Mysore Dasara 2022 | ಪುಷ್ಪಾರ್ಚನೆ ಮುಹೂರ್ತದ ಎಫೆಕ್ಟ್‌; ಅಂಬಾರಿ ನೋಡಲು ರಾತ್ರಿವರೆಗೂ ಕಾಯಲೇಬೇಕು - Vistara News

ಕರ್ನಾಟಕ

Mysore Dasara 2022 | ಪುಷ್ಪಾರ್ಚನೆ ಮುಹೂರ್ತದ ಎಫೆಕ್ಟ್‌; ಅಂಬಾರಿ ನೋಡಲು ರಾತ್ರಿವರೆಗೂ ಕಾಯಲೇಬೇಕು

ವಿಜಯ ದಶಮಿಯಂದು ಪುಷ್ಪಾರ್ಷನೆ ನಂತರ ಅರಮನೆಯಿಂದ ಅಂಬಾರಿ ಹೊರಗೆ ಬರುವ ಹೊತ್ತಿಗೆ ಸಂಜೆ 6 ಗಂಟೆ ಆಗಬಹುದು. ಹೀಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ಜಂಬೂ ಸವಾರಿ ಮೆರವಣಿಗೆ ಸಾಗಲಿದೆ.

VISTARANEWS.COM


on

Mysore Dasara 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
dasara vishesha

| ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ದಸರಾ ಮಹೋತ್ಸವದ (Mysore Dasara 2022) ಅತ್ಯಾಕರ್ಷಣೆ ಎಂದರೆ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಜಂಬೂ ಸವಾರಿ. ಪ್ರತಿ ಬಾರಿಯೂ ವಿಜಯ ದಶಮಿಯಂದು ಜಂಬೂ ಸವಾರಿ ಮೆರವಣಿಗೆ ಮಧ್ಯಾಹ್ನ ಪ್ರಾರಂಭವಾಗಿ ಸಂಜೆ ಹೊತ್ತಿಗೆ ಮುಗಿಯುತ್ತಿತ್ತು. ಈ ಬಾರಿ ಸಂಜೆ ಶುರುವಾಗಿ ರಾತ್ರಿ ಮುಗಿಯಲಿದೆ. ವಿದ್ಯುತ್ ದೀಪಗಳ ಬೆಳಕಿನಲ್ಲಿ ವಿಜಯ ದಶಮಿ ಮೆರವಣಿಗೆ ಸಾಗಲಿದೆ.

ದಸರಾ ಮಹೋತ್ಸವ-2022ರ ಅಧಿಕೃತ ಆಹ್ವಾನ ಪತ್ರಿಕೆ ಪ್ರಕಟವಾಗಿದೆ. ಮೈಸೂರು ಜಿಲ್ಲಾಡಳಿತ ಈಗಾಗಲೇ ಉದ್ಘಾಟಕರಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖರಿಗೆ ಆಹ್ವಾನ ಪತ್ರಿಕೆ ನೀಡಿದೆ. ಆಹ್ವಾನ ಪತ್ರಿಕೆಯ ಪ್ರಕಾರ, ದಸರಾ ಉದ್ಘಾಟನೆ ಸೆಪ್ಟೆಂಬರ್ 26ರಂದು ಬೆಳಗ್ಗೆ 9.45ರಿಂದ 10.05ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಲಿದೆ.

ಇದನ್ನೂ ಓದಿ | Mysore Dasara 2022 | ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಚಿವ ಎಸ್.ಟಿ.ಸೋಮಶೇಖರ್ ಆಹ್ವಾನ

ಮಧ್ಯಾಹ್ನ ನಂದಿ ಪೂಜೆ: ಜಗತ್ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 5ರಂದು ನಡೆಯಲಿದೆ. ಅಂದು ಮಧ್ಯಾಹ್ನ 2.36ರಿಂದ 2.50ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಶಿವನ ವಾಹನವಾದರೆ, ವೀರಗಾಸೆ ಶಿವನ ರುದ್ರಾವತಾರ ವೀರಭದ್ರನ ಪ್ರತೀಕ. ಪ್ರತಿ ಬಾರಿಯೂ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಪೂಜೆ ಸಲ್ಲಿಸುವ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ನೀಡುವುದು ವಾಡಿಕೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಹೊತ್ತಿಗೆ ಮಧ್ಯಾಹ್ನ 3 ಗಂಟೆಯಾಗಲಿದೆ. ಅಲ್ಲಿವರೆಗೂ ಅರಮನೆ ಆವರಣ, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸೇರುವ ಜನರಿಗೆ ಯಾವುದೇ ಮನರಂಜನೆ ಇರುವುದಿಲ್ಲ. ನಂದಿ ಧ್ವಜ ಪೂಜೆಯಾದ ಮೇಲೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಸುಮಾರು 50 ಕಲಾತಂಡಗಳು, ಅಂದಾಜು 30ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಅರಮನೆಯಿಂದ ಬನ್ನಿಮಂಟಪದತ್ತ ಹೊರಡಲಿವೆ.

ಸಂಜೆ ಪುಷ್ಪಾರ್ಚನೆ
ವಿಜಯ ದಶಮಿ ಮೆರವಣಿಗೆ ಅಂದಾಜು ಒಂದೂವರೆ ಎರಡು ಕಿ.ಮೀ.ನಷ್ಟು ಉದ್ದದ ಮನರಂಜನೆಯ ಪ್ಯಾಕೇಜ್. ನಂದಿ ಧ್ವಜ ಮತ್ತು ನಿಶಾನೆ ಹೊತ್ತ ಅರ್ಜುನ ಆನೆ ಆಯುರ್ವೇದಿಕ್ ವೃತ್ತ ತಲುಪಿದ ಮೇಲೆ ಅರಮನೆ ಅಂಗಳದಲ್ಲಿ ಕುಳಿತವರಿಗೆ ಚಿನ್ನದ ಅಂಬಾರಿ ಕಾಣಿಸಲಿದೆ.

ಈ ಬಾರಿ ಐತಿಹಾಸಿಕ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಇದಕ್ಕಾಗಿ ಸಂಜೆ 5.07 ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನ ನಿಗದಿಪಡಿಸಲಾಗಿದೆ. ಅಂದರೆ ಚಿನ್ನದ ಅಂಬಾರಿ ಹೊರಡುವುದೇ ಸುಮಾರು 5.30 ಆಗಲಿದೆ. ಅರಮನೆಯಿಂದ ಹೊರಗೆ ಬರುವ ಹೊತ್ತಿಗೆ ಸಂಜೆ 6 ಗಂಟೆ ಆಗಬಹುದು. ಆಲ್ಬರ್ಟ್ ವಿಕ್ಟರ್ ರಸ್ತೆ ಮತ್ತು ಸಯ್ಯಾಜಿರಾವ್ ವೃತ್ತದಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲೇ ಚಿನ್ನದ ಅಂಬಾರಿ ಸಾಗಲಿದೆ. ಅಂಬಾರಿ ಬನ್ನಿಮಂಟಪ ತಲುಪುವ ಹೊತ್ತಿಗೆ 8 ಗಂಟೆ ರಾತ್ರಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಇಂದಿನಿಂದ ಬೆಳಕಿ ತಾಲೀಮು
ದಸರಾ ಮಹೋತ್ಸವದಲ್ಲಿ ಅಪರೂಪ ಎಂಬಂತೆ ಗಜಪಡೆಗೆ ಬೆಳಕಿನ ತಾಲೀಮು ನೀಡಲಾಗುತ್ತಿದೆ. ಸಾಮಾನ್ಯವಾಗಿ ವಿಜಯ ದಶಮಿಗೆ ಒಂದೂವರೆ ಅಥವಾ ಎರಡು ತಿಂಗಳು ಮುಂಚಿತವಾಗಿ ಗಜಪಯಣದ ಮೂಲಕ ಆನೆಗಳನ್ನು ಕಾಡಿನಿಂದ ನಾಡಿಗೆ ಕರೆದುಕೊಂಡು ಬರಲಾಗುತ್ತದೆ. ಅರಮನೆಯಲ್ಲಿ ಬೀಡು ಬಿಟ್ಟ ಆನೆಗಳಿಗೆ ನಿತ್ಯವೂ ಸ್ನಾನ, ಪೌಷ್ಟಿಕ ಆಹಾರ ನೀಡಿ ಸಲಹಲಾಗುತ್ತದೆ. ನಡಿಗೆ ತಾಲೀಮು, ಭಾರ ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ಹೀಗೆ ಮೂರು ಹಂತದ ತಾಲೀಮು ನೀಡಲಾಗುತ್ತದೆ. ಈ ಬಾರಿ ಹೆಚ್ಚುವರಿಯಾಗಿ ಬೆಳಕಿನ ತಾಲೀಮು ನೀಡಲಾಗುತ್ತಿದೆ. ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮುಹೂರ್ತ ವಿಳಂಬವಾಗಿರುವ ಕಾರಣ ಅಭಿಮನ್ಯು ವಿದ್ಯುತ್ ದೀಪದಲ್ಲಿ ಚಿನ್ನದ ಅಂಬಾರಿ ಹೊರಬೇಕಿದೆ. ಈ ಹಿನ್ನೆಲೆಯಲ್ಲಿ ಸೆಸ್ಕ್​ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಗಳ ಸಮನ್ವಯದೊಂದಿಗೆ ಇಂದಿನಿಂದ ಬೆಳಕಿನ ತಾಲೀಮು ನಡೆಯಲಿದೆ.

ಈಗಾಗಲೇ ಜಂಬೂ ಸವಾರಿ ಸಾಗುವ ಆಲ್ಬರ್ಟ್ ವಿಕ್ಟರ್ ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆಗೆ ಎಲ್​ಇಡಿ ಬಲ್ಬ್​ಗಳ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ಹೊತ್ತು ಮರದ ಅಂಬಾರಿ ಹೊತ್ತು ಆನೆಗಳು ವಿದ್ಯುತ್ ದೀಪಗಳ ನಡುವೆ ಹೆಜ್ಜೆ ಹಾಕಲಿವೆ. ದಸರಾ ಶುರುವಾದ ಮೇಲೆ ಅಂದರೆ ಸೆ.26ರಿಂದ ಅ.3ರವರೆಗೆ ಏಳೆಂಟು ದಿನ ರಾತ್ರಿ ಹೊತ್ತು ಆನೆಗಳು ಬೆಳಕಿನ ತಾಲೀಮು ನಡೆಸಲಿವೆ.
| ಡಾ.ವಿ.ಕರಿಕಾಳನ್, ಡಿಸಿಎಫ್

ಇದನ್ನೂ ಓದಿ | Mysore Dasara 2022 | ಯುವ ದಸರಾದಲ್ಲಿ ಕಿಚ್ಚನ ಮೋಡಿ; ರಂಗುತರಲಿರುವ ಬಾಲಿವುಡ್ ಗಾಯಕರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Anjali Murder Case: ಅಂಜಲಿ ಹಂತಕ ಗಿರೀಶ್‌ಗೆ ಜೂನ್ 16ರವರೆಗೆ‌ ನ್ಯಾಯಾಂಗ ಬಂಧನ

Anjali Murder Case: ಮೇ 23 ರಿಂದ ಎಂಟು ದಿನಗಳ ಕಾಲ ಗಿರೀಶನನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಆರೋಪಿಗೆ ಜೂನ್‌ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

Anjali Murder Case
Koo

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ಗೆ ಜೂನ್‌ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಹುಬ್ಬಳ್ಳಿಯ 3ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹೀಗಾಗಿ ಜೂನ್‌ 16ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಸೂಚಿಸಿದೆ.

ಮೇ 23 ರಿಂದ ಎಂಟು ದಿನಗಳ ಕಾಲ ಗಿರೀಶನನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಕಳೆದ ಎಂಟು ದಿನಗಳಿಂದ ಸಿಐಡಿ‌ ಕಸ್ಟಡಿಯಲ್ಲಿದ್ದ ಹಂತಕ ಗಿರೀಶ, ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಮತ್ತೆ ಕೆಲ ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡಿತ್ತು. ಆದರೆ, ಕೋರ್ಟ್‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಈಗಾಗಲೇ ಹತ್ಯೆಗೆ ಬಳಸಲಾಗಿದ್ದ ಚಾಕುವನ್ನು ಸಿಐಡಿ‌ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಾವಣಗೆರೆಯ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿತ್ತು. ಅಂಜಲಿ ಅಂಬಿಗೇರ ಹತ್ಯೆಗೆ ಆರೋಪಿ ಗಿರೀಶ ಬಳಸಿದ್ದ ಚಾಕುವನ್ನು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಗೆ ಇರಿಯಲು ಕೂಡ ಬಳಸಿದ್ದ. ರೈಲ್ವೆ ಪೊಲೀಸರು, ರೈಲ್ವೆ ಕೀ ಮ್ಯಾನ್‌ಗಳ ಜತೆಗೂಡಿ ಹುಡುಕಾಟ ನಡೆಸಿದಾಗ ಚಾಕು ಪತ್ತೆಯಾಗಿತ್ತು. ಕಳೆದ ಏಳು ದಿನಗಳಿಂದ ಚಾಕುವಿಗಾಗಿ ಹುಡುಕಾಟ ಸಿಐಡಿ‌ ಟೀಂ ಹುಡುಕಾಟ ನಡೆಸಿತ್ತು. ಆದರೆ, ತನಿಖೆಯ ಹಾದಿ ತಪ್ಪಿಸಲು ಚಾಕು ಎಲ್ಲಿ ಎಸೆದಿದ್ದೇನೆಂದು ಅರೋಪಿ ಬಾಯಿ ಬಿಟ್ಟಿರಲಿಲ್ಲ.

ಏನಿದು ಪ್ರಕರಣ?

Anjali Murder Case

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಮೇ 15ರಂದು ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.

ಇದನ್ನೂ ಓದಿ | Drown in lake: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳ ಸಾವು

ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್‌ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ. ಈ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

Continue Reading

ಪ್ರಮುಖ ಸುದ್ದಿ

MLC Election: ವಿಧಾನ ಪರಿಷತ್‌ ಚುನಾವಣೆ; ಯತೀಂದ್ರ ಸಿದ್ದರಾಮಯ್ಯ ಅವಿರೋಧ ಆಯ್ಕೆ

MLC Election: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೆಹಲಿ ಭೇಟಿ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್‌ ನಾಯಕರ ಬಳಿ ಚರ್ಚೆ ನಡೆಸಿದ್ದು, ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

VISTARANEWS.COM


on

MLC Election
Koo

ಬೆಂಗಳೂರು: ಜೂನ್‌ 13ರಂದು ವಿಧಾನ ಪರಿಷತ್‌ ಚುನಾವಣೆ (MLC Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 7 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಅವಿರೋಧ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಯತೀಂದ್ರ ಅವರ ಉಮೇದುವಾರಿಕೆಯನ್ನು ನವದೆಹಲಿಯಲ್ಲಿ ಗುರುವಾರ ಕಾಂಗ್ರೆಸ್‌ ಹೈಕಮಾಂಡ್‌ ಅನುಮೋದಿಸಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೆಹಲಿ ಭೇಟಿ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್‌ ನಾಯಕರ ಬಳಿ ಚರ್ಚೆ ನಡೆಸಿದ್ದು, ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಇನ್ನು ಉಳಿದ 6 ಕ್ಷೇತ್ರಗಳಿಗೆ ಪೈಪೋಟಿ ಹೆಚ್ಚಾಗಿದ್ದು, ಈ ಸ್ಥಾನಗಳಲ್ಲಿ ಮೈಸೂರು ಭಾಗದ ಪುಷ್ಪ ಅಮರನಾಥ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಈ ಬಾರಿ 7 ಸ್ಥಾನಗಳಿಗೆ 65 ಮಂದಿ ಆಕಾಂಕ್ಷಿಗಳ ಶಾರ್ಟ್‌ ಲಿಸ್ಟ್‌ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಯತೀಂದ್ರಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ಈ ಹಿಂದೆ ಹೇಳಿತ್ತು. ಅದರಂತೆ ಯತೀಂದ್ರ ಅವರಿಗೆ ಟಿಕೆಟ್‌ ಪಟ್ಟ ಎನ್ನಲಾಗಿದೆ.

ಈ ಬಗ್ಗೆ ಗುರುವಾರ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಹೋಗಿ ಪಟ್ಟಿ ನೀಡಿ ಬಂದಿದ್ದೇವೆ. 11 ಸ್ಥಾನಕ್ಕೆ 300 ಆಕಾಂಕ್ಷಿಗಳು ಇದ್ದರು. ನಾವು 65 ಮಂದಿಯ ಶಾರ್ಟ್​ ಲಿಸ್ಟ್​ ನೀಡಿದ್ದೇವೆ. ಯತೀಂದ್ರ ಅವರದ್ದು ಮೊದಲೇ ಕಮಿಟ್ ಮೆಂಟ್ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ. ಇವರ ಜತೆಗೆ ವಿಧಾನಸಭಾ ಟಿಕೆಟ್ ತ್ಯಾಗ ಮಾಡಿದ ಹಿರಿಯರು, ಸೋತವರು ಇದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ಓದಿ | Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್‌; ರಾಜೀನಾಮೆ ಕೊಡಲು ಸಿಎಂ ಸೂಚನೆ

ಅಕಾಂಕ್ಷಿಗಳಲ್ಲಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಬಯಲು ಸೀಮೆ ಸೇರಿ ಎಲ್ಲಾ ಭಾಗದವರಿದ್ದಾರೆ. 21 ಮಂದಿ ಕರಾವಳಿ ಭಾಗದಲ್ಲಿ, 11 ಮಂದಿ ಮೈಸೂರು ಭಾಗದ ಆಕಾಂಕ್ಷಿಗಳು ಇದ್ದಾರೆ ಎಂದು ಡಿಸಿಎಂ ತಿಳಿಸಿದ್ದರು. ಪರಿಷತ್‌ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧಾರದಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿರುವ 7 ಅಭ್ಯರ್ಥಿಗಳನ್ನು ಫೈನಲ್‌ ಮಾಡಲು ಕಸರತ್ತು ನಡೆದಿದೆ ಎಂದು ಡಿಕೆಶಿ ಹೇಳಿದ್ದರು.

Continue Reading

ಮಳೆ

Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

Rain News : ರಾಜ್ಯಾದ್ಯಂತ ಬ್ರೇಕ್‌ ಕೊಟ್ಟಿದ್ದ ವರುಣ ಜೂನ್‌ ಮೊದಲ ವಾರದಿಂದ ಮತ್ತೆ ಅಬ್ಬರಿಸಲಿದ್ದಾನೆ. ಗುಡುಗು ಸಹಿತ ಸಾಧಾರಣ ಮಳೆಯಾಗಲಿದ್ದು, ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಮಳೆ (Rain news) ಪ್ರಮಾಣವು ತಗ್ಗಿದೆ. ಕಳೆದ ಎರಡ್ಮೂರು ದಿನದಿಂದ ಮಳೆಯು ಕಣ್ಮರೆಯಾಗಿದೆ. ನಿನ್ನೆ ಗುರುವಾರ ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉತ್ತರ ಒಳನಾಡಿನಲ್ಲಿ ಒಣಹವೆ (Dry Weather) ಇತ್ತು.

ಶಿವಮೊಗ್ಗದ ಆಗುಂಬೆಯಲ್ಲಿ 5 ಸೆಂ.ಮೀ, ಕೊಡಗಿನ ಗೋಣಿಕೊಪ್ಪಲು 3 ಸೆಂ.ಮೀ ಮಳೆಯಾಗಿದೆ. ಹಾಗೇ ದಕ್ಷಿಣ ಕನ್ನಡದ ಧರ್ಮಸ್ಥಳ, ಉಡುಪಿಯ ಕೋಟ, ಉತ್ತರ ಕನ್ನಡದ ಮಂಕಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಇನ್ನೂ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41.3 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

ನಾಳೆಯಿಂದ ಮತ್ತೆ ಶುರುವಾಗುತ್ತಾ ಅಬ್ಬರ?

ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಭಾಗಗಳಲ್ಲಿ ಮಳೆ ಅಬ್ಬರ ಇರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ 30-40 ಕಿ.ಮೀ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಇನ್ನೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ (30-40 kmph) ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: Kukke Subramanya: ಹೊಳೆ ಉಕ್ಕಿ ಹರಿದು ಕೊಚ್ಚಿ ಹೋದ ಪಿಕ್ಅಪ್ ವಾಹನ; ಚಾಲಕನ ರಕ್ಷಣೆ

ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಕಲಬುಲಗಿ, ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಗುಡುಗು ಸಹಿತ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ 40-50 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಮೇಲ್ಮೈ ಮಾರುತಗಳು (30-40 kmph) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಮೇಲೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿಯಲಿದೆ. ಕೆಲವೊಮ್ಮೆ ಹಗುರ ಮಳೆಯಾಗಲಿದ್ದು, ಮೇಲ್ಮೈ ಗಾಳಿಯು ಪ್ರಬಲವಾಗಿರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಆತ್ಮಹತ್ಯೆ, 87 ಕೋಟಿ ರೂ. ಹಗರಣ; ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಸಭೆ ನಡೆಸಿದ್ದು, ಪ್ರಕರಣವನ್ನು ಎಸ್‌ಐಟಿಗೆ ವಹಿಸಲು ತೀರ್ಮಾನಿಸಿದ್ದಾರೆ.

VISTARANEWS.COM


on

Chandrashekar
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ (Self Harming) ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿದೆ. ನಾಲ್ವರು ಹಿರಿಯ ಪೊಲೀಸ್‌ ಅಧಿಕಾರಿಗಳಿರುವ ಎಸ್‌ಐಟಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಸಭೆ ನಡೆಸಿದ್ದು, ಪ್ರಕರಣವನ್ನು ಎಸ್‌ಐಟಿಗೆ ವಹಿಸಲು ತೀರ್ಮಾನಿಸಿದ್ದಾರೆ. ಅದರಂತೆ, ಎಡಿಜಿಪಿ ಮನೀಶ್‌ ಕಬೀರ್ಕರ್‌ ನೇತೃತ್ವದಲ್ಲಿ ಶಿವಪ್ರಕಾಶ್‌, ಹರಿರಾಮ್‌ ಶಂಕರ್‌ ಹಾಗೂ ರಾಘವೇಂದ್ರ ಹೆಗಡೆ ಅವರ ತಂಡವು ಪ್ರಕರಣದ ಕುರಿತು ತನಿಖೆ ನಡೆಸಲಿದ್ದಾರೆ.

ವರದಿ ಆಧರಿಸಿಯೇ ನಾಗೇಂದ್ರ ವಿರುದ್ಧ ಕ್ರಮ?

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 87 ಕೋಟಿ ರೂಪಾಯಿಯನ್ನು ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವೆಡೆಯಲ್ಲಿರುವ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿದೆ. ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಪ್ರತಿಪ್ಷಕಗಳು ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದ್ದು, ಇದರ ವರದಿ ಆಧಾರದ ಮೇಲೆಯೇ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕೋ, ಬೇಡವೋ ಎಂಬುದನ್ನು ಸಿದ್ದರಾಮಯ್ಯ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಎಸ್‌ಐಟಿ ವರದಿ ಈಗ ಕುತೂಹಲ ಕೆರಳಿಸಿದೆ.

ಬೇರೆ ರಾಜ್ಯಗಳಿಗೆ ಹಣ ವರ್ಗಾವಣೆಯಾಗಿದ್ದರೆ ಎಸ್‌ಐಟಿ ತನಿಖೆ ಮಾಡಲು ಆಗುವುದಿಲ್ಲ. ಪ್ರಕರಣ ಇನ್ನಷ್ಟು ಗಂಭೀರವಾದರೆ ಸಿಬಿಐ ಪ್ರವೇಶ ಅನಿವಾರ್ಯವಾಗುತ್ತದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಎಸ್‌ಐಟಿ ರಚಿಸಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗ ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್‌ ಅವರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಗಮದಲ್ಲಿ ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ಡೆತ್ ನೋಟ್‌ನಲ್ಲಿ ನೌಕರ ಮಾಡಿದ್ದಾರೆ. ಹಾಗಾಗಿ, ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.

ಇದನ್ನೂ ಓದಿ: Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್‌; ರಾಜೀನಾಮೆ ಕೊಡಲು ಸಿಎಂ ಸೂಚನೆ?

Continue Reading
Advertisement
Modi Meditation
ಪ್ರಮುಖ ಸುದ್ದಿ1 min ago

Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

Virat Kohli
ಪ್ರಮುಖ ಸುದ್ದಿ16 mins ago

Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

Anjali Murder Case
ಕರ್ನಾಟಕ28 mins ago

Anjali Murder Case: ಅಂಜಲಿ ಹಂತಕ ಗಿರೀಶ್‌ಗೆ ಜೂನ್ 16ರವರೆಗೆ‌ ನ್ಯಾಯಾಂಗ ಬಂಧನ

Vastu Tips
ಧಾರ್ಮಿಕ50 mins ago

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

T20 World Cup
ಕ್ರೀಡೆ51 mins ago

T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

Lok Sabha Election
ದೇಶ55 mins ago

Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Shocking Video
ವೈರಲ್ ನ್ಯೂಸ್1 hour ago

Shocking Video: ಮಗುವನ್ನು ಎತ್ತಿಕೊಂಡು ಹೋಗಲು ಕೋತಿಯ ಶತಪ್ರಯತ್ನ; ಮುಂದೇನಾಯ್ತು?

MLC Election
ಪ್ರಮುಖ ಸುದ್ದಿ1 hour ago

MLC Election: ವಿಧಾನ ಪರಿಷತ್‌ ಚುನಾವಣೆ; ಯತೀಂದ್ರ ಸಿದ್ದರಾಮಯ್ಯ ಅವಿರೋಧ ಆಯ್ಕೆ

Karnataka Weather Forecast
ಮಳೆ1 hour ago

Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

World No Tobacco Day
ಆರೋಗ್ಯ2 hours ago

World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌