KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್ - Vistara News

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಮೈದಾನದಲ್ಲಿ ಬಾಲಕರ ಕ್ರಿಕೆಟ್ ರೋಚಕವಾಗಿತ್ತು.

VISTARANEWS.COM


on

53rd KVS National Games inaugurated
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ಕ್ಕೆ (KVS Sports Meet) ಸೋಮವಾರ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ ಚಾಲನೆ ನೀಡಲಾಯಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್‌ ರೋಚಕವಾಗಿತ್ತು. ಮುಖ್ಯ ಅತಿಥಿಯಾಗಿ ಕೆವಿಎಸ್‌ ಉಪ ಆಯುಕ್ತರು ಡಾ.ಧರ್ಮೇಂದ್ರ ಪಟ್ಲೆ, ಸಹಾಯಕ ಆಯುಕ್ತ ಆರ್ ಪ್ರಮೋದ್ ಸೇರಿ ಇತರರು ಭಾಗಿಯಾಗಿದ್ದರು.

53rd KVS National Games inaugurated
53rd KVS National Games inaugurated

ಇದೇ ವೇಳೆ ಕೆ.ವಿ.ಎಸ್ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಪಾತ್ರ ಮತ್ತು ನಾಯಕತ್ವ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸಿದರು. ಆಟಗಾರರನ್ನು ಹುಮ್ಮಸ್ಸಿನಿಂದ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ನೋಡುವ ನಿರೀಕ್ಷೆಯಿದೆ, ಏಕೆಂದರೆ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮೈದಾನಕ್ಕೆ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ನಟ ದರ್ಶನ್‌, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ

Actor Darshan : ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಇದೇ ವೇಳೆ ಇಬ್ಬರ ಅರ್ಜಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶಿಸಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಜೈಲುಪಾಲಾಗಿದ್ದಾರೆ. ಪ್ರಕರಣ ಸಂಬಂಧ 57ನೇ ಸೆಷನ್ ಕೋರ್ಟ್‌ನಲ್ಲಿ ನಟ ದರ್ಶನ್‌ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್‌ ಪರ ವಕೀಲರು ವಾದ ಮಾಡಲು ಸಮಯ ಕೇಳಿದ ಹಿನ್ನೆಲೆಯಲ್ಲಿ ದರ್ಶನ್‌ರ ಜಾಮೀನು ಅರ್ಜಿ ಮುಂದೂಡಿಕೆ ಮಾಡಲಾಗಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ.

ಇನ್ನು ಎಸ್‌ಪಿಪಿ ಕೋರ್ಟ್ ಹಾಲ್‌ನಲ್ಲಿ ನಡೆದ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರನ್ನು ಕರೆಸುವಂತೆ ನ್ಯಾಯಾಧೀಶರು ಸೂಚನೆ ನೀಡಿದರು. ರವಿಶಂಕರ್ ಅರ್ಜಿ ವಿಚಾರಣೆಗೂ ಎಸ್‌ಎಸ್‌ಪಿ ಅಗತ್ಯ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಅವರ ಹಾಜರಾತಿಗೆ ನ್ಯಾಯಾಲಯ ಸೂಚಿಸಿತು. ಇದಕ್ಕಾಗಿ ಕೆಲಕಾಲ ವಿಚಾರಣೆ ಮುಂದೂಡಲಾಯಿತು.

ಬಳಿಕ ಶುರುವಾದ ಪವಿತ್ರಗೌಡ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಪರ ವಕೀಲರು 15 ದಿನಗಳ ಸಮಯಾವಕಾಶ ಕೇಳಿದರು. ಸಮಯಾವಕಾಶ ನೀಡಲು ಆಗಲ್ಲ, ಇವತ್ತೇ ನಿಮ್ಮ ಸಿನಿಯರ್ ವಕೀಲರನ್ನು ಕರೆಸಿ ಎಂದು ನ್ಯಾಯಾಧೀಶರು ಸೂಚಿಸಿ, ಜಾಮೀನು ಅರ್ಜಿಯನ್ನು ಕೆಲ ಕಾಲ ಮುಂದೂಡಿದರು. ಬಳಿಕ ಅಕ್ಟೋಬರ್‌ 4ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಈಗಾಗಲೆ ದರ್ಶನ್, ಲಕ್ಷ್ಮಣ್ ಜಾಮೀನು ಅರ್ಜಿಯನ್ನು ಅ .4ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಸದ್ಯ ಪವಿತ್ರಾ ಗೌಡ ಅರ್ಜಿ ವಿಚಾರಣೆ ಕೂಡ ಮುಂದೂಡಿಕೆ ಮಾಡಿ ನ್ಯಾಯಾಧೀಶ ಶ್ರೀ ಜೈಶಂಕರ್ ಆದೇಶ ಹೊರಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bigg Boss Kannada : ಸ್ವರ್ಗ- ನರಕಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳು; ಬಿಗ್‌‌ ಬಾಸ್‌ ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್

Bigg Boss Kannada : ಬಿಗ್‌ಬಾಸ್‌ ಸೀಸನ್‌ 11ರ ಸ್ವರ್ಗ- ನರಕದ ಆಟದಕ್ಕೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಟ ದರ್ಶನ್‌ ಫಾಲೋವರ್ಸ್ ಇದ್ದು, ದರ್ಶನ್‌ ಬಗ್ಗೆ ಚರ್ಚೆಯಾಗುತ್ತಾ ಎಂಬ ಕುತೂಹಲ ಮೂಡಿದೆ.

VISTARANEWS.COM


on

By

Bigg Boss season 11 The real game starts today
Koo

ಬೆಂಗಳೂರು: ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಮತ್ತೆ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟಕ್ಕೆ ಸ್ಪರ್ಧಿಗಳು ನಿನ್ನೆ ಭಾನುವಾರ ಗ್ರಾಂಡ್ ಎಂಟ್ರಿ (bigg boss kannada season 11) ಕೊಟ್ಟಿದ್ದಾರೆ.

ದೊಡ್ಮನೆಯ ರಂಗಿನಾಟಕ್ಕೆ ಬಣ್ಣದ ಲೋಕದಿಂದ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೆ ಚಾಪು ಮೂಡಿಸಿ ಫೇಮಸ್‌ ಆಗಿರುವ ಕಂಟೆಸ್ಟೆಂಟ್ಸ್ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಕಿರುತೆರೆ ನಟಿ ಭವ್ಯಾ ಗೌಡ ಎಂಟ್ರಿ ಕೊಟ್ಟರೆ, ನಂತರ ಒಬ್ಬೊಬ್ಬರಾಗೆ ಕೆಲವರು ಸ್ವರ್ಗಕ್ಕೆ, ಮತ್ತೆ ಕೆಲವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೈ ತುಂಬಾ ಚಿನ್ನವನ್ನು ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್‌ಬುಕ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಬಿಗ್ ಬಾಸ್ 11ನೇ ಸೀಸನ್ ಮನೆಯೊಳಗೆ (bigg boss kannada season 11 grand opening) ಕಾಲ್ಟಿಟ್ಟಿದ್ದಾರೆ.

Bigg Boss season 11 The real game starts today
Bigg Boss season 11 The real game starts today

ಸ್ವರ್ಗ- ನರಕದ ಆಟಕ್ಕೆ ರೆಡಿಯಾದ ಕಂಟೆಸ್ಟೆಂಟ್ಸ್

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಮನೆಗಳನ್ನು ಮಾಡಲಾಗಿದೆ. ಬಿಗ್‌ ಮನೆಗೆ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡ ಹದಿನೇಳು ಸ್ಪರ್ಧಿಗಳಲ್ಲಿ ಒಬ್ಬೊಬ್ಬರಾಗೆ ಸ್ವರ್ಗ- ನರಕದ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗಕ್ಕೆ ಭವ್ಯ, ಯಮುನಾ, ಧನರಾಜ್, ಗೌತಮಿ, ಧರ್ಮ ಕೀರ್ತಿ, ಲಾಯರ್ ಜಗದೀಶ್, ತ್ರಿವಿಕ್ರಮ್, ಹಂಸ, ಐಶ್ವರ್ಯ ಹಾಗೂ ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದಾರೆ. ಇನ್ನು ನರಕಕ್ಕೆ ಅನುಷಾ ರೈ, ಶಿಶಿರ್, ಮಾನಸ, ಗೋಲ್ಡ್ ಶಶಿ, ಚೈತ್ರ, ಮೋಕ್ಷಿತ ಹಾಗು ರಂಜಿತ್ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗ ಹಾಗೂ ನರಕದ ಆಟಕ್ಕೆ ಕಂಟೆಸ್ಟೆಂಟ್ಸ್ ತುದಿಗಾಲಲ್ಲಿ ನಿಂತಿದ್ದು, 17 ಜನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಾಲ್ವರು ದರ್ಶನ್ ಆಪ್ತರಾಗಿರುವುದು (bigg boss kannada season 11 timings) ವಿಶೇಷ.

ಬಿಗ್ ಬಾಸ್ ಸೀಸನ್ 10 ಕಾಂಟ್ರವರ್ಸಿ ಮೂಲಕವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸೀಸನ್ 11 ಬಿಗ್ ಬಾಸ್ ವೀಕ್ಷಕರಿಗೆ ಬೆಟ್ಟದಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ ಅಂದರೆ ತಪ್ಪಾಗಲ್ಲ. ಹಲವು ಕಾಂಟ್ರವರ್ಸಿಗಳ ಮೂಲಕವೇ ಕಳೆದ ಸೀಸನ್ ಸ್ಪರ್ಧಿಗಳು ನೇಮ್ ಆ್ಯಂಡ್ ಫೇಮ್ ಗಿಟ್ಟಿಸಿಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇನ್ನೆಷ್ಟು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತೆ ಎಂದು ಬಿಗ್ ಬಾಸ್ ವೀಕ್ಷಕರು ಕಾಯ್ತಾ ಇದ್ದಾರೆ. ಇನ್ನು ದೊಡ್ಮನೆಯಲ್ಲಿರುವ ನಟ ದರ್ಶನ್‌ ಫಾಲೋವರ್ಸ್‌ನಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಕಿಕ್ ಕೊಡಲಿದೆ ಎಂದು ಹೇಳಲಾಗುತ್ತಿದೆ.

ದೊಡ್ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್


ಹದಿನೇಳು ಸ್ಪರ್ಧಿಗಳಲ್ಲಿ ನಾಲ್ವರು ಕಂಟೆಸ್ಟೆಂಟ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದಾರೆ. ದರ್ಶನ್ ಅವರ ಹೆಸರನ್ನು ಹಗಲಿರುಳು ಜಪ ಮಾಡುವ ಈ ನಾಲ್ವರು, ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ದೊಡ್ಮನೆಯಲ್ಲಿ ಹಿಂದೆಂದೂ ಈ ತರಹದ ಕಾಕತಾಳೀಯ ಆಗಿರಲಿಲ್ಲ. ಆದರೆ ಈ ಬಾರಿ ನಿಜವಾಗಿದೆ. ಆ ನಾಲ್ಕು ಜನ ಸ್ಪರ್ಧಿಗಳು ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಜಪ ಮಾಡಿದರೂ ಕೂಡ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಕೆಲವು ದರ್ಶನ್ ಆಪ್ತರು ವೇದಿಕೆ ಮೇಲೆ ದಚ್ಚು ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಾಲ್ವರಿಂದ ಬಿಗ್ ಬಾಸ್ ಮನೆಯಲ್ಲೂ ದರ್ಶನ್ ಬಗ್ಗೆ ಚರ್ಚೆಯಾಗುತ್ತಾ ಅಂತ ಬಿಗ್ ಬಾಸ್ ವೀಕ್ಷಕರಿಗೆ ಕುತೂಹಲ ಕ್ರಿಯೇಟ್ ಆಗಿದೆ.

ಮುಂದಿನ ನೂರು ದಿನಗಳವರೆಗೆ ದರ್ಶನ್ ವಿಚಾರ ಒಂಟಿ ಮನೆಯಲ್ಲಿ ಕೇಳಿ ಬಂದರೆ, ದರ್ಶನ್ ವಿಚಾರವನ್ನು ಸುದೀಪ್ ಗಮನಿಸಿ ವಾರಾಂತ್ಯದಲ್ಲಿ ಯಾವ ರೀತಿ ಮಾತನಾಡುತ್ತಾರೆ ಎಂಬುದು ಸದ್ಯ ಬಿಗ್ ಬಾಸ್ ವೀಕ್ಷಕರಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder Case : ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಬಗೆದು ಕೊಂದ ಪಾಪಿ!

Murder Case : ಪಿತೃಪಕ್ಷದ ಪಾರ್ಟಿಯಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಿದ್ದಾಗ ಕಾಲಿನಿಂದ ಒದ್ದಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಜಗಳ ತೆಗೆದಿದ್ದಾನೆ. ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

VISTARANEWS.COM


on

By

Murder Case
ಆರೋಪಿ ಕೀರ್ತಿ ಹಾಗೂ ಕೊಲೆಯಾದ ಮೂರ್ತಿ
Koo

ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ (Murder Case) ಕೊಲೆಯಾಗಿದೆ. ಕೀರ್ತಿ (32) ಎಂಬಾತ ಮೂರ್ತಿ(52) ಎಂಬುವವರಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಸಣ್ಣೇನ ಹಳ್ಳಿಯಲ್ಲಿ ಘಟನೆ ನಡೆದಿದೆ.

ಮೂರ್ತಿ ಹಸು ಸಾಕಾಣಿಕೆ ಕೆಲಸ ಮಾಡುತ್ತಿದ್ದರೆ, ಆರೋಪಿ ಕೀರ್ತಿ ಸ್ನೇಹಿತನಾಗಿದ್ದು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರು ಒಂದೇ ಏರಿಯಾದವರು. ರಾತ್ರಿ ಮನೆಯಲ್ಲಿ ಮಹಾಲಯ ಅಮಾವಾಸ್ಯೆಯ ಹಬ್ಬ ಮಾಡಿ, ಮದ್ಯ ಸೇವನೆ‌ ಮಾಡಿದ್ದರು. ಈ ಸಮಯದಲ್ಲಿ ಗಲಾಟೆ ನಡೆದಿದ್ದು ಸಿಟ್ಟಿನಲ್ಲಿ ಕೀರ್ತಿ ಮೂರ್ತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಇನ್ನೂ ಮೂರ್ತಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ 7 ಗಂಟೆಯ ಸುಮಾರಿಗೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಕನಕಪುರ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಈ ವೇಳೆ ಟ್ರ್ಯಾಕ್ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

ಪಿತೃತಪಕ್ಷ ಹಿನ್ನೆಲೆಯಲ್ಲಿ ಭಾನುವಾರು ಎಲ್ಲರು ಮನೆಯಲ್ಲಿ ಪಾರ್ಟಿ ಮಾಡಿದ್ದರು. ಕೊಲೆಯಾದ ಮೂರ್ತಿ ಹಾಗೂ ಆರೋಪಿ ಕೀರ್ತಿ ಒಂದೇ ಊರಿನವರು. ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕೀರ್ತಿ ಕಾಲಿಗೆ ಮೂರ್ತಿ ಒದ್ದಿದ್ದ. ಈ ವೇಳೆ ಸಿಟ್ಟಿಗೆದ್ದಿದ್ದ ಕೀರ್ತಿ ಮೂರ್ತಿ ಜತೆ ಜಗಳ ತೆಗೆದಿದ್ದಾನೆ. ಜಗಳ ಜೋರಾಗಿ ಕೈಗೆ ಚಾಕು ಎತ್ತಿಕೊಂಡಿದ್ದ ಕೀರ್ತಿ ಏಕಾಏಕಿ ಮೂರ್ತಿ ಹೊಟ್ಟೆಯ ಬಲ ಭಾಗಕ್ಕೆ ಚಾಕುವಿನಿಂದ ಇರಿದಿದ್ದ. ಈ ವೇಳೆ ತೀವ್ರ ಗಾಯಗೊಂಡು ಒದ್ದಾಡುತ್ತಿದ್ದ ಮೂರ್ತಿ ರಕ್ತಸ್ರಾವವಾಗಿ ಮೃತಪಟ್ಟಿದ್ದ.

ಸದ್ಯ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಕೀರ್ತಿಯನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಈ ಕುರಿತು ಮಾಹಿತಿ ನೀಡಿದ್ದಾರೆ. ನಿನ್ನೆ ಭಾನುವಾರ 11 ಗಂಟೆ ಸುಮಾರಿಗೆ ಕೊಲೆ ಪ್ರಕರಣ ವರದಿ ಆಗಿದೆ. ಫ್ರೆಂಡ್ಸ್ ಮತ್ತೆ ರಿಲೆಟಿವ್ ಸೇರಿ ಪಿತೃಪಕ್ಷ ಹಿನ್ನೆಲೆಯಲ್ಲಿ ಮೂರ್ತಿಯ ತಮ್ಮನ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಕೀರ್ತಿ ಕೂಡ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಕಾಲು ಬಡಿತು ಎನ್ನುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿದೆ. ಈ ವೇಳೆ ಚಾಕುವಿನಿಂದ ಮೂರ್ತಿಗೆ ಕೀರ್ತಿ ಎಂಬಾತ ಇರಿದಿದ್ದಾನೆ. ಸೋಮವಾರ ಬೆಳಗ್ಗೆ ಆರೋಪಿ ಕೀರ್ತಿಯನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Suspicious Death : ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯೆ ಅನುಮಾನಾಸ್ಪದ ಸಾವು; ಪತಿ ಕೈವಾಡ ಶಂಕೆ

ಶೋಭಾಯಾತ್ರೆಯಂದು ಯುವಕನಿಗೆ ಚಾಕು ಇರಿತ

ಹಿಂದೂ ಮಹಾಗಣಪತಿ ಶೋಭಾಯಾತ್ರೆ ದಿನ ಯುವಕನಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗದ ಸೀಬಾರ ಸಮೀಪದಲ್ಲಿ ನಡೆದಿದೆ. ಸುದೀಪ್ (22) ಎಂಬಾತ ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುದೀಪ್ ಹಾಗೂ ಸ್ನೇಹಿತರು ಬೈಕ್‌ನಲ್ಲಿ ಬರುತ್ತಿದ್ದಾಗ, ದರ್ಶನ್ & ಗ್ಯಾಂಗ್‌ ಬೈಕ್ ಅಡ್ಡಗಟ್ಟಿ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಬಿಳಿಚೋಡು ಮೂಲದ ಸುದೀಪ್, ದೇವರಾಜ್, ಅಜಯ್‌ಗೆ ಗಾಯವಾಗಿದೆ. ಚಾಕು ಇರಿದು ಕೊಲೆ ಬೆದರಿಕೆ ಹಾಕಿ ದರ್ಶನ್ & ಗ್ಯಾಂಗ್ ಎಸ್ಕೇಪ್ ಆಗಿದೆ. ಚಾಕು ಇರಿತಕ್ಕೆ ನಿಖರ ಕಾರಣ ಲಭ್ಯವಿಲ್ಲ. ಸದ್ಯ BNS 126/2, 352, 115/2, 189/2, 191/2, 109,190 ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆಯು ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Jigani Police: ಉಲ್ಫಾ ಉಗ್ರ ಬಂಧನ ಬೆನ್ನಲ್ಲೆ ನಾಲ್ವರು ವಿದೇಶಿಗರು ಸೇರಿ ‌ಓರ್ವ ಪಾಕಿಸ್ತಾನ ಪ್ರಜೆ ಬಂಧನ

Jigani Police: ಉಲ್ಫಾ ಉಗ್ರ ಬಂಧನ ಬೆನ್ನಲ್ಲೆ ನಾಲ್ವರು ವಿದೇಶಿಗರು ಸೇರಿ ‌ಓರ್ವ ಪಾಕಿಸ್ತಾನ ಪ್ರಜೆಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Jigani police arrest one Pakistani national including four foreigners following ulfa militants arrest
Koo

ಆನೇಕಲ್: ಉಲ್ಫಾ ಉಗ್ರ ಬಂಧನ ಬೆನ್ನಲ್ಲೆ ಪಾಕಿಸ್ತಾನ ಪ್ರಜೆಯ ಬಂಧನವಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ‌ಓರ್ವ ಪಾಕಿಸ್ತಾನ ಪ್ರಜೆ (Jigani Police) ಬಂಧನವಾಗಿದೆ. ಪಾಕ್ ಪ್ರಜೆಗಳ ಹೆಸರು ರಷೀದ್ ಸಿದ್ದಿಕಿ@ ಶಂಕರ್ ಶರ್ಮಾ (48), ಆಯುಷಾ ಅನಿಫ್@ಆಶಾ ಶರ್ಮಾ(38), ಮೊಹಮ್ಮದ್ ಹನೀಫ್@ರಾಮ್ ಬಾಬಾ ಶರ್ಮಾ(73), ರುಬೀನಾ@ರಾಣಿ ಶರ್ಮಾ(61) ಬಂಧಿತರು

ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿಯಾಗಿರುವ ಪಾಕ್ ಪ್ರಜೆಯು ಪತ್ನಿ, ಇಬ್ಬರು ಮಕ್ಕಳ ಜತೆ ವಾಸವಿದ್ದ. ಆತನ ಪತ್ನಿ ಬಾಂಗ್ಲಾದೇಶದವಳು ಎಂದು ತಿಳಿದು ಬಂದಿದೆ. ಧರ್ಮದ ವಿಚಾರದಲ್ಲಿ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊನೆಗೆ ಅಲ್ಲಿ ಇರೋಕೆ ಆಗದೆ ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿದ್ದ. ಇದಾದ ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ವಾಸವಿದ್ದ. ಢಾಕಾದಲ್ಲಿ ಇದ್ದುಕೊಂಡು ಅಲ್ಲಿನ ಯುವತಿಯ ವಿವಾಹವಾಗಿದ್ದ.

ಬಳಿಕ 2014ರಲ್ಲಿ ಪತ್ನಿ ಜತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಗುರುತಿನ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡು ಇಡೀ ಕುಟುಂಬ 2018ರಲ್ಲಿ ಬೆಂಗಳೂರಿಗೆ ಬಂದಿದ್ದರು. ಇಬ್ಬರು ಮಕ್ಕಳ ಜತೆಗೆ ದಂಪತಿ ಜಿಗಣಿಯಲ್ಲಿ ವಾಸವಿದ್ದರು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಗಣಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಪಾಕ್ ಪ್ರಜೆ ಬಂಧನದ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಕೆ ಎಸ್ ನಾಗರಾಜ್ ಭೇಟಿ ನೀಡಿ ಇನ್ಸ್‌ಸ್ಪೆಕ್ಟರ್‌ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Road accident on Karkala-Dharmasthala highway Four members of a family dead
ಪ್ರಮುಖ ಸುದ್ದಿ2 ನಿಮಿಷಗಳು ago

Road Accident: ಕಾರ್ಕಳ ಧರ್ಮಸ್ಥಳ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ದುರ್ಮರಣ

53rd KVS National Games inaugurated
ಬೆಂಗಳೂರು43 ನಿಮಿಷಗಳು ago

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್

Actor Darshan
ಬೆಂಗಳೂರು1 ಗಂಟೆ ago

Actor Darshan : ನಟ ದರ್ಶನ್‌, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ

Bigg Boss season 11 The real game starts today
ಬೆಂಗಳೂರು2 ಗಂಟೆಗಳು ago

Bigg Boss Kannada : ಸ್ವರ್ಗ- ನರಕಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳು; ಬಿಗ್‌‌ ಬಾಸ್‌ ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್

Road Accident
ಮಂಡ್ಯ3 ಗಂಟೆಗಳು ago

Road Accident : ಮಂಡ್ಯದ ಉಮ್ಮಡಹಳ್ಳಿ ಗೇಟ್‌ನಲ್ಲಿ ನೋಡನೋಡುತ್ತಿದ್ದಂತೆ ಪಲ್ಟಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌

Murder Case
ಬೆಂಗಳೂರು4 ಗಂಟೆಗಳು ago

Murder Case : ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಬಗೆದು ಕೊಂದ ಪಾಪಿ!

Cheluvamba Hospital Doctor found dead in Mysuru
ಮೈಸೂರು6 ಗಂಟೆಗಳು ago

Suspicious Death : ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯೆ ಅನುಮಾನಾಸ್ಪದ ಸಾವು; ಪತಿ ಕೈವಾಡ ಶಂಕೆ

Jigani police arrest one Pakistani national including four foreigners following ulfa militants arrest
ಬೆಂಗಳೂರು6 ಗಂಟೆಗಳು ago

Jigani Police: ಉಲ್ಫಾ ಉಗ್ರ ಬಂಧನ ಬೆನ್ನಲ್ಲೆ ನಾಲ್ವರು ವಿದೇಶಿಗರು ಸೇರಿ ‌ಓರ್ವ ಪಾಕಿಸ್ತಾನ ಪ್ರಜೆ ಬಂಧನ

Karnataka weather Forecast
ಪ್ರಮುಖ ಸುದ್ದಿ12 ಗಂಟೆಗಳು ago

Karnataka Weather : ಮಲೆನಾಡಿನಲ್ಲಿ ಅಬ್ಬರಿಸುವ ಮಳೆ; ಮಂಡ್ಯ, ಮೈಸೂರು ಸೇರಿ 9 ಜಿಲ್ಲೆಗಳಿಗೆ ಅಲರ್ಟ್‌

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸೂಚನೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌