Jeff bezos ಬಿಚ್ಚುನುಡಿ | ಜಗತ್ತಿನ ಅತಿ ಶ್ರೀಮಂತನನ್ನು ಕಾಡುವ ಸಂಗತಿಯಿದು - Vistara News

ಲೈಫ್‌ಸ್ಟೈಲ್

Jeff bezos ಬಿಚ್ಚುನುಡಿ | ಜಗತ್ತಿನ ಅತಿ ಶ್ರೀಮಂತನನ್ನು ಕಾಡುವ ಸಂಗತಿಯಿದು

ಅಮೆಜಾನ್‌ ಮಾಲಿಕ, ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬನಾದ ಜೆಫ್‌ ಬೆಜೋಸ್‌ಗೆ ಕಾಡುವ ವಿಷಯ ಯಾವುದು? ಬೆಜೋಸ್‌ನಂತೆ ನಿಮ್ಮನ್ನೂ ಅದು ಕಾಡದಿರಲಿ!

VISTARANEWS.COM


on

jeff bezos and Economic Recession
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಮುಂದೇನಾಗಬೇಕಂತಿದ್ದೀರಿ?ʼ- ಈ ಪ್ರಶ್ನೆಯನ್ನು ನಾವೆಲ್ಲಾ ಬಹಳಷ್ಟು ಬಾರಿ ಕೇಳಿದ್ದೇವೆ, ಕೇಳಿಸಿಕೊಂಡಿದ್ದೇವೆ. ಆದರೆ ಮುಂದೊಂದು ದಿನ- ಅಂದರೆ ವಯಸ್ಸಾಗಿ ತಲೆ ಹಣ್ಣಾಗಿ, ಧ್ವನಿ ನಡುಗುವ ಹೊತ್ತಿಗೆ ʻಹಿಂದೇನು ಮಾಡಬೇಕೆಂದಿದ್ದಿರಿ?ʼ ಎನ್ನುವ ಪ್ರಶ್ನೆ ಬಂದರೆ…!

ಅಮೆಜಾನ್.ಕಾಮ್‌ ಸಂಸ್ಥೆಯ ಸಿಇಒ ಜೆಫ್‌ ಬೆಜೋಸ್‌ ಅವರಲ್ಲಿ ಈ ಪ್ರಶ್ನೆಗೆ ಉತ್ತರ ಇದೆಯಂತೆ. ʻನಿಮಗೆ ೮೦ ವರ್ಷವಾದಾಗ ಹಳೆಯ ಬದುಕಿನ ಬಗ್ಗೆ ಹಳಹಳಿಕೆ ಇದ್ದರೆ- ಏನೇನು ಮಾಡಿದ್ದೀರಿ ಎಂಬ ವಿಷಯಕ್ಕಲ್ಲ. ಬದಲಿಗೆ, ಏನು ಮಾಡದೆ ಬಿಟ್ಟುಬಿಟ್ಟಿರಿ ಎಂಬ ವಿಷಯಕ್ಕೆ. ಮಾಡಿದ, ಮಾಡಿ ಸೋತಂಥ ವಿಷಯಗಳ ಬಗ್ಗೆ ನಿಮಗೆ ಅಪರೂಪಕ್ಕೆ ಬೇಸರವಿರಬಹುದು, ಆದರೆ ಮಾಡದೆ ಉಳಿಸಿದ ವಿಷಯಗಳೇ ಕಾಡುವುದು ಹೆಚ್ಚುʼ ಎಂಬುದು ಅವರ ಅಂಬೋಣ. ೫೪ ವರ್ಷದ ಈ ಉದ್ಯಮಿ, ಸದ್ಯಕ್ಕೆ ೧೩೦.೫ ಬಿಲಿಯನ್‌ ಡಾಲರ್‌ಗಳ ಒಡೆಯ.

ʻನಾನು ಹೇಳುತ್ತಿರುವುದು ಕೇವಲ ವೃತ್ತಿ, ಉದ್ಯಮದ ವಿಷಯದಲ್ಲಿ ಮಾತ್ರವಲ್ಲ. ಆ ವ್ಯಕ್ತಿಯನ್ನು ಕಂಡರೆ ನನಗಿಷ್ಟವಿತ್ತು. ಆದರೆ ನಾನದನ್ನು ಅವರಿಗೆ ಹೇಳಲೇ ಇಲ್ಲ ಎನಿಸುತ್ತದೆ. ಮಾತ್ರವಲ್ಲ, ೫೦ ವರ್ಷಗಳ ನಂತರವೂ ನಿಮ್ಮನ್ನು ಕಾಡುವ ಪ್ರಶ್ನೆಯೆಂದರೆ, ನಾನೇಕೆ ಆಗ ಆ ವಿಷಯದ ಹಿಂದೆ ಬೀಳಲಿಲ್ಲ ಎಂಬುದು. ಇಂಥ ವಿಷಯಗಳು ನಮ್ಮನ್ನು ಕಾಡತೊಡಗಿದರೆ ನಾವು ಸಂತೋಷವಾಗಿರುವುದು ಕಷ್ಟʼ ಎನ್ನುತ್ತಾರೆ ಈ ಯಶಸ್ವೀ ಉದ್ಯಮಿ. ಮಾಡಲೇಬೇಕು ಎನ್ನುವಂಥ ಕನಸೊಂದನ್ನು ಹಿಂದೊಮ್ಮೆ ಕಂಡಿದ್ದ ಈತ, ಆ ಕನಸಿನ ಹಿಂದೆ ಹೋಗಿಯೇ ಇಂದು ಉದ್ಯಮದಲ್ಲಿ ಉತ್ತುಂಗದಲ್ಲಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಅವರಿಗಿದ್ದ ಒಳ್ಳೆಯ ಬ್ಯಾಂಕಿಂಗ್‌ ಉದ್ಯೋಗವನ್ನು ಬಿಟ್ಟು ಅಮೆಜಾನ್‌.ಕಾಮ್‌ ಎಂಬ ಪುಟ್ಟ ವೆಬ್‌ಸೈಟ್‌ ಆರಂಭಿಸಿ, ಇಂಟರ್‌ನೆಟ್‌ ಮೂಲಕ ಪುಸ್ತಕ ಮಾರಾಟ ಆರಂಭಿಸಿದಾಗ ಬಹಳಷ್ಟು ಮಂದಿಗೆ ಇವರ ನಿರ್ಧಾರ ಮೂರ್ಖತನದ್ದು ಎನಿಸಿತ್ತು. ಆದರೆ ಇದರಲ್ಲಿ ಯಶಸ್ಸಿದೆ ಎಂಬ ದೃಢ ನಂಬಿಕೆಯಿಂದ ಜೆಫ್‌ ತೊಡಗಿಸಿಕೊಂಡಿದ್ದರು. ʻಉದ್ಯೋಗ ಬಿಟ್ಟು ಉದ್ಯಮ ಆರಂಭಿಸಬೇಕೆಂಬ ನನ್ನ ಕನಸಿನ ಬಗ್ಗೆ ನನ್ನ ಬಾಸ್‌ ಬಳಿ ಹೇಳಿಕೊಂಡಿದ್ದೆ. ನನ್ನನ್ನು ದೊಡ್ಡದೊಂದು ವಾಕ್‌ಗೆ ಕರೆದೊಯ್ದ ಅವರು, ನನ್ನ ಮಾತನ್ನಷ್ಟೂ ಕೇಳಿಸಿಕೊಂಡಿದ್ದರು. ʻನಿನ್ನ ಯೋಜನೆ ಅದ್ಭುತವಾಗಿದೆ. ಆದರೆ ನಿನ್ನಂಥವರಿಗಲ್ಲದೆ, ಕೆಲಸವಿಲ್ಲದೆ ಕುಳಿತವರಿಗೆ ಈ ಯೋಜನೆ ಮತ್ತೂ ಅದ್ಭುತವಾಗಿದೆʼ ಎಂದು ಹೇಳಿದ್ದರು. ಹಾಗಾಗಿ ಅಮೆಜಾನ್‌ ಆರಂಭಿಸುವ ಯೋಜನೆಯ ಬಗ್ಗೆ ದೀರ್ಘಕಾಲ ಪುನರಾವಲೋಕನ ಮಾಡಿದ್ದೆʼ ಎಂದು ಜೆಫ್‌ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

ಈ ನಿರ್ಧಾರ ಸರಿಯೇ, ಸೋತರೇನು ಮಾಡುವುದು ಎಂಬ ಭೀತಿ ತಮ್ಮನ್ನು ಕಾಡಿರಲಿಲ್ಲ. ಬದಲಿಗೆ, ಈ ಪ್ರಯತ್ನ ಮಾಡದೇ ಉಳಿದರೆ ಅದೇ ಹಳಹಳಿಕೆಯಾಗಿ ಕಾಡಬಹುದಿತ್ತು. ಹಾಗಾಗಿ ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆಯಿದೆ ಎಂದು ಜೆಫ್‌ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮ್ಮನ್ನು ಜೀವನದುದ್ದಕ್ಕೂ ಬೆಂಬಲಿಸುತ್ತಾ, ಪ್ರೀತಿಸುತ್ತಾ ಬಂದವರಿಂದಾಗಿ ಇವೆಲ್ಲಾ ಸಾಧ್ಯವಾಯಿತು ಎಂಬುದು ಅವರ ಮನದ ಮಾತು.

ಇದನ್ನೂ ಓದಿ | ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ

ʻ೧೯೯೪ರ ಮಾತಿದು. ವಾಲ್‌ಸ್ಟ್ರೀಟ್‌ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಈ ವ್ಯಕ್ತಿಯನ್ನು ಮೆಕೆನ್‌ಜೀ ಮದುವೆಯಾಗಿದ್ದಳು. ಆದರೆ ನಮ್ಮ ವಿವಾಹವಾದ ಒಂದು ವರ್ಷಕ್ಕೆ, ಇರುವ ಕೆಲಸ ಬಿಟ್ಟು ಇಂಟರ್‌ನೆಟ್‌ನಲ್ಲಿ ಪುಸ್ತಕದಂಗಡಿ ಆರಂಭಿಸುವುದಾಗಿ ಆಕೆಯಲ್ಲಿ ಹೇಳಿದ್ದೆ. ಆಗ ಆಕೆ ಕೇಳಿದ್ದ ಮೊದಲ ಪ್ರಶ್ನೆ- ʻಇಂಟರ್‌ನೆಟ್‌ ಎಂದರೇನು?ʼ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಈ ಬಗ್ಗೆ ಮಾಹಿತಿ ಇಲ್ಲದಿರುವಾಗಲೂ ಆಕೆ ನನಗೆ ಹೇಳಿದ್ದು, ʻಗ್ರೇಟ್‌! ಮಾಡೋಣ!ʼ ಉದ್ದಿಮೆ ಆರಂಭಿಸುವ ನನ್ನ ಕನಸು ಆಕೆಗೆ ತಿಳಿದಿತ್ತುʼ ಎಂದು ಜೆಫ್‌ ತಮ್ಮ ಮಡದಿಯ ಬಗ್ಗೆ ವಿವರಿಸಿದ್ದಾರೆ. ತನ್ನ ಹೆತ್ತವರು ಮತ್ತು ತನ್ನಜ್ಜ-ಅಜ್ಜಿ ಬದುಕಿನಲ್ಲಿ ತಮಗೆ ಸದಾ ಸ್ಫೂರ್ತಿಯಾಗಿದ್ದವರು ಎಂಬುದು ಅವರ ಕೃತಜ್ಞತೆಯ ಮಾತು.

ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ೧೯೬೪ರಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ತಮ್ಮ ತಾಯಿ ಗರ್ಭಿಣಿಯಾಗಿದ್ದರು. ಆಗ ಅದೆಲ್ಲಾ ಅಲ್ಲಿ ಒಪ್ಪಿತ ಅಲ್ಲದ್ದರಿಂದ ಆಕೆಯನ್ನು ಶಾಲೆಯಿಂದ ಹೊರಹಾಕಲು ಯತ್ನಿಸಲಾಗಿತ್ತು. ಆದರೆ ಆಕೆಯ ತಂದೆ-ತಾಯಿ ಬೆಂಬಲಕ್ಕಿದ್ದರು. ಹಾಗಾಗಿ ಎಂಥಾ ಪರಿಸ್ಥಿತಿಯಲ್ಲೂ ಜೊತೆ ಬಿಡದಂಥ ಕುಟುಂಬ ತಮ್ಮ ಪಾಲಿಗೆ ದೊರೆಯಿತು. ಎಂಥಾ ಅಪಾಯ, ಸವಾಲನ್ನೂ ಎದುರಿಸುವ ಧೈರ್ಯ ಇದರಿಂದ ಒದಗುತ್ತದೆ ಎಂಬುದು ಜೆಫ್‌ ಅವರ ಅನುಭವದ ಮಾತು.  

ಇದನ್ನೂ ಓದಿ | ವೈರಲ್‌ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ಒಂದೆರೆಡು ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ಫ್ಯಾಷನ್‌ನಲ್ಲಿ ವೆರೈಟಿ ಡಿಸೈನ್‌ನಲ್ಲಿ ಮರಳಿವೆ. ಸೀರೆಪ್ರಿಯ ಮಹಿಳೆಯರನ್ನು ಸಿಂಗರಿಸಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಬ್ಲೌಸ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Back button saree blouse
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದೆರೆಡು ದಶಕಗಳ ಹಿಂದೆ ಸಖತ್‌ ಟ್ರೆಂಡಿಯಾಗಿದ್ದ, ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ವೆರೈಟಿ ಡಿಸೈನ್‌ನಲ್ಲಿ ತಮ್ಮ ಜಾದೂ ಮಾಡಿವೆ. ಸೀರೆ ಪ್ರಿಯ ಮಾನಿನಿಯರನ್ನು ಸಿಂಗರಿಸಲಾರಂಭಿಸಿವೆ.

Back button saree blouse

ಬ್ಯಾಕ್‌ ಬಟನ್ ಬ್ಲೌಸ್‌ ಪುರಾಣ

“ಬಹುತೇಕ ಸೀರೆ ಬ್ಲೌಸ್‌ಗಳಿಗೆ ಫ್ರಂಟ್‌ ಬಟನ್‌ ಡಿಸೈನ್‌ ಇರುವುದು ಸಾಮಾನ್ಯ. ಎಲ್ಲರಿಗೂ ತಿಳಿದಿರುವಂತೆ ಈ ಡಿಸೈನ್‌ ಮೊದಲಿನಿಂದಲೂ ಎವರ್‌ಗ್ರೀನ್‌ ವಿನ್ಯಾಸದಲ್ಲಿ ಸೇರಿ ಹೋಗಿದೆ. ವಯಸ್ಸಿನ ಪರಿಮಿತಿಯಿಲ್ಲದೇ ಎಲ್ಲರೂ ಈ ಡಿಸೈನ್‌ನ ಸೀರೆಯನ್ನು ಉಡುವುದು ಸಾಮಾನ್ಯವಾಗಿದೆ. ಇನ್ನು, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ವಿಷಯಕ್ಕೆ ಬಂದಲ್ಲಿ, ಒಂದೆರೆಡು ದಶಕಗಳ ಹಿಂದೆ ಈ ಫ್ಯಾಷನ್‌ ಬಂತು. ಈ ಫ್ಯಾಷನ್‌ ಯಾವ ಮಟ್ಟಿಗೆ ಹಿಟ್‌ ಆಯಿತೆಂದರೇ, ಅಂದು ಈ ಶೈಲಿಯ ಸೀರೆ ಬ್ಲೌಸ್‌ ಧರಿಸಿದವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು. ಆ ಮಟ್ಟಿಗೆ ಈ ರೀತಿಯ ಬ್ಲೌಸ್‌ಗಳು ಜನಪ್ರಿಯಗೊಂಡಿದ್ದವು” ಎನ್ನುತ್ತಾರೆ ಬ್ಲೌಸ್‌ ಡಿಸೈನರ್ಸ್ ರಾಘವ್‌.

Back button saree blouse

ಟ್ರೆಂಡ್‌ನಲ್ಲಿರುವ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌

ಅಂದಹಾಗೆ, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳಲ್ಲಿ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಡೀಪ್‌ ಹಾರ್ಟ್ ಶೇಪ್‌ ಕಟ್‌ ಇರುವಂತಹ ಡಿಸೈನ್‌ನವು, ಹೈ ನೆಕ್‌ ಬಟನ್‌ ಬ್ಲೌಸ್‌, ಡೀಪ್‌ ನೆಕ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಟ್ಯಾಸೆಲ್ಸ್ & ಬಟನ್‌ ಬ್ಯಾಕ್‌ ಲೆಸ್‌ ಬ್ಲೌಸ್, ವೈಡ್‌ ಕಟ್ ಬಟನ್‌ ಬ್ಲೌಸ್‌, ಟೈಯಿಂಗ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಕ್ರಾಪ್‌ ಟಾಪ್‌ ಶೈಲಿಯ ಬ್ಯಾಕ್‌ ಬಟನ್‌ ಬ್ಲೌಸ್‌ ಸೇರಿದಂತೆ ನಾನಾ ವಿನ್ಯಾಸದವು ಮಾನಿನಿಯರನ್ನು ಸಿಂಗರಿಸಿವೆ. ಆಯಾ, ಸೀರೆಯ ಫ್ಯಾಬ್ರಿಕ್‌ನ ಆಧಾರದ ಮೇಲೆ ಬ್ಲೌಸ್‌ ಡಿಸೈನರ್‌ಗಳು ಇಂತಹ ವಿನ್ಯಾಸವನ್ನು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಯಂಗ್‌ ಹೆಣ್ಣುಮಕ್ಕಳು ಈ ವಿನ್ಯಾಸದ ಸೀರೆ ಬ್ಲೌಸ್‌ಗಳನ್ನು ಅತಿ ಹೆಚ್ಚು ಧರಿಸುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ದಿಯಾ ಹಾಗೂ ರಕ್ಷಾ. ಅವರ ಪ್ರಕಾರ, ಬ್ಯಾಕ್‌ ಬಟನ್‌ ಬ್ಲೌಸ್‌ಗಳು ಮಾಡರ್ನ್ ಲುಕ್‌ ನೀಡುವುದರೊಂದಿಗೆ ಯಂಗ್‌ ಲುಕ್‌ ನೀಡುತ್ತವಂತೆ.

Back button saree blouse

ಸೀರೆಗೆ ತಕ್ಕ ಡಿಸೈನ್‌ ಆಯ್ಕೆ

ಉಡುವ ಸೀರೆಗೆ ತಕ್ಕಂತೆ ಈ ಬ್ಯಾಕ್‌ ಬಟನ್‌ ಬ್ಲೌಸ್‌ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಸ್‌. ಡಿಸೈನರ್‌ ಸೀರೆಗೆ ಕಾಕ್‌ಟೈಲ್‌ ಡಿಸೈನ್ಸ್, ರೇಷ್ಮೆ ಸೀರೆಗೆ ಡೀಪ್‌ ನೆಕ್‌ ಹಾಗೂ ಟಾಸೆಲ್ಸ್ ಇರುವಂತವು, ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್ ಇರುವಂತವು, ಸಾದಾ ಸೀರೆಗೆ ಹೈ ನೆಕ್‌ ಶೈಲಿಯವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ರೆಟ್ರೋ ಲುಕ್‌ಗೆ 3 ಟಿಪ್ಸ್

  • ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ನಲ್ಲಿ ರೆಟ್ರೋ ಲುಕ್‌ ಪಡೆಯಲು ವಿಂಟೇಜ್‌ ಲುಕ್‌ ನೀಡುವ ಮೇಕಪ್‌ ಮಾಡಬೇಕು.
  • ಹೇರ್‌ಸ್ಟೈಲ್‌ ಕೂಡ ಆದಷ್ಟೂ ಈ ಲುಕ್‌ಗೆ ಮ್ಯಾಚ್‌ ಆಗಬೇಕು.
  • ಸೀರೆ ಡ್ರೇಪಿಂಗ್‌, ರೆಟ್ರೋ ಲುಕ್‌ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್‌ಗಳ್ಯಾವುವು? ಅವುಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಾಗಿ (Star Cricket Theme Fashion) ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Cricket Theam Fashion
ಚಿತ್ರಗಳು: ನಟಿ ಜಾಹ್ನವಿ ಕಪೂರ್, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಫ್ಯಾಷೆನಬಲ್‌ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್‌ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್‌ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್‌ ಥೀಮ್‌ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್‌ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್‌ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.

Star Cricket Theam Fashion

ಕಟೌಟ್‌ ರೆಡ್‌ ಡ್ರೆಸ್‌ ಬ್ಯಾಕ್‌ ವಿನ್ಯಾಸದಲ್ಲಿ ಕ್ರಿಕೆಟ್‌ ಬಾಲ್‌ ಡಿಸೈನ್‌

ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್‌ ಡ್ರೆಸ್‌ನ ಬ್ಯಾಕ್‌ ಡಿಸೈನ್‌ ಮಲ್ಟಿ ಕ್ರಿಕೆಟ್‌ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್‌ ಫ್ಯಾಷನ್‌ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.

Star Cricket Theam Fashion

ಸೀರೆಯಲ್ಲಿ ತ್ರಿಡಿ ಕ್ರಿಕೆಟ್‌ ಬಾಲ್‌ ಬಾರ್ಡರ್ ಚಿತ್ತಾರ

ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್‌ ಕಾನ್ಸೆಪ್ಟ್ ಡಿಸೈನ್‌ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್‌ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್‌ ಕ್ರಿಕೆಟ್‌ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್‌ ರೆಡ್‌ & ವೈಟ್‌ ಸ್ಟ್ರೈಪ್ಸ್ ಸೀರೆಯ ಬಾರ್ಡರ್‌, ಕ್ರಿಕೆಟ್‌ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್‌ ಮಾಡಲಾಗಿತ್ತು.

Star Cricket Theam Fashion

ಕ್ರಿಕೆಟ್‌ ಕ್ರಾಪ್ಡ್ ಜೆರ್ಸಿ ಟಾಪ್‌

ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್‌ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.

Star Cricket Theam Fashion

ಜೆನ್‌ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್

ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್‌ ಹಾಗೂ ಬ್ಲ್ಯೂ ಮತ್ತು ರೆಡ್‌ ಸ್ಟ್ರೈಪ್ಸ್ ಇರುವ ಕಾಲರ್‌ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್‌ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್‌ ಥೀಮ್‌ ಡ್ರೆಸ್‌ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.

Star Cricket Theam Fashion

ಬಾಡಿಕಾನ್‌ ಡ್ರೆಸ್‌ ಮೇಲೆ ಬ್ಯಾಟಿಂಗ್‌ ಸಿಕ್ವೀನ್ಸ್

ಜಾಹ್ನವಿಯ ಹೈ ಫ್ಯಾಷನ್‌ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್‌ ಡ್ರೆಸ್‌ ಮೇಲೆ ಇದ್ದ ಬ್ಯಾಟಿಂಗ್‌ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿತ್ತು.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಜಾಹ್ನವಿ ಕ್ರಿಕೆಟ್‌ ಥೀಮ್‌ ಆಕ್ಸೆಸರೀಸ್‌

ಕ್ರಿಕೆಟ್‌ ಬಾಲ್‌ ಆಕಾರದ ಕ್ಲಚ್‌, ಹ್ಯಾಂಡ್‌ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್‌ ಅವರನ್ನು ಮತ್ತಷ್ಟು ಕ್ರಿಕೆಟ್‌ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್‌ ಥೀಮ್‌ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್‌ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

Continue Reading

ಆರೋಗ್ಯ

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ (Jackfruit seed) ಸಾಕಷ್ಟು ಪೋಷಕಾಂಶಗಳಿವೆ.

VISTARANEWS.COM


on

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!
Koo

ಬೇಸಿಗೆ ಬಂದ ತಕ್ಷಣ ಸಂತಸ ತರುವ ವಿಚಾರಗಳ ಪೈಕಿ ಹಲಸು, ಮಾವುಗಳಿಗೂ ಕ್ರೆಡಿಟ್‌ ಸಲ್ಲಬೇಕು. ಯಾಕೆಂದರೆ, ಹಲಸಿನ ಹಣ್ಣಿಗೂ ಮಾವಿನ ಹಣ್ಣಿಗೂ ಕಾಯಬೇಕೆಂದರೆ ನಾವು ಬೇಸಿಗೆಗೆ ಕಾಯಲೇಬೇಕು. ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ ಸಾಕಷ್ಟು ಪೋಷಕಾಂಶಗಳಿವೆ. ಆರೋಗ್ಯದ ಲಾಭಗಳಿವೆ. ಹಲಸಿನ ಹಣ್ಣು ವಿಟಮಿನ್‌ ಬಿ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿದ್ದರೆ, ಅದರ ಬೀಜಗಳಲ್ಲಿ ಥೈಮೀನ್‌, ರೈಬೋಫ್ಲೇವಿನ್‌ ಕಣ್ಣು, ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಬಹಳ ಉತ್ತಮ. ಬೀಜಗಳಲ್ಲಿ ಝಿಂಕ್‌, ಕಬ್ಬಿಣಾಂಶ, ಕ್ಯಾಲ್ಶಿಯಂ, ತಾಮ್ರ, ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಮತ್ತಿತರ ಖನಿಜ ಲವಣಗಳಿಂದ ಸಮೃದ್ಧವಾಗಿದೆ. ಇವು ಬ್ಯಾಕ್ಟೀರಿಯಾಗಳಿಂದಾಗುವ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು, ಇವುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತನ್ನು ಹೊಂದಿದೆ. ಬನ್ನಿ, ಹಲಸಿನ ಹಣ್ಣಿನ ಬೀಜದಿಂದ ಯಾವೆಲ್ಲ ಆರೋಗ್ಯದ ಲಾಭಗಳಿವೆ (Jackfruit seed) ಎಂಬುದನ್ನು ನೋಡೋಣ.

Skin Care

ಚರ್ಮದ ಸುಕ್ಕಿಗೆ

ಚರ್ಮದಲ್ಲಿ ಸುಕ್ಕಿನ ಸಮಸ್ಯೆಯೇ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಈ ಸಮಸ್ಯೆ ನಿಮಗಿದೆ ಎಂದಾದಲ್ಲಿ ಈ ಬೀಜಕ್ಕೆ ಸ್ವಲ್ಪ ಹಾಲು ಸೇರಿಸಿ ನುಣುಪಾಗಿ ಅರೆದು ಅದರ ಪೇಸ್ಟನ್ನು ಮುಖದ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮ ನುಣುಪಾಗುತ್ತದೆ. ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ. ನಿರಿಗೆಗಳು ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಮಾಡುವುದರಿಂದ ಒಳ್ಲೆಯ ಫಲಿತಾಂಶ ಕಾಣಬಹುದು.

Stress Reduction Tea Benefits

ಮಾನಸಿಕ ಒತ್ತಡಕ್ಕೆ

ಹಲಸಿನ ಹಣ್ಣಿನ ಬೀಜದಲ್ಲಿ ಸಾಕಷ್ಟು ಪ್ರೊಟೀನ್‌ ಹಾಗೂ ಮೈಕ್ರೋ ನ್ಯೂಟ್ರಿಯೆಂಟ್‌ಗಳು ಇರುವುದರಿಂದ ಇವು ಮಾನಸಿಕ ಒತ್ತಡ ಹಾಗೂ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ವಾಸಿ ಮಾಡುವಲ್ಲಿ ನೆರವಾಗುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಈ ಉಪಯೋಗ ಪಡೆಯಬಹುದು.

Woman anemia image Coriander Benefits

ಅನೀಮಿಯಾಕ್ಕೆ

ಹಲಸಿನ ಹಣ್ಣಿನ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆತು, ಅನೀಮಿಯಾದಂತಹ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ತುಂಬಿಕೊಳ್ಳುತ್ತದೆ. ಕಬ್ಬಿನಾಂಶವು ಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಬೇಕಾದ ಪ್ರಮುಖ ಪೋಷಕಾಂಶವಾಗಿರುವುದರಿಂದ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ನೀಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.

Close-up human eye, lens, cornea and brown iris.

ಕಣ್ಣಿನ ಆರೋಗ್ಯಕ್ಕೆ ಹಾಗೂ ಕೂದಲ ಪೋಷಣೆಗೆ

ಹಲಸಿನ ಬೀಜದಲ್ಲಿ ವಿಟಮಿನ್‌ ಎ ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರ. ಅಷ್ಟೇ ಅಲ್ಲ, ಕೂದಲಿಗೂ ಇದು ಅತ್ಯುತ್ತಮ ಪೋಷಣೆ ನೀಡುತ್ತದೆ.

healthy internal organs of human digestive system

ಜೀರ್ಣಕ್ರಿಯೆ ಸಮಸ್ಯೆಗೆ

ತಿಂದದನ್ನು ಸರಿಯಾಗಿ ಜೀರ್ಣವಾಗದೆ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ ಹಲಸಿನ ಹಣ್ಣಿನ ಬೀಜದ ಪುಡಿಯನ್ನು ಸೇವಿಸಿದರೆ ತಕ್ಷಣವೇ ಪರಿಹಾರ ಸಿಗುತ್ತದೆ. ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಇಂಥ ಸಂದರ್ಭಗಳಲ್ಲಿ ಬಳಸಬಹುದು. ಅಥವಾ ಮಲಬದ್ಧತೆಯ ಸಮಸ್ಯೆಯಿದ್ದರೆ, ಹಲಸಿನ ಬೀಜವನ್ನು ಬೇಯಿಸಿ ತಿನ್ನುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಮಾಂಸಖಂಡಗಳ ಬಲವರ್ಧನೆಗೆ

ಹಲಸಿನ ಹಣ್ಣಿನ ಬೀಜದಲ್ಲಿ ಅಧಿಕ ಗುಣಮಟ್ಟದ ಪ್ರೊಟೀನ್‌ ಇರುವುದರಿಂದ ಇದು ಮಾಂಸಖಂಡಗಳ ಬಲವರ್ಧನೆಗೆ ಅತ್ಯಂತ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‌ ಕೊಲೆಸ್ಟೆರಾಲ್‌ ರಹಿತವಾಗಿರುವುದರಿಂದ ಜಿಮ್‌ಗೆ ಹೋಗಿ ದೇಹದಾರ್ಢ್ಯತೆ ಬೆಳೆಸುವ ಮಂದಿಗೂ, ಫಿಟ್‌ನೆಸ್‌ ಪ್ರಿಯರಿಗೂ ಇದು ಒಳ್ಳೆಯ ಆಹಾರ.

Continue Reading

Latest

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಯುರ್ವೇದ ಸೂಚಿಸುವ ಏಳು ಗಿಡಮೂಲಿಕೆ ಪಾನೀಯಗಳು ಇವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು (Diabetes Management Tips) ನಿಯಂತ್ರಿಸಬಹುದು.

VISTARANEWS.COM


on

By

Diabetes Management Tips
Koo

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುವ ಕಾಯಿಲೆ ರಕ್ತದೊತ್ತಡ (blood pressure) ಮತ್ತು ಮಧುಮೇಹ (diabetes). ರಕ್ತದೊತ್ತಡವಾದರೆ ಬಹುಬೇಗನೆ ತನ್ನ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಮಧುಮೇಹ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ನೀವಾಗಿದ್ದರೆ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ (insulin) ಉತ್ಪಾದನೆಯನ್ನು ಹೆಚ್ಚಿಸುವ ಹಲವು ಆಯುರ್ವೇದ ಗಿಡಮೂಲಿಕೆಯ (Ayurvedic herbal) ಪಾನೀಯಗಳಿವೆ.

ಮಧುಮೇಹವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನ ನಡೆಸಲು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪುರಾತನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೈಸರ್ಗಿಕ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಮಧುಮೇಹದ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಏಳು ಪ್ರಸಿದ್ಧ ಆಯುರ್ವೇದ ಪಾನೀಯಗಳಿವೆ.

ಆಯುರ್ವೇದವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಆಯುರ್ವೇದದ ಪಾನೀಯಗಳು ಔಷಧೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ದೈನಂದಿನ ಜೀವನದಲ್ಲಿ ಸೇರಿಸಲು ನೆಚ್ಚಿನ ವಿಧಾನವಾಗಿದೆ. ಇದು ಕೇವಲ ರುಚಿಕರವಲ್ಲ ಆದರೆ ಸುಧಾರಿತ ಸೇರಿದಂತೆ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.


ದಾಲ್ಚಿನ್ನಿ ಮತ್ತು ಮೆಂತ್ಯ

ದಾಲ್ಚಿನ್ನಿ ಮತ್ತು ಮೆಂತ್ಯ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ದಾಲ್ಚಿನ್ನಿ ಮತ್ತು ಮೆಂತ್ಯಯೊಂದಿಗೆ ಒಂದು ಕಪ್ ಚಹಾ ಮಾಡಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಪದಾರ್ಥಗಳು ಮಧುಮೇಹ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯನ್ನು ಆಯುರ್ವೇದದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಬಹುದು. ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು.


ನೆಲ್ಲಿಕಾಯಿ

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆಮ್ಲಾ ಜ್ಯೂಸ್ ಮಧುಮೇಹವನ್ನು ನಿರ್ವಹಿಸಲು ಪ್ರಸಿದ್ಧವಾದ ಆಯುರ್ವೇದ ಟಾನಿಕ್ ಆಗಿದೆ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾವು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳನ್ನು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಅಗತ್ಯ ಸಂಯುಕ್ತವಾದ ಕರ್ಕ್ಯುಮಿನ್ ಸ್ವಾಭಾವಿಕವಾಗಿ ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಬಲ್ಲದು.

ಬೇವಿನ ಎಲೆ

ಔಷಧೀಯ ಗುಣಗಳು ಸಮೃದ್ಧವಾಗಿರುವ ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಸ್ವಲ್ಪ ಕಹಿಯಾಗಿದ್ದರೂ, ಬೇವಿನ ಎಲೆಯ ಚಹಾವು ಪರಿಣಾಮಕಾರಿ ಆಯುರ್ವೇದ ಪಾನೀಯವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


ನಿಂಬೆ ಮತ್ತು ಶುಂಠಿ

ನಿಂಬೆ ಮತ್ತು ಶುಂಠಿ ಆರೋಗ್ಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಶುಂಠಿ ಮತ್ತು ನಿಂಬೆಯ ಬೆಚ್ಚಗಿನ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ತ್ರಿಫಲ

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವು ಮೂರು ಹಣ್ಣುಗಳನ್ನು ಒಳಗೊಂಡಿದೆ: ಆಮ್ಲಾ, ಬಿಭಿಟಕಿ ಮತ್ತು ಹರಿತಕಿ. ತ್ರಿಫಲಾ ಚಹಾವು ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Continue Reading
Advertisement
IPL 2024
ಕ್ರೀಡೆ2 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Harish Poonja
ಕರ್ನಾಟಕ3 hours ago

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

IPL 2024
ಕ್ರೀಡೆ3 hours ago

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

Mother Dies
ಕರ್ನಾಟಕ4 hours ago

Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

young womans lover was stabbed in the neck by an ex lover
ಉತ್ತರ ಕನ್ನಡ4 hours ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ5 hours ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ5 hours ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ5 hours ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌