Bharat Jodo Yatra | ಮಹಾರಾಷ್ಟ್ರ ಪ್ರವೇಶಿಸಿದ ಕಾಂಗ್ರೆಸ್ ಪಾದಯಾತ್ರೆ; ಗುರುದ್ವಾರಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ - Vistara News

ದೇಶ

Bharat Jodo Yatra | ಮಹಾರಾಷ್ಟ್ರ ಪ್ರವೇಶಿಸಿದ ಕಾಂಗ್ರೆಸ್ ಪಾದಯಾತ್ರೆ; ಗುರುದ್ವಾರಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ

ಸೋಮವಾರ ರಾತ್ರಿ (ನವೆಂಬರ್​ 7ರಂದು), ಕೈಯಲ್ಲಿ ಮಶಾಲ್​ (ಪಂಜು) ಹಿಡಿದು ಮಹಾರಾಷ್ಟ್ರ ಪ್ರವೇಶ ಮಾಡಿದ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​​ನ ಇತರ ಪಾದಯಾತ್ರಿಗಳು ಬಳಿಕ ವಿಶ್ರಾಂತಿ ತೆಗೆದುಕೊಂಡರು. ಬೆಳಗ್ಗೆ ಭಾರತ್​ ಜೋಡೋ ಯಾತ್ರೆಯನ್ನು ನಾಂದೇಡ್​ ಜಿಲ್ಲೆಯ ಬಿಲೋಲಿ ಸಿಟಿಯಲ್ಲಿರುವ ಅಟ್ಕಾಲಿಯಿಂದ ಪ್ರಾರಂಭ ಮಾಡಿದ್ದಾರೆ.

VISTARANEWS.COM


on

ಗುರುದ್ವಾರಕ್ಕೆ ಭೇಟಿ ಕೊಟ್ಟ ರಾಹುಲ್​ ಗಾಂಧಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಗಲೂರ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ನವೆಂಬರ್​ 7 (ಮಂಗಳವಾರ)ರಂದು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರಿಗಳು ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಗೆ ಪ್ರವೇಶ ಮಾಡಿದ್ದು, ಇಂದು (ನ.8) ಗುರುನಾನಕ್​ ಜಯಂತಿ ನಿಮಿತ್ತ ಯಾದಗಾರಿ ಬಾಬಾ ಜೋರಾವರ್​ ಸಿಂಗ್​ ಜೀ ಫತೇಹ್​ ಸಿಂಗ್​ ಜಿ ಗುರುದ್ವಾರಕ್ಕೆ ಭೇಟಿ ನೀಡಿದರು.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಸಿಖ್​ ಸಂಪ್ರದಾಯದಂತೆ ತಲೆಗೆ ಟೋಪಿ (ಶಿರವಸ್ತ್ರ) ಧರಿಸಿ, ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಗುರುದ್ವಾರಕ್ಕೆ ಭೇಟಿ ಕೊಟ್ಟ ಫೋಟೋವನ್ನು ಕಾಂಗ್ರೆಸ್​ ಟ್ವೀಟ್ ಮಾಡಿದೆ. ‘ಈ ದೇಶದಲ್ಲಿ ಸಾಮರಸ್ಯ ಮತ್ತು ಸಮಾನತೆ ಮೂಡಲಿ ಎಂದು ರಾಹುಲ್ ಗಾಂಧಿ ಪ್ರಾರ್ಥನೆ ಮಾಡಿದ್ದಾರೆ’ ಎಂದು ಕಾಂಗ್ರೆಸ್​ ಹೇಳಿದೆ.

ಸೋಮವಾರ ರಾತ್ರಿ, ಕೈಯಲ್ಲಿ ಮಶಾಲ್​ (ಪಂಜು) ಹಿಡಿದು ಮಹಾರಾಷ್ಟ್ರ ಪ್ರವೇಶ ಮಾಡಿದ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​​ನ ಇತರ ಪಾದಯಾತ್ರಿಗಳು ಬಳಿಕ ವಿಶ್ರಾಂತಿ ತೆಗೆದುಕೊಂಡರು. ಬೆಳಗ್ಗೆ ಭಾರತ್​ ಜೋಡೋ ಯಾತ್ರೆಯನ್ನು ನಾಂದೇಡ್​ ಜಿಲ್ಲೆಯ ಬಿಲೋಲಿ ಸಿಟಿಯಲ್ಲಿರುವ ಅಟ್ಕಾಲಿಯಿಂದ ಪ್ರಾರಂಭ ಮಾಡಿದ್ದಾರೆ. ರಾಹುಲ್​ ಗಾಂಧಿಯವರಿಗೆ ರಾಹುಲ್​ ಗಾಂಧಿಗೆ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರಾದ ಸುಶೀಲ್​ಕುಮಾರ್​ ಶಿಂಧೆ, ಅಶೋಕ್​ ಚೌವಾಣ್​, ಮಹಾರಾಷ್ಟ್ರದ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ, ಬಾಳಾಸಾಹೇಬ್​ ಥೋರಟ್​ ಇತರರು ಜತೆಯಾಗಿದ್ದಾರೆ. ಇಂದು ರಾತ್ರಿ ರಾಹುಲ್​ ಗಾಂಧಿ ಮತ್ತು ಅವರ ಸಹಚರರು ಇಲ್ಲಿನ ಗೋದಾವರಿ ಮನಾರ್​ ಸಕ್ಕರೆ ಕಾರ್ಖಾನೆ ಇರುವ ಬಯಲಿನಲ್ಲಿಯೇ ತಂಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್​ ಜೋಡೋ ಯಾತ್ರೆ ಸಮಯದಲ್ಲಿ ರಾಹುಲ್​ ಗಾಂಧಿ ಅವರು ಎರಡು ಱಲಿ ನಡೆಸಲಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Parliament Session: ಸಂಸತ್‌ನಲ್ಲಿ ಈ ಬಾರಿ ಪ್ರತಿಪಕ್ಷಗಳ ಬಲ ಹೆಚ್ಚಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿವೆ. ಸಂಸತ್‌ನ ಬಜೆಟ್‌ ಅಧಿವೇಶನ ಕಾವೇರಿದ ಚರ್ಚೆಗೆ ಸಾಕ್ಷಿಯಾಗುತ್ತಿದ್ದು ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲ ನಡೆಯುವ ನಿರೀಕ್ಷೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ಪ್ರಕರಣ ಉಭಯ ಸದನಗಳಲ್ಲಿ ಇಂದು ಕೂಡ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಕುತೂಹಲ ಕೆರಳಿಸಿರುವ ಅಧಿವೇಶನವನ್ನು ಲೈವ್‌ ಆಗಿ ಇಲ್ಲಿ ವೀಕ್ಷಿಸಿ.

VISTARANEWS.COM


on

Parliament Session
Koo

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನ (Parliament Session) ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಭಾರಿ ಚರ್ಚೆಗೆ ಸಾಕ್ಷಿಯಾಗುತ್ತಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲ ನಡೆಯುವ ನಿರೀಕ್ಷೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ಪ್ರಕರಣ ಉಭಯ ಸದನಗಳಲ್ಲಿ ಇಂದು ಕೂಡ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಕಲಾಪಗಳು ಪುನರಾರಂಭಗೊಳ್ಳಲಿದ್ದು, ಉಭಯ ಸದನಗಳು 2024-25ರ ಬಜೆಟ್ ಮೇಲಿನ ಚರ್ಚೆಗಳನ್ನು ಮುಂದುವರಿಸಲಿವೆ. ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶವನ್ನು ತೆಗೆದುಹಾಕುವಂತೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಉತ್ತರಿಸಿದ್ದ ಸ್ಪೀಕರ್‌ ಅವರು ಸಂಸತ್ತಿನ ಕಾರ್ಯವಿಧಾನದ ನಿಯಮಗಳ ಬಗ್ಗೆ ರಾಹುಲ್‌ ಗಾಂಧಿಗೆ ನೆನಪಿಸಿದ್ದರು. ಅಂತಹ ವಿಷಯಗಳನ್ನು ಸದನದಲ್ಲಿ ಚರ್ಚಿಸುವ ಬದಲು ಖಾಸಗಿಯಾಗಿ ಚರ್ಚಿಸಬೇಕೆಂದು ಸಲಹೆ ನೀಡಿದ್ದರು. ಬಳಿಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರಿಯಾನ್, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಶಿವಸೇನೆ-ಯುಬಿಟಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತಿತತ ಪ್ರತಿಪಕ್ಷದ ನಾಯಕರೊಂದಿಗೆ ಮಾಧ್ಯಮ ಸಿಬ್ಬಂದಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ನಂತರ ಓಂ ಬಿರ್ಲಾ ಅವರು ಪತ್ರಕರ್ತರ ಗುಂಪನ್ನು ಭೇಟಿಯಾಗಿ, ಅವರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಮತ್ತು ಅವರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಲೋಕಸಭೆಯಲ್ಲಿ ಅಬ್ಬರಿಸಿದ ರಾಹುಲ್‌ ಗಾಂಧಿ

ಇನ್ನು ಸೋಮವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲೂ, ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದರು. “ಮಹಾಭಾರತದ ಚಕ್ರವ್ಯೂಹದಂತೆ  ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದರು.

“ಚಕ್ರವ್ಯೂಹದಲ್ಲಿ ತುಂಬ ಜನ ಇರುತ್ತಾರೆ. ಆದರೆ, ಚಕ್ರವ್ಯೂಹದ ಮಧ್ಯದಲ್ಲಿ 6 ಜನ ಇರುತ್ತಾರೆ ಹಾಗೂ ಅವರು ಇಡೀ ಚಕ್ರವ್ಯೂಹವನ್ನು ನಿಯಂತ್ರಿಸುತ್ತಾರೆ. ಆಧುನಿಕ ಕಾಲದ ಚಕ್ರವ್ಯೂಹವನ್ನು ಕೂಡ ಆರು ಜನ ನಿಯಂತ್ರಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ಮೋಹನ್‌ ಭಾಗವತ್‌, ಅಜಿತ್‌ ದೋವಲ್‌, ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿಯೇ ಈಗ ಕಮಲದ ಆಕಾರದ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

ಅಗ್ನಿಪಥ್‌ ಯೋಜನೆಗೆ ವಿರೋಧ

ಇದರ ಜತೆಗೆ ರಾಹುಲ್‌ ಗಾಂಧಿ ಅಗ್ನಿಪಥ್‌ ಯೋಜನೆ ಬಗ್ಗೆಯೂ ಪ್ರಸ್ತಾವಿಸಿ ವಿರೋಧ ವ್ಯಕ್ತಪಡಿಸಿದ್ದರು. ʼʼಸೇನೆಯ ಸೈನಿಕರನ್ನು ಅಗ್ನಿವೀರ್ ಹೆಸರಿನ ಚಕ್ರವ್ಯೂಹದಲ್ಲಿ ಸಿಲುಕಿಸಲಾಯ್ತು. ಈ ಬಜೆಟ್‌ನಲ್ಲಿ ಅಗ್ನಿವೀರರ ಪಿಂಚಣಿಗಾಗಿ ಒಂದು ರೂಪಾಯಿಯನ್ನು ತೆಗೆದಿರಿಸಿಲ್ಲ. ನಿಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವ ನೀವು ಅಗ್ನಿವೀರರ ಪಿಂಚಣಿಗಾಗಿ ಅನುದಾನ ಘೋಷಣೆ ಮಾಡಿಲ್ಲ. ನಿಮ್ಮ ಚಕ್ರವ್ಯೂಹದಿಂದ ಹೊರಬರಲು ರೈತರು ಎಂಎಸ್‌ಪಿ ಲೀಗಲ್ ಗ್ಯಾರಂಟಿಯನ್ನು ಕೇಳಿದ್ದರು. ಆದ್ರೆ ನೀವು ರೈತರ ಜತೆ ಮಾತನಾಡಲು ಸಿದ್ಧವಿಲ್ಲʼʼ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರು, ʼʼಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅಗ್ನಿಪಥ್ ಯೋಜನೆಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆʼʼ ಎಂದು ಹೇಳಿದ್ದರು. ಜತೆಗೆ ಯೋಜನೆ ಬಗ್ಗೆ ಚರ್ಚೆಗೆ ಸಿದ್ದ ಎಂದು ಸವಾಲು ಸ್ವೀಕರಿಸಿದ್ದರು. ಹೀಗಾಗಿ ಇಂದು ಕೂಡ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

Continue Reading

ದೇಶ

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

Kerala Landslide: ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಸಜ್ಜುಗೊಳಿಸಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳೊಂದಿಗೆ ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ ತೆರಳುತ್ತಿದೆ.

VISTARANEWS.COM


on

Kerala Landslide
Koo

ವಯನಾಡ್‌: ದೇವರನಾಡು ಕೇರಳ(Kerala)ದಲ್ಲಿ ಭಾರೀ ಮಳೆಗೆ ಭೂಕುಸಿತಕ್ಕೆ(Kerala Landslide) ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆ ಆಗಿದ್ದು, ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಸಜ್ಜುಗೊಳಿಸಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳೊಂದಿಗೆ ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ ತೆರಳುತ್ತಿದೆ.

ಇನ್ನು ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಲಪ್ಪುರಂ ಜಿಲ್ಲೆಯ ನೀಲಂಬುರ್‌ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಚಾಲಿಯಾರ್‌ ನದಿಯಲ್ಲಿ ಅನೇಕರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮುಂದಕ್ಕೈ ಪ್ರದೇಶದಲ್ಲಿ ಅನೇಕ ಮನೆಗಳು. ಅಂಗಡಿಗಳು ಮತ್ತು ವಾಹನಗಳು ಜಲಾವೃತಗೊಂಡಿವೆ.

ಪ್ರಧಾನಿ ಮೋದಿ ಕಳವಳ

ಪ್ರಧಾನಮಂತ್ರಿ ನರೇಂದ್ರ ಮೋದಿ  ಭೂಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ಪರಿಸ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಏತನ್ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದುಃಖಿತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು “ಇನ್ನೂ ಅವಶೇಷಡಿಯಲ್ಲಿ ಸಿಲುಕಿರುವವರನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ. ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನಾವು ನೀಡುತ್ತೇವೆ ಎಂದಿದ್ದಾರೆ.

ಮುಂದಕ್ಕೈ, ಚೂರಲ್‌ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳಾ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಮುಂಕ್ಕೈ ಪ್ರದೇಶದಲ್ಲಿ ಅನೇಕ ಜನರನ್ನು ಏರ್‌ಲಿಫ್ಟ್‌ ಮಾಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಎನ್‌ಡಿಆರ್‌ಎಫ್‌ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಹಲವಾರು ಜನರನ್ನು ನಿರಾಶ್ರಿತರ ತಾಣಕ್ಕೆ ರವಾನಿಸಲಾಗಿದೆ.

ಭಾರೀ ಭೂಕುಸಿತದ ನಂತರ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಂಡಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ. ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲಾಗುವುದು ಮತ್ತು ರಕ್ಷಣಾ ಚಟುವಟಿಕೆಗಳ ನೇತೃತ್ವ ವಹಿಸಲು ರಾಜ್ಯದ ಸಚಿವರು ಗುಡ್ಡಗಾಡು ಜಿಲ್ಲೆಗೆ ತಲುಪಲಿದ್ದಾರೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು ಶೀಘ್ರದಲ್ಲೇ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ತಲುಪಲಿವೆ. ಎರಡು ಹೆಲಿಕಾಪ್ಟರ್‌ಗಳು ವಾಯುಪಡೆಯು ಸೂಲೂರಿನಿಂದ ಹಾರಲಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Continue Reading

ದೇಶ

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Jio Games: ದೇಶದ ಮುಂಚೂಣಿ ಗೇಮಿಂಗ್‌ ಫ್ಲಾಟ್‌ಫಾರಂ ಆಗಿರುವ ʼಜಿಯೋಗೇಮ್ಸ್ʼ, ಜಿಯೋಗೇಮ್ಸ್‌ ಆಪ್‌ ಮತ್ತು ಜಿಯೋ ಸೆಟ್‌ಆಫ್‌ ಬಾಕ್ಸ್‌ನಲ್ಲಿ ಗೂಗಲ್‌ ಗೇಮ್‌ಸ್ನ್ಯಾಕ್ಸ್‌ ಅನ್ನು ಸಂಯೋಜಿಸುವ ಮೂಲಕ ತನ್ನ ಗೇಮಿಂಗ್‌ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿಕೊಂಡಿದೆ. ಇದರಿಂದಾಗಿ ಜಿಯೋಗೇಮ್ಸ್ ಬಳಕೆದಾರರು‌ Daily Sudoku, Om Nom Run, and Traffic Tom ಸೇರಿದಂತೆ ಜನಪ್ರಿಯವಾದ 8 ಗೇಮ್‌ಗಳನ್ನು ಆಡಬಹುದಾಗಿದೆ.

VISTARANEWS.COM


on

Koo

ನವದೆಹಲಿ: ದೇಶದ ಮುಂಚೂಣಿ ಗೇಮಿಂಗ್‌ ಫ್ಲಾಟ್‌ಫಾರಂ ಆಗಿರುವ ʼಜಿಯೋಗೇಮ್ಸ್ʼ, ಜಿಯೋಗೇಮ್ಸ್‌ ಆಪ್‌ ಮತ್ತು ಜಿಯೋ ಸೆಟ್‌ಆಫ್‌ ಬಾಕ್ಸ್‌ನಲ್ಲಿ ಗೂಗಲ್‌ ಗೇಮ್‌ಸ್ನ್ಯಾಕ್ಸ್‌ ಅನ್ನು ಸಂಯೋಜಿಸುವ ಮೂಲಕ ತನ್ನ ಗೇಮಿಂಗ್‌ ಪೋರ್ಟ್‌ಫೋಲಿಯೊವನ್ನು (Jio Games) ವಿಸ್ತರಿಸಿಕೊಂಡಿದೆ. ಇದರಿಂದಾಗಿ ಜಿಯೋಗೇಮ್ಸ್ ಬಳಕೆದಾರರು‌ Daily Sudoku, Om Nom Run and Traffic Tom ಸೇರಿದಂತೆ ಜನಪ್ರಿಯವಾದ 8 ಗೇಮ್‌ಗಳನ್ನು ಆಡಬಹುದಾಗಿದೆ.

Om Nom Run

ʼಗೇಮ್‌ಸ್ನ್ಯಾಕ್ಸ್‌ʼನ ಎಲ್ಲ ಗೇಮ್‌ಗಳೂ ಜಿಯೋಗೇಮ್ಸ್‌ ಬಳಕೆದಾರರಿಗೆ ಉಚಿತವಾಗಿರಲಿವೆ. ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಜಿಯೋಗೇಮ್ಸ್‌ ಆಪ್‌ನ ಹೋಮ್‌ಪೇಜ್‌ನಲ್ಲಿ ಈ ಗೇಮ್‌ಗಳನ್ನು ಸುಲಭವಾಗಿ ಪಡೆಯಬಹುದು. ಜಿಯೋಗೇಮ್ಸ್‌ನ ಮಿನಿ ಆಪ್‌ಗಳಾದ ಮೈಜಿಯೋ ಮತ್ತು ಜಿಯೋಟಿವಿಯಲ್ಲಿಯೂ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್‌ಗಳು ಲಭ್ಯವಿವೆ.

Traffic Tom
Traffic Tom

ಗೂಗಲ್‌ನ ʼಗೇಮ್‌ಸ್ನ್ಯಾಕ್ಸ್‌ ಗೇಮ್‌ʼ ಗಳು ಕಡಿಮೆ ಗಾತ್ರದ್ದಾಗಿರುವ ಜತೆಗೆ ಬೇಗನೆ ತೆರೆದುಕೊಳ್ಳುತ್ತವೆ. ಕಡಿಮೆ ಮೆಮೊರಿ ಇರುವ ಸಾಧನಗಳಲ್ಲಿ, ವಿವಿಧ ನೆಟ್‌ವರ್ಕ್‌ ಸ್ಥಿತಿಯಲ್ಲಿಯೂ HTML5 ನ ಈ ಗೇಮ್‌ಗಳನ್ನು ಆಡಬಹುದಾಗಿದೆ.

ಇದನ್ನೂ ಓದಿ: Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

ಭಾರತದಲ್ಲಿ ಲಕ್ಷಗಟ್ಟಲೆ ಬಳಕೆದಾರರ ಗೇಮಿಂಗ್‌ ಅನುಭವವನ್ನು ಸುಧಾರಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ ಎಂದು ಕಂಪನಿಯು ತಿಳಿಸಿದೆ. ಇದರಿಂದಾಗಿ ಸಾಮಾನ್ಯವಾದ ಗೇಮ್‌ಗಳನ್ನು ಗ್ರಾಹಕರು ಸುಲಭವಾಗಿ ಆಡಬಹುದು ಎಂದು ತಿಳಿಸಿದೆ.

Continue Reading

ದೇಶ

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

The RajaSaab Movie: ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ “ದಿ ರಾಜಾಸಾಬ್” ಸಣ್ಣ ಝಲಕ್‌ ಅನ್ನು ಸೋಮವಾರ ಚಿತ್ರತಂಡ ಬಿಡುಗಡೆ ಮಾಡಿದೆ. . ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ. ಗ್ಲಿಂಪ್ಸ್‌ ಜತೆಗೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿದೆ. ‘ರಾಜಾ ಸಾಬ್’ 2025ರ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Rebel star Prabhas starrer The Rajasaab short glimpse released
Koo

ಬೆಂಗಳೂರು: ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌, ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಗ್ಲಿಂಪ್ಸ್‌ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರ “ದಿ ರಾಜಾಸಾಬ್” (The RajaSaab Movie) ಸಣ್ಣ ಝಲಕ್‌ ಅನ್ನು ಸೋಮವಾರ ಚಿತ್ರತಂಡ ಬಿಡುಗಡೆ ಮಾಡಿದೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ.

ಗ್ಲಿಂಪ್ಸ್‌ ಜತೆಗೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿದೆ. ‘ರಾಜಾ ಸಾಬ್’ 2025ರ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಬರೀ ತೆಲುಗಿನಲ್ಲಷ್ಟೇ ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಾಜಾಸಾಬ್‌ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾದರೆ, ಇದ್ಯಾವ ರೀತಿಯ ಸಿನಿಮಾ? ರೋಮ್ಯಾಂಟಿಕ್ ಹಾರರ್ ಕಾಮಿಡಿಯಲ್ಲಿ ಪ್ರಭಾಸ್‌ ಎಲ್ಲರನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾ ಮೂಲಕ ಪ್ರಭಾಸ್‌ ಅವರನ್ನು ಇನ್ನಷ್ಟು ಸ್ಟೈಲಿಶ್ ಲುಕ್‌ನಲ್ಲಿ ತೋರಿಸಲಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ

ಈಗಾಗಲೇ ಶೇ. 40% ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್‌ಎಸ್ ಥಮನ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ರಾಮ್ ಲಕ್ಷ್ಮಣ್ ಮಾಸ್ಟರ್ಸ್ ಮತ್ತು ಕಿಂಗ್ ಸೊಲೊಮನ್ ಫೈಟ್ ಕೊರಿಯೋಗ್ರಫಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಭರ್ಜರಿ ಆಕ್ಷನ್‌ ನಿರೀಕ್ಷಿಸಬಹುದಾಗಿದೆ. ಬಾಹುಬಲಿ ಖ್ಯಾತಿಯ ಕಮಲಾ ಕಣ್ಣನ್ ಆರ್.ಸಿ. ವಿಎಫ್‌ಎಕ್ಸ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ದೊಡ್ಡ ಪರದೆಯ ಮೇಲೆ ದೃಶ್ಯ ಚಮತ್ಕಾರ ನೀಡಲಿದೆ.

ಮಾರುತಿ ನಿರ್ದೇಶನದ ರಾಜಾ ಸಾಬ್‌ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ರಾಜಾ ಸಾಬ್ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಪ್ರತಿ ರೋಜು ಪಂಡಗʼ, ತೆಲುಗಿನ ಹಾರರ್ ಕಾಮಿಡಿ ‘ಪ್ರೇಮ ಕಥಾ ಚಿತ್ರಂʼ ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಮಹಾನುಭಾವುಡು’ ಸೇರಿ ಹಲವು ಸೂಪರ್‌ಹಿಟ್‌ಗಳಿಗೆ ಸಿನಿಮಾ ನಿರ್ದೇಶನ ಮಾಡಿದ ಮಾರುತಿ, ಇದೀಗ ರಾಜಾಸಾಬ್‌ ಮೂಲಕ ರೊಮ್ಯಾಂಟಿಕ್ ಹಾರರ್ ಎಂಟರ್ಟೈನರ್ ಜತೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

‘ಕಾರ್ತಿಕೇಯ 2’ ಮತ್ತು ‘ಧಮಾಕಾ’ ಸೇರಿ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ತೆಲುಗು ಚಿತ್ರೋದ್ಯಮದಲ್ಲಿ ಪ್ರಮುಖ ಹೆಸರು. ಇದೀಗ ಬಹುಕೋಟಿ ವೆಚ್ಚದಲ್ಲಿ ರಾಜಾ ಸಾಬ್ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಅದ್ಧೂರಿಯಾಗಿ, ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದರೆ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂಗೀತವನ್ನು ಎಸ್‌ಎಸ್‌ ಥಮನ್ ಮಾಡಿದರೆ, ರಾಮ್ ಲಕ್ಷ್ಮಣ್ ಮತ್ತು ಕಿಂಗ್ ಸೊಲೊಮನ್ ಸವರ ಸಾಹಸ ಈ ಚಿತ್ರಕ್ಕಿರಲಿದೆ.

Continue Reading
Advertisement
SL vs IND 3rd T20I
ಕ್ರೀಡೆ8 mins ago

SL vs IND 3rd T20I: ಇಂದು ಅಂತಿಮ ಟಿ20; ವೈಟ್‌ವಾಶ್‌ ಭೀತಿಯಿಂದ ಪಾರಾದೀತೇ ಶ್ರೀಲಂಕಾ?

Liquor Price Karnataka
ಪ್ರಮುಖ ಸುದ್ದಿ19 mins ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Parliament Session
ರಾಜಕೀಯ22 mins ago

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Kerala Landslide
ದೇಶ29 mins ago

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

ದೇಶ33 mins ago

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Rebel star Prabhas starrer The Rajasaab short glimpse released
ದೇಶ45 mins ago

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

IPL 2025
ಕ್ರೀಡೆ57 mins ago

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಪ್ರಮುಖ ಸುದ್ದಿ59 mins ago

Uttara Kannada Landslide: ನೀರಿನಡಿ ಇನ್ನೂ 9 ದೇಹಗಳಿವೆ ಎಂದ ಸ್ವಾಮೀಜಿ! ಬರಲಿದೆ ಕೇರಳದಿಂದ ಬಾರ್ಜ್‌ ಮೌಂಟೆಡ್‌ ಹಿಟಾಚಿ

Mahila Samman Savings Certificate
ಮನಿ-ಗೈಡ್1 hour ago

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Kerala Landslide
ದೇಶ1 hour ago

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ17 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ20 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌