Health Tips: ಕಂದೋ, ಬಿಳಿಯೋ: ಯಾವ ಮೊಟ್ಟೆ ಒಳ್ಳೆಯದು? - Vistara News

ಆರೋಗ್ಯ

Health Tips: ಕಂದೋ, ಬಿಳಿಯೋ: ಯಾವ ಮೊಟ್ಟೆ ಒಳ್ಳೆಯದು?

ಮೊಟ್ಟೆ ಖರೀದಿಗೆಂದು ಹೋದಾಗ ಕಾಡುವ ಪ್ರಶ್ನೆ- ಬಿಳಿಯ ಬಣ್ಣದ ಮೊಟ್ಟೆ ಒಳ್ಳೆಯದಾ ಅಥವಾ ಕಂದು ಬಣ್ಣದ್ದಾ? ಇದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Health Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಹಾರ ಮತ್ತು ಆರೋಗ್ಯ ವಲಯದಲ್ಲಿ ʻಸೂಪರ್‌ ಫುಡ್‌ʼ ಪಟ್ಟಿಯಲ್ಲಿ ಮೊಟ್ಟೆಗೆ ದೊಡ್ಡ ಕಿರೀಟವಿದೆ. ಬೆಳಗಿನ ತಿಂಡಿಯೇ ಇರಲಿ ಅಥವಾ ರಾತ್ರಿ-ಮಧ್ಯಾಹ್ನಗಳ ಊಟವೇ ಇರಲಿ, ಇದು ಎಲ್ಲದಕ್ಕೂ ಸಲ್ಲುವಂಥದ್ದು. ಕಡಿಮೆ ಶ್ರಮದಲ್ಲಿ ಹೆಚ್ಚಿನ ಆರೋಗ್ಯ ಎನ್ನುವಂತೆ, ಮೊಟ್ಟೆಯ ಅಡುಗೆ ಅಟ್ಟುವುದು ಅಂಥ ಕಷ್ಟವೂ ಅಲ್ಲ. ಯಾವ ಊರಿಗೆ ಹೋದರೂ ಮೊಟ್ಟೆ ಖಾದ್ಯಗಳು ದೊರೆಯುವುದು ಕ್ಲಿಷ್ಟವಲ್ಲ. ಹಾಗಾಗಿ ಬ್ರಹ್ಮಚಾರಿಗಳಿಂದ ಹಿಡಿದು ಸಂಸಾರಿಗಳವರೆಗೆ ಇದಕ್ಕೆ ಸಾಕಷ್ಟು ಜನಪ್ರಿಯತೆಯಿದೆ. ಆದರೆ ಮೊಟ್ಟೆ ಖರೀದಿಗೆಂದು ಹೋದಾಗ ಕಾಡುವ ಪ್ರಶ್ನೆ- ಬಿಳಿಯ ಬಣ್ಣದ ಮೊಟ್ಟೆ ಒಳ್ಳೆಯದಾ ಅಥವಾ ಕಂದು ಬಣ್ಣದ್ದಾ?

Health Tips

ಇದೇನು ಕೋಳಿ ಮೊದಲಾ-ಮೊಟ್ಟೆ ಮೊದಲಾ ಎಂಬಂಥ ಪ್ರಶ್ನೆಯಲ್ಲ. ಹಾಗೆಂದೇ ತಜ್ಞರಲ್ಲಿ ಇದಕ್ಕೆ ಸ್ಪಷ್ಟ ಉತ್ತರವಿದೆ. ಮೊಟ್ಟೆಯ ಚಿಪ್ಪಿನ ಬಣ್ಣ ನಿರ್ಧಾರವಾಗುವುದು ಆಯಾ ಕೋಳಿಯ ದೇಹ ಉತ್ಪಾದಿಸುವ ವರ್ಣದ್ರವ್ಯಗಳ ಮೇಲೆ. ಅಂದರೆ, ಕೋಳಿಯೊಂದರೆ ಪುಕ್ಕದ ಬಣ್ಣದ ಮೇಲೂ ಅದರ ಮೊಟ್ಟೆಯ ಬಣ್ಣದ ಸೂಚನೆ ದೊರೆಯಬಹುದು. ಆದರೆ ಮೊಟ್ಟೆಯ ಚಿಪ್ಪಿನ ಬಣ್ಣದಿಂದ ಅದರ ಪೋಷಕಾಂಶದಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ. ಬಿಳಿ ಮತ್ತು ಕಂದು ಮೊಟ್ಟೆಗಳೆರಡರಿಂದಲೂ ಸಮಾನ ಪೋಷಣೆಯೇ ದೊರೆಯುತ್ತದೆ- ಒಂದರಲ್ಲಿ ಹೆಚ್ಚು, ಇನ್ನೊಂದರಲ್ಲಿ ಕಡಿಮೆ ಎಂದಿಲ್ಲ ಎನ್ನುತ್ತಾರೆ ಆಹಾರ ಪರಿಣಿತರು.

“ಎರಡೂ ಬಣ್ಣದ ಚಿಪ್ಪಿನ ಮೊಟ್ಟೆಗಳಲ್ಲಿ ಸಂಪೂರ್ಣ ಪೋಷಣೆ ದೊರೆಯುತ್ತದೆ. ಚಿಪ್ಪಿನ ಬಣ್ಣದಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ಎರಡೂ ಬಣ್ಣದ ಮೊಟ್ಟೆಗಳಲ್ಲಿ ಕೋಲಿನ್‌, ಫೋಲೇಟ್‌, ಕಬ್ಬಿಣ, ಸತು, ಸೆಲೆನಿಯಂ, ಎ ಮತ್ತು ಬಿ೧೨ ಜೀವಸತ್ವಗಳು ಧಾರಾಳವಾಗಿ ದೊರೆಯುತ್ತವೆ. ಪ್ರೋಟೀನಂತೂ ಹೇರಳವಾಗಿದೆ. ಆಹಾರ ಮತ್ತು ಜೀವಿಸುವ ವಾತಾವರಣಗಳು ಆಯಾ ಕೋಳಿಗಳು ಇಡುವ ಮೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆಯೆ ಹೊರತು ಅದರ ದೇಹದ ವರ್ಣದ್ರವ್ಯವಲ್ಲ” ಎಂಬುದು ತಜ್ಞರ ಖಚಿತ ನುಡಿ.

Health Tips

ಮತ್ತೇಕೆ ತುಟ್ಟಿ?: ಜನ ಕಂದು ಮೊಟ್ಟೆಗಳು ಬಿಳಿಯದ್ದಕ್ಕಿಂತ ಹೆಚ್ಚು ಪೌಷ್ಟಿಕ ಎಂಬ ಭಾವನೆ ಹೊಂದುವುದಕ್ಕೆ ಕಾರಣ, ಅವುಗಳ ಬೆಲೆಯಲ್ಲಿ ಇರುವ ವ್ಯತ್ಯಾಸ. ಕೆಲವೊಮ್ಮೆ ಕಂದು ಮೊಟ್ಟೆಯ ಧಾರಣೆ ಬಿಳಿಯದಕ್ಕಿಂತ ಹೆಚ್ಚಿದ್ದೀತು. ಈ ತಳಿಯ ಕೋಳಿಗಳು ದೊಡ್ಡ ಗಾತ್ರದಲ್ಲಿ ಮತ್ತು ಕಡಿಮೆ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ನಿರ್ವಹಣಾ ವೆಚ್ಚ ಸಹಜವಾಗಿ ಹೆಚ್ಚುತ್ತದೆ. ಹಾಗಾಗಿ ಹೆಚ್ಚಿನ ಬೆಲೆಯ ಮೊಟ್ಟೆಗಳು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಎಂಬ ಭಾವನೆ ಹಲವರಲ್ಲಿದೆ. ಆದಷ್ಟೂ ತಾಜಾ ಇರುವ ಮೊಟ್ಟೆಗಳನ್ನು ಖರೀದಿಸುವತ್ತ ಗಮನ ನೀಡಬೇಕೇ ಹೊರತು ಅವುಗಳ ಬಣ್ಣವನ್ನು ನಿರ್ಧರಿಸಿ ಖರೀದಿಸುವುದಲ್ಲ ಎಂಬುದು ಆಹಾರ ಮತ್ತು ಆರೋಗ್ಯ ಪರಿಣಿತರ ಅಂಬೋಣ.

ಇದನ್ನೂ ಓದಿ| Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

National Doctor’s Day: ಇಂದು ರಾಷ್ಟ್ರೀಯ ವೈದ್ಯರ ದಿನ; ಕಾಳಜಿಯ ಕೈಗಳಿಗೆ ಕೃತಜ್ಞತೆ ಹೇಳುವ ದಿನ

National Doctor’s Day: ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಜುಲೈ ತಿಂಗಳ ಈ ಮೊದಲ ದಿನವನ್ನು ಮೀಸಲಿಡಲಾಗಿದೆ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

National Doctor’s Day
Koo

ವೈದ್ಯರನ್ನು ನಾರಾಯಣನೆಂದು ಕರೆಯುವ ವಾಡಿಕೆಯಿದೆ ಭಾರತದಲ್ಲಿ. ಹಾಗೆಲ್ಲ ದೇವರೆಂದು ಪೂಜಿಸುವ ವೃತ್ತಿಯಲ್ಲಿರುವವರಿಗೂ ʻಸಾಕಪ್ಪಾʼ ಎನಿಸುವಂತೆ ವೈದ್ಯರ ಮೇಲಿನ ದಾಳಿಗಳು, ನೀಟ್‌ ಪರೀಕ್ಷೆಗಳ ಅವಾಂತರ ಮುಂತಾದವು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿವೆ. ಅವುಗಳ ನಡುವೆಯೇ, ಈ ಗುಣ ಪಡಿಸುವ ಕೈಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಬಂದಿದೆ. ಇಂದು ರಾಷ್ಟ್ರೀಯ ವೈದ್ಯರ ದಿನ (National Doctor’s Day).
ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಈ ದಿನವನ್ನು ಮೀಸಲಿಡಲಾಗಿದೆ. ಇದೊಂದೇ ದಿನ ಸಾಕು ಎನ್ನುವ ಅರ್ಥದಲ್ಲಿ ಅಲ್ಲ, ಆದರೆ ಇಂದಾದರೂ ನೆನಪಿನಿಂದ ನಿಂನಿಮ್ಮ ವೈದ್ಯರಿಗೆ ಸಣ್ಣದೊಂದು ʻಥ್ಯಾಂಕ್ಸ್‌ʼ ಹೇಳಲು, ಅವರ ಕಾಳಜಿಯ ಕುರಿತಾಗಿ ಕೃತಜ್ಞತೆ ಸಲ್ಲಿಸಲು ಮರೆಯದಿರಿ ಎನ್ನುವ ಉದ್ದೇಶ ಇದರ ಹಿಂದಿದೆ.

Doctor’s Day

ಇಂದೇ ಏಕೆ?

ಜುಲೈ ಮೊದಲ ದಿನವೇ ವೈದ್ಯರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ರೋಗಿಗಳ ನೋವನ್ನು ಶಮನ ಮಾಡುವ, ಗುಣಪಡಿಸುವ ಮತ್ತು ಬದುಕನ್ನು ಸಹನೀಯಗೊಳಿಸುವ ವೈದ್ಯರಿಗೆ ಇಂದೇ ಕೃತಜ್ಞತೆ ಸಲ್ಲಿಸುವುದಕ್ಕೆ ಕಾರಣಗಳಿವೆ. ಡಾ. ಬಿಪಿನ್‌ ಚಂದ್ರ ರಾಯ್‌ ಅವರ ಸಂಸ್ಮರಣಾರ್ಥವಾಗಿ ಭಾರತ ಸರಕಾರ ಈ ದಿನವನ್ನು ವೈದ್ಯರ ದಿನವೆಂದು 1991ರಲ್ಲಿ ಘೋಷಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಪಿನ್‌ ಚಂದ್ರ ರಾಯ್‌, ಖ್ಯಾತ ವೈದ್ಯರು ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದರು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿ, ವೈದ್ಯಕೀಯ ಕ್ಷೇತ್ರಕ್ಕೆ ಸಾಂಸ್ಥಿಕ ಬಲವನ್ನು ನೀಡುವಲ್ಲಿ ಡಾ. ರಾಯ್‌ ಪ್ರಮುಖರಾಗಿದ್ದರು. ತಾವೇ ಸ್ವತಃ ಒಳ್ಳೆಯ ವೈದ್ಯರಾಗಿ, ಬಹಳಷ್ಟು ಜೀವಗಳನ್ನು ಉಳಿಸಿದ್ದರು. ಸ್ವಾತಂತ್ರ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ, ಭಾರತದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಆರೋಗ್ಯಕ್ಷೇತ್ರ ಮತ್ತು ನಾಗರಿಕ ಆರೋಗ್ಯ ವಲಯದಲ್ಲಿ ವೃತ್ತಿಪರತೆ ಮತ್ತು ಮಾನವೀಯತೆಯ ಉನ್ನತ ಆದರ್ಶಗಳನ್ನು ಸೃಷ್ಟಿಸಿರುವ ಸಾವಿರಾರು ವೈದ್ಯರು ನಮ್ಮ ಕಣ್ಣೆದುರಿಗಿದ್ದಾರೆ. ನೂರೆಂಟು ಸವಾಲುಗಳ ನಡುವೆ, ಜೀವ ಉಳಿಸುವ ಕೈಂಕರ್ಯದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು, ಅದರಲ್ಲೇ ತೃಪ್ತಿಯನ್ನು ಕಂಡವರ ಕತೆಗಳನ್ನು, ದೃಷ್ಟಾಂತಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲೇ ಜೀವ ಒತ್ತಡ ಇಟ್ಟು ಹಗಲಿರುಳು ದುಡಿದ ವೈದ್ಯರು ಜಗತ್ತಿನ ಉದ್ದಗಲಕ್ಕೆ ಕಾಣಸಿಗುತ್ತಾರೆ. ಸಮಾಜಕ್ಕೆ ಈ ವೃತ್ತಿ ನೀಡುತ್ತಿರುವ ಕೊಡುಗೆಗೆ ಧನ್ಯವಾದ ಹೇಳುವುದೂ ಅಗತ್ಯವಲ್ಲವೇ? ಈ ವರ್ಷದ ಘೋಷವಾಕ್ಯ: ಗುಣಪಡಿಸುವ ಕೈಗಳು, ಕಾಳಜಿಯ ಹೃದಯಗಳು.

Continue Reading

ಪ್ರಮುಖ ಸುದ್ದಿ

Dengue Fever: ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಒಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Dengue Fever: ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

VISTARANEWS.COM


on

Dengue fever rises across the state including Bengaluru BBMP Commissioner also get fever
Koo

ಬೆಂಗಳೂರು: ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯು ಸೋಂಕಿನಿಂದಲೇ (Dengue Fever) ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ (BBMP) ಖಚಿತಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯು ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಗ್ಯುವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ (BBMP Health Audit) ಖಚಿತಪಡಿಸಿದೆ.

ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯು ಕಾರಣವವಾಗಿದೆ. ಆದರೆ 80ರ ವೃದ್ಧೆಯ ಸಾವಿಗೆ ಕ್ಯಾನ್ಸರ್ ಕಾರಣ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಗರದಲ್ಲಿ ಸದ್ಯ 1743 ಆಕ್ಟಿವ್ ಡೆಂಗ್ಯು ಕೇಸ್‌ಗಳು ಇವೆ.

ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

ಇದೂವರೆಗೂ ನಗರದಲ್ಲಿ ಇಬ್ಬರು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. ಸಿವಿ ರಾಮನ್ ನಗರದ 27 ವರ್ಷದ ಯುವಕ ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದು, ಈತ ತೀವ್ರ ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Continue Reading

ಆರೋಗ್ಯ

Watermelon At Night: ಸಂಜೆ 7 ಗಂಟೆಯ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

watermelon at night: ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಕಲ್ಲಂಗಡಿ ಹಣ್ಣು ಸೇವನೆಗೆ ಸೂಕ್ತ. ಆದರೆ ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಲೇಖನ ಓದಿ.

VISTARANEWS.COM


on

Watermelon At Nigh
Koo

ಪ್ರಕೃತಿದತ್ತವಾಗಿ ಸಿಗುವ ಹಣ್ಣು ಹಂಪಲುಗಳಿಂದ ದೇಹ ತಂಪು ಮಾಡಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸುತ್ತೇವೆ. ಸಾಕಷ್ಟು ಹಣ್ಣುಗಳು ತೂಕ ಇಳಿಕೆಗೆ ಪೂರಕವಾಗಿಯೂ ಇವೆ. ಹೆಚ್ಚು ಲೈಕೋಪೀನ್‌ ಇರುವ ಕಲ್ಲಂಗಡಿ ಹಣ್ಣೂ ಕೂಡಾ, ತೂಕ ಇಳಿಕೆಗೆ ಸಹಾಯ ಮಾಡುವ ಹಣ್ಣೇ ಆಗಿದೆ. ಆದರೆ, ಹಾಗಂತ, ಈ ಕಲ್ಲಂಗಡಿಯನ್ನೇ ತಿಂದು ತೂಕ ಇಳಿಸಲು ಪ್ರಯತ್ನಿಸುವ ಮಂದಿಯೂ ಇಲ್ಲದಿಲ್ಲ. ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿಯನ್ನು ತಿಂದು ತೂಕ ಇಳಿಸಿಕೊಂಡವರೂ ಇದ್ದಾರೆ ನಿಜ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಸೇವನೆಗೆ ಸೂಕ್ತ. ಆದರೆ, ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಬನ್ನಿ, ಕಲ್ಲಂಗಡಿಯನ್ನು (watermelon at night) ಯಾಕೆ ರಾತ್ರಿ ತಿನ್ನಬಾರದು ಎಂಬುದನ್ನು ತಿಳಿಯೋಣ.

Watermelon

ಇದು ಆಮ್ಲೀಯ ಗುಣ ಹೊಂದಿದೆ

ವಾಟರ್‌ ಮೆಲನ್‌ ಎಂಬ ತನ್ನ ಹೆಸರೇ ಹೇಳುವಂತೆ, ಕಲ್ಲಂಗಡಿ ಹಣ್ಣಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ನೀರಿದೆ. ಲೈಕೋಪೀನ್, ಪೊಟಾಶಿಯಂ, ಹಾಗೂ ಸಾಕಷ್ಟು ಪ್ರಮಾಣದಲ್ಲಿ ಇತರ ಪೋಷಕಾಂಶಗಳೂ ಇವೆ. ನಾರಿನಂಶವೂ ಹೆಚ್ಚಿದೆ. ಹಾಗಾಗಿ ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ ನಿಜ. ಆದರೆ, ಇವೆಲ್ಲ ಇದ್ದೂ, ಕಲ್ಲಂಗಡಿ ಹಣ್ಣನ್ನು ಯಾವಾಗ ಎಷ್ಟು ತಿನ್ನಬೇಕು ಎಂಬ ಅರಿವು ಇರಬೇಕು. ಮುಖ್ಯವಾಗಿ ರಾತ್ರಿ ಮಲಗಲು ಹೋಗುವ ಮುನ್ನ ತಿನ್ನಬಾರದು. ಅಂದರೆ, ರಾತ್ರಿಯೂಟ ಎಂದು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಸಂಜೆ ಏಳರ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಕೆಂದರೆ, ಕಲ್ಲಂಗಡಿ ಹಣ್ಣು ಸ್ವಲ್ಪ ಅಸಿಡಿಕ್‌ ಅಂದರೆ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ದೇಹ ವಿಶ್ರಾಂತಿಗೆ ಹೊರಡುವ ಸಂದರ್ಭ ಇದರ ಸೇವನೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನೂ ನಿಧಾನಗೊಳಿಸುವ ಅಪಾಯವಿರುತ್ತದೆ.

Woman Eating Watermelon

ಮಧ್ಯಾಹ್ನ ಸೇವನೆ ಸೂಕ್ತ

ಕಲ್ಲಂಗಡಿ ಹಣ್ಣಿನ ಸೇವನೆಗೆ ಅತ್ಯಂತ ಒಳ್ಳೆಯ ಸಮಯ ಎಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಒಂದು ಗಂಟೆ. ಈ ಸಂದರ್ಭ ದೇಹದ ಜೀರ್ಣಕ್ರಿಯೆಯ ಶಕ್ತಿ ಅತ್ಯಂತ ಹೆಚ್ಚಿರುತ್ತದೆ. ಆಗ, ಕಲ್ಲಂಗಡಿ ಹಣ್ಣಿನ ಪೋಷಕಾಂಶಗಳೂ ಸಹ ದೇಹಕ್ಕೆ ಸಮರ್ಪಕವಾಗಿ ಸಿಗುತ್ತದೆ.

Digestive Issues Coffee Side Effects

ಜೀರ್ಣಕ್ರಿಯೆ ಸ್ನೇಹಿಯಲ್ಲ

ನಾವಂದುಕೊಂಡಂತೆ, ರಾತ್ರಿಯ ಹೊತ್ತು ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಯ ಸ್ನೇಹಿಯಲ್ಲ. ಹಗಲಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿದರೂ ರಾತ್ರಿಯಾದ ಮೇಲೆ, ದೇಹ ವಿಶ್ರಾಂತಿಯಲ್ಲಿರುವಾಗ ಇದರ ವರಸೆ ಬದಲಾಗುತ್ತದೆ. ಹಾಗಾಗಿ, ರಾತ್ರಿ ಇದನ್ನು ಸೇವಿಸಿದರೆ, ಮಾರನೇ ದಿನ ಹೊಟ್ಟೆ ಕೆಡುವುದು, ಚೆನ್ನಾಗಿ ಕರಗಿದ ಅನುಭವ ಆಗದೆ ಇರುವುದು, ಹೊಟ್ಟೆ ಸಂಬಂಧೀ ಕಿರಿಕಿರಿಗಳು ಉಂಟಾಗುವ ಸಂಭವ ಇವೆ.

Belly Fat Reduction

ತೂಕ ಏರುವ ಆತಂಕ

ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ರಾತ್ರಿ ಸೇವಿಸಿದರೆ, ತೂಕ ಹೆಚ್ಚಾಗುವ ಸಂಭವವೂ ಇದೆ.

Sleeping tips

ರಾತ್ರಿ ನಿದ್ರೆಗೆ ಭಂಗ

ಕೇವಲ ಇವಿಷ್ಟೇ ಅಲ್ಲ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಆಗಾಗ ಮೂತ್ರ ಬರುವ ಸಂಭವ ಹೆಚ್ಚು. ಹೀಗಾಗಿ, ರಾತ್ರಿಯ ನಿದ್ದೆಗೆ ಭಂಗ ಉಂಟಾಗಲೂಬಹುದು.

Home Remedies For Cough And Cold

ನೆಗಡಿಯ ಆತಂಕ

ಶೀತ ಪ್ರಕೃತಿಯ ದೇಹ ಇರುವ ಮಂದಿಗೆ ರಾತ್ರಿ ಕಲ್ಲಂಗಡಿ ಸೇವನೆಯಿಂದ ತಲೆನೋವು, ನೆಗಡಿ ಬರುವ ಸಂಭವವೂ ಇದೆ. ಮಾರನೇ ದಿನ ತಲೆ ಭಾರವಾದ ಸ್ಥಿತಿ, ತಲೆನೋವಿನ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ

ಕಲ್ಲಂಗಡಿ ಹಣ್ಣನ್ನು ಅಂಗಡಿಯಿಂದ ತಂದ ತಕ್ಷಣ ತಾಜಾ ಆಗಿರುವಾಗಲೇ ಕತ್ತರಿಸಿ ತಿನ್ನುವುದು ಒಳ್ಳೆಯದು. ಅದನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ. ತಾಜಾ ತಿನ್ನುವುದರಿಂದ ಆರೋಗ್ಯದ ಲಾಭಗಳು ಹೆಚ್ಚು.

Continue Reading

ಆರೋಗ್ಯ

Healthy Foods For Kidney: ನಮ್ಮ ಕಿಡ್ನಿ ಆರೋಗ್ಯವಾಗಿರಲು ಈ ಆಹಾರ ಸೇವನೆ ಸೂಕ್ತ

Healthy foods for kidney: ಕಿಡ್ನಿಯ ಸಮಸ್ಯೆ ಇದ್ದವರು ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀರು ಕುಡಿಯುವುದು ಒಳ್ಳೆಯದು. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಉದ್ವೇಗದಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Healthy Foods For Kidney
Koo

ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯ ಆಹಾರ (healthy foods for kidney) ಅತ್ಯಂತ ಮುಖ್ಯ. ಕಿಡ್ನಿಯ ಸಮಸ್ಯೆ ಇದ್ದವರು ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀರು ಕುಡಿಯುವುದು ಒಳ್ಳೆಯದು. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಉದ್ವೇಗದಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಈ ಸಮಸ್ಯೆಗಳನ್ನು ದೂರವಿಟ್ಟರೆ, ಕಿಡ್ನಿಯ ಸಮಸ್ಯೆಗೂ ಒಳ್ಳೆಯದೇ. ಬನ್ನಿ ನಾವು ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬುದನ್ನು ನೋಡೋಣ.

Raw Turmeric with Powder Cutout

ಅರಿಶಿನ

ಅರಿಶಿನದಲ್ಲಿ ಸಾಕಷ್ಟು ಆಂಟಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಕಿಡ್ನಿಯಲ್ಲಾಗಿರುವ ಉರಿಯೂತದ ಲಕ್ಷಣಗಳಿಗೆ ಇದು ಒಳ್ಳೆಯದನ್ನೇ ಮಾಡುತ್ತದೆ. ಬಿಸಿ ಹಾಲಿನಲ್ಲಿ ಚಿಟಿಕೆ ಅರಿಶಿನ ಹಾಕಿ ನಿತ್ಯವೂ ಸೇವಿಸಬಹುದು.

Red capsicum Foods For Sharpen The Eyes

ಕೆಂಪು ಕ್ಯಾಪ್ಸಿಕಂ

ಕೆಂಬಣ್ಣದ ಕ್ಯಾಪ್ಸಿಕಂನಲ್ಲಿ ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್ಸ್‌ ಹೇರಳವಾಗಿರುವುದರಿಂದ ಇದು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

Gooseberries and Greengages close up Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್ಸ್‌ ಹೇರಳವಾಗಿದೆ. ಇದು ಕಿಡ್ನಿಯ ಕಾರ್ಯಶೈಲಿಯನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ನೆಲ್ಲಿಕಾಯಿ ಚಟ್ನಿ, ಜ್ಯೂಸ್‌, ನೆಲಿಕಾಯಿ ಮೊರಬ್ಬ ಇತ್ಯಾದಿಗಳ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರಮಾಣದ ವಿಟಮಿನ್‌ ಸಿ ಪೂರೈಕೆ ಮಾಡಬಹುದು.

garlic Anti Infective Foods

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಕೇವಲ ಕೊಲೆಸ್ಟೆರಾಲ್‌ ಇಳಿಸುವುದಕ್ಕೆ ಸಹಾಯ ಮಾಡುವುದಷ್ಟೇ ಅಲ್ಲ, ಅದು ಕಿಡ್ನಿಯ ಆರೋಗ್ಯವನ್ನೂ ಹೆಚ್ಚಿಸಿ ಚುರುಕಾಗಿಸುತ್ತದೆ. ಅಡುಗೆಯಲ್ಲಿ ಸಾಧ್ಯವಾದೆಡೆಯೆಲ್ಲ ಬೆಳ್ಳುಳ್ಳಿ ಬಳಸಿ. ಒಗ್ಗರಣೆಯಲ್ಲಿ ಬೆಳ್ಳುಳ್ಳಿಯನ್ನೂ ಸೇರಿಸಿ. ಆಗಾಗ ಬೆಳ್ಳುಳ್ಳಿ ಚಟ್ನಿ ಮಾಡಿ ಸೇವಿಸಿ. ಬೆಳ್ಳುಳ್ಳಿ ಪರಾಠಾ ಮಾಡಿ ಸೇವಿಸಿ. ಸೂಪ್‌ಗೆ ಬೆಳ್ಳುಳ್ಳಿ ಹಾಕಿ ಸೇವಿಸಿ.

Barley for Hot Flashes During Period

ಬಾರ್ಲಿ

ನಾರಿನಂಶ ಹೆಚ್ಚಿರುವ ಬಾರ್ಲಿಯಂತಹ ಧಾನ್ಯವನ್ನು ಬಳಕೆ ಮಾಡಲು ಕಲಿಯಿರಿ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡಲು ಸಹಾಐ ಮಾಡುವುದಲ್ಲದೆ, ಕಿಡ್ನಿ ಸಮಸ್ಯೆಯನ್ನೂ ದೂರವಿರಿಸಲು ಸಹಾಯ ಮಾಡುತ್ತದೆ. ಬಾರ್ಲಿಯ ಒಂದು ಸರಳ ಸೂಪ್‌, ಅಥವಾ ತರಕಾರಿಗಳ ಜೊತೆಗೆ ಬಾರ್ಲಿಯನ್ನೂ ಬೇಯಿಸಿ ತಿನ್ನುವುದು ಇತ್ಯಾದಿಗಳನ್ನು ಟ್ರೈ ಮಾಡಬಹುದು.

banana stem

ಬಾಳೆದಂಡು

ಬಾಳೆಮರದ ದಂಡೂ ಕೂಡಾ ಕಿಡ್ನಿಕಲ್ಲಿಗೆ ಅತ್ಯಂತ ಒಳ್ಳೆಯ ಔಷಧಿ. ಮನೆಮದ್ದಾಗಿ ಇದನ್ನು ಬಳಕೆ ಮಾಡಿ ಕಿಡ್ನಿ ಸಮಸ್ಯೆಯಿಂದ ಪಾರಾದವರೂ ಇದ್ದಾರೆ. ಬಾಳೆದಂಡಿನ ರಸ ಹಿಂಡಿ ಅದರ ಜ್ಯೂಸನ್ನು ನಿತ್ಯವೂ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಆದರೆ, ಪೊಟಾಶಿಯಂ ಹೆಚ್ಚಾದರೆ ಅದೂ ಕಿಡ್ನಿಗೆ ಆಪತ್ತು ತರಬಹುದು ಎಂಬುದು ನೆನಪಿರಲಿ.

Coconut water Foods For Fight Against Dengue Fever

ಎಳನೀರು

ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಿರುವ ಎಳನೀರು ದೇಹವನ್ನು ಸದಾ ತೇವಾಂಶದಿಂದಿಡಲು ಅನುಕೂಲಕರ. ಇದು ಕಿಡ್ನಿಯನ್ನು ಆರೋಗ್ಯವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಹವನ್ನು ತಂಪಾಗಿಡುವ ಜೊತೆಗೆ ದೇಹಕ್ಕೆ ಬೇಕಾದ ಖನಿಜ ಲವಣಾಂಶಗಳನ್ನೂ ನೀಡುತ್ತದೆ. ಎಳನೀರಿನ ಜೊತೆಗೆ ನಿಂಬೆಹಣ್ಣು, ಪುದಿನ ಸೇರಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಕಾಣಬಹುದು.

Blueberry Foods That Slow Down Ageing

ಬ್ಲೂಬೆರ್ರಿ

ಬ್ಲೂಬೆರ್ರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಇದು ಕಿಡ್ನಿಯ ಸಮಸ್ಯೆಗಳು ಬಾರದಂತೆ ಮೊದಲೇ ತಡೆಯುತ್ತದೆ. ಬ್ಲೂಬೆರ್ರಿ ಸ್ಮೂದಿ, ಬ್ಲೂಬೆರ್ರಿ ಯೋಗರ್ಟ್‌ ಮತ್ತಿತರ ಆಹಾರಗಳನ್ನು ತಯಾರಿಸುವ ಮೂಲಕ ಬ್ಲೂಬೆರ್ರಿಯನ್ನು ಸೇವಿಸಬಹುದು.

Ginger Digestive Boosting Foods

ಶುಂಠಿ

ಶುಂಠಿಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ. ಇದು ಕಿಡ್ನಿಗೆ ಆಗುವ ಹಾನಿಗಳನ್ನು ತಡೆಯುತ್ತದೆ. ನಿತ್ಯವೂ ಶುಂಠಿಯನ್ನು ಆಹಾರದ ಜೊತೆಯಲ್ಲಿ ಬಳಕೆ ಮಾಡುವ ಮೂಲಕ ಶುಂಠಿಯ ಉಪಯೋಗವನ್ನು ಪಡೆಯಬಹುದು. ಬಿಸಿನೀರಿಗೆ ಶುಂಠಿಯನ್ನು ತುರಿದು ಹಾಕಿ ಕುಡಿಯುವುದು, ನಿಂಬೆಹಣ್ಣು, ಜೇನುತುಪ್ಪ ಸೇರಿಸಿ ಶುಂಠಿ ಚಹಾ ಮಾಡಿ ಕುಡಿಯುವುದು ಇತ್ಯಾದಿಗಳ ಮೂಲಕ ಶುಂಠಿಯ ಉಪಯೋಗವನ್ನು ದೇಹ ಪಡೆದುಕೊಳ್ಳುವಂತೆ ಮಾಡಬಹುದು.

Antioxidant Properties Cucumber Benefits

ಸೌತೆಕಾಯಿ

ಸೌತೆಕಾಯಿಯಲ್ಲಿ ನೀರಿನಂಶ ಬಹಳ ಹೆಚ್ಚಿರುವುದರಿಂದ ಸಹಜವಾಗಿಯೇ ಕಿಡ್ನಿಕಲ್ಲು ಮತ್ತಿತರ ಕಿಡ್ನಿ ಸಮಸ್ಯೆಗೆ ಇದು ಅತ್ಯಂತ ಒಳ್ಳೆಯದು. ಇದರ ಸೇವನೆಯಿಂದ ಕಿಡ್ನಿಯಲ್ಲಿರುವ ಹಾಗೂ ದೇಹದಲ್ಲಿರುವ ವಿಷಕಾರೀ ಅಂಶಗಳನ್ನು ಹೊರಕ್ಕೆ ಕಳಿಸುವಂತೆ ಮಾಡಬಹುದು. ಇದರ ಜೊತೆಗೆ ನಿಂಬೆಹಣ್ಣು ಹಿಂಡಿಯೂ ಸೇವಿಸಬಹುದು.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Continue Reading
Advertisement
DCM Post
ಕರ್ನಾಟಕ20 mins ago

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

Sheikh Abdul Rashid
ದೇಶ22 mins ago

Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ ಎಂಟ್ರಿ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಸಂಸದನ ಪ್ರಮಾಣವಚನಕ್ಕೆ NIA ಅಸ್ತು

karnataka Weather Forecast
ಮಳೆ27 mins ago

Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

reels obsession
ಕ್ರೈಂ32 mins ago

Reels Obsession: ಎಕೆ 47, ಬಾಡಿಗಾರ್ಡ್ಸ್‌, ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡಿದವನು ಜೈಲುಪಾಲು!

Parliament Sessions
ದೇಶ33 mins ago

Parliament Sessions: ಲೋಕಸಭೆಯಲ್ಲಿ ನೀಟ್‌ ವಿವಾದ ಚರ್ಚೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ

Darshan support by Adviti Shetty Block the bad commenter
ಸ್ಯಾಂಡಲ್ ವುಡ್42 mins ago

Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

Inspirational Story
ಬೆಂಗಳೂರು58 mins ago

Inspirational Story: ಕಣ್ಣೆದುರೆ ಸುಟ್ಟು ಕರಕಲಾದ ಮಗಳ ದುರಂತ ಅಂತ್ಯ; ಬಡಮಕ್ಕಳಿಗೆ ದಾರಿದೀಪವಾದ ಎಎಸ್‌ಐ

Doctor's Day
ದೇಶ1 hour ago

Doctor’s Day: ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೃದ್ಧಿಗೆ ಕ್ರಮ; ಪ್ರಧಾನಿ ಮೋದಿ ಭರವಸೆ

Munawar Faruqui shares first pic with new wife
ಬಾಲಿವುಡ್1 hour ago

Munawar Faruqui: ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊ ಹಂಚಿಕೊಂಡ  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ!

Lok sabha Election 2024 DV Sadananda Gowda
ಪ್ರಮುಖ ಸುದ್ದಿ2 hours ago

DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌