾ ಪ್ರೋಗ್ರಾಮ್‌ಗಳು ಮೆಚ್ಚುಗೆ ಪಡೆದವು.

Fashion Show news

ಫ್ಯಾಷನ್‌ ಶೋ ವಿಜೇತರು

ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಟೀಮ್‌ನ ಫ್ಯಾಷನ್‌ ರ‍್ಯಾಂಪ್‌ ವಾಕ್‌ ಅತ್ಯಾಕರ್ಷಕವಾಗಿ ಮೂಡಿ ಬಂದಿತು. “ಸ್ಕಲ್ಪ್ಚರ್‌ ಆಫ್‌ ಬ್ಲೈಂಡ್‌ ಗಾಡೆಸ್‌ಆಫ್‌ ಜಸ್ಟೀಸ್‌ “ ಥೀಮ್‌ಗೆ ಹೊಂದುವಂತೆ ಅವರೆಲ್ಲರ ವಾಕ್‌, ಕಾಸ್ಟ್ಯೂಮ್ಸ್ ಸೇರಿದಂತೆ ಎಲ್ಲವೂ ಫಸ್ಟ್ ಕ್ಲಾಸ್‌ ಲಿಸ್ಟ್‌ಗೆ ಸೇರಿತು. ಪರಿಣಾಮ, ಈ ಕಾಲೇಜಿನ ಏರಿಯನ್‌ ಟೀಮ್‌ ಮೊದಲ ಸ್ಥಾನ ಗಳಿಸಿತು. ಬಿಎಂಎಸ್‌ ಆರ್ಕಿಟೆಕ್ಚರ್‌ ಎರಡನೇ ರನ್ನರ್‌ ಅಪ್‌ ಆಗಿ ಸ್ಥಾನ ಗಳಿಸಿತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading
Advertisement
Rain News
ಕರ್ನಾಟಕ16 mins ago

Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ; ಹೊತ್ತಿ ಉರಿದ ತೆಂಗಿನ ಮರ

Jos Butler
ಪ್ರಮುಖ ಸುದ್ದಿ17 mins ago

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

Wagah Border
ದೇಶ36 mins ago

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Virat kohli
ಪ್ರಮುಖ ಸುದ್ದಿ45 mins ago

Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

FSSAI Warning
ಆರೋಗ್ಯ1 hour ago

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

fraud case
ಕರ್ನಾಟಕ1 hour ago

Fraud Case: ಷೇರು ಮಾರ್ಕೆಟ್‌ನಲ್ಲಿ ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿ ದಂಪತಿ ಪರಾರಿ!

Constables
ದೇಶ2 hours ago

Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Rohit Sharma
ಕ್ರೀಡೆ2 hours ago

Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ2 hours ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌