King Charles | ಕೆಂಪು ಪೆಟ್ಟಿಗೆಯ ಕಡತಗಳಿಗೆ ಸಹಿ ಮಾಡಲು ರೆಡಿ; ಬ್ರಿಟನ್​ ರಾಜನ ಹೊಸ ಫೋಟೋ ವೈರಲ್​ - Vistara News

ವಿದೇಶ

King Charles | ಕೆಂಪು ಪೆಟ್ಟಿಗೆಯ ಕಡತಗಳಿಗೆ ಸಹಿ ಮಾಡಲು ರೆಡಿ; ಬ್ರಿಟನ್​ ರಾಜನ ಹೊಸ ಫೋಟೋ ವೈರಲ್​

70 ವರ್ಷಗಳಷ್ಟು ಸುದೀರ್ಘ ಅವಧಿಗೆ ಬ್ರಿಟನ್​ ಆಳಿದ ರಾಣಿ ಎಲಿಜಿಬೆತ್​ ತಮ್ಮ 96ನೇ ವಯಸ್ಸಿನಲ್ಲಿ ಮೃತಪಟ್ಟ ನಂತರ ಅವರ ಹಿರಿಯ ಪುತ್ರ ಕಿಂಗ್‌ ಚಾರ್ಲ್ಸ್‌ III (73) (King Charles III) ಅವರೇ ರಾಜನಾಗಿ ಆಯ್ಕೆಯಾಗಿದ್ದಾರೆ.

VISTARANEWS.COM


on

King Charles pictured Released By Buckingham Palace
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರಿಟನ್​ ರಾಣಿ 2ನೇ ಎಲಿಜಬೆತ್​ ನಿಧನದ ಬಳಿಕ ರಾಜನ ಪಟ್ಟಕ್ಕೇರಿದ ಕಿಂಗ್​ ಚಾರ್ಲ್ಸ್​ ಅವರು ತಮ್ಮ ಹುದ್ದೆಯ ಜವಾಬ್ದಾರಿ ನಿಭಾಯಿಸುತ್ತಿರುವ ಮೊದಲ ಫೋಟೋವನ್ನು ಬಕಿಂಗ್​ಹ್ಯಾಮ್ ಅರಮನೆ ಬಿಡುಗಡೆ ಮಾಡಿದೆ. ‘ಕುರ್ಚಿಯ ಮೇಲೆ ಕುಳಿತ ಅವರ ಎದುರಿನ ಟೇಬಲ್​ ಮೇಲೆ ಪುಸ್ತಕ ಮತ್ತಿತರ ವಸ್ತುಗಳಿದ್ದರೆ, ಪಕ್ಕದಲ್ಲಿ ಒಂದು ಕೆಂಪು ಪೆಟ್ಟಿಗೆ ಇದೆ. ಅದರಲ್ಲಿ ಒಂದಷ್ಟು ದಾಖಲೆಗಳಿವೆ. ಆ ಪೆಟ್ಟಿಗೆಯ ಮೇಲೆ ಕಿಂಗ್​ ಚಾರ್ಲ್ಸ್​ ಕೈ ಇಟ್ಟಿದ್ದಾರೆ ಮತ್ತು ಅದನ್ನೇ ನೋಡುತ್ತಿದ್ದಾರೆ. ಅವರು ಕ್ಯಾಮರಾದತ್ತ ನೋಡಿ ಪೋಸ್​ ಕೊಟ್ಟಿಲ್ಲ’. ಈ ಕೆಂಪು ಪೆಟ್ಟಿಗೆ ಎಂದರೆ ಮತ್ತೇನಲ್ಲ, ಬ್ರಿಟನ್​ನಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಪ್ರಮುಖ ದಾಖಲೆಗಳನ್ನು ಒಯ್ಯಲು ಬಳಸುವ ಬಾಕ್ಸ್​.

ಹೀಗೆ ಕೆಂಪು ಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಇಟ್ಟುಕೊಂಡು ಕುಳಿತಿರುವ ಚಾರ್ಲ್ಸ್​ ಪೋಟೋ ನೋಡಿದರೆ, ‘ಅವರು ರಾಜನಾಗಿ ತಮ್ಮ ಕರ್ತವ್ಯ ನಿಭಾಯಿಸಲು ಪ್ರಾರಂಭಿಸಿದ್ದಾರೆ. ಕಡತಗಳಿಗೆ ಸಹಿ ಹಾಕಲು ಶುರು ಮಾಡಿದ್ದಾರೆ. ಬ್ರಿಟನ್​​ನಲ್ಲೀಗ ರಾಜನ ಆಡಳಿತ ಆರಂಭವಾಗಿದೆ’ ಎಂಬುದು ಸ್ಪಷ್ಟವಾಗುತ್ತದೆ. ಹಾಗೇ, 18ನೇ ಶತಮಾನದಲ್ಲಿ ಕಟ್ಟಲ್ಪಟ್ಟ ಆ ಕೋಣೆಯ ರಾಯಲ್​ ಲುಕ್​ ಹೇಗಿದೆ ಎಂಬುದನ್ನೂ ಫೋಟೋದಲ್ಲಿ ನೋಡಬಹುದು. ಹಾಗೇ, ಫೋಟೋದಲ್ಲಿ ಕಿಂಗ್ ಚಾರ್ಲ್ಸ್ ಕಪ್ಪು ಟೈ ಕಟ್ಟಿರುವುದು ಕಾಣುತ್ತದೆ. ಇದು ತಮ್ಮ ತಾಯಿ ಕ್ವೀನ್​ ಎಲಿಜಿಬೆತ್​​ ಮರಣಕ್ಕೆ ಶೋಕ ಸೂಚಕ ಎನ್ನಲಾಗಿದೆ.

70 ವರ್ಷಗಳಷ್ಟು ಸುದೀರ್ಘ ಅವಧಿಗೆ ಬ್ರಿಟನ್​ ಆಳಿದ ರಾಣಿ ಎಲಿಜಿಬೆತ್​ ತಮ್ಮ 96ನೇ ವಯಸ್ಸಿನಲ್ಲಿ ಮೃತಪಟ್ಟ ನಂತರ ಅವರ ಹಿರಿಯ ಪುತ್ರ ಕಿಂಗ್‌ ಚಾರ್ಲ್ಸ್‌ III (73) (King Charles III) ಅವರನ್ನು ಆಯ್ಕೆ ಮಾಡಲಾಗಿದೆ. ರಾಜನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾತನಾಡಿದ್ದ ಅವರು ,‘ರಾಣಿ ಹೇಗೆ ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದರೋ ನಾನು ಅದೇ ಹಾದಿಯಲ್ಲಿ ನಡೆಯುತ್ತೇನೆ. ದೇವರು ನನಗೆ ಎಷ್ಟು ಕಾಲ ಅನುಗ್ರಹ ಕೊಡುತ್ತಾನೊ ಅಷ್ಟು ಕಾಲ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ. ನೀವು ಯನೈಟೆಡ್‌ ಕಿಂಗ್‌ಡಮ್‌ನ ಎಲ್ಲೇ ವಾಸವಿದ್ದರೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಹಿನ್ನೆಲೆ ಏನೇ ಆಗಿದ್ದರೂ, ಪ್ರೀತಿ, ಆದರದಿಂದ ನಿಮ್ಮ ಸೇವೆಗೈಯುತ್ತೇನೆ’ ಎಂದಿದ್ದರು.

ಇದನ್ನೂ ಓದಿ: Queen Elizabeth | ದೇಶವೇ ನನ್ನುಸಿರು; ದೊರೆಯ ಪಟ್ಟ ದೊರೆತ ನಂತರ ಚಾರ್ಲ್ಸ್‌ III ಚೊಚ್ಚಲ ಭಾಷಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Giorgia Meloni: ಇಟಲಿ ಪ್ರಧಾನಿ ಮೆಲೋನಿ ಕಾರ್ಮಿಕ ಮಹಿಳೆಯ ಮಗಳು! ಅವರ ಕುರಿತ ಕುತೂಹಲಕರ ಸಂಗತಿಗಳಿವು

Giorgia Meloni: 45 ವರ್ಷದ ಜಾರ್ಜಿಯಾ ಮೆಲೋನಿ ಅವರು 2022ರಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ವಿಶ್ವ ನಾಯಕರ ಗಮನ ಸೆಳೆದಿರುವ ಜಾರ್ಜಿಯಾ ಮೆಲೋನಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಐದು ವಿಷಯಗಳು ಇಲ್ಲಿವೆ.

VISTARANEWS.COM


on

By

Giorgia Meloni
Koo

ಇಟಲಿಯಲ್ಲಿ (Italy) ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (G7) ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರ ವಾರ್ಷಿಕ ಶೃಂಗಸಭೆಯಲ್ಲಿ ಅಲ್ಲಿಯ ಪ್ರಧಾನಿ (Prime Minister) ಜಾರ್ಜಿಯಾ ಮೆಲೋನಿ (Giorgia Meloni) ಅವರು ಸಾಂಪ್ರದಾಯಿಕವಾಗಿ ಭಾರತೀಯರ ಶೈಲಿಯಲ್ಲಿ ‘ನಮಸ್ತೆ’ (namaste) ಎನ್ನುವ ಮೂಲಕ ವಿಶ್ವದ ನಾಯಕರನ್ನು ಸ್ವಾಗತಿಸಿದ್ದು, ಇದು ಈಗ ಎಲ್ಲರ ಗಮನ ಸೆಳೆದಿದೆ.

ಜೂನ್ 13ರಿಂದ 15ರವರೆಗೆ ನಡೆದ ಜಿ7 ಶೃಂಗಸಭೆಯ ಅಧಿವೇಶನದಲ್ಲಿ ಶುಕ್ರವಾರ ವಿಶ್ವ ನಾಯಕರೊಂದಿಗೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದಕ್ಷಿಣ ಇಟಲಿಯ ಅಪುಲಿಯಾಗೆ ಆಗಮಿಸಿದ್ದರು. ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರು ಆಯೋಜಿಸಿರುವ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ಎಂಬ ಶೀರ್ಷಿಕೆಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಕೂಡ ಭಾಗವಹಿಸಿದ್ದಾರೆ.

45 ವರ್ಷದ ಜಾರ್ಜಿಯಾ ಮೆಲೋನಿ ಅವರು 2022ರಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ವಿಶ್ವ ನಾಯಕರ ಗಮನ ಸೆಳೆದಿರುವ ಜಾರ್ಜಿಯಾ ಮೆಲೋನಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಐದು ಕುತೂಹಲಕರ ವಿಷಯಗಳು ಇಲ್ಲಿವೆ.


ಕಾರ್ಮಿಕ ವರ್ಗದ ಹಿನ್ನೆಲೆ

ಜಾರ್ಜಿಯಾ ಮೆಲೋನಿ ಅವರ ಜನನದ ಬಳಿಕ ತಂದೆ ಇವರ ತಾಯಿಯನ್ನು ತೊರೆದರು. ಹಾಗಾಗಿ ಒಂಟಿ ತಾಯಿಯ ಆರೈಕೆಯಲ್ಲಿ ಇವರು ಬೆಳೆಯಬೇಕಾಯಿತು. ಹೆಚ್ಚು ಓದದ ಇವರ ತಾಯಿಯು ಬೇಬಿ ಸಿಟ್ಟರ್ ಮತ್ತು ಬಾರ್ ಟೆಂಡರ್ ಆಗಿ ಕೆಲಸ ಮಾಡಿ ಮಗಳನ್ನು ಸಾಕಿದ್ದರು.

ಸಣ್ಣ ವಯಸ್ಸಿನಲ್ಲೇ ರಾಜಕೀಯ ಪ್ರವೇಶ

ಜಾರ್ಜಿಯಾ ಮೆಲೋನಿ ರೋಮ್‌ನ ಕಾರ್ಮಿಕ ವರ್ಗದ ಗಾರ್ಬಟೆಲ್ಲಾದಲ್ಲಿ ರಾಜಕೀಯ ಪ್ರವೇಶ ಮಾಡಿದರು. ಆಗ ಅವರಿಗೆ ಕೇವಲ 15 ವರ್ಷ. 1990ರ ದಶಕದ ಆರಂಭದಲ್ಲಿ ಇಟಾಲಿಯನ್ ಸೋಶಿಯಲ್ ಮೂವ್‌ಮೆಂಟ್ (MSI)ನ ಯುವ-ವಿಭಾಗವಾದ ಯೂತ್ ಫ್ರಂಟ್‌ಗೆ ಸೇರಿದ ಮೆಲೋನಿ ನ್ಯಾಷನಲ್ ಅಲೈಯನ್ಸ್ (AN)ನ ವಿದ್ಯಾರ್ಥಿ ಚಳವಳಿಯ ವಿದ್ಯಾರ್ಥಿ ಆಕ್ಷನ್‌ನ ರಾಷ್ಟ್ರೀಯ ನಾಯಕರಾದರು. 21ನೇ ವಯಸ್ಸಿನಲ್ಲಿ ಮೊದಲ ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಅವರು ಹತ್ತು ವರ್ಷಗಳ ಅನಂತರ 2008ರಲ್ಲಿ ಮಾಜಿ ಪ್ರಧಾನಮಂತ್ರಿ ಸಿಲ್ವಿಯೊ ಬೆರ್ಲುಸ್ಕೋನಿ ಅವರ ನೇತೃತ್ವದ ಸರ್ಕಾರದಲ್ಲಿ ಇಟಲಿಯ ಅತ್ಯಂತ ಕಿರಿಯ ಸಚಿವರಾದರು. 2011ರವರೆಗೆ ಅವರು ಆ ಸ್ಥಾನದಲ್ಲಿ ಇದ್ದರು.

ಬ್ರದರ್ಸ್ ಆಫ್ ಇಟಲಿ ಪಕ್ಷದ ಮುಖ್ಯಸ್ಥರು

ಮೆಲೋನಿ ಪ್ರಸ್ತುತ ಬ್ರದರ್ಸ್ ಆಫ್ ಇಟಲಿ ರಾಜಕೀಯ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಇದು ಎರಡನೇ ಮಹಾಯುದ್ಧದ ಅನಂತರ ರೂಪುಗೊಂಡ ಬಲಪಂಥೀಯ ಗುಂಪಿನಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇದನ್ನು 2012ರಲ್ಲಿ ಸ್ಥಾಪಿಸಲಾಯಿತು. 2018ರ ಇಟಲಿ ಚುನಾವಣೆಯ ಅನಂತರ ಮೆಲೋನಿ ಅವರ ಪಕ್ಷವು ಅಭಿಪ್ರಾಯ ಸಂಗ್ರಹಣೆಯಲ್ಲಿ ಜನಪ್ರಿಯತೆಯನ್ನು ಗಳಿಸಿತು. ವಿಶೇಷವಾಗಿ ಪ್ರಧಾನಮಂತ್ರಿ ಮಾರಿಯೋ ಡ್ರಾಘಿ ಅವರ ಕ್ಯಾಬಿನೆಟ್ ಸಮಯದಲ್ಲಿ ಈ ಪಕ್ಷ ಮಾತ್ರ ವಿರೋಧ ಪಕ್ಷವಾಗಿತ್ತು.

ನಿರಾಶ್ರಿತರಿಗೆ ನಿರ್ಬಂಧ, ತೆರಿಗೆ ಕಡಿತ

ಪ್ರಧಾನ ಮಂತ್ರಿಯಾಗಿ ಮೆಲೋನಿ ಇಟಲಿಯಲ್ಲಿ ಹಲವಾರು ಸಂಪ್ರದಾಯವಾದಿ ನೀತಿಗಳನ್ನು ತಂದಿದ್ದಾರೆ. ವಿಶೇಷವಾಗಿ ವಲಸೆ ನಿಯಂತ್ರಣ. ಅವರ ಸರ್ಕಾರವು ಅಕ್ರಮ ವಲಸೆ, ಕಠಿಣ ಗಡಿ ನಿಯಂತ್ರಣಗಳು ಮತ್ತು ವಾಪಸಾತಿ ನೀತಿಗಳನ್ನು ಜಾರಿಗೆ ತರುವುದರ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದೆ. ಹೆಚ್ಚುವರಿಯಾಗಿ, ಮೆಲೋನಿ ಇಟಲಿಯ ಜನನ ದರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ಬೆಂಬಲಿಸುತ್ತದೆ ಮತ್ತು ಕುಟುಂಬಗಳನ್ನು ಆರ್ಥಿಕವಾಗಿ ಬೆಂಬಲಿಸುವ ಕ್ರಮಗಳನ್ನು ಉತ್ತೇಜಿಸುತ್ತಿದೆ.

ಮೆಲೋನಿಯ ಆರ್ಥಿಕ ನೀತಿಗಳು ತೆರಿಗೆಗಳನ್ನು ಕಡಿಮೆ ಮಾಡುವುದು, ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸುವುದು ಮತ್ತು ಇಟಾಲಿಯನ್ ವ್ಯವಹಾರಗಳನ್ನು ಉತ್ತೇಜಿಸುವತ್ತ ಕೇಂದ್ರೀಕೃತವಾಗಿವೆ.

ಇದನ್ನೂ ಓದಿ: Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

ಕುಟುಂಬ ಮೌಲ್ಯಗಳಿಗೆ ಒತ್ತು

ಮೆಲೋನಿಯ ರಾಜಕೀಯ ಸಿದ್ಧಾಂತವು ಇಟಲಿಯ ರಾಜಕೀಯದಲ್ಲಿ ಬಲವಾದ ಛಾಪು ಬೀರಿದೆ. ರಾಷ್ಟ್ರೀಯ ಗಡಿಗಳು, ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಸಾಂಪ್ರದಾಯಿಕ ಕುಟುಂಬ ಮೌಲ್ಯಗಳನ್ನು ರಕ್ಷಿಸುವಲ್ಲಿ ಅವರ ಸರ್ಕಾರ ಗಮನ ಕೇಂದ್ರೀಕರಿಸಿದೆ.

ನಾನು ಜಾರ್ಜಿಯಾ. ನಾನು ಮಹಿಳೆ, ನಾನು ತಾಯಿ, ನಾನು ಕ್ರಿಶ್ಚಿಯನ್ ಎಂಬುದು ಮೆಲೋನಿಯ ಅತ್ಯಂತ ಜನಪ್ರಿಯ ಮಾತು. ಇದನ್ನು ಅವರ ಬೆಂಬಲಿಗರು ನಿಯಮಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರು ಡ್ರಗ್ಸ್ ಮತ್ತು ಗರ್ಭಪಾತದ ವಿರೋಧಿಯಾಗಿದ್ದಾರೆ. ಆದರೆ ಅವರು ತಾವು ಗರ್ಭಪಾತವನ್ನು ನಿಷೇಧಿಸುವುದಿಲ್ಲ ಎಂದೂ ಹೇಳಿದ್ದಾರೆ.

Continue Reading

ವಿದೇಶ

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Gold Heist: ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಚಿನ್ನಾಭರಣಗಳ ಮಳಿಗೆಗೆ ನುಗ್ಗಿದ 20 ಮುಸುಕುಧಾರಿ ಧರೋಡೆಕೋರರು, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಜೂನ್‌ 12ರಂದು ಮಧ್ಯರಾತ್ರಿ ಇವರು ಮಳಿಗೆಗೆ ನುಗ್ಗಿದ್ದಾರೆ. ಮುಖದ ತುಂಬ ಮುಸುಕು ಧರಿಸಿದ್ದ, ಕೈಯಲ್ಲಿ ಸುತ್ತಿಗೆಗಳನ್ನು ಹಿಡಿದುಕೊಂಡೇ ಬಂದಿದ್ದ ದರೋಡೆಕೋರರು, ಅಂಗಡಿಯಲ್ಲಿ ಗ್ಲಾಸ್‌ಗಳನ್ನು ಒಡೆದು, ಅವಸರದಲ್ಲಿಯೇ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

VISTARANEWS.COM


on

Gold Heist
Koo

ವಾಷಿಂಗ್ಟನ್:‌ ಬ್ಯಾಂಕ್‌ಗೆ ನುಗ್ಗಿ ಕೋಟ್ಯಂತರ ರೂಪಾಯಿಯನ್ನು ದರೋಡೆ ಮಾಡುವ ಮನಿ ಹೈಸ್ಟ್‌ (Money Heist) ಎಂಬ ರೋಚಕ ವೆಬ್‌ ಸಿರೀಸ್‌ಅನ್ನು ನೀವು ನೋಡಿರಬಹುದು. ಮಾಸ್ಟರ್‌ ಪ್ಲಾನ್‌ ಮೂಲಕ ದರೋಡೆ ಮಾಡುವ ಸಿರೀಸ್‌ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಆದರೆ, ಅಮೆರಿಕದಲ್ಲಿ ಮನಿ ಹೈಸ್ಟ್‌ ಮಾದರಿಯಲ್ಲಿಯೇ ಸುಮಾರು 20 ದರೋಡೆಕೋರರು ಚಿನ್ನಾಭರಣಗಳ ಮಳಿಗೆಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ (Gold Heist) ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಚಿನ್ನಾಭರಣಗಳ ಮಳಿಗೆಗೆ ನುಗ್ಗಿದ 20 ಮುಸುಕುಧಾರಿ ಧರೋಡೆಕೋರರು, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಜೂನ್‌ 12ರಂದು ಮಧ್ಯರಾತ್ರಿ ಇವರು ಮಳಿಗೆಗೆ ನುಗ್ಗಿದ್ದಾರೆ. ಮುಖದ ತುಂಬ ಮುಸುಕು ಧರಿಸಿದ್ದ, ಕೈಯಲ್ಲಿ ಸುತ್ತಿಗೆಗಳನ್ನು ಹಿಡಿದುಕೊಂಡೇ ಬಂದಿದ್ದ ದರೋಡೆಕೋರರು, ಅಂಗಡಿಯಲ್ಲಿ ಗ್ಲಾಸ್‌ಗಳನ್ನು ಒಡೆದು, ಅವಸರದಲ್ಲಿಯೇ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಇಡೀ ಕಳ್ಳತನದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿದೆ ದರೋಡೆಯ ವಿಡಿಯೊ

ದರೋಡೆಕೋರರು ಮೊದಲು ಜ್ಯುವೆಲರಿ ಸ್ಟೋರ್‌ನ ಬಾಗಿಲನ್ನು ಒದ್ದು, ಸುತ್ತಿಗೆಯಿಂದ ಹೊಡೆದು ಮುರಿದುಹಾಕಿದ್ದಾರೆ. ಏಕಕಾಲಕ್ಕೆ ಅವರು ಮಳಿಗೆಗೆ ನುಗ್ಗಿದ್ದು, ಪ್ರತಿಯೊಂದು ಗಾಜುಗಳನ್ನು ಒಡೆದು, ಚಿನ್ನ, ವಜ್ರದ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲವೇ ಕೆಲವು ನಿಮಿಷಗಳಲ್ಲಿ ಇಡೀ ಮಳಿಗೆಯ ಆಭರಣಗಳನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ.

ಬಂಧಿತ ಆರೋಪಿಗಳು

ದರೋಡೆಕೋರರು ಹಲವು ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಕೂಡಲೇ ಪೊಲೀಸರು ಇವರ ಕಾರುಗಳನ್ನು ಬೆನತ್ತಿದರೂ ಕೇವಲ ಐವರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಬಂಧಿತರಿಂದ ಕೆಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಐವರನ್ನೂ ಜೈಲಿಗೆ ಹಾಕಿದ್ದಾರೆ. ದರೋಡೆಕೋರರು ಕದ್ದಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಎಷ್ಟು ಎಂಬುದು ಇದುವರೆಗೆ ಗೊತ್ತಿಲ್ಲ. ಮಳಿಗೆಯಲ್ಲಿ ಕಳ್ಳತನ ಮಾಡಲು ದರೋಡೆಕೋರರು ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಉಳಿದ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Robbery Case: ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್; ನಂದಿನಿ ಪಾರ್ಲರ್‌, ಸೂಪರ್ ಮಾರ್ಕೆಟ್‌ ಇವರ ಟಾರ್ಗೆಟ್‌

Continue Reading

Latest

Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

Viral Video: ಜಿರಳೆ ತಿನ್ನುವುದು, ಕಪ್ಪೆ ತಿನ್ನುವುದು, ಹಲ್ಲಿ ತಿನ್ನುವುದು ಇಂತಹ ವಿಡಿಯೊಗಳನ್ನು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ನೋಡಿರುತ್ತೇವೆ. ಈಗ ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು ಎಲ್ಲೆಡೆ ಸಖತ್ ವೈರಲ್ ಆಗಿದೆ. ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡ ಹುಡುಗಿ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ.

VISTARANEWS.COM


on

Viral Video
Koo

ಹಾವೆಂದರೆ ಎಲ್ಲರೂ ಹೌಹಾರುತ್ತಾರೆ. ಅದರಲ್ಲೂ ಹುಡುಗಿಯರಂತೂ ಹಾವನ್ನು ಕಂಡರೆ ಕಿರುಚುತ್ತಾ ಎಲ್ಲೆಂದರಲ್ಲಿ ಓಡಿಹೋಗುತ್ತಾರೆ. ಇನ್ನು ಹಿಂದೂಗಳು ಹಾವನ್ನು ದೇವರೆಂದು ಪೂಜಿಸುತ್ತಾರೆ. ನಾಗರ ಪಂಚಮಿಯ ದಿನ ಹಾವಿಗೆ ಹಾಲೆರೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಹಾಗಾಗಿ ಕೆಲವರು ಹಾವನ್ನು ಕಂಡು ಹೆದರಿದರೆ ಇನ್ನು ಕೆಲವರು ಹಾವನ್ನು ದೇವರೆಂದು ಪೂಜಿಸುತ್ತಾರೆ. ಇದೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಚೀನಾ, ವಿಯೆಟ್ನಾದಂತಹ ದೇಶಗಳಲ್ಲಿ ಹಾವನ್ನು ಮಸಾಲೆ ಜೊತೆಗೆ ಹುರಿದು, ಇಲ್ಲವಾದರೆ ಜೀವಂತ ಹಾವನ್ನೇ ನುಂಗಿ ಬಿಡುತ್ತಾರೆ. ಅಂತಹದೊಂದು ಭಯಾನಕ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ದಕ್ಷಿಣ ಕೊರಿಯಾದ ಹುಡುಗಿ ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡಿದ್ದಾಳೆ. ನಂತರ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ. ಒಮ್ಮೆ ಹಾವಿನ ತಲೆ, ಒಮ್ಮೆ ಮಧ್ಯಭಾಗ, ಒಮ್ಮೆ ಬಾಲದ ಹಸಿ ಮಾಂಸವನ್ನು ಜಗಿದು ಸವಿಯುವ ಅವಳ ಮುಖವನ್ನು ನೋಡಿದ್ದರೆ ವೀಕ್ಷಕರಿಗೆ ದಿಗ್ಭ್ರಮೆಯಾಗುತ್ತದೆ.

ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ಇದನ್ನು ಕಂಡು ಅಸಹ್ಯ ಪಟ್ಟಿದ್ದಾರೆ. ಕೆಲವರು ಈ ಕೃತ್ಯವನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ನಾವು ಭಾರತದಲ್ಲಿ ಜನಿಸಿರುವುದು ಒಳ್ಳೆಯದು ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ. ಹಾಗೇ ಇನ್ನೊಬ್ಬ ಬಳಕೆದಾರ, ಚೀನೀ ಜನರು ತೃಪ್ತರಾಗಲು ಇವುಗಳನ್ನು ತಿನ್ನುತ್ತಾರೆ. ಅವರ ಈ ಹೊಸ ಆಹಾರ ಪದ್ಧತಿಯಿಂದ ಹೊಸ ವೈರಸ್‌ಗಳು ಜಗತ್ತಿಗೆ ಬರುತ್ತಿವೆ ಎಂದು ಕಿಡಿಕಾರಿದ್ದಾರೆ.

ಈ ವಿಡಿಯೊ @asmrmukbangworld ಎಂಬ ಪ್ಲಾಟ್ ಫಾರ್ಮ್ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ 15 ಮಿಲಿಯನ್ ವೀವ್ಸ್ ಮತ್ತು 1 ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

Continue Reading

ಪ್ರಮುಖ ಸುದ್ದಿ

Fathers Day 2024: ʼಅಪ್ಪʼನೆಂದರೆ ಆಕಾಶ… ಎನ್ನುವವರು ಈ ಭಾನುವಾರ ತಪ್ಪದೇ ವಿಶ್‌ ಮಾಡಿ!

Fathers Day 2024: ತಂದೆ-ತಾಯಿ ಇವರಿಬ್ಬರೂ ಪ್ರತಿಯೊಬ್ಬರ ಬದುಕಿಗೆ ಎರಡು ಕಣ್ಣುಗಳಿದ್ದಂತೆ. ಮಕ್ಕಳ ಏಳಿಗೆಗಾಗಿ, ಖುಷಿಗಾಗಿ ಯಾವುದೇ ಸ್ವಾರ್ಥವಿಲ್ಲದೇ ಸದಾ ಮಿಡಿಯುವ ಜೀವಗಳು. ಅಮ್ಮನ ಹಾಗೇ ಅಪ್ಪ ಪ್ರೀತಿ ತೋರಿಸುವುದರಲ್ಲಿ ಧಾರಾಳಿಯಲ್ಲ. ಆದರೆ ಅಪ್ಪನಿಗೆ ಪ್ರೀತಿಸುವುದಕ್ಕೆ ಬರುವುದಿಲ್ಲವೆಂದಲ್ಲ. ಅಪ್ಪನ ಹೆಗಲ ಮೇಲೆ ಜವಾಬ್ದಾರಿಯ ಮೂಟೆ ಯಾವಾಗಲೂ ಇರುತ್ತದೆ. ಮೀಸೆಯಡಿಯಲ್ಲಿಯೇ ನಗುವ ಅಪ್ಪನ ಪ್ರೀತಿಗೆ ಸಮಾನವಾದದ್ದು ಯಾವುದೂ ಇಲ್ಲ. ಅಂದ ಹಾಗೇ ಜೂನ್ 16ರಂದು ಅಪ್ಪಂದಿರ ದಿನ. ನಿಮ್ಮ ಅಪ್ಪನಿಗೂ ನಿಮ್ಮ ಪ್ರೀತಿ ತುಂಬಿದ ಶುಭಾಶಯ ತಿಳಿಸಿಬಿಡಿ.

VISTARANEWS.COM


on

Fathers Day 2024
Koo

ಬೆಂಗಳೂರು: ತಂದೆ – ತಾಯಿ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಅಮೂಲ್ಯವಾದವರು. ಅವರಲ್ಲಿ ನಾವು ಯಾರನ್ನೇ ಕಳೆದುಕೊಂಡರೂ ಆಘಾತದ ಸಿಡಿಲು ಬಡಿಯುವುದಂತೂ ಖಂಡಿತ. ಹಾಗಾಗಿ ತಂದೆ ತಾಯಿಯ ಋಣ, ಪ್ರೀತಿ, ಮಮತೆ ಯಾವತ್ತೂ ಮರೆಯಲಾಗದು. ಈಗೀಗ ಎಲ್ಲದಕ್ಕೂ ಒಂದೊಂದು ದಿನವಿಟ್ಟು ಅದನ್ನು ಆಚರಿಸುವ ಹುಕಿಗೆ ಬಿದ್ದಿದ್ದೇವೆ. ಫಾದರ್ಸ್‌ ಡೇ (Fathers Day 2024), ಒಡಹುಟ್ಟಿದವರ ದಿನ, ಸ್ನೇಹಿತರ ದಿನ, ತಾಯಂದಿರ ದಿನವೆಂದು ಆಚರಿಸುತ್ತೇವೆ. ಮದರ್ಸ್ ಡೇ(Mothers Day)ಯನ್ನು ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಆ ದಿನ ಎಲ್ಲರೂ ತಮ್ಮ ತಾಯಿಗೆ ವಿಶ್ ಮಾಡಿ ಉಡುಗೊರೆಯನ್ನು ನೀಡುತ್ತಾರೆ. ಅದೇ ರೀತಿ ತಂದೆಯ ದಿನವನ್ನು ಆಚರಿಸಲು ಒಂದು ದಿನವನ್ನು ಮೀಸಲಿಡಲಾಗಿದೆ. ಅದು ಯಾವಾಗ ಎಂಬುದರ ಮಾಹಿತಿ ಇಲ್ಲಿದೆ.

ಅಪ್ಪ…ಈ ಹೆಸರೇ ಚೆಂದ. ಅಪ್ಪನೆಂದರೆ ಗೌರವ, ಭಯಮಿಶ್ರಿತ ಪ್ರೀತಿ ಎಲ್ಲರಿಗೂ ಇರುತ್ತದೆ. ಆದರೆ ಈಗ ಅಪ್ಪ ಕೂಡ ಮೊದಲಿನ ಹಾಗೇ ಇಲ್ಲ. ಹಿಂದಿನ ಕಾಲದಲ್ಲಿ ಅಪ್ಪನ ಜೊತೆ ಮಕ್ಕಳಿಗೆ ಅಷ್ಟು ಸಲುಗೆ ಇರಲಿಲ್ಲ. ಅಮ್ಮನ ಹತ್ತಿರ ಹೇಳಿದ ಹಾಗೇ ಅಪ್ಪನ ಬಳಿ ಎಲ್ಲಾ ವಿಷಯವನ್ನೂ ಹೇಳಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ ಅಪ್ಪನೇ ಈ ಬೆಸ್ಟ್‌ ಫ್ರೆಂಡ್‌ ಎನ್ನಬಹುದು. ನೋವನ್ನು ತೋಡಿಕೊಳ್ಳಲು ಒಂದು ಭುಜ ಸಿಗುತ್ತೆಂದರೆ ಅದು ಅಪ್ಪನದಾಗಿರುತ್ತದೆ. ಸಂಸಾರದ ಜವಬ್ದಾರಿಯನ್ನು ಹೊರುತ್ತಾ, ನೊಂದ ಮನಸ್ಸಿಗೆ ಸಾಂತ್ವನ ಮಕ್ಕಳನ್ನು ಮುದ್ದಿಸುವ ಒಂದು ಜೀವವೆಂದರೆ ಅದು ಅಪ್ಪ. ಮುದ್ದಿನ ಅಪ್ಪನಿಗೆ ವಿಶ್ ಮಾಡಲು ಜೂನ್ ಮೂರನೇ ಭಾನುವಾರವನ್ನು ಆಯ್ಕೆ ಮಾಡಲಾಗಿದೆ. ಈ ದಿನ ಎಲ್ಲರೂ ನಿಮ್ಮ ಪ್ರೀತಿಯ ಅಪ್ಪನಿಗೆ ವಿಶ್‌ ಮಾಡಿದರೆ ಅದಕ್ಕಿಂತ ದೊಡ್ಡ ಉಡುಗೊರೆ ಅವರಿಗೆ ಇನ್ನೊಂದಿರಲಿಕ್ಕಿಲ್ಲ!

ಈ ವರ್ಷ ಫಾದರ್ಸ್ ಡೇ ಜೂನ್ 16ರ ಭಾನುವಾರದಂದು ಬಂದಿದೆ. ಹಾಗಾಗಿ ಈ ದಿನ ನಿಮಗೆ ರಜಾ ಇರುವ ಕಾರಣ ನಿಮ್ಮ ತಂದೆಯನ್ನು ಖುಷಿ ಪಡಿಸಲು ಅವರ ಜೊತೆ ಸಣ್ಣದೊಂದು ವಾಕಿಂಗ್ ಹೋಗಿ, ಅಥವಾ ಅವರ ಕೆಲಸದಲ್ಲಿ ಸಹಾಯ ಮಾಡಿ, ಅವರಿಗೆ ಇಷ್ಟವಾದುದನ್ನು ಕೊಡಿಸಿ. ಇದರಿಂದ ಆ ತಂದೆಯ ಮನಸ್ಸು ತುಂಬಾ ಖುಷಿ ಪಡುತ್ತದೆ.. ಕಳೆದ ವರ್ಷ ಫಾದರ್ಸ್ ಡೇಯನ್ನು ಜೂನ್ 18ರಂದು ಆಚರಿಸಲಾಗಿತ್ತು.

Father’s Day

ಫಾದರ್ಸ್ ಡೇ ಆಚರಣೆ ಹಿಂದಿರುವ ಕಾರಣವೇನು?

ಫಾದರ್ಸ್ ಡೇಯನ್ನು 1900ರ ದಶಕದಲ್ಲಿ ಆಚರಿಸಲು ಆರಂಭವಾಯಿತಂತೆ. ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಯು ಹುಟ್ಟಿದಾಕ್ಷಣ ತನ್ನ ತಾಯಿಯನ್ನು ಕಳೆದುಕೊಂಡಳಂತೆ. ಆಕೆ ಮತ್ತು ಆಕೆಯ ಒಡಹುಟ್ಟಿದವರು ತಂದೆಯ ಆರೈಕೆಯಲ್ಲಿ ಬೆಳೆದರಂತೆ. ಮಕ್ಕಳ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ತನ್ನ ತಂದೆಗೆ ಕೃತಜ್ಞತೆ ಹೇಳಲು ಅವಳು ಒಂದು ದಿನವನ್ನು ಗೊತ್ತುಪಡಿಸಿದಳು. ಅದರಂತೆ ಆ ವರ್ಷ ಅವಳು ಜೂನ್ 19ರಂದು ಮೊದಲ ಬಾರಿಗೆ ಫಾದರ್ಸ್ ಡೇಯನ್ನು ಆಚರಿಸಿದಳಂತೆ. ಯಾಕೆಂದರೆ ಅದು ಆಕೆಯ ತಂದೆ ಹುಟ್ಟಿದ ತಿಂಗಳಾಗಿತ್ತಂತೆ. ಹಾಗಾಗಿ ಆ ತಿಂಗಳಿನಂದು ನಾವು ಈಗಲೂ ಫಾದರ್ಸ್ ಡೇಯನ್ನು ಆಚರಿಸುತ್ತೇವೆ.

ಅಮೆರಿಕದಲ್ಲಿ ಫಾದರ್ಸ್ ಡೇಯನ್ನು ಆಚರಿಸಲು ಗುಲಾಬಿ ಹೂವನ್ನು ಸಂಕೇತವಾಗಿಟ್ಟುಕೊಳ್ಳುತ್ತಾರಂತೆ. ಅದರಂತೆ ಬಣ್ಣಬಣ್ಣದ ಗುಲಾಬಿ ಹೂ ಜೀವಂತ ತಂದೆಯನ್ನು ಪ್ರತಿನಿಧಿಸಿದರೆ, ಬಿಳಿ ಬಣ್ಣದ ಗುಲಾಬಿ ಮರಣ ಹೊಂದಿದ ತಂದೆಯ ಸಂಕೇತವಂತೆ. ಅಲ್ಲದೇ 1914ರಲ್ಲಿ ಮದರ್ಸ್ ಡೇಯನ್ನು ರಜಾದಿನವೆಂದು ಫೋಷಿಸಿದ ನಂತರ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು 1972ರಲ್ಲಿ ತಂದೆಯ ದಿನವನ್ನು ರಜಾದಿನವೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದರಂತೆ.

ಇದನ್ನೂ ಓದಿ:Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ಭಾರತದಲ್ಲೂ ಇತ್ತೀಚೆಗೆ ತಂದೆಯ ದಿನವನ್ನು ಮಕ್ಕಳು ವಿಶಿಷ್ಟವಾಗಿ ಆಚರಿಸುತ್ತಾರೆ. ಕೇಕ್‌ ಕತ್ತರಿಸುತ್ತಾರೆ. ಕಾರು ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ತಂದೆಗೆ ಉಡುಗೊರೆಯಾಗಿ ನೀಡುವವರೂ ಇದ್ದಾರೆ. ವಿಭಿನ್ನ ವಿನ್ಯಾಸ ಡಿಜಿಟಲ್‌ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಾರೆ. ತಂದೆಯ ದಿನದ ಶುಭಾಶಯ…

Continue Reading
Advertisement
INDW vs SAW
ಕ್ರೀಡೆ38 seconds ago

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

Kannada New Movie Maryade Prashne out now
ಸ್ಯಾಂಡಲ್ ವುಡ್2 mins ago

Kannada New Movie : ಆರ್​ಜೆ ಪ್ರದೀಪ್​ರ ‘ಮರ್ಯಾದೆ ಪ್ರಶ್ನ’ಗೆ ಆಲ್​ ಓಕೆಯ ಸಖತ್‌ ಹಾಡು!

Darshan Arrested
ಕರ್ನಾಟಕ10 mins ago

Darshan Arrested: ಕೊಲೆ ಬಳಿಕ ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ; ಇಂದು ಸ್ಥಳ ಮಹಜರು!

Kotee Movie Review dolly dhanjay News In Kannada
ಸ್ಯಾಂಡಲ್ ವುಡ್13 mins ago

Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?!

Illegal beef trade
ದೇಶ14 mins ago

ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Actor Darshan ACP Chandan Kumar work salute by people
ಕ್ರೈಂ26 mins ago

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Euro 2024
ಕ್ರೀಡೆ35 mins ago

Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

Bihar Women
ದೇಶ38 mins ago

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Kalaburagi News
ಕರ್ನಾಟಕ60 mins ago

Kalaburagi News: ಕಲಬುರಗಿಯಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು; ಮತ್ತೊಬ್ಬನ ಸ್ಥಿತಿ ಗಂಭೀರ

Mohan Bhagwat
ದೇಶ1 hour ago

Mohan Bhagwat: ಎರಡು ಸುತ್ತಿನ ರಹಸ್ಯ ಸಭೆ ನಡೆಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್-ಯೋಗಿ ಆದಿತ್ಯನಾಥ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ19 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌