ಇಷ್ಟುದ್ದ ಮೂಗು ಭಾರವಾಗಲ್ವಾ? - ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಸೇರಿದ ಮೂಗು ಇದು! - Vistara News

ವೈರಲ್ ನ್ಯೂಸ್

ಇಷ್ಟುದ್ದ ಮೂಗು ಭಾರವಾಗಲ್ವಾ? – ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಸೇರಿದ ಮೂಗು ಇದು!

Historic Vids ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಥಾಮಸ್ ವೆಡರ್ಸ್​ ಕುತೂಹಲಕಾರಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇವರು ಇಂಗ್ಲೆಂಡ್​ನವರಾಗಿದ್ದು, 1770ರ ದಶಕದಲ್ಲಿ ಇದ್ದರು. ​ ಸರ್ಕಸ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅತಿ ಉದ್ದನೆಯ, ದಪ್ಪದಾದ ಮೂಗಿನಿಂದಲೇ ಅವರು ಪ್ರಸಿದ್ಧಿ ಪಡೆದಿದ್ದರು.

VISTARANEWS.COM


on

This Is the World longest nose
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ, ಅತಿ ಕುಳ್ಳನೆಯ ವ್ಯಕ್ತಿ, ವಿಶ್ವದಲ್ಲೇ ಅತ್ಯಂತ ಉದ್ದನೆಯ ಮೀಸೆ ಹೊಂದಿರುವವರು, ದೊಡ್ಡ ಪಾದ ಇರುವ ವ್ಯಕ್ತಿ..ಹೀಗೆ ವಿವಿಧ ಕಾರಣಗಳಿಗೆ ಗಿನ್ನೀಸ್​ ವಿಶ್ವ ದಾಖಲೆ ಪುಸ್ತಕ ಸೇರಿದವರು ಇದ್ದಾರೆ. ಆದರೆ ವಿಶ್ವದಲ್ಲಿಯೇ ಅತ್ಯಂತ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿ ಎಂದು ದಾಖಲೆ ಬರೆದವರು ಯಾರು? ಇಂಥದ್ದೊಂದು ದಾಖಲೆ ಗಿನ್ನೀಸ್ ಬುಕ್​​ನಲ್ಲಿ ಸೇರಿದೆಯಾ? -ಈ ಬಗ್ಗೆ ನಾವು-ನೀವು ಎಂದಿಗೂ ಆಲೋಚನೆ ಮಾಡಿರಲಿಕ್ಕಿಲ್ಲ. ಆದರೆ ಖಂಡಿತವಾಗಿಯೂ ಅಂಥದ್ದೊಂದು ದಾಖಲೆ ಇದೆ. ಹೀಗೊಂದು ವಿಚಿತ್ರ ಕಾರಣಕ್ಕೆ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಬುಕ್​ ಸೇರಿದವರು ಥಾಮಸ್ ವೆಡರ್ಸ್​. 18ನೇ ಶತಮಾನದಲ್ಲಿಯೇ ಬಾಳಿ-ಬದುಕಿದ್ದ ಇವರ ಮೂಗು 19 ಸೆಂಟಿಮೀಟರ್​ (7.5 ಇಂಚು) ಉದ್ದ ಇತ್ತು. ಅವರು ಬದುಕಿದ್ದಾಗ ಇನ್ನೂ ಈ ಗಿನ್ನೀಸ್ ವರ್ಲ್ಡ್​ ರೆಕಾರ್ಡ್​ ಶುರುವಾಗಿ ಇಲ್ಲದ ಕಾರಣ, ಮರಣೋತ್ತರವಾಗಿ ಥಾಮಸ್​ ಹೆಸರನ್ನು ದಾಖಲಿಸಲಾಗಿದೆ.

Historic Vids ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಥಾಮಸ್ ವೆಡರ್ಸ್​ ಕುತೂಹಲಕಾರಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇವರು ಇಂಗ್ಲೆಂಡ್​ನವರಾಗಿದ್ದು, 1770ರ ದಶಕದಲ್ಲಿ ಇದ್ದರು. ​ ಸರ್ಕಸ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಉದ್ದನೆಯ, ದಪ್ಪನೆಯ ಮೂಗಿನ ಕಾರಣಕ್ಕೆ ಸಿಕ್ಕಾಪಟೆ ಫೇಮಸ್ ಆಗಿದ್ದರು ಎಂದು ಈ ಟ್ವಿಟರ್​ ಅಕೌಂಟ್​ನಲ್ಲಿ ಹೇಳಲಾಗಿದೆ. ಈ ಟ್ವೀಟ್​​ಗೆ 1.16 ಲಕ್ಷ ಲೈಕ್ಸ್​​ಗಳು ಬಂದಿದ್ದು, 6,800 ಬಾರಿ ರೀಟ್ವೀಟ್ ಆಗಿದೆ. ವಿಶ್ವದ ಅತ್ಯಂತ ಉದ್ದನೆಯ ಮೂಗನ್ನು ಹೊಂದಿದ್ದ ವ್ಯಕ್ತಿ ಬಗ್ಗೆ ಅನೇಕರು ಗೂಗಲ್​ನಲ್ಲೂ ಸರ್ಚ್​ ಮಾಡಲು ಆರಂಭಿಸಿದ್ದಾರೆ.

ಅಂದಹಾಗೇ, ಥಾಮಸ್​ ಮರಣೋತ್ತರವಾಗಿ ಗಿನ್ನೀಸ್​ ವಿಶ್ವ ದಾಖಲೆ ಪುಸ್ತಕ ಸೇರಿದ್ದರೆ, ಸದ್ಯ ಜೀವಂತವಾಗಿರುವ ಟರ್ಕಿಯ ವ್ಯಕ್ತಿ, ಮೆಹ್ಮೆತ್ ಓಝುರೆಕ್ ಎಂಬುವರು ತಮ್ಮ ಅತ್ಯಂತ ಉದ್ದನೆಯ ಮೂಗಿನಿಂದ ಗಿನ್ನೀಸ್ ದಾಖಲೆ ಸೃಷ್ಟಿಸಿದ್ದಾರೆ. ಇವರ ಮೂಗು 8.80 ಸೆಂಟಿಮೀಟರ್​ ಉದ್ದ (3.47 ಇಂಚು) ಇದೆ.

ಇದನ್ನೂ ಓದಿ: Viral Video | ಬಾಲಿಯಲ್ಲಿ ಸಾಂಪ್ರದಾಯಿಕ ಸಂಗೀತ ಸಾಧನ ಬಾರಿಸಿದ ಮೋದಿ, ಇಲ್ಲಿದೆ ವಿಡಿಯೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Viral Video:ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಪಾಕಿಸ್ತಾನ(Pakistan) ಎಂದರೆ ಭಾರತ ಮಾತ್ರ ಅಲ್ಲ, ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ದ್ವೇಷಿಸುವ ರಾಷ್ಟ್ರ. ಇನ್ನು ನೆರೆಯ ಅಫ್ಘಾನಿಸ್ತಾನ(Afghanistan) ಅಂತೂ ಪಾಕಿಸ್ತಾನದ ಕುಕೃತ್ಯದಿಂದ ಬೇಸತ್ತಿರೋದಂತೂ ಅಕ್ಷರಶಃ ನಿಜ. ಹೀಗಾಗಿಯೇ ಅಲ್ಲಿನ ಜನ ಪಾಕಿಸ್ತಾನ ಅಂದ್ರೆ ಸಾಕು ಕೆಂಡ ಕಾರುತ್ತಾರೆ ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Viral Video)ವೊಂದು ಭಾರೀ ಸದ್ದು ಮಾಡುತ್ತಿದ್ದು, ಹೀಗೇ ಮುಂದುವರೆದರೆ ಪಾಕ್‌ ಸಂಪೂರ್ಣವಾಗಿ ನಿರ್ಣಾಮ ಆಗದಂತೂ ನಿಜ ಅಂತಿದ್ದಾರೆ ವಿಡಿಯೋ ನೋಡಿದ ನೆಟ್ಟಿಗರು.

ಏನಿದು ವಿಡಿಯೋ?

ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

“ನೀವು ಆಕಡೆಯಿಂದ ದಾಳಿ ನಡೆಸಿ.. ನಾವು ಈ ಕಡೆಯಿಂದ ದಾಳಿ ನಡೆಸುತ್ತೇವೆ. ಅಫ್ಘಾನಿಸ್ತಾನ ನಿಮ್ಮ ಜೊತೆ ಯಾವಾಗಲೂ ಇದೆ. ಆಫ್ಗನ್‌ ಜನ ನಿಮ್ಮ ಜೊತೆಗಿದ್ದಾರೆ. ಇಬ್ಬರು ಜೊತೆಗೂಡಿ ದಾಳಿ ನಡೆಸಿದರೆ ಪಾಕ್‌ ಅನ್ನು ಮಟ್ಟ ಹಾಕಬಹುದು. ಅಲ್ಲಿನ ಸಾಮಾನ್ಯ ಜನರೊಡನೆ ನಮಗೇನು ದ್ವೇಷವಿಲ್ಲ. ಬದಲಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನಮಗೆ ಅಸಮಾಧಾನ ಇದೆ” ಎಂದು ವೃದ್ಧ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ಮತ್ತೆ ನಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪಾಕಿಸ್ತಾನವನ್ನು ಯಾರೂ ಇಷ್ಟ ಪಡುವುದಿಲ್ಲ… ಅಫ್ಘಾನಿಸ್ತಾನ ಅತ್ಯಂತ ಹೆಚ್ಚಾಗಿ ದ್ವೇಷಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಮತ್ತೊಬ್ಬ ನೆಟ್ಟಿಗ ರಿಯಾಕ್ಟ್‌ ಮಾಡಿದ್ದಾರೆ.

ಇನ್ನು ಈದೇ ವಿಡಿಯೋವನ್ನು ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Continue Reading

ವೈರಲ್ ನ್ಯೂಸ್

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Viral Video:ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳು ಎಲ್ಲರ ಗಮನ ಸೆಳೆದಿವೆ. ಈ ಸ್ನೇಹಮಯ ಆಟದಲ್ಲಿ ಎರಡೂ ತಂಡಗಳು ಬಹಳ ಹುಮ್ಮಸ್ಸಿನಿಂದ ಭಾಗಿಯಾಗಿ ಸಂಭ್ರಮ ಪಟ್ಟವು. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Viral Video
Koo

ಸೂಡಾನ್‌: ಸದಾ, ಯುದ್ಧ, ದಾಳಿ-ಪ್ರತಿದಾಳಿಯಲ್ಲಿ ಬ್ಯುಸಿಯಾಗಿರುವ ಯೋಧರು ರಿಲಾಕ್ಸ್‌ ಮೂಡ್‌ನಲ್ಲಿರುವುದನ್ನು ಕಾಣ ಸಿಗುವುದು ಬಹಳ ವಿರಳ. ಅದರಲ್ಲೂ ಬದ್ಧ ವೈರಿ ರಾಷ್ಟ್ರಗಳ ಯೋಧರು ಪರಸ್ಪರ ಎಂಜಾಯ್‌ ಮೂಮೆಂಟ್‌ನಲ್ಲಿರುತ್ತಾರೆ ಎಂದರೆ ನಂಬೋಕು ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗುತ್ತಿದ್ದು, ಭಾರತ(India) ಮತ್ತು ಚೀನಾ(China) ಯೋಧರು ಹಗ್ಗ-ಜಗ್ಗಾಟ(Tug Of War) ಸ್ಪರ್ಧೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದಾಗಿದೆ.

ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳು ಎಲ್ಲರ ಗಮನ ಸೆಳೆದಿವೆ. ಈ ಸ್ನೇಹಮಯ ಆಟದಲ್ಲಿ ಎರಡೂ ತಂಡಗಳು ಬಹಳ ಹುಮ್ಮಸ್ಸಿನಿಂದ ಭಾಗಿಯಾಗಿ ಸಂಭ್ರಮ ಪಟ್ಟವು. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತ ಮತ್ತು ಚೀನಾ ಎರಡೂ ದೇಶಗಳ ಯೋಧರು ಬಹಳ ಸಂಭ್ರಮದಿಂದ ಈ ಹಗ್ಗ-ಜಗ್ಗಾಟ ಆಟದಲ್ಲಿ ಭಾಗಿಯಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಆಟದಲ್ಲಿ ಸೋತವರಾರು ಗೆದ್ದವರಾರು ಎಂದು ಕೇಳೋದಾದರೆ.. ಅದರರಲ್ಲಿ ಎರಡು ಮಾತೇ ಇಲ್ಲ ಎಂಬಂತೆ ಭಾರತೀಯ ಯೋಧರು ಚೀನಾ ಯೋಧರನ್ನು ಅತ್ಯಂತ ಸುಭವಾಗಿ ಮಣಿಸಿದ್ದಾರೆ. ಇನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಅಂದರೆ ಸೋಮವಾರ ಮೇಘಾಲಯದಲ್ಲಿ ಭಾರತ ಮತ್ತು ಫ್ರಾನ್ಸ್‌ ಯೋಧರ ನಡುವೆ ಈ ಹಗ್ಗ-ಜಗ್ಗಾಟ ಸ್ಪರ್ಧೆ ನಡೆದಿತ್ತು. ʼಶಕ್ತಿ 2024’ ಎಂಬ ಹೆಸರಿನಲ್ಲಿ ಮೇಘಾಲಯದಲ್ಲಿ ನಡೆಯುತ್ತಿದ್ದ ಜಂಟೀ ಸೇನಾ ಕಾರ್ಯಾಚರಣೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಘಾಲಯದ ಉಮ್ರೋಯ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಮಿಲಿಟರಿ ತರಬೇತಿ ಸೋಮವಾರ ಮುಕ್ತಾಯಗೊಂಡಿತು. ಇದು ಭಾರತ ಮತ್ತು ಫ್ರಾನ್ಸ್ ಎರಡರಲ್ಲೂ ಪರ್ಯಾಯವಾಗಿ ನಡೆಯುವ ದ್ವೈವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಕೊನೆಯ ಆವೃತ್ತಿಯನ್ನು ನವೆಂಬರ್ 2021 ರಲ್ಲಿ ಫ್ರಾನ್ಸ್‌ನಲ್ಲಿ ನಡೆಸಲಾಯಿತು.

ಇದನ್ನೂ ಓದಿ: Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Continue Reading

ವಿದೇಶ

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

Nawaz Sharif: ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

VISTARANEWS.COM


on

Nawaz Sharif
Koo

ಇಸ್ಲಮಾಬಾದ್‌: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್‌ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್‌ ಯುದ್ಧ(Kargil War) ಜನರಲ್‌ ಫರ್ವೇಜ್‌ ಮುಷಾರಫ್‌(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.

ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್‌ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್‌ ಪಾಕಿಸ್ತಾನದ ಪ್ರಧಾನಿ ಆಗಿದ್ದರು.

ಇದನ್ನೂ ಓದಿ:Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್‌ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Continue Reading

ವಿದೇಶ

Fraud Case: ಒಂದು ವರ್ಷ ಪ್ರೀತಿಸಿ ಮದುವೆಯಾದ; 12 ದಿನಗಳ ಬಳಿಕ ಬಯಲಾಯ್ತು ಆಕೆಯ ದೇಹ ರಹಸ್ಯ!

ಆಸ್ತಿ ಲಪಟಾಯಿಸಲು ಹೆಣ್ಣಿನಂತೆ ವೇಷಭೂಷಣ ತೊಟ್ಟು ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾದ 12 ದಿನಗಳ ಬಳಿಕ ಆತನ ವಂಚನೆಯ (Fraud Case) ಜಾಲ ಬಯಲಾಗಿದೆ. ಈ ಕುರಿತ ಕುತೂಹಲಕಾರಿ ಕತೆ ಇಲ್ಲಿದೆ.

VISTARANEWS.COM


on

By

Fraud Case
Koo

ಒಂದು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗಿ 12 ದಿನಗಳ ಬಳಿಕ ಇಂಡೋನೇಷ್ಯಾದ (Indonesia) 26 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮಹಿಳೆಯಲ್ಲ (Fraud Case) ಎಂಬುದನ್ನು ತಿಳಿದು ಆಘಾತಗೊಂಡಿದ್ದಾನೆ. 2023ರಲ್ಲಿ ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ (social media) ಭೇಟಿಯಾಗಿದ್ದು, ಒಂದು ವರ್ಷದ ಬಳಿಕ ಇಬ್ಬರೂ ಮದುವೆಗೆ (wedding) ಸಮ್ಮತಿ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದ ಇಬ್ಬರೂ ಒಂದು ವರ್ಷದ ಬಳಿಕ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದ್ದರು. ಅದಿಂಡಾ ಹೆಸರಿನಲ್ಲಿ ಪರಿಚಯವಾದ ಹುಡುಗಿ ಸಂಪೂರ್ಣ ಮುಖವನ್ನು ಮುಚ್ಚುವ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ಯಾವಾಗಲೂ ಧರಿಸುತ್ತಿದ್ದ.ಳು. ಅದು ಯಾಕೆ ಎಂದು ಯುವಕ ಪ್ರಶ್ನೆ ಮಾಡಲಿಲ್ಲ. ಅದು ಆಕೆಯ ಇಸ್ಲಾಂ ಧರ್ಮದ ಮೇಲಿನ ಭಕ್ತಿಯ ಸಂಕೇತವೆಂದು ಎಕೆ ಭಾವಿಸಿದ್ದ.

ಕೊನೆಗೆ ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಹಾಜರಾಗಲು ತನಗೆ ಯಾವುದೇ ಕುಟುಂಬವಿಲ್ಲ ಎಂದು ಅದಿಂಡಾ ಎಕೆಗೆ ತಿಳಿಸಿದ್ದಳು. ಆದ್ದರಿಂದ ಇವರಿಬ್ಬರು ಏಪ್ರಿಲ್ 12ರಂದು ಎಕೆ ಮನೆಯಲ್ಲಿ ಸಾಧಾರಣ ಸಮಾರಂಭದ ಮೂಲಕ ಪತಿಪತ್ನಿಯರಾದರು.

ಮದುವೆಯ ಅನಂತರವೂ ಅದಿಂಡಾ ತನ್ನ ಪತಿಯಿಂದ ತನ್ನ ಮುಖವನ್ನು ನಿರಂತರವಾಗಿ ಮರೆಮಾಡಿದಳು ಮತ್ತು ಅವನ ಹಳ್ಳಿಯಲ್ಲಿ ಅವನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಲು ನಿರಾಕರಿಸಿದಳು. ಇದಲ್ಲದೆ, ಅವಳು ಮದುವೆಯ ಅನಂತರದ ಶಾಸ್ತ್ರಗಳನ್ನು ಮಾಡಲು ನಿರಾಕರಿಸಿದಳು. ಋತುಚಕ್ರ, ಆರೋಗ್ಯ ಸಮಸ್ಯೆ ಎಂದು ಹೇಳಿ ಗಂಡನೊಂದಿಗೆ ಸೇರಲು ನಿರಾಕರಿಸಿದಳು.

12 ದಿನಗಳ ಬಳಿಕ ಮಾಹಿತಿ ಬಹಿರಂಗ

ಹನ್ನೆರಡು ದಿನಗಳ ಅನುಮಾನಾಸ್ಪದ ವರ್ತನೆಯ ಅನಂತರ ಎಕೆ ತನ್ನ ಹೆಂಡತಿಯನ್ನು ತನಿಖೆ ಮಾಡಲು ನಿರ್ಧರಿಸಿದ. ಅದಿಂಡಾ ಅವರ ಪೋಷಕರು ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಆತ ಕಂಡುಕೊಂಡ. ಮಗನ ಈ ಹೊಸ ಸಂಬಂಧದ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆಘಾತಕಾರಿ ವಿಷಯವೆಂದರೆ ಅದಿಂಡಾ ವಾಸ್ತವವಾಗಿ 2020ರಲ್ಲಿ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿರುವ ಇಎಸ್ ಹೆಚ್ ಎಂದು ಗುರುತಿಸಲ್ಪಟ್ಟಿದ್ದಾನೆ.

ಯಾಕಾಗಿ ವಂಚನೆ?

ಪೊಲೀಸ್ ತನಿಖೆಯ ಸಮಯದಲ್ಲಿ ಆಸ್ತಿ ಕದಿಯಲು ಎಕೆಯನ್ನು ಇಎಸ್ ಹೆಚ್ ವಿವಾಹವಾದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಿರುವ ಪೊಲೀಸರು ಆತನ ಧ್ವನಿ ಮಹಿಳೆಯಂತೆ ಇದೆ. ಆತ ನಿಜವಾಗಿಯೂ ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾನೆ ಎಂದು ತಿಳಿಸಿದ್ದಾರೆ!

ಎಕೆ ಮತ್ತು ಇಎಸ್ ಹೆಚ್ ಮದುವೆಯ ಫೋಟೋಗಳನ್ನು ನೋಡಿದರೆ ಅದಿಂಡ ನಿಜವಾದ ಮಹಿಳೆಯಂತೆ ಕಾಣುತ್ತಾನೆ. ಸೌಮ್ಯವಾದ ಧ್ವನಿ ಮತ್ತು ಸ್ವರವೂ ಅವನಿಗಿದೆ. ಆದ್ದರಿಂದ ಅವನು ಮಹಿಳೆ ಎಂಬುದರ ಬಗ್ಗೆ ಯಾವುದೇ ಅನುಮಾನವಿರಲಿಲ್ಲ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

ಏನು ಶಿಕ್ಷೆ ?

ಸ್ಥಳೀಯ ಕಾನೂನುಗಳ ಅಡಿಯಲ್ಲಿ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಆತನಿಗೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು.

ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಬೆಚ್ಚಿ ಬೀಳಿಸಿದೆ. ಒಬ್ಬ ವ್ಯಕ್ತಿ ಪಾಪ ಎಕೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಅಡ್ಡ ಡ್ರೆಸ್ಸರ್‌ನೊಂದಿಗಿನ ಸಂಬಂಧದಲ್ಲಿದ್ದು ಮೋಸ ಹೋಗಿರುವುದು ಸಂಕಟ ಉಂಟು ಮಾಡುತ್ತದೆ. ಮದುವೆ ಮತ್ತು ಹಣ ಎರಡನ್ನೂ ಕಳೆದುಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading
Advertisement
Crime News
ಕ್ರೈಂ4 mins ago

Crime News: ಶಾಕಿಂಗ್‌: ಕುಟುಂಬದ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ಕಾರಣ ನಿಗೂಢ

belluru assault case
ಕ್ರೈಂ7 mins ago

Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

Shilpa Shetty Visiting Nanjundeshwara Temple
ಸಿನಿಮಾ7 mins ago

Shilpa Shetty: ಮೈಸೂರಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ

Viral Video
ವೈರಲ್ ನ್ಯೂಸ್22 mins ago

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

India Highest Paid Item Girl not Malaika Nora, Katrina, Sunny
ಸಿನಿಮಾ28 mins ago

India Highest Paid Item Girl : ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಯಾರು? ಮಲೈಕಾ, ಸನ್ನಿ, ನೋರಾ ಅಲ್ವೇ ಅಲ್ಲ!

Job Alert
ಉದ್ಯೋಗ48 mins ago

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

love jihad kasaragod 2
ಕ್ರೈಂ53 mins ago

Love Jihad: ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಮದುವೆಯಾಗಿ ಪತ್ತೆ; ಮುಸ್ಲಿಂ ಲೀಗ್‌ ನಾಯಕನ ಕುಮ್ಮಕ್ಕು?

Kannada New Movie Aditya Shashikumar Kaadaadi Movie Lyrical song out
ಸ್ಯಾಂಡಲ್ ವುಡ್1 hour ago

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Viral Video
ವೈರಲ್ ನ್ಯೂಸ್1 hour ago

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Aditi Prabhudeva is returning to reality show judge
ಕಿರುತೆರೆ2 hours ago

Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌