Invest Karnataka 2022 | ಬ್ರ್ಯಾಂಡ್‌ ಬೆಂಗಳೂರು ಈಗ ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದ ಮೋದಿ - Vistara News

ಇನ್ವೆಸ್ಟ್ ಕರ್ನಾಟಕ

Invest Karnataka 2022 | ಬ್ರ್ಯಾಂಡ್‌ ಬೆಂಗಳೂರು ಈಗ ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದ ಮೋದಿ

invest karnatka 2022 ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಬ್ರ್ಯಾಂಡ್‌ ಬೆಂಗಳೂರು ಎನ್ನುವುದು ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬ್ರ್ಯಾಂಡ್‌ ಬೆಂಗಳೂರು ಎನ್ನುವುದು ಈಗ ಕೇವಲ ಭಾರತೀಯ ಪರಿಕಲ್ಪನೆಯಲ್ಲ. ಇಡೀ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಪ್ರಪಂಚದಾದ್ಯಂತದ ಔದ್ಯಮಿಕ ಕಂಪನಿಗಳು ಈಗ ಹೂಡಿಕೆಗಾಗಿ ಬೆಂಗಳೂರಿನತ್ತ ನೋಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್‌ ಕರ್ನಾಟಕ- invest karnataka 2022 ಸಮಾವೇಶದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಭೆ ಮತ್ತು ತಂತ್ರಜ್ಞಾನ (Talent and technology) ವಿಷಯ ಬಂದಾಗ ನನಗೆ ಮೊದಲು ನೆನಪಾಗುವ ಹೆಸರೇ ಬ್ರ್ಯಾಂಡ್‌ ಬೆಂಗಳೂರು ಎಂದರು ಪ್ರಧಾನಿ ಮೋದಿ.

ನಮ್ಮ ಬೆಂಗಳೂರಿಗೆ ಸ್ವಾಗತ ಎಂದೇ ಮಾತು ಆರಂಭಿಸಿದ ಪ್ರಧಾನಿ ಅವರು, ʻʻಕರ್ನಾಟಕವು ನಿನ್ನೆಯಷ್ಟೇ ರಾಜ್ಯೋತ್ಸವವನ್ನು ಆಚರಿಸಿದೆ. ಇಡೀ ದೇಶದ ಜನರನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿರುವ ಕರ್ನಾಟಕದ ಜನತೆಗೆ ಅಭಿನಂದನೆʼʼ ಎಂದು ಹೇಳಿದರು.

ಕರ್ನಾಟಕದ ಜನಜೀವನ, ತಾಂತ್ರಿಕ ಶಕ್ತಿ, ಔದ್ಯಮಿಕ ಬೆಳವಣಿಗೆಯ ವೇಗ ಮತ್ತು ಎಲ್ಲ ವಿಭಾಗಗಳಲ್ಲೂ ಸಾಧಿಸಿರುವ ಪ್ರಗತಿಯನ್ನು ಕೊಂಡಾಡಿದ ಮೋದಿ ಅವರು, ಇಲ್ಲಿ ಟ್ರೆಡಿಷನ್‌ ಮತ್ತು ಟೆಕ್ನಾಲಜಿ (ಸಂಪ್ರದಾಯ ಮತ್ತು ತಂತ್ರಜ್ಞಾನ) ಜತೆಗೂಡಿದೆ. ನೇಚರ್‌ ಮತ್ತು ಕಲ್ಚರ್‌ (ಪ್ರಕೃತಿ ಮತ್ತು ಸಂಸ್ಕೃತಿ)ಗಳ ಸಂಗಮವಾಗಿದೆ. ಒಂದು ಕಡೆ ಅದ್ಭುತ ಶಿಲ್ಪಕಲೆ (ಆರ್ಕಿಟೆಕ್ಚರ್‌) ಇದ್ದರೆ, ಇನ್ನೊಂದು ಕಡೆಯಲ್ಲಿ ಸ್ಟಾರ್ಟಪ್‌ ಇದೆ ಎಂದರು.

ಕನ್ನಡ ನಾಡು ಎನ್ನುವುದು ಅಪೂರ್ವ ಸೌಂದರ್ಯದ ನೆಲೆವೀಡು ಎಂದು ಬಣ್ಣಿಸಿದ ಅವರು, ಮೃದು ಭಾಷೆಯಾದ ಕನ್ನಡ, ಅತ್ಯಂತ ಸಮೃದ್ಧವಾದ ಇಲ್ಲಿನ ಸಂಸ್ಕೃತಿ, ಮತ್ತು ಜನರ ನಡವಳಿಕೆ ಎಲ್ಲರ ಮನ ಗೆಲ್ಲುತ್ತದೆ ಎಂದು ಹೇಳಿದರು. ಇಲ್ಲಿನ ಎಲ್ಲ ವ್ಯವಸ್ಥೆಗಳು ಒಂದು ಕಡೆಯಲ್ಲಿ ಸ್ಪರ್ಧಾತ್ಮಕ (ಕಾಂಪಿಟಿಟಿವ್‌) ಆಗಿದ್ದರೆ ಅದೇ ಹೊತ್ತಿಗೆ ಪರಸ್ಪರ ಸಹಕಾರಿ (ಕೋ-ಆಪರೇಟಿವ್‌) ಆಗಿವೆ ಎಂದು ಹೇಳಿದದು ಮೋದಿ.

ಡಬಲ್‌ ಎಂಜಿನ್‌ ಪವರ್‌
ಕರ್ನಾಟಕದ ಅಭಿವೃದ್ಧಿಗೆ ಇಷ್ಟೊಂದು ವೇಗ ಸಿಕ್ಕಿರುವುದಕ್ಕೆ ಕಾರಣ ಡಬಲ್‌ ಎಂಜಿನ್‌ ಪವರ್‌ ಎಂದು ಮೋದಿ ಉಲ್ಲೇಖಿಸಿದರು. ʻʻಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಪವರ್‌ ಇದೆ. ಎರಡೂ ಕಡೆ ಒಂದೇ ಪಕ್ಷದ ಸರಕಾರವಿದೆ. ಹೀಗಾಗಿ ಅಭಿವೃದ್ಧಿಗೆ ಪೂರಕವಾಗಿದೆʼʼ ಎಂದರು. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಕರ್ನಾಟಕ ದೇಶದಲ್ಲೇ ಉನ್ನತ ಶ್ರೇಣಿಯ ರಾಜ್ಯಗಳಲ್ಲಿ ಒಂದಾಗಿದೆ. ವಿದೇಶಿ ನೇರಹ ಹೂಡಿಕೆಯಲ್ಲೂ ಅತಿ ಹೆಚ್ಚು ಹೂಡಿಕೆ ಪಡೆಯುತ್ತಿರು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇದೆ. ದೇಶದಲ್ಲಿರುವ ೧೦೦ ಯುನಿಕಾರ್ನ್‌ಗಳಲ್ಲಿ ೪೦ ಕರ್ನಾಟಕದವು ಎಂದರು ಮೋದಿ.

ಸಿಂಟೆಕ್ಸ್‌ನಿಂದ ಸೆಮಿಕಂಡಕ್ಟರ್‌ವರೆಗೆ
ಕರ್ನಾಟಕದಲ್ಲಿ ಈಗ ಎಲ್ಲ ರೀತಿಯ ಉದ್ಯಮಗಳೂ ಇವೆ. ಸಿಂಟೆಕ್ಸ್‌ನಿಂದ ಸೆಮಿ ಕಂಡಕ್ಟರ್‌ವರೆಗೆ ಎಲ್ಲವನ್ನೂ ರೂಪಿಸಲಾಗುತ್ತಿದೆ. ಭಾರತ ಈಗ ನ್ಯಾಷನಲ್‌ ಸೆಮಿ ಕಂಡಕ್ಟರ್‌ ನೀತಿಯನ್ನು ಪ್ರಕಟಿಸಿದ್ದು ಇದರಲ್ಲಿ ಕರ್ನಾಟಕದ ಪಾತ್ರ ದೊಡ್ಡದು ಎಂದರು. ರಾಜ್ಯದಲ್ಲಿ ಸೆಮಿ ಕಂಡಕ್ಟರ್‌ ಉದ್ಯಮ ಸ್ಥಾಪನೆಯ ಸುಳಿವು ನೀಡಿದರು.

ಇನ್ವೆಸ್ಟ್‌ ಕರ್ನಾಟಕ ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ಈ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಸಚಿವ ಅಶ್ವತ್ ನಾರಯಣ್‌, ಎಂಟಿಬಿ ನಾಗರಾಜ್,ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್,ಕೇಂದ್ರ ಸಚಿವ ಪಿಯೂಶ್ ಗೋಯಲ್, ರಾಜೀವ್ ಚಂದ್ರಶೇಖರ್, ರಾಜಮಾತೆ ಪ್ರಮೋದಾ ದೇವಿ‌ ಉಪಸ್ಥಿತರಿದ್ದರು.

ಇದನ್ನೂ ಓದಿ Invest Karnataka-2022 | ಹೂಡಿಕೆಗೆ ನಮ್ಮಲ್ಲೀಗ ಕೆಂಪು ಹಾಸು ಮಾತ್ರ, ಕೆಂಪು ಪಟ್ಟಿ ಇಲ್ಲ ಎಂದ ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Cow Smuggling : ಗೋವು ಸಾಗಿಸುತ್ತಿದ್ದವರಿಂದ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಗಂಭೀರ ಹಲ್ಲೆ

Cow Smuggling : ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

cow smuuggling
Koo

ಕಲಬುರಗಿ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳ ರಕ್ಷಣೆ ಮಾಡಲು(Cow Smuggling) ಮುಂದಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣ ಗುರುವಾರ ರಾತ್ರಿ ನಡೆದಿದೆ. ಗೋವುಗಳನ್ನು ಸಾಗಿಸುತ್ತಿದ್ದನ್ನು ತಡೆದಿದ್ದಕ್ಕೆ‌ 30ರಿಂದ 35 ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಮಾಡಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಲಬುರಗಿ ನಗರದ ಖಾದ್ರಿ ಚೌಕ್ ಬಳಿ ಘಟನೆ. ನಡೆದಿದ್ದು, ರಾಮ ಸೇನೆ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕಲ್ಲು ತೂರಾಟ ನಡೆದಿದೆ ಎಂಬುದಾಗಿ ದೂರಿನಲ್ಲಿ ದಾಖಲಾಗಿದೆ. ಬಕ್ರಿದ್ ಹಬ್ಬದ ಹಿನ್ನಲೆಯಲ್ಲಿ ಖಾದ್ರಿ ಚೌಕ್ ಬಳಿ‌ ಕಸಾಯಿ ಖಾನೆಗೆ‌ ಗೋವುಗಳನ್ನು ಸಾಗಿಸುತ್ತಿದ್ದರು. ಆಳಂದ ಕಾಲೋನಿ ಬಳಿ ಒಂದು ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಚೌಕ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲೂ ಹಲ್ಲೆ, ಪ್ರತಿಭಟನೆ

ಗೋವು ಸಾಗಿಸುತ್ತಿದ್ದನ್ನು ಪ್ರಶ್ನಿಸಿದ ಬಜರಂಗ ದಳ ಕಾರ್ಯಕರ್ತನ ಮೇಲೆ ಮುಸ್ಲಿಮರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಘಟನೆ ಬಳಿಕೆ ಇಲ್ಲಿನ ಉಪನಗರ ಠಾಣೆಗೆ ಹಿಂದೂಪರ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸೋಮಶೇಖರ ಚೆನ್ನಶೆಟ್ಟಿ ಹಲ್ಲೆಗೊಳಗಾದ ಯುವಕ. ಗೋ ರಕ್ಷಣೆ ಮಾಡಲು ಹೋದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ನಗರದ ಹಳೆ ಎಪಿಎಂಸಿ ಬಳಿ ಘಟನೆ ನಡೆದಿದ್ದು, ಪ್ರಾಣಿ ರಕ್ಷಕನೂ ಆಗಿರೋ ಸೋಮಶೇಖರನ ಮೇಲಿನ ಹಲ್ಲೆಯನ್ನು ಖಂಡಿಸಲಾಗಿದೆ. ಉರಗ ರಕ್ಷಕನೂ ಆಗಿರೋ ಸೋಮಶೇಖರ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: Road Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಸ್ಥಳದಲ್ಲೇ ನಾಲ್ಕು ಮಂದಿ ಸಾವು

ಪ್ರತಿಭಟನೆ ಬಳಿಕ ವಿಧಾನ ಸಭೆ ವಿಪಕ್ಷ ಉಪನಾಯಕರ ಅರವಿಂದ ಬೆಲ್ಲದ್ ಮಾತನಾಡಿ, ಶಾಂತ ಧಾರವಾಡದಲ್ಲಿ ಇವತ್ತು ಇನ್ನೊಂದು ದುರ್ಘಟನೆ ಆಗಿದೆ. ಬಕ್ರೀದ್ ಸಮಯದಲ್ಲಿ ಹಸುಗಳನ್ನು ಕಡಿಯಲು ಉದ್ದೇಶಿಸಿದ್ದರು. ಇಂತಿಷ್ಟು ವಯಸ್ಸಾದ್ರೆ ಮಾತ್ರ ವಧೆ ಮಾಡುವ ಅವಕಾಶವಿದೆ. ಆದರೆ, ಚಿಕ್ಕವಯಸ್ಸಿನ ಹಸು ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಯುವಕ ಹಲ್ಲೆ ಮಾಡಿದ್ದಾರೆ.

ಸೋಮಶೇಖರ್ ಚನ್ನಶಟ್ಟಿ ಎಲ್ಲ ಪ್ರಾಣಿ, ಜೀವಿಗಳ ರಕ್ಷಣೆ ಮಾಡುತ್ತಾರೆ. ಪ್ರಾಣಿ ಪಕ್ಷಿಗಳಿಗೆ ತೊಂದರೆಯಾದರೆ ಚಿಕಿತ್ಸೆ ಕೊಡಿಸುತ್ತಾರೆ. ಬೇಫಾರಿ ಎಂಬ ಕಸಾಯಿಖಾನೆ ಮಾಲೀಕ ಹಲ್ಲೆ ಮಾಡಿದ್ದಾನೆ. ಅವನ ಜೊತೆಗೆ 50-60 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕಿವಿ ಕತ್ತರಿಸುವಂತೆ ಹೊಡೆದಿದ್ದಾರೆ. ಘಟನೆ ಆಗಿ ಮೂರುವರೆ ಗಂಟೆಯಾದರೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಹೀಗಾಗಿ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಈಗ ಪೊಲೀಸ್ ಆಯುಕ್ತರು ಕ್ರಮದ ಭರವಸೆ ನೀಡಿದ್ದಾರೆ. ಅರ್ಧ ತಾಸಿನಲ್ಲಿ ಎಫ್.ಐಆರ್ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಈಗ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾಎ.

ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿಕೆ ನೀಡಿ, ಜಾನುವಾರು ವಿಚಾರವಾಗಿ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಒಂದು ಕೋಮಿನವರು ದೂರು ಕೊಟ್ಟಿದ್ದಾರೆ. ಗಂಭೀರ ಹಲ್ಲೆಯ ದೂರು ಕೊಟ್ಟಿದ್ದಾರೆ. ಇದರ ಪ್ರಕಾರ ಎಫ್​ಐಆರ್​ ದಾಖಲಿಸಲಾಗಿದೆ. ದೂರಿನಲ್ಲಿ ಇಬ್ಬರು ಮತ್ತು ಒಂದಷ್ಟು ಹತ್ತು ಜನರು ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಹಲ್ಲೆಯಾದ ಏರಿಯಾದಲ್ಲಿ ಸಿಸಿಟಿವಿಗಳಿವೆ. ಅದು ಎಪಿಎಂಸಿ ಯಾರ್ಡ್ ಇದೆ. ಅದನ್ನೆಲ್ಲ‌ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Continue Reading

ಇನ್ವೆಸ್ಟ್ ಕರ್ನಾಟಕ

Suicide Case : ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ

Suicide Case : ಹಲವು ಸಮಯದಿಂದ ಕಾಡುತ್ತಿದ್ದ ಹೊಟ್ಟೆ ನೋವನ್ನು ತಾಳಲಾರದೆ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆಯ ಚನ್ನಗಿರಿ ಬಳಿ ಘಟನೆ ನಡೆದಿದೆ.

VISTARANEWS.COM


on

Dalit Woman Raped In Uttar Pradesh
Koo

ದಾವಣಗೆರೆ: ಕೆಲವೊಮ್ಮೆ ಕೆಲವು ಆರೋಗ್ಯ ಸಮಸ್ಯೆಗಳು ಎಷ್ಟು ತೀವ್ರವಾಗಿರುತ್ತವೆ ಎಂದರೆ ಇದರಿಂದ ಮುಕ್ತಿ ಸಿಗಬೇಕು ಎಂದರೆ ಸಾವೇ ದಾರಿ (Suicide Case) ಅನಿಸಿಬಿಡುತ್ತದೆ. ಬೇರೆ ದಾರಿಗಳನ್ನು ಕಂಡುಕೊಳ್ಳುವ ವ್ಯವಧಾನ, ಹಣಕಾಸಿನ ವ್ಯವಸ್ಥೆಗಳೂ ಕೆಲವೊಮ್ಮೆ ಕೈಕೊಟ್ಟಿರುತ್ತವೆ. ದಾವಣಗೆರೆ ಜಿಲ್ಲೆಯ (Davanagere News) ಚನ್ನಗಿರಿ ತಾಲೂಕಿನ ಈ ಶಿಕ್ಷಕನಿಗೆ ಅದೇನಾಗಿತ್ತೋ ಗೊತ್ತಿಲ್ಲ. ಆದರೆ, ದೀರ್ಘ ಕಾಲದಿಂದ ಕಾಡುತ್ತಿದ್ದ ಹೊಟ್ಟೆ ನೋವು (Stomach Pain) ತಾಳಲಾರದೆ ಅವರು ಕೆರೆಗೆ ಹಾರಿ ಅತ್ಮಹತ್ಯೆ (Teacher suicide) ಮಾಡಿಕೊಂಡಿದ್ದಾರೆ.

ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ ಶಿಕ್ಷಕರಾಗಿರುವ ಕೃಷ್ಣ ನಾಯ್ಕ್ (42) ಅವರು ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೃಷ್ಣ ನಾಯ್ಕ್ ಅವರು ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಾಲ್ಕು ದಿನದ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೃಷ್ಣ ನಾಯ್ಕ್ ಅವರು ಬಳಿಕ ಮನೆಗೆ ಬಂದಿದ್ದರು.

ಗುರುವಾರ ಮುಂಜಾನೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರಿಗೆ ಹೆದ್ದಾರಿ ಪಕ್ಕದ ಹೊಂಡದ ನೀರಿನಲ್ಲಿ ಕೃಷ್ಣನಾಯ್ಕ್ ಮೃತದೇಹ ಕಂಡಿತು. ಕೂಡಲೇ ಸಾರ್ವಜನಿಕರು ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಗೆ ಗುದ್ದಿ ಸಾಯಿಸಿದ ಲಾರಿ

ಚಿತ್ರದುರ್ಗ: ಬಸ್‌ನಿಂದ ಕೆಳಗಿಳಿಯುವ ವೇಳೆ ಮಹಿಳೆಯೊಬ್ಬರಿಗೆ ಲಾರಿ ಡಿಕ್ಕಿಯಾಗಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ಹಿರಿಯೂರಿನ ಹೊರವಲಯದ ಎನ್‌ಎಚ್ 4 ರಸ್ತೆಯ ಮದ್ದೇರಹಳ್ಳ ಬಳಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಪಂಚರ್‌ ಆಗಿದ್ದ ಹಿನ್ನೆಲೆಯಲ್ಲಿ, ಎಲ್ಲರನ್ನು ಕೆಳಗಿಳಿಸಲಾಗುತ್ತಿತ್ತು. ಈ ವೇಳೆ ಮಲ್ಲಮ್ಮ ಎಂಬ ಮಹಿಳೆ ಕೆಳಗಿಳಿಯುತ್ತಿದ್ದಾಗ, ರಭಸವಾಗಿ ಬಂದ ಲಾರಿ ಗುದ್ದಿದೆ. ಲಾರಿ ಹೊಡೆದ ರಭಸಕ್ಕೆ ಮಲ್ಲಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರನನ್ನು ಸಾಯಿಸಿ ಅಂಗಡಿಗೆ ನುಗ್ಗಿದ ಲಾರಿ

ಬೆಂಗಳೂರು: ನಗರದ ಬ್ಯಾಡರಹಳ್ಳಿ ಬಳಿ ಗೂಡ್ಸ್ ಲಾರಿ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಸಾಯಿಸಿದ್ದು, ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಇದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಲಾರಿ ಡಿವೈಡರ್ ಮೇಲೆ ಹತ್ತಿ ಅಂಗಡಿಯೊಳಗೆ ನುಗ್ಗಿತ್ತು. ಅಂಗಡಿಗೆ ಅಪ್ಪಳಿಸುವ ಮುನ್ನ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಬೈಕ್ ಸವಾರ 10 ಅಡಿಯಷ್ಟು ದೂರ ಹಾರಿ ಬಿದ್ದಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ತಲಾಶೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Human Sacrifice: ತನ್ನ ತಾಯ್ತನಕ್ಕಾಗಿ 4 ವರ್ಷದ ಮಗನನ್ನು ನರಬಲಿ ಕೊಟ್ಟ ಮಲತಾಯಿ, ಮಾತೃಕುಲಕ್ಕೆ ಈಕೆ ಕಳಂಕ

Continue Reading

ಇನ್ವೆಸ್ಟ್ ಕರ್ನಾಟಕ

Karnataka Industries: ಕೈಗಾರಿಕಾ ಇಲಾಖೆಗೆ ಅರಣ್ಯ ಸೇವೆ ಅಧಿಕಾರಿ ನೇಮಕ: ಉದ್ಯಮಿಗಳಿಗೆ ಸರ್ಕಾರದ ಭರವಸೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉತ್ತೇಜಿಸಲು ಸರ್ಕಾರ ಆಯ್ದ 7 ವಲಯಗಳಲ್ಲಿ ವಿಷನ್ ಗ್ರೂಪ್‌ಗಳನ್ನು ರಚಿಸಲಾಗುವುದು ಎಂದು ಎಂ.ಬಿ. ಪಾಟೀಲ್‌ ಘೋಷಣೆ ಮಾಡಿದರು.

VISTARANEWS.COM


on

MB Patil meeting industrialists
Koo

ಬೆಂಗಳೂರು: ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರ ಅನುಮತಿ ಸಿಗುವ ಹಾಗೆ ಮಾಡಲು ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯಲ್ಲೇ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಹೋಟೆಲಿನಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸೋಮವಾರ ಸಂಜೆ ವಿಚಾರ ವಿನಿಮಯ ಸಂದರ್ಭದಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಈ ಭರವಸೆ ನೀಡಿದ್ದಾರೆ.

ಪಿಸಿಸಿಎಫ್‌ ದರ್ಜೆಯ ಐಎಫ್‌ಎಸ್‌ ಅಧಿಕಾರಿಯನ್ನು ನೇಮಕ ಮಾಡುವುದರಿಂದ ಪರಿಸರ ಸಂಬಂಧಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗಲಿದೆ. ಈ ಹಿಂದೆ ತಾವು ನೀರಾವರಿ ಸಚಿವರಾಗಿದ್ದಾಗ ಆ ಇಲಾಖೆಯಲ್ಲಿನ ಪರಿಸರ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ನೇಮಿಸಿ ಪರಿಹಾರ ಕೊಂಡುಕೊಳ್ಳಲಾಗಿತ್ತು. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಗುತ್ತದೆ ಎಂದು ಉದ್ಯಮಿಗಳ ಗಮನಕ್ಕೆ ಎಂ.ಬಿ. ಪಾಟೀಲ್‌ ತಂದಿದ್ದಾರೆ. ಇದಕ್ಕೆ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಲಯವಾರು 7 ವಿಷನ್ ಗ್ರೂಪ್‌ ರಚನೆ
ರಾಜ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉತ್ತೇಜಿಸಲು ಸರ್ಕಾರ ಆಯ್ದ 7 ವಲಯಗಳಲ್ಲಿ ವಿಷನ್ ಗ್ರೂಪ್ ಗಳನ್ನು (ದೂರದರ್ಶಿ ತಂಡಗಳು) ರಚಿಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಘೋಷಣೆ ಮಾಡಿದರು.

ಉದ್ಯಮಿಗಳು, ಉನ್ನತಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ಇರುವ ಈ ವಿಷನ್ ಗ್ರೂಪ್ ಗಳು ಸೂಕ್ತ ಮಾರ್ಗದರ್ಶನ ನೀಡಲಿವೆ. ಏರೋಸ್ಪೇಸ್‌ ಮತ್ತು ರಕ್ಷಣೆ, ಮಷೀನ್‌ ಟೂಲ್ಸ್, ಇಎಸ್‌ಡಿಎಂ, ಫಾರ್ಮಾ, ಕಬ್ಬಿಣ-ಉಕ್ಕು-ಸಿಮೆಂಟ್‌ ಉತ್ಪಾದನಾ ಕ್ಷೇತ್ರಗಳನ್ನೊಳಗೊಂಡ ಕೋರ್‌ ಮ್ಯಾನುಫ್ಯಾಕ್ಚರಿಂಗ್‌, ಸ್ಟಾರ್ಟಪ್ಸ್‌ (ಐ.ಟಿ‌.ಯೇತರ) ಮತ್ತು ಆಟೋ/ವಿದ್ಯುತ್‌ಚಾಲಿತ ಇವು ಹೊಸದಾಗಿ ವಿಷನ್ ಗ್ರೂಪ್ ರಚನೆಯಾಗಲಿರುವ ವಲಯಗಳಾಗಿವೆ.

ರಾಜ್ಯದಲ್ಲಿ ಈ ವಲಯಗಳಿಗಾಗಿ ವಿಷನ್ ಗ್ರೂಪ್‌ಗಳು ರಚನೆಯಾಗುತ್ತಿರುವುದು ಇದೇ ಮೊದಲು. ಇದಕ್ಕೆ ಮುಂಚೆ ಒಟ್ಟಾರೆ ಉದ್ಯಮದ ಅಭಿವೃದ್ಧಿಗೆ ವಿಷನ್ ಗ್ರೂಪ್ ಇತ್ತು. ಆದರೆ ಇದು ವಲಯವಾರು ಮಟ್ಟದಲ್ಲಿ ಇರಲಿಲ್ಲ. ಮೇಲೆ ತಿಳಿಸಿದ ವಲಯಗಳ ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಗ್ರೀನ್‌ ಹೈಡ್ರೋಜನ್, ಆಹಾರ ಸಂಸ್ಕರಣೆ, ಜವಳಿ, ಉಗ್ರಾಣ ಮತ್ತು ಲಾಜಿಸ್ಟಿಕ್ಸ್‌ ಗಳನ್ನು ಆದ್ಯತೆಯ ವಲಯಗಳೆಂದು ಗುರುತಿಸಲಾಗಿದೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ವಿದ್ಯುತ್‌ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಈಗಾಗಲೇ 40 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ದೇಶದ ಪ್ರಪ್ರಥಮ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್ ಮಂಗಳೂರಿನಲ್ಲಿ ತಲೆಯೆತ್ತಲಿದ್ದು, ಆಸಕ್ತ ಉದ್ಯಮಿಗಳು ಇದಕ್ಕೆ 2.8 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದು ಈಗಾಗಲೇ ಖಾತ್ರಿಗೊಂಡಿದೆ. ಇದಕ್ಕೆ ಬೇಕಿರುವ ಭೂಮಿ, ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಲಿದೆ.

ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೇವನಹಳ್ಳಿಯ ಆರ್‌ & ಡಿ ಪಾರ್ಕ್‌ನಲ್ಲಿ ಕರ್ನಾಟಕ ಏರೋಸ್ಪೇಸ್‌ ತಂತ್ರಜ್ಞಾನ ಕೇಂದ್ರ ತೆರೆಯಲು ಯೋಜಿಸಲಾಗಿದೆ. ಜತೆಗೆ, ಸರ್ಕಾರವು ರಾಜ್ಯದಲ್ಲಿ 2.5 ಲಕ್ಷ ಕೋಟಿ ರೂ. ಹೂಡಿಕೆಗೆ ಇರುವ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಿದೆ.

ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ಕಿರ್ಲೋಸ್ಕರ್, ಟಾಟಾ ಮೋಟಾರ್‍ಸ್‌ನ ಸುಶಾಂತ್‌ ನಾಯಕ್‌, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ನ ರಾಜೀವ್‌ ಕುಶೂ, ಫಾಕ್ಸ್‌ಕಾನ್‌ ಕಂಪನಿಯ ಉನ್ನತಾಧಿಕಾರಿ ವಿನ್ಸೆಂಟ್‌, ಏಷ್ಯನ್‌ ಪೇಂಟ್ಸ್‌ನ ಅಮಿತ್‌ ಕುಮಾರ್‌ ಸಿಂಗ್‌ ಸೇರಿದಂತೆ 30ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಯಮ ವಲಯದ ಸಂಘಟನೆಗಳಾದ ಸಿಐಐ, ಎಫ್‌ಐಸಿಸಿಐ, ಎಫ್‌ಕೆಸಿಸಿಐ, ಬಿಸಿಐಸಿ, ಕಾಸಿಯಾ, ಲಘು ಉದ್ಯೋಗ ಭಾರತಿ, ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರೀಸ್‌ ಅಸೋಸಿಯೇಷನ್‌, ಐಎಂಟಿಎಂಎ, ಅವೇಕ್‌, ಅಸೋಚಂ ಮುಂತಾದವುಗಳೂ ಭಾಗವಹಿಸಿದ್ದವು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಒ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.

ಉದ್ಯಮಸ್ನೇಹಿ ವಾತಾವರಣ
ಒಟ್ಟಾರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಪೂರಕವಾದ ಕ್ರಮಗಳನ್ನು ವಹಿಸಲಾಗುವುದು. ಹೆಸರಿಗಷ್ಟೇ ಇರುವ ಏಕಗವಾಕ್ಷಿ ಯೋಜನೆಗೆ ನಿಜ ಅರ್ಥದಲ್ಲಿ ಬದಲಾವಣೆ ತಂದು ಅನಗತ್ಯ‌ ಅಡಚಣೆಗಳನ್ನು ನಿರ್ಮೂಲನೆ ಮಾಡಲಾಗುವುದು. ಬಹುಗವಾಕ್ಷಿಗೆ ಅವಕಾಶ ಇಲ್ಲದಂತೆ‌ ತ್ವರಿತವಾಗಿ ಅನುಮತಿಗಳು ಸಿಗುವ ಹಾಗೆ ಮಾಡಲಾಗುವುದು. ಕೈಗಾರಿಕೆ ಬೆಳವಣಿಗೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಪರಿಶೀಲಿಸಲಾಗುವುದು ಎಂದು ಉದ್ಯಮಿಗಳ ಪ್ರಶ್ನೆಗೆ ಸಚಿವ ಎಂ.ಬಿ. ಪಾಟೀಲ ಉತ್ತರಿಸಿದರು.

ಇದನ್ನೂ ಓದಿ: Aero India 2023: ಭಾರತದ ರಕ್ಷಣಾ ರಫ್ತು 2024ರಲ್ಲಿ 500 ಕೋಟಿ ಡಾಲರ್‌ ಗುರಿ: ಹೂಡಿಕೆದಾರರಿಗೆ ಸುವರ್ಣಾವಕಾಶ ಎಂದ ಪ್ರಧಾನಿ ಮೋದಿ

Continue Reading

ಇನ್ವೆಸ್ಟ್ ಕರ್ನಾಟಕ

Karnataka Election : ಬಿಜೆಪಿ ಶೀಘ್ರದಲ್ಲೇ ಕೋಮು ಗಲಭೆ ಮಾಡಿಸಲಿದೆ: ಸಂಸದ ಡಿ.ಕೆ. ಸುರೇಶ್‌ ಹೇಳಿಕೆ

ಕರ್ನಾಟಕ ಚುನಾವಣೆ (Karnataka Election) ಸಮಯದಲ್ಲಿ ರಾಜ್ಯದಲ್ಲಿ ಕೋಮುಗಲಭೆಗಳನ್ನು ಬಿಜೆಪಿ ಸೃಷ್ಟಿ ಮಾಡುವ ಸಾಧ್ಯತೆಯಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿಕೆ ನೀಡಿದ್ದಾರೆ.

VISTARANEWS.COM


on

r ashok will defeated if dk suresh contests from padmanabhanagar
Koo

ಬೆಂಗಳೂರು: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಕೋಮುಗಲಭೆಯನ್ನು ನಡೆಸಲು ಬಿಜೆಪಿಯು ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ತಿಳಿಸಿದ್ದಾರೆ. ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ (Karnataka Election) ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದರು.

ಸಿ.ಟಿ. ರವಿಯವರು ನಮ್ಮ ಸರ್ವೆ ವಿಚಾರದಲ್ಲಿ ವ್ಯಂಗ್ಯ ಮಾಡಿದ್ದಾರೆ ಎಂದ ಡಿ.ಕೆ. ಸುರೇಶ್‌, ಬಿಜೆಪಿ ಪಕ್ಷ ಶೀಘ್ರದಲ್ಲೇ ಕೋಮು ಗಲಭೆ ಮಾಡಿಸಲು ಸಿದ್ದವಾದಂತೆ ಕಾಣುತ್ತಿದೆ. ಕರಾವಳಿ ಬೆಂಗಳೂರು ಬೇರೆ ಕಡೆ ಕೋಮು ಗಲಭೆ ಮಾಡಿಸಲು ಸಿದ್ದತೆ ಮಾಡಿಕೊಂಡಂತೆ ಕಾಣ್ತಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸಲು ಸಿಟಿ ರವಿ ಪಾಕಿಸ್ತಾನ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪದೇ ಪದೇ ಪಾಕಿಸ್ತಾನ ವಿಚಾರ ತರುವಂತಹ ಸಿಟಿ ರವಿ ವಿರುದ್ದ ಕ್ರಮ ಆಗಬೇಕು. ಬಿಜೆಪಿಯವರು ನೀಚರು, ಅವರು ಯಾವ ಹಂತಕ್ಕೆ ಬೇಕಾದರೂ ಹೋಗ್ತಾರೆ.

ರಾಜ್ಯದ ಬಗ್ಗೆ ಅವರ ಗಮನ ಇಲ್ಲ, ಅವರ ನಂಟು ಇರುವುದೆಲ್ಲ ಪಾಕಿಸ್ತಾನದ ವಿಚಾರಕ್ಕೆ ಮಾತ್ರ. ಮೋದಿ ಯಾಕೆ ಬರ್ತಾ ಇದಾರೆ ರಾಜ್ಯಕ್ಕೆ? ಅವರ ಮನ್ ಕಿ ಬಾತ್ ನಲ್ಲಿ ಭ್ರಷ್ಟಾಚಾರ ಕಾಣಸ್ತಾ ಇಲ್ವಾ? ಬಿಜೆಪಿಯವರಿಗೆ ನಾಚಿಕೆ ಆಗಬೇಕು, ಅವರ ಪಕ್ಷದ ನಾಯಕರನ್ನು ಕಂಟ್ರೋಲ್ ಮಾಡಲು ಆಗದವರು ಡಿಕೆಶಿವಕುಮಾರ್ ಬಗ್ಗೆ ಮಾತನಾಡ್ತಾರಾ? ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡೋ ಯಾವ ಹಕ್ಕಿದೆ ಅವರಿಗೆ. ಪಾಕಿಸ್ತಾನ ಬೇಕಿದ್ದರೆ ಇವರು ಸೇರಿಸಿಕೊಳ್ಳಲಿ. ಪಾಕಿಸ್ತಾನದ ಹೆಸರಿಟ್ಟುಕೊಂಡು ರಾಜಕಾರಣ ಮಾಡುವುದು ನಿಮ್ಮ ಪದ್ದತಿ. ಬಿಜೆಪಿಯವರು ಏನು ಬೇಕಾದರೂ ಮಾಡ್ತಾರೆ. ರಾಜಕಾರಣಕ್ಕಾಗಿ ಕೊಲೆಗಳನ್ನು ಮಾಡಿಸ್ತಾರೆ, ಯಾರನ್ನು ಬೇಕಾದರೂ ಹೊಡಿತಾರೆ, ಯಾವ ಆಪರೇಷನ್ ಬೇಕಾದರೂ ಮಾಡ್ತಾರೆ ಎಂದರು.

ಡಾ. ಜಿ. ಪರಮೇಶ್ವರ್‌ ಅಸಮಧಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್ ಅಸಮಧಾನವೆಲ್ಲ ಏನೂ ಇಲ್ಲ. ಒಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ. ರಾಜೀನಾಮೆ ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ಡಿ. ಕೆ. ಶಿವಕುಮಾರ್, ಪರಮೇಶ್ವರ್ ಒಂದೆ ನಾಣ್ಯದ ಮುಖಗಳು ಎಂದರು.

ರಾಮನಗರ ಜಿಲ್ಲೆ ರಾಜಕಾರಣದಲ್ಲಿ ಡಿ.ಕೆ. ಸಹೋದರರು ಹಾಗೂ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ನಡುವೆ ವಾಗ್ಯುದ್ಧ ಮುಂದುವರಿದಿದೆ. ಕಾಂಗ್ರೆಸ್‌ ಪಕ್ಷದ ಕುರಿತು ಅಶ್ವತ್ಥನಾರಾಯಣ ಟೀಕೆ ಮಾಡಿರುವ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ಕೆಲಸ ನೋಡೋಕೆ ಹೇಳಿ ಅವನಿಗೆ. ಅವನ ಬಗ್ಗೆ ಇನ್ನೊಂದು ದಿನ ಮಾತಾಡ್ತೀನಿ ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ.

ಇದನ್ನೂ ಓದಿ : Karnataka Election: ಪ್ರಜಾಧ್ವನಿಗೆ ಇರುವುದು ಎರಡೇ ಬಸ್‌; 4 ಇದ್ದಿದ್ರೆ ನಾನೂ ಸಾರಥಿ ಆಗ್ತಿದ್ದೆ: ಡಾ.ಜಿ.ಪರಮೇಶ್ವರ್‌

ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್‌, ಈಗಾಗಲೇ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಚುನಾವಣಾ ಸಮಿತಿ ಕೂಡ ಸಭೆ ಸೇರಿ ರಾಜ್ಯದ ವರಿಷ್ಟರಿಗೆ ನಮ್ಮ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರದ ಸ್ಕ್ರೀನಿಂಗ್ ಕಮೀಟಿ ಮುಂದೆ ಆದಷ್ಟು ಬೇಗ ಕಳಿಸುತ್ತೇವೆ. ಕ್ಷೇತ್ರದಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಅನುಕೂಲ ಆಗಲಿದೆ. ಯಾವ ಶಿಫಾರಸುಗಳನ್ನು ಮಾಡಿದ್ದೇವೆ ಎಲ್ಲವೂ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಿ ನಿರ್ಧಾರ ಆಗಲಿದೆ ಎಂದರು.

ಬಿಜೆಪಿಯು ಭ್ರಮೆಯಲ್ಲಿ ರಾಜ್ಯವನ್ನು ಇಟ್ಟಿದೆ. ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳೆಲ್ಲವೂ ಕೂಡ ಹುಸಿಯಾಗಿದೆ. ಹಳ್ಳಿಗಳ ಮಟ್ಟದಲ್ಲಿ ಜನರು ಬಿಜೆಪಿಯಿಂದ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸರ್ಕಾರ ತೊಲಗಬೇಕು ಅಂತ ಜನ ಬಯಸ್ತಾ ಇದ್ದಾರೆ. ಪಕ್ಷದ ಅಧ್ಯಕ್ಷರು ಎಲ್ಲ ಕಡೆಯಿಂದಲೂ ಸರ್ವೆ ಮಾಡಿಸಿದ್ದಾರೆ ಎಂದರು.

Continue Reading
Advertisement
Cholera outbreak
ಕರ್ನಾಟಕ53 mins ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ55 mins ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ1 hour ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ2 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ2 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ2 hours ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ3 hours ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ3 hours ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Lok Sabha Speaker
ದೇಶ3 hours ago

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Renukaswamy murder case The location of the accused is complete
ಸಿನಿಮಾ4 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ4 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ10 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌