Pro Kabaddi | ಯು ಮುಂಬಾ, ಬೆಂಗಾಲ್‌ ವಾರಿಯರ್ಸ್‌ಗೆ ಜಯ - Vistara News

ಕ್ರೀಡೆ

Pro Kabaddi | ಯು ಮುಂಬಾ, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಚರಣ ಬುಧವಾರ ಮುಕ್ತಾಯಗೊಂಡಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿವೊ ಪ್ರೊ ಕಬಡ್ಡಿ ಲೀಗ್‌ನ ಮೊದಲ ಸುತ್ತಿನ ಕೊನೆಯ ಎರಡು ಪಂದ್ಯಗಳಲ್ಲಿ ಯು ಮುಂಬಾ ಮತ್ತು ಬೆಂಗಾಲ್‌ ವಾರಿಯರ್ಸ್‌ ತಂಡಗಳು ಜಯ ಗಳಿಸಿ ಮುನ್ನಡೆದಿವೆ. ಇದರೊಂದಿಗೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿನ ಪಂದ್ಯಗಳಿಗೆ ತೆರೆ ಬಿದ್ದಿದ್ದು, ಶುಕ್ರವಾರದಿಂದ ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ.

ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 37-29 ಅಂಕಗಳ ಅಂತರದಲ್ಲಿ ಜಯ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ವಿರುದ್ಧ 35-30 ಅಂಕಗಳಿಂದ ಜಯ ಗಳಿಸಿತು. ದಬಾಂಗ್‌ ಡೆಲ್ಲಿ ತಂಡ ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ. ಬೆಂಗಾಲ್‌ ವಾರಿಯರ್ಸ್‌ ಪರ ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ ಸಾಧನೆ ಮಾಡಿದರು. ಆದರೆ ತಂಡದ ಜಯಕ್ಕೆ ಪ್ರಮುಖ ಕಾರಣವಾದದ್ದು ಡಿಫೆನ್ಸ್‌ ವಿಭಾಗ. ವೈಭವ್‌ ಗಾರ್ಜೆ, ಗಿರೀಶ್‌ ಮಾರುತಿ ಹಾಗೂ ಶುಭಂ ಶಿಂದೆ ಟ್ಯಾಕಲ್‌ನಲ್ಲಿ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ದ್ವಿತಿಯಾರ್ಧದಲ್ಲಿ ಬೆಂಗಾಲ್‌ ವಾರಿಯರ್ಸ್‌ ಟ್ಯಾಕಲ್‌ನಿಂದ 10 ಅಂಕಗಳನ್ನು ಗಳಿಸಿದ್ದು, ಇದೇ ಮೊದಲ ಬಾರಿಗೆ ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಅತಿ ಹೆಚ್ಚು ಅಂಕಗಳು ದಾಖಲಾಯಿತು.

ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ಸೂಪರ್‌ ಟೆನ್‌ ಸಾಧನೆ ಮಾಡಿದರೂ ಈ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಪ್ರಥಮಾರ್ಧದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡ ದಬಾಂಗ್‌ ಡೆಲ್ಲಿ ವಿರುದ್ಧ 15-13 ಅಂಕಗಳಿಂದ ಮುನ್ನಡೆ ಕಂಡಿತ್ತು. ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಇತ್ತಂಡಗಳು ಹೆಚ್ಚು ಅಂಕಗಳನ್ನು ದಾಖಲಿಸಿದವು. ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ದಿಟ್ಟ ಹೋರಾಟ ನೀಡಿ ಉತ್ತಮ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಸತತ ಜಯದಿಂದ ಮುನ್ನುಗ್ಗುತ್ತಿದ್ದ ದಬಾಂಗ್‌ ಡೆಲ್ಲಿ ಈ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಬೆಂಗಾಲ್‌ ವಾರಿಯರ್ಸ್‌ ತಂಡದ ನಾಯಕ ರೈಡಿಂಗ್‌ನಲ್ಲಿ 6 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

ಯು ಮುಂಬಾಕ್ಕೆ ಜಯ

ಗುಮಾನ್‌ ಸಿಂಗ್‌ (10) ಹಾಗೂ ಹೈದರಾಲಿ ಎಕ್ರಾಮಿ (10) ಅವರು ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ ಸಾಧನೆಯ ನೆರವಿನಿಂದ ಯು ಮುಂಬಾ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 37-29 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಈ ಜಯದೊಂದಿಗೆ ಯು ಮುಂಬಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿಯಿತು.

ಪ್ರಥಮಾರ್ಧದಲ್ಲಿ ಇತ್ತಂಡಗಳು 16-16 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ಯು ಮುಂಬಾ ಆಲ್ರೌಂಡ್‌ ಪ್ರದರ್ಶನ ತೋರಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ಪ್ರಥಮಾರ್ಧದಲ್ಲಿ ಯು ಮುಂಬಾ ರೈಡಿಂಗ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು (11) ಗಳಿಸಿದ್ದರೂ, ಒಮ್ಮೆ ಆಲೌಟ್‌ ಆಗುವ ಮೂಲಕ ಗುಜರಾತ್‌ಗೆ ಸಮಬಲ ಸಾಧಿಸಲು ಅವಕಾಶ ನೀಡಿತು.

ದ್ವಿತಿಯಾರ್ಧದಲ್ಲಿ ಗುಜರಾತ್‌ ಕೇವಲ 13 ಅಂಕಗಳನ್ನು ಗಳಿಸಿತು. ಯು ಮುಂಬಾ 21 ಅಂಕಗಳನ್ನು ಗಳಿಸಿತಲ್ಲದೆ ಒಮ್ಮೆ ಗುಜರಾತ್‌ ತಂಡವನ್ನು ಆಲೌಟ್‌ ಮಾಡಿ ಪ್ರಭುತ್ವ ಸಾಧಿಸಿತು. ಟ್ಯಾಕಲ್‌ನಲ್ಲಿ ಗುಜರಾತ್‌ ಕೇವಲ 1 ಅಂಕ ಗಳಿಸಿದ್ದು ತಂಡದ ಡಿಫೆನ್ಸ್‌ ವಿಭಾಗದ ವೈಫಲ್ಯದ ಮೇಲೆ ಗಮನಹರಿಸುವಂತಿದೆ. ಯು ಮುಂಬಾ ದ್ವಿತಿಯಾರ್ಧದಲ್ಲಿ ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಗಳಿಸಿತು. ನಾಯಕ ಸರಿಂದರ್‌ ಸಿಂಗ್‌ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

ಗುಜರಾತ್‌ ಜಯಂಟ್ಸ್‌ ಪರ ರಾಕೇಶ್‌ 12 ಅಂಕಗಳೊಂದಿಗೆ ಸೂಪರ್‌ ಟೆನ್‌ ಸಾಧನೆ ಮಾಡಿದರೂ ಉಳಿದ ಆಟಗಾರರು ಯಶಸ್ಸು ಕಾಣುವಲ್ಲಿ ವಿಫಲರಾಗಿರುವುದು ತಂಡದ ಸೋಲಿಗೆ ಕಾರಣವಾಯಿತು.

ಇದನ್ನೂ ಓದಿ | Pro Kabaddi | ಮೀತು ಶರ್ಮಾ ರೇಡಿಂಗ್​ ಆರ್ಭಟಕ್ಕೆ ಮಂಕಾದ ತೆಲುಗು ಟೈಟನ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Champions Trophy 2025: ಲಾಹೋರ್​ನಲ್ಲಿ ಭಾರತದ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದ ಪಾಕ್​ ಕ್ರಿಕೆಟ್​ ಮಂಡಳಿ

Champions Trophy 2025: ಟೂರ್ನಿ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.

VISTARANEWS.COM


on

Champions Trophy 2025
Koo

ಕರಾಚಿ: ಪಾಕಿಸ್ತಾನ(IND vs PAK) ಆತಿಥ್ಯದಲ್ಲಿ ಮುಂದಿನ ವರ್ಷ(2025) ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದು ಇನ್ನೂ ಖಚಿತಗೊಂಡಿಲ್ಲ. ಈ ಮಧ್ಯೆ ಭಾರತದ ಪಂದ್ಯಗಳನ್ನು ಲಾಹೋರ್‌ನಲ್ಲಿ(Lahore) ಆಯೋಜಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಐಸಿಸಿಗೆ ಸಲಹೆ ನೀಡಿದೆ.

ಟೂರ್ನಿ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಭಾರತ ಈ ಬಾರಿ ಪಾಕ್​ನಲ್ಲಿ ಕ್ರಿಕೆಟ್ ಆಡಲಿದೆ ಎಂದು ಬಲವಾದ ಹೇಳಿಕೆಯನ್ನು ಕೂಡ ನೀಡಿದ್ದಾರೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್​ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಆದರೆ, ಪಾಕ್​ ಕ್ರಿಕೆಟ್​ ಮಂಡಳಿ ಮಾತ್ರ ಭಾರತ ಕೂಡ ಪಾಕ್​ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಒಂದು ತಿಂಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ(India Travelling To Pakistan) ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದರು. ಎಎನ್‌ಐ ಜತೆ ಮಾತನಾಡಿದ್ದ ಶುಕ್ಲಾ, “ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದ್ದರು.

Continue Reading

ಕ್ರಿಕೆಟ್

Kamran Akmal: ಜನಾಂಗೀಯ ನಿಂದನೆಗೆ ಜಾಡಿಸಿದ ಹರ್ಭಜನ್​ ಸಿಂಗ್​: ಕ್ಷಮೆಯಾಚಿಸಿದ ಕಮ್ರಾನ್ ಅಕ್ಮಲ್

Kamran Akmal: ವಿವಾದಾತ್ಮಕ ಹೇಳಿಕೆಗೆ ಭಾರೀ ಟಿಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಮ್ರಾನ್​ ಅಕ್ಮಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕ್ಷಮೆ ಯಾಚಿಸಿದ್ದಾರೆ. “ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ” ಎಂದು ಎಂದು ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Kamran Akmal
Koo

ನವದೆಹಲಿ: ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಟೀಮ್​ ಇಂಡಿಯಾದ ಯುವ ವೇಗಿ ಅರ್ಶ್​ದೀಪ್​ ಸಿಂಗ್​ ವಿರುದ್ಧ ನೇರ ಪ್ರಸಾರದಲ್ಲೇ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್​ಗೆ(Kamran Akmal) ಭಾರತ ತಂಡದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​(Harbhajan Singh) ಜಾಡಿಸಿದ್ದಾರೆ.

ಅರ್ಶ್​ದೀಪ್ ಅವರು ಪಂದ್ಯದ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಅಕ್ಮಲ್​ “ಕುಚ್ ಭೀ ಹೋ ಸಕ್ತಾ ಹೈ.. 12 ಬಜ್ ಗಯೇ ಹೈ (ಏನು ಬೇಕಾದರೂ ಸಂಭವಿಸಬಹುದು. 12 ರ ನಂತರ ಯಾವುದೇ ಸಿಖ್ಖರನ್ನು ನೀಡಲಾಗುವುದಿಲ್ಲ) ಎಂದು ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಕ್ಮಲ್​ ಅವರ ಹೇಳಿಕೆಗೆ ಹರ್ಭಜನ್​ ಸಿಂಗ್(Harbhajan Singh slams Kamran Akmal)​ ಅವರು ಟ್ವೀಟ್​ ಮಾಡಿ ತಿರುಗೇಟು ನೀಡಿದ್ದರು. ‘ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

ಕ್ಷಮೆ ಕೇಳಿದ ಅಕ್ಮಲ್​


ವಿವಾದಾತ್ಮಕ ಹೇಳಿಕೆಗೆ ಭಾರೀ ಟಿಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಮ್ರಾನ್​ ಅಕ್ಮಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕ್ಷಮೆ ಯಾಚಿಸಿದ್ದಾರೆ. “ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ. ನಿಜವಾಗಿಯೂ ಕ್ಷಮೆ ಯಾಚಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.


ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ಪಾಕ್​ ಬೌಲರ್​ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್​ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಇಲ್ಲಿಂದ ಪಾಕ್​ ಕುಸಿತ ಕೂಡ ಆರಂಭವಾಯಿಯು. ಕೊನೆಗೂ ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.

ಸೂಪರ್​-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್​ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್​ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್​ರೇಟ್​ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

Continue Reading

ಕ್ರೀಡೆ

IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

IND vs PAK: ಭಾರತ ಮತ್ತು ಪಾಕ್​ ಪಂದ್ಯ ವೀಕ್ಷಿಸಲು ಪಾಕ್​ ಅಭಿಮಾನಿಯೊಬ್ಬ ಕರಾಚಿಯಿಂದ ನ್ಯೂಯಾರ್ಕ್​ಗೆ ಬಂದಿದ್ದ. ಈತ ತನ್ನ ಟ್ರ್ಯಾಕ್ಟರ್ ಮಾರಿ ಪಂದ್ಯವನ್ನು ನೋಡಲು ಆಗಮಿಸಿದ್ದ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಭಾರತ ಮತ್ತು ಪಾಕಿಸ್ತಾನ(IND vs PAK) ಪಂದ್ಯದ ಜೋಶ್‌ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ದುಬಾರಿ ಬೆಲೆಯ ಟಿಕೆಟ್​ ಕೊಂಡುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಪಾಕ್​ ತಂಡದ ಅಭಿಮಾನಿಯೊಬ್ಬ ತನ್ನ ಟ್ರ್ಯಾಕ್ಟರ್(Pakistani fan sells tractor) ಮಾರಿ ಲಕ್ಷಾಂತರ ರೂ ಖರ್ಚು ಮಾಡಿ ಪಂದ್ಯದ ಟಿಕೆಟ್​ ಖರೀದಿ ಮಾಡಿ ಪಂದ್ಯ ಸೋತ ಬಳಿಕ ಕಣ್ಣೀರು ಹಾಕಿದ್ದಾನೆ. ಈ ವಿಡಿಯೊ ವೈರಲ್​ ಆಗಿದೆ.

ಕಳೆದ ಭಾನುವಾರ ಭಾರತ ಮತ್ತು ಪಾಕ್​ ತಂಡಗಳು ಟಿ20 ವಿಶ್ವಕಪ್​ ಲೀಗ್​ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಈ ಪಂದ್ಯವನ್ನು ನೋಡಲು ಪಾಕ್​ ಅಭಿಮಾನಿಯೊಬ್ಬ ಕರಾಚಿಯಿಂದ ನ್ಯೂಯಾರ್ಕ್​ಗೆ ಬಂದಿದ್ದ. ಈತ ತನ್ನ ಟ್ರ್ಯಾಕ್ಟರ್ ಮಾರಿ ಪಂದ್ಯವನ್ನು ನೋಡಲು ಆಗಮಿಸಿದ್ದ. ಆದರೆ ಪಂದ್ಯ ಸೋತ ಕಾರಣ ಆತ ನಿರಾಸೆಗೊಂಡು ಕಣ್ಣೀರು ಹಾಕಿದ್ದಾನೆ. ಪಂದ್ಯದ ಬಳಿಕ ಎಎನ್​ಐ ಜತೆ ಮಾತನಾಡುವ ವೇಳೆ ಆತ ತಾನು ಟ್ರ್ಯಾಕ್ಟರ್ ಮಾರಿ ಪಂದ್ಯ ವೇಖ್ಷಣೆಗೆ ಬಂದ ವಿಚಾರವನ್ನು ತಿಳಿಸಿದ್ದಾನೆ. ಪಾಕ್​ ಆಟಗಾರರ ಕಳಪೆ ಪ್ರದರ್ಶನಕ್ಕೂ ಆತ ಆಕ್ರೋಶ ಹೊರಹಾಕಿದ್ದಾನೆ. ಇದರ ವಿಡಿಯೊ ವೈರಲ್​ ಆಗಿದೆ.

“ತಾನು ಸ್ಟೇಡಿಯಂನಲ್ಲೇ ಲೈವ್ ಆಗಿ ಪಂದ್ಯ ವೀಕ್ಷಿಸುವ ಸಲುವಾಗಿ ಮತ್ತು ನನ್ನ ದೇಶವನ್ನು ಬೆಂಬಲಿಸಲು ನನ್ನ ಟ್ರ್ಯಾಕ್ಟರ್‌ನ್ನು ಮಾರಿದೆ. (ಈ ಟಿಕೆಟ್‌ ಮೊತ್ತ 3000 ಯುಎಸ್‌ಡಿ ಅಂದರೆ ಪಾಕಿಸ್ತಾನದ ರೂಪಾಯಿಗೆ ಪರಿವರ್ತಿಸುವುದಾದರೆ 840,526.93) ಆದರೆ ಪಾಕಿಸ್ತಾನ ಈ ಪಂದ್ಯವನ್ನು ಹೀಗೆ ಆಡುತ್ತದೆ ಎಂದು ನಾನು ಊಹೆಯೂ ಮಾಡಿರಲಿಲ್ಲ. ಸೋಲಿಗೆ ತಂಡದ ಅತಿಯಾದ ಆತ್ಮವಿಶ್ವಾಸವೇ ಕಾರಣ” ಎಂದು ಈ ಅಭಿಮಾನಿ ಹತಾಶೆ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ಪಾಕ್​ ಬೌಲರ್​ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್​ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಇಲ್ಲಿಂದ ಪಾಕ್​ ಕುಸಿತ ಕೂಡ ಆರಂಭವಾಯಿಯು. ಕೊನೆಗೂ ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.

ಪಾಕ್​ 2 ಸೋಲು ಕಂಡಿದ್ದರೂ ಕೂಡ ಸೂಪರ್​-8 ಪ್ರವೇಶಿಸುವ ಕ್ಷೀಣ ಅವಕಾಶವೊಂದಿದೆ. ಜತೆಗೆ ಅದೃಷ್ಟ ಕೂಡ ಕೈಹಿಡಿಯಬೇಕಿದೆ.

ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್​ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ. ಪಾಕ್​ಗೂ ಕೂಡ ಈ ಹಂತಕ್ಕೇರಲು ಸಣ್ಣ ಅವಕಾಶವೊಂದಿದೆ. ಈ ಲೆಕ್ಕಾಚಾರ ಹೀಗಿದೆ.

ಸೂಪರ್​-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್​ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್​ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್​ರೇಟ್​ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

Continue Reading

ಕ್ರೀಡೆ

Virat Kohli: ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಕೊಹ್ಲಿಯನ್ನು ಗುರುತಿಸದ ನ್ಯೂಯಾರ್ಕ್​ ಜನತೆ; ವಿಡಿಯೊ ವೈರಲ್​

Virat Kohli: ಸತತ 2 ಗೆಲುವು ಸಾಧಿಸಿ ‘ಎ’ ಗುಂಪಿನಲ್ಲಿ ಅಜೇಯ ಓಟ ಮುಂದಿವರಿಸಿರುವ ಭಾರತ ಮತ್ತು ಅಮೆರಿಕ ನಾಳೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

VISTARANEWS.COM


on

Virat Kohli
Koo

ನ್ಯೂಯಾರ್ಕ್​: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ವಿರಾಟ್​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಅವರ ಜತೆ ಒಂದು ಫೋಟೊ ತೆಗೆದುಕೊಳ್ಳಲು, ಆಟೋಗ್ರಾಫ್ ಪಡೆಯಲು ಮತ್ತು ಅವರನ್ನು ಭೇಟಿಯಾಗಲೆಂದೇ ವರ್ಷಾನುಗಟ್ಟಲೆ ಕಾದು ಕುಳಿತಿರುತ್ತಾರೆ. ಆದರೆ, ನ್ಯೂಯಾರ್ಕ್​ನಲ್ಲಿ ಕೊಹ್ಲಿ ಯಾರೆಂಬುದೇ ಹಲವರಿಗೆ ತಿಳಿದಿಲ್ಲ.

ಕ್ರಿಕೆಟ್​ ಹೆಚ್ಚು ಪ್ರಸಿದ್ಧಿ ಪಡೆಯದ ನ್ಯೂಯಾರ್ಕ್​ನಲ್ಲಿ ಅನೇಕ ಕ್ರಿಕೆಟಿಗರು ಇಲ್ಲಿನ ಪಾರ್ಕ್, ರಸೆಗಳಲ್ಲಿ ಸಾಮಾನ್ಯ ಜನರಂತೆ ತಿರುಗಾಡುತ್ತಿದ್ದಾರೆ. ವಿರಾಟ್​ ಕೊಹ್ಲಿ ಕೂಡ ಇಲ್ಲಿನ ಜಿಮ್​ ಸೆಂಟರ್​ ಒಂದಕ್ಕೆ ಜಿಮ್(Kohli SPOTTED In Gym)​ ಮಾಡಲು ಏಕಾಂಗಿಯಾಗಿ ತೆರಳಿದ್ದಾರೆ. ಯಾರು ಕೂಡ ಕೊಹ್ಲಿ ಬಳಿ ಬಂದು ಸೆಲ್ಫಿ, ಆಟೋಗ್ರಾಫ್​ಗೆ ಮುಂದಾಗಲಿಲ್ಲ. ಏಕೆಂದರೆ ಅಲ್ಲಿನ ಜನರಿಗೆ ಕೊಹ್ಲಿ ಎಂದರೆ ಅಷ್ಟಾಗಿ ತಿಳಿದಿಲ್ಲ. ಹೀಗಾಗಿ ಕೊಹ್ಲಿ ಕೂಡ ಯಾವುದೇ ಕಿರಿಕಿರಿ ಇಲ್ಲದೆ ಪ್ರಶಾಂತವಾಗಿ ಸಾಮಾನ್ಯರಂತೆ ಜಿಮ್​ಗೆ ತೆರಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ(viral video). ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್​ ಸ್ಟೇನ್​ ಅವರಿಗೆ ಇಲ್ಲಿನ ಕ್ರಿಕೆಟ್​ ಗೇಮ್​ ಸೆಂಟರ್​ನಲ್ಲಿ ಸಿಬ್ಬಂದಿ ಬೌಲಿಂಗ್​ ಹೇಗೆ ನಡೆಸಬೇಕು ಎಂದು ಹೇಳಿಕೊಡುವ ವಿಡಿಯೊ ವೈರಲ್​ ಆಗಿತ್ತು. ಆತನಿಗೆ ಸ್ಟೇನ್​ ಕ್ರಿಕೆಟಿಗ ಎನ್ನುವುದು ತಿಳಿದಿರಲಿಲ್ಲ. ಸ್ಟೇನ್​ ಅವರೇ ಈ ವಿಡಿಯೊವನ್ನು ಹಂಚಿಕೊಂಡಿದ್ದರು.

ಟೀಮ್​ ಇಂಡಿಯಾದ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಕೆಲ ದಿನಗಳ ಹಿಂದೆ ನ್ಯೂಯಾರ್ಕ್​ನ ಪಾರ್ಕ್​ಗಳಲ್ಲಿ ನಾವು ಆರಾಮವಾಗಿ ವ್ಯಾಯಾಮ ಮಾಡುತ್ತಿದ್ದೇವೆ. ಇಲ್ಲಿನ ಜನತೆಗೆ ನಾವು ಯಾರೆಂದು ಕೂಡ ತಿಳಿದಿಲ್ಲ. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು. ಬಾಸ್ಕೆಟ್​ ಬಾಲ್​, ಬೇಸ್​ ಬಾಲ್​, ಫುಟ್ಬಾಲ್​ ಹೆಚ್ಚಾಗಿ ನೆಚ್ಚಿಕೊಂಡಿರುವ ಅಮೆರಿಕದಲ್ಲಿ ಕ್ರಿಕೆಟ್​ ಈಗ ತಾನೆ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಜತೆಗೆಯಲ್ಲೂ ಕ್ರಿಕೆಟ್​ ಪ್ರೀತಿ ಹೆಚ್ಚಾಗಬಹುದು.

ಇದನ್ನೂ ಓದಿ T20 World Cup 2024: ಪಾಕ್​ಗೆ ಇನ್ನೂ ಇದೆ ಸೂಪರ್-8 ಅವಕಾಶ? ಇಲ್ಲಿದೆ ಲೆಕ್ಕಾಚಾರ

ನಾಳೆ ಭಾರತ-ಅಮೆರಿಕ ಮುಖಾಮುಖಿ


ಸತತ 2 ಗೆಲುವು ಸಾಧಿಸಿ ‘ಎ’ ಗುಂಪಿನಲ್ಲಿ ಅಜೇಯ ಓಟ ಮುಂದಿವರಿಸಿರುವ ಭಾರತ ಮತ್ತು ಅಮೆರಿಕ ನಾಳೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಒಂದು ತಂಡಕ್ಕೆ ಸೋಲು ಎದುರಾಗುವುದು ಖಚಿತ. ಈ ತಂಡ ಯಾವುದೆಂಬುದು ಪಂದ್ಯದ ಕೌತುಕ. ಇತ್ತಂಡಗಳ ಮೊದಲ ಕ್ರಿಕೆಟ್​ ಮುಖಾಮುಖಿಯೂ ಇದಾಗಿದೆ.

ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಮೂಡಿಬಂದಿದ್ದರೂ ಕೂಡ ಟಿ20 ವಿಶ್ವಕಪ್​ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿದ್ದರು. ಇದೀಗ ಅಮೆರಿಕ ವಿರುದ್ಧದ ಪಂದ್ಯದಲ್ಲಾದರೂ ಅವರು ಬ್ಯಾಟಿಂಗ್​ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.

Continue Reading
Advertisement
Actor Darshan
ಸಿನಿಮಾ3 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ತನಿಖೆ ಬಳಿಕವೇ ದರ್ಶನ್ ಪಾತ್ರ ಗೊತ್ತಾಗಲಿದೆ ಎಂದ ಸಚಿವ ಪರಮೇಶ್ವರ್‌

Actor Darshan
ಕರ್ನಾಟಕ28 mins ago

Actor Darshan: ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಟ್ವಿಸ್ಟ್;‌ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನೂ ಅರೆಸ್ಟ್!

Champions Trophy 2025
ಕ್ರಿಕೆಟ್42 mins ago

Champions Trophy 2025: ಲಾಹೋರ್​ನಲ್ಲಿ ಭಾರತದ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದ ಪಾಕ್​ ಕ್ರಿಕೆಟ್​ ಮಂಡಳಿ

Drowned in water
ದಕ್ಷಿಣ ಕನ್ನಡ52 mins ago

Drowned in water : ಅಪ್ಪಳಿಸಿ ಬಂದ ರಕ್ಕಸ ಅಲೆಗೆ ಕೊಚ್ಚಿ ಹೋದ ಮಹಿಳೆ ಸಾವು; ಮೂವರ ರಕ್ಷಣೆ

Actor Darshan
ಕರ್ನಾಟಕ53 mins ago

Actor Darshan: ಕಳೆದ ವರ್ಷ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ; ಸಾವಿನ ವಿಚಾರ ಆಕೆಗೆ ಗೊತ್ತೇ ಇಲ್ಲ!

Actor Darshan
ಕರ್ನಾಟಕ59 mins ago

Actor Darshan: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌; ಪೊಲೀಸರು ಹೇಳಿದ್ದೇನು?

Pavithra Gowda
ಕರ್ನಾಟಕ1 hour ago

Pavithra Gowda: ಕೊಲೆ ಕೇಸ್;‌ ದರ್ಶನ್‌ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಕೂಡ ಪೊಲೀಸ್‌ ವಶಕ್ಕೆ!

black magic
ದಕ್ಷಿಣ ಕನ್ನಡ1 hour ago

Black Magic : 25 ಕುರಿ-ಮೇಕೆಗಳ ರುಂಡ ಕತ್ತರಿಸಿ ವ್ಯಕ್ತಿಗಳ ಫೋಟೊ ಇಟ್ಟು ಭಯಾನಕ ವಾಮಾಚಾರ!

Kamran Akmal
ಕ್ರಿಕೆಟ್2 hours ago

Kamran Akmal: ಜನಾಂಗೀಯ ನಿಂದನೆಗೆ ಜಾಡಿಸಿದ ಹರ್ಭಜನ್​ ಸಿಂಗ್​: ಕ್ಷಮೆಯಾಚಿಸಿದ ಕಮ್ರಾನ್ ಅಕ್ಮಲ್

Actor Darshan
ಕರ್ನಾಟಕ2 hours ago

Actor Darshan: ಹತ ರೇಣುಕಾಸ್ವಾಮಿ ಯಾರು? ಕೊಲೆ ಹಿಂದೆ ದರ್ಶನ್‌ ಕೈವಾಡವೇನು? ಇಲ್ಲಿದೆ ಶಾಕಿಂಗ್‌ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Saptami Gowda
ಸಿನಿಮಾ2 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ21 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

ಟ್ರೆಂಡಿಂಗ್‌