Dengue fever | ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ; ಇರಲಿ ಎಚ್ಚರ! - Vistara News

ಆರೋಗ್ಯ

Dengue fever | ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ; ಇರಲಿ ಎಚ್ಚರ!

ರಾಜ್ಯದಲ್ಲಿ 2022ರ ಜನವರಿಯಿಂದ ಅಕ್ಟೋಬರ್‌ವರೆಗೆ 7,317 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ನಾಗರಿಕರು ಎಚ್ಚರಿಕೆ ವಹಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ.

VISTARANEWS.COM


on

Dengue fever
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಈ‌ ವರ್ಷ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಶಂಕಿತರನ್ನು ಗುರುತಿಸಿ ತಪಾಸಣೆ ನಡೆಸುವ ಕಾರ್ಯ ನಡೆಯುತ್ತಿದೆ.

ಈ ವರ್ಷ ಸುಮಾರು 1.48 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರನ್ನು ಗುರುತಿಸಿ ತಪಾಸಣೆ ನಡೆಸಲಾಗಿದ್ದು, 66 ಸಾವಿರಕ್ಕೂ ಹೆಚ್ಚು ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿದೆ. 2022ರ ಜನವರಿಯಿಂದ ಅಕ್ಟೋಬರ್‌ವರೆಗೆ 7,317 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕಳೆದ ವರ್ಷ 7,189 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಆ ಪೈಕಿ ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿದ್ದರು. ಹಾಗೆಯೇ ಬೆಂಗಳೂರು ನಗರದಲ್ಲಿ ೨೦೨೨ರ ಅಕ್ಟೋಬರ್‌ನಲ್ಲಿ 591 ಪ್ರಕರಣಗಳು ದೃಢಪಟ್ಟಿವೆ.

ಇದನ್ನೂ ಓದಿ | World stroke day | ಪಾರ್ಶ್ವವಾಯು ಬಗೆಗೆ ಇರಲಿ ಜಾಗೃತಿ: ಸಮಯ ಅಮೂಲ್ಯ

ಈ ವರ್ಷ ಯಾವ ಜಿಲ್ಲೆಯಲ್ಲಿ ಎಷ್ಟು ಡೆಂಗ್ಯೂ ಪ್ರಕರಣ?
ಬೆಂಗಳೂರು (ಬಿಬಿಎಂಪಿ) ವ್ಯಾಪ್ತಿಯಲ್ಲಿ 48,038 ಮಂದಿಯಲ್ಲಿ ಡೆಂಗ್ಯೂ ಶಂಕೆ ಇದ್ದು, ಈ ಪೈಕಿ 1,227 ಮಂದಿಯಲ್ಲಿ ದೃಢವಾಗಿದೆ. ಮೈಸೂರು ಜಿಲ್ಲೆಯಲ್ಲಿ 660 ಪ್ರಕರಣ, ಉಡುಪಿ ಜಿಲ್ಲೆಯಲ್ಲಿ 477 ಪ್ರಕರಣ, ಚಿತ್ರದುರ್ಗ ಜಿಲ್ಲೆಯಲ್ಲಿ 341 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 325 ಪ್ರಕರಣ, ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 300ಕ್ಕಿಂತ ಕಡಿಮೆ ಇದ್ದು ರಾಜ್ಯದಲ್ಲಿ ಈ ವರ್ಷ ಒಟ್ಟಾರೆ 317 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಆದರೆ, ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಸಿಲಿಕಾನ್ ಸಿಟಿಯಲ್ಲಿ ಚಳಿಗೆ ಮಕ್ಕಳು ತತ್ತರ
ಒಂದೆಡೆ ಚಳಿಯ ಕಾಟವಾದರೆ, ಇನ್ನೊಂದು ಕಡೆ ಮಳೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಹವಾಮಾನ ವೈಪರೀತ್ಯದಿಂದ ಜ್ವರ, ಕೆಮ್ಮು ನೆಗಡಿಯಂತಹ ಲಕ್ಷಣಗಳು ಮಕ್ಕಳಲ್ಲಿ ಹೆಚ್ಚಳವಾಗಿದೆ. ಇದರಿಂದ ನಗರದ ಆಸ್ಪತ್ರೆಗಳ ಮುಂದೆ ಜನರ ಕ್ಯೂ ಹೆಚ್ಚಾಗಿದ್ದು, ಮಕ್ಕಳ ಬಗ್ಗೆ ಎಚ್ಚರದಿಂದ ಇರುವಂತೆ ಪೋಷಕರಿಗೆ ವೈದ್ಯರು ಕಿವಿಮಾತು ಹೇಳುತ್ತಿದ್ದಾರೆ.

ಕೊರೆಯುವ ಚಳಿ ಮಕ್ಕಳ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಇದರ ಜತೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗೆಯೇ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆ ಹೆಚ್ಚಾಗಿದೆ. ಇನ್ನು ಬೆಂಗಳೂರಿನಲ್ಲಿ ನವೆಂಬರ್ 15 ರವರೆಗೂ ಮಳೆಯ ಜತೆಗೆ ಚಳಿಯೂ ಇರಲಿರುವುದರಿಂದ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ.

ಇದನ್ನೂ ಓದಿ | Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Flesh-Eating Bacteria: ಆತಂಕ ಮೂಡಿಸಿದ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಸೋಂಕು ತಗುಲಿದ 48 ಗಂಟೆಯಲ್ಲೇ ಸಾವು!

Flesh-Eating Bacteria: ಅಪಾಯಕಾರಿ ಕಾಯಿಲೆಯೊಂದು ಜಪಾನ್‌ನಲ್ಲಿ ಪತ್ತೆಯಾಗಿದ್ದು, ಸೋಂಕು ತಗುಲಿದ 48 ಗಂಟೆಯಲ್ಲೇ ಮಾನವನ ಸಾವಿಗೆ ಕಾರಣವಾಗುತ್ತದೆ. ಈ ಸೋಂಕಿಗೆ ಮಾಂಸ-ಭಕ್ಷಕ ಬ್ಯಾಕ್ಟೀರಿಯಾ ಕಾರಣವಾಗಿದ್ದು, ಜಪಾನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಅಪರೂಪದ ಕಾಯಿಲೆಯನ್ನು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

VISTARANEWS.COM


on

Flesh-Eating Bacteria
Koo

ಟೋಕಿಯೊ: ವಿಶ್ವವನ್ನೇ ನಡುಗಿಸಿದ ಕೋವಿಡ್‌ ಹೊಡೆತದಿಂದ ಜಗತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಮತ್ತೊಂದು ಅಪಾಯಕಾರಿ ಕಾಯಿಲೆ ಜಪಾನ್‌ನಲ್ಲಿ ಪತ್ತೆಯಾಗಿದ್ದು, ಸೋಂಕು ತಗುಲಿದ 48 ಗಂಟೆಯಲ್ಲೇ ಮಾನವನ ಸಾವಿಗೆ ಕಾರಣವಾಗುತ್ತದೆ. ಈ ಸೋಂಕಿಗೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ (Flesh-Eating Bacteria)ಕಾರಣವಾಗಿದ್ದು, ಜಪಾನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಅಪರೂಪದ ಕಾಯಿಲೆಯನ್ನು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (Streptococcal Toxic Shock Syndrome-STSS) ಎಂದು ಕರೆಯಲಾಗುತ್ತದೆ.

ಜಪಾನ್‌ನಲ್ಲಿ ಈಗಾಗಲೇ ಈ ಮಾಂಸ ಭಕ್ಷಕ ಬ್ಯಾಕ್ಟೀರಿಯಾದಿಂದ ಕಾಣಿಸಿಕೊಳ್ಳುವ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಪ್ರಕರಣ 977ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 941 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷದ ಅರ್ಧ ಭಾಗದಲ್ಲಿಯೇ ಅದನ್ನೂ ಮೀರಿದ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ ಎಂದು ಮೂಲಗಳು ತಿಳಿಸಿವೆ.

“ಹೆಚ್ಚಿನ ಸಾವು ಸೋಂಕು ತಗುಲಿದ 48 ಗಂಟೆಗಳ ಒಳಗೆ ಸಂಭವಿಸುತ್ತವೆ. ಸೋಂಕು ಬಾಧಿತರ ಪಾದ ಬೆಳಿಗ್ಗೆ ಊದಿಕೊಂಡರೆ ಮಧ್ಯಾಹ್ನದ ವೇಳೆಗೆ ಊತ ಮೊಣಕಾಲಿನವರೆಗೆ ಹರಡುತ್ತದೆ ಮತ್ತು ಅವರು 48 ಗಂಟೆಗಳಲ್ಲಿ ಸಾಯುವ ಸಾಧ್ಯತೆ ಇದೆ” ಎಂದು ಟೋಕಿಯೊ ಮಹಿಳಾ ವೈದ್ಯಕೀಯ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆನ್ ಕಿಕುಚಿ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ ಬ್ಯಾಕ್ಟೀರಿಯಾ?

ಗ್ರೂಪ್ ಎ ಸ್ಟ್ರೆಪ್ಟೋಕಾಕಸ್ (ಜಿಎಎಸ್) ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಸ್ಟ್ರೆಪ್ಟೋಕಾಕಸ್ ಪಿಯೋಜೆನೆಸ್ (Streptococcus Pyogenes) ಎಂದು ಕರೆಯಲ್ಪಡುತ್ತದೆ. ಇದು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುತ್ತದೆ. ಗ್ರೂಪ್ ಎ ಸ್ಟ್ರೆಪ್ಟೋಕಾಕಸ್‌ನ ಕೆಲವು ತಳಿಗಳು ಗಂಟಲು ಅಥವಾ ಚರ್ಮದ ಸೋಂಕುಗಳಂತಹ ಸೌಮ್ಯ ಕಾಯಿಲೆಗಳಿಗೆ ಕಾರಣವಾಗಬಹುದು. ಜತೆಗೆ ನೆಕ್ರೋಟೈಸಿಂಗ್ ಫಾಸಿಟಿಸ್ ಅಥವಾ ಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನಂತಹ ಅಪಾಯಕಾರಿ ಕಾಯಿಲೆಗಳಂತಹ ಗಂಭೀರ ಸೋಂಕುಗಳೂ ಸಂಭವಿಸಬಹುದು. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಅಗತ್ಯ.

ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನ ಲಕ್ಷಣ

ದೇಹದ ಭಾಗಗಳಲ್ಲಿ ನೋವು, ಊತ, ಜ್ವರ ಹಾಗೂ ಕಡಿಮೆ ರಕ್ತದೊತ್ತಡ ಮುಂತಾದವು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನ ಲಕ್ಷಣಗಳು. ಇದು ಜೀವಕೋಶಗಳ ಸಾವು, ತೀವ್ರ ಜ್ವರ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಮುಖ್ಯವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿ. ಇದರ ತಡೆಗೆ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಜತೆಗೆ ಯಾವುದೇ ತೆರೆದ ಗಾಯಗಳನ್ನು ನಿರ್ಲಕ್ಷಿಸಬಾರದು. ಮಾತ್ರವಲ್ಲ ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಜಪಾನ್ ಜತೆಗೆ ಯುರೋಪ್‌ನ ಐದು ದೇಶಗಳು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ ಪ್ರಕರಣಗಳ ಹೆಚ್ಚು ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ (WHO) ವರದಿ ಮಾಡಿದೆ. ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸೋಂಕಿನ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದೆ. ಪ್ರಸ್ತುತ ಸೋಂಕಿನ ದರ ಗಮನಿಸಿದರೆ ಜಪಾನ್​ನಲ್ಲಿ ಈ ವರ್ಷ 2,500 ಪ್ರಕರಣಗಳ ದಾಖಲಾಗಬಹುದು ಎನ್ನುವ ಆತಂಕ ಮೂಡಿದೆ.

ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Continue Reading

ಆರೋಗ್ಯ

Irregular Periods: ಏರುಪೇರಾದ ಋತುಚಕ್ರದ ಸಮಸ್ಯೆಯೇ? ಇಲ್ಲಿವೆ ಸರಳ ಮನೆಮದ್ದುಗಳು!

ಋತುಚಕ್ರವು ಪ್ರಕೃತಿ ಸಹಜ ಕ್ರಿಯೆ. ಇದು ಹೆಣ್ಣಿಗೆ ಸಿಕ್ಕ ಉಡುಗೊರೆಯೇ ಆದರೂ, ಬಹುತೇಕರಿಗೆ ಮಾನಸಿಕವಾಗಿ, ದೈಹಿಕವಾಗಿ ಬಹಳ ಕಿರಿಕಿರಿಯನ್ನೂ ನೀಡುವ ಕ್ರಿಯೆಯೂ ಹೌದು. ಸಮಾಜದಲ್ಲಿ, ಈ ಬಗ್ಗೆ ಹಲವು ಮೂಢನಂಬಿಕೆಗಳು, ಪಿಡುಗುಗಳೂ ಕೂಡಾ ಇದನ್ನು ಇನ್ನಷ್ಟು ಮತ್ತಷ್ಟು ಕಿರಿಕಿರಿಯಾಗಿಸಿದೆ ಎಂಬುದೂ ನಿಜ. ಬಹುತೇಕ ಹೆಣ್ಣು ಮಕ್ಕಳಿಗೆ ಋತುಚಕ್ರದ ಸಂದರ್ಭ ಆಗುವ ನೋವು, ಅಸಾಧ್ಯವಾದ ಮಾನಸಿಕ ತುಮುಲಗಳೂ ಕೂಡ ಈ ಸಮಸ್ಯೆಯ ಭಾಗವೇ ಹೌದು. ಈ ಕುರಿತ ಉಪಯುಕ್ತ ಸಲಹೆಗಳು ಇಲ್ಲಿವೆ.

VISTARANEWS.COM


on

Irregular Periods problem Here are some simple home remedies
Koo

ಬೆಂಗಳೂರು: ಯಾವ ಮಹಿಳೆಯೂ ತನ್ನ ಋತುಚಕ್ರದದ (Irregular Periods) ತಪ್ಪಿಸಿಕೊಳ್ಳಲಾರಳು. ಪ್ರಕೃತಿ ಸಹಜ ಕ್ರಿಯೆಯಾಗಿರುವ ಇದು ಹೆಣ್ಣಿಗೆ ಸಿಕ್ಕ ಉಡುಗೊರೆಯೇ ಆದರೂ, ಬಹುತೇಕರಿಗೆ ಮಾನಸಿಕವಾಗಿ, ದೈಹಿಕವಾಗಿ ಬಹಳ ಕಿರಿಕಿರಿಯನ್ನೂ ನೀಡುವ ಕ್ರಿಯೆಯೂ ಹೌದು. ಸಮಾಜದಲ್ಲಿ, ಈ ಬಗ್ಗೆ ಹಲವು ಮೂಢನಂಬಿಕೆಗಳು, ಪಿಡುಗುಗಳೂ ಕೂಡಾ ಇದನ್ನು ಇನ್ನಷ್ಟು ಮತ್ತಷ್ಟು ಕಿರಿಕಿರಿಯಾಗಿಸಿದೆ ಎಂಬುದೂ ನಿಜ. ಬಹುತೇಕ ಹೆನ್ಣುಮಕ್ಕಳಿಗೆ ಋತುಚಕ್ರದ ಸಂದರ್ಭ ಆಗುವ ನೋವು, ಅಸಾಧ್ಯವಾದ ಮಾನಸಿಕ ತುಮುಲಗಳೂ ಕೂಡಾ ಈ ಸಮಸ್ಯೆಯ ಭಾಗವೇ ಹೌದು. ಅಷ್ಟೇ ಅಲ್ಲ, ಇನ್ನೂ ಅನೇಕರಿಗೆ ಹಾರ್ಮೋನಿನ ಸಮಸ್ಯೆ ಇತ್ಯಾದಿಗಳಿಂದ ಋತುಚಕ್ರದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳೂ ಆಗುತ್ತವೆ. ಇತ್ತೀಚೆಗಿನ ಜೀವನಕ್ರಮದ ಬದಲಾವಣೇ, ಆಹಾರಶೈಲಿ, ಒತ್ತಡ ಇತ್ಯಾದಿಗಳಿಂದಾಗಿ ಹೆಚ್ಚು ಹೆಚ್ಚು ಮಂದಿ ಪಿಸಿಒಎಸ್‌ ಮತ್ತಿತರ ಸಮಸ್ಯೆಗಳಿಂದಲೂ ಋತುಚಕ್ರದ ಸಮಸ್ಯೆಗಳು ಎದುರಾಗುತ್ತವೆ. ಸರಿಯಾಗಿ ಮಾಸಿಕವಾಗಿ ಋತುಚಕ್ರ ಬರದೇ ಇರುವುದು, ಯಾವಾಗಲೋ ಇದ್ದಕ್ಕಿದ್ದಂತೆ ರಕ್ತಸ್ರಾವ ಶುರುವಾಗಿಬಿಡುವುದು, ಬಹಳ ದಿನಗಳ ಕಾಲ ರಕ್ತಸ್ರಾವ ನಿಲ್ಲದೇ ಇರುವುದು ಇತ್ಯಾದಿ ಇತ್ಯಾದಿಗಳು ಸಮಸ್ಯೆಯ ಭಾಗ. ವೈದ್ಯರ ಬಳಿ ಹೋಗುವುದು, ಸಲಹೆ, ವೈದ್ಯಕೀಯ ನೆರವು ಪಡೆಯುವುದು ಇಂಥ ಸಂದರ್ಭ ಅತ್ಯಗತ್ಯ. ಇವುಗಳ ಜೊತೆಜೊತೆಗೂ ಕೆಲವು ಜೀವನಕ್ರಮ ಬದಲಾವಣೆ, ಆಹಾರಶೈಲಿ ಬದಲಾವಣೆ ಇತ್ಯಾದಿ ಮಾಡುವುದರಿಂದ ಹಾಗೂ ಕೆಲವು ಮನೆಮದ್ದುಗಳ ಪಾಲನೆಯಿಂದಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ಈ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಪಡೆಯಬಹುದು ಎಂಬುದನ್ನು ನೋಡೋಣ.

ಹಣ್ಣಾಗದ ಪಪ್ಪಾಯಿ

ಹಸಿರು ಬಣ್ಣದಲ್ಲಿರುವ ಪಪ್ಪಾಯಿ ತಲೆತಲೆತಲಾಂತರಗಳಿಂದ ಹೀಗೆ ಋತುಚಕ್ರದ ಏರುಪೇರಿಗೆ ಒಳ್ಳೆಯ ಮನೆಮದ್ದು ಎಂದೇ ಹೆಸರುವಾಸಿ. ಇದು ಗರ್ಭಕೋಶದ ಮಾಂಸಖಂಡಗಳನ್ನು ಆ ಸಮಯಕ್ಕೆ ತಕ್ಕ ಹಾಗೆ ಇರಬೇಕಾಂದಂತೆ ಮಾಡುವ ಗುಣವಿರುವುದರಿಂದ ರಕ್ತಸ್ರಾವಕ್ಕೆ ಸುಲಭವಾಗುತ್ತದೆ. ಹಣ್ಣಾಗದ ಪಪ್ಪಾಯಿಯನ್ನು ಮೂರ್ನಾಲ್ಕು ತಿಂಗಳುಗಳ ಕಾಲ ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ, ಈ ಸಮಸ್ಯೆ ಹತೋಟಿಗೆ ಬರುತ್ತದೆ. ಮೂರ್ನಾಲ್ಕು ತಿಂಗಳುಗಳಾದರೂ ಹೀಗೆ ಮಾಡಬೇಕು. ಹಾಗೂ ಋತುಚಕ್ರದ ದಿನಗಳಲ್ಲಿ ಇವನ್ನು ಸೇವಿಸಬಾರದು.

ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

ಅರಿಶಿಣ

ಅರಿಶಿಣವು ಬಹಳ ಸಮಸ್ಯೆಗಳಿಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಮೂಲಿಕೆ. ಇದನ್ನು ನಿತ್ಯಜೀವನದಲ್ಲಿ ಹಲವು ಆಹಾರ ತಯಾರಿಕೆಗೆ ಬಳಸಿದರೂ ಇದನ್ನು ಔಷಧಿಯಾಗಿ ನಾವು ಸೇವಿಸುವ ಮೂಲಕವೂ ಹೆಚ್ಚಿನ ಲಾಭ ಪಡೆಯಬಹುದು. ಋತುಚಕ್ರದ ಸಮತೋಲನಕ್ಕೆ, ಹಾರ್ಮೋನಿ ಸಮಸ್ಯೆಯ ಸಮತೋಲನಕ್ಕೆ ಇತ್ಯಾದಿಗಳಿಗೆ ಅರಿಶಿನ ಒಳ್ಳೆಯ ಮದ್ದು. ಇದರಲ್ಲಿ ಉಷ್ಣಕಾರಕ ಗುಣವಿದೆ. ಆಂಟಿ ಇನ್‌ಫ್ಲಮೇಟರಿ ಗುಣಗಳೂ ಇವೆ. ನಿತ್ಯವೂ ಅರಿಶಿನ ಹಾಕಿದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೆಲವು ವಾರಗಳಲ್ಲಿ ನೀವು ಬದಲಾವಣೆಯ ಪ್ರತಿಫಲ ಕಾಣುವಿರಿ. ಕೇವಲ ಒದೊಂದೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಮಾಯವಾಗಿ ರೋಗ ನಿರೋಧಕತೆಯೂ ನಿಮ್ಮಲ್ಲಿ ಹೆಚ್ಚುತ್ತದೆ.

ಅಲೊವೆರಾ

ಅಲೊವೆರಾ ಋತುಚಕ್ರದ ಸಮಸ್ಯೆಗಳಿಗೆ ಒಳ್ಳೆಯ ಮನೆಮದ್ದು. ಹಾರ್ಮೋನಿನ ಏರುಪೇರನ್ನು ಇದು ಸಮತೋಲನಗೊಳಿಸಿ ಋತುಚಕ್ರದ ಸಮಸ್ಯೆಗಳಿಗೆ ಉತ್ತಮ ಫಲ ನೀಡುತ್ತದೆ. ಆದರೆ, ಋತುಚಕ್ರದ ಸಮಯದಲ್ಲಿ ಇದನ್ನು ಸೇವಿಸಬೇಡಿ. ಉಳಿದ ಸಮಯದಲ್ಲಿ, ಅಲೊವೆರಾ ಗಿಡದಿಂದ ಎಲೆಯನ್ನು ಕತ್ತರಿಸಿ ತೆಗೆದು ಅದರೊಳಗಿನ ಬಿಳಿ ಲೋಳೆಯನ್ನು ಮಾತ್ರ ತೆಗೆದು ಅದನ್ನು ನಿತ್ಯವೂ ಸೇವಿಸುತ್ತಾ ಬರಬಹುದು. ಬೇಕಿದ್ದರೆ ಇದನ್ನು ಜ್ಯೂಸ್‌ ಮಾಡಿ ನಿತ್ಯವೂ ಸೇವಿಸಬಹುದು

ಯೋಗ, ಧ್ಯಾನ

ನಿತ್ಯವೂ ಯೋಗಾಭ್ಯಾಸ ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಹಾರ್ಮೋನಿನ ಏರುಪೇರಿಗೆ ಬಹಳ ಸಾರಿ ಒತ್ತಡವೂ ಕಾರಣವಾಗಿರುತ್ತದೆ. ಧ್ಯಾನ ಹಾಗೂ ಯೋಗದಿಂದ ಒತ್ತಡವು ನಿವಾರಣೆಯಾಗಿ ಹಾರ್ಮೋನಿನ ಸಮಸ್ಯೆಯೂ ಹತೋಟಿಗೆ ಬರುತ್ತದೆ. ಅಷ್ಟೇ ಅಲ್ಲ, ಋತುಚಕ್ರದ ಸಮಸ್ಯೆಗಳಿಗಾಗಿಯೇ ಕೆಲವು ಆಸನಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ನಿಧಾನವಾಗಿ ಗೆದ್ದು ಆರೋಗ್ಯಕರ ಜೀವನದತ್ತ ಮುಖ ಮಾಡಬಹುದು.

ಶುಂಠಿ

ಹಸಿಯಾದ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಅಥವಾ ತುರಿದು ನೀರಲ್ಲಿ ಹಾಕಿ ಕುದಿಸಿ. ಸುಮಾರು ಐದು ನಿಮಿಷ ಕುದಿದ ನಂತರ ಅದನ್ನು ಸೋಸಿಕೊಂಡು ದಿನಕ್ಕೆ ಮೂರು ಬಾರಿ ಊಟದ ನಂತರ ಸೇವಿಸಿ. ಹೀಗೆ ಮಾಡುವುದರಿಂದ ಋತುಚಕ್ರದ ಸಮಸ್ಯೆಗಳು ಸಾಕಷ್ಟು ಹತೋಟಿಗೆ ಬರುತ್ತದೆ.

ಜೀರಿಗೆ

ಎರಡು ಚಮಚ ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಸೋಸಿಕೊಂಡು ಆ ನೀರನ್ನು ಕುಡಿಯುವುದರಿಂದಲೂ ಹಾರ್ಮೋನಿನ ಅಸಮತೋಲನ ನಿಯಂತ್ರಣಕ್ಕೆ ಬರುತ್ತದೆ.

ಚೆಕ್ಕೆ

ಬಿಸಿ ಹಾಲಿಗೆ ಚೆಕ್ಕೆ ಪುಡಿಯನ್ನು ಚಿಟಿಕೆಯಷ್ಟು ಸೇರಿಸಿ ಸೇವಿಸುವುದರಿಂದ ಹಾರ್ಮೋನಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಋತುಚಕ್ರದ ಸಂದರ್ಭದ ಮೈಕೈ ಸೆಲೆತ, ಹೊಟ್ಟೆನೋವಿನಂಥ ಸಮಸ್ಯೆಗಳೂ ಕಡಿಮೆಯಾಗುತ್ತದೆ.

Continue Reading

ಪ್ರಮುಖ ಸುದ್ದಿ

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Parenting Tips: ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

VISTARANEWS.COM


on

Parenting Tips
Koo

ಅಪ್ಪ ಅಮ್ಮನಾಗುವುದು ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ. ಆಗಷ್ಟೇ ಹೊಟ್ಟೆಯಿಂದ ಹೊರಬಂದ ಮಗುವಿಗೆ ಹೇಗೆ ಈ ಜಗತ್ತು ಹೊಸದೋ ಹಾಗೆಯೇ ಅಪ್ಪ ಅಮ್ಮಂದಿರಿಗೂ ಈ ಜಗತ್ತು ಹೊಸದೇ. ಮಗುವಿನ ಹಾಗೆ ಅವರೂ ಮಕ್ಕಳ ಲೋಕವನ್ನು ಕಣ್ಣು ಬಿಟ್ಟು ನೋಡಲು ಶುರು ಮಾಡುವ ಹೊತ್ತಿದು. ಮಗು ಬಂದ ಮೇಲೆ ಹೇಗಿರಬಹುದು ಎಂದು ಕನಸು ಕಾಣುತ್ತಾ ಒಂಬತ್ತು ತಿಂಗಳು ಕಳೆದ ಜೋಡಿಗೆ ಮಗುವಿನ ಲೋಕದ ಬಗ್ಗೆ ಕಂಡಿದ್ದ ಕನಸುಗಳೆಲ್ಲವೂ ಒಮ್ಮೆಲೆ ವಾಸ್ತವದಿಂದ ದೂರ ಇದೆ ಅನಿಸಬಹುದು. ಯಾಕೆಂದರೆ, ಆ ಸಮಯ ಬದುಕಿನ ಅತ್ಯಂತ ಮುಖ್ಯವಾದ ನೆನಪಿನಲ್ಲಿಟ್ಟುಕೊಳ್ಳುವ ಖುಷಿಯ ಗಳಿಗೆ ಎಂಬುದು ನಿಜವೇ ಆದರೂ, ಹೊಸ ಅಪ್ಪ ಅಮ್ಮಂದಿರಿಗೆ (Parenting Tips) ಈ ಹೊಸ ಲೋಕದಲ್ಲಿ ಸಾಕಷ್ಟು ಸವಾಲುಗಳು ದಿಢೀರ್‌ ಎದುರಾಗುತ್ತವೆ. ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ (Parents) ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

  1. ಮಗುವಿನ ಆಗಮನವಾದಾಗ ಅಷ್ಟರವರೆಗೆ ಮನೆಯಲ್ಲಿದ್ದ ಬದುಕಿನ ಕ್ರಮ, ವೇಳಾಪಟ್ಟಿ ಎಲ್ಲವೂ ಅಲ್ಲೋಲ ಕಲ್ಲೋಲವಾಗುತ್ತದೆ. ಇಂಥ ಸಂದರ್ಭ ಗಂಡ ತನ್ನ ಹೆಂಡತಿಯ ಬದಲಾದ ಹೊಸ ಪ್ರಪಂಚವನ್ನು ಪರಿಪೂರ್ಣ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಆಕೆಯ ದಿನಚರಿ ಸಂಪೂರ್ಣ ಬದಲಾಗಿರುತ್ತದೆಯಷ್ಟೇ ಅಲ್ಲ, ಆಕೆ, ಆಗಷ್ಟೇ ಹೆರಿಗೆಯಿಂದ ಮರುಜನ್ಮ ಪಡೆದಿರುತ್ತಾಳೆ. ಹೀಗಾಗಿ ಮಗುವಿಗೆ ಹೇಗೆ ಹೊಸ ಪ್ರಪಂಚವೋ ತಾಯಿಗೂ ಇದು ತಾಯಿಯಾಗಿ ಹೊಸ ಪ್ರಪಂಚ. ಹೊಸ ಜೀವದ ಪಾಲನೆ ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಗುವಿನ ಪಾಲನೆಯಲ್ಲಿ ಆಕೆಗೆ ನೆರವಿನ ಹಸ್ತವಾಗಿ ಗಂಡ ಯಾವಾಗಲೂ ಜೊತೆಗಿರಬೇಕು.
  2. ಮಾನಸಿಕವಾಗಿ, ದೈಹಿಕವಾಗಿ ಆತನ ಸಪೋರ್ಟ್‌ ಅತ್ಯಂತ ಅಗತ್ಯ. ಮುಖ್ಯವಾಗಿ ಹೆಂಡತಿಯ ನಿದ್ದೆಗಾಗಿ ಗಂಡನಾದವನು ಕೊಂಚ ತನ್ನ ನಿದ್ದೆಯನ್ನೂ, ಕೆಲಸದ ಒತ್ತಡವನ್ನೂ ಬದಿಗಿಡಬೇಕಾಗುತ್ತದೆ. ಹೆಂಡತಿ ಇಡೀ ದಿನ ಮಗುವನ್ನು ನೋಡಿಕೊಂಡು ಸುಸ್ತಾಗಿರುತ್ತಾಳೆ ಎಂಬುದನ್ನು ಅರಿತುಕೊಂಡು, ಕೆಲ ಗಂಟೆಗಳ ಕಾಲ ತಾನು ಮಗುವನ್ನು ನೋಡಿಕೊಳ್ಳುವುದು, ಆ ಸಮಯದಲ್ಲಿ ಹೆಂಡತಿ ಮಲಗುವುದು ಮಾಡಿದರೆ ಆಕೆಗೂ ವಿಶ್ರಾಂತಿ ಸಿಗುತ್ತದೆ. ರಾತ್ರಿಯಲ್ಲಿ ನಾಲ್ಕಾರು ಬಾರಿ ಎದ್ದು ಮಗುವಿಗೆ ಹಾಲುಣಿಸುವ ಸಂದರ್ಭ ಮಗುವಿನ ಅಮ್ಮನಿಗೆ ನಿದ್ದೆ ಸರಿಯಾಗಿ ಆಗಿರುವುದಿಲ್ಲ ಎಂಬುದನ್ನು ಅರಿಯುವ ಗಂಡನಿದ್ದರೆ ಹೆಂಡತಿಗೆ ಅದೇ ದೊಡ್ಡ ಸಪೋರ್ಟ್‌. ಒಂದಿಷ್ಟು ಹೊತ್ತು ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಗಂಡನಾದವನು ಹಂಚಿಕೊಂಡರೆ, ಅದು ದೊಡ್ಡ ಸಹಾಯವಾಗುತ್ತದೆ. ಉದಾಹರಣೆಗೆ ವೀಕೆಂಡಿನಲ್ಲಿ ಅಥವಾ ರಜಾ ದಿನಗಳಲ್ಲಿ, ಅಥವಾ ನಿತ್ಯವೂ ಅಪ್ಪ ಆಫೀಸಿನಿಂದ ಬಂದ ಮೇಲಿನ ಸ್ವಲ್ಪ ಹೊತ್ತು ಅಪ್ಪನ ಜೊತೆಗಿನ ಸಮಯ ಎಂದು ನಿಗದಿ ಮಾಡಿದರೆ ಕೊಂಚ ಅಮ್ಮನಿಗೂ ಸಮಯ ಸಿಗುತ್ತದೆ.
  3. ತಾಯಿಯಾದವಳು ಆರಂಭದಲ್ಲಿ ಮಗು ಮಲಗುವಾಗ ನಿದ್ದೆ ಮಾಡಿಬಿಡಬೇಕು. ಇದು ಹಿರಿಯರಾದಿಯಾಗಿ ಎಲ್ಲರೂ ನೀಡುವ ಬೆಸ್ಟ್‌ ಸಲಹೆ. ಯಾಕೆಂದರೆ, ಮಗು ಎದ್ದರೆ, ಆಕೆಗೆ ನಿದ್ದೆ ಸಿಗದು. ಮಗುವಿಗೆ ಒಂದು ನಿಗದಿತ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಅದೇ ಸಮಯದಲ್ಲಿ ಬೇರೆ ಕೆಲಸಗಳಿಗೆ ಕೈ ಹಾಕದೆ, ನಿದ್ದೆಯ ಮೇಲೆ ಗಮನ ಕೊಡುವುದು ಹೊಸ ತಾಯಂದಿರಿಗೆ ಅತ್ಯಂತ ಸೂಕ್ತ.
  4. ಬಾಟಲಿ ಹಾಲೂ ಅಭ್ಯಾಸ ಮಾಡಿ. ಎದೆ ಹಾಲು ಕುಡಿಸುವುದು ಒಂದು ದಿವ್ಯ ಅನುಭವ ಹೌದಾದರೂ ಅದು ಬೆಳೆಯುತ್ತಾ ಹೋದ ಮೇಲೆ ಕಷ್ಟ. ಆರಂಭದ ಆರು ತಿಂಗಳಲ್ಲಿ ಎದೆ ಹಾಲೇ ಹೆಚ್ಚು ಕುಡಿಸಿದರೂ ನಂತರ ನಿಧಾನವಾಗಿ ಬಾಟಲಿಯನ್ನು ಮಧ್ಯೆ ಮಧ್ಯೆ ಅಭ್ಯಾಸ ಮಾಡಿಸಿದರೆ, ಅಮ್ಮ ಹೊರಗೆ ಹೋಗಬೇಕಾದಾಗ ಸುಲಭವಾಗುತ್ತದೆ. ಮಗು ಬೇಗನೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ.
  5. ತೂಗುವ ತೊಟ್ಟಿಲನ್ನು ಮಗುವಿಗೆ ಬಳಸಿ. ಮಗುವನ್ನು ತೂಗಿ ಮಲಗಿಸುವುದನ್ನು ಅಭ್ಯಾಸ ಮಾಡಿ. ಕೈಯಲ್ಲಿ ಹಿಡಿದೇ ಮಲಗಿಸುವುದನ್ನು ಅಭ್ಯಾಸ ಮಾಡಿಸಿ ಬಿಟ್ಟರೆ ಮಗು ಬೇಗನೆ ಅಮ್ಮನ ಬೆಚ್ಚನೆಯ ಸ್ಪರ್ಶಕ್ಕೇ ಹೊಂದಿಕೊಂಡು ಬಿಡುತ್ತದೆ. ಅಮ್ಮ ಇಲ್ಲದಿದ್ದರೆ, ಸ್ಪರ್ಶ ಸಿಗದಿದ್ದರೆ ನಿದ್ದೆ ಮಾಡುವುದೇ ಇಲ್ಲ.
  6. ಮಗುವಿಗೆ ಹಾಲುಣಿಸುವ ಸಂದರ್ಭ ಆಗಾಗ ಏಳುವ ಕಾರಣ ಅಮ್ಮಂದಿರಿಗೆ ಹಸಿವಾಗುತ್ತದೆ. ಇಂತಹ ಸಂದರ್ಭಕ್ಕಾಗಿ, ಒಂದಿಷ್ಟು ಆರೋಗ್ಯಕರ ಹಣ್ಣು, ಒಣಹಣ್ಣು- ಬೀಜಗಳು ಇತ್ಯಾದಿಗಳನ್ನು ಜೊತೆಗಿಡಿ. ಇಲ್ಲವಾದರೆ ಹಾಲುಣಿಸುವ ತಾಯಿಗೇ ನಿಶ್ಯಕ್ತಿಯ ಸಮಸ್ಯೆ ಆರಂಭವಾಗುತ್ತದೆ.

ಇದನ್ನೂ ಓದಿ | Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Continue Reading

Latest

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Apple With sticker: ಸೇಬು ಹಣ್ಣು ಎಂದರೆ ಯಾರಿಗೆ ಇಷ್ಟವಿರಲ್ಲ? ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಇರುತ್ತಾರೆ. ಇದೆಲ್ಲಾ ಸರಿ ಮಾರುಕಟ್ಟೆಯಲ್ಲಿ ಹಣ್ಣು ತರಲು ಹೋದಾಗ ಈ ಸೇಬು ಹಣ್ಣುಗಳ ಮೇಲೆ ಚಿಕ್ಕದಾದ ಸ್ಟಿಕ್ಕರ್‌ವೊಂದು ಹಚ್ಚಿರುತ್ತಾರೆ ಅಲ್ವಾ ಅದರ ಹಿಂದಿರುವ ರಹಸ್ಯವೇನೆಂದು ನಿಮಗೆ ಗೊತ್ತಾ? ಆ ಭಾಗ ಹಾಳಾದ ಕಾರಣ ಸ್ಟಿಕರ್‌ನಿಂದ ಮುಚ್ಚಿರುತ್ತಾರೆ ಎನ್ನುತ್ತಾರೆ ಕೆಲವರು ಅದರ ನಿಜವಾದ ಕಾರಣ ಬೇರೆಯೇ ಇದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Apple With sticker
Koo

ಬೆಂಗಳೂರು : ಮಾರುಕಟ್ಟೆಯಲ್ಲಿ ಸೇಬುಹಣ್ಣುಗಳು ಹಲವು ವಿಧಗಳಲ್ಲಿ ಕಂಡುಬರುತ್ತದೆ. ಕೆಲವು ಸೇಬುಗಳು ಹಸಿರು ಬಣ್ಣದಲ್ಲಿರುತ್ತದೆ. ಕೆಲವು ಸೇಬುಗಳು ಕೆಂಪು ಬಣ್ಣದಲ್ಲಿರುತ್ತದೆ. ಹಾಗೇ ಕೆಲವು ಸೇಬು ಹಣ್ಣಿನ (Apple With sticker) ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವರು ಅದು ಉತ್ತಮವಾಗಿರುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಅದು ಹಾಳಾದ ಕಾರಣ ಆ ಭಾಗವನ್ನು ಸ್ಟಿಕರ್ ನಿಂದ ಮುಚ್ಚಿದ್ದಾರೆ ಎಂದು ಭಾವಿಸುತ್ತಾರೆ. ಸೇಬಿನ ಮೇಲೆ ಸ್ಟಿಕ್ಕರ್ ಯಾಕೆ ಅಂಟಿಸುತ್ತಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸ್ಟಿಕ್ಕರ್ ಇರುವ ಸೇಬು ಒಳ್ಳೆಯ ಗುಣಮಟ್ಟದಾಗಿರುತ್ತದೆ ಮತ್ತು ಅದಕ್ಕೆ ಬೆಲೆ ಕೂಡ ಹೆಚ್ಚು ಎಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ ವಾಸ್ತವಾಗಿ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತ ಭಾಗವನ್ನು ಮರೆಮಾಚಲು ಸ್ಟಿಕ್ಕರ್ ಅನ್ನು ಅಂಟಿಸಿರುವುದಿಲ್ಲ.

ತಜ್ಞರು ತಿಳಿಸಿದ ಪ್ರಕಾರ, ಸೇಬು ಮಾತ್ರವಲ್ಲ ಕಿತ್ತಳೆ ಹಣ್ಣುಗಳನ್ನು ಸಹ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಸ್ಟಿಕ್ಕರ್ ನೋಡಿದವರು ಅದು ದುಬಾರಿ ಎಂದು ಭಾವಿಸುತ್ತಾರೆ. ಆದರೆ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯಂತೆ. ಹಾಗಾಗಿ ನೀವು ಸೇಬು ಖರೀದಿಸುವಾಗ ಅದರ ಮೇಲಿರುವ ಸ್ಟಿಕ್ಕರ್ ಅನ್ನು ಓದಿ.

ಸೇಬಿನ ಮೇಲಿನ ಸ್ಟಿಕ್ಕರ್‌ನಲ್ಲಿ ಸೇಬಿನ ಗುಣಮಟ್ಟ ಹಾಗೂ ಅದನ್ನು ಹೇಗೆ ಬೆಳೆಸಲಾಗಿದೆ ಎಂಬುದರ ಕುರಿತು ಮಾಹಿತಿ ಇದೆಯಂತೆ. ಕೆಲವು ಸ್ಟಿಕ್ಕರ್ ಗಳ ಮೇಲೆ ನಾಲ್ಕು ಸಂಖ್ಯೆಯ ನಂಬರ್ ಇರುತ್ತದೆ. ಅಂದರೆ ಅವು 4026 ಅಥವಾ 4987 ನಂತಹ ಸಂಖ್ಯೆ ಇರುತ್ತದೆ. ಇದು ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆಯಂತೆ. ಈ ಹಣ್ಣುಗಳ ಮೇಲೆ ಕೀಟನಾಶಕವನ್ನು ಹೆಚ್ಚಾಗಿ ಬಳಸಿರುತ್ತಾರಂತೆ. ಈ ಹಣ್ಣು ಅಗ್ಗವಾಗಿರುತ್ತದೆ.

ಕೆಲವು ಹಣ್ಣುಗಳ ಮೇಲೆ ಐದು ಅಂಕಿಯ ಸಂಖ್ಯೆಯನ್ನು ಬರೆಯಲಾಗುತ್ತದೆ. ಅಂದರೆ 84131 ಅಥವಾ 86532 ಹೀಗೆ 8ರಿಂದ ಪ್ರಾರಂಭವಾಗುವ ನಂಬರ್ ಇರುತ್ತದೆ. ಈ ಹಣ್ಣುಗಳು ನೈಸರ್ಗಿಕವಲ್ಲ. ಇವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿದ್ದು, ಇದು ತುಂಬಾ ದುಬಾರಿಯಾಗಿರುತ್ತದೆ.

ಕೆಲವು ಹಣ್ಣುಗಳಲ್ಲಿ 9ರಿಂದ ಪ್ರಾರಂಭವಾಗುವ ಐದು ಅಂಕಿಯ ನಂಬರ್ ಇರುತ್ತದೆ. ಅದು 93435 ಇರುತ್ತದೆ. ಈ ಹಣ್ಣು ಸಾವಯವವಾಗಿ ಬೆಳೆದಿರುತ್ತದೆ. ಇದಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಬಳಸಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಬೆಲೆ ಜಾಸ್ತಿಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

ಹೀಗೆ ಒಂದೊಂದು ಸ್ಟಿಕ್ಕರ್‌ಗೂ ಬೇರೆ ಬೇರೆ ಅರ್ಥವಿದ್ದರೂ ಕೂಡ ಕೆಲವೊಮ್ಮೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಯಾವುದೇ ಹಣ್ಣುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

Continue Reading
Advertisement
Actor Darshan of many acquaintance unknown of darshan
ಸ್ಯಾಂಡಲ್ ವುಡ್5 mins ago

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Lok Sabha Election Result
Lok Sabha Election 20249 mins ago

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Flesh-Eating Bacteria
ಆರೋಗ್ಯ20 mins ago

Flesh-Eating Bacteria: ಆತಂಕ ಮೂಡಿಸಿದ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಸೋಂಕು ತಗುಲಿದ 48 ಗಂಟೆಯಲ್ಲೇ ಸಾವು!

CM Siddaramaiah and Vidhanasoudha
ಪ್ರಮುಖ ಸುದ್ದಿ28 mins ago

CM Siddaramaiah: 370 ನಿವೃತ್ತ ಅಧಿಕಾರಿಗಳಿಗೆ ಬಾಗಿಲು ತೋರಿಸಿದ ಸರಕಾರ

Euro 2024
ಕ್ರೀಡೆ35 mins ago

Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Nayana Nagaraj ginirama serial fame got married with suhas
ಕಿರುತೆರೆ36 mins ago

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Auto Launches
ಆಟೋಮೊಬೈಲ್40 mins ago

Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!

Irregular Periods problem Here are some simple home remedies
ಆರೋಗ್ಯ56 mins ago

Irregular Periods: ಏರುಪೇರಾದ ಋತುಚಕ್ರದ ಸಮಸ್ಯೆಯೇ? ಇಲ್ಲಿವೆ ಸರಳ ಮನೆಮದ್ದುಗಳು!

Drowned in river
ಕ್ರೈಂ1 hour ago

Drowned: ಈಜಲು ಹೋಗಿ ಬಾಲಕರು ನೀರುಪಾಲು; ಕಮಲ ಕೊಯ್ಯಲು ಹೋಗಿ ಕೆಸರಿನಲ್ಲಿ ವ್ಯಕ್ತಿ ಸಮಾಧಿ

Himanta Biswa Sarma
ದೇಶ1 hour ago

ಅಸ್ಸಾಂನಲ್ಲಿ ʼವಿಐಪಿ ಸಂಸ್ಕೃತಿʼಗೆ ಬ್ರೇಕ್‌ ಹಾಕಲು ಮುಂದಾದ ಸಿಎಂ ಹಿಮಂತ ಬಿಸ್ವಾ; ತಮ್ಮ ವಿದ್ಯುತ್‌ ಬಿಲ್‌ ತಾವೇ ಪಾವತಿಸುವುದಾಗಿ ಘೋಷಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ15 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ16 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ21 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌