IT Hiring | ಐಟಿ ಕಂಪನಿಗಳಲ್ಲಿ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ನೇಮಕಾತಿ 24% ಇಳಿಕೆ - Vistara News

ಪ್ರಮುಖ ಸುದ್ದಿ

IT Hiring | ಐಟಿ ಕಂಪನಿಗಳಲ್ಲಿ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ನೇಮಕಾತಿ 24% ಇಳಿಕೆ

ಪ್ರಸಕ್ರ ಸಾಲಿನ ಮೊದಲಾರ್ಧದಲ್ಲಿ ಪ್ರಮುಖ ಐಟಿ ಕಂಪನಿಗಳಲ್ಲಿ ನೇಮಕಾತಿಯ ಪ್ರಮಾಣದಲ್ಲಿ 24% ಇಳಿಕೆಯಾಗಿದ್ದು, ಆರ್ಥಿಕ ಹಿಂಜರಿತದ ಆತಂಕ ಮೂಡಿಸಿದೆ.

VISTARANEWS.COM


on

IT JOBS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್)‌, ಇನ್ಫೋಸಿಸ್‌, ವಿಪ್ರೊ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿಯಲ್ಲಿ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ, ಅಂದರೆ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ (IT Hiring) ನಿವ್ವಳ ನೇಮಕಾತಿಯಲ್ಲಿ 24% ಇಳಿಕೆಯಾಗಿದೆ.

ಐಟಿ ವಲಯದ ಈ ನಾಲ್ಕು ಪ್ರಮುಖ ಕಂಪನಿಗಳು 2021-22ರ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ 107,616 ನಿವ್ವಳ ನೇಮಕಾತಿ ಮಾಡಿದ್ದರೆ, 2022-23ರಲ್ಲಿ 81,700 ಮಂದಿಯನ್ನು ನಿವ್ವಳ ನೇಮಿಸಿವೆ. ಈ ಕಂಪನಿಗಳು 2021-22ರಲ್ಲಿ 240,000 ನಿವ್ವಳ ನೇಮಕಾತಿಯನ್ನು ಮಾಡಿಕೊಂಡಿತ್ತು. ಉದ್ಯೋಗಿಗಳ ವಲಸೆ ಕಡಿಮೆಯಾಗಿರುವುದು, ಪ್ರತಿಭಾವಂತ ಉದ್ಯೋಗಿಗಳ ಕೊರತೆಯ ಸಮಸ್ಯೆ ಕೂಡ ತಗ್ಗುತ್ತಿರುವುದರಿಂದ ನಿವ್ವಳ ನೇಮಕಾತಿ ಕೂಡ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಅಮೆರಿಕ, ಯುರೋಪ್‌ನಲ್ಲಿ ಒಟ್ಟಾರೆಯಾಗಿ ಆರ್ಥಿಕ ಮಂದಗತಿ ಹಾಗೂ ಆರ್ಥಿಕ ಹಿಂಜರಿತದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ. ಮುಂದಿನ ಎರಡು ತ್ರೈಮಾಸಿಕದಲ್ಲೂ ನಿವ್ವಳ ನೇಮಕಾತಿ ಇಳಿಕೆ ನಿರೀಕ್ಷಿಸಲಾಗಿದೆ ಎಂದು ಟೀಮ್‌ಲೀಸ್‌ ಡಿಜಿಟಲ್‌ನ ‌ಹಿರಿಯ ಎಕ್ಸಿಕ್ಯುಟಿವ್‌ ಸುನಿಲ್ ಸಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

Amit Shah: ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

VISTARANEWS.COM


on

Amith Shah
Koo

ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಮುಗಿದಿದೆ. ಬಿಜೆಪಿಯು 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಎನ್‌ಡಿಎ ಒಕ್ಕೂಟದ ಮಿತ್ರಪಕ್ಷಗಳ ಬಲದೊಂದಿಗೆ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು 2029ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. “2029ರಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ ಉಳಿಯಲಿದೆ” ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷಗಳು ಏನು ಮಾಡುತ್ತಾರೋ, ಏನು ಮಾಡಬೇಕು ಎಂದಿದ್ದಾರೋ ಮಾಡಲಿ. ಆದರೆ, ನಾನು ನಿಮಗೊಂದು ಭರವಸೆ ನೀಡುತ್ತೇನೆ. 2029ರ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದಾರೆ, ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಈ ಬಾರಿಯ ಒಂದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ” ಎಂಬುದಾಗಿ ಹೇಳಿದರು.

“ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಹಾಗಾಗಿ, ಈಗಿರುವ ಪ್ರತಿಪಕ್ಷಗಳು ಮುಂದೆಯೂ ಪ್ರತಿಪಕ್ಷದಲ್ಲಿಯೇ ಕೂರಲಿವೆ” ಎಂದು ತಿಳಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕ್ಷೇತ್ರಗಳು 240ಕ್ಕೆ ಇಳಿಕೆಯಾದವು. ಆದರೂ, ಬಿಜೆಪಿಯು ಟಿಡಿಪಿ ಹಾಗೂ ಜೆಡಿಯು ಬೆಂಬಲದಿಂದ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಈ ಬಾರಿ ತನ್ನ ಕ್ಷೇತ್ರಗಳನ್ನು 99ಕ್ಕೆ ಏರಿಕೆ ಮಾಡಿಕೊಂಡಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟದ ಬಲ ಹೆಚ್ಚಾಗಲಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Continue Reading

ಕ್ರೀಡೆ

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

Paris Olympics: ವಿದಾಯದ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್​. ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವು ಗೋಲುಗಳನ್ನು ತಡೆದದ್ದು ಪಂದ್ಯದ ಆಕರ್ಷಣೆಗಳಲ್ಲಿ ಒಂದಾಗಿತ್ತು.

VISTARANEWS.COM


on

Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಭಾರತದ ಪುರುಷರ ಹಾಕಿ ತಂಡ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮೂಲಕ ಪದಕದ ಆಸೆ ಜೀವಂತವಾಗಿರಿಸಿದೆ. ಕೇವಲ 10 ಮಂದಿ ಆಟಗಾರರನ್ನು ಒಳಗೊಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​(India vs Great Britain) ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಗುಚಿ ಹಾಕಿ ಈ ಸಾಧನೆಗೈದಿತು.

4 ಕ್ವಾರ್ಟರ್​ ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಮೊಳಗಿಸಿತು.ಕಳೆದ ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಭಾರತ ತಂಡ ಬ್ರಿಟನ್​ ತಂಡವನ್ನೇ ಮಣಿಸಿ ಸೆಮಿಫೈನಲ್​ ಪ್ರವೇಶಿಸಿತ್ತು.

ರೆಡ್​ ಕಾರ್ಡ್​ ಪಡೆದ ಅಮಿತ್‌


ಎದುರಾಳಿ ತಂಡದ ಆಟಗಾರ ಕಲ್ನಾನ್‌ನ ಮುಖಕ್ಕೆ ಹಾಕಿ ಸ್ಟಿಕ್​ ತಾಗಿಸಿದ ಪರಿಣಾಮ ಅಮಿತ್‌ಗೆ ಅಂಪೈರ್​ ರೆಡ್ ಕಾರ್ಡ್​ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಮೊದಲ ಕ್ವಾರ್ಟರ್​ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಈ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸುವ ಹಲವು ಅವಕಾಶ ಇತ್ತಾದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.

ಇದನ್ನೂ ಓದಿ Paris Olympics: ವಿಕ್ಟರ್‌ ವಿರುದ್ಧ ಲಕ್ಷ್ಯ ಸೇನ್​ಗೆ ಒಲಿಯಲಿ ಗ್ರೇಟ್​ ವಿಕ್ಟರಿ; ಇಂದು ಸೆಮಿ ಫೈನಲ್​

ಮಿಂಚಿದ ಶ್ರೀಜೇಶ್

ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಇನ್ನೇನು ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಮೂರನೇ ಕ್ವಾರ್ಟರ್​ ಮುಕ್ತಾಯಕ್ಕೆ 4 ನಿಮಿಷವಿರುವಾಗ​ ಬ್ರಿಟನ್​ಗೆ ಪೆನಾಲ್ಟಿ ಕಾರ್ನರ್​​ ಅವಕಾಶ ಸಿಕ್ಕರೂ ಕೂಡ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ವಿದಾಯದ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್​. ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವು ಗೋಲುಗಳನ್ನು ತಡೆದದ್ದು ಪಂದ್ಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿಯೂ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೂರನೇ ಕ್ವಾರ್ಟರ್​ನಲ್ಲಿಯೂ ಇತ್ತಂಡಗಳ ಬಲಿಷ್ಠ ರಕ್ಷಣಾತ್ಮಕ ಆಟದಿಂದಾಗಿ ಗೋಲು ದಾಖಲಾಗಲಿಲ್ಲ. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಕೂಡ ಉಭಯ ತಂಡಗಳಿಗೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಟೈಗೊಂಡಿತು. ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್‌ ಫೈನಲ್​ನಲ್ಲೂ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್​ಗಳ ಅಂತರದಿಂದ ಗೆದ್ದು ಸೆಮಿಪೈನಲ್‌ ಪ್ರವೇಶಿಸಿತ್ತು.

Continue Reading

ಕರ್ನಾಟಕ

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Officer Dismissed: ಸತ್ಯಾಂಶ ಮರೆಮಾಚಿ ಅಕ್ರಮವಾಗಿ ನೇಮಕವಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದೂರರ್ಜಿ ಪರಿಶೀಲನಾ ಸಮಿತಿ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಿತ್ತು. ಹೀಗಾಗಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಅಮಾನತುಗೊಂಡಿದ್ದಾರೆ.

VISTARANEWS.COM


on

Koo

ಹಾವೇರಿ: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ವಜಾಗೊಂಡಿದ್ದಾರೆ. ಸತ್ಯಾಂಶ ಮರೆಮಾಚಿ ಅಕ್ರಮವಾಗಿ ನೇಮಕವಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದೂರರ್ಜಿ ಪರಿಶೀಲನಾ ಸಮಿತಿಯು ಪರಿಶೀಲನೆ ನಡೆಸಿ ವರದಿ ನೀಡಿತ್ತು. ನಿಯಮಬಾಹಿರವಾಗಿ ನೇಮಕಾಗಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ವಜಾಗೊಳಿಸಿ (Officer Dismissed) ತೋಟಗಾರಿಕಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ತೋಟಗಾರಿಕೆ ಇಲಾಖೆಯಲ್ಲಿ ಬಸವರಾಜಪ್ಪ ನಿಂಗಪ್ಪ ಬರೇಗಾರ ದಿನಗೂಲಿ ನೌಕರನಾಗಿದ್ದುಕೊಂಡು ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆ ಬಡ್ತಿ ಪಡೆದಿದ್ದರು. 1981 ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ್ದಾಗಿ ಸುಳ್ಳು ದಾಖಲೆ ನೀಡಿದ್ದರು. ಇದರಿಂದ 1992ರಲ್ಲಿ ತೋಟಗಾರ ಹುದ್ದೆಗೆ ನೇಮಕವಾಗಿದ್ದರು. ನಂತರ 2012ರಲ್ಲಿ ಜ್ಯೇಷ್ಠತೆಯನ್ನು ಪರಿಗಣಿಸಿ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಮುಂಬಡ್ತಿ ನೀಡಲಾಗಿತ್ತು. ಆದರೆ ಇವರ ಹುದ್ದೆಯನ್ನು ನಿಯಮಬಾಹಿರವಾಗಿ ಸಕ್ರಮಗೊಳಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದಾಗಿ ದಾಖಲೆ ನೀಡಿದ್ದರು. ಆದರೆ, ಆ ಅವಧಿಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ರೆಗ್ಯುಲರ್‌ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದರು ಎಂಬುವುದು ದೃಢಪಟ್ಟಿದೆ. 10 ವರ್ಷಗಳ ನಿರಂತರ ಸೇವೆ ಪೂರೈಸದೆ ಸಕ್ರಮಾತಿ ಷರತ್ತುಗಳನ್ನು ಉಲ್ಲಂಘಿಸಿ ನೇಮಕವಾಗಿರುವುದು ಸಮಿತಿ ಪರಿಶೀಲನೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಅವರನ್ನು ಇಲಾಖೆ ನಿರ್ದೇಶಕರು ಸೇವೆಯಿಂದ ವಜಾಮಾಡಿದ್ದಾರೆ.

ಜಾತಿ ನಿಂದನೆ ಆರೋಪ; ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ, ಕುಲಸಚಿವರ ವಿರುದ್ಧ ಕೇಸ್‌

ಕಲಬುರಗಿ: ಜಾತಿ ನಿಂದನೆ ಆರೋಪದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಪ್ಪ ನೀಡಿದ ದೂರಿನ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ | Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

ಆ.1 ರಂದು ಸಿಯುಕೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವೇಳೆ ಸಂಶೋಧನಾ ವಿದ್ಯಾರ್ಥಿ ನಂದಪ್ಪ ಅವರನ್ನು ವಿವಿ ಕ್ಯಾಂಪಸ್ ಒಳಗೆ ಸಿಬ್ಬಂದಿ ಬಿಟ್ಟಿಲ್ಲ. ಎಸ್‌ಸಿ ಎಂಬ ಕಾರಣಕ್ಕೆ ನನ್ನನ್ನು ಒಳಗೆ ಬಿಡಬೇಡಿ ಎಂದು ಕುಲಪತಿ ಬಟ್ಟೂ ಸತ್ಯನಾರಾಯಣ ಹಾಗೂ ಕುಲಸಚಿವ ಆರ್.ಆರ್. ಬಿರಾದಾರ್ ಹೇಳಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Continue Reading

ಕ್ರೀಡೆ

Paris Olympics: ವಿಕ್ಟರ್‌ ವಿರುದ್ಧ ಲಕ್ಷ್ಯ ಸೇನ್​ಗೆ ಒಲಿಯಲಿ ಗ್ರೇಟ್​ ವಿಕ್ಟರಿ; ಇಂದು ಸೆಮಿ ಫೈನಲ್​

Paris Olympics: ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್​ ಹಾಗೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ವಿಕ್ಟರ್‌ ಅಕ್ಸೆಲ್ಸೆನ್‌ ಮತ್ತು ಲಕ್ಷ್ಯ ಸೇನ್‌ ಇದುವರೆಗೂ ಒಟ್ಟು 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಗರಿಷ್ಠ 7 ಪಂದ್ಯಗಳನ್ನು ಅಕ್ಸೆಲ್ಸೆನ್‌ ಗೆದ್ದು ಬೀಗಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ(Paris Olympics) ಸ್ಪರ್ಧಿಸುತ್ತಿರುವ ಲಕ್ಷ್ಯ ಸೇನ್‌(Lakshya Sen) ಅವರು ಇಂದು ನಡೆಯುವ ಪುರುಷರ ವಿಭಾಗದ ಬ್ಯಾಡ್ಮಿಂಟನ್‌ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಅವರು ಇಂದು ಖ್ಯಾತ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಹೋರಾಟ ನಡೆಸಲಿದ್ದಾರೆ.

ಒಲಿಂಪಿಕ್ ಕೂಟದ ಬ್ಯಾಡ್ಮಿಂಟನ್‌ನಲ್ಲಿ ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಶಟ್ಲರ್​ ಎನಿಸಿಕೊಂಡಿರುವ ಲಕ್ಷ್ಯ ಸೇನ್ ಅವರು ಈ ಬಾರಿ ಗೆದ್ದು ಬಂದ ಹಾದಿಯನ್ನು ಮತ್ತು ಅವರ ಉತ್ಕೃಷ್ಟಮಟ್ಟದ ಆಟವನ್ನು ನೋಡುವಾಗ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಮಾಡಬಹುದು. ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್​ ಪಡುಕೋಣೆ ಮತ್ತು ವಿಮಲ್‌ಕುಮಾರ್ ಗರಡಿಯಲ್ಲಿ ಪಳಗಿದ ಈ 22 ವರ್ಷದ ಲಕ್ಷ್ಯ ಸೇನ್​ ಕಳೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಚೈನೀಸ್‌ ತೈಪೆಯ ಚೌ ತೀನ್‌ ಚೆನ್‌ ಅವರೆದುರು ಮೊದಲ ಗೇಮ್‌ ಕಳೆದುಕೊಂಡೂ ಆ ಬಳಿಕ ಗೆದ್ದು ಬಂದ ರೀತಿ ಅಮೋಘವಾಗಿತ್ತು. ಇದೇ ರೀತಿ ಇಂದು ಕೂಡ ಗೆಲುವು ಸಾಧಿಸಿಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.

ಮುಖಾಮುಖಿ


ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್​ ಹಾಗೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ವಿಕ್ಟರ್‌ ಅಕ್ಸೆಲ್ಸೆನ್‌ ಮತ್ತು ಲಕ್ಷ್ಯ ಸೇನ್‌ ಇದುವರೆಗೂ ಒಟ್ಟು 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಗರಿಷ್ಠ 7 ಪಂದ್ಯಗಳನ್ನು ಅಕ್ಸೆಲ್ಸೆನ್‌ ಗೆದ್ದು ಬೀಗಿದ್ದಾರೆ. ಸೇನ್​ ಕೇವಲ ಒಂದು ಬಾರಿ ಮಾತ್ರ ಗೆಲುವು ಕಂಡಿದ್ದಾರೆ. ಈ ಗೆಲುವು 2022ರ ಜರ್ಮನ್‌ ಓಪನ್‌ ಪಂದ್ಯಾವಳಿಯಲ್ಲಿ ಒಲಿದಿತ್ತು. ಈ ಅಂಕಿ ಅಂಶಗಳನ್ನು ನೋಡುವಾಗ ಅಕ್ಸೆಲ್ಸೆನ್‌ ಅವರೇ ಗೆಲ್ಲುವ ಫೇವರಿಟ್​ ಆಗಿ ಗೋಚರಿಸಿದರೂ ಕೂಡ ಸೇನ್​ ಈ ಬಾರಿ ಅಷ್ಟು ಸುಲಭದಲ್ಲಿ ಶರಣಾಗುವ ಸಾಧ್ಯತೆ ಕಡಿಮೆ. ಒಟ್ಟಾರೆ ಈ ಪಂದ್ಯ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಸೋತರೆ ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಸ್ಪರ್ಧೆಯಲ್ಲಿ ಆಡಬೇಕು. ಗೆದ್ದರೆ ಬೆಳ್ಳಿ ಅಥವಾ ಚಿನ್ನ ಖಚಿತ.

ಗ್ರೇಟ್​ ಬ್ರಿಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಲಿ ಭಾರತ ಹಾಕಿ ತಂಡ


ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫುಲ್​ ಜೋಶ್​ನಲ್ಲಿರುವ ಭಾರತ(Hockey India) ಪುರುಷರ ಹಾಕಿ ತಂಡ ಇಂದು ನಡೆಯುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ(Paris Olympics) ಗ್ರೇಟ್​ ಬ್ರಿಟನ್(hockey india vs great britain)​ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸೆಮಿಫೈನಲ್​ ಪ್ರವೇಶಿಸುವುದು ಹರ್ಮನ್‌ಪ್ರೀತ್ ಸಿಂಗ್ ಪಡೆಯ ಯೋಜನೆಯಾಗಿದೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

ಸ್ಯಾರಸ್ಯವೆಂದರೆ ಕಳೆದ ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್‌ ಫೈನಲ್​ನಲ್ಲೂ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್​ಗಳ ಅಂತರದಿಂದ ಗೆದ್ದು ಸೆಮಿಪೈನಲ್‌ ಪ್ರವೇಶಿಸಿತ್ತು. ಈ ಬಾರಿಯೂ ಇದೇ ರೀತಿಯ ಫಲಿತಾಂಶ ಮರುಕಳಿಸಿ ಭಾರತ ಸೆಮಿ ಟಿಕೆಟ್​ ಪಡೆಯಲಿ ಎನ್ನುವುದು ಭಾರತೀಯರ ಹಾರೈಕೆ.

ಭಾರತದ ಪ್ರದರ್ಶನ ನೋಡುವಾಗ ಈ ಬಾರಿಯೂ ಪದಕವೊಂದನ್ನು ಗೆಲ್ಲುವುದು ಖಚಿತ ಎನ್ನಬಹುದು. ಕೊನೆಯ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್ ಶ್ರೀಜೇಶ್ ಅವರಂತು ತಮ್ಮ ಎಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತಡೆಗೋಡೆಯಂತೆ ನಿಂತು ಗೋಲ್​ಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದರಲ್ಲೂ 52 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಮಣಿಸಿದ್ದು ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಹರ್ಮನ್‌ಪ್ರೀತ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಉತ್ತಮ. ರಕ್ಷಣಾ ವಿಭಾಗದಲ್ಲಿ ಅಮಿತ್ ರೋಹಿದಾಸ್‌ ಮತ್ತು ಜರ್ಮನ್‌ಪ್ರೀತ್‌ ಉತ್ತಮ ಫಾರ್ಮ್​ನಲ್ಲಿದ್ದಾರೆ.

Continue Reading
Advertisement
Filmfare South 2024 mollywood tollywood 69th Filmfare Awards
South Cinema17 mins ago

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Amith Shah
ದೇಶ24 mins ago

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

HD Deve Gowda
ದೇಶ25 mins ago

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಕ್ರೀಡೆ29 mins ago

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಕರ್ನಾಟಕ54 mins ago

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Dhruva Sarja martin trailer Out
ಸ್ಯಾಂಡಲ್ ವುಡ್56 mins ago

Dhruva Sarja : ʻಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ ಬಲು ಜೋರು!

Drowned in water
ಬೆಳಗಾವಿ1 hour ago

Drowned in water : ಮಾರ್ಕಂಡೇಯ ನದಿಗೆ ಆಯತಪ್ಪಿ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

PSI Parashuram Case
ಕರ್ನಾಟಕ2 hours ago

PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

Wayanad Landslide
ದೇಶ2 hours ago

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Vastu Tips
ಧಾರ್ಮಿಕ2 hours ago

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌