Viral Video | ಅಪ್ಪನ ಬಿಳಿ ಕಾರಿನ ಮೇಲೆ ಅಮ್ಮನ ಲಿಪ್​ಸ್ಟಿಕ್​​ನಿಂದ ಚಿತ್ತಾರ; ಸೃಷ್ಟಿಕರ್ತ ತುಂಟ ಪುತ್ರ ! - Vistara News

ವೈರಲ್ ನ್ಯೂಸ್

Viral Video | ಅಪ್ಪನ ಬಿಳಿ ಕಾರಿನ ಮೇಲೆ ಅಮ್ಮನ ಲಿಪ್​ಸ್ಟಿಕ್​​ನಿಂದ ಚಿತ್ತಾರ; ಸೃಷ್ಟಿಕರ್ತ ತುಂಟ ಪುತ್ರ !

ಪುಟ್ಟ ಮಕ್ಕಳು ಇರುವ ಮನೆಯ ಗೋಡೆ, ಟೇಬಲ್​ ಮೇಲೆಲ್ಲ ಬಣ್ಣಬಣ್ಣದ ಚಿತ್ತಾರ ಮೂಡುವುದು ಸರ್ವೇ ಸಾಮಾನ್ಯ. ಮಕ್ಕಳು ಗೋಡೆ ಮೇಲೆ ಮನಸಿಗೆ ಬಂದಂತೆ ಗೀಚುತ್ತವೆ. ಈ ಬಾಲಕ ಇನ್ನೂ ಒಂದು ಹಂತ ಮೇಲೇರಿದ್ದಾನೆ.

VISTARANEWS.COM


on

Viral Video A Boy Scribbles On Car With Lipstick
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಣ್ಣ ಮಕ್ಕಳು ಇರುವ ಮನೆಯ ಗೋಡೆಯ ಮೇಲೆಲ್ಲ ಸ್ಕೆಚ್​ ಪೆನ್​, ಮಾರ್ಕರ್​ ಚಿತ್ತಾರಗಳು ಮೂಡುವುದು ಸಾಮಾನ್ಯ. 2-4 ವರ್ಷದ ನಡುವಿನ ಮಕ್ಕಳು ಕೈಯಲ್ಲಿ ಮಾರ್ಕರ್​, ಸ್ಕೆಚ್​ ಪೆನ್​, ಚಾಕ್​ಪೀಸ್​, ಪೆನ್ನುಗಳಿಂದ ಸಿಕ್ಕಸಿಕ್ಕಲ್ಲಿ ಗೀಚಿ, ಮನಸಿಗೆ ಬಂದ ಚಿತ್ತಾರ ಮೂಡಿಸುತ್ತವೆ. ಆದರೆ ಇಲ್ನೋಡಿ, ಈ ಪುಟಾಣಿ ಇನ್ನೂ ಒಂದು ಹಂತ ಮೇಲೇರಿ, ಅಪ್ಪನ ಬಿಳಿ ಬಣ್ಣದ ಕಾರಿನ ಮೇಲೆ ಗೀಚಿದ್ದಾನೆ..ಅದೂ ಅಮ್ಮನ ಲಿಪ್​​ಸ್ಟಿಕ್​​ನಿಂದ !…ಕಾರಿನ ಮೇಲೆ​​ ಅದೆಷ್ಟು ಗೆರೆ ಎಳೆದು, ಸುರುಳಿ ಸುತ್ತಿದ್ದಾನೋ ಗೊತ್ತಾಗುತ್ತಿಲ್ಲ. ಆದರೆ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರ ಗಮನವನ್ನಂತೂ ಭರ್ಜರಿಯಾಗಿ ಸೆಳೆದಿದ್ದಾನೆ.

Morissa Schwartz (Dr. Rissy) ಟ್ವಿಟರ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಆಗಿದೆ. ‘ಅವನು ಬಹುಶಃ ಎರಡೂವರೆಯಿಂದ ಮೂರು ವರ್ಷದ ಬಾಲಕ ಆಗಿರಬಹುದು. ಅಪ್ಪನ ಕಾರಿನ ಬುಡದಲ್ಲಿ ತನ್ನ ಸೈಕಲ್​ ಇಟ್ಟುಕೊಂಡಿದ್ದಾನೆ. ಅಮ್ಮನ ಮೇಕಪ್​ ಬಾಕ್ಸ್​ನಿಂದ ಎತ್ತಿಕೊಂಡು ಬಂದ 10-12 ಲಿಪ್​ಸ್ಟಿಕ್​​ಗಳು ಅಲ್ಲೇ ನೆಲದ ಮೇಲೆ ಬಿದ್ದಿವೆ. ಬಿಳಿ ಕಾರಿನ ಮೇಲೆಲ್ಲ ಭಯಂಕರವಾಗಿ ಗೀಚಿದ್ದಾನೆ. ಅಷ್ಟು ಮಾಡಿ ತನ್ನ ಸೈಕಲ್​ ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.’ ವಿಡಿಯೊ ನೋಡಿದ ನೆಟ್ಟಿಗರು ‘ಇದು ಬಾರಿ ಮಜವಾಗಿದೆ’ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Viral Video | ಅಟ್ಟಿಸಿಕೊಂಡು ಬಂದ ಕರಡಿಯಿಂದ ಪಾರಾಗಲು ಮರವೇರಿ ಕುಳಿತ; ಮುಂದೇನಾಯ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Reels in Railway Station: ಈಗಿನ ಯುವಜನತೆ ಸೋಶಿಯಲ್ ಮೀಡಿಯಾದಲ್ಲಿ ತಾವು ಟ್ರೆಂಡ್ ಆಗಬೇಕು ಎಂಬ ಹಪಾಹಪಿಯಲ್ಲಿ ರೀಲ್ಸ್‌ ಚಟಕ್ಕೆ ಬಿದ್ದಿದ್ದಾರೆ. ತಾವೇನು ಮಾಡುತ್ತಿದ್ದೇವೆ ಎಂಬ ವಿವೇಚನೆ ಇಲ್ಲದೇ ರಸ್ತೆ ಬದಿಯಲ್ಲಿ ಬಿದ್ದು ಹೊರಳಾಡುವುದು, ಬಿಲ್ಡಿಂಗ್‌ನಿಂದ ಹಾರುವುದು ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಇಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಸೀಮಾ ಕನೋಜಿಯಾ ಎಂಬಾಕೆ ರೈಲ್ವೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

VISTARANEWS.COM


on

Viral Video
Koo


ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು (Reels in Railway Station) ಯುವ ಜನರು ರೀಲ್ಸ್‌ಗಳನ್ನು ಮಾಡುವ ಕ್ರೇಜ್‌ಗಿಳಿದಿದ್ದಾರೆ. ಈ ರೀಲ್ಸ್‌ಗಾಗಿ ಅವರು ಎಲ್ಲೆಂದರಲ್ಲಿ ಹಾಡಿ ಕುಣಿಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಲಾರಂಭಿಸಿದ್ದಾರೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳ ವಿಲಕ್ಷಣ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಯುವತಿಯ ವರ್ತನೆಗೆ ಅನೇಕರು ಸಿಟ್ಟಾಗಿದ್ದಾರೆ.

ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ @seemakanojiya87 ಮೂಲಕ ಚಿರಪರಿಚಿತಳಾಗಿರುವ ಸೀಮಾ ಕನೋಜಿಯಾ ಎಂಬಾಕೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಿದ್ದಾಳೆ. ಸೀಮಾ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಹಾಗಾಗಿ ಆ ಮಹಿಳೆ ತುಂಬಾ ಅಸಮಾಧಾನಗೊಂಡ ಹಾಗೆ ನಟಿಸುತ್ತಾ ಪ್ರತಿಭಟಿಸಿದ್ದಾಳೆ.

746,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸೀಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು 323 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ, 75,000ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. 200,000ಕ್ಕೂ ಹೆಚ್ಚು ಬಳಕೆದಾರರು ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು 5,300ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಆಕೆ ಈ ವಿಡಿಯೊಗೆ ಶೀರ್ಷಿಕೆ ನೀಡಿ ಮನರಂಜನೆಯ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಲಾಗಿದೆ. ಈ ವಿಡಿಯೊದಲ್ಲಿರುವ ಮಹಿಳೆ ತನ್ನ ಸ್ನೇಹಿತೆ ಎಂದು ವಿವರಿಸಿದ್ದಾಳೆ.

ಇದನ್ನೂ ಓದಿ: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಆದರೆ ವೀಕ್ಷಕರು ಮಾತ್ರ ಆಕೆಯ ವಿವರಣೆಯ ಹೊರತಾಗಿಯೂ ಆಕೆಯ ವರ್ತನೆಯ ಬಗ್ಗೆ ಕೋಪಗೊಂಡಿದ್ದಾರೆ. ಅನೇಕ ಬಳಕೆದಾರರು ಈ ಕೃತ್ಯವನ್ನು ಅಸಭ್ಯ ಮತ್ತು ಅಪಾಯಕಾರಿ ಎಂದು ಖಂಡಿಸಿದ್ದಾರೆ. ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ಈ ರೀತಿ ನೃತ್ಯ ಮಾಡುವುದು ತುಂಬಾ ಅಪಾಯಕಾರಿ. ಅಂತಹ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ಬ್ಲಾಗರ್ ಸೀಮಾ ಕನೋಜಿಯಾ ಈ ಹಿಂದೆ ಮುಂಬೈ ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಪ್ರಸಿದ್ಧ ‘ಕೋಯಿ ಮಿಲ್ ಗ್ಯಾ’ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ಥಳೀಯ ರೈಲಿಗಾಗಿ ತಮ್ಮ ಬ್ಯಾಗ್ ಗಳನ್ನು ಹಿಡಿದುಕೊಂಡು ಕಾಯುತ್ತಿರುವ ಪ್ರಯಾಣಿಕರು, ಕನೋಜಿಯಾ ನೃತ್ಯವನ್ನು ಕಂಡು ಅದರಲ್ಲೇ ಮುಳುಗಿದ್ದಾರೆ. ಇದರಲ್ಲಿ ಆಕೆ ಕುಣಿಯುವುದು, ನೆಲದ ಮೇಲೆ ಉರುಳುವುದು ಮತ್ತು ಇತರ ಹಲವಾರು ಚಲನೆಗಳನ್ನು ಮಾಡಿದ್ದಾಳೆ. ಇದಕ್ಕೆ ಹಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು.

Continue Reading

ಕ್ರೈಂ

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

Dog Attack: ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ವೃದ್ಧೆ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ. ಕರುಣಾಜನಕವಾದ ಈ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

VISTARANEWS.COM


on

By

Dog attack
Koo

ದೀರ್ಘಕಾಲದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಮೇಲೆ ರಾತ್ರಿ ಬೀದಿ ನಾಯಿಗಳು (street dog) ದಾಳಿ (Dog Attack) ನಡೆಸಿ ಕೊಂದು ಹಾಕಿರುವ ಘಟನೆ ತೆಲಂಗಾಣದ (telangana) ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಕರೀಂನಗರದಲ್ಲಿ ನಡೆದಿದೆ. 82 ವರ್ಷದ ಪಿಟ್ಲಾ ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಗುಡಿಸಿಲಿನಲ್ಲಿ ಮಲಗಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದವು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ರಾಜ್ಯಲಕ್ಷ್ಮಿ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ.

ನಾಯಿಗಳು ಅವರನ್ನು ಕಚ್ಚಿ ಕೊಂದು ಮುಖ ಮತ್ತು ದೇಹದ ಕೆಲವು ಭಾಗಗಳನ್ನು ತಿಂದು ಹಾಕಿವೆ. ಸಮೀಪದಲ್ಲೇ ವಾಸಿಸುವ ಮಹಿಳೆಯ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ಆಕೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಮನೆ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಯಾವುದೇ ಬಾಗಿಲು ಇಲ್ಲದ ಕಾರಣ ಗಾಢ ನಿದ್ದೆಯಲ್ಲಿದ್ದ ಅವರ ಮೇಲೆ ನಾಯಿಗಳು ಸುಲಭವಾಗಿ ದಾಳಿ ನಡೆಸಿವೆ. ನಾಯಿಗಳು ಅವರ ತಲೆ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿವೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯ ಬಳಿ ನಾಯಿಯು ರಸ್ತೆಯಲ್ಲಿ ಮಾಂಸವನ್ನು ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಕೋಪಗೊಂಡು ಬೀದಿ ನಾಯಿಯನ್ನು ಕೊಂದು ಹಾಕಿದ್ದರು.

ಇದನ್ನೂ ಓದಿ: Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದು, ಇಬ್ಬರು ಪುತ್ರರಿದ್ದರೂ ತಾಯಿಯನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದರು ಎಂದು ಮುಸ್ತಾಬಾದ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪುತ್ರನ ದೂರಿನ ಮೇರೆಗೆ ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಕ್ರೀಡೆ

Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌

Haris Rauf: ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು.

VISTARANEWS.COM


on

Haris Rauf
Koo

ಲಂಡನ್‌: 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ​ ಟಿ-20 ವಿಶ್ವಕಪ್‌(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌(Haris Rauf) ಬೌಲಿಂಗ್‌ಗೆ ವಿರಾಟ್‌ ಕೊಹ್ಲಿ(Virat Kohli) ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಕೊಹ್ಲಿ ಈ ಓವರ್​ನಲ್ಲಿ ಬಾರಿಸಿದ ಸಿಕ್ಸರ್​ನಿಂದಾಗಿ ಅಂದು ಭಾರತ(t20 world cup 2022 ind vs pak) ಪಂದ್ಯವನ್ನು ಗೆದ್ದು ಬೀಗಿತ್ತು. ಇದೀಗ ದಿ ಹಂಟ್ರೆಡ್​ ಕ್ರಿಕೆಟ್​ ಟೂರ್ನಿಯನ್ನಾಡುತ್ತಿದ್ದ ರೌಫ್​ ಅವರನ್ನು ಭಾರತೀಯ ಅಭಿಮಾನಿಯೊಬ್ಬ ಕೆಣಕ್ಕಿದ ವಿಡಿಯೊ ವೈರಲ್(viral video)​ ಆಗಿದೆ.

ಲಂಡನ್ ಸ್ಪಿರೀಟ್‌ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಋು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಯೊಬ್ಬ ಹಿಂದಿಯಲ್ಲಿ ರೌಫ್‌ ಭಾಯ್…ರೌಫ್‌ ಭಾಯ್ ಎಂದು ಕರೆದು ನೆನೆಪಿದೆಯಾ ಅಂದು ಮೆಲ್ಬರ್ನ್ ಮೈದಾನದಲ್ಲಿ ನಿಮ್ಮ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ಸಿಕ್ಸರ್‌ ಬಾರಿಸಿದ್ದು ಎಂದು ಹೇಳುವ ಮೂಲಕ ಕೀಚಾಯಿಸಿದ್ದಾರೆ. ಈ ವೇಳೆ ರೌಫ್‌ ತಲೆಯಾಡಿಸುತ್ತಾ ಹಾ ನೆನಪಿದೆ ಎನ್ನುವಂತೆ ಸನ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್‌ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್‌ ಈ ಓವರ್‌ನಲ್ಲಿ 15 ರನ್‌ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್‌ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.

ಇದನ್ನೂ ಓದಿ ಮ್ಯಾಚ್‌ ಫಿಕ್ಸಿಂಗ್‌ ಕಳಂಕಿತ ಅಂಪೈರ್‌ ಅಸದ್‌ ರೌಫ್‌ ಇನ್ನಿಲ್ಲ

ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್​


ಈ ಬಾರಿಯ ಟ್ವಿ20 ವಿಶ್ವಕಪ್‌ ಟೂನಿಯ ವೇಳೆ ಹ್ಯಾರಿಸ್ ರೌಫ್ ಅಭಿಮಾನಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಭಾರೀ ಟೀಕೆಗೆ ಒಳಗಾಗಿದ್ದರು. ಫ್ಲೋರಿಡಾದಲ್ಲಿ ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಏಕಾಏಕಿ ಓಡಿ ಬಂದು ಈತನ ಮೇಲೆ ರೌಫ್ ಹಲ್ಲೆಗೆ ಯತ್ನಿಸಿದ್ದರು. ಈ ವಿಡಿಯೊ ಭಾರೀ ವೈರಲ್‌ ಆಗಿತ್ತು.

ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡಿಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

 

Continue Reading

ವೈರಲ್ ನ್ಯೂಸ್

Viral News: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ಗೆ ಕ್ರೀಡಾ ಸಚಿವೆ ಕಿಸ್‌ ಕೊಟ್ಟಿದ್ದು ಸಂಸ್ಕೃತಿಯ ಭಾಗ; ಸಮರ್ಥಿಸಿಕೊಂಡ ನೆಟ್ಟಿಗರು

Viral News: ಮ್ಯಾಕ್ರನ್ ಅವರನ್ನು ಕ್ಯಾಸ್ಟೆರಾ ತಮ್ಮ ತೋಳುಗಳಿಂದ ಬಿಗಿಯಾಗಿ ಹಿಡಿದುಕೊಂಡು ಮೈಮರೆತು ಚುಂಬಿಸುತ್ತಿರುವ ಫೋಟೊವನ್ನು ಹಲವು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇದು ನಾಚಿಕೆಗೇಡಿನ ಕೃತ್ಯ ಎಂದು ಹೇಳಿದ್ದರು.

VISTARANEWS.COM


on

Viral News
Koo

ಪ್ಯಾರಿಸ್​: ಪ್ರಸಕ್ತ ನಡೆಯುತ್ತಿರುವ ಪ್ಯಾರಿಸ್‌ ಒಲಿಂಪಿಕ್ಸ್‌(paris olympics) ಈಗಾಗಲೇ ಹಲವು ವಿವಾದಗಳಿಂದ ಸುದ್ದಿಯಾಗಿದೆ. ಈ ಮಧ್ಯೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಮತ್ತು ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ(Amelie Oudea-Castera) ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ ಫೋಟೊಗಳು ವೈರಲ್‌(Viral News) ಆಗಿತ್ತು. ಇವರ ಈ ವರ್ತನೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಇಲ್ಲಿನ ನೆಟ್ಟಿಗರು ಈ ಘಟನೆ ಬಗ್ಗೆ ಸಮಥಿಸಿಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಎಮ್ಯಾನುಯೆಲ್ ಮತ್ತು ಅಮೆಲಿ ಔಡಿಯಾ-ಕ್ಯಾಸ್ಟೆರಾ ಪರಸ್ಪರ ಚುಂಬಿಸಿದ್ದ ಫೋಟೊ 2 ದಿನಗಳ ಹಿಂದೆ ವೈರಲ್‌ ಆಗಿತ್ತು. ಮಾಜಿ ಟೆನಿಸ್ ಆಟಗಾರ್ತಿಯಾಗಿರುವ ಕ್ಯಾಸ್ಟೆರಾ ಅವರು ಎಮ್ಯಾನುಯೆಲ್ ಅವರನ್ನು ಬಿಗಿದಪ್ಪಿಕೊಂಡು ಚುಂಚಿಸುತ್ತಿರುವುದನ್ನು ಫೋಟೊದಲ್ಲಿ ಕಂಡು ಬಂದಿತ್ತು. ಇವರಿಬ್ಬರು ಚುಂಬಿಸುತ್ತಿರುವುದನ್ನು ನೋಡಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ನಗುತ್ತಿರುವ ಫೋಟೊ ಕೂಡ ವೈರಲ್‌ ಆಗಿತ್ತು.

ಮ್ಯಾಕ್ರನ್ ಅವರನ್ನು ಕ್ಯಾಸ್ಟೆರಾ ತಮ್ಮ ತೋಳುಗಳಿಂದ ಬಿಗಿಯಾಗಿ ಹಿಡಿದುಕೊಂಡು ಮೈಮರೆತು ಚುಂಬಿಸುತ್ತಿರುವ ಫೋಟೊವನ್ನು ಹಲವು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇದು ನಾಚಿಕೆಗೇಡಿನ ಕೃತ್ಯ ಎಂದು ಹೇಳಿದ್ದರು. ಆದರೆ ಇದೀಗ ಫ್ರಾನ್ಸ್‌ನ ನೆಟ್ಟಿಗರು ಇದರಲ್ಲಿ ಯಾವುದೇ ನಾಚಿಕೆಗೇಡಿನ ಸಂಗತಿಯಿಲ್ಲ. ಇದು ಫ್ರಾನ್ಸ್‌ನ ಸಂಸ್ಕೃತಿಯ ಒಂದು ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಳೆದ ಭಾರಿ ಮ್ಯಾಕ್ರಾನ್‌ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗೂಡಿ ಚಹಾ ಸೇವಿಸಿದ್ದರು. ಜೈಪುರದ ಹವಾ ಮಹಲ್ ಬಳಿಯ ಅಂಗಡಿಯಲ್ಲಿ ಮ್ಯಾಕ್ರಾನ್ ಮತ್ತು ಮೋದಿ ಕುಲ್ಹಾಡ್ ಚಹಾ ಸೇವಿಸಿದ್ದರು. ಮೋದಿ ಅದಕ್ಕೆ ತಮ್ಮ ಫೋನ್‌ನಲ್ಲಿ ಯುಪಿಐ ಬಳಸಿ ಚಹಾಕ್ಕೆ ಹಣ ಪಾವತಿಸಿದ್ದರು. ಮ್ಯಾಕ್ರಾನ್ ಇದನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಅಂಗಡಿ ಮಾಲೀಕರು ತಮ್ಮ ಫೋನ್‌ನಲ್ಲಿ ಪಾವತಿಯ ದೃಢೀಕರಣ ಪಡೆದಿದ್ದನ್ನು ಸಹ ಮೋದಿ ತಮಗೆ ತೋರಿಸಿದರು ಎಂದು ಮ್ಯಾಕ್ರಾನ್‌ ಬಳಿಕ ಸ್ಮರಿಸಿದ್ದರು.

ಇದನ್ನೂ ಓದಿ Paris Olympics: ಆರ್ಚರಿ ಪ್ರೀ ಕ್ವಾರ್ಟರ್‌ನಲ್ಲಿ ನಾಳೆ ಭಾರತದ ದೀಪಿಕಾ ಕುಮಾರಿ-ಭಜನ್ ಕೌರ್ ಕಣಕ್ಕೆ

ಭಾರತದಿಂದ UPI ಅನ್ನು ಅಳವಡಿಸಿಕೊಳ್ಳಲು ಫ್ರಾನ್ಸ್ ಬಲವಾದ ಆಸಕ್ತಿಯನ್ನು ತೋರಿಸಿದೆ. ಜುಲೈನಲ್ಲಿ ಮೋದಿಯವರು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಐಫೆಲ್ ಟವರ್‌ನಿಂದ ಪ್ರಾರಂಭವಾಗುವ ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದರು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್‌ಸಿಪಿಐ) ಅಂತಾರಾಷ್ಟ್ರೀಯ ಅಂಗವು ಯುಪಿಐ ಮತ್ತು ರುಪೇ ಸ್ವೀಕರಿಸಲು ಫ್ರಾನ್ಸ್‌ನ ಲೈರಾ ನೆಟ್‌ವರ್ಕ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿತ್ತು.

Continue Reading
Advertisement
psi death yadgir
ಪ್ರಮುಖ ಸುದ್ದಿ7 mins ago

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

FASTag new rule
ದೇಶ19 mins ago

FASTag new rule: ಫಾಸ್ಟ್ ಟ್ಯಾಗ್ ಹೊಸ ನಿಯಮ; ನವೀಕರಣ ಹೇಗೆ? ಕೊನೆಯ ದಿನ ಯಾವಾಗ?

Red Spinach Benefits
ಆರೋಗ್ಯ19 mins ago

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

audi car road accident kolar
ಕೋಲಾರ45 mins ago

Road Accident: ಆಡಿ ಕಾರ್‌ ಮರಕ್ಕೆ ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ದುರ್ಮರಣ; ಐಷಾರಾಮಿ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಸಹ ಚಿಂದಿ!

Mushroom Benefits
ಆರೋಗ್ಯ1 hour ago

Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಯಾವ ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ

karnataka weather forecast
ಮಳೆ2 hours ago

Karnataka Weather : 7 ಜಿಲ್ಲೆಗಳಲ್ಲಿ ವ್ಯಾಪಿಸಲಿದೆ ಭರ್ಜರಿ ಮಳೆ

Dina Bhavishya
ಭವಿಷ್ಯ3 hours ago

Dina bhavishya : ನಿಮ್ಮ ಅನುಮಾನಗಳು ಮನೆಯ ವಾತಾವರಣವನ್ನು ಹದಗೆಡಿಸುತ್ತೆ

Bigg Boss OTT 3
ಪ್ರಮುಖ ಸುದ್ದಿ6 hours ago

Bigg Boss OTT 3 : ಸನಾ ಮಕ್ಬುಲ್​ ಬಿಗ್​ಬಾಸ್​ ಒಟಿಟಿ 3 ವಿನ್ನರ್​, ನೈಜಿ ರನ್ನರ್​​ಅಪ್​​

Paris Olympics 2024
ಪ್ರಮುಖ ಸುದ್ದಿ8 hours ago

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌