ರಾಜ್ಯದಲ್ಲಿ ಮೇ 31ಕ್ಕೆ ಪೆಟ್ರೋಲ್‌, ಡೀಸೆಲ್‌ ಡೀಲರ್‌ಗಳಿಂದ ಮುಷ್ಕರ - Vistara News

ಪ್ರಮುಖ ಸುದ್ದಿ

ರಾಜ್ಯದಲ್ಲಿ ಮೇ 31ಕ್ಕೆ ಪೆಟ್ರೋಲ್‌, ಡೀಸೆಲ್‌ ಡೀಲರ್‌ಗಳಿಂದ ಮುಷ್ಕರ

ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಡೀಲರ್‌ಗಳು ತಮ್ಮ ಬೇಡಿಕೆಗೆ ಒತ್ತಾಯಿಸಿ ಮೇ ೩೧ರಂದು ಮುಷ್ಕರ ನಡೆಸಲಿದ್ದಾರೆ. ಆದರೆ ಗ್ರಾಹಕರಿಗೆ ತೊಂದರೆ ಆಗದು ಎಂದಿದ್ದಾರೆ.

VISTARANEWS.COM


on

petrol
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲಿಯಂ ಡೀಲರ್‌ಗಳು ಮೇ 31 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಂದು ತೈಲವನ್ನು ಖರೀದಿಸದಿರಲು ತೀರ್ಮಾನಿಸಿದ್ದಾರೆ.

ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಡೀಲರ್‌ಗಳಿಗೆ ವ್ಯಾಪಾರದಲ್ಲಿ ಗಣನೀಯ ನಷ್ಟವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಬೇಕು ಎಂದು ಪೆಟ್ರೋಲಿಯಂ ಡೀಲರ್‌ಗಳು ದೂರಿದ್ದಾರೆ.
ಹೀಗಿದ್ದರೂ, ರಾಜ್ಯಾದ್ಯಂತ ಪೆಟ್ರೋಲ್‌ ಬಂಕ್‌ಗಳು ಮುಷ್ಕರದ ದಿನವಾದ ಮೇ 31 ರಂದು ಎಂದಿನಂತೆ ತೆರೆಯಲಿವೆ. ಡೀಲರ್‌ಗಳು ಮೂರು ದಿನಗಳಿಗೆ ಆಗುವಷ್ಟು ತೈಲವನ್ನು ಮೊದಲೇ ಖರೀದಿಸಿರುತ್ತಾರೆ. ಆದ್ದರಿಂದ ಜನತೆಗೆ ತೊಂದರೆ ಆಗದು ಎಂದು ಡೀಲರ್ ಗಳು ತಿಳಿಸಿದ್ದಾರೆ. ಹೀಗಿದ್ದರೂ ಕೆಲವೆಡೆ ಪೆಟ್ರೋಲ್‌ ಬಂಕ್‌ಗಳಲ್ಲಿ ” ನೊ ಸ್ಟಾಕ್‌ ಬೋರ್ಡ್‌ʼʼ ಕಾಣಿಸುವ ಸಾಧ್ಯತೆ ಇದೆ.

ಪೆಟ್ರೋಲ್-ಡೀಸೆಲ್‌ ಡೀಲರ್‌ಗಳ ಬೇಡಿಕೆ ಏನು?

  • ಪೆಟ್ರೋಲ್-ಡೀಸೆಲ್‌ ಮಾರಾಟದಲ್ಲಿ ಡೀಲರ್‌ಗಳ ಕಮೀಶನ್‌ ಹೆಚ್ಚಳ ಮಾಡಬೇಕು.
  • ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ

ಅನೇಕ ಡೀಲರ್‌ಗಳು ಅಬಕಾರಿ ಸುಂಕ ಕಡಿತಕ್ಕೆ ಮೊದಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಅಬಕಾರಿ ಸುಂಕ ಕಡಿತದ ಪರಿಣಾಮ ಅವರಿಗೆ ಈಗ ಕಡಿಮೆ ದರದಲ್ಲಿ ಮಾರಾಟದಿಂದ ನಷ್ಟ ಉಂಟಾಗಲಿದೆ. ಈ ನಷ್ಟವನ್ನು ಕೇಂದ್ರ ಸರಕಾರ ಭರಿಸಬೇಕು ಎಂದು ಅಖಿಲ ಕರ್ನಾಟಕ ಫೆಡರೇಷನ್‌ ಆಫ್‌ ಪೆಟ್ರೋಲಿಯಂ ಟ್ರೇಡರ್ಸ್‌ ಒತ್ತಾಯಿಸಿದೆ. ಸರಕಾರ ಕಳೆದ ವರ್ಷ ನವೆಂಬರ್‌ ಮತ್ತು ಇತ್ತೀಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ಪ್ರತಿ ಡೀಲರ್‌ಗೆ 5-10ಲಕ್ಷ ರೂ. ನಷ್ಟವಾಗಿದೆ. ಈ ನಷ್ಟವನ್ನು ಸರಕಾರ ಭರಿಸಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಬಸವೇಗೌಡ ಅವರು ಒತ್ತಾಯಿಸಿದ್ದಾರೆ.

ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಮೇ 31ರಂದು ನಾವು ಪೆಟ್ರೋಲ್‌ ಖರೀದಿಸುವುದಿಲ್ಲ ಎಂದು ಡೀಲರ್‌ ಗಳು ತಿಳಿಸಿದ್ದಾರೆ. ಹೀಗಿದ್ದರೂ ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್‌ ಮಾರಾಟ ಮುಂದುವರಿಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಎ ತಾರಾನಾಥ್‌ ತಿಳಿಸಿದ್ದಾರೆ.
ಕೇಂದ್ರ ಸರಕಾರ ಯಾವುದೇ ನೋಟಿಸ್‌ ನೀಡದೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದ ಡೀಲರ್‌ ಗಳಿಗೆ ಕಷ್ಟವಾಗಿದೆ. ಡೀಲರ್‌ ಗಳ ಕಮಿಶನ್‌ ಹೆಚ್ಚಿಸುವಂತೆ 2017ರಿಂದಲೂ ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲಿಯಂ ಡೀಲರ್‌ ಗಳು ನಷ್ಟ ಅನುಭವಿಸುತ್ತಿದ್ದಾರೆ. ಮಾಸಿಕ 60-100 ಕಿಲೋಲೀಟರ್‌ ಮಾರಾಟ ಮಾಡುವವರಿಗೆ ಸಂಕಷ್ಟವಾಗುತ್ತಿದೆ ಎಂದರು. ಕೇಂದ್ರ ಸರಕಾರ ಮೇ 22ರಂದು ಪೆಟ್ರೋಲ್‌ ಮೇಲೆ ಲೀಟರ್‌ ಗೆ 8 ರೂ. ಹಾಗೂ ಡೀಸೆಲ್‌ ಮೇಲೆ ಲೀಟರ್‌ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Mahua Moitra: ಹೊಸ ಕಾನೂನಿನಂತೆ ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್;‌ ಕಾರಣ ಇಲ್ಲಿದೆ

Mahua Moitra: ಮಹುವಾ ಮೊಯಿತ್ರಾ ಅವರ ಪೋಸ್ಟ್‌ ವೈರಲ್‌ ಆಗುತ್ತಲೇ ರಾಷ್ಟ್ರೀಯ ಮಹಿಳಾ ಆಯೋಗವು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಟಿಎಂಸಿ ಸಂಸದೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೆಹಲಿ ಪೊಲೀಸರಿಗೆ ಸೂಚಿಸಲಾಗಿತ್ತು.

VISTARANEWS.COM


on

Mahua Moitra
Koo

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (NCW Chief) ಅಧ್ಯಕ್ಷೆ ರೇಖಾ ಶರ್ಮಾ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜುಲೈ 1ರಂದು ಜಾರಿಗೆ ಬಂದ ಹೊಸ ಕಾನೂನುಗಳ ಪೈಕಿ ಒಂದಾದ ಭಾರತೀಯ ನ್ಯಾಯ ಸಂಹಿತೆ (BNS) ಅನ್ವಯ ಮಹುವಾ ಮೊಯಿತ್ರಾ ಅವರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಮಹುವಾ ಮೊಯಿತ್ರಾ ಹೇಳಿದ್ದೇನು?

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಿಂದ 121 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ರೇಖಾ ಶರ್ಮಾ ಅವರು ಹತ್ರಾಸ್‌ಗೆ ಭೇಟಿ ನೀಡಿದ ವಿಡಿಯೊವನ್ನು ಮಹುವಾ ಮೊಯಿತ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, “ತಮ್ಮ ಬಾಸ್‌ನ ಪೈಜಾಮಾ ಹಿಡಿದುಕೊಳ್ಳುವುದರಲ್ಲಿಯೇ ಇವರು ನಿರತರಾಗಿದ್ದಾರೆ” ಎಂಬುದಾಗಿ ಟಿಎಂಸಿ ಸಂಸದೆ ಬರೆದುಕೊಂಡಿದ್ದರು.

ಮಹುವಾ ಮೊಯಿತ್ರಾ ಅವರ ಪೋಸ್ಟ್‌ ವೈರಲ್‌ ಆಗುತ್ತಲೇ ರಾಷ್ಟ್ರೀಯ ಮಹಿಳಾ ಆಯೋಗವು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಟಿಎಂಸಿ ಸಂಸದೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೆಹಲಿ ಪೊಲೀಸರಿಗೆ ಸೂಚಿಸಲಾಗಿತ್ತು. ಅಲ್ಲದೆ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೂ ರಾಷ್ಟ್ರೀಯ ಮಹಿಳಾ ಆಯೋಗವು ಪತ್ರ ಬರೆದು, ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಮನವಿ ಮಾಡಿತ್ತು. ಈಗ ಸಂಸದೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ವಿವಾದಗಳಿಗೂ ಮಹುವಾ ಮೊಯಿತ್ರಾ ಅವರಿಗೂ ಎಲ್ಲಿಲ್ಲದ ನಂಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿಯ ನಿಶಿಕಾಂತ್‌ ದುಬೆ ಆರೋಪ ಮಾಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಕುರಿತು ತನಿಖೆ ಕೂಡ ನಡೆಸಲಾಗಿತ್ತು. “ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ. ಆದರೆ, ಹಣ ಪಡೆದು ಪ್ರಶ್ನೆ ಕೇಳುವ ದಿಸೆಯಲ್ಲಿ ಐಡಿ, ಪಾಸ್‌ವರ್ಡ್‌ ಕೊಟ್ಟಿಲ್ಲ” ಎಂಬುದಾಗಿ ಮಹುವಾ ಮೊಯಿತ್ರಾ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.

ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Continue Reading

ಪ್ರಮುಖ ಸುದ್ದಿ

Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

Sanath Jayasuriya : ಪರಿಸ್ಥಿತಿಗಳನ್ನು ಗಮನಿಸಿದಾಗ ಶ್ರೀಲಂಕಾ ಪ್ರಶಸ್ತಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ಸ್ಪರ್ಧೆಗೆ ಪ್ರವೇಶಿಸಿತು. ಆ ತಂಡ ಟಿ20 ಮಾದರಿಗೆ ಪೂರಕವಾದ ಗುಣಮಟ್ಟದ ಸ್ಪಿನ್ನರ್​ಗಳು ಮತ್ತು ಬ್ಯಾಟರ್​ಗಳನ್ನು ಹೊಂದಿದ್ದರು. ಅದು ಅವರನ್ನು ಮುಂದಿನ ಸುತ್ತಿಗೆ ಕರೆದೊಯ್ಯಬಹುದಿತ್ತು. ಆದರೆ ಸಾಮೂಹಿಕ ವೈಫಲ್ಯವು ನಿರಾಸೆ ಮೂಡಿಸಿತ್ತು.

VISTARANEWS.COM


on

Sanath Jayasuriya
Koo

ಬೆಂಗಳೂರು: ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ (Sanath Jayasuriya) ಅವರನ್ನು ಹಿರಿಯ ಪುರುಷರ ಕ್ರಿಕೆಟ್​​ ತಂಡದ ಮಧ್ಯಂತರ ಮುಖ್ಯ ಕೋಚ್ ಆಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಘೋಷಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್​​ನಲ್ಲಿ ಶ್ರೀಲಂಕಾದ ಕಳಪೆ ಪ್ರದರ್ಶನದ ನಂತರ ಮಾಜಿ ಕೋಚ್ ಕ್ರಿಸ್ ಸಿಲ್ವರ್ವುಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಾಕೆಂದರೆ ಲಂಕಾ ತಂಡವು ಸ್ಪರ್ಧೆಯ ಸೂಪರ್ ಎಂಟಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು. ತಕ್ಷಣವೇ ಅವರು ಹುದ್ದೆಯನ್ನು ತೊರೆದಿದ್ದರು. ಇದೀಗ ಹೊಸ ಕೋಚ್​ ನೇಮಕಗೊಂಡಿದ್ದಾರೆ.

ಪರಿಸ್ಥಿತಿಗಳನ್ನು ಗಮನಿಸಿದಾಗ ಶ್ರೀಲಂಕಾ ಪ್ರಶಸ್ತಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ಸ್ಪರ್ಧೆಗೆ ಪ್ರವೇಶಿಸಿತು. ಆ ತಂಡ ಟಿ20 ಮಾದರಿಗೆ ಪೂರಕವಾದ ಗುಣಮಟ್ಟದ ಸ್ಪಿನ್ನರ್​ಗಳು ಮತ್ತು ಬ್ಯಾಟರ್​ಗಳನ್ನು ಹೊಂದಿದ್ದರು. ಅದು ಅವರನ್ನು ಮುಂದಿನ ಸುತ್ತಿಗೆ ಕರೆದೊಯ್ಯಬಹುದಿತ್ತು. ಆದರೆ ಸಾಮೂಹಿಕ ವೈಫಲ್ಯವು ನಿರಾಸೆ ಮೂಡಿಸಿತ್ತು. ರಾಷ್ಟ್ರೀಯ ತಂಡದೊಂದಿಗೆ ಉತ್ತಮ ಕೆಲಸ ಮಾಡಿದ್ದ ಸಿಲ್ವರ್ವುಡ್, ಹೊಣೆ ವಹಿಸಿಕೊಂಡು ರಾಜೀನಾಮೆ ನೀಡಿದ್ದರು.

ಟಿ20 ವಿಶ್ವ ಕಪ್​ ಪಂದ್ಯಾವಳಿಯ ಸಮಯದಲ್ಲಿ ತಂಡದ ಸಲಹೆಗಾರರಾಗಿ ಜಯಸೂರ್ಯ ಸೇವೆ ಸಲ್ಲಿಸಿದ್ದರು. ಇದೀಗ ಅವರಿಗೆ ಬಡ್ತಿ ನೀಡಲಾಗಿದೆ, ಆದರೆ ಸಿಲ್ವರ್ವುಡ್​ಗೆ ಶಾಶ್ವತ ಬದಲಿಯನ್ನು ಹುಡುಕಲು ಎಸ್ಎಲ್​​ಸಿ ಪ್ರಯತ್ನ ಮಾಡುತ್ತಿದೆ. ಏತನ್ಮಧ್ಯೆ, ಮಾಜಿ ಆರಂಭಿಕ ಆಟಗಾರ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ ತವರು ಸರಣಿಯ ಉಸ್ತುವಾರಿ ವಹಿಸಲಿದ್ದಾರೆ. ನಂತರ ಮಂಡಳಿಯು ಒಬ್ಬರನ್ನು ಪೂರ್ಣಾವಧಿಯ ಕೋಚ್​ ಪಾತ್ರಕ್ಕೆ ನೇಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

ಡಿಸೆಂಬರ್ 2023 ರಿಂದ ಶ್ರೀಲಂಕಾ ಕ್ರಿಕೆಟ್ ಸಲಹೆಗಾರರಾಗಿ ಸೇವೆ ಸಲ್ಲಿಸಿದರು ಮತ್ತು ಖೆಟ್ಟಾರಾಮದ ಹೈ ಪರ್ಫಾರ್ಮೆನ್ಸ್ ಸೆಂಟರ್​ನಲ್ಲಿ ಆಟಗಾರರು ಮತ್ತು ತರಬೇತುದಾರರ ಮೇಲ್ವಿಚಾರಣೆ ನಡೆಸಿದ್ದರು.

ಭಾರತಕ್ಕೆ ಆತಿಥ್ಯ

ಶ್ರೀಲಂಕಾ ತಂಡ ಜುಲೈ 27ರಂದು ಭಾರತ ವಿರುದ್ಧ ಟಿ20 ಪಂದ್ಯವನ್ನಾಡಲಿದೆ. ಟಿ 20 ವಿಶ್ವಕಪ್ ವಿಜೇತ ತಂಡದಲ್ಲಿ ಅನೇಕರು ಈ ವೇಳೆ ಮರಳುವ ನಿರೀಕ್ಷೆಯಿದೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಸ್ಥಾನ ತುಂಬುವ ಸಾಧ್ಯತೆಯಿದೆ. ಟಿ 20 ವಿಶ್ವಕಪ್ ಯಶಸ್ಸಿನೊಂದಿಗೆ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಂಡಿದ್ದರಿಂದ ಭಾರತವು ಹೊಸ ಕೋಚ್ ನೇಮಕ ಮಾಡಲಿದೆ.

ದ್ರಾವಿಡ್ ಬದಲಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ. ಜಯಸೂರ್ಯ ಅವರ ಶ್ರೀಲಂಕಾ ವಿರುದ್ಧದ ಅವರ ನೇಮಕವು ವಿಶೇಷವಾಗಿದೆ. ಈ ಇಬ್ಬರೂ ಮಾಜಿ ಆಟಗಾರರು ತಮ್ಮ ಆಟದ ದಿನಗಳಲ್ಲಿ ಎಷ್ಟು ಆಕ್ರಮಣಕಾರಿಯಾಗಿದ್ದರು.

Continue Reading

ದೇಶ

Yogi Adityanath: ನಿಂತ ಜಾಗದಲ್ಲೇ ಬಡ ಮಹಿಳೆಗೆ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್;‌ ಇದು ‌Instant ಮಾನವೀಯತೆ

Yogi Adityanath: ಭಾನುವಾರ (ಜುಲೈ 7) ಬೆಳಗ್ಗೆ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದ ಟಿಪಿ ನಗರ ಫ್ಲೈಓವರ್‌ ಹಾಗೂ ಷಟ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸುವಾಗ, ಮನೆ ಇಲ್ಲದ ಕುರಿತು ಸಮಸ್ಯೆ ಹೇಳಿಕೊಂಡ ಮಂಜು ಎಂಬ ಮಹಿಳೆಗೆ ಶೀಘ್ರದಲ್ಲೇ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಸೂಚಿಸಿದರು.

VISTARANEWS.COM


on

Yogi Adityanath
Koo

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ರಾಜ್ಯದಲ್ಲಿ ಅಘೋಷಿತ ‘ಇನ್‌ಸ್ಟಂಟ್‌ ಜಸ್ಟಿಸ್’‌ (Instant Justice) ಎಂಬ ಪದ್ಧತಿ ಜಾರಿಗೆ ತಂದಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಎಸಗುವವರು, ಅಪರಾಧ ಕೃತ್ಯಗಳಲ್ಲಿ ತೊಡಗಿದವರ ಎನ್‌ಕೌಂಟರ್‌, ಅವರ ಮನೆ ನೆಲಸಮ ಸೇರಿ ಹಲವು ಕಠಿಣ ಕ್ರಮಗಳ ಮೂಲಕ ಉತ್ತರ ಪ್ರದೇಶದಲ್ಲಿ (Uttar Pradesh) ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಇಷ್ಟೆಲ್ಲ ಕಠೋರ ನಿರ್ಣಯ ತೆಗೆದುಕೊಳ್ಳುವ ಯೋಗಿ ಆದಿತ್ಯನಾಥ್‌ ಅವರು ತಲೆಗೊಂದು ಸೂರು ಇಲ್ಲದ ಮಹಿಳೆಗೆ ನಿಂತ ಜಾಗದಲ್ಲಿಯೇ ಮನೆ ಮಂಜೂರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು, ಭಾನುವಾರ (ಜುಲೈ 7) ಬೆಳಗ್ಗೆ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದ ಟಿಪಿ ನಗರ ಫ್ಲೈಓವರ್‌ ಹಾಗೂ ಷಟ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸುವಾಗ, ಮನೆ ಇಲ್ಲದ ಕುರಿತು ಸಮಸ್ಯೆ ಹೇಳಿಕೊಂಡ ಮಂಜು ಎಂಬ ಮಹಿಳೆಗೆ ಶೀಘ್ರದಲ್ಲೇ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಸೂಚಿಸಿದರು. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಮಹಿಳೆಗೆ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಅಧಿಕಾರಿಗಳಿಗೆ ಆದೇಶ ನೀಡಿದರು.

Yogi Adityanath

ಮಂಜು ಎಂಬ ಮಹಿಳೆಯು ದಿಯೋರಿಯಾ ಬೈಪಾಸ್‌ ರಸ್ತೆಯ ಬಳಿ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಮಗಳ ಜತೆ ಅವರು ವಾಸಿಸುತ್ತಿದ್ದು, ಸ್ವಂತದ್ದೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡರು. ಆಗ ಕೂಡಲೇ ಯೋಗಿ ಆದಿತ್ಯನಾಥ್‌ ಅವರು, ಮಹಿಳೆಯು ಎಲ್ಲಿ ಸ್ವಂತ ಜಾಗ ಹೊಂದಿದ್ದಾರೋ, ಅಲ್ಲಿಯೇ ಮನೆ ನಿರ್ಮಿಸಿಕೊಡಿ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

“ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿ, ನಮಗೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮನವಿ ಮಾಡಿದೆ. ನನ್ನ ಆರ್ಥಿಕ ದುಸ್ಥಿತಿಯ ಬಗ್ಗೆ ಅವರಿಗೆ ವಿವರಣೆ ನೀಡಿದೆ. ಒಂದು ಕ್ಷಣವೂ ಯೋಚಿಸದೆ ಅವರು ನಮಗೆ ಮನೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನಮಗೆ ಭಾರಿ ಖುಷಿಯಾಗಿದೆ. ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳು” ಎಂಬುದಾಗಿ ಮಹಿಳೆ ತಿಳಿಸಿದ್ದಾರೆ. ಇನ್ನು, ಅಭಿವೃದ್ಧಿ ಕಾರ್ಯಗಳಿಗಾಗಿ ಮಹಿಳೆಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅವರಿಗೆ ಕೂಡಲೇ ಪರಿಹಾರವನ್ನೂ ಒದಗಿಸಿ ಎಂಬುದಾಗಿಯೂ ಸಿಎಂ ಸೂಚಿಸಿದರು.

ಇದನ್ನೂ ಓದಿ: Hathras Stampede: 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಆಸ್ತಿ ಧ್ವಂಸಕ್ಕೆ ಮುಂದಾದ ಯೋಗಿ!

Continue Reading

ಪ್ರಮುಖ ಸುದ್ದಿ

Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

Riyan Parag :ಶನಿವಾರ (ಜುಲೈ 6) ರಿಯಾನ್ ಪರಾಗ್ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಸ್ಸಾಂ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ ಆಡುವುದಷ್ಟೇ ಅಲ್ಲ, ಪರಾಗ್ ಅವರು ಭಾರತೀಯ ತಂಡದಲ್ಲಿ ಸ್ಥಾನ ಪಡೆದ ಅಸ್ಸಾಂನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

VISTARANEWS.COM


on

Riyan Parag
Koo

ಬೆಂಗಳೂರು: ಜಿಂಬಾಬ್ವೆ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ರಿಯಾನ್ ಪರಾಗ್ (Riyan Parag) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಐಪಿಎಲ್ 2024 ರಲ್ಲಿ ಬ್ಯಾಟ್​​ನೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದ ನಂತರ ಪರಾಗ್ ಅವರ ಚೊಚ್ಚಲ ಪಂದ್ಯವು ಹೆಚ್ಚು ನಿರೀಕ್ಷೆಯಲ್ಲಿತ್ತು. ಯಾಕೆಂದರೆ ಪರಾಗ್ ಐಪಿಎಲ್​ ​ ಟೂರ್ನಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. ಆದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 112 ರನ್ ಗಳ ಸಾಧಾರಣ ರನ್ ಚೇಸ್ ನಲ್ಲಿ ಪರಾಗ್ ಕೇವಲ 2 ರನ್ ಗಳಿಗೆ ಔಟಾದರು. ಆದರೆ ಕಳಪೆ ಪ್ರದರ್ಶನದ ಹೊರತಾಗಿಯೂ ಅವರು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ತಮ್ಮ ರಾಜ್ಯ ಅಸ್ಸಾಂನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶನಿವಾರ (ಜುಲೈ 6) ರಿಯಾನ್ ಪರಾಗ್ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಸ್ಸಾಂ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ ಆಡುವುದಷ್ಟೇ ಅಲ್ಲ, ಪರಾಗ್ ಅವರು ಭಾರತೀಯ ತಂಡದಲ್ಲಿ ಸ್ಥಾನ ಪಡೆದ ಅಸ್ಸಾಂನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ರಿಯಾನ್ ಪರಾಗ್ ಅವರಿಗಿಂತ ಮೊದಲು ಅಸ್ಸಾಂನ ಮಹಿಳಾ ಕ್ರಿಕೆಟರ್ ಉಮಾ ಚೆಟ್ರಿ ಕಳೆದ ವರ್ಷ ಎಸಿಸಿ ಅಂಡರ್ -23 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಚೆಟ್ರಿ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ 20 ಐ ಸರಣಿಗಾಗಿ ಭಾರತದ ಮಹಿಳಾ ತಂಡದಲ್ಲಿದ್ದಾರೆ.

ಇದನ್ನೂ ಓದಿ: Ravi Bishnoi : ಭಾರತ ಪರ ಸ್ಪಿನ್​ ಬೌಲಿಂಗ್​​ನಲ್ಲಿ ವಿಶೇಷ ಸಾಧನೆ ಮಾಡಿದ ರವಿ ಬಿಷ್ಣೋಯ್​​

ರಿಯಾನ್ ಪರಾಗ್ ಜಿಂಬಾಬ್ವೆಯ ವೇಗದ ಬೌಲರ್ ತೆಂಡೈ ಚಟಾರಾ ಎಸೆತಕ್ಕೆ ಡ್ರೈವ್ ಮಾಡಲು ಪ್ರಯತ್ನಿಸಿದ್ದರು. ಆದರೆ ಅವರು ಕ್ಯಾಚ್​ ಆಗಿ ಔಟಾದರು. ಇದೇ ಮೈದಾನದಲ್ಲಿ ಭಾನುವಾರ (ಜುಲೈ 7) ನಡೆಯಲಿರುವ ಎರಡನೇ ಟಿ 20 ಪಂದ್ಯದಲ್ಲಿ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಅಭಿನಂದನೆ

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಕೂಡ ರಿಯಾನ್ ಪದಾರ್ಪಣೆ ಸಂದರ್ಭದ ಬಗ್ಗೆ ಗಮನ ಸೆಳೆದಿದ್ದಾರೆ. ಇದು ರಾಜ್ಯಕ್ಕೆ ಐತಿಹಾಸಿಕ ದಿನ ಎಂದು ಬಣ್ಣಿಸಿದರು. “ಅಸ್ಸಾಂಗೆ ಐತಿಹಾಸಿಕ ದಿನ! ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಮೊದಲ ಟಿ 20 ಪಂದ್ಯವನ್ನು ಆಡುವ ಮೂಲಕ ನಮ್ಮ ರಿಯಾನ್ ಪರಾಗ್​ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಭಾರತದ ಪರ ಆಡಿದ ಮೊದಲ ಅಸ್ಸಾಮಿ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ” ಎಂದು ಸೋನೊವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕೂಡ ಐತಿಹಾಸಿಕ ಸಾಧನೆಗಾಗಿ ರಿಯಾನ್ ಪರಾಗ್ ಅವರನ್ನು ಅಭಿನಂದಿಸಿದೆ.

ರಿಯಾನ್ ಪರಾಗ್ ಜೊತೆಗೆ ಅಭಿಷೇಕ್ ಶರ್ಮಾ ಕೂಡ ಇದೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಭಾರತದ ಇನ್ನಿಂಗ್ಸ್​​ನ ಮೊದಲ ಓವರ್​​ನಲ್ಲಿ ಎಡಗೈ ಬ್ಯಾಟ್ಸ್ಮನ್ ಶೂನ್ಯಕ್ಕೆ ಔಟಾದರು. ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಇಬ್ಬರೂ ಈ ವರ್ಷದ ಐಪಿಎಲ್ ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಐಪಿಎಲ್ 2024 ರಲ್ಲಿ ಪರಾಗ್ 14 ಇನ್ನಿಂಗ್ಸ್​​ನಲ್ಲಿ 52.09 ಸರಾಸರಿ ಮತ್ತು 149.21 ಸ್ಟ್ರೈಕ್ ರೇಟ್ನಲ್ಲಿ 573 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ಅದ್ಭುತ ಮೂಲಕ ಐಪಿಎಲ್ ಫಾರ್ಮ್ 16 ಇನ್ನಿಂಗ್ಸ್​ಗಳಲ್ಲಿ 32.26 ಸರಾಸರಿಯಲ್ಲಿ 484 ರನ್ ಗಳಿಸಿದ್ದರು.

Continue Reading
Advertisement
Mahua Moitra
ದೇಶ13 mins ago

Mahua Moitra: ಹೊಸ ಕಾನೂನಿನಂತೆ ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್;‌ ಕಾರಣ ಇಲ್ಲಿದೆ

Self harming
ವಿಜಯನಗರ28 mins ago

Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ

Land Dispute
ಕರ್ನಾಟಕ32 mins ago

Land Dispute: ಬೆಂಗಳೂರಿನ 93 ವರ್ಷದ ಹಳೇ ಶಾಲೆಯ ಕಾಂಪೌಂಡ್‌ ಧ್ವಂಸ; ಮೂವರ ವಿರುದ್ಧ ಕೇಸ್‌

Vastu Tips
ಧಾರ್ಮಿಕ49 mins ago

Vastu Tips: ಆರ್ಥಿಕ ಸಂಕಷ್ಟ ದೂರವಾಗಿ ಶ್ರೀಮಂತರಾಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Union Budget 2024
ಬಜೆಟ್ 202459 mins ago

Union Budget 2024: ಘೋಷಣೆ ಸೋರಿಕೆಯಿಂದ ಹಲ್ವಾ ತಿನ್ನುವವರೆಗೆ; ಕೇಂದ್ರ ಬಜೆಟ್‌ನ 10 ಆಸಕ್ತಿದಾಯಕ ಸಂಗತಿಗಳಿವು

Sanath Jayasuriya
ಪ್ರಮುಖ ಸುದ್ದಿ1 hour ago

Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

Yogi Adityanath
ದೇಶ1 hour ago

Yogi Adityanath: ನಿಂತ ಜಾಗದಲ್ಲೇ ಬಡ ಮಹಿಳೆಗೆ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್;‌ ಇದು ‌Instant ಮಾನವೀಯತೆ

leopard attack
ರಾಯಚೂರು1 hour ago

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು

Viral Video
ವೈರಲ್ ನ್ಯೂಸ್1 hour ago

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

bomb threat
ಕರ್ನಾಟಕ1 hour ago

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ2 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ2 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ13 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌