Literature Festival | ಜೈಪುರ ಸಾಹಿತ್ಯ ಉತ್ಸವ 2023ಕ್ಕೆ ವೇದಿಕೆ ಸಜ್ಜು; ಜ. 19ರಿಂದ ಪ್ರಾರಂಭ - Vistara News

ಕರ್ನಾಟಕ

Literature Festival | ಜೈಪುರ ಸಾಹಿತ್ಯ ಉತ್ಸವ 2023ಕ್ಕೆ ವೇದಿಕೆ ಸಜ್ಜು; ಜ. 19ರಿಂದ ಪ್ರಾರಂಭ

Literature Festival | 2023ರ ಜನವರಿ 19ರಿಂದ 23ರವರೆಗೆ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಉತ್ಸವಕ್ಕೆ ಜಗತ್ತಿನ ಖ್ಯಾತನಾಮ ಲೇಖಕರು, ಕವಿಗಳು, ಭಾಷಾಂತರಕಾರರು ಪಾಲ್ಗೊಳ್ಳುತ್ತಿದ್ದು, ವೇದಿಕೆ ಸಹ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವವರ ಮೂರನೇ ಪಟ್ಟಿಯೂ ಬಿಡುಗಡೆಗೊಂಡಿದೆ.

VISTARANEWS.COM


on

jaipur fest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಶ್ವದ ದೊಡ್ಡ ಸಾಹಿತ್ಯ ಉತ್ಸವಗಳಲ್ಲಿ ಒಂದಾದ ಜೈಪುರ ಸಾಹಿತ್ಯ ಉತ್ಸವವು ೨೦೨೩ರ (Literature Festival) ಜ. ೧೯ರಿಂದ ೨೩ರವರೆಗೆ ನಡೆಯುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಸಾಹಿತ್ಯ ಸಂಭ್ರಮಕ್ಕಾಗಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಹೆಸರಾಂತ ಲೇಖಕರು, ಪತ್ರಕರ್ತರು, ಭಾಷಾಂತರಕಾರರು, ಕವಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳ ೩ನೇ ಪಟ್ಟಿಯೂ ಬಿಡುಗಡೆಗೊಂಡಿದೆ.

ಕಳೆದ 15 ವರ್ಷಗಳಿಂದ ಜೈಪುರ ಸಾಹಿತ್ಯ ಉತ್ಸವವು ಭಾಷೆಗಳ ವೈವಿಧ್ಯತೆಯನ್ನು ಪ್ರತಿನಿಧಿಸುವ ಮತ್ತು ಅನುವಾದಿತ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಒಂದು ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿದೆ. ಭಾಷಾಂತರವು ವಿಭಿನ್ನ ಸಂಸ್ಕೃತಿಗಳ ಸಂಪರ್ಕ, ಪರಿಚಯ, ಸಂಹವನಗಳಿಗೆ ಅನುಕೂಲವಾಗಿದ್ದು, ಒಂದು ಭಾಷೆಯ ಉತ್ಕೃಷ್ಟತೆಯನ್ನು ಸಾರುವ ಸಾಧನವೂ ಆಗಿದೆ.

ಪ್ರಸ್ತುತ ಜೈಪುರದ ಅಮೇರ್‌ನ ಹೋಟೆಲ್ ಕ್ಲಾರ್ಕ್ಸ್‌ನಲ್ಲಿ ನಡೆಯಲಿರುವ “ಜೈಪುರ ಸಾಹಿತ್ಯ ಉತ್ಸವ”ದಲ್ಲಿ ಜಾಗತಿಕ ಮಟ್ಟದ ಹಲವಾರು ಖ್ಯಾತನಾಮ ಭಾಷಾಂತರಕಾರರು ಪಾಲ್ಗೊಳ್ಳಲಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ವಿಷಯ ಮಂಡನೆ ಮಾಡಲಿರುವ ಸಂಪನ್ಮೂಲ ವ್ಯಕ್ತಿಗಳ ಮೂರನೇ ಪಟ್ಟಿಯು ಬಿಡುಗಡೆಗೊಂಡಿದ್ದು, ಅವರ ವಿವರ ಇಂತಿದೆ.

ಪ್ರಮುಖವಾಗಿ ಪೋರ್ಚುಗೀಸ್‌ ಲೇಖಕರಾದ ಅನಾ ಫಿಲೋಮಿನಾ ಅಮರಾಲಿ, ಖ್ಯಾತ ಪತ್ರಕರ್ತ, ಲೇಖಕ ಮತ್ತು ಭಾಷಾಂತರಕಾರ ಅರುನವ ಸಿನ್ಹಾ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅರುಣ್‌ ಚಕ್ರವರ್ತಿ, ಕಾದಂಬರಿಕಾರ ದಿಬೇಕ್ ದೇಬ್ರಾಯ್, ಇಟಲಿಯ ಲೇಖಕ ಜಾರ್ಜಿಯೋ ಮೊಂಟೆಫೊಸ್ಚಿ, ಹೆಸರಾಂತ ದ್ವಿಭಾಷಾ ಸಂಪಾದಕ ಮಣಿ ರಾವ್, ಲೇಖಕ ಮತ್ತು ಭಾಷಾಂತರಕಾರರಾದ ಮನೀಷಾ ಚೌಧರಿ, ಭಾಷಾಂತರಕಾರ ಮತ್ತು ಅಂಕಣಕಾರರಾದ ಮಿನಿ ಕೃಷ್ಣನ್, ಪದ್ಮಭೂಷಣ ಪುರಸ್ಕೃತ ಮೃದಿ ಕೀರ್ತಿ, ಸಂಗೀತ ರಾಯಭಾರಿ & ಯುಎಇ ಮತ್ತು ಈಜಿಪ್ಟ್‌ನ ಭಾರತದ ರಾಯಭಾರಿ ನವದೀಪ್ ಸೂರಿ, ಪ್ರಕಾಶಕ ಮತ್ತು ಭಾಷಾಂತರಕಾರ ಆಸ್ಕರ್ ಪುಜೋಲ್, ಅನುವಾದಗಾರ್ತಿ ರಿಟಾ ಕೊಠಾರಿ, ಭಾರತೀಯ ಸಮಕಾಲೀನ ಬರಹಗಾರ ಮತ್ತು ಕಲಾವಿದ ಸಾಜ್ ಅಗರ್ವಾಲ್, ಕಾದಂಬರಿಕಾರರಾದ ಸಾಕ್ಷ್ಯಾ ಜೈನ್, ಖ್ಯಾತ ಮಹಿಳಾ ಲೇಖಕಿ ಊರ್ವಶಿ ಬುಟಾಲಿಯಾ, ಕಾದಂಬರಿಕಾರರಾದ ವಿನೀತ್ ಗಿಲ್ ಮತ್ತು ಖ್ಯಾತ ಕವಿ, ಸಂಗೀತಗಾರ ಹಾಗೂ ಸಿನಿಮಾ ತಜ್ಞ ಯತೀಂದ್ರ ಮಿಶ್ರಾ ಸೇರಿದಂತೆ ಇನ್ನೂ ಹಲವಾರು ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

2013ರಲ್ಲಿ ದಕ್ಷಿಣ ಏಷ್ಯಾ ಕವಿಗೋಷ್ಠಿಯಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದ ಅಭಯ್ ಕೆ, ಕಾದಂಬರಿಕಾರ, ಸಾಹಿತ್ಯ ಪತ್ರಕರ್ತ ಮತ್ತು ಭಾಷಾಂತರಕಾರರಾದ ಅನುಪಮ ರಾಜು, ಎಸ್ಟೋನಿಯನ್ ಕವಿ ಡೊರಿಸ್ ಕರೆವಾ ಮತ್ತು ಪೆನ್ ಟ್ರಾನ್ಸ್‌ಲೇಟ್ಸ್ ಅವಾರ್ಡ್ ವಿಜೇತರಾದ ಕೊ ಕೊ ಥೆಟ್ ಸಹ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ | ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅವಮಾನ ಅಕ್ಷಮ್ಯ: ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ ದೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್;‌ ಕೆರಳಿ ಕೆಂಡವಾದ ಬಿಜೆಪಿ!

Randeep Surjewala: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ವಿಶೇಷ ವಿಮಾನಗಳಲ್ಲಿ ಓಡಾಡುತ್ತಿರುವುದಕ್ಕೆ ರಾಜ್ಯ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ. ಕನ್ನಡಿಗರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Randeep Surjewala
Koo

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election) ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ಮುಂದುವರಿದಿದೆ. ಅದರಲ್ಲೂ, ಕರ್ನಾಟಕ ಕಾಂಗ್ರೆಸ್‌ (Karnataka Congress) ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ವಿಶೇಷ ವಿಮಾನಗಳಲ್ಲಿ ಓಡಾಡುತ್ತಿರುವುದಕ್ಕೆ ಕರ್ನಾಟಕ ಬಿಜೆಪಿ (Karnataka BJP) ಆಕ್ರೋಶ ವ್ಯಕ್ತಪಡಿಸಿದೆ. “ಕನ್ನಡಿಗರ ತೆರಿಗೆ ಹಣದಲ್ಲಿ ರಣದೀಪ್‌ ಸುರ್ಜೇವಾಲ (Randeep Surjewala) ಅವರು ಟ್ರಿಪ್‌ ಮಾಡುತ್ತಿದ್ದಾರೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

“ಕನ್ನಡಿಗರಿಗೆ ಬರ ಪರಿಹಾರ, ಅಭಿವೃದ್ಧಿಗೆ ಅನುದಾನ ಕೊಡಲು ಖಜಾನೆ ಖಾಲಿ ಮಾಡಿ, ಹಣವಿಲ್ಲ ಎಂದು ಕೂತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಲೆಕ್ಷನ್‌ ಏಜೆಂಟ್ ಸುರ್ಜೇವಾಲಾ ಅವರ ಚುನಾವಣಾ ಪ್ರಚಾರಕ್ಕೆ ಸುತ್ತಾಡಲು ಸ್ಪೆಷಲ್ ಫ್ಲೈಟ್‌ಗಳ ವ್ಯವಸ್ಥೆಯನ್ನೇ ಮಾಡಿದೆ. ಎಟಿಎಂ ಸರ್ಕಾರ ಕೊಟ್ಟು ಕಳಿಸುವ ಲೂಟಿ ಹಣವನ್ನು ಚುನಾವಣೆಗಾಗಿ ದೇಶದ ತುಂಬ ತೆಗೆದುಕೊಂಡು ಹೋಗಿ ಹಂಚುವ ಜವಾಬ್ದಾರಿಯನ್ನೂ ನೀಡಲಾಗಿದೆಯೇ” ಎಂದು ಪ್ರಶ್ನಿಸಿದೆ.

“ಕನ್ನಡಿಗರು ಕುಡಿಯಲು ಹನಿ ನೀರಿಲ್ಲದೆ ಸತ್ತರೂ ಸಿದ್ದರಾಮಯ್ಯ ಸರ್ಕಾರಕ್ಕೆ ಚಿಂತೆ ಇಲ್ಲ. ಆದರೆ, ಹೈಕಮಾಂಡ್ ಹೇಳಿದಂತೆ ಕೇಳಿಕೊಂಡು ಕಪ್ಪ ಕಾಣಿಕೆ ಸಲ್ಲಿಸುತ್ತ, ಅವರ ಸೇವೆ ಮಾಡುತ್ತ, ಕುರ್ಚಿ ಉಳಿಸಿಕೊಳ್ಳುವುದೇ ಸಿದ್ದರಾಮಯ್ಯ ಅವರ ಗುರಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಣದೀಪ್‌ ಸುರ್ಜೇವಾಲಾ ಅವರ ಪ್ರವಾಸದ ವಿವರವನ್ನು ಬಿಜೆಪಿ ಹಂಚಿಕೊಂಡು ತಿರುಗೇಟು ನೀಡಿದೆ.

ಬರ ಪರಿಹಾರ; ಸಿಎಂ ಅಸಮಾಧಾನ

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ಬೆಳೆ ನಷ್ಟವಾಗಿದೆ. 48 ಸಾವಿರ ಹೆಕ್ಟೇರ್‌ ಬೆಳೆ ನಾಶ ಆಗಿದೆ. 223 ತಾಲೂಕುಗಳು ಬರಪೀಡಿತ ಎಂಬುದಾಗಿ ಘೋಷಣೆ ಮಾಡಿದ್ದೇವೆ. ಹಾಗಾಗಿ, ನಾವು ಕೇಂದ್ರ ಸರ್ಕಾರಕ್ಕೆ 18,172 ಕೋಟಿ ರೂ. ಪರಿಹಾರ ಕೇಳಿದ್ದೆವು. ಆದರೆ, ಈಗ ಕೇಂದ್ರ ಸರ್ಕಾರವು ನಾವು ಕೇಳಿದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಪರಿಹಾರ ನೀಡಿದೆ. ಇದು ತುಂಬ ಕಡಿಮೆ ಆಯಿತು. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂಬುದಾಗಿ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.

ಮಲತಾಯಿ ಧೋರಣೆ ಎಂದ ಕೃಷ್ಣ ಭೈರೇಗೌಡ

ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಕೇವಲ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಈ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Drought Relief: 3,454 ಕೋಟಿ ರೂ. ಬರ ಪರಿಹಾರ; ‘ಅರೆಕಾಸಿನ ಮಜ್ಜಿಗೆ’ ಎಂದ ಸಿದ್ದರಾಮಯ್ಯ!

Continue Reading

ಕ್ರೈಂ

Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

Murder Case : ಕಂಠ ಪೂರ್ತಿ ಕುಡಿದು ಬಂದು ರಾತ್ರಿ ಎಲ್ಲ ಪತ್ನಿ ಜತೆಗೆ ಜಗಳವಾಡಿದ್ದ. ಬೆಳಗಾಗುವಷ್ಟರಲ್ಲಿ ಕೊಡಲಿಯಿಂದ ಹೊಡೆದು ಪತ್ನಿಯನ್ನೆ ಕೊಂದು ಹಾಕಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಸಿದ್ದು, ಸಂಶಯ ಪಿಶಾಚಿ ಪತಿಯನ್ನು ಬಂಧಿಸಿದ್ದಾರೆ.

VISTARANEWS.COM


on

By

Murder case in dharwad
Koo

ಧಾರವಾಡ: ಪತ್ನಿ ಮೇಲೆ ಸಂಶಯ ಪಟ್ಟ ಪಾಪಿ ಪತಿಯೊಬ್ಬ ಕೊಂದೆ (Murder Case) ಬಿಟ್ಟಿದ್ದಾನೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲವ್ವ ಬಳ್ಳೂರ ಮೃತ ದುರ್ದೈವಿ. ಶಿವಪ್ಪ ಬಳ್ಳೂರ ಎಂಬಾತ ಪತ್ನಿ ಕೊಂದವನು.

ಶುಕ್ರವಾರ ರಾತ್ರಿ ಕುಡಿದು ಬಂದ ಶಿವಪ್ಪ ಪತ್ನಿ ಮಲ್ಲವ್ವಳ ಜತೆಗೆ ಜಗಳ ಮಾಡಿದ್ದಾನೆ. ನಂತರ ಶನಿವಾರ ಬೆಳಗಿನ ಜಾವ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಂದಿದ್ದಾನೆ. ಮದುವೆ ಆಗಿ 15 ವರ್ಷವಾದರೂ ಶಿವಪ್ಪ ನಿತ್ಯ ಪತ್ನಿ ಮೇಲೆ ಸಂಶಯ ಪಡುತ್ತಿದ್ದ. ಶುಕ್ರವಾರ ರಾತ್ರಿಯಿಡೀ ಜಗಳ ಮಾಡಿ ಬೆಳಗ್ಗೆ ಸಿಟ್ಟಿನಲ್ಲಿ ಪತ್ನಿಯನ್ನು ಕೊಂದು ಮನೆಯಲ್ಲಿಯೇ ಇದ್ದ.

ಅಕ್ಕ-ಪಕ್ಕದ ಮನೆಯವರು ಬಂದು ನೋಡಿದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಮಲ್ಲವ್ವಳನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಯಾದ ಜಾಗದಲ್ಲೇ ಕುಳಿತಿದ್ದ ಶಿವಪ್ಪನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

ತುಮಕೂರಿನಲ್ಲಿ ಮಹಿಳೆ ಶವ ಪತ್ತೆ

ತಲೆ ಜಜ್ಜಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕಮಲಮ್ಮ (35) ಕೊಲೆಯಾದವರು. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕರೆಮಾದೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕರೆಮಾದೇನಹಳ್ಳಿ ಗ್ರಾಮದ ಚಂದ್ರಣ್ಣನ ಪತ್ನಿ ಕಮಲಮ್ಮ ತಡರಾತ್ರಿ ಹೊರಗೆ ಹೋಗಿದ್ದರು. ಈ ವೇಳೆ ಯಾರೋ ಹಂತಕರು ಕಲ್ಲಿನಿಂದಲ್ಲೋ ಅಥವಾ ಮಾರಾಕಸ್ತ್ರದಿಂದಲ್ಲೋ ತಲೆ ಜಜ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈ ಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು ಗ್ರಾಮಾಂತರ

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದಾಗ ಬಾಲಕಿಗೆ ಹಾವು ಕಚ್ಚಿದೆ. ಇದರಿಂದ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

VISTARANEWS.COM


on

By

snake bite
Koo

ದೊಡ್ಡಬಳ್ಳಾಪುರ: ಹಾವು ಕಚ್ಚಿ 7 ವರ್ಷದ ಬಾಲಕಿ (Snake Bite) ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ‌ಕೋಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಟಿ ಹೊಸಹಳ್ಳಿ ಗ್ರಾಮದ ರಾಮಾಂಜಿ ಎನ್ನುವವರ ಮಗಳು ಅನುಷಾ (7) ಮೃತ ದುರ್ದೈವಿ.

ವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ನಿನ್ನೆ ಶುಕ್ರವಾರ ಸಂಜೆ ಅನುಷಾಳ ತಂದೆ-ತಾಯಿ‌ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿ ಅನುಷಾಗೆ ಹಾವು ಕಚ್ಚಿದೆ.

ಕೂಡಲೆ ಮಗಳು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಪೋಷಕರು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನುಷಾ ಮೃತಪಟ್ಟಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!

ನವದೆಹಲಿ: ಹೆಣ್ಣುಮಕ್ಕಳಿಗೆ ಸೌಂದರ್ಯದ (Beauty) ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಹೆಚ್ಚು ವಯಸ್ಸಾದರೂ 18ರ ಯುವತಿಯಂತೆ ಕಾಣಲು ಹಲವು ಕಸರತ್ತು ಮಾಡುತ್ತಾರೆ. ಇನ್ನು ನಗರ ಹಾಗೂ ಮಹಾನಗರಗಳಲ್ಲಂತೂ ಬ್ಯೂಟಿ ಪಾರ್ಲರ್‌ಗಳಿಗೆ ನಿಯಮಿತವಾಗಿ ತೆರಳಿ ಮೇಕಪ್‌, ಫೇಶಿಯಲ್‌ (Facial) ಮಾಡಿಸಿಕೊಳ್ಳುತ್ತಾರೆ. ಆದರೆ, ಅಮೆರಿಕದಲ್ಲಿ ಸ್ಪಾಗಳಲ್ಲಿ ಫೇಶಿಯಲ್‌ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು (HIV) ತಗುಲಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವ್ಯಾಂಪೈರ್‌ ಫೇಶಿಯಲ್‌ (Vampire Facial) ಮಾಡಿಸಿಕೊಂಡ ಕಾರಣ ಇವರಿಗೆ ಎಚ್‌ಐವಿ ತಗುಲಿದೆ ಎಂಬ ಮಾಹಿತಿಯು ಅಧ್ಯಯನ ವರದಿಯಿಂದ ಲಭ್ಯವಾಗಿದೆ.

ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್‌ ಇಂಜೆಕ್ಷನ್‌ ಪ್ರೊಸೀಜರ್‌ ಮೂಲಕ ನಡೆಸುವ ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್‌ ಫೇಶಿಯಲ್‌ಅನ್ನು ಕಡಿಮೆ ಬೆಲೆಗೆ ಮಾಡುವುದರಿಂದ ಹೆಚ್ಚಿನ ಮಹಿಳೆಯರು, ಅದರಲ್ಲೂ 40 ವರ್ಷ ದಾಟಿದವರು ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಈಗ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ಏನಿದು ವ್ಯಾಂಪೈರ್‌ ಫೇಶಿಯಲ್?‌

ವ್ಯಾಂಪೈರ್‌ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್‌ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್‌ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್‌ ರಿಚ್‌ ಫೈಬ್ರಿನ್‌ (PRF) ಎಂದು ಕೂಡ ಕರೆಯಲಾಗುತ್ತದೆ.

ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಇದನ್ನು ಭಾರತದ ಪ್ರಮುಖ ನಗರಗಳು ಸೇರಿ ಜಗತ್ತಿನಾದ್ಯಂತ ಸ್ಪಾಗಳಲ್ಲಿ ಮಾಡುತ್ತಾರೆ. ಆದರೆ, ಈ ಫೇಶಿಯಲ್‌ ಈಗ ಮಹಿಳೆಯರ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹೆಣ್ಣುಮಕ್ಕಳ ಕೈಗಳಿಂದ ರಕ್ತವನ್ನು ತೆಗೆದು, ಅದರಿಂದ ಪ್ಲೇಟ್‌ಲೆಟ್‌ಗಳನ್ನು ವಿಗಂಡಣೆ ಮಾಡಿ, ಆ ರಕ್ತವನ್ನು ಸಣ್ಣ ಸೂಜಿಯ ಮೂಲಕ ಮುಖಕ್ಕೆ ಅಳವಡಿಸುತ್ತಾರೆ. ಇದರಿಂದ ಚರ್ಮವು ಹೊಳೆಯುತ್ತದೆ. ಸುಕ್ಕುಗಳು ಮಾಯವಾಗುತ್ತಿವೆ. ಇದು ಸುಲಭ ಹಾಗೂ ಅಷ್ಟೇನೂ ಹೆಚ್ಚಿನ ಹಣ ಖರ್ಚಾಗದ ಕಾರಣ ಜಾಸ್ತಿ ಮಹಿಳೆಯರು ಈ ಫೇಶಿಯಲ್‌ ಮೊರೆಹೋಗುತ್ತಿದ್ದಾರೆ ಎನ್ನಲಾಗಿದೆ. ಇಂತಹ ಫೇಶಿಯಲ್‌ ಮಾಡಿಸಿಕೊಳ್ಳುವ ಮೊದಲು ಹೆಣ್ಣುಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಎಚ್ಚರಿಕೆ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹುಬ್ಬಳ್ಳಿ

Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

Neha Murder case : ನೇಹಾ ಕೊಲೆ ಆರೋಪಿ ಫಯಾಜ್‌ನನ್ನು ಸಿಐಡಿ ತಂಡ ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದೆ. ಶನಿವಾರ ಫಯಾಜ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಡಿಎನ್ಎ ಟೆಸ್ಟ್‌ಗೆ (DNA Test) ಅನುಮತಿ ಪಡೆಯಲಿದ್ದಾರೆ.

VISTARANEWS.COM


on

By

Neha Murder Case neha And fayas
ಕೊಲೆಯಾದ ನೇಹಾ ಹಾಗೂ ಸ್ಥಳ ಮಹಜರು ಮಾಡಿದ್ದ ಸಿಐಡಿ ಅಧಿಕಾರಿಗಳು
Koo

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ (Neha Murder Case) ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತನಿಖೆಯು ಮುಂದುವರಿದಿದೆ. ಆರೋಪಿ ಫಯಾಜ್‌ನ ಡಿಎನ್‌ಎ (DNA Test) ಟೆಸ್ಟ್‌ಗೆ ಸಿಐಡಿ ಅಧಿಕಾರಿಗಳು ಅನುಮತಿ ಕೇಳಿದ್ದಾರೆ. ಈ ಸಂಬಂಧ 1ನೇ ಆ್ಯಡಿಷನಲ್ ಸಿವಿಲ್ ಜಡ್ಡ್ ನ್ಯಾಯಾಲಯದಲ್ಲಿ ಕೋರಿಕೆಯ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯವು ಮಧ್ಯಾಹ್ನ 1 ಗಂಟೆಗೆ ಆರೋಪಿಯ ಹಾಜರಾತಿಗೆ ಸೂಚಿಸಿತ್ತು. ಆದರೆ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸಮಯ ಬದಲಾವಣೆಗೆ ನ್ಯಾಯಾಧೀಶರ ಬಳಿ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಸಿಐಡಿ ಮನವಿ ಮೇರೆಗೆ ಆರೋಪಿಯ ಹಾಜರಾತಿಗೆ ಮಧ್ಯಾಹ್ನ 3 ಗಂಟೆಯ ಸಮಯವನ್ನು ನಿಗದಿ ಮಾಡಲಾಗಿದೆ. ಇನ್ನೂ ವೈದ್ಯರು ನ್ಯಾಯಾಧೀಶರ ಎದುರೆ ಫಯಾಜ್‌ನ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಲಿದ್ದಾರೆ.

ಇದನ್ನೂ ಓದಿ: Road Accident : ಲಾರಿ- ಬೈಕ್‌ ಅಪಘಾತ; ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟ ಪತಿ

ನೇಹಾ ಹತ್ಯೆ ಮಾಡಿದ ಹಂತಕನ ಎನ್‌ಕೌಂಟರ್‌ ಮಾಡಿ- ಮಾಜಿ ಸಚಿವ ರಾಜುಗೌಡ

ನೇಹಾ ಹತ್ಯೆ ಮಾಡಿದ್ದ ಹಂತಕನನ್ನು ಎನ್‌ಕೌಂಟರ್ ಮಾಡಿ ಎಂದು ಯಾದಗಿರಿ ಜಿಲ್ಲೆಯ ಸುರಪುರನಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ ನೀಡಿದ್ದಾರೆ. ನೇಹಾ ಹತ್ಯೆ ಘಟನೆ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಬೇಜವಾಬ್ದಾರಿತನ ಹೇಳಿಕೆ ನೀಡಿರುವುದು ಸರಿಯಲ್ಲ. ಯಾರು ಇಂತಹ ಹೇಳಿಕೆ ಕೊಡಬಾರದು ಎಂದು ಕಿಡಿಕಾರಿದರು.

ಇಂತಹ ಘಟನೆಗಳಿಂದ ಪೋಷಕರು ಕಾಲೇಜುಗಳಿಗೆ ಮಕ್ಕಳಿಗೆ ಕಳುಹಿಸಲು ಭಯಪಡುತ್ತಿದ್ದಾರೆ. ಯಾರೆ ತಪ್ಪು ಮಾಡಿದರೂ ಆರೋಪಿಗಳಿಗೆ ಎನ್‌ಕೌಂಟರ್ ಮಾಡಿದರೆ ಭಯ ಇರುತ್ತದೆ. ಯಾವುದೇ ಕೋಮಿನ ಮಹಿಳೆ ಮೇಲೆ ದೌರ್ಜನ್ಯ ಮಾಡಿದರೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ನೇಹಾ ಅವರ ತಂದೆ ನೋವಿನಲ್ಲಿದ್ದಾರೆ, ಹೆಣ್ಣು ಹೆತ್ತವರಿಗೆ ನೋವು ಇರುತ್ತದೆ. ಸಂತೋಷ ಲಾಡ್‌ಗೆ ಹೆಣ್ಣುಮಕ್ಕಳು ಇಲ್ಲ ಹೀಗಾಗಿ ಅವರು ಬಾಯಿಗೆ ಬಂದಾಗ ಮಾತನಾಡುತ್ತಾರೆ. ಯಾರೆ ಆದರೂ ಮಕ್ಕಳು ಮಕ್ಕಳೇ ಅಲ್ವಾ, ನೇಹಾ ತಂದೆ ನೋವಿನಲ್ಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ರಾಜುಗೌಡ ಒತ್ತಾಯಿಸಿದರು.

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇತ್ತ ಹತ್ಯೆ ಮಾಡಿ ಎಸ್ಕೇಪ್‌ ಆಗುತ್ತಿದ್ದ ಫಯಾಜ್‌ನನ್ನು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Randeep Surjewala
ಕರ್ನಾಟಕ15 mins ago

Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್;‌ ಕೆರಳಿ ಕೆಂಡವಾದ ಬಿಜೆಪಿ!

Murder case in dharwad
ಕ್ರೈಂ21 mins ago

Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

miss universe Buenos Aires
ವಿದೇಶ25 mins ago

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Gurucharan Singh Taarak Mehta Ka Ooltah Chashmah actor missing
ಕಿರುತೆರೆ39 mins ago

Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ

snake bite
ಬೆಂಗಳೂರು ಗ್ರಾಮಾಂತರ50 mins ago

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

MDH, Everest Spices
ದೇಶ59 mins ago

MDH, Everest Spices: ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಪತ್ತೆ

Neha Murder Case neha And fayas
ಹುಬ್ಬಳ್ಳಿ1 hour ago

Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

Lok Sabha Election-2024
Lok Sabha Election 20241 hour ago

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

gold rate today beauty
ಚಿನ್ನದ ದರ1 hour ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Drought Relief
ಕರ್ನಾಟಕ1 hour ago

Drought Relief: 3,454 ಕೋಟಿ ರೂ. ಬರ ಪರಿಹಾರ; ‘ಅರೆಕಾಸಿನ ಮಜ್ಜಿಗೆ’ ಎಂದ ಸಿದ್ದರಾಮಯ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

road Accident in kolar evm
ಕೋಲಾರ2 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ9 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಟ್ರೆಂಡಿಂಗ್‌