suicide death | 3 ತಿಂಗಳ ಹಿಂದೆ ಪರಿಚಯವಾದ ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ - Vistara News

ಕರ್ನಾಟಕ

suicide death | 3 ತಿಂಗಳ ಹಿಂದೆ ಪರಿಚಯವಾದ ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ಅವರಿಬ್ಬರಿಗೆ ಪರಿಚಯವಾಗಿ ಮೂರು ತಿಂಗಳು ಕಳೆದಿದೆ ಅಷ್ಟೆ. ಪ್ರೀತಿ ಅರಳಿದೆ. ಇದರ ನಡುವೆ ಆಕೆ ಮದುವೆಯಾಗೋಣ ಎಂದಿದ್ದಾಳೆ. ಅದರೆ, ಅವನು ನಿರಾಕರಿಸಿದ್ದಾನೆ. ಈಕೆ ಸಾವಿಗೆ ಶರಣಾಗಿದ್ದಾಳೆ.

VISTARANEWS.COM


on

suicide
ಆತ್ಮಹತ್ಯೆ ಮಾಡಿಕೊಂಡ ಅನುಷಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯುವತಿಯ ಪೋಷಕರಿಂದ ದೂರು ದಾಖಲು

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದ ಕ್ಯಾಂಪ್ ನಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಲುಗುಡ್ಡೆ ಕ್ಯಾಂಪ್ ನಲ್ಲಿ ಅನುಷಾ (19) ಎಂಬ ಯುವತಿ ನಿನ್ನೆ ಮನೆಯಲ್ಲಿದ್ದಾಗ ಕೀಟ ನಾಶಕ ಕುಡಿದು ತನ್ನ ಪ್ರಿಯಕರನಿಗೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾಳೆ. ತಕ್ಷಣ ಪ್ರಿಯಕರ ಮಂಜುನಾಥ್ ಬಂದು ಯುವತಿಯನ್ನು ಆನಂದಪುರ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅನುಷಾ ಅಸುನೀಗಿದ್ದಾಳೆ.

ಅನುಷಾ (18) ಕೂಲಿ ಕೆಲಸ ಮಾಡಿಕೊಂಡಿದ್ದು, 8ನೇ ತರಗತಿವರೆಗೆ ಓದಿಕೊಂಡಿದ್ದಾಳೆ. ನೆವಟೂರು ಗ್ರಾಮದ ಮಂಜುನಾಥ್ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಮೂರು ತಿಂಗಳ ಹಿಂದೆ ಹುಡುಗಿ ಅಣ್ಣನ ಮನೆಗೆ ಗಾರೆ ಕೆಲಸಕ್ಕೆ ಹೋಗಿದ್ದ ಮಂಜುನಾಥನಿಗೆ ಅನುಷಾ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿತ್ತು.

ಪರಸ್ಪರ ಫೋನ್ ನಂಬರ್ ಪಡೆದುಕೊಂಡಿದ್ದ ಜೋಡಿಹಕ್ಕಿಗಳು ಮದುವೆಯ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.
ಮದುವೆಯಾಗಲು ಒಪ್ಪದ ಯುವಕನ ಕಿರುಕುಳದಿಂದ ಬೇಸತ್ತು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಯುವತಿ ತಂದೆ ಬಂಗಾರಪ್ಪ ದೂರು ದಾಖಲಿಸಿದ್ದಾರೆ.
ನಿನ್ನೆ ಯುವತಿಯನ್ನ ಮೆಗ್ಗಾನ್ ಗೆ ದಾಖಲಿಸುವವರೆಗೂ ಜೊತೆಗೆ ಇದ್ದ ಯುವಕ ಇಂದು ಬೆಳಿಗ್ಗೆ 7 ಗಂಟೆಗೆ ಯುವತಿ ಪ್ರಾಣ ಬಿಟ್ಟಾಗಿನಿಂದ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ | ಪ್ರೀತಿಸಿದವನ ಮೇಲೆ ರೇಪ್‌ ದೂರು, ಅಂಗದಾನ ಮಾಡಿಕೊಂಡು ಯುವಕ ಆತ್ಮಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಮಾದಕ ದ್ರವ್ಯ ಅಕ್ರಮ ಸಾಗಾಟ; ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Bengaluru News: ಬೆಂಗಳೂರಿನಲ್ಲಿ ಕೃಪಾನಿಧಿ ಸಮೂಹ ಸಂಸ್ಥೆಗಳ (ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್) ವತಿಯಿಂದ ಬೆಂಗಳೂರು ಪೊಲೀಸ್ ವೈಟ್ ಫೀಲ್ಡ್ ವಿಭಾಗ ಹಾಗೂ ಮಾರತಹಳ್ಳಿ ಉಪವಿಭಾಗದ ಸಹಯೋಗದಲ್ಲಿ ಮಾದಕ ದ್ರವ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.

VISTARANEWS.COM


on

Special awareness programme on drug abuse illegal trafficking
Koo

ಬೆಂಗಳೂರು: ಕೃಪಾನಿಧಿ ಸಮೂಹ ಸಂಸ್ಥೆಗಳ (ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್) ವತಿಯಿಂದ ಮಾದಕ ದ್ರವ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಕಾರ್ಯಕ್ರಮ (Bengaluru News) ನಡೆಯಿತು.

ಬೆಂಗಳೂರು ಪೊಲೀಸ್ ವೈಟ್ ಫೀಲ್ಡ್ ವಿಭಾಗ ಹಾಗೂ ಮಾರತಹಳ್ಳಿ ಉಪವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಕ್ರಮ ಸಾಗಾಟಕ್ಕೆ ತಳುಕು ಹಾಕಿಕೊಂಡಂತೆ ಇರುವ ಅಪಾಯಗಳು ಹಾಗೂ ಮಾದಕವಸ್ತು ಮುಕ್ತ ಪ್ರಪಂಚದ ಪ್ರಾಮುಖ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಮಾರತಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಹಾಗೂ ವರ್ತೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗಾನಂದ್ ಸೋನಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ವಿಶೇಷ ಜಾಗೃತಿ ಕಾರ್ಯಕ್ರಮ

ಇನ್ನು ಕೃಪಾನಿಧಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ದೀರ್ಘ ನಡಿಗೆಯನ್ನು ಹಮ್ಮಿಕೊಂಡಿದ್ದರು. ಆ ಮೂಲಕ ಮಾದಕವಸ್ತು ಮುಕ್ತ ಸಮಾಜಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಇದೇ ಕಾರ್ಯಕ್ರಮದ ಅಂಗವಾಗಿ ಸ್ಕೆಚ್ ಬಿಡಿಸುವುದು ಹಾಗೂ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯ ಮೂಲಕ ಪ್ರಮುಖ ಸಂದೇಶಗಳನ್ನು ನೀಡಿದರು. ಈ ಸ್ಪರ್ಧೆಗಳಲ್ಲಿ ಉತ್ತೇಜನಕಾರಿ ಆದಂಥ ಕಲಾಕೃತಿಗಳ ಪ್ರದರ್ಶನ ನಡೆಯಿತು. ಅದು ಪುನರ್ವಸತಿಯ ಬಗ್ಗೆ ಆಶಾವಾದ ಮತ್ತು ಮಾದಕ ದ್ರವ್ಯಗಳಿಂದ ಮುಕ್ತವಾದ ಭವಿಷ್ಯ ಹಾಗೂ ಮಾದಕ ವ್ಯಸನದ ಕಠಿಣ ವಾಸ್ತವವನ್ನು ಚಿತ್ರಿಸಿದವು.

ಮಾದಕವಸ್ತುಗಳ ಬಳಕೆ ವಿರುದ್ಧ ಹೋರಾಟದಲ್ಲಿ ಸಮುದಾಯ ಯಾಕೆ ಒಳಗೊಳ್ಳಬೇಕು ಹಾಗೂ ಜಾಗೃತಿ ಎಷ್ಟು ಮಹತ್ವವಾದದ್ದು ಎಂಬುದರ ಕುರಿತು ಡಾ. ಶಿವಕುಮಾರ್ ಹಾಗೂ ಪ್ರಿಯದರ್ಶಿನಿ ಈಶ್ವರ್ ಮಾತನಾಡಿದರು.

ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೃಪಾನಿಧಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ ನೀಡಿದರು. ಈ ಎಲ್ಲ ಪ್ರದರ್ಶನಗಳು ಸಹ ಮಾದಕದ್ರವ್ಯ ಬಳಕೆಯ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿಸುವಂತಿದ್ದವು ಹಾಗೂ ವ್ಯಸನಕ್ಕೆ ಬಿದ್ದಲ್ಲಿ ಅದರಿಂದ ಅನುಭವಿಸುವಂಥ ಸಮಸ್ಯೆಗಳು ಎಂಥವು ಎಂಬುದರ ಬಗ್ಗೆ ಕಣ್ತೆರೆಸುವಂತೆ ಇದ್ದವು.

ಇನ್ನು ಇಡೀ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬೆಂಗಳೂರು ನಗರ ಪೊಲೀಸ್ (ಮಾರತಹಳ್ಳಿ ಉಪವಿಭಾಗ) ಮತ್ತು ಕೃಪಾನಿಧಿ ವಿದ್ಯಾ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮಧ್ಯೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಆ ನಂತರದಲ್ಲಿ ಮಾರತಹಳ್ಳಿ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಮತ್ತು ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ಡಾ. ಸ್ಯಾಮ್ ಪಾಲ್ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಿತು.

ಇದನ್ನೂ ಓದಿ: Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

ಕ್ರಿಕೆಟ್ ಪಂದ್ಯಾವಳಿಯಲ್ಲಿ ವರ್ತೂರು ಪೊಲೀಸ್ ಠಾಣೆ ತಂಡಕ್ಕೆ ಅಗ್ರಸ್ಥಾನ ಮತ್ತು ಎಚ್‌ಎಎಲ್ ಪೊಲೀಸ್ ಠಾಣೆ ರನ್ನರ್ ಅಪ್ ಆಗಿ ಹೊರಹೊಮ್ಮಿದವು.

Continue Reading

ಕರ್ನಾಟಕ

Monsoon session: ರಾಜ್ಯ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್‌; ದಿನಾಂಕ ಫೈನಲ್ ಮಾಡಿದ ಸಿಎಂ

Monsoon session: ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

VISTARANEWS.COM


on

Monsoon session
Koo

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ (ಮುಂಗಾರು ಅಧಿವೇಶನ) ಮುಹೂರ್ತ ಫಿಕ್ಸ್‌ ಆಗಿದೆ. ಜುಲೈ 15ರಿಂದ 26ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ.

ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

ಇದನ್ನೂ ಓದಿ | Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ: ಸಿಎಂ

ರಾಜ್ಯದಲ್ಲಿ ಕಳೆದ ವರ್ಷ 2022-23ನೇ ಸಾಲಿನಲ್ಲಿ 1,22,821 ಕೋಟಿ, 2021- 22ರಲ್ಲಿ 1,45,266 ಕೋಟಿ ಜಿಎಸ್‌ಟಿ ಸಂಗ್ರಹಣೆ ಆಗಿತ್ತು. ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. 65 ಸಿಬ್ಬಂದಿಗೆ ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಕ್ಕೆ ಪ್ರಶಸ್ತಿ ಕೊಟ್ಟಿದ್ದೀವಿ. ನಮ್ಮಲ್ಲಿ 6 ಸಾವಿರ ವಾಣಿಜ್ಯ ಇಲಾಖೆ ಸಿಬ್ಬಂದಿ ಇದ್ದಾರೆ, ಅವರೆಲ್ಲರೂ ಪ್ರಶಸ್ತಿ ತಗೋಳೋಕೆ ಪ್ರಯತ್ನ ಮಾಡಬೇಕು. ನಮ್ಮ ರಾಜ್ಯದ ಅಧಿಕಾರಿಗಳು ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಜಿಎಸ್‌ಟಿ ದಿನದ ವೇಳೆಗೆ ಹೆಚ್ಚು ತೆರಿಗೆ ವಸೂಲಿ ಮಾಡಿ, ಇನ್ನು ಹೆಚ್ಚು ನೌಕರರು ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದರು.

ನಂತರ ಕರವೇ ನಾರಾಯಣಗೌಡ ನಿಯೋಗ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ವಿಶೇಷ ಉದ್ಯೋಗ ಮೀಸಲಾತಿ ನೀಡಲು ಹೊಸ ಕಾನೂನು ಜಾರಿಗೆ ತರಬೇಕು ಅಂತ ಹೇಳಿದ್ದಾರೆ. ನಾನು ಅದನ್ನು ಸಂವಿಧಾನ ಹಿನ್ನೆಲೆಯಲ್ಲಿ ಎಜಿ ಜತೆಗೆ ಚರ್ಚೆ ಮಾಡುತ್ತೇನೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡುವುದು ಹಾಗೂ ಕಾನೂನು ಮಾಡುವುದು ಅವರ ಬೇಡಿಕೆಯಾಗಿದೆ. ಅದಕ್ಕೆ ಕಾನೂನು, ಸಂವಿಧಾನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

Kabzaa movie: ಆರ್. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು‌ “ಕಬ್ಜ” ಚಿತ್ರದ ಸಲುವಾಗಿ ಆರ್. ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ‌. ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ.

VISTARANEWS.COM


on

Kabzaa movie Appreciation Letter from Union Finance Ministry to Sri siddeshwar Enterprises
Koo

ಬೆಂಗಳೂರು: ಆರ್. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು‌ “ಕಬ್ಜ” ಚಿತ್ರದ (Kabzaa movie) ಸಲುವಾಗಿ ಆರ್. ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ‌.

ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ. ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಸಿದ ಸಾಲಿಗೆ ಕನ್ನಡದ “ಕಬ್ಜ” ಚಿತ್ರ ಸೇರಿದೆ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ಇತ್ತೀಚೆಗೆ ನಡೆದ ಪ್ರಜಾವಾಣಿ ಕನ್ನಡ ‌ಸಿನಿ ಸಮ್ಮಾನ ಸಮಾರಂಭದಲ್ಲಿ ‌ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಅನಿಮೇಷನ್ ಚಿತ್ರ ಪ್ರಶಸ್ತಿಗೆ “ಕಬ್ಜ” ಚಿತ್ರ ಭಾಜನವಾಗಿದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಈ ಎಲ್ಲಾ ಖುಷಿಯ ವಿಚಾರಗಳ ನಡುವೆ ಆರ್. ಚಂದ್ರು ಅವರ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ “ಫಾದರ್” ಚಿತ್ರಕ್ಕೆ ಮೈಸೂರಿನಲ್ಲಿ‌ ಮೊದಲ ಹಂತದ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ.

Continue Reading

ಕರ್ನಾಟಕ

Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

Reliance Jio: ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿಕೊಂಡಿದೆ.

VISTARANEWS.COM


on

Reliance Jio
Koo

ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್‌ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್‌ ಜಿಯೋ ಟೆಲಿಕಾಂ (Reliance Jio) ಹೇಳಿಕೊಂಡಿದೆ.

ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಪ್ರವೇಶ ಮಟ್ಟದ ಬಳಕೆದಾರರಿಗೆ 28 ದಿನಗಳ ಪ್ರಿಪೇಯ್ಡ್ ಯೋಜನೆಯು (2G ಬಳಕೆದಾರರು ಇಲ್ಲಿಯವರೆಗೆ) ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 199 ರೂ. ಆಗಿದೆ. ಆದರೆ ಜಿಯೋಫೋನ್‌ ಅಥವಾ ಜಿಯೋಭಾರತ್ ಬಳಕೆದಾರರು 28 ದಿನಗಳವರೆಗೆ 91 ರೂ.ಗಳ ಬೆಲೆಗೆ ಯೋಜನೆಗಳನ್ನು ಪಡೆಯಬಹುದು. ಇನ್ನು ದೈನಂದಿನ 1GB ಡೇಟಾ ಪ್ರಯೋಜನದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 249 ರೂ. ಗಳಿಗೆ ಲಭ್ಯ ಇದೆ. ಆದರೆ ಇದೇ ಸೌಲಭ್ಯದ ಪ್ಲ್ಯಾನ್‌ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 299 ರೂ. ಗಳ ದರದಲ್ಲಿ ಇವೆ. ಹೀಗಾಗಿ ಜಿಯೋ ಗ್ರಾಹಕರಿಗೆ ಈ ಯೋಜನೆಯಲ್ಲಿ ಸುಮಾರು 50ರೂ. ಉಳಿತಾಯ ಆದಂತೆ. ಹಾಗೆಯೇ ದಿನಕ್ಕೆ 1.5GB ಡೇಟಾ ಸೌಲಭ್ಯದ ಯೋಜನೆ ಬೆಲೆ ಜಿಯೋದಲ್ಲಿ 299 ರೂ. ಇದೆ. ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 349 ರೂ. ಗಳು ಆಗಿದೆ. ಅದೇ ರೀತಿ ದೈನಂದಿನ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಜಿಯೋದಲ್ಲಿ 349 ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಬೆಲೆಯು 379ರೂ. ಗಳು ಆಗಿದೆ. ಹಾಗೆಯೇ ಪ್ರತಿದಿನ 2.5GB ಡೇಟಾ ಸೌಲಭ್ಯದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 399 ರೂ. ಗಳಿಗೆ ಲಭ್ಯ ಇದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 409 ರೂ. ಗಳಿಗೆ ಲಭ್ಯ ಎಂದು ಜಿಯೊ ಹೇಳಿದೆ.

Shocked Young Man with Smartphone

ಹಾಗೆಯೇ ಪ್ರತಿದಿನ 2.5GB ಡೇಟಾ ಜತೆಗೆ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಯ ಹೊಸ ದರ ಜಿಯೋದಲ್ಲಿ 3599 ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ 3599 ರೂ. ಬೆಲೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ವಾರ್ಷಿಕ ವ್ಯಾಲಿಡಿಟಿ ಪ್ರಯೋಜನ ಲಭ್ಯವಾದರೂ, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಈ ವಾರ್ಷಿಕ ವ್ಯಾಲಿಡಿಟಿ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ ಶೇ. 20% ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.

ಇದನ್ನೂ ಓದಿ: Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

ಅದೇ ರೀತಿ ಜಿಯೋ ಟೆಲಿಕಾಂನ 30GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಯೋಜನೆಯ ಬೆಲೆಯು 349ರೂ.ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆಯು 449ರೂ. ಗಳ ದರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಜಿಯೋದ 75GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 449 ರೂ. ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನ 75GB ಡೇಟಾ ಪ್ರಯೋಜನದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 549 ರೂ. ಗಳು ಆಗಿದೆ ಎಂದು ಜಿಯೊ ಪ್ರಕಟಣೆ ತಿಳಿಸಿದೆ.

Continue Reading
Advertisement
Viral Video
Latest1 min ago

Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪ್ಲೀಸ್‌ ಎಂದ ಸಂಸದೆ; ಹೆಂಗಸರನ್ನು ನೋಡಲ್ಲ ಎಂದ ಸ್ಪೀಕರ್‌!

Viral Video
Latest10 mins ago

Viral Video: ಪ್ರೇಯಸಿಯ ಕಣ್ಮುಂದೆಯೇ ಆಕೆಯ ತಂದೆಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

Dating Application
Latest18 mins ago

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Special awareness programme on drug abuse illegal trafficking
ಬೆಂಗಳೂರು22 mins ago

Bengaluru News: ಮಾದಕ ದ್ರವ್ಯ ಅಕ್ರಮ ಸಾಗಾಟ; ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Monsoon session
ಕರ್ನಾಟಕ23 mins ago

Monsoon session: ರಾಜ್ಯ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್‌; ದಿನಾಂಕ ಫೈನಲ್ ಮಾಡಿದ ಸಿಎಂ

UPSC 2024
ಪ್ರಮುಖ ಸುದ್ದಿ28 mins ago

UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

Kabzaa movie Appreciation Letter from Union Finance Ministry to Sri siddeshwar Enterprises
ಕರ್ನಾಟಕ57 mins ago

Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

Parliament Sessions
ಪ್ರಮುಖ ಸುದ್ದಿ1 hour ago

Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ

Reliance Jio
ಕರ್ನಾಟಕ1 hour ago

Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

Parliament Sessions
ದೇಶ1 hour ago

Parliament Sessions: ಮೋದಿ ಆತ್ಮದ ಜೊತೆ ಪರಮಾತ್ಮನ ಸಂವಹನ; ರಾಹುಲ್‌ ಗಾಂಧಿ ವ್ಯಂಗ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌