Heeraben Modi Passes Away | ಶತಾಯುಷಿ ತಾಯಿಯ ಪ್ರೀತಿಯ ಪುತ್ರ ನರೇಂದ್ರ ಮೋದಿ; ಖುಷಿಯ ಕ್ಷಣದಲ್ಲೆಲ್ಲ ಅಮ್ಮ ಬೇಕಿತ್ತು ಅವರಿಗೆ - Vistara News

ದೇಶ

Heeraben Modi Passes Away | ಶತಾಯುಷಿ ತಾಯಿಯ ಪ್ರೀತಿಯ ಪುತ್ರ ನರೇಂದ್ರ ಮೋದಿ; ಖುಷಿಯ ಕ್ಷಣದಲ್ಲೆಲ್ಲ ಅಮ್ಮ ಬೇಕಿತ್ತು ಅವರಿಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಹೀರಾಬೆನ್​ ನಡುವಿನ ಬಾಂಧವ್ಯವನ್ನು ಇಡೀ ದೇಶ ನೋಡಿದೆ. ದೇಶಕ್ಕೆ ಪ್ರಧಾನಿಯಾದರೂ ತನ್ನಮ್ಮನಿಗೆ ವಿಧೇಯ ಪುತ್ರನೇ ಅವರು..

VISTARANEWS.COM


on

Bond Between PM Narendra Modi And His Mother Heeraben
ಪ್ರಧಾನಿ ಮೋದಿ ಮತ್ತು ತಾಯಿ ಹೀರಾಬೆನ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅಮ್ಮನ ನಡುವಿನ ಬಾಂಧವ್ಯವನ್ನು ಇಡೀ ವಿಶ್ವ ನೋಡಿದೆ. ನರೇಂದ್ರ ಮೋದಿ ಅವರು ತನ್ನ ಅಮ್ಮನೊಟ್ಟಿಗೆ ಅದೆಷ್ಟು ಭಾವನಾತ್ಮಕವಾಗಿ ಹೊಂದಿಕೊಂಡಿದ್ದರು, ಅವರೆಷ್ಟು ವಿಧೇಯ ಪುತ್ರನಾಗಿದ್ದರು ಎಂಬುದೂ ನಮಗೆಲ್ಲ ಗೊತ್ತಿದೆ. ಅಂಥ ಅಮ್ಮನನ್ನು ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದುಕೊಂಡಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಹೀರಾಬೆನ್​ ಇಂದು ಮುಂಜಾನೆ ನಿಧನಹೊಂದಿದ್ದಾರೆ. ನರೇಂದ್ರ ಮೋದಿ ತನ್ನಮ್ಮನಿಗೆ ಅದೆಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು, ತಮ್ಮ ವಿಶೇಷ ಕ್ಷಣಗಳಲ್ಲೆಲ್ಲ ಅಮ್ಮನಿದ್ದಲ್ಲಿಗೆ ಓಡೋಡಿ ಬಂದು ಆಶೀರ್ವಾದ ಬೇಡುತ್ತಿದ್ದರು ಅವರು. ಇಂದು ಕೂಡ ಅತ್ಯಂತ ಭಾವನಾತ್ಮಕವಾದ ಟ್ವೀಟ್​ ಮೂಲಕ ಅಮ್ಮನ ನಿಧನದ ಸುದ್ದಿಯನ್ನು ದೇಶದ ಜನಕ್ಕೆ ತಿಳಿಸಿದ್ದಾರೆ.

ತಾಯಿ-ಮಗನ ಬಾಂಧವ್ಯ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದಿತ್ತು. ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗಿಯೂ ಹೋಗಿತ್ತು. 2014ರ ಮೇ 26ರಂದು ಅವರು ದೇಶದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರಿದ್ದರು. ದೆಹಲಿಯಲ್ಲಿ ಸಖತ್​ ಬ್ಯೂಸಿ ಶೆಡ್ಯೂಲ್​ ಅವರದ್ದು..ಅದೇನಾದರೂ ಸರಿ, ತಮ್ಮ ಬದುಕಿನ ಮಹತ್ವದ ತಿರುವಿನ ಹೊತ್ತಲ್ಲಿ, ಎಷ್ಟೆಲ್ಲ ಕೆಲಸ ಕಾರ್ಯಗಳಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು, ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೂ ಮೊದಲು ಅಮ್ಮನ ಆಶೀರ್ವಾದ ಪಡೆಯಲೇಬೇಕೆಂದು ಗುಜರಾತ್​​ನ ಗಾಂಧಿನಗರಕ್ಕೆ ಬಂದಿದ್ದರು ನರೇಂದ್ರ ಮೋದಿ..ಅಂದು ಮೊದಲ ಬಾರಿಗೆ ಈ ತಾಯಿ-ಮಗನ ನಂಟು ಹೊರಜಗತ್ತಿನ ಕಣ್ಣಿಗೆ ಬಿದ್ದಿತ್ತು.

‘ದೇಶವನ್ನಾಳಲು ಹೊರಟ ಮಗನಿಗೆ ಅಂದು ಹೀರಾಬೆನ್​​ ಸಿಹಿತುತ್ತು ಉಣ್ಣಿಸಿದ್ದರು, ಕರವಸ್ತ್ರದಿಂದ ಪುತ್ರನ ಬಾಯಿಯನ್ನು ಪ್ರೀತಿಯಿಂದ ಒರೆಸಿದ್ದರು. ಅವರ ಕೆನ್ನೆ ಹಿಡಿದು ಪ್ರೀತಿಯ ಸ್ಪರ್ಶಕೊಟ್ಟು, ತಲೆ ಮೇಲೆ ಕೈಯಿಟ್ಟು ಶುಭ ಹಾರೈಸಿದ್ದರು’-ಈ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು, ವಿಡಿಯೋಗಳೂ ವೈರಲ್​ ಆಗಿದ್ದವು. ಅದನ್ನು ನೋಡಿದ ಅನೇಕಾನೇಕರು, ‘‘ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬ ಗಾದೆಯನ್ನು ಸುಮ್ಮನೆ ಮಾಡಿದ್ದಾರಾ? ಇದಕ್ಕೇ ನೋಡೀ ಹೇಳೋದು’’ ಎಂಬ ಮಾತನ್ನಾಡಿದ್ದರು.

ಅದಾದ ಮೇಲೆ ಅದೇ ವರ್ಷ ಸೆಪ್ಟೆಂಬರ್​ 17ರಂದು ತಮ್ಮ 64ನೇ ವರ್ಷದ ಹುಟ್ಟುಹಬ್ಬದ ದಿನ ನರೇಂದ್ರ ಮೋದಿ ಮತ್ತೆ ಗುಜರಾತ್​ಗೆ ಹೋಗಿ ತನ್ನಮ್ಮನ ಆಶೀರ್ವಾದ ಪಡೆದರು. ಅದಾಗಲೇ ಪ್ರಧಾನಮಂತ್ರಿಯಾಗಿದ್ದ ಅವರು ತೀರ ಸರಳವಾಗಿ, ಅಂದರೆ ಗುಜರಾತ್​​ನಿಂದ ಹೆಚ್ಚೇನೂ ಭದ್ರತೆಯಿಲ್ಲದೆ ಅಮ್ಮ ಇರುವ ಗಾಂಧಿನಗರದ ಮನೆಗೆ ಭೇಟಿ ಕೊಟ್ಟಿದ್ದರು. ಅಮ್ಮನ ಪಾದಸ್ಪರ್ಶಿಸಿ ನಮಸ್ಕರಿಸಿದ್ದರು. ಅವತ್ತು ಹೀರಾಬೆನ್​ ತಮ್ಮ ಪುತ್ರನಿಗೆ ಹುಟ್ಟುಹಬ್ಬದ ಉಡುಗೊರೆಯನ್ನಾಗಿ 5001 ರೂಪಾಯಿ ನೀಡಿದ್ದರು. ತನ್ನ ಮಗ ಪ್ರಧಾನಿ ಎಂಬುದು ಆ ತಾಯಿಯ ಸರಳ ಮನಸ್ಸಿಗೆ ದೊಡ್ಡ ವಿಷಯ ಆಗಲೇ ಇಲ್ಲ. ತಾನೇ ಕೂಡಿಟ್ಟ ಹಣವನ್ನು ಮಗನ ಕೈಗಿತ್ತು ಸಂಭ್ರಮಿಸಿದ್ದರು. ಅಮ್ಮ ಕೊಟ್ಟ ಆ ಹಣವನ್ನು ಪ್ರಧಾನಿ ಮೋದಿ ನಂತರ ಜಮ್ಮು-ಕಾಶ್ಮೀರ ಪ್ರವಾಹ ಪರಿಹಾರ ನಿಧಿಗೆ ಕೊಟ್ಟಿದ್ದರು.

2014ರ ಹುಟ್ಟಿದ ದಿನ ತಾಯಿಯನ್ನು ಭೇಟಿಯಾಗಿ, ಅವರಿಂದ 5001 ರೂ. ಬಹುಮಾನ ಪಡೆದ ಮೋದಿ

ನಂತರ, 2016ರಲ್ಲಿಯೂ ಮೋದಿ ತಮ್ಮ ಬರ್ತ್​ ಡೇ ದಿನ ತಾಯಿ ಹೀರಾಬೆನ್​ ಇದ್ದಲ್ಲಿಗೆ ಹೋಗಿ ಆಶೀರ್ವಾದ ಪಡೆದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಭೂತಪೂರ್ವವಾಗಿ ಗೆದ್ದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರುವ ಮೊದಲೂ ತಾಯಿ ಹೀರಾಬೆನ್​ ಗೆ ಹೋಗಿ ನಮಿಸಿದರು. ಅದೇ ವರ್ಷ ಜನ್ಮದಿನವನ್ನೂ ಅಮ್ಮನೊಟ್ಟಿಗೇ ಆಚರಿಸಿಕೊಂಡರು. 2022ರ ಪ್ರಾರಂಭದಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಬಿಜೆಪಿ ಗೆದ್ದುಕೊಂಡ ಬಳಿಕ ಮಾರ್ಚ್​​ನಲ್ಲಿ ಗುಜರಾತ್​ಗೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿ ಅಮ್ಮನನ್ನು ಭೇಟಿ ಮಾಡದೆ ವಾಪಸ್​ ಬಂದಿಲ್ಲ. ತಾಯಿ ಇರುವ ಮನೆಗೆ ಹೋಗಿ, ಅವರೊಂದಿಗೆ ಮಾತನಾಡಿಕೊಂಡು, ಅವರೊಟ್ಟಿಗೆ ಕುಳಿತು ಊಟ ಮಾಡಿ ವಾಪಸ್ ಆಗಿದ್ದರು.

100ನೇ ಜನ್ಮದಿನದಂದು ಪಾದಪೂಜೆ
ಒಬ್ಬ ಪ್ರಧಾನಿ ತನ್ನ ಅಮ್ಮನ ಪಾದ ತೊಳೆದು ಪೂಜೆ ಮಾಡಿದ ಭಾವನಾತ್ಮಕ ಕ್ಷಣಕ್ಕೆ ಈ ದೇಶ ಸಾಕ್ಷಿಯಾಗಿದ್ದು ಇದೇ ವರ್ಷದ ಜೂನ್​ 18ರಂದು. ಅಂದು ಹೀರಾಬೆನ್​​ರ 100ನೇ ವರ್ಷದ ಜನ್ಮದಿನ. ಅದನ್ನು ಪ್ರಧಾನಿ ಮೋದಿ ಥೇಟ್​ ಹಬ್ಬವಾಗಿಸಿದರು. ಅಲ್ಲಿ ಅದ್ದೂರಿಯೆನ್ನುವಂಥದ್ದು ಏನೂ ಇರಲಿಲ್ಲ, ಆದರೆ ತಾಯಿ ಪ್ರೀತಿ ಎಂಬ ಅಧ್ಯಾತ್ಮವಿತ್ತು. ದೇಶದ ಪ್ರಧಾನಿ ತನ್ನ ಹುದ್ದೆ, ಜವಾಬ್ದಾರಿ, ಹಿರಿತನವನ್ನೆಲ್ಲ ಪಕ್ಕಕ್ಕಿಟ್ಟು ‘ಹೆತ್ತಮ್ಮನ ಪುತ್ರ’ನಷ್ಟೇ ಆಗಿದ್ದರು..! ಅಂದು ನರೇಂದ್ರ ಮೋದಿ ಅಮ್ಮ ಹೀರಾಬೆನ್​ ಅವರ ಪಾದ ತೊಳೆದು, ಆ ನೀರನ್ನು ಕಣ್ಣಿಗೆ ಹಚ್ಚಿಕೊಂಡರು. ಆಕೆಯ ಪಾದಕ್ಕೆ ಪೂಜೆ ಮಾಡಿದರು. ಅವರ ಕೈಯಲ್ಲೇ ದೇವರಿಗೆ ಆರತಿಯನ್ನೂ ಮಾಡಿಸಿದರು. ಮಗನ ಕಾರ್ಯಗಳನ್ನೆಲ್ಲ ಮೌನವಾಗಿಯೇ ನೋಡುತ್ತಿದ್ದ ಹೀರಾಬೆನ್​ ತಮ್ಮ ನಡಗುವ ಕೈಗಳಿಂದ ಪುತ್ರನಿಗೆ ಹರಸಿದ್ದರು.

ಅಮ್ಮನ ನೂರನೇ ಬರ್ತ್​ ಡೇ ದಿನ ಪಾದ ತೊಳೆದು ಪೂಜೆ ಮಾಡಿದ ಮೋದಿ

ತಾಯಿಗೊಂದು ಪತ್ರ
ತಾಯಿ ಹೀರಾಬೆನ್​ 100ನೇ ಜನ್ಮದಿನದಂದು ಪ್ರಧಾನಿ ಮೋದಿ ಅಮ್ಮನಿಗೊಂದು ಪತ್ರ ಬರೆದಿದ್ದರು. ‘ಅಮ್ಮಾ ಎಂಬುದು ಕೇವಲ ಒಂದು ಶಬ್ದವಲ್ಲ, ಅದು ಎಲ್ಲ ಭಾವನೆಗಳನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ’ ಎಂದು ಪತ್ರವನ್ನು ಪ್ರಾರಂಭಿಸಿ ತನ್ನಮ್ಮನ ಬಗ್ಗೆ ಹಲವು ಸಂಗತಿ ಹಂಚಿಕೊಂಡಿದ್ದರು. ಹೀರಾಬೆನ್​ ಪಟ್ಟ ಕಷ್ಟ, ಅವರ ಬದುಕಿನ ಹೋರಾಟ, ಬಡತನದಲ್ಲಿ ಬೇಯುತ್ತ ಜೀವಿಸಿದ ಪರಿಗಳನ್ನೆಲ್ಲ, ಓದುಗರ ಕಣ್ಣಂಚು ಒದ್ದೆಯಾಗುವಂತೆ ಬಿಚ್ಚಿಟ್ಟದ್ದರು. ಹಾಗೇ ತನ್ನ ತಂದೆಯನ್ನೂ ಅವರು ನೆನಪಿಸಿಕೊಂಡಿದ್ದರು. ‘ನನ್ನಮ್ಮನಿಗೆ ವಯಸ್ಸಾಗಿ ದೇಹ ಕ್ಷೀಣಿಸಿದೆ. ಆದರೆ ಮಾನಸಿಕವಾಗಿ ಅಂದಿನಷ್ಟೇ ಸದೃಢರಾಗಿದ್ದಾರೆ..ನನ್ನಮ್ಮ ಅಸಾಧಾರಣ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಸರಳತೆಯೇ ಮೈದುಂಬಿದ ಮಹಿಳೆ
ಪ್ರಧಾನಿ ಮೋದಿ ಮತ್ತು ಅವರ ತಾಯಿಯ ಆಪ್ತತೆಯನ್ನು ನೋಡಲು ತುಂಬ ಖುಷಿಯಾಗುತ್ತಿರುತ್ತದೆ. ಹೀರಾಬೆನ್​ ಬಿಳಿಯಾದ ಸೀರೆಯನ್ನು ಗುಜರಾತಿ ಶೈಲಿಯಲ್ಲಿ ಉಟ್ಟಿರುತ್ತಾರೆ. ಅವರ ವಸ್ತ್ರವೆಷ್ಟು ಬಿಳಿಯೋ, ಮನಸೂ ಅಷ್ಟೇ ಶುಭ್ರ..ಸರಳ ಎಂಬುದು ಅವರನ್ನು ನೋಡಿದರೇ ಗೊತ್ತಾಗುತ್ತದೆ. ಗುಜರಾತ್​​ನ ಗಾಂಧಿನಗರದಲ್ಲಿರುವ ರಾಯ್ಸನ್​ ಏರಿಯಾದಲ್ಲಿನ ಪಂಕಜ್​ ಮೋದಿ ಮನೆಯಲ್ಲಿ ಅತ್ಯಂತ ಸಿಂಪಲ್​ ಜೀವನ ನಡೆಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಆಗಾಗ ಅಲ್ಲಿಗೆ ಹೋಗುತ್ತಾರೆ. ಹೀಗೆ ಮೋದಿ ತನ್ನಮ್ಮನನ್ನು ಭೇಟಿಯಾದಾಗಲೆಲ್ಲ ಅವರಿಬ್ಬರೂ ಅದೆಷ್ಟು ಆಪ್ತ ಸಮಯ ಕಳೆಯುತ್ತಾರೆ ಎಂದರೆ, ಮೋದಿ ತನಗೆ ಈಗಲೂ ಒಬ್ಬ ಪುಟ್ಟ ಮಗನೇ ಎಂಬಂತೆ ವರ್ತಿಸುತ್ತದೆ ಆ ಹಿರಿಯ ಜೀವ..ಒಟ್ಟಿಗೇ ಕುಳಿತು ಹೊಟ್ಟೆ ತುಂಬ ಊಟ ಮಾಡುತ್ತಾರೆ. ನಗುನಗುತ್ತ ಹರಟೆ ಹೊಡೆಯುತ್ತಾರೆ..

ನರೇಂದ್ರ ಮೋದಿ ದೆಹಲಿಗೆ ಹೋದಮೇಲೆ, 2016ರಲ್ಲಿ ಒಂದು ಸಲ ಹೀರಾಬೆನ್​ ದೆಹಲಿಗೆ ತನ್ನ ಪುತ್ರನಿದ್ದಲ್ಲಿಗೆ ಹೋಗಿದ್ದರು. ಆಗಲೂ ಮೋದಿ ಸಂಭ್ರಮ ನೋಡುವಂತಿತ್ತು. ತನ್ನಮ್ಮನನ್ನು ವೀಲ್​ಚೇರ್​ನಲ್ಲಿ ಕೂರಿಸಿಕೊಂಡು ದೆಹಲಿಯ ತಮ್ಮ ನಿವಾಸದ ಸುತ್ತಲೂ ಸುತ್ತಾಡಿಸಿದ್ದರು. ಅವರು ವಾಪಸ್ ಗುಜರಾತ್​ಗೆ ಹೋದ ಮೇಲೆ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಮೂರು ಫೋಟೋಗಳನ್ನೂ ಪೋಸ್ಟ್ ಮಾಡಿದ್ದರು.

ಹೀರಾಬೆನ್​ ದೆಹಲಿಗೆ ಬಂದಿದ್ದ ಕ್ಷಣ

ಅಷ್ಟೇನೂ ಖುಷಿಪಟ್ಟಿರಲಿಲ್ಲ ತಾಯಿ !
ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿ ಸ್ಥಾನದಿಂದ ಪ್ರಧಾನಿ ಹುದ್ದೆಗೆ ಬಡ್ತಿ ಪಡೆದಾಗ ಅವರ ತಾಯಿ ಅಷ್ಟೇನೂ ದೊಡ್ಡಮಟ್ಟದಲ್ಲಿ ಸಂತೋಷ ವ್ಯಕ್ತಪಡಿಸಿರಲಿಲ್ಲವಂತೆ. ಮಗನ ಸಾಧನೆ, ಜನಪ್ರಿಯತೆಗಿಂತಲೂ ಅವರನ್ನು ಆ ಕ್ಷಣ ಕಾಡಿದ್ದು, ಇನ್ನು ಪುತ್ರ ದೂರದ ದೆಹಲಿಗೆ ಹೋಗಿಬಿಡುತ್ತಾನಲ್ಲ ಎಂಬ ಸಹಜ ನೋವು. ಹಾಗಂತ, ಅವರು ಬೇಸರಿಸಿದ್ದರು..ದುಃಖಿಸಿದ್ದರು ಎಂದಲ್ಲ. ತಮ್ಮ ಭಾವನೆಯನ್ನು ಸಮತೋಲಿತವಾಗಿ, ಪ್ರಬುದ್ಧವಾಗಿ ಮೋದಿಯವರ ಎದುರು ಹೊರಹಾಕಿದ್ದರಂತೆ. ಈ ಬಗ್ಗೆ ಹಿಂದೊಮ್ಮೆ ನರೇಂದ್ರ ಮೋದಿ ಹ್ಯೂಮನ್ ಬಾಂಬೆ ಎಂಬ ಫೋಟೋಬ್ಲಾಗ್​ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

‘ಗುಜರಾತ್​ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ದೆಹಲಿಯಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದೆ. ಹಾಗೇ 2001ರಲ್ಲಿ ನಾನು ಗುಜರಾತ್​ ಮುಖ್ಯಮಂತ್ರಿ ಎಂಬುದು ನಿಶ್ಚಯವಾಯಿತು. ಅದಾಗಲೇ ಪೇಪರ್​, ಟಿವಿಗಳಲ್ಲಿ ನನ್ನ ಬಗ್ಗೆಯೇ ಸುದ್ದಿ ಬಿತ್ತರವಾಗುತ್ತಿತ್ತು. ನನ್ನಮ್ಮನಿಗೂ ಗೊತ್ತಿತ್ತು, ತನ್ನ ಮಗ ಗುಜರಾತ್​ನ ಉನ್ನತ ಹುದ್ದೆಗೆ ಏರುತ್ತಿದ್ದಾನೆ ಎಂಬುದು. ದೆಹಲಿಯಿಂದ ಅಹ್ಮದಾಬಾದ್​ಗೆ ಬಂದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಹೋಗಿ ಅವರನ್ನು ಭೇಟಿಯಾದೆ. ನಾನಂದುಕೊಂಡೆ, ಅಮ್ಮ ನನ್ನ ಸಾಧನೆ ಬಗ್ಗೆ ಮಾತನಾಡುತ್ತಾರೆಂದು. ಆದರೆ ಆಕೆ ನನ್ನ ನೋಡಿದರು, ಪ್ರೀತಿಯಿಂದ ಅಪ್ಪಿಕೊಂಡರು..ಬಳಿಕ ‘ನೀನೀಗ ವಾಪಸ್​ ಗುಜರಾತ್​ಗೆ ಬಂದೆಯಲ್ಲ, ಅದು ನನ್ನ ಪಾಲಿಗೆ ದೊಡ್ಡ ಸಂತೋಷ’ ಎಂದು ಹೇಳಿದರು. ಆ ಮಾತುಗಳನ್ನೆಂದೂ ಮರೆಯೋದಿಲ್ಲ. ತಾಯಿ ಅಂದರೇ ಹಾಗಲ್ಲವೇ, ಮಕ್ಕಳು ಸದಾ ತನ್ನ ಬಳಿಯೇ ಇರಲಿ ಎಂದು ಬಯಸುತ್ತಾಳೆ..ನನ್ನಮ್ಮನೂ ಹಾಗೇ. ಆಕೆಗೆ ನಾನು ಸಿಎಂ ಆಗುತ್ತಿದ್ದೆನೆ ಎಂಬುದಕ್ಕಿಂತ, ಮತ್ತೆ ಗುಜರಾತ್​ಗೆ ಬರುತ್ತೇನೆ ಎಂಬುದೇ ದೊಡ್ಡ ವಿಷಯವಾಗಿತ್ತು’ ಎಂದು ನರೇಂದ್ರ ಮೋದಿ ಹೇಳಿಕೊಂಡಿದ್ದರು.

ಅಹಂ ಇರಲೇ ಇಲ್ಲ !
ಮಗ ಪ್ರಧಾನಿಯಾದರೂ ತಾಯಿ ಹೀರಾಬೆನ್​ ಅದೆಷ್ಟು ಸಾಮಾನ್ಯರಂತೆ ಜೀವನ ನಡೆಸುತ್ತಾರೆ ಎಂಬುದನ್ನೂ ದೇಶ ನೋಡಿದೆ. ನರೇಂದ್ರ ಮೋದಿಯವರು ರಾತ್ರಿ ಭಾಷಣ ಮಾಡಿ, ‘ನಾಳೆಯಿಂದ 500 ಮತ್ತು 1000 ರೂಪಾಯಿ ನೋಟುಗಳು ಚಲಾವಣೆಯಾಗುವುದಿಲ್ಲ’ ಎಂದು 2018ರ ನವೆಂಬರ್​​ನಲ್ಲಿ ಆದೇಶ ಹೊರಡಿಸಿದಾಗ ಅದರ ಬಿಸಿ ಇಡೀ ದೇಶಕ್ಕೆ ತಟ್ಟಿತ್ತು. ಕೊಟ್ಟ ಅವಧಿಯಲ್ಲಿ ಇರುವ ನೋಟುಗಳನ್ನು ಬದಲಿಸಿಕೊಳ್ಳಬೇಕಿತ್ತು. ಆಗ ಅವರ ತಾಯಿ ಹೀರಾಬೆನ್​ ಕೂಡ ಎಲ್ಲರಂತೆ ಗುಜರಾತ್​ನ ಬ್ಯಾಂಕ್​ವೊಂದಕ್ಕೆ ಹೋಗಿ, ಸರತಿ ಸಾಲಿನಲ್ಲಿ ನಿಂತು ನೋಟು ಬದಲಿಸಿಕೊಂಡಿದ್ದರು.

ಪ್ರತಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮತಗಟ್ಟೆಗೆ ಹೋಗಿ ಮತಚಲಾಯಿಸುತ್ತಾರೆ. ವಯಸ್ಸು ನೂರಾದರೂ ಇಂಥ ವಿಚಾರಗಳಲ್ಲಿ ಅವರ ಉತ್ಸಾಹ ಕುಂದಿಲ್ಲ. ಹೀರಾಬೆನ್​ರ ಈ ಸರಳತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಬಂದಿದೆ. ಅವರೂ ಸಹ ಜನಸಾಮಾನ್ಯರ ಪ್ರಧಾನಿ ಎನ್ನಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಈ ವಿಚಾರದಲ್ಲೂ ಅವರು ಪಕ್ಕಾ ‘ಅಮ್ಮನ ಮಗನೇ..’

ಈ ಸಲ ಅಮ್ಮನತ್ರ ಹೋಗೋಕಾಗಿರಲಿಲ್ಲ !
ಈ ಸಲದ ಹುಟ್ಟುಹಬ್ಬದ ದಿನ ನರೇಂದ್ರ ಮೋದಿಯವರಿಗೆ ಅಮ್ಮನಿದ್ದಲ್ಲಿಗೆ ಹೋಗಿ ಆಶೀರ್ವಾದ ಪಡೆಯೋಕೆ ಆಗಿರಲಿಲ್ಲ. ಸೆ.17ರಂದು ಬೆಳಗ್ಗೆಯೇ ಅವರು ಮಧ್ಯಪ್ರದೇಶದ ಗ್ವಾಲಿಯರ್​ಗೆ ಹೋಗಿ, ಅಲ್ಲಿ ನಮೀಬಿಯಾದಿಂದ ಬಂದ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರು. ಬಳಿಕ ಮಾತನಾಡಿದ ಅವರು ಅಲ್ಲೂ ತನ್ನಮ್ಮನನ್ನು ನೆನಪಿಸಿಕೊಂಡಿದ್ದಾರೆ. ‘ನಾನಿವತ್ತು ಗುಜರಾತ್​ಗೆ ಹೋಗಿ ಅಮ್ಮನ ಆಶೀರ್ವಾದ ಪಡೆಯಬೇಕಿತ್ತು. ಅದಾಗುತ್ತಿಲ್ಲ.. ಆದರೂ ಲಕ್ಷಾಂತರ ತಾಯಂದಿರ ಆಶೀರ್ವಾದ ನನ್ನ ಮೇಲಿದೆ ಎಂಬ ಸಮಾಧಾನ ನನಗೆ ಇದೆ’ ಎಂದು ಹೇಳಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ನರೇಂದ್ರ ಮೋದಿಯವರು ತಮ್ಮ ಬದುಕಿನ ಮಹತ್ವದ ಹಂತದಲ್ಲೆಲ್ಲ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ‘ಅಮ್ಮನ ಕರುಳ ಕೂಗು ಮಕ್ಕಳು ಎಲ್ಲಿದ್ದರೂ ಕರೆದೇ ಕರೆಯುತ್ತದೆ..ಈ ಭಾವದಿಂದ ತಪ್ಪಿಸಿಕೊಳ್ಳಲು ದೇಶದ ಪ್ರಧಾನಿಗೂ ಸಾಧ್ಯವಿರಲಿಲ್ಲ ನೋಡಿ..! ಈಗ ಅಮ್ಮ ಹೀರಾಬೆನ್​ ತನ್ನ ಮಗನಿಗೆ ಶಾಶ್ವತವಾಗಿ ಆಶೀರ್ವದಿಸಿ ಹೋಗಿದ್ದಾರೆ.

ಒಟ್ಟಾಗಿ ಕುಳಿತು ಊಟ ಮಾಡುತ್ತಿರುವ ತಾಯಿ-ಮಗ

ಇದನ್ನೂ ಓದಿ : Narendra Modi : ಭಾರತಕ್ಕೆ ಚೀತಾಗಳು ಎಂಟ್ರಿ : ಪ್ರಧಾನಿ ಮೋದಿ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

VISTARANEWS.COM


on

ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಸಾಧ್ಯತೆ, ಪಶ್ಚಿಮ ಬಂಗಾಳದಲ್ಲಿ ದೀದಿಗೆ ಸಮಬಲದ ಟಕ್ಕರ್‌, ತಮಿಳುನಾಡು-ಕೇರಳಂನಲ್ಲಿ ವೋಟ್‌ ಶೇರ್‌ ಹೆಚ್ಚಳ – ಪಂಚ ರಾಜ್ಯಗಳ ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ಕುರಿತ ಈ ಸಮೀಕ್ಷೆ ನಿಜವಾದರೆ ಅದು ಮತ್ತೊಮ್ಮೆ ಮೋದಿ ಮ್ಯಾಜಿಕ್‌ ಎಂದೇ ಹೇಳಬಹುದು.
ಪಂಚ ರಾಜ್ಯಗಳ ಚುನಾವಣಾ ಸನ್ನಿವೇಶವೇ ಮೋದಿ ನೇತೃತ್ವದ ಬಿಜೆಪಿಗೆ ಒಂದು ಸವಾಲಾಗಿತ್ತು. ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಪ್ರಧಾನಿ ಮೋದಿಯವರಿಗೆ ಅತಿದೊಡ್ಡ ಸವಾಲು ಸೃಷ್ಟಿಸಿತ್ತು. ಏಕಾಏಕಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ, ಹೊಟೇಲು-ಇತರ ಉದ್ಯಮಗಳಿಗೆ ಕಮರ್ಶಿಯಲ್‌ ಗ್ಯಾಸ್‌ ಪೂರೈಕೆ ಬುಡಮೇಲು, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ. ಇವೆಲ್ಲಾ ಚುನಾವಣೆಯ ಮುಖ್ಯ ವಿಷಯಗಳಾಗಿದ್ದವು. ಹರಿಯಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಗೆಲುವಿನ ನಂತರ ಅಸ್ಸಾಂ, ಪುದುಚೇರಿ, ಮುಖ್ಯವಾಗಿ ಪಶ್ಚಿಮ ಬಂಗಾಳವನ್ನು ಗೆಲ್ಲಲ್ಲೇ ಬೇಕಾದ ಹಠಕ್ಕೆ ಬಿಜೆಪಿ ಬಿದ್ದಿತ್ತು. ಈ ಗೆಲುವಿಗೆ ಬಿಜೆಪಿ ಅವಲಂಬಿಸಿದ್ದು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು. ಸಂಕಷ್ಟದ ಕಾಲದಲ್ಲಿ ಮೋದಿ ಸರ್ಕಾರ ನಿರ್ವಹಿಸಿದ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹ ಬಳಕೆ ಗ್ಯಾಸ್‌ ಪೂರೈಕೆ ವ್ಯತ್ಯಯವಾಗಲು ಮೋದಿ ಸರ್ಕಾರ ಬಿಡಲಿಲ್ಲ. ಬಹುತೇಕ ದೇಶಗಳು ಪೆಟ್ರೋಲ್‌, ಡೀಸೆಲ್‌ ಬೆಲೆ ಶೇಕಡಾ 20ರಿಂದ 30 ರಷ್ಟು ಏರಿಕೆ ಮಾಡಿದರೂ, ಮೋದಿ ಸರ್ಕಾರ ಸಾಧಾರಣ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಸಲಿಲ್ಲ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ನೇರ ಜನರ ಮೇಲೆ ಬೀಳಲು ಮೋದಿ ಸರ್ಕಾರ ಬಿಡಲಿಲ್ಲ.
ಪ.ಬಂಗಾಳ ಗೆದ್ದರೆ ಅತಿ ದೊಡ್ಡ ಸಾಧನೆ:
ದೀದಿ ನಾಡನ್ನು ಗೆಲ್ಲಲು ಬಿಜೆಪಿ ಕಳೆದ 15 ವರ್ಷಗಳಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ಈ ಸಲ, ದೀದಿ ನಾಡಲ್ಲಿ ಮೋದಿ ಹವಾ ಸೃಷ್ಟಿಯಾಗಿದೆ ಎಂದೇ ಎಕ್ಸಿಟ್‌ ಪೋಲ್‌ಗಳು ಹೇಳುತ್ತಿವೆ. ಬಂಗಾಳವನ್ನು ಗೆದ್ದರೆ ಬಿಜೆಪಿಯ ದಿಗ್ವಿಜಯದ ಪಟ್ಟಿಯಲ್ಲೊಂದು ಮೈಲಿಗಲ್ಲು. ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ, ಬದಲಿಗೆ ಇನ್ನಷ್ಟು ಗಟ್ಟಿಯಾಗುತ್ತಿದೆ ಎನ್ನುವುದರ ಸೂಚಕ.
ಇನ್ನು ಪುದುಚೇರಿ, ತಮಿಳುನಾಡು, ಕೇರಳಂನಲ್ಲೂ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿರೋದು ಎಕ್ಸಿಟ್‌ ಪೋಲ್‌ ದತ್ತಾಂಶಗಳು ಹೇಳುತ್ತಿವೆ. ತಮಿಳುನಾಡು, ಕೇರಳಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳು ಇಲ್ಲದೇ ಹೋದರೂ ಕೂಡಾ, ಬಿಜೆಪಿಯ ಮತ ಪ್ರಮಾಣ ಏರಿಕೆಯಾಗಿದೆ ಎನ್ನುತ್ತಿವೆ ಸಮೀಕ್ಷೆಗಳು.
ಹಾಗೇ ನೋಡಿದರೆ, ಜಾಗತಿಕ ಮಟ್ಟದಲ್ಲಿ ಮೋದಿ ಅತಿ ಜನಪ್ರಿಯ ವ್ಯಕ್ತಿ. ಮಾರ್ಚ್‌ 2026ರ ಅವಧಿಯಲ್ಲಿ ಮೋದಿ ಅಪ್ರೂವಲ್‌ ರೇಟ್‌ ಶೇ 70ರಷ್ಟಿತ್ತು. ವಿಶ್ವದ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ಮೋದಿಯೇ ಮೊದಲಿಗರಾಗಿದ್ದಾರೆ.

Continue Reading

Latest

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

VISTARANEWS.COM


on

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ದೊಡ್ಡ ವಿವಾದ ಸೃಷ್ಟಿಯಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (EVM) ಮೇಲಿರುವ ಬಿಜೆಪಿಯ ‘ಕಮಲ’ ಚಿಹ್ನೆಯ ಬಟನ್ ಅನ್ನು ಟೇಪ್‌ನಿಂದ ಮುಚ್ಚಲಾಗಿದೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ವಿಡಿಯೋ ಸಹಿತ ಆರೋಪಿಸಿದ್ದಾರೆ. ಇದರಿಂದ ಮತದಾರರಿಗೆ ತೊಂದರೆಯಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಕೂಡಲೇ ಮರುಮತದಾನ ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಘಟನೆಯ ಬೆನ್ನಲ್ಲೇ ನಿರ್ಲಕ್ಷ್ಯ ತೋರಿದ ಐವರು ಪೊಲೀಸ್ ಅಧಿಕಾರಿಗಳನ್ನು ಆಯೋಗ ಅಮಾನತುಗೊಳಿಸಿದೆ.

ಇದೇ ವೇಳೆ, ಚುನಾವಣಾ ಅಧಿಕಾರಿ ಅಜಯ್ ಪಾಲ್ ಶರ್ಮಾ ಮತ್ತು ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. “ಮತದಾರರಿಗೆ ಬೆದರಿಕೆ ಹಾಕಿದರೆ ಅಳಬೇಡಿ, ಕಠಿಣ ಕ್ರಮ ಜರುಗಿಸುತ್ತೇವೆ” ಎಂದು ಅಧಿಕಾರಿ ಎಚ್ಚರಿಕೆ ನೀಡಿದರೆ, “ನೀವು ಸಿಂಗಮ್ ಆದರೆ ನಾನು ಪುಷ್ಪ, ಯಾವುದಕ್ಕೂ ಬಗ್ಗಲ್ಲ” ಎಂದು ಅಭ್ಯರ್ಥಿ ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಇಂತಹ ಅಕ್ರಮದ ಆರೋಪ ಕೇಳಿಬಂದಿರುವುದು ಭಾರಿ ಸಂಚಲನ ಮೂಡಿಸಿದೆ.

Continue Reading

Latest

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

VISTARANEWS.COM


on

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿಯ ನಡೆಗೆ ಇಡೀ ದೇಶವೇ ಮರುಗುವಂತಾಗಿದೆ. ಮೃತ ಸಹೋದರಿಯ ಹೆಸರಿನಲ್ಲಿದ್ದ ಠೇವಣಿ ಹಣವನ್ನು ಹಿಂಪಡೆಯಲು ಹೋದ ಜೀತು ಮುಂಡಾ ಎಂಬ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಗೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ “ಖಾತೆದಾರಳನ್ನು ಕರೆತನ್ನಿ” ಎಂದು ಕಿರುಕುಳ ನೀಡಿದ್ದಾರೆ. ಆಕೆ ನಿಧನಳಾಗಿದ್ದಾಳೆ ಎಂದು ಹೇಳಿದರೂ ಕೇಳದ ಸಿಬ್ಬಂದಿಯ ವರ್ತನೆಯಿಂದ ಹತಾಶರಾದ ಜೀತು, ಸಾವಿನ ಪುರಾವೆ ತೋರಿಸಲು ಸಮಾಧಿಯನ್ನು ಅಗೆದು ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿದ್ದಾರೆ.

ಈ ವಿಚಿತ್ರ ಮತ್ತು ಆಘಾತಕಾರಿ ಘಟನೆಯಿಂದ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜೀತು ಮುಂಡಾ ಅವರ ಸಹೋದರಿಯ ಖಾತೆಯಲ್ಲಿದ್ದ ನಾಮಿನಿ ಕೂಡ ಈಗಾಗಲೇ ಮೃತಪಟ್ಟಿದ್ದು, ಕಾನೂನಿನ ಪ್ರಕಾರ ಜೀತು ಅವರೇ ಈ ಹಣಕ್ಕೆ ಏಕೈಕ ಹಕ್ಕುದಾರರಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವ ಸರಳ ನಿಯಮಗಳನ್ನು ವಿವರಿಸುವಲ್ಲಿ ವಿಫಲರಾಗಿ, ಒಬ್ಬ ಅಮಾಯಕ ವ್ಯಕ್ತಿಯನ್ನು ಇಂತಹ ದಾರುಣ ಸ್ಥಿತಿಗೆ ತಳ್ಳಿದ್ದು ನಿಜಕ್ಕೂ ದುರದೃಷ್ಟಕರ.

ಸದ್ಯ ಪೊಲೀಸರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಮರು ಅಂತ್ಯಕ್ರಿಯೆ ಮಾಡಲಾಗಿದ್ದು, ಜೀತು ಮುಂಡಾ ಅವರಿಗೆ ಬರಬೇಕಾದ ಹಣವನ್ನು ಶೀಘ್ರವಾಗಿ ವಿತರಿಸುವಂತೆ ಜಿಲ್ಲಾಡಳಿತವು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಘಟನೆಯು ಸರ್ಕಾರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ಅನಕ್ಷರಸ್ಥರಿಗೆ ಸಿಗಬೇಕಾದ ಕನಿಷ್ಠ ಗೌರವ ಮತ್ತು ಮಾರ್ಗದರ್ಶನದ ಕೊರತೆಯನ್ನು ಎತ್ತಿ ತೋರಿಸಿದೆ.

Continue Reading

Latest

ದೆಹಲಿ ಏರ್‌ಪೋರ್ಟ್‌ನಲ್ಲಿ ಅಪಘಾತ: ಟೇಕಾಫ್ ಆಗುವಾಗ ಸ್ವಿಸ್ ಏರ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಆರು ಮಂದಿಗೆ ಗಾಯ!

VISTARANEWS.COM


on

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ಗೆ ಹಾರಲು ಸಿದ್ಧವಾಗಿದ್ದ ಸ್ವಿಸ್ ಏರ್ ವಿಮಾನ (LX147) ರನ್‌ವೇನಲ್ಲಿ ಟೇಕಾಫ್ ಆಗಲು ವೇಗವಾಗಿ ಚಲಿಸುತ್ತಿದ್ದಾಗ, ಅದರ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಳಗಿನ ಜಾವ 1.08ರ ಸುಮಾರಿಗೆ ಸಂಭವಿಸಿದ ಈ ಘಟನೆಯಿಂದ ವಿಮಾನದಲ್ಲಿದ್ದ 228 ಪ್ರಯಾಣಿಕರು ಮತ್ತು ನಾಲ್ವರು ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಕೆಲಕಾಲ ಆತಂಕದ ಸುಳಿಯಲ್ಲಿ ಸಿಲುಕಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಸಮಯಪ್ರಜ್ಞೆ ಮೆರೆದು ಟೇಕಾಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ನಿರ್ಗಮನ ಸ್ಲೈಡ್‌ಗಳನ್ನು (Emergency Slides) ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಅವಸರದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿಮಾನದ ಸಿಬ್ಬಂದಿ ವರ್ಗದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸ್ಲೈಡ್‌ಗಳನ್ನು ಬಳಸಲು ಸಾಧ್ಯವಾಗದ ಕೆಲವು ಪ್ರಯಾಣಿಕರಿಗೆ ಪರ್ಯಾಯ ಮೆಟ್ಟಿಲುಗಳ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ಸ್ವಿಸ್ ಏರ್ ಸಂಸ್ಥೆಯು ಈಗಾಗಲೇ ತನಿಖಾ ಕಾರ್ಯಪಡೆಯನ್ನು ರಚಿಸಿದೆ. ವಿಮಾನಯಾನ ಸಂಸ್ಥೆಯ ತಾಂತ್ರಿಕ ತಜ್ಞರು ದೆಹಲಿಗೆ ಆಗಮಿಸಿ ವಿಮಾನದ ಎಂಜಿನ್ ವಿಫಲವಾಗಲು ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸ್ಥಳೀಯ ತಂಡಗಳು ನೆರವು ನೀಡುತ್ತಿದ್ದು, ಅವರಿಗೆ ಹೋಟೆಲ್ ವಸತಿ ಮತ್ತು ಮರು ಬುಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿರುವ ಸಂಸ್ಥೆಯು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.

Continue Reading
Advertisement
Latest16 hours ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest1 day ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest1 day ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest1 day ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest1 day ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest2 days ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 days ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest2 days ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest2 days ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest2 days ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌