Kantara Movie | ಕಾಂತಾರ ಕಲೆಕ್ಷನ್​ ನೋಡಿ ದೊಡ್ಡ ಬಜೆಟ್​​​ ಸಿನಿಮಾ ನಿರ್ಮಾಪಕರಿಗೆ ಹಾರ್ಟ್‌ ಅಟ್ಯಾಕ್‌: ಆರ್​ಜಿವಿ ಟ್ವೀಟ್​ - Vistara News

ಬಾಲಿವುಡ್

Kantara Movie | ಕಾಂತಾರ ಕಲೆಕ್ಷನ್​ ನೋಡಿ ದೊಡ್ಡ ಬಜೆಟ್​​​ ಸಿನಿಮಾ ನಿರ್ಮಾಪಕರಿಗೆ ಹಾರ್ಟ್‌ ಅಟ್ಯಾಕ್‌: ಆರ್​ಜಿವಿ ಟ್ವೀಟ್​

ಈಗಾಗಲೇ ಸಿನಿಮಾ ಕ್ಷೇತ್ರದ ಹಲವು ನಟ-ನಟಿಯರು ಕಾಂತಾರವನ್ನು ಹೊಗಳಿದ್ದಾರೆ. ಪ್ರಭಾಸ್​ ಅವರಂತೂ ತಾವು ಎರಡು ಬಾರಿ ಕಾಂತಾರ ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

VISTARANEWS.COM


on

RGV
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಮಾತು. ಸೆಪ್ಟೆಂಬರ್​ 30ರಂದು ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾದ್ದೇ ಹವಾ. ಜಾಗತಿಕವಾಗಿ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಕೂಡ ಆಗಿದೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ, ಇದೇ ವಾರದಲ್ಲಿ ಮಲಯಾಳಂನಲ್ಲೂ ರಿಲೀಸ್ ಆಗಲಿದೆ. ಎಲ್ಲ ಭಾಷೆಗಳ ನಟ-ನಟಿಯರಿಂದಲೂ ಶ್ಲಾಘನೆಗಳ ಸುರಿಮಳೆಯೇ ಸುರಿಯುತ್ತಿದೆ. ಈಗಾಗಲೇ ಶಿಲ್ಪಾ ಶೆಟ್ಟಿ, ಪ್ರಭಾಸ್​, ಧನುಷ್​, ಅನುಷ್ಕಾ ಶೆಟ್ಟಿ ಸೇರಿ ಹಲವು ಗಣ್ಯರು ಸಿನಿಮಾವನ್ನು ಹೊಗಳಿದ್ದಾರೆ. ಈಗ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಕೂಡ ಕಾಂತಾರಕ್ಕೆ ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ.

ಟ್ವೀಟ್ ಮಾಡಿರುವ ಆರ್​ಜಿವಿ (ರಾಮ್​ ಗೋಪಾಲ್​ ವರ್ಮಾ), ‘ದೊಡ್ಡ ಬಜೆಟ್​​ನ ಸಿನಿಮಾಗಳು ಮಾತ್ರ ಜನರನ್ನು ಥಿಯೇಟರ್​​ನತ್ತ ಸೆಳೆಯುತ್ತವೆ ಎಂಬುದೊಂದು ನಂಬಿಕೆ ಇತ್ತು. ಅದನ್ನೀಗ ರಿಷಬ್​ ಶೆಟ್ಟಿ ಸುಳ್ಳಾಗಿಸಿದ್ದಾರೆ. ಕಾಂತಾರ ಸಿನಿಮಾ ಒಂದೊಳ್ಳೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್​ ಮಾಡಿರುವ ಅವರು ‘ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ರಿಷಬ್​ ಶೆಟ್ಟಿಯವರು ಗುಳಿಗ ದೈವತ್ವ ಹೊಂದಿದ ಶಿವನಂತಾಗಿದ್ದಾರೆ. ಕಾಂತಾರ ಕಲೆಕ್ಷನ್​ ನೋಡಿದ ಮೇಲೆ, 300 ಕೋಟಿ, 400 ಕೋಟಿ, 500 ಕೋಟಿ ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದವರೆಲ್ಲ ಹೃದಯಾಘಾತದಿಂದ ಸಾಯುತ್ತಿದ್ದಾರೆ’ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.

ಹೀಗೆ ಕಾಂತಾರ ಸಿನಿಮಾವನ್ನು ಒಬ್ಬರಲ್ಲ ಒಬ್ಬರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಹೊಗಳುತ್ತಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್​​ ಪ್ರಭಾಸ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ‘ಕಾಂತಾರ ಸಿನಿಮಾ ಎರಡು ಬಾರಿ ನೋಡಿದೆ. ಅದೊಂದು ಅದ್ಭುತ ಅನುಭವ-ಪರಿಕಲ್ಪನೆ. ಕಡ್ಡಾಯವಾಗಿ, ಥಿಯೇಟರ್​ಗೇ ಹೋಗಿ ನೋಡಬೇಕಾದ ಸಿನಿಮಾ’ ಎಂದು ಹೇಳಿದ್ದರು.

ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ | ಕಾಂತಾರ ಅಭಿಮಾನಿಗಳ ಕಿಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Taapsee Pannu: ಸೆಲ್ಫಿಗೆ ಪೋಸ್‌ ಕೋಡೋಕೆ ಆಗಲ್ವಾ? ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕೆಂಡ!

Taapsee Pannu: ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Taapsee Pannu Denying Selfie, Netizens Defend Actress
Koo

ಬೆಂಗಳೂರು: ತಾಪ್ಸಿ ಪನ್ನು (Taapsee Pannu) ಟಾಲಿವುಡ್‌ನಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಜತೆಗೆ ಆಗಾಗ ವಿವಾದಕ್ಕೂ ಗುರಿಯಾಗುತ್ತ ಇರುತ್ತಾರೆ. ಇದೀಗ ನಟಿ ʻಖೇಲ್ ಖೇಲ್ ಮೇʼ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

ಅನನ್ಯಾ ವೈರಲ್ ವೀಡಿಯೊದಲ್ಲಿ ಈ ಬಗ್ಗೆ ಕಮೆಂಟ್‌ ಮಾಡಿದ್ದು ಹೀಗೆ. ʻʻಹಲವಾರು ಕ್ಯಾಮೆರಾಗಳಿಗೆ ಪೋಸ್‌ ನೀಡುತ್ತಿರುವಾಗ,ಸೆಲ್ಫಿಯನ್ನು ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಪ್ರಭಾವಿಗಳನ್ನು ಕರೆದ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು! ಆಕೆಗೆ ನಿಜವಾಗಿಯೂ ಉತ್ತಮ PR ತರಬೇತಿಯ ಅಗತ್ಯವಿದೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Tapsee strikes again! Swipe for more
byu/Away-Enthusiasm8771 inBollyBlindsNGossip

ವೀಡಿಯೊ ರೆಡ್ಡಿಟ್‌ನಲ್ಲಿಯೂ ಕಾಣಿಸಿಕೊಂಡಿದೆ ಮತ್ತು ನೆಟಿಜನ್‌ಗಳು ಈ ಬಗ್ಗೆ ಕಮೆಂಟ್‌ ಮಾಡಿದ್ದಾರೆ. ʻʻನಟಿಯದ್ದು ಯಾವುದೇ ತಪ್ಪು ಇಲ್ಲ. ಸೆಲ್ಫಿ ಕೊಡುವ ಅಗತ್ಯ ಇಲ್ಲʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಬಾಲಿವುಡ್‌ನ ಅಭಿಮಾನಿ ಅಥವಾ ಫಾಲೋವರ್‌ ನಾನು ಅಲ್ಲ. ಆದರೆ ನಾನು ಎರಡೂ ದೃಷ್ಟಿಕೋನಗಳಿಂದ ವಿಷಯಗಳನ್ನು ನೋಡಲು ಪ್ರಯತ್ನಿಸುತ್ತೇನೆ. ಬಹುಶಃ ಆಕೆಯ ಮೇಕ್ಅಪ್ ಅಥವಾ ಕೂದಲಿಗೆ ಟಚ್‌ಅಪ್ ಅಗತ್ಯವಿದೆ ಎಂದು ಅವರು ಭಾವಿಸಿರಬಹುದುʼʼಎಂದು ಕಮೆಂಟ್‌ ಮಾಡಿದ್ದಾರೆ.

ʻʻನಟಿ ಎಂಬ ಕಾರಣಕ್ಕೆ ಪ್ರತಿ ಸೆಲ್ಫಿಗೂ ಹೌದು ಎಂದು ಹೇಳಬೇಕಿಲ್ಲ. ಬಹುಶಃ ಅವರು ಸೆಲ್ಫಿಗಳನ್ನು ಇಷ್ಟಪಡುವುದಿಲ್ಲ, ವೃತ್ತಿಪರ ಕ್ಯಾಮೆರಾಗಳು ಇವೆʼʼ ಎಂದು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಮತ್ತು ಫರ್ದೀನ್ ಖಾನ್ ಅಭಿನಯದ ʻಖೇಲ್ ಖೇಲ್ ಮೇʼ ಚಿತ್ರದ ಹೊಸ ಮೋಷನ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ವಾಣಿ ಕಪೂರ್, ಆಮಿ ವಿರ್ಕ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಕೂಡ ನಟಿಸಿದ್ದಾರೆ. ಈ ವರ್ಷ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ”ಫಿರ್ ಆಯಿ ಹಸೀನ್ ದಿಲ್‌ ರುಬಾ” ಚಿತ್ರದಲ್ಲಿ ಕೂಡ ತಾಪ್ಸಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 09ರಂದು ಈ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

Continue Reading

ಸಿನಿಮಾ

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Aishwarya Rai Bachchan: ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿʼ ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ. ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ.

VISTARANEWS.COM


on

Aishwarya Rai Bachchan
Koo

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೇ ತಮ್ಮ ವಿಶೇಷ ಫ್ಯಾಷನ್ ಶೈಲಿ ಮತ್ತು ಸೌಂದರ್ಯದಿಂದ ಕೂಡ ಅನೇಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ನಿಮಗೂ ಐಶ್ವರ್ಯಾ ಅವರ ಫ್ಯಾಷನ್ ಶೈಲಿಯನ್ನು ಅನುಸರಿಸುವ ಆಸಕ್ತಿ ಇದ್ದರೆ, ನಟಿ ತಮ್ಮ ಬಲಗೈಗೆ ಧರಿಸಿದ ವಿ-ಆಕಾರದ ವಜ್ರದ ಉಂಗುರದ ಬಗ್ಗೆ ತಿಳಿದುಕೊಳ್ಳಿ! ನಟಿ ಈ ಉಂಗುರವನ್ನು ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಹಾಗಾದ್ರೆ ನಟಿ ಧರಿಸಿದ ಈ ಉಂಗುರದ ವಿಶೇಷತೆ ಏನು ಎಂಬುದನ್ನು ತಿಳಿಯಿರಿ. ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿ” ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ಹಾಗಾಗಿ ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ ಮತ್ತು ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ. ಅವರ ಸಂಪ್ರದಾಯದಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಧರಿಸುವ ಹಾಗೇ ಈ ಉಂಗುರವನ್ನು ಧರಿಸಬೇಕಾಗುತ್ತದೆ.

Aishwarya Rai Bachchan V shape dimond ring

ಬಂಟ ಸಮುದಾಯದ ಸಂಪ್ರದಾಯ

ಈ ಉಂಗುರವು ಹೆಚ್ಚಾಗಿ ಮಂಗಳೂರಿನ ಬಂಟ ಸಮುದಾಯದವರು ಧರಿಸುತ್ತಾರೆ. ಈ ಉಂಗುರವು ವಿವಾಹಿತ ಮಹಿಳೆಯರು ಮತ್ತು ನವ ವಧುವನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸುತ್ತದೆ ಎಂಬುದು ಬಂಟ ಸಮುದಾಯದ ನಂಬಿಕೆಯಾಗಿದೆ. ಬಂಟ ಸಮುದಾಯಕ್ಕೆ ಸೇರಿದ ನಟಿ ಐಶ್ವರ್ಯ ರೈ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ಸಮುದಾಯದ ಸಂಪ್ರದಾಯದಂತೆ ಯಾವಾಗಲೂ ತನ್ನ ಕೈಯಲ್ಲಿ ವಂಕಿ ಉಂಗುರವನ್ನು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಉಂಗುರವನ್ನು ಬಂಟ ಸಮುದಾಯ ಮಾತ್ರವಲ್ಲದೇ ದಕ್ಷಿಣ ಭಾರತದ ಸಮುದಾಯದ ಅನೇಕ ವಿವಾಹಿತ ಮಹಿಳೆಯರು ಧರಿಸುತ್ತಾರೆ.

ಇದನ್ನೂ ಓದಿ: Bollywood Cinema: ಜೀವನ ಪ್ರೀತಿಯ ತೀವ್ರತೆ ಸಾರಿದ 5 ಬಾಲಿವುಡ್ ಚಿತ್ರಗಳಿವು

ಹಲವಾರು ವಿನ್ಯಾಸಗಳಲ್ಲಿ ಲಭ್ಯ:
ಈ ವಂಕಿ ಉಂಗುರವು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ, ಉದಾಹರಣೆಗೆ ವಿ-ಆಕಾರದ ತೆಳುವಾದ ಚಿನ್ನದ ಬ್ಯಾಂಡ್ ಅಥವಾ ನಟಿ ಐಶ್ವರ್ಯ ರೈ ಧರಿಸಿದಂತೆ ವಜ್ರದ ಬ್ಯಾಂಡ್ ನಲ್ಲಿ ಸಿಗುತ್ತದೆ. ಈ ಉಂಗುರವನ್ನು ಮಂಗಳೂರಿನ ವಿವಾಹಿತ ಮಹಿಳೆಯರು ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸುತ್ತಾರೆ. ಇದರಿಂದ ಅವರು ವಿವಾಹಿತರು ಎಂದು ಹೇಳುತ್ತಾರೆ. ಅಲ್ಲದೇ ಈ ಉಂಗುರವು ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ವೈವಾಹಿಕ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ ಈ ಉಂಗುರ ವಿಶೇಷವಾಗಿ ಗಮನ ಸೆಳೆದಿದೆ.

Continue Reading

ಕರ್ನಾಟಕ

Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Ghuspaithia Hindi movie: ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

VISTARANEWS.COM


on

Ghuspaithia Hindi movie release on August 9
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympic: ರೋಯಿಂಗ್​ನಲ್ಲಿ ಶುಭ ಸುದ್ದಿ; ಶೂಟಿಂಗ್​ನಲ್ಲಿ ನಿರಾಸೆ ಮೂಡಿಸಿದ ಮಿಶ್ರ ತಂಡ

ಆಗಸ್ಟ್ 9ರಂದು AA ಫಿಲಂಸ್ ಮೂಲಕ ಬಿಡುಗಡೆಯಾಗಲಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರಿದ್ದಾರೆ.

Continue Reading

ಬಾಲಿವುಡ್

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Malaika Arora: ಈವೆಂಟ್‌ನಲ್ಲಿ ಜೋಡಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ವೈರಲ್‌ ಆಗಿವೆ. ಆದರೆ ಇಬ್ಬರೂ ಒಂದೇ ಈವೆಂಟ್‌ನಲ್ಲಿ ಭಾಗಿಯಾಗಿದ್ದರೂ ಈಗ ಪರಸ್ಪರ ದೂರ ಆಗಿದ್ದಾರೆ.ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ.

VISTARANEWS.COM


on

Malaika Arora breakup rumours rushes past Arjun Kapoor
Koo

ಬೆಂಗಳೂರು: ಬ್ರೇಕಪ್ ವದಂತಿಗಳ ಬಳಿಕ, ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ (Malaika Arora) ಶುಕ್ರವಾರ ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್‌ನಲ್ಲಿ ಡಿಸೈನರ್ ಕುನಾಲ್ ರಾವಲ್ ಅವರ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ಜೋಡಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ವೈರಲ್‌ ಆಗಿವೆ. ಆದರೆ ಇಬ್ಬರೂ ಒಂದೇ ಈವೆಂಟ್‌ನಲ್ಲಿ ಭಾಗಿಯಾಗಿದ್ದರೂ ಈಗ ಪರಸ್ಪರ ದೂರ ಆಗಿದ್ದಾರೆ.ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ.

ವೀಡಿಯೊವೊಂದರಲ್ಲಿ, ಅರ್ಜುನ್ ಕಪೂರ್ ಮತ್ತು ಮಲೈಕಾ ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ. ಪರಸ್ಪರ ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಲಿಲ್ಲ. ಮತ್ತೊಂದು ಕ್ಲಿಪ್‌ನಲ್ಲಿ, ಅರ್ಜುನ್ ಕಪೂರ್ ಎದುರಲ್ಲೇ ಮಲೈಕಾ ಹಾದು ಹೋಗಿದ್ದಾರೆ. ಈ ವೇಳೆ ಅಭಿಮಾನಿಗಳು ಮುತ್ತಿಕೊಳ್ಳದಂತೆ ತಡೆದಿದ್ದಾರೆ ಅರ್ಜುನ್ ಕಪೂರ್. ಆದರೆ, ಇದನ್ನು ಮಲೈಕಾ ಅರೋರಾ ಗಮನಿಸಿಯೂ ಇಲ್ಲ. ಅವರು ನೇರವಾಗಿ ಹೊರಟು ಹೋಗಿದ್ದಾರೆ. ಈ ಮೂಲಕ ಬ್ರೇಕಪ್ ವಿಚಾರ ಖಚಿತವಾಗಿದೆ. ಸ್ವತಃ ಮಲೈಕಾ ಅವರೇ ಬ್ರೇಕಪ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅರ್ಜುನ್ ಕಪೂರ್​ಗೆ ಮಲೈಕಾ ಮೇಲೆ ಇನ್ನೂ ಕಾಳಜಿ ಇದೆ. ಆದರೆ, ಈ ಕಾಳಜಿ ಮಲೈಕಾಗೆ ಇಲ್ಲ.

ಈವೆಂಟ್‌ಗಾಗಿ, ಮಲೈಕಾ ವೈಟ್ ಬ್ಲೇಜರ್ ಕೋ-ಆರ್ಡರ್ ಸೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅರ್ಜುನ್ ಕಪ್ಪು ಶೆರ್ವಾನಿ ಮತ್ತು ಧೋತಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Malaika Arora: 38ರ ಅರ್ಜುನ್‌ ಕಪೂರ್‌ಗೆ 50ರ ಮಲೈಕಾ ಅರೋರಾ ಸಹವಾಸ ಸಾಕಾಯ್ತಾ?!

ಮಲೈಕಾ ಮತ್ತು ಅರ್ಜುನ್ ʼವಿಶೇಷವಾದ ಸಂಬಂಧʼವನ್ನು ಹೊಂದಿದ್ದರು. ಇಬ್ಬರೂ ಪರಸ್ಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಜೋಡಿ ಬೇರೆಯಾಗಬೇಕು ಎಂದು ನಿರ್ಧರಿಸಿದೆ. ಇಷ್ಟೂ ವರ್ಷಗಳಲ್ಲಿ, ಅವರು ತಮ್ಮ ಸಂಬಂಧಕ್ಕೆ ಗೌರವವನ್ನು ನೀಡಿದ್ದಾರೆ. ಒಂದು ವೇಳೆ ಬೇರೆಯಾಗಲು ನಿರ್ಧರಿಸಿದರೂ ಪರಸ್ಪರ ಅದೇ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ವರದಿಯಾಗಿದೆ.

11 ವರ್ಷಗಳ ಅಂತರ

ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಮಾತ್ರವಲ್ಲ ಕೆಲವು ದಿನಗಳಿಂದ ಮಗು ವಿಚಾರವಾಗಿ ಸಾಕಷ್ಟು ಟ್ರೋಲ್‌ ಆಗಿತ್ತು ಜೋಡಿ. ಮಲೈಕಾ ಹಾಗೂ ಅರ್ಜುನ್ ಕಪೂರ್​ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು.

ಇತ್ತೀಚಿನ ವರದಿಗಳ ಪ್ರಕಾರ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಅರ್ಜುನ್‌ ಕಪೂರ್ ಕುಟುಂಬದವರನ್ನು ಅನ್​ಫಾಲೋ ಮಾಡಿದ್ದಾರೆ ಮಲೈಕಾ ಅರೋರಾ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಈಗ ನಟಿ ಕುಶಾ ಕಪಿಲಾ (Kusha Kapila) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂತಲೂ ವರದಿಗಳಿವೆ.

ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್​ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಮನೆಯಲ್ಲಿ ಅರ್ಜುನ್ ಮತ್ತು ಕುಶಾ ಒಟ್ಟಿಗೆ ಪಾರ್ಟಿ ಮಾಡಿದ್ದಾಗಿನಿಂದಲೂ ಸಂಬಂಧದ ವದಂತಿಗಳು ಪ್ರಾರಂಭವಾದವು.

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

Continue Reading
Advertisement
Mysuru News
ಕ್ರೈಂ19 mins ago

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Actor Darshan case Police Serve Notice To Siddarudha Who Claimed To Met Darshan
ಸ್ಯಾಂಡಲ್ ವುಡ್23 mins ago

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

hd kumaraswamy nanjanagudu
ಪ್ರಮುಖ ಸುದ್ದಿ27 mins ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

RRB Recruitment 2024
ಉದ್ಯೋಗ28 mins ago

RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Paris 2024 Olympics
ಕ್ರೀಡೆ29 mins ago

Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ

road Accident
ರಾಯಚೂರು44 mins ago

Road Accident : ಕುಡಿದು ಕಾರು ಓಡಿಸಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು ; ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ

Delhi Floods
ದೇಶ51 mins ago

Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

dog meat abdul razak
ಕ್ರೈಂ58 mins ago

Dog Meat: ಅಬ್ದುಲ್‌ ರಜಾಕ್‌ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

Golden Star Ganesh krishnam pranaya sakhi in famous social media
ಸ್ಯಾಂಡಲ್ ವುಡ್1 hour ago

Golden Star Ganesh: ಸೋಷಿಯಲ್‌ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ `ಕೃಷ್ಣಂ ಪ್ರಣಯ ಸಖಿ’ ಹಾಡುಗಳು!

Kangana Ranaut
ದೇಶ1 hour ago

Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ17 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ22 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ23 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌