Riva Arora | 12 ವರ್ಷದ ಹುಡುಗಿ ರಿವಾ ಅರೋರಾ ರೊಮ್ಯಾಂಟಿಕ್​ ದೃಶ್ಯಗಳ ಬಗ್ಗೆ ನೆಟ್ಟಿಗರ ತಕರಾರು; ವಯಸ್ಸು ವಿವಾದ ! - Vistara News

ಬಾಲಿವುಡ್

Riva Arora | 12 ವರ್ಷದ ಹುಡುಗಿ ರಿವಾ ಅರೋರಾ ರೊಮ್ಯಾಂಟಿಕ್​ ದೃಶ್ಯಗಳ ಬಗ್ಗೆ ನೆಟ್ಟಿಗರ ತಕರಾರು; ವಯಸ್ಸು ವಿವಾದ !

ರಿವಾ ಅರೋರಾ ಬಗ್ಗೆ ಸತತವಾಗಿ ಬರುತ್ತಿರುವ ನೆಗೆಟಿವ್ ಕಮೆಂಟ್​ಗಳಿಂದ ಬೇಸತ್ತ ಅವರ ತಾಯಿ ನಿಶಾ ಅರೋರಾ ಅವರು, ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಅತ್ಯಂತ ಬೇಸರದಿಂದ ಇನ್ಸ್ಟಾದಲ್ಲಿ ಪೋಸ್ಟ್​ ಹಾಕಿದ್ದಾರೆ.

VISTARANEWS.COM


on

criticism over Riva Arora Age Mother Reacts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉರಿ-ದಿ ಸರ್ಜಿಕಲ್​ ಸ್ಟ್ರೈಕ್​, ಸೆಕ್ಷನ್​ 375 ಮತ್ತಿತರ ಸಿನಿಮಾಗಳಲ್ಲಿ ನಟಿಸಿರುವ ರಿವಾ ಅರೋರಾ ಸುತ್ತ ವಿವಾದವೊಂದು ಎದ್ದಿದೆ. ಅವಳಿನ್ನೂ 12 ವರ್ಷದ ಬಾಲಕಿಯಾಗಿದ್ದರೂ ಆಕೆ ತನಗಿಂತಲೂ ತುಂಬ ದೊಡ್ಡವರ ಜತೆ ರೊಮ್ಯಾಂಟಿಕ್​ ದೃಶ್ಯಗಳಲ್ಲಿ ನಟಿಸುತ್ತಾಳೆ. ಆ ವಿಡಿಯೊಗಳೆಲ್ಲ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತವೆ ಎಂಬುದು ಅನೇಕರ ಆಕ್ಷೇಪ. ಇತ್ತೀಚೆಗೆ ಕರಣ್​ ಕುಂದ್ರಾ ಜತೆ ರಿವಾ ಅರೋರಾ ಒಂದು ರಿಲೇಶನ್​ಶಿಪ್​ ಬಗೆಗಿನ ವಿಡಿಯೊ ಮಾಡಿದ್ದರು. ಅದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಿದ್ದರು. ರಿವಾಗೆ 12 ವರ್ಷ, ಕರಣ್​​ಗೆ 38 ವರ್ಷ. ಅವರಿಬ್ಬರೂ ಸೇರಿ ರಿಲೇಶನ್​ಶಿಪ್​ ವಿಡಿಯೊ ಮಾಡುತ್ತಾರೆ. ರಿವಾ ಬರ್ತ್​ ಡೇ ಪಾರ್ಟಿಯಲ್ಲಿ ಕೂಡ ಅವಳಿಗಿಂತ ತುಂಬ ದೊಡ್ಡ ಪುರುಷರೇ ಸುತ್ತುಗಟ್ಟಿರುತ್ತಾರೆ ಎಂಬಿತ್ಯಾದಿ ಚರ್ಚೆಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಲೇ ಇದ್ದಾರೆ.

ಹೀಗೆ ರಿವಾ ಅರೋರಾ ಬಗ್ಗೆ ಸತತವಾಗಿ ಬರುತ್ತಿರುವ ನೆಗೆಟಿವ್ ಕಮೆಂಟ್​ಗಳಿಂದ ಬೇಸತ್ತ ಅವರ ತಾಯಿ ನಿಶಾ ಅರೋರಾ ಅವರು, ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಮಗಳು ರಿವಾ ವಯಸ್ಸಿನ ಬಗ್ಗೆ ಹುರುಳಿಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ‘ನಾನು ತುಂಬ ತಾಳ್ಮೆಯಿಂದ ಇದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ನಿಲ್ಲುತ್ತಿಲ್ಲ. ಸುಳ್ಳು ಸುದ್ದಿಗಳು ಅತ್ಯಂತ ವೇಗವಾಗಿ ಹರಡುತ್ತವೆ. ಹಲವು ಪ್ರತಿಷ್ಠಿತ ಸೋಷಿಯಲ್ ಮೀಡಿಯಾ ಅಕೌಂಟ್​ಗಳು, ಚಾನೆಲ್​​ಗಳೂ ಸುಳ್ಳು ಸುದ್ದಿಯನ್ನೇ ಭಿತ್ತರಿಸುತ್ತಿವೆ. ಇದು ನನಗೆ ಅತ್ಯಂತ ಬೇಸರ ಮೂಡಿಸಿದೆ. ಹೀಗೆಲ್ಲ ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಅನುಮಾನ ಇದ್ದವರು ನನ್ನನ್ನೊಮ್ಮೆ ಸಂಪರ್ಕಿಸಬಹುದಿತ್ತಲ್ಲ !,ನನ್ನ ಮಗಳು ನಟಿ. ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾಳೆ’ ಎಂದು ನಿಶಾ ಅರೋರಾ ಬರೆದುಕೊಂಡಿದ್ದಾರೆ. ಇನ್ನು ತಾಯಿ ನಿಶಾ ಹಾಕಿದ ಪೋಸ್ಟ್​ನ್ನು ರಿವಾ ಕೂಡ ರೀ-ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಷಯದ ಬಗ್ಗೆ ಇಂಡಿಯಾ ಫೋರಮ್​ ಜತೆ ಮಾತನಾಡಿದ ನಿಶಾ ಅರೋರಾ, ‘ನನ್ನ ಮಗಳೀಗ 10ನೇ ತರಗತಿ ಓದುತ್ತಿದ್ದಾಳೆ. 13 ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿ ಇದ್ದಾಳೆ. ತುಂಬ ಪರಿಶ್ರಮ ವಹಿಸಿ ಸಾಧನೆ ಮಾಡಿದ್ದಾಳೆ’ ಎಂದು ಹೇಳಿದ್ದಾರೆ.

ರಿವಾ ಅವರು ಉರಿ-ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದಲ್ಲಿ ನಟಿಸಿದ್ದಳು. ಅದರಲ್ಲಿ ಹುತಾತ್ಮ ಸೈನಿಕನೊಬ್ಬನ ಪುತ್ರಿಯಾಗಿ ನಟಿಸಿ, ಅಪಾರ ಹೊಗಳಿಕೆಗೆ ಪಾತ್ರವಾಗಿದ್ದಳು. ಅಷ್ಟೇ ಅಲ್ಲ, ಮಣಿಕರ್ಣಿಕಾ-ದಿ ಕ್ವೀನ್ ಆಫ್​ ಝಾನ್ಸಿ, ಭಾರತ್​, ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್​ ಎಂಬಿತ್ಯಾದಿ ಪ್ರಮುಖ ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಆದರೆ ಇತ್ತೀಚೆಗೆ ವಯಸ್ಸಿಗೂ ಮೀರಿದ ವಿಡಿಯೊಗಳನ್ನು ಆಕೆ ಮಾಡುತ್ತಿದ್ದಾಳೆ ಎಂಬುದೇ ಚರ್ಚೆಗೆ ಗ್ರಾಸವಾಗಿದ್ದ ವಿಷಯ.

ಇದನ್ನೂ ಓದಿ: Celebrities Halloween Look | ಹಾಲೋವೀನ್‌ ಪಾರ್ಟಿಯಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳ ವಿಯರ್ಡ್ ಲುಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kiran Bedi: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್‌: ಕುಶಾಲ್ ಚಾವ್ಲಾ ಆ್ಯಕ್ಷನ್‌ ಕಟ್‌!

Kiran Bedi: ಈ ಬಯೋಪಿಕ್‌ (Kiran Bedi) ಸಿನಿಮಾ ನಮ್ಮ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ (Indias first IPS officer) ಆಗಿರುವ ( BEDI: The Name You Know. The Story You Don’t) ಕಿರಣ್‌ ಬೇಡಿ ಕುರಿತಾಗಿ ಇದೆ. ಕುಶಾಲ್ ಚಾವ್ಲಾ ಅವರು ಬರೆದು ನಿರ್ದೇಶಿಸಿದ ಈ ಸಿನಿಮಾ ಬೇಡಿ ಅವರ ವೃತ್ತಿಜೀವನ ಕುರಿತು ಇದೆ.

VISTARANEWS.COM


on

Kiran Bedi announces her biopic by director Kushaal Chawla
Koo

ಬೆಂಗಳೂರು: ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅಧಿಕೃತವಾಗಿ ಬಹು ನಿರೀಕ್ಷಿತ ಬಯೋಪಿಕ್ ‘ಬೇಡಿ: ದಿ ನೇಮ್ ಯು ನೋ. ದ ಸ್ಟೋರಿ ಯು ಡೋಂಟ್’ ಸಿನಿಮಾ ಘೋಷಿಸಿದೆ. ಈ ಬಯೋಪಿಕ್‌ (Kiran Bedi) ಸಿನಿಮಾ ನಮ್ಮ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ (Indias first IPS officer) ಆಗಿರುವ ( BEDI: The Name You Know. The Story You Don’t) ಕಿರಣ್‌ ಬೇಡಿ ಕುರಿತಾಗಿ ಇದೆ. ಕುಶಾಲ್ ಚಾವ್ಲಾ ಅವರು ಬರೆದು ನಿರ್ದೇಶಿಸಿದ ಈ ಸಿನಿಮಾ ಬೇಡಿ ಅವರ ವೃತ್ತಿಜೀವನ ಕುರಿತು ಇದೆ.

ಈ ಬಗ್ಗೆ ಕಿರಣ್ ಬೇಡಿ ಮಾತನಾಡಿ ʻʻಈ ಕಥೆ ಕೇವಲ ನನ್ನ ಕಥೆಯಲ್ಲ. ಇದು ಭಾರತೀಯ ಮಹಿಳೆಯ ಕಥೆ-ಭಾರತದಲ್ಲಿ ಬೆಳೆದ, ಭಾರತದಲ್ಲಿ ಅಧ್ಯಯನ ಮಾಡಿದ, ಭಾರತೀಯ ಪೋಷಕರಿಂದ ಬೆಳೆದ ಮತ್ತು ತನ್ನ ವೃತ್ತಿಜೀವನದುದ್ದಕ್ಕೂ ಭಾರತದ ಜನರಿಗಾಗಿ ಕೆಲಸ ಮಾಡಿದ ಭಾರತೀಯ ಮಹಿಳೆಯ ಕಥೆ. ನಾವು ಈ ಚಿತ್ರವನ್ನು 50ನೇ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ, ಇದು ನಮ್ಮ ಶ್ರೇಷ್ಠ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಭಾರತೀಯ ಮಹಿಳೆಯ ಕಥೆಯಾಗಿದೆʼʼಎಂದರು.

ಕುಶಾಲ್ ಚಾವ್ಲಾ ಮಾತನಾಡಿ ʻʻಈ ಚಿತ್ರವು ಪ್ರೀತಿಯ ಶ್ರಮ. ನಾಲ್ಕು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿ ಮಾಡಿರುವ ಸಿನಿಮಾ. ಡಾ.ಕಿರಣ್ ಬೇಡಿಯವರ ಜೀವನದ ಕುರಿತು ಸಿನಿಮಾ ಮಾಡಿ ನಿರ್ದೇಶಿಸಿರುವುದು ನನ್ನ ಸೌಭಾಗ್ಯ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು, ಹಾಗೇ ಅವರ ವಿಶ್ವಾಸವನ್ನು ಗಳಿಸಿರುವುದು ನನಗೆ ಆಶೀರ್ವಾದವಾಗಿದೆʼʼ ಎಂದರು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಕಿರಣ್ ಬೇಡಿ ಎಂಬ ಕ್ರಾಂತಿಯ ಕಿಡಿ, 73 ವರ್ಷದ ಆಕೆ ಇಂದಿಗೂ ದೇಶದ ಯೂತ್‌ ಐಕಾನ್‌!

ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನಾಧಾರಿತ ಬೇಡಿಯ ಮೋಷನ್ ಪೋಸ್ಟರ್ ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅಡಿಯಲ್ಲಿ ಗೌರವ್ ಚಾವ್ಲಾ ನಿರ್ಮಿಸಿದ್ದಾರೆ. ಇನ್ನು ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ ಆಗಿಲ್ಲ.

ಭಾರತದ ವಿವಿಧ ಭಾಷೆಗಳಲ್ಲಿ ಕಿರಣ್‌ ಬೇಡಿ ಹೆಸರಲ್ಲಿ ಬಂದಿರುವ ಪೊಲೀಸ್ ಸಿನೆಮಾಗಳು ಬೇರೆ ಯಾರ ಹೆಸರಲ್ಲಿ ಕೂಡ ಬಂದಿರುವ ಉದಾಹರಣೆ ಇಲ್ಲ. ಇಡೀ ದೇಶದ ಯೂತ್‌ ಐಕಾನ್‌ ಆಗಿದ್ದಾರೆ ಕಿರಣ್‌. ಹೆಣ್ಮಕ್ಕಳ ಪಾಲಿಗಂತೂ ಆತ್ಮವಿಶ್ವಾಸದ ಪ್ರತೀಕ. ಯಾವುದೇ ಮಹಿಳಾ ಚರ್ಚೆ ಆಕೆಯ ಹೆಸರೆತ್ತದೆ ಮುಕ್ತಾಯವಾಗುವುದು ಸಾಧ್ಯವೇ ಇಲ್ಲ.

ಕಿರಣ್ ಬೇಡಿ ಮಾಡಿದ ಈ ಜೈಲು ಸುಧಾರಣೆಯ ಕ್ರಮಗಳು ಜಗತ್ತಿನಲ್ಲಿಯೇ ವಿನೂತನ ಆಗಿದ್ದವು. ಅದರಿಂದ ದೇಶದ, ವಿದೇಶದ ಮಾಧ್ಯಮಗಳು ಆಕೆಯ ಬಗ್ಗೆ, ತಿಹಾರ್ ಜೈಲಿನ ಸುಧಾರಣ ಕ್ರಮಗಳ ಬಗ್ಗೆ ಲೀಡ್ ಲೇಖನ ಬರೆದವು. ಆಗ ಭಾರೀ ಇಂಪ್ರೆಸ್ ಆದ ಅಮೆರಿಕಾದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಕೆಗೆ ಪತ್ರ ಬರೆದು ಶುಭಾಶಯ ಹೇಳಿದರು. ಮತ್ತು ಅವರ ಜೊತೆ ಒಮ್ಮೆ ಊಟ ಮಾಡಬೇಕು ಅಂತ ಆಸೆ ವ್ಯಕ್ತ ಪಡಿಸಿದರು! ಆಕೆಗೆ ಜಾಗತಿಕ ಮಟ್ಟದ ‘ಮ್ಯಾಗ್ಸೆಸೆ ಪ್ರಶಸ್ತಿ’ಯು ದೊರೆಯಿತು. ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತು. ಮುಂದೆ ನಿವೃತ್ತರಾದ ನಂತರ ಅವರು ಪಾಂಡಿಚೇರಿಯ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದರು

Continue Reading

ಬಾಲಿವುಡ್

Aamir Khan: 200 ಕ್ಕೂ ಹೆಚ್ಚು ಅತಿಥಿಗಳೊಂದಿಗೆ ತಾಯಿಯ ಜನುಮದಿನ ಸೆಲೆಬ್ರೆಟ್‌ ಮಾಡಲಿದ್ದಾರೆ ಆಮೀರ್‌!

Aamir Khan : ಆಮೀರ್ ಕಳೆದ ವರ್ಷ ತಾಯಿ ಜೀನತ್‌ ಚಿಕಿತ್ಸೆ ಪಡೆಯುತ್ತಿದ್ದರಿಂದ ಚೆನ್ನೈಗೆ ತೆರಳಿದ್ದರು ಎಂದು ವರದಿಯಾಗಿದೆ. ಜೀನತ್ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಕೀಯ ಕೇಂದ್ರದ ಸಮೀಪವಿರುವ ಹೋಟೆಲ್‌ನಲ್ಲಿ ಆಮೀರ್ ತಂಗಿದ್ದರು. ಇನ್ನು 2023ರಲ್ಲಿ ಜೀನತ್ ಅವರ 89ನೇ ಹುಟ್ಟುಹಬ್ಬವನ್ನು ಆಚರಿಸಲು ಆಮೀರ್ ಮತ್ತು ಅವರ ಕುಟುಂಬ ಸದಸ್ಯರು ಒಟ್ಟಾಗಿ ಪಾರ್ಟಿ ಮಾಡಿದ್ದರು. ಮುಂಬೈನ ಮನೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಂಜಾಬಿ ಗಾಯಕಿ ಪ್ರತಿಭಾ ಸಿಂಗ್ ಬಾಘೆಲ್ ಅವರು ಈ ಹಿಂದೆ ಪಾರ್ಟಿಯ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.

VISTARANEWS.COM


on

Aamir Khan to fly in over 200 relatives and friends for mom Zeenat's grand 90th birthday
Koo

ಬೆಂಗಳೂರು: ನಟ ಆಮೀರ್ ಖಾನ್ (Aamir Khan) ತಾಯಿ ಜೀನತ್ ಹುಸೇನ್ ಅವರ 90ನೇ ಹುಟ್ಟುಹಬ್ಬವನ್ನು 200 ಕ್ಕೂ ಹೆಚ್ಚು ಅತಿಥಿಗಳೊಂದಿಗೆ ಆಚರಿಸಲು ಸಿದ್ಧವಾಗಿದ್ದಾರೆ ಎಂದು ವರದಿಯಾಗಿದೆ. ಆಚರಣೆಯಲ್ಲಿ ಬನಾರಸ್, ಬೆಂಗಳೂರು, ಲಕ್ನೋ, ಮೈಸೂರು ಮತ್ತು ಇತರ ನಗರಗಳಿಂದ ಸಂಬಂಧಿಕರು (Zeenat’s grand 90th birthday ) ಸೇರಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಒಂದು ವರ್ಷದಿಂದ ಆಮೀರ್‌ ತಾಯಿ ಅಸ್ವಸ್ಥಳಾಗಿದ್ದರು. ಈಗ ಜೀನತ್‌ ಅವರು ಚೇತರಿಸಿಕೊಂಡಿದ್ದ ಕಾರಣ ಆಮೀರ್‌ ಅದ್ಧೂರಿಯಾಗಿ ಸೆಲೆಬ್ರೆಟ್‌ ಮಾಡಬೇಕೆಂದಿದ್ದಾರೆ ಎನ್ನಲಾಗಿದೆ.

“ಜೂನ್ 13 ರಂದು ಆಮೀರ್ ಖಾನ್ ಅಮ್ಮನ ಜನುಮದಿನದ ಅಂಗವಾಗಿ ವಿವಿಧ ನಗರಗಳಿಂದ 200ಕ್ಕೂ ಹೆಚ್ಚು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ಒಂದು ವರ್ಷದಿಂದ ಆಮೀರ್‌ ತಾಯಿ ಅಸ್ವಸ್ಥಳಾಗಿದ್ದರು. ಈಗ ಅವರು ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಹೀಗಾಗಿ ಆಮೀರ್‌ ಗೆಟ್-ಟುಗೆದರ್ ಮಾಡಲು ಬಯಸಿದ್ದರು. ಈ ವಿಶೇಷ ದಿನವನ್ನು ಆಚರಿಸಲು ಬನಾರಸ್, ಬೆಂಗಳೂರು, ಲಕ್ನೋ, ಮೈಸೂರು ಮತ್ತು ಇತರ ನಗರಗಳಿಂದ ಜನರು ಬರುತ್ತಿದ್ದಾರೆʼʼ ಎಂದು ವರದಿಯಾಗಿದೆ.

ಆಮೀರ್ ಕಳೆದ ವರ್ಷ ತಾಯಿ ಜೀನತ್‌ ಚಿಕಿತ್ಸೆ ಪಡೆಯುತ್ತಿದ್ದರಿಂದ ಚೆನ್ನೈಗೆ ತೆರಳಿದ್ದರು ಎಂದು ವರದಿಯಾಗಿದೆ. ಜೀನತ್ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಕೀಯ ಕೇಂದ್ರದ ಸಮೀಪವಿರುವ ಹೋಟೆಲ್‌ನಲ್ಲಿ ಆಮೀರ್ ತಂಗಿದ್ದರು. ಇನ್ನು 2023ರಲ್ಲಿ ಜೀನತ್ ಅವರ 89ನೇ ಹುಟ್ಟುಹಬ್ಬವನ್ನು ಆಚರಿಸಲು ಆಮೀರ್ ಮತ್ತು ಅವರ ಕುಟುಂಬ ಸದಸ್ಯರು ಒಟ್ಟಾಗಿ ಪಾರ್ಟಿ ಮಾಡಿದ್ದರು. ಮುಂಬೈನ ಮನೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಂಜಾಬಿ ಗಾಯಕಿ ಪ್ರತಿಭಾ ಸಿಂಗ್ ಬಾಘೆಲ್ ಅವರು ಈ ಹಿಂದೆ ಪಾರ್ಟಿಯ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Aamir Khan: ವಡೋದರಾದಲ್ಲಿ ‘ಸಿತಾರೆ ಜಮೀನ್ ಪರ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆಮೀರ್‌ ಖಾನ್‌!

`ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮೀರ್‌ ಖಾನ್‌ (Aamir Khan) ಮುಂದಿನ ಪ್ರಾಜೆಕ್ಟ್‌ ಘೋಷಿಸಿದ್ದರು. ಅದುವೇ ‘ಸಿತಾರೆ ಜಮೀನ್ ಪರ್’. 2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇದೀಗ ಆಮೀರ್ ಖಾನ್ ದೆಹಲಿಯಲ್ಲಿ ಚಿತ್ರೀಕರಣದ ನಂತರ, ಗುಜರಾತ್‌ನ ವಡೋದರದಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿತಾರೆ ಜಮೀನ್ ಪರ್ ಚಿತ್ರದ ಬ್ಯಾಕ್-ಟು-ಬ್ಯಾಕ್ ಚಿತ್ರೀಕರಣದಲ್ಲಿ ಆಮೀರ್ ಖಾನ್ ನಿರತರಾಗಿದ್ದಾರೆ. ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿದ ನಂತರ, ಅವರು ಈಗ ಬರೋಡದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸೂಪರ್‌ಸ್ಟಾರ್ ಬಿಸಿಲಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.” ಸಿತಾರೆ ಜಮೀನ್ ಪರ್ ಚಿತ್ರವನ್ನು ಆರ್ ಎಸ್ ಪ್ರಸನ್ನ ಅವರು ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ದರ್ಶೀಲ್ ಸಫಾರಿ ಕೂಡ ನಟಿಸಿದ್ದಾರೆ.

Continue Reading

ಸಿನಿಮಾ

Shatrughan Sinha: ಮುಸ್ಲಿಂ ಯುವಕನ ಜತೆ ಮಗಳ ವಿವಾಹ; ನಟ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ಏನು?

Shatrughan Sinha: ʼದಬಾಂಗ್‌ʼ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಸೋನಾಕ್ಷಿ ಸಿನ್ಹಾ ಸದ್ಯ ಹಸೆಮಣೆಗೇರುವ ಸಿದ್ಧತೆಯಲ್ಲಿದ್ದಾರೆ. ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ಮಗಳ ಮದುವೆ ಬಗ್ಗೆ ಮಾತನಾಡಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಆಮಂತ್ರಿಸಿದರೆ ಖಂಡಿತವಾಗಿಯೂ ತೆರಳುವುದಾಗಿ ಹೇಳಿದ್ದಾರೆ.

VISTARANEWS.COM


on

Shatrughan Sinha
Koo

ಮುಂಬೈ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ (Zaheer Iqbal) ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಮಧ್ಯೆ ಮಗಳ ಮದುವೆ ಬಗ್ಗೆ ಮಾತನಾಡಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ (Shatrughan Sinha) ಅವರು, ʼʼಮದುವೆ ಬಗ್ಗೆ ಸೋನಾಕ್ಷಿ ತಮ್ಮ ಬಳಿ ಏನನ್ನೂ ಹೇಳಿಕೊಂಡಿಲ್ಲ. ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಅವಳು ಆಮಂತ್ರಿಸಿದರೆ ಖಂಡಿತವಾಗಿಯೂ ತೆರಳಿ ಆಶೀರ್ವದಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʼʼನಾನೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದೆ. ನನ್ನ ಮಗಳ ಬಗ್ಗೆ, ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ಎಂದಿಗೂ ನಾವು ಬಯಸುತ್ತೇವೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋನಾಕ್ಷಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದೂ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವಳು ಪ್ರಬುದ್ಧೆಯಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋನಾಕ್ಷಿ 2010ರಲ್ಲಿ ಸಲ್ಮಾನ್‌ ಖಾನ್‌ ಅಭಿನಯದ ʻದಬಾಂಗ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ. ಇತ್ತೀಚೆಗೆ ತೆರೆಕಂಡ ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಈ ಹಿಂದೆ ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹಾ ಕೆಲವು ವರ್ಷಗಳ ಹಿಂದೆ ಹೊರ ಬಂದಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದ ಅಸೋಲ್‌ ಕ್ಷೇತ್ರದಿಂದ ಟಿಎಂಸಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ವಿರುದ್ಧ 59,564 ಮತಗಳ ಅಂತರದಿಂದ ಗೆದ್ದಿದ್ದಾರೆ.

Continue Reading

ಸಿನಿಮಾ

Noor Malabika Das: ಕಾಜೋಲ್‌ ಜತೆ ನಟಿಸಿದ್ದ, ದಿ ಟ್ರಯಲ್‌ ಖ್ಯಾತಿಯ ಬಾಲಿವುಡ್‌ ನಟಿ ದಾಸ್‌ ಆತ್ಮಹತ್ಯೆ

Noor Malabika Das: ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲೂ ಅವರು ಸಕ್ರಿಯರಾಗಿದ್ದರು. ಆದರೆ, ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

VISTARANEWS.COM


on

Noor Malabika Das
Koo

ಮುಂಬೈ: ಬಾಲಿವುಡ್‌ ನಟಿ ಕಾಜೋಲ್‌ ಅಭಿನಯದ ದಿ ಟ್ರಯಲ್‌ (The Trial) ವೆಬ್‌ ಸಿರೀಸ್‌ ಖ್ಯಾತಿ ನಟಿ ನೂರ್‌ ಮಾಳವಿಕಾ ದಾಸ್‌ (Noor Malabika Das) ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಲೋಖಂಡ್‌ವಾಲಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 32 ವರ್ಷದ ಬಾಲಿವುಡ್‌ ನಟಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್‌ 6ರಂದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜೂನ್‌ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಅಕ್ಕಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡುಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಫ್ಲ್ಯಾಟ್‌ ಬಾಗಿಲು ತೆಗೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಅಂಧೇರಿಯ ಓಶ್ವಿವಾರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ನಟಿಯು ವಾಸವಿದ್ದರು.

ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರಲ್ಲೂ, ದಿ ಟ್ರಯಲ್‌ ವೆಬ್‌ಸಿರೀಸ್‌ ಅವರಿಗೆ ಹೆಚ್ಚು ಹೆಸರು ತಂದುಕೊಂಡಿತ್ತು. ಕಾಜೋಲ್‌ ಜತೆ ಅವರು ತೆರೆ ಹಂಚಿಕೊಂಡಿದ್ದರು. ಅವರು ನಟಿಸಿದ ಕೆಲ ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ ಎಂದು ತಿಳಿದುಬಂದಿದೆ.

ಅಸ್ಸಾಂ ಮೂಲದವರಾದ ನೂರ್‌ ಮಾಳವಿಕಾ ದಾಸ್‌ ಅವರು ನಟನೆಗೆ ಕಾಲಿಡುವ ಮೊದಲು ಕತಾರ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 1.63 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ನಟಿಯು ಆಗಾಗ ಫೋಟೊ ಹಾಗೂ ವಿಡಿಯೊಗಳನ್ನು ಪೋಸ್ಟ್‌ ಮಾಡುತ್ತ ಸಕ್ರಿಯರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ನಟಿಯು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಕೂಡ ಮಾಡಿದ್ದರು. ಇಷ್ಟೆಲ್ಲ ಸಕ್ರಿಯರಾಗಿದ್ದ ನಟಿಯು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ತಿಳಿದುಬಂದಿಲ್ಲ.

ಇದನ್ನೂ ಓದಿ: ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Continue Reading
Advertisement
Actor Darshan
ಕರ್ನಾಟಕ2 mins ago

Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

Kiran Bedi announces her biopic by director Kushaal Chawla
ಬಾಲಿವುಡ್11 mins ago

Kiran Bedi: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್‌: ಕುಶಾಲ್ ಚಾವ್ಲಾ ಆ್ಯಕ್ಷನ್‌ ಕಟ್‌!

mayank agarwal
ಕ್ರೀಡೆ11 mins ago

Mayank Agarwal: ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌

Rahul Gandhi
ದೇಶ12 mins ago

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Narendra Modi
ದೇಶ39 mins ago

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Kuwait fire
ಪ್ರಮುಖ ಸುದ್ದಿ46 mins ago

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

IND vs USA
ಕ್ರಿಕೆಟ್48 mins ago

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

Kathua Terror Attack
ದೇಶ51 mins ago

Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Teachers Recruitment
ಪ್ರಮುಖ ಸುದ್ದಿ53 mins ago

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Dolly Dhananjay mana manakke Kotee Movie release
ಸ್ಯಾಂಡಲ್ ವುಡ್1 hour ago

Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌