ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ ಬಸ್‌ ಹತ್ತಿದಾಗ ನಿರ್ವಾಹಕರಿಗೆ ಹೃದಯಾಘಾತ, ಸಾವು - Vistara News

ಹುಬ್ಬಳ್ಳಿ

ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ ಬಸ್‌ ಹತ್ತಿದಾಗ ನಿರ್ವಾಹಕರಿಗೆ ಹೃದಯಾಘಾತ, ಸಾವು

ಟಿಕೆಟ್‌ ಚೆಕಿಂಗ್‌ ಇನ್‌ಸ್ಪೆಕ್ಟರ್‌ ಬಸ್‌ ಹತ್ತುತ್ತಿದ್ದಂತೆ ನಿರ್ವಾಹಕರಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

VISTARANEWS.COM


on

bus conductor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಬಸ್ ಟಿಕೆಟ್ ಚೆಕ್ಕಿಂಗ್ ಇನ್‌ಸ್ಪೆಕ್ಟರ್ ಬಸ್ ಹತ್ತುತ್ತಿದ್ದಂತೆ ನಿರ್ವಾಹಕರಿಗೆ ತೀವ್ರ ಹೃದಯಾಘಾತವಾಗಿದ್ದು, ನಂತರ ಮೃತಪಟ್ಟ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.

ಮಹೇಶ್ ಹೂಗಾರ (40) ಮೃತ ಬಸ್ ಕಂಡಕ್ಟರ್. ಸಿಬಿಟಿಯಿಂದ ಗಾಮನಗಟ್ಟಿಗೆ ಹೊರಟಿದ್ದ ಬಸ್ಸಿನ ನಿರ್ವಾಹಕರಾಗಿದ್ದರು. ಬಿವಿಬಿ ಬಸ್‌ಸ್ಟಾಪ್‌ನಲ್ಲಿ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಮಂಗಲಾ ಹೊಸಮನಿ ತಪಾಸಣೆಗಾಗಿ ಬಸ್ ಹತ್ತಿದ್ದರು. ಇದೇ ಸಮಯದಲ್ಲಿ ಕಂಡಕ್ಟರ್ ಮಹೇಶ ಹೂಗಾರ ಬಸ್‌ನಲ್ಲಿ ಎದೆ ನೋವಿನಿಂದ ಕುಸಿದುಬಿದ್ದಿದ್ದು, ತಕ್ಷಣ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Renuka swamy Murder : ಟೀಕೆಗೆಲ್ಲ ಕೊಲೆ ಮಾಡುವುದಾದರೆ ಗಂಟೆಗೊಂದು ಹೆಣ ಬೀಳುತ್ತಿತ್ತು- ಸಿಟಿ ರವಿ

Renuka swamy Murder case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಆ್ಯಂಡ್‌ ಗ್ಯಾಂಗ್‌ ಅರೆಸ್ಟ್‌ ಆಗಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಮೈಸೂರಿನಲ್ಲಿ ನಟ ದರ್ಶನ್‌ನನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುವಂತೆ ಪ್ರತಿಭಟಿಸಲಾಗಿದೆ.

VISTARANEWS.COM


on

By

Renuka swamy murder case
Koo

ಚಿಕ್ಕಮಗಳೂರು/ಮೈಸೂರು/ಹುಬ್ಬಳ್ಳಿ: ರೇಣುಕಾಸ್ವಾಮಿ ಎಂಬಾತ (Renuka swamy Murder) ಕೊಲೆ ಕೇಸ್‌ನಲ್ಲಿ ಸೆರೆಯಾಗಿರುವ ನಟ ದರ್ಶನ್ (Actor Darshan) ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದರು. ಸಿನಿಮಾದಲ್ಲಿ ಹೀರೋ ಆದವರೆಲ್ಲ ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ. ದರ್ಶನ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದರು ಅನ್ನಿಸುತ್ತದೆ.

ನಮ್ಮ ಪಕ್ಷದವರು ರೇಣುಕಾಸ್ವಾಮಿ ಕುಟುಂಬದ ಜತೆ ಇದೆ, ಅವರಿಗೆ ನ್ಯಾಯ ಸಿಗಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು. ರಾಜಕಾರಣಿಗಳ ಮೇಲಿನ ಟೀಕೆಗೆಲ್ಲ ಆ ರೀತಿಯೇ ಮಾಡುವುದಾದರೆ ಗಂಟೆಗೊಂದು ಹೆಣ ಬೀಳುತ್ತಿತ್ತು. ಆ ಕ್ರೌರ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.

ನಟ ದರ್ಶನ್‌ಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡುತ್ತಿದ್ದಾರೆ ಎನ್ನುವ ಸಂದೇಶವೇ ಒಳ್ಳೆದಲ್ಲ. ಆ ರೀತಿ ಇದ್ದರೆ ಬಲ ಇದ್ದವನಿಗೆ, ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ: Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!

ಅವನು ಮನುಷ್ಯನೋ.. ರಾಕ್ಷಸನೋ – ಶಾಸಕ ಅರವಿಂದ ಬೆಲ್ಲದ್‌ ವಾಗ್ದಾಳಿ

ದರ್ಶನ ವಿರುದ್ಧ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು. ನಟ ದರ್ಶನ್‌ ಮಾಡಿರುವ ಕೆಲಸ ನೋಡಿದರೆ, ಅವನು ಮನುಷ್ಯನೋ ಅಥವಾ ರಾಕ್ಷಸನೋ ಎಂಬುದು ತಿಳಿಯುತ್ತಿಲ್ಲ. ದರ್ಶನ್‌ನನ್ನು ಕೃಷಿ ರಾಯಭಾರಿ‌ಯನ್ನಾಗಿ ಮಾಡಲಾಗಿತ್ತು. ಈ ಸರ್ಕಾರ ಮಾಡುತ್ತಿರುವ ತಪ್ಪು ಒಂದಲ್ಲ ಎರಡಲ್ಲ. ಸಮಾಜ ವಿರೋಧಿ, ಕ್ರಿಮಿನಲ್ ಕೆಲಸ ಮಾಡುತ್ತಿರುವವರಿಗೆ ರಾಜಾತಿಥ್ಯ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ – ಜಗದೀಶ್‌ ಶೆಟ್ಟರ್‌

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಹಾಗೂ ಸಹಚರರು ಸೆರೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನುನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ಕೊಲೆ ಯಾಕೆ ಮಾಡಬೇಕು . ಅದಕ್ಕಾಗಿಯೇ ಸೈಬರ್ ಕ್ರೈಂ ಇದೆ, ಅಲ್ಲಿ ದೂರು ಕೊಡಬಹುದಿತ್ತು. ಒಬ್ಬ ಸಿನಿಮಾ ನಟ ಆ ವ್ಯಕ್ತಿಯನ್ನು ಕೊಲೆ ಮಾಡಬಾರದಿತ್ತು. ನಟ ಆಗಲಿ ಸಾಮಾನ್ಯ ಜನರಾಗಲಿ ಅಪರಾಧ ಮಾಡಿದಾಗ ತಾರತಮ್ಯ ಮಾಡಬಾರದು ಎಂದರು.

ನಟರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು- ಜಯ ಮೃತ್ಯುಂಜಯ ಸ್ವಾಮೀಜಿ

ಕಲಾವಿದರ ಬದುಕು ಮತ್ತು ಬರಹ ಒಂದೆ ಆಗಿರಬೇಕು. ಪರದೆ ಮೇಲಿನ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದಕುವ ಪ್ರಯತ್ನ ಮಾಡಬೇಕು. ಪರದೇ ಮೇಲೆ ಒಂದು ನಟನೆ, ಪರದೇ ಹಿಂದೆ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೋಳ್ಳಬೇಕು. ಡಾ ರಾಜಕುಮಾರ, ಡಾ ವಿಷ್ಣುವರ್ಧನ್‌ ಆದರ್ಶವಾಗಿದ್ದಾರೆ. ಅಂತಹ ಮಹಾನ್‌ ನಟರಂತೆ ಎಲ್ಲರಿಗೂ ಆದರ್ಶವಾಗಬೇಕು ಎಂದರು.

ಇದನ್ನೂ ಓದಿ: Renuka Swamy Murder:‌ ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!

ಚಿತ್ರರಂಗದಿಂದ ಬ್ಯಾನ್‌ ಮಾಡಿ

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಖಂಡಿಸಿ ಮೈಸೂರಿನ ತಿ.ನರಸೀಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟ ಪ್ರತಿಭಟಿಸಿದೆ. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು ನಟ ದರ್ಶನ್‌ ಚಿತ್ರರಂಗದಿಂದ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿದರು.

ನಟ ದರ್ಶನ್‌ ಚಿತ್ರಗಳು ತೆರೆಯ ಮೇಲೆ ಬರದಂತೆ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರವು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Rain news : ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಆದರೆ ಕರಾವಳಿ ಭಾಗದಲ್ಲಿ ವರುಣಾರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಭಾನುವಾರ ರಾಜ್ಯಾದ್ಯಂತ ಕೆಲವೆಡೆ ಮಳೆಯ ಸಿಂಚನವಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ (Rain News) ಗುಡುಗು ಸಾಥ್‌ ನೀಡಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಜೂನ್‌ 16ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು, ವಿಜಯಪುರ, ಯಾದಗಿರಿಯ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಇದನ್ನೂ ಓದಿ: Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

ಮತ್ತೊಂದು ವಾರ ಮಳೆ ಎಚ್ಚರಿಕೆ ಕೊಟ್ಟ ತಜ್ಞರು

ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ತಜ್ಞರು ಕೊಟ್ಟಿದ್ದಾರೆ. ಮೊದಲ ಮೂರು ದಿನ ಅಂದರೆ ಜೂ. 17, 18, 19 ರಂದು ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಹಗುರದಿಂದ ಕೂಡಿರಲಿದೆ.

ಬಳಿಕ ಜೂನ್‌ 20 ಮತ್ತು 21ರಂದು ಕರಾವಳಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದೆಡೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಜಲಾಶಯಗಳ ನೀರಿನ ಮಟ್ಟ ಹೀಗಿದೆ

karnataka weather Forecast Dam Level

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Pralhad Joshi: ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ ಎಂದು ಖಂಡಿಸಿದ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್‌ ಜೋಶಿ, ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಟೀಕಿಸಿದ್ದಾರೆ.

VISTARANEWS.COM


on

Union Minister Pralhad Joshi statement about increase in petrol and diesel prices in the state
Koo

ಹುಬ್ಬಳ್ಳಿ: ರಾಜ್ಯದಲ್ಲಿ ಗ್ಯಾರಂಟಿ ಗ್ಯಾರಂಟಿ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ ಸರ್ಕಾರ ಈಗ ತೈಲ ಬೆಲೆ ಏರಿಸುವ ಮೂಲಕ ಜನರ ಕೈಗೆ ಅಕ್ಷರಶಃ ಚೊಂಬು ಕೊಟ್ಟಿದೆ ನೋಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi), ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

ರಾಜ್ಯದಲ್ಲಿ ಅಭಿವೃದ್ಧಿ ಮಾತ್ರ ಕೇಳ್ಬೇಡಿ, ತಗೊಳ್ರಪ್ಪ ಕೊಟ್ರು ಚೊಂಬು ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದ ಸಚಿವರು, ಬೆಲೆ ಏರಿಕೆ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸಿ ಜನರ ದಿಕ್ಕು ತಪ್ಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರಾಜ್ಯದ ಜನಸಾಮಾನ್ಯರಿಗೆ ತಾನೇ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಸಚಿವ ಜೋಶಿ ಕಿಡಿಕಾರಿದರು.

ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ ಎಂದು ಖಂಡಿಸಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ 1.5 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಂಡಿಲ್ಲ. ಈಗ ನೇರವಾಗಿ ಜನರ ಜೇಬಿಗೇ ಕತ್ತರಿ ಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.

Continue Reading

ಮಳೆ

Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

Karnataka Weather Forecast : ರಾಜ್ಯಾದ್ಯಂತ ಮಳೆ (Rain News) ಪ್ರಮಾಣ ತಗ್ಗಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು (Rain News) ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಕೆಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದೆರಡು ಸ್ಥಳಗಳಲ್ಲಿ (Karnataka Weather Forecast) ಮಳೆಯಾಗಿದೆ.

ಎಲ್ಲೆಲ್ಲಿ ಮಳೆಯ ಸಿಂಚನ

ಉತ್ತರ ಒಳನಾಡು, ಕರಾವಳಿಯ ಕೆಲವೆಡೆ ಮಳೆಯಾಗಿರುವ ವರದಿ ಆಗಿದೆ. ರಾಯಚೂರಿನ ಗಬ್ಬೂರಿನಲ್ಲಿ 6 ಸೆಂ.ಮೀ, ಉಡುಪಿ, ಶೋರಾಪುರ, ಸೈದಾಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಅಂಕೋಲಾ, ಗೋಕರ್ಣ, ಕುಮಟಾ , ಕೆಂಭಾವಿ , ತಾವರಗೇರಾ , ಮುದಗಲ್, ಮಂಠಾಳದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಕೋಟ, ಹೊನಾವರ ವೀಕ್ಷಣಾಲಯ , ಕಾರ್ಕಳ, ಸಿದ್ದಾಪುರ, ಮಂಕಿ, ಯಲ್ಲಾಪುರ, ಯಡ್ರಾಮಿ ಸೇರಿದಂತೆ ದೇವದುರ್ಗ, ಕವಡಿಮಟ್ಟಿ ಎ.ಆ‌ರ್.ಜಿ, ಮಸ್ಕಿ, ಕಲಬುರಗಿ ವೀಕ್ಷಣಾಲಯ , ಕಕ್ಕೇರಿ, ಕಮಲಾಪುರ, ಮಾನ್ವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಗುಡುಗು ಸಹಿತ ಮಳೆ ಎಚ್ಚರಿಕೆ

ಜೂನ್‌ 16ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಳನಾಡಿನ ಕೆಲವು ಸ್ಥಳಗಳಲ್ಲಿ ಕೆಲವೊಮ್ಮೆ ಗುಡುಗು ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ತಗ್ಗಿದೆ. ಮೀನುಗಾರರಿಗೆ ನೀಡಲಾಗಿದ್ದ ಸೂಚನೆಯು ಮುಗಿದಿದೆ.

ರಾಜಧಾನಿ ಬೆಂಗಳೂರಿನಲ್ಲಿ ತಣ್ಣನೆಯ ವಾತಾವರಣ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಪ್ರತ್ಯೇಕ ಸ್ಥಳದಲ್ಲಿ ಗುಡುಗು ಸಹಿತ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?

Vitamin C foods

ವಿಟಮಿನ್‌ ಸಿ ಆಹಾರಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ginger

ಶುಂಠಿ

ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂಟಲಲ್ಲಿ ನೋವಿದ್ದರೆ ಬೆಚ್ಚಗಿನ ಶುಂಠಿಯ ಕಷಾಯಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿದರೆ ಆರಾಮ ದೊರೆತೀತು.

iamge of Zinc Foods

ಜಿಂಕ್‌ ಆಹಾರಗಳು

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವಿನಂಶ ಇರುವ ಆಹಾರಗಳು ಸಹ ಅಗತ್ಯ. ಇದನ್ನು ಸಿ ಜೀವಸತ್ವದಂತೆ ಹೇರಳವಾಗಿ ಪಡೆಯಲಾಗದು. ಬದಲಿಗೆ, ಹಲವಾರು ಆಹಾರಗಳಿಂದ ಮಿಲಿ ಗ್ರಾಂ ಗಳ ಲೆಕ್ಕದಲ್ಲಿಯೇ ಪಡೆಯಬೇಕು ನಾವು. ಇದಕ್ಕಾಗಿ ಅಣಬೆಗಳು, ಪಾಲಕ್‌ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ಹಾಲು, ಗೋಡಂಬಿ, ಕುಂಬಳಕಾಯಿ ಬೀಜ, ಶೇಂಗಾ, ಬಾದಾಮಿಯಂಥ ಆಹಾರಗಳ ಮೂಲಕ ಈ ಸತ್ವವನ್ನು ಪಡೆಯಬಹುದು.

ಒಮೇಗಾ 3 ಕೊಬ್ಬಿನಾಮ್ಲ

ಇದು ನಮ್ಮ ಮೆದುಳು ಮತ್ತು ಹೃದಯದ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಸೋಂಕುಗಳನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದಕ್ಕಾಗಿ ಮಳೆಗಾಲದ ಆರಂಭದಲ್ಲಿ ದೊರೆಯುವ ಬೆಣ್ಣೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಜೊತೆಗೆ ವಾಲ್‌ನಟ್‌, ಬಾದಾಮಿ, ಅಗಸೆಬೀಜ, ಕೊಬ್ಬಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ ೩ ಕೊಬ್ಬಿನಾಮ್ಲ ವಿಫುಲವಾಗಿ ಲಭಿಸುತ್ತದೆ.

Probiotic foods

ಪ್ರೊಬಯಾಟಿಕ್‌ ಆಹಾರಗಳು

ನಮ್ಮ ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ದೇಹದ ಪ್ರತಿರೋಧಕ ಶಕ್ತಿ ಬಲವಾಗಿರುತ್ತದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಭರಪೂರ ಇದ್ದಷ್ಟೂ ದೇಹ ರೋಗಮುಕ್ತವಾಗಿರುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಹಾಗಾಗಿ ಪ್ರೊಬಯಾಟಿಕ್‌ ಆಹಾರಗಳು ನಮ್ಮ ದೇಹಕ್ಕೆ ಬೇಕೇಬೇಕು. ಇದಕ್ಕಾಗಿ ಮೊಸರು, ಮಜ್ಜಿಗೆಯಂಥ ಹುದುಗು ಬರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿ.

infusions

ಕಷಾಯಗಳು

ಶೀತದ ದಿನಗಳಲ್ಲಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದಕ್ಕೆ ತರಹೇವಾರಿ ಕಷಾಯಗಳನ್ನು ಮಾಡಿಕೊಳ್ಳಬಹುದು. ಇದರಿಂದಲೂ ನಮ್ಮ ದೇಹದ ಸೋಂಕು ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದಕ್ಕಾಗಿ ಯಾವೆಲ್ಲ ವಸ್ತುಗಳನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಉಪಯುಕ್ತ ವಿವರಗಳು ಇಲ್ಲಿವೆ. ಈ ಯಾವುದೇ ವಸ್ತುಗಳನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.

Raw Turmeric with Powder Cutout

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಸೋಂಕುಗಳನ್ನು ಹೊಡೆದೋಡಿಸುತ್ತದೆ

Benefits Of Ginger

ಶುಂಠಿ

ಇದರ ಜಿಂಜರಾಲ್‌ ಅಂಶದಲ್ಲಿ ಉರಿಯೂತ ಶಮನ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ

Garlic

ಬೆಳ್ಳುಳ್ಳಿ

ಇದರ ಅಲ್ಲಿಸಿನ್‌ ಅಂಶದಲ್ಲಿ ವೈರಸ್‌ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣವಿದೆ

Cinnamon sticks Anti Infective Foods

ದಾಲ್ಚಿನ್ನಿ ಚಕ್ಕೆ

ಇದರಲ್ಲಿರುವ ಉರಿಯೂತ ಶಾಮಕ ಸತ್ವಗಳು ರೋಗನಿರೋಧಕವೂ ಹೌದು

black pepper

ಕಾಳು ಮೆಣಸು

ಇದರ ಕ್ಯಾಪ್ಸೈಸಿನ್‌ನಲ್ಲಿ ದೇಹದ ಪ್ರತಿರೋಧಕತೆಯನ್ನು ವೃದ್ಧಿಸುವ ಸಾಮರ್ಥ್ಯವಿದೆ

cumin

ಜೀರಿಗೆ

ಇದರ ಉತ್ಕರ್ಷಣ ನಿರೋಧಕಗಳು ಸೋಂಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ

coriander Coriander Benefits

ಧನಿಯ

ಇದರ ಉತ್ಕರ್ಷಣ ನಿರೋಧಕ ಸತ್ವಗಳು ಸೋಂಕುಗಳನ್ನು ನಿವಾರಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Petrol Diesel Price
ಕರ್ನಾಟಕ24 mins ago

Petrol Diesel Price: ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ ಕಾಂಗ್ರೆಸ್ ಸರ್ಕಾರ: ಆರ್‌. ಅಶೋಕ್‌ ಕಿಡಿ

Renuka swamy murder
ಚಿತ್ರದುರ್ಗ44 mins ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Road Accident
ಕರ್ನಾಟಕ52 mins ago

Road Accident: ಸುಂಟಿಕೊಪ್ಪ‌ ಬಳಿ ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

Kannada New Movie Chowkidar pruthvi ambaar
ಸಿನಿಮಾ1 hour ago

Kannada New Movie: ಪೃಥ್ವಿ ಅಂಬಾರ್ ಈಗ ‘ಚೌಕಿದಾರ್’: ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಹೊಸ ಹೆಜ್ಜೆ!

Patna Boat Accident
ದೇಶ1 hour ago

Patna Boat Accident: ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

Sachin Tendulkar
ಕ್ರೀಡೆ1 hour ago

Sachin Tendulkar: ವಿಶ್ವ ಅಪ್ಪಂದಿರ ದಿನದಂದು ವಿಶೇಷ ಫೋಟೊ ಹಂಚಿಕೊಂಡು ಭಾವುಕರಾದ ಸಚಿನ್​ ತೆಂಡೂಲ್ಕರ್​

Petrol Diesel Price
ಪ್ರಮುಖ ಸುದ್ದಿ2 hours ago

Petrol Diesel Price: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ: ಸಿಎಂ ಸಮರ್ಥನೆ

Child Marriage
ವಿದೇಶ2 hours ago

12ರ ಹರೆಯದ ಮಗಳನ್ನು 5 ಲಕ್ಷ ರೂ.ಗೆ ಮಾರಿ 72 ವರ್ಷದ ವೃದ್ಧನೊಂದಿಗೆ ಮದುವೆ ಮಾಡಿಸಲು ಮುಂದಾದ ಪಾಪಿ ತಂದೆ!

EVM Row
ದೇಶ2 hours ago

EVM Row: ಮೊಬೈಲ್‌ ಬಳಸಿ ಇವಿಎಂ ಅನ್‌ಲಾಕ್‌ ಮಾಡಿದ ಸಂಸದನ ಸಂಬಂಧಿ; ಎಲ್ಲಿ ನಡೆಯಿತು ಮೋಸ?

Vijayalakshmi Darshan Reactivated Instagram Account
ಸ್ಯಾಂಡಲ್ ವುಡ್2 hours ago

Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renuka swamy murder
ಚಿತ್ರದುರ್ಗ44 mins ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

ಟ್ರೆಂಡಿಂಗ್‌