Rishi Sunak | ಮಾಜಿ ವೇಗದ ಬೌಲರ್‌ ಆಶೀಶ್‌ ನೆಹ್ರಾ ಬ್ರಿಟನ್‌ ಪ್ರಧಾನಿಯಾದ್ರಂತೆ; ಹೌದಾ? - Vistara News

ಕ್ರಿಕೆಟ್

Rishi Sunak | ಮಾಜಿ ವೇಗದ ಬೌಲರ್‌ ಆಶೀಶ್‌ ನೆಹ್ರಾ ಬ್ರಿಟನ್‌ ಪ್ರಧಾನಿಯಾದ್ರಂತೆ; ಹೌದಾ?

ಟೀಮ್‌ ಇಂಡಿಯಾದ ಮಾಜಿ ವೇಗಿ ಆಶೀಶ್‌ ನೆಹ್ರಾ ಅವರು ನೋಡುವುದಕ್ಕೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರಂತೆ ಇರುವ ಕಾರಣ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತ ತಂಡದ ಮಾಜಿ ವೇಗದ ಬೌಲರ್ ಆಶೀಶ್‌ ನೆಹ್ರಾ ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರಾ? ಹಾಗೆಂದು ಹೇಳಿ ಟ್ವಿಟರ್‌ನಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಒಟ್ಟಿನಲ್ಲಿ ಸೋಮವಾರ ರಾತ್ರಿ ವೇಳೆಗೆ ರಾತ್ರಿ ಅವರು ಟ್ಟಿಟರ್ ಟ್ರೆಂಡ್‌ ಆಗಿದ್ದರು. ಹಾಗಾದರೆ ಅವರು ಅಷ್ಟೊಂದು ಟ್ರೆಂಡ್‌ ಆಗಲು ಕಾರಣವೇನು ಎಂದು ತಿಳಿದುಕೊಳ್ಳುವ ಕುತೂಹಲ ಖಂಡಿತವಾಗಿಯೂ ಇರುತ್ತದೆ.

ಸೋಮವಾರ ಭಾರತೀಯ ಸಂಜಾತ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ಬೌಲರ್‌ ಆಶೀಶ್‌ ನೆಹ್ರಾ ಅವರು ನೋಡುವುದಕ್ಕೆ ರಿಷಿ ಸುನಕ್‌ ರೀತಿಯಂತೆ ಇದ್ದಾರೆ. ಹೀಗಾಗಿ ನೆಟ್ಟಿಗರು ಬ್ರಿಟನ್‌ ಪ್ರಧಾನಿ ಎಂದು ಕರೆಯಲು ಶುರು ಮಾಡಿದ್ದಾರೆ. ಅವರಿಬ್ಬರು ಅಣ್ಣ- ತಮ್ಮಂದಿರಂತೆ ಇದ್ದಾರೆ ಎಂದೆಲ್ಲ ಬರೆದಿದ್ದಾರೆ.

ಟ್ರೆಂಡಿಂಗ್‌ನಲ್ಲಿ ನಾನಾ ರೀತಿಯ ಪೋಸ್ಟ್‌ಗಳನ್ನು ಕೂಡ ಹಾಕಲಾಗಿದೆ. ಲೆಜೆಂಡ್‌ ಕ್ರಿಕೆಟರ್‌, ಕಾಮೆಂಟೇಟರ್‌, ಕೋಚ್ ಈಗ ಬ್ರಿಟನ್ ಪ್ರಧಾನಿ ಎಂದೆಲ್ಲ ಬರೆದುಕೊಂಡಿದ್ದಾರೆ.

ಇನ್ನೊಬ್ಬರು ರಿಷಿ ಸುನಕ್‌ ಹಾಗೂ ಆಶೀಶ್‌ ನೆಹ್ರಾ ಅವರ ಚಿತ್ರವನ್ನು ಹಾಕಿ ಇವರಿಬ್ಬರು ಅಣ್ಣ ತಮ್ಮಂದಿರು. ಕುಂಭ ಮೇಳದಲ್ಲಿ ಕಳೆದು ಹೋದವರು ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ರಿಷಿ ಸುನಕ್‌ ೨೦೦೩ರಲ್ಲಿ ಹೀಗಿದ್ದರು, ೨೦೨೨ರಲ್ಲಿ ಹೀಗಾದರು ಎಂದು ಬರೆದಿಕೊಂಡಿದ್ದಾರೆ.

ಇದನ್ನೂ ಓದಿ | Rishi Sunak | ರಿಷಿ ಸುನಕ್‌ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

Ishan Kishan : ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಇಶಾನ್ ಕಿಶನ್​ಗೆ ಕಳೆದ ಕೆಲವು ತಿಂಗಳುಗಳು ಉತ್ತಮವಾಗಿಲ್ಲ. ಭಾರತೀಯ ಇಲೆವೆನ್​ನಲ್ಲಿ ಹಿಡಿದು ಭಾರತ ತಂಡದ ಸೆಟ್​ಅಪ್​​ನಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಅವರನ್ನು ಮೊದಲಿಗೆ ತಂಡದಿಂದ ಕೈಬಿಡಲಾಗಿತ್ತು. ಬಳಿಕ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ತೆಗೆದುಹಾಕಲಾಗಿತ್ತು.

VISTARANEWS.COM


on

ishan Kishan
Koo

ನವದೆಹಲಿ: ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಸೂಚನೆ ನೀಡಿದರೂ ರಣಜಿ ಟ್ರೋಫಿಯಲ್ಲಿ ಏಕೆ ಆಡಲಿಲ್ಲ ಎಂಬ ಬಗ್ಗೆ ಭಾರತದ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ (Ishan Kishan) ಮಾತನಾಡಿದ್ದಾರೆ. ವಿರಾಮದ ನಡುವೆ ದೇಶೀಯ ಕ್ರಿಕೆಟ್​ನಲ್ಲಿ ಆಡುವುದು ಯಾವುದೇ ಅರ್ಥವಿಲ್ಲ ಎಂದು ಹೇಳುವ ಜತೆಗೆ ಈ ನಿರ್ಧಾರ ತೆಗೆದುಕೊಂಡ ಜಯ್​ ಶಾ ಅವರ ಯೋಚನೆ ಸರಿಯಿಲ್ಲ ಎಂಬುದಾಗಿ ಹೇಳಿದ್ದಾರೆ.

ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಇಶಾನ್ ಕಿಶನ್​ಗೆ ಕಳೆದ ಕೆಲವು ತಿಂಗಳುಗಳು ಉತ್ತಮವಾಗಿಲ್ಲ. ಭಾರತೀಯ ಇಲೆವೆನ್​ನಲ್ಲಿ ಹಿಡಿದು ಭಾರತ ತಂಡದ ಸೆಟ್​ಅಪ್​​ನಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಅವರನ್ನು ಮೊದಲಿಗೆ ತಂಡದಿಂದ ಕೈಬಿಡಲಾಗಿತ್ತು. ಬಳಿಕ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ತೆಗೆದುಹಾಕಲಾಗಿತ್ತು.

ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ಟೆಸ್ಟ್​​ನಿಂದ ವಿರಾಮ ತೆಗೆದುಕೊಂಡ ನಂತರ ಅಂದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತೀಯ ತಂಡಕ್ಕೆ ಮರಳಲು, ಕೀಪರ್-ಬ್ಯಾಟರ್​​ ದೇಶೀಯ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಹೇಳಿದ್ದರು. ಬಿಸಿಸಿಐ ಕೂಡ ದ್ರಾವಿಡ್ ಹೇಳಿಕೆಗೆ ಸಮ್ಮತಿ ಸೂಚಿಸಿತ್ತು. ದೇಶೀಯ ಕ್ರಿಕೆಟ್ ಆಡುವ ಮಹತ್ವವನ್ನು ಎತ್ತಿ ತೋರಿಸಿದ್ದರು. ಆದಾಗ್ಯೂ, ಇಶಾನ್ ಕಿಶನ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಮಾತನ್ನು ಕೇಳಲಿಲ್ಲ ಮತ್ತು ದೇಶೀಯವಾಗ ಜಾರ್ಖಂಡ್ ಪರ ಆಡಲಿಲ್ಲ. ಕೀಪರ್ ಬ್ಯಾಟರ್​​ ಅಹಂಕಾರ ತೋರಿಸಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಗೊಂಡ ಬಳಿಕ ಆಡಳಿತ ಮಂಡಳಿ ಕ್ರಮ ಕೈಗೊಂಡಿತು. ಅವರನ್ನು ವಾರ್ಷಿಕ ಗುತ್ತಿಗೆಯಿಂದ ವಜಾಗೊಳಿಸಲಾಯಿತು.

ರಣಜಿ ಟ್ರೋಫಿಯಲ್ಲಿ ಏಕೆ ಆಡಲಿಲ್ಲ ಎಂಬುದರ ಬಗ್ಗೆ ಮಾತನಾಡಿದ ಇಶಾನ್ ಕಿಶನ್, ದೇಶೀಯ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದೆ, ಜಾರ್ಖಂಡ್ ಪರ ಆಡಬೇಕಾದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಳ್ಳಬೇಕಾಗಿಲ್ಲ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

ನಾನು ವಿರಾಮ ತೆಗೆದುಕೊಂಡಿರುವ ಕಾರಣ ಬೇರೆ ಎಲ್ಲಿಯೂ ಆಡಲು ಸಾಧ್ಯವಿಲ್ಲ. ಪುನರಾಗಮನ ಮಾಡಲು ಬಯಸಿದರೆ ನೀವು ದೇಶೀಯ ಕ್ರಿಕೆಟ್​​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ. ಅದು ಸರಳವಾಗಿದೆ. ಈಗ, ದೇಶೀಯ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ ಮತ್ತು ಅದಕ್ಕಾಗಿಯೇ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡೆ. ನೀವು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡು ನಂತರ ದೇಶೀಯ ಪಂದ್ಯಗಳನ್ನು ಆಡಬೇಕು ಎಂದು ಅರ್ಥವಲ್ಲ. ಆಡಲೇಬೇಕಾದರೆ ನಾನು ಭಾರತಕ್ಕಾಗಿ ಆಡುವುದನ್ನು ಮುಂದುವರಿಸಬಹುದಿತ್ತು” ಎಂದು ಹೇಳಿದ್ದಾರೆ.

ತಂಡಕ್ಕೆ ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ

ಇಶಾನ್ ಕಿಶನ್ ಕೂಡ ಭಾರತ ತಂಡಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಸಾಕಷ್ಟು ಸ್ಪರ್ಧೆ ಇರುವ ಪುನರಾಗಮನ ಮಾಡುವುದು ಸುಲಭವಲ್ಲ ಎಂದು ಒಪ್ಪಿಕೊಂಡರು. ತಾವು ಅತ್ಯುತ್ತಮವಾದದ್ದನ್ನು ನೀಡುತ್ತಲೇ ಇರುತ್ತೇನೆ ಎಂದು ಹೇಳಿದರು.

ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ಸ್ಪರ್ಧೆಯು ನಿಮಗೆ ತೃಪ್ತಿಯ ಭಾವನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಆನಂದಿಸುತ್ತೇನೆ. ನಾನು ಅದರ ಬಗ್ಗೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ, “ಎಂದು ಅವರು ಮುಕ್ತಾಯಗೊಳಿಸಿದರು.

Continue Reading

ಕ್ರೀಡೆ

Rohit Sharma: ಚಾಂಪಿಯನ್ಸ್​ ಟ್ರೋಫಿಗೂ ರೋಹಿತ್​ ನಾಯಕ; ಖಚಿತಪಡಿಸಿದ ಜಯ್​ ಶಾ

Rohit Sharma: “ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Rohit Sharma
Koo

ಮುಂಬಯಿ: ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

“ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಟಿ20 ವಿಶ್ವಕಪ್(T20 World Cup 2024 Final)​ ಟೂರ್ನಿಯ ಆರಂಭಕ್ಕೆ ತಂಡ ಪ್ರಕಟಿಸುವ ಮುನ್ನವೇ ಭಾರತ ತಂಡ ಜೂನ್​ 29ರಂದು ಬಾರ್ಬಡೋಸ್​ನಲ್ಲಿ ವಿಶ್ವಕಪ್​ ಗೆಲ್ಲಲಿದೆ ಎಂದು ವೇದಿಯಲ್ಲಿ ಮಾತನಾಡುವ ವೇಳೆ ಬಹಿರಂಗವಾಗಿಯೇ ಭವಿಷ್ಯ(Jay Shah Promise) ನುಡಿದಿದ್ದರು. ಅದರಂತೆ ಭಾರತ ಕಪ್​ ಗೆದ್ದಿತ್ತು. ಇದೀಗ ಮತ್ತೆ ಮುಂದಿನ ವರ್ಷ ನಡೆಯುವ ಟೆಸ್ಟ್​ ವಿಶ್ವಕಪ್​ ಮತ್ತು ಚಾಂಪಿಯನ್ಸ್​ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಸತ್ಯವಾಗಲಿದೆಯಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

ರೋಹಿತ್ ನಾಯಕತ್ವದಲ್ಲಿ, ಕಳೆದ ವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಪಾಕ್‌ಗೆ ಭಾರತ ಹೋಗಲ್ಲ

2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್‌ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.

Continue Reading

ಕ್ರೀಡೆ

MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

MS Dhoni Birthday: ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

MS Dhoni Birthday
Koo

ಮುಂಬಯಿ: ಇಂದು(ಜುಲೈ 7) 43ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni Birthday) ಅವರು ತಮ್ಮ ಹುಟ್ಟುಹಬ್ಬವನ್ನು ಪತ್ನಿ ಜತೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಈ ವೇಳೆ ಪತ್ನಿ ಸಾಕ್ಷಿ ಸಿಂಗ್(​ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೊ ಇದೀಗ ವೈರಲ್​ ಆಗಿದೆ. ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಸಾಕ್ಷಿ ಸಿಂಗ್(Sakshi Singh)​, ಹ್ಯಾಪಿ ಬರ್ತ್‌ಡೇ ಟೂ ಯು ಮಾಹಿ ಎಂದು ಬರೆದಿದ್ದಾರೆ.

ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಧೋನಿ ಕೇಕ್​ ಕತ್ತರಿಸುವ ವೇಳೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಗಿದ್ದರು.

ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದರು. ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದ್ದರು. 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು.  ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.

ಇದನ್ನೂ ಓದಿ MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್​ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್​ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್​ ಪ್ಲ್ಯಾಶ್​ ಲೈಟ್​ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು.

Continue Reading

ಕ್ರೀಡೆ

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Gautam Gambhir: ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ.

VISTARANEWS.COM


on

Gautam Gambhir
Koo

ಕೋಲ್ಕತ್ತಾ: ಗೌತಮ್​ ಗಂಭೀರ್(Gautam Gambhir)​ ಅವರು ಟೀಮ್ ಇಂಡಿಯಾದ ಕೋಚ್(Team India Coach)​ ಆಗುವುದು ಬಹುತೇಕ ಖಚಿತ. ಕೆಕೆಆರ್(KKR)​ ತಂಡದ ಮೆಂಟರ್​ ಆಗಿದ್ದ ಅವರು ಇದೀಗ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಗಂಭೀರ್​ ಶೀಘ್ರದಲ್ಲೇ ಕೋಚ್ ಆಗುವುದು ನಿಶ್ಚಿತ. ಕೆಕೆಆರ್​ ಫ್ರಾಂಚೈಸಿ ಮುಂದಿನ ಶುಕ್ರವಾರ ಕೋಲ್ಕತಾದಲ್ಲಿ ಗಂಭೀರ್​ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

​ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ. ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಗಂಭೀರ್ ಭರ್ತಿ ಮಾಡಲಿದ್ದಾರೆ. ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ. . ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಕೆಳವು ದಿನಗಳ ಹಿಂದೆ ಗಂಭೀರ್​ ಜತೆ ವಿ. ರಾಮನ್‌(WV Raman) ಕೂಡ ಕೋಚ್​ ರೇಸ್​ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಗೂ ಬಿಸಿಸಿಐ ಗಂಭೀರ್​ಗೆ ಮಣೆ ಹಾಕಿದಂತಿದೆ.

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Gautam Gambhir : ಕೊಹ್ಲಿಯನ್ನು ತಂಡದಿಂದ ಹೊರಗಿಡಿ; ಕೋಚ್​ ಆಗಲು ಗಂಭೀರ್​ ಒಡ್ಡಿದ್ದ ಷರತ್ತು ಒಪ್ಪಿದ ಬಿಸಿಸಿಐ

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್‌ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್​ ಮಾಡಿದ ಗಂಭೀರ್‌, ರಾಹುಲ್‌ ದ್ರಾವಿಡ್‌ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

Continue Reading
Advertisement
Money Guide
ಅವಿಭಾಗೀಕೃತ30 seconds ago

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Mumbai Hit And Run
ದೇಶ49 seconds ago

Mumbai Hit And Run: ಮುಂಬೈನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆ ಬಲಿ; ಶಿವಸೇನೆ ನಾಯಕನ ಬಂಧನ!

Tharun Sudhir Bigg update marriage
ಸ್ಯಾಂಡಲ್ ವುಡ್11 mins ago

Tharun Sudhir: ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ತರುಣ್ ಸುಧೀರ್; ಹುಡುಗಿ ಹೇಗಿರಬೇಕು ಅಂದ್ರೆ….

Dengue Cases in Mysore
ಕರ್ನಾಟಕ13 mins ago

Dengue Cases in Mysore: ಮೈಸೂರಿನಲ್ಲಿ ಡೆಂಗ್ಯೂಗೆ ಜಯದೇವ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಾವು

ishan Kishan
ಪ್ರಮುಖ ಸುದ್ದಿ19 mins ago

Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

Rishab Shetty Birthday pragati shetty cute wish
ಸಿನಿಮಾ33 mins ago

Rishab Shetty: ನನ್ನ ಜೀವನದ ಆಧಾರಸ್ತಂಭ ಎಂದು ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪತ್ನಿ ಕ್ಯೂಟ್‌ ವಿಶ್

Union Budget 2024
ದೇಶ43 mins ago

Union Budget 2024: ಆಯುಷ್ಮಾನ್‌ ಭಾರತ್‌ ಫಲಾನುಭವಿಗಳು ಡಬಲ್, ವಿಮೆ ಮೊತ್ತ 10 ಲಕ್ಷ ರೂ.ಗೆ ಏರಿಕೆ?

Mahadayi Water Dispute
ಕರ್ನಾಟಕ54 mins ago

Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

kalaburagi news
ಕಲಬುರಗಿ55 mins ago

Kalaburagi News : ಆಕ್ಸಿಜನ್ ಸೋರಿಕೆ! ತಾಲೂಕು ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು

Kannada New Movie Firefly movie entry by achyuth kumar
ಸಿನಿಮಾ1 hour ago

Kannada New Movie: ಶಿವಣ್ಣನ ಪುತ್ರಿ ಜತೆ ಕೈ ಜೋಡಿಸಿದ ಅಚ್ಯುತ್ ಕುಮಾರ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ10 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ22 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌