ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ! - Vistara News

ಆರೋಗ್ಯ

ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ!

ಬೆಳಗ್ಗೆ ಏಳುವಾಗ ಹೊಟ್ಟೆ ಉಬ್ಬರಿಸಿದಂತ ಭಾವ, ಮೈಕೈ ಎಲ್ಲ ಭಾರವಿದ್ದಂತೆ, ಸುಲಭವಾಗಿ ಸಹಜವಾಗಿ ಸರಾಗವಾಗಿ ನಡೆದಾಡಲಾಗುತ್ತಿಲ್ಲ ಎಂಬ ಎಂಥದೋ ಒಂದು ಬಗೆಯ ಉದಾಸೀನತೆ ಕಾಡತೊಡಗುತ್ತದೆ.

VISTARANEWS.COM


on

Bloating problem
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಮಂದಿಗೆ ಇಂಥದ್ದೊಂದು ಸಮಸ್ಯೆ ಕಾಡಿರಬಹುದು. ಪ್ರತಿನಿತ್ಯ, ಯೋಗವೋ, ಜಿಮ್ಮೋ, ನಡಿಗೆಯೋ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ತೂಕ ಇಳಿಕೆಯ ಅಥವಾ ಅದೇ ತೂಕವನ್ನು ಕಾಪಾಡಿಕೊಳ್ಳುವ ಆರೋಗ್ಯಕರ ಜೀವನಶೈಲಿಯೆಡೆಗೆ ಪ್ರಯತ್ನ ಪಡುವ ಮಂದಿಗೆ ಎಲ್ಲ ಸರಿಯಿದೆ ಅನಿಸುವಾಗ ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಎರಡು ಕೆಜಿ ತೂಕ ಏರಿ ಬಿಡಬಹುದು. ಅರೆ, ಇಷ್ಟರವರೆಗೆ ಇಳಿಕೆಯ ಹಾದಿಯಲ್ಲಿದ್ದ ತೂಕ ಹೀಗೇಕೆ ಒಮ್ಮೆಲೇ ಏರಿತು ಎಂದು ನಿತ್ಯವೂ ತಮ್ಮ ತೂಕವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುವ ಮಂದಿಗೆ ಆಶ್ಚರ್ಯದೊಂದಿಗೆ ಬೇಸರವೂ ಆಗಬಹುದು.

Bloating problem

ಬೆಳಗ್ಗೆ ಏಳುವಾಗ ಹೊಟ್ಟೆ ಉಬ್ಬರಿಸಿದಂತ ಭಾವ, ಮೈಕೈ ಎಲ್ಲ ಭಾರವಿದ್ದಂತೆ, ಸುಲಭವಾಗಿ ಸಹಜವಾಗಿ ಸರಾಗವಾಗಿ ನಡೆದಾಡಲಾಗುತ್ತಿಲ್ಲ ಎಂಬ ಎಂಥದೋ ಒಂದು ಬಗೆಯ ಉದಾಸೀನತೆ ಕಾಡತೊಡಗುತ್ತದೆ. ಏನೋ ಟೈಟ್‌ನೆಸ್‌ ಫೀಲು ದೇಹದಲ್ಲಿರುತ್ತದೆ. ಅದರ ಪರಿಣಾಮ ಮನಸ್ಸೂ ಕೂಡಾ ಆಲಸಿಯಾಗಿ ಹಾಗೇ ಇರಲು ಬಯಸುತ್ತದೆ. ಇದರ ಹೆಸರು ವಾಟರ್‌ ರಿಟೆನ್ಶನ್. ಅಥವಾ ಬ್ಲೋಟಿಂಗ್‌. ಅಂದರೆ ಮೊದಲು ಸೇವಿಸಿದ ಆಹಾರದ ಪರಿಣಾಮದಿಂದಲೋ ಅಥವಾ ಇನ್ನಿತರ ಕೆಲವು ಕಾರಣಗಳಿಂದ ದೇಹದಲ್ಲಿ ನೀರು ತುಂಬಿಕೊಳ್ಳುವುದು.

ವಾಟರ್‌ ರಿಟೆನ್ಶನ್‌ ಒಂದು ಬಹಳ ಸಾಮಾನ್ಯ ಆರೋಗ್ಯ ತೊಂದರೆ. ಇದಕ್ಕಾಗಿ ಹೆಚ್ಚು ಭಯಪಡುವ ಅಗತ್ಯವಿಲ್ಲ. ತಿನ್ನುವ ಆಹಾರ, ಜೀವನಶೈಲಿಯ ಬಗ್ಗೆ ಕೊಂಚ ಗಮನ ಕೊಟ್ಟರೆ ಇದು ತಾನೇ ತಾನಾಗಿ ಸರಿಯಾಗುತ್ತದೆ. ಆದರೆ, ಪದೇ ಪದೇ ಇದೇ ಸಮಸ್ಯೆ ಕಾಡುತ್ತಿದ್ದರೆ, ಅಥವಾ ಇದೇ ದೊಡ್ಡ ಸಮಸ್ಯೆಯೆಂದು ಅನಿಸಿದರೆ, ವೈದ್ಯರ ಸಲಹೆ ಪಡೆಯಬಹುದು.

ಹಾಗಾದರೆ ಇದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಮೊದಲು ನೋಡೋಣ.

೧. ಮುನ್ನಾ ದಿನ ತಿಂದ ಆಹಾರದ ಪರಿಣಾಮ ಇರಬಹುದು. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರಬಹುದು. ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಆಹಾರ ತಿಂದಿರಬಹುದು. ಕಾರ್ಬೋನೇಟೆಡ್‌ ಡ್ರಿಂಕ್‌ ಕುಡಿದಿರಬಹುದು.

೨. ಸಿಕ್ಕಾಪಟ್ಟೆ ತಿಂದಿರಬಹುದು. ಅಗತ್ಯಕ್ಕಿಂತ ಹೆಚ್ಚು ತಿಂದ ಕಾರಣ ಆಗಿರಬಹುದು. ಅಥವಾ ಗಡಿಬಿಡಿಯಲ್ಲಿ ಬಹಳ ವೇಗವಾಗಿ ಹೆಚ್ಚು ಆಹಾರ ಹೊಟ್ಟೆಗಿಳಿಸಿರಬಹುದು.

೩. ಸರಿಯಾದ ನಿದ್ದೆ ಆಗಿರದೆ ಇರಬಹುದು. ನಿದ್ದೆಯ ಕೊರತೆ ಮುನ್ನಾ ದಿನದ್ದಷ್ಟೇ ಆಗಿರಬೇಕಾಗಿಲ್ಲ. ಹಲವು ದಿನಗಳದ್ದೂ ಆಗಿರಬಹುದು.

೪. ಹಾರ್ಮೋನಿನ ಸಮತೋಲನ ತಪ್ಪಿರಬಹುದು.

೫. ನೀರು ಕಡಿಮೆ ಕುಡಿದಿರಬಹುದು.

೬. ಮಲಬದ್ಧತೆಯೂ ಇರಬಹುದು.

೭. ಬಹಳ ಮುಖ್ಯವಾಗಿ, ನೀವು ನಿಮ್ಮ ಋತುಚಕ್ರದಲ್ಲಿರಬಹುದು. ಪೀರಿಯಡ್ಸ್‌ ಸಮಯದಲ್ಲಿ ಹೀಗಾಗುವುದು ಸಹಜ. ಬಹಳಷ್ಟು ಸಾರಿ ಅದೇ ಕಾರಣವಿರುತ್ತದೆ.

Bloating problem

ಅಂದಹಾಗೆ, ತೂಕ ರಾತ್ರೋರಾತ್ರಿ ಎರಡು ಕೆಜಿ ಹೆಚ್ಚಾಗಿದೆ ಎಂದರೆ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಹೆಚ್ಚು ಶೇಖರಣೆಯಾಗಿ ದಪ್ಪವಾಗಿದ್ದೀರಿ ಎಂಬ ಅರ್ಥವಲ್ಲ. ಹೀಗೆ ದೇಹ ಭಾರವೆಂದು ಅನಿಸಿದ ತಕ್ಷಣ ನಿಮ್ಮ ಆಹಾರಭ್ಯಾಸಗಳನ್ನು ಕೊಂಚ ಒರೆಗೆ ಹಚ್ಚಿ ಯೋಚಿಸಿ. ನಿಮ್ಮನ್ನು ಅತಿಯಾಗಿ ಹೀಗೆ ಮಾಡುತ್ತಿರುವ ಆಹಾರ ಯಾವುದಿರಬಹುದು ಎಂಬುದು ನಿಮಗೇ ಅಂದಾಜಾಗುತ್ತದೆ. ಮೂರ್ನಾಲ್ಕು ಬಾರಿ ಹೀಗಾದಾಗ ತಿಂದ ಆಹಾರವನ್ನು ಗಮನಿಸಿದರೆ ನಿಮ್ಮ ದೇಹಕ್ಕೆ ಕೆಟ್ಟದಾಗಿ ಸ್ಪಂದಿಸುವ ಆಹಾರವನ್ನು ನೀವು ಕಂಡುಹಿಡಿಯುವ ಕೆಲಸ ಸರಳವಾಗುತ್ತದೆ.

ಹಾಗಾದರೆ ಇದಕ್ಕೆ ಏನು ಮಾಡಬಹುದು. ಮೊದಲೇ ಹೇಳಿದಂತೆ, ಈ ತೊಂದರೆ ಬಹಳ ದೊಡ್ಡ ಸಮಸ್ಯೆಯಲ್ಲದಿದ್ದರೂ, ಎಂದಿನಂತೆ ಸಹಜವಾಗಿ ಚುರುಕಾಗಿ ಓಡಾಡಿಕೊಂಡಿರಲು ಸಾಧ್ಯವಾಗುವುದಿಲ್ಲ. ಈ ದೇಹಭಾರದ ಸ್ಥಿತಿಯನ್ನು ಕಡಿಮೆಗೊಳಿಸಿ ಹಕ್ಕಿಯಂತೆ ಹಗುರಾಗಬೇಕಿದ್ದಲ್ಲಿ ಹೀಗೆ ಮಾಡಬಹುದು.

೧. ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದಲ್ಲಿ ಮಿತಿಗಿಂತ ಹೆಚ್ಚು ಸಂಗ್ರಹವಾದ ಸೋಡಿಯಂ ಪ್ರಮಾಣ ದೇಹದಿಂದ ಹೊರಗೆ ಹೋಗುತ್ತದೆ.

೨. ಪುದಿನ ನೀರನ್ನು ಆಗಾಗ ಕುಡಿಯುತ್ತಿರಬಹುದು. ಕೆಲವು ಪುದಿನ ಎಲೆಗಳನ್ನು ನೀರಿನಲ್ಲಿ ನೆನೆಯಲು ಬಿಟ್ಟು. ಇದರ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

೩. ಶುಂಠಿ ಅಥವಾ ಪುದಿನ ಚಹಾ ಮಾಡಿಕೊಂಡು ಕುಡಿಯುವುದರಿಂದಲೂ ಪರಿಹಾರ ಸಿಗಬಹುದು.

೪. ಮಜ್ಜಿಗೆ ನೀರು ಅಥವಾ ಡಿಟಾಕ್ಸ್‌ ಡ್ರಿಂಕ್‌ ಮಾಡಿ ಕುಡಿಯುವ ಮೂಲಕವೂ ಸಮಸ್ಯೆಗೆ ಪರಿಹಾರ ಕಾಣಬಹುದು.

೫. ಹೀಗಾದಾಗ ಅಂಥ ದಿನಗಳಲ್ಲಿ ಆಹಾರ ಹದವಾಗಿರಲಿ. ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ. ಆಗ ಕಶ್ಮಲಗಳೆಲ್ಲ ನಾರಿನಂಶದ ಜೊತೆ ಹೊರಗೆ ಹೋಗಲು ಸಹಾಯವಾಗುತ್ತದೆ.

೬. ಮುಖ್ಯವಾಗಿ ಪೀರಿಯಡ್‌ ದಿನಗಳಲ್ಲಿ ಆಹಾರದ ಬಗ್ಗೆ ಗಮನ ಕೊಡಿ. ಸತ್ವಯುತ ಆಹಾರಕ್ಕೆ ಪ್ರಾಮುಖ್ಯತೆ ನೀಡಿ. ಹೆಚ್ಚು ಜಂಕ್‌ ತಿನ್ನುವ ಅಭ್ಯಾಸವಿದ್ದರೆ ಕಡಿಮೆ ಮಾಡಿ. ಮೈದಾ, ಸಕ್ಕರೆ, ಹೆಚ್ಚು ಸೋಡಿಯಂಯುಕ್ತ ಆಹಾರವನ್ನು ದೂರವಿಡಿ.

ಇದನ್ನೂ ಓದಿ| Brain fever | ಕೋಲಾರ ಬಾಲಕನಲ್ಲಿ ಮೆದುಳು ಜ್ವರ ಪತ್ತೆ; ಹೈ ಅಲರ್ಟ್‌ ಘೋಷಿಸಿದ ಆರೋಗ್ಯ ಇಲಾಖೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಯೂರಿಕ್‌ ಆಮ್ಲ (Uric Acid) ನಮ್ಮ ಶರೀರಕ್ಕೆ ಬೇಕು. ಆದರೆ ಅದೇ ಹೆಚ್ಚಾದರೆ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲಿನಂಥ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಯೂರಿಕ್‌ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ವಿಧಾನಗಳಿವು.

VISTARANEWS.COM


on

Uric Acid
Koo

ನಾವು ತಿಂದಿದ್ದೆಲ್ಲಾ ಪಚನವಾಗಿ, ದೇಹದೊಳಗೆ ಹೀರಲ್ಪಡುತ್ತವೆ ಎಂದು ತಿಳಿದಿದ್ದರೆ… ತಪ್ಪು! ಏನೇ ತಿಂದರೂ ಅದರಲ್ಲಿ ದೇಹಕ್ಕೆ ಬೇಡದ್ದು ತ್ಯಾಜ್ಯವಾಗಲೇಬೇಕು. ಅಂಥ ತ್ಯಾಜ್ಯಗಳಲ್ಲಿ ಯೂರಿಕ್‌ ಆಮ್ಲ ಸಹ ಒಂದು. ಅದರಲ್ಲೂ ಪ್ಯೂರಿನ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಿದಾಗ ನಡೆಯುವ ವಿಘಟನೆಯಲ್ಲಿ ಯೂರಿಕ್‌ ಆಮ್ಲ (Uric Acid) ಪ್ರಧಾನವಾಗಿ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯವು ರಕ್ತದೊಂದಿಗೆ ಸೇರಿ, ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಗೆ ಹೋಗುತ್ತದೆ. ಆದರೆ ಈ ಯೂರಿಕ್‌ ಆಮ್ಲದ ತ್ಯಾಜ್ಯದ ಪ್ರಮಾಣ ಅತಿಯಾದರೆ ಗೌಟ್‌ ಆರ್ಥರೈಟಿಸ್‌ಗೆ ಮೂಲವಾಗುತ್ತದೆ. ಯೂರಿಕ್‌ ಆಮ್ಲ ನಮ್ಮ ಶರೀರಕ್ಕೆ ಬೇಕು. ಆದರೆ ಅದೇ ಹೆಚ್ಚಾದರೆ ಏನಾಗುತ್ತದೆ ದೇಹದಲ್ಲಿ? ಆರಂಭದ ದಿನಗಳಲ್ಲಿ ದೇಹದಲ್ಲಿ ಯೂರಿಕ್‌ ಆಮ್ಲದ ಸಾಂದ್ರತೆ ಹೆಚ್ಚಿದ್ದರೆ ಸಮಸ್ಯೆ ಎನಿಸುವುದಿಲ್ಲ. ಇದೇ ಮುಂದುವರಿದರೆ ಕ್ರಮೇಣ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಹಾಗಾಗಿ ದೇಹ ಆರೋಗ್ಯವಾಗಿರಬೇಕೆಂದರೆ ಶರೀರದಲ್ಲಿ ತ್ಯಾಜ್ಯ ಉಳಿಯಬಾರದು.

Uric Acid

ಲಕ್ಷಣಗಳೇನು?

ಅದನ್ನು ರಕ್ತ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಕೀಲುಗಳಲ್ಲಿ ಬಿಗಿಯುವ ಅನುಭವವಿದ್ದರೆ, ಮೂತ್ರ ವಿಸರ್ಜನೆಯ ವೇಳೆಗೆ ನೋವಿದ್ದರೆ ವೈದ್ಯರನ್ನು ಕಾಣುವುದು ಸೂಕ್ತ. ಕೆಂಬಣ್ಣದ ಮಾಂಸ, ಶೆಲ್‌ ಫಿಶ್‌ನಂಥ ಮೀನುಗಳು, ಚಿಕನ್‌, ಅಂಗಾಂಗಗಳ ಮಾಂಸ ಇತ್ಯಾದಿಗಳಲ್ಲಿ ಪ್ಯೂರಿನ್‌ ಅಂಶ ಅತಿ ಹೆಚ್ಚು. ಇವುಗಳ ವಿಘಟನೆಯಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್‌ ಆಮ್ಲ ಬಿಡುಗಡೆಯಾಗುತ್ತದೆ. ಹಾಗಾಗಿ ಪ್ಯೂರಿನ್‌ ಹೆಚ್ಚಿರುವಂಥ ಯಾವುದೇ ಆಹಾರಗಳಿಂದ ದೂರ ಇರಿ ಅಥವಾ ಕಡಿಮೆ ಮಾಡಿ. ಜೊತೆಗೆ, ದೇಹದಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ನೀರು ಮಹತ್ವದ ಪಾತ್ರ ವಹಿಸುತ್ತದೆ. ದೇಹಕ್ಕೆ ಸಾಕಷ್ಟು ನೀರು ದೊರೆಯುವುದರಿಂದ ಮೂತ್ರಪಿಂಡಗಳ ಕೆಲಸವೂ ಸುಗಮವಾಗುತ್ತದೆ. ತ್ಯಾಜ್ಯವೂ ಹೊರಹೋಗುತ್ತದೆ.

ಆಯುರ್ವೇದ ಸಹಕಾರಿ

ಕೆಲವು ಸರಳ ಕ್ರಮಗಳು ಮತ್ತು ಆಯುರ್ವೇದದ ಉಪಾಯಗಳು ಯೂರಿಕ್‌ ಆಮ್ಲ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ಉದಾ, ತ್ರಿಫಲ ಚೂರ್ಣ ಎಂದೇ ಕರೆಸಿಕೊಳ್ಳುವ ನೆಲ್ಲಿಕಾಯಿ, ತಾರೆಕಾಯಿ ಮತ್ತು ಅಳಲೆಕಾಯಿ ಎಂಬ ಮೂರು ಫಲಗಳ ಮಿಶ್ರಣವು, ದೇಹದ ಚಯಾಪಚಯ ಹೆಚ್ಚಿಸಿ, ತ್ಯಾಜ್ಯವನ್ನು ಹೊರಗೆಸೆಯುವಲ್ಲಿ ಸಾಮರ್ಥವಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಅಮೃತಬಳ್ಳಿ, ಬೇವು ಮುಂತಾದ ಮೂಲಿಕೆಗಳ ಕೂಡಾ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಉಪಯುಕ್ತ ಎನಿಸಿವೆ.

Drinking warm water with a little lemon juice on an empty stomach in the morning is beneficial for health Benefits Of Lemon Water

ನಿಂಬೆರಸದ ನೀರು

ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುವಲ್ಲಿ ನಿಂಬೆ ನೀರು ಸಹ ಒಳ್ಳೆಯ ಉಪಾಯ. ಬೆಳಗಿನ ಹೊತ್ತು ಇದನ್ನು ಡಿಟಾಕ್ಸ್‌ ಪೇಯದಂತೆ ಸೇವಿಸಬಹುದು. ಯೂರಿಕ್‌ ಆಮ್ಲ ಹೆಚ್ಚಿದ್ದರಿಂದ ಕಿಡ್ನಿಯಲ್ಲಿ ಉಂಟಾಗುವ ಹರಳುಗಳನ್ನು ಕರಗಿಸಲು ಇದು ಸಹಕಾರಿ. ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆರಸವನ್ನು ಸೇರಿಸಿ ಬೆಳಗಿನ ಹೊತ್ತು ಕುಡಿಯುವುದು ಸಹಾಯವಾಗಬಹುದು.

Soaking mentha seeds in water at night and drinking it on an empty stomach in the morning is beneficial Benefits Of Fenugreek Water

ಮೆಂತೆ ನೀರು

ರಾತ್ರಿ ಮಲಗುವಾಗ ಒಂದು ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಇದರಿಂದ ಯೂರಿಕ್‌ ಆಮ್ಲದ ಮಟ್ಟವನ್ನು ಸುಧಾರಿಸುವುದರ ಜೊತೆಗೆ, ಇದರಿಂದಾಗುವ ಉರಿಯೂತವನ್ನೂ ಕಡಿಮೆ ಮಾಡಬಹುದು.

Apple cider vinegar for Fungal Infection Home Remedies

ಆಪಲ್‌ ಸೈಡರ್‌ ವಿನೆಗರ್

ಒಂದಿಡೀ ಗ್ಲಾಸ್‌ ನೀರಿಗೆ ಒಂದು ದೊಡ್ಡ ಚಮಚ ಆಪಲ್‌ ಸೈಡರ್‌ ವಿನೇಗರ್‌ ಮಿಶ್ರ ಮಾಡಿಕೊಂಡು ಬೆಳಗಿನ ಹೊತ್ತು ಸೇವಿಸಬಹುದು. ಇದು ಕೀಲುಗಳಲ್ಲಿ ಜಮೆಯಾಗಿರುವ ಯೂರಿಕ್‌ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಕ್ಕಿರುವ ಉತ್ಕರ್ಷಣ ನಿರೋಧದ ಗುಣದಿಂದ ಕೀಲುಗಳಲ್ಲಿರುವ ನೋವು ಸಹ ಕಡಿಮೆಯಾಗುತ್ತದೆ.

Ginger tea

ಶುಂಠಿ ಕಷಾಯ

ಶುಂಠಿಯನ್ನು ನೀರಲ್ಲಿ ಕುದಿಸಿ, ಶೋಧಿಸಿ ಬೆಳಗಿನ ಹೊತ್ತು ಕುಡಿಯಬಹುದು. ಇದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ, ಜಮೆಯಾಗಿ ಕುಳಿತ ಯೂರಿಕ್‌ ಆಮ್ಲವನ್ನೂ ಹೊರಹಾಕುತ್ತದೆ ಶುಂಠಿ. ಇವುಗಳ ಜೊತೆಗೆ, ನಮ್ಮ ಪ್ರತಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

Continue Reading

ಆರೋಗ್ಯ

Super Food For Kids: ನಿಮ್ಮ ಮಕ್ಕಳು ಜಾಣರಾಗಿ ಹೆಚ್ಚು ಅಂಕ ಗಳಿಸಬೇಕೆ? ಈ ಆಹಾರಗಳನ್ನು ಕೊಡಿ

ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಅವರ ನಿತ್ಯದ ಆಹಾರದಲ್ಲಿ ಕೆಲವೊಂದು ಪದಾರ್ಥಗಳು ಇರಲೇಬೇಕು. ಇದು ಅವರ ದೇಹಾರೋಗ್ಯ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅಂತಹ ಆಹಾರ ಪದಾರ್ಥಗಳು (Super Food For Kids) ಯಾವುದು ಗೊತ್ತೇ? ಇಲ್ಲಿದೆ ಪೋಷಕರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

By

Super Food For Kids
Koo

ನೆನಪಿನ ಶಕ್ತಿ (memory), ಏಕಾಗ್ರತೆ (concentration) ಮತ್ತು ಮೆದುಳಿನ ಕಾರ್ಯವನ್ನು (brain function) ಸುಧಾರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿರುವುದರಿಂದ ಮಕ್ಕಳಿಗೆ (childrens) ಸರಿಯಾದ ಆಹಾರವನ್ನು (Super Food For Kids) ಆಯ್ಕೆ ಮಾಡುವುದು ಬಹಳ ಮುಖ್ಯ. ಮಕ್ಕಳು ಮೆದುಳು ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಪೌಷ್ಟಿಕ ಆಹಾರಗಳನ್ನು (nutritious foods) ಸೇವಿಸಬೇಕು. ಮಗುವಿನ ಮೆದುಳನ್ನು ಶಕ್ತಿಯುತವಾಗಿ ಮತ್ತು ಚುರುಕಾಗಿಸಬಲ್ಲ ಕೆಲವು ಆಹಾರ ಪದಾರ್ಥಗಳು ಹೀಗಿವೆ.


ಹಾಲು

ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಇದು ಮಗುವಿನ ಮೆದುಳನ್ನು ಚುರುಕುಗೊಳಿಸುವ ಅತ್ಯಂತ ಪ್ರಮುಖ ಆಹಾರ ಪದಾರ್ಥವಾಗಿದೆ. ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ ಇದ್ದು ಇದು ಮಗುವಿನ ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಮೊಟ್ಟೆ

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಪ್ರೊಟೀನ್ ಇದೆ. ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿಡುವಲ್ಲಿ ಮೊಟ್ಟೆಗಳು ತುಂಬಾ ಪರಿಣಾಮಕಾರಿಯಾಗಿರುವುದರಿಂದ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಅಳವಡಿಸಿಕೊಳ್ಳಬೇಕು. ಮೊಟ್ಟೆಗಳಲ್ಲಿ ಇರುವ ಕೋಲೀನ್ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಗೋಡಂಬಿ

ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್‌ ಮತ್ತು ಖನಿಜಗಳನ್ನು ಒಳಗೊಂಡಿರುವ ಕಾರಣ ವಯಸ್ಸಿನ ಹೊರತಾಗಿಯೂ ಗೋಡಂಬಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯವಾಗಿಡಲು ಅವರ ದೈನಂದಿನ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಲು ಪ್ರಯತ್ನಿಸಿ.


ಧಾನ್ಯಗಳು

ಧಾನ್ಯಗಳು ಮಕ್ಕಳಿಗೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಕಿಡ್ನಿ ಮತ್ತು ಪಿಂಟೋ ಧಾನ್ಯಗಳು ಯಾವುದೇ ರೀತಿಯ ಧಾನ್ಯಗಳು ಹೆಚ್ಚು ಒಮೆಗಾ 3 ಅನ್ನು ಹೊಂದಿರುತ್ತದೆ. ಧಾನ್ಯಗಳು ಅನ್ನು ಸಲಾಡ್‌ನೊಂದಿಗೆ ಬೆರೆಸಿ ಅಥವಾ ಕರಿ ಮಾಡುವ ಮೂಲಕ ಬಡಿಸಬಹುದು. ಧಾನ್ಯಗಳು ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!


ಮೀನು

ಮಕ್ಕಳಿಗೆ ಪ್ರತಿದಿನ ಮೀನನ್ನು ಬಡಿಸಲು ಪ್ರಯತ್ನಿಸಿ. ಯಾಕೆಂದರೆ ಇದು ಆರೋಗ್ಯದ ಒಟ್ಟಾರೆ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ 3 ಇದ್ದು ಇದು ಜೀವಕೋಶಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.


ತರಕಾರಿಗಳು

ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ತರಕಾರಿಗಳು ಸಹಾಯ ಮಾಡುತ್ತದೆ. ಟೊಮ್ಯಾಟೊ, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್ ಮತ್ತು ಪಾಲಕ್ ಮೊದಲಾದ ತರಕಾರಿಗಳನ್ನು ಮಗುವಿನ ನಿಯಮಿತ ಆಹಾರದಲ್ಲಿ ಸೇರಿಸಬೇಕು.

Continue Reading

ಆರೋಗ್ಯ

Lotus Seeds Benefits: ತಾವರೆ ಬೀಜಗಳನ್ನು ಸೇವಿಸಿ; ಇದು ರುಚಿಗೂ ಒಳ್ಳೆಯದು, ಹೃದಯಕ್ಕೂ ಒಳ್ಳೆಯದು

ತಾವರೆ ಬೀಜ ಖೀರು, ಸ್ನ್ಯಾಕ್‌ ಸೇರಿದಂತೆ ಅನೇಕ ಬಗೆಗಳಲ್ಲಿ ಇದು ಹೊಟ್ಟೆ ಸೇರುತ್ತದೆ. ಯಾವುದೇ ಹೇಳಿಕೊಳ್ಳುವ ರುಚಿ ಇರದ, ತಾವರೆಯ ಗಿಡದಿಂದ ಸಿಗುವ ಈ ಬೀಜಗಳು ಬಿಹಾರ ರಾಜ್ಯದಲ್ಲಿ ಹೇರಳವಾಗಿ ಸಿಗುತ್ತದೆ. ತನ್ನ ಪರಿಮಳ ಹಾಗೂ ರುಚಿಯಿಂದ ಇದು ಯಾರನ್ನೂ ಅಷ್ಟಾಗಿ ಆಕರ್ಷಿಸದಿದ್ದರೂ, ಇದು ತನ್ನ ಗುಣದಿಂದ ಇತ್ತೀಚೆಗೆ ಬಹುತೇಕರನ್ನು ಆಕರ್ಷಿಸಿರುವ ಆಹಾರ. ಪೊಟಾಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳು (Lotus Seeds Benefits) ಇದರಲ್ಲಿವೆ.

VISTARANEWS.COM


on

Lotus Seeds Benefits
Koo

ತಾವರೆ ಬೀಜಗಳು ಅಥವಾ ಮಖಾನಾ ಇಂದು ಬಹುತೇಕ ಎಲ್ಲರ ಮನೆಗಳಲ್ಲಿ ಸಾಮಾನ್ಯ. ಉತ್ತರ ಭಾರತವೂ ಸೇರಿದಂತೆ ಹಲವೆಡೆ ಇದು ಪ್ರಸಾದ ರೂಪದಲ್ಲಿ ದೇವಸ್ಥಾನಗಳಲ್ಲಿ ಸಿಗುತ್ತವೆ. ಇದರ ಹೊರತಾಗಿ, ದಕ್ಷಿಣ ಭಾರತದಲ್ಲಿ ಇದರ ಬಳಕೆ ಕಡಿಮೆಯಾದರೂ ಉತ್ತರ ಭಾರತದಲ್ಲಿ ಇದು ಸಾಮಾನ್ಯ ಆಹಾರ. ಇದರ ಖೀರು, ಸ್ನ್ಯಾಕ್‌ ಸೇರಿದಂತೆ ಅನೇಕ ಬಗೆಗಳಲ್ಲಿ ಇದು ಹೊಟ್ಟೆ ಸೇರುತ್ತದೆ. ಯಾವುದೇ ಹೇಳಿಕೊಳ್ಳುವ ರುಚಿ ಇರದ, ತಾವರೆಯ ಗಿಡದಿಂದ ಸಿಗುವ ಈ ಬೀಜಗಳು ಬಿಹಾರ ರಾಜ್ಯದಲ್ಲಿ ಹೇರಳವಾಗಿ ಸಿಗುತ್ತದೆ. ತನ್ನ ಪರಿಮಳ ಹಾಗೂ ರುಚಿಯಿಂದ ಇದು ಯಾರನ್ನೂ ಅಷ್ಟಾಗಿ ಆಕರ್ಷಿಸದಿದ್ದರೂ, ಇದು ತನ್ನ ಗುಣದಿಂದ ಇತ್ತೀಚೆಗೆ ಬಹುತೇಕರನ್ನು ಆಕರ್ಷಿಸಿರುವ ಆಹಾರ. ಪೊಟಾಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿವೆ. ಮುಖ್ಯವಾಗಿ ತೂಕ ಇಳಿಸುವ ಮಂದಿಯನ್ನು ಆಕರ್ಷಿಸಿರುವ ಈ ಬೀಜದ ಲಾಭಗಳೇನು (Lotus Seeds Benefits) ಎಂಬುದನ್ನು ನೋಡೋಣ. ಮಖಾನ ಅಥವಾ ಈ ತಾವರೆಯ ಬೀಜದಲ್ಲಿ ಎಲ್ಲವೂ ಇದೆ. ಪೋಷಕಾಂಶಗಳ ಮಟ್ಟಿಗೆ ಹೇಳಿವುದಾದರೆ ಇದು ಚಿನ್ನ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳೂ, ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಒಳ್ಳೆಯ ಕೊಬ್ಬು ಸೇರಿದಂತೆ ಎಲ್ಲವೂ ಇದೆ. ಸಕ್ಕರೆ ಇಲ್ಲ. ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು.

Masala Fox Nuts Weight Loss Snacks

ಅಧಿಕ ಪೋಷಕಾಂಶ

ತೂಕ ಇಳಿಸುವ ಮಂದಿಗೆ ಇದರಲ್ಲಿರುವ ಖುಷಿ ಸುದ್ದಿ ಎಂದರೆ ಇದು ಅತ್ಯಂತ ಕಡಿಮೆ ಕ್ಯಾಲರಿ ಹೊಂದಿದ ಆಹಾರಗಳಲ್ಲಿ ಒಂದು. ಹಾಗಂತ ಪೋಷಕಾಂಶಗಳ ವಿಷಯದಲ್ಲಿ ಯಾವುದೇ ರಾಜಿ ಇದು ಮಾಡಿಕೊಳ್ಳುವುದಿಲ್ಲ. ಹಸಿವಾದಾಗ ತಿನ್ನಬಹುದಾದ ಕಡಿಮೆ ಕ್ಯಾಲರಿಯ ಆಹಾರವಿದು. ಸ್ವಲ್ಪ ಮಸಾಲಾದ ಜೊತೆಗೆ ಹಗುರವಾಗಿ ಹುರಿದು ತಿಂದರೆ ರುಚಿಯಾದ ಆಹಾರವೂ ಹೌದು. ಸ್ವಲ್ಪವೇ ಸ್ವಲ್ಪ ತಿಂದರೂ ಹೊಟ್ಟೆ ತುಂಬಿರುವ ಭಾವವನ್ನು ಇದು ನೀಡುತ್ತದೆ.

ನಾರಿನಂಶ ಹೇರಳ

ಇದು ನಾರಿನಂಶದಿಂದ ಸಮೃದ್ಧವಾಗಿರುವ ಆಹಾರವಾದ್ದರಿಂದ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಹುರಿದಾಗ ಕ್ರಂಚೀಯಾಗಿ ಅತ್ಯಂತ ರುಚಿಯಾಗಿ ಇರುತ್ತದೆ. ಮಲಬದ್ಧತೆ ಸೇರಿದಂತೆ ಯಾವ ಸಮಸ್ಯೆಗಳೂ ಇದರ ಹತ್ತಿರ ಸುಳಿಯದು.

Skin Care

ಚರ್ಮದ ಆರೋಗ್ಯಕ್ಕೆ ಸೂಕ್ತ

ಮಖಾನಾದಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳಿದ್ದು, ಇದು ಆಂಟಿ ಏಜಿಂಗ್‌ ಕೂಡಾ ಹೌದು. ಫಿನಾಲಿಕ್‌ ಆಸಿಡ್‌ ಹಾಗೂ ಫ್ಲೇವನಾಯ್ಡ್‌ಗಳಿರುವ ಆಹಾರಗಳು ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಈ ಗುಣ ಮಖಾನಾದಲ್ಲಿರುವುದರಿಂದ, ನಿತ್ಯವೂ ಸೇವನೆ ಮಾಡುವುದರಿಂದ ಇದು ಚರ್ಮ ಬಹುಬೇಗನೆ ಸುಕ್ಕಾಗುವುದನ್ನು ತಡೆಯುತ್ತದೆ.

Heart Health Fish Benefits

ಹೃದಯಸ್ನೇಹಿ

ಮಖಾನಾ ಹೃದಯಸ್ನೇಹಿ ಕೂಡಾ ಹೌದು. ಇದರಲ್ಲಿರುವ ಒಳ್ಳೆಯ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿದ್ದು ಕಡಿಮೆ ಕೊಲೆಸ್ಟೆರಾಲ್‌ ಇರುವುದರಿಂದ ಹೃದಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೂ ಇದು ಒಳ್ಳೆಯದು. ಇದರ ನಿತ್ಯ ಸೇವನೆಯಿಂದ ಮಧುಮೇಹಕ್ಕೆ ಏನೂ ತೊಂದರೆಯಾಗದು ಹಾಗೂ ಇದರಲ್ಲಿರುವ ಪೋಷಕಾಂಶಗಳು ಮಧುಮೇಹವನ್ನು ದೂರ ಇರಿಸುವಲ್ಲಿ ಸಹಾಯವನ್ನೇ ಮಾಡುತ್ತದೆ.

Continue Reading

ಆರೋಗ್ಯ

Whitening Toothpaste: ವೈಟ್ನಿಂಗ್‌ ಪೇಸ್ಟ್‌ಗಳಿಂದ ಹಲ್ಲುಗಳಿಗೆ ಹಾನಿ ಆಗುತ್ತಾ?

ಹಲ್ಲುಗಳು ಬಣ್ಣಗೆಡದಂತೆ ಕಾಪಾಡಿಕೊಳ್ಳಲು ಕೆಲವರು ಬಿಳಿಯಾಗಿಸುವ ಟೂತ್‌ಪೇಸ್ಟ್‌ ಉಪಯೋಗಿಸುತ್ತಾರೆ. ಆದರೆ ಅತಿಯಾಗಿ ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸಿದರೆ ಅದೇ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಾಗಾದರೆ ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳಿಂದ (Whitening Toothpaste) ಹಲ್ಲುಗಳಿಗೆ ಹಾನಿಯಾಗುತ್ತದೆಯೇ? ಇಲ್ಲಿದೆ ಹೆಚ್ಚಿನ ಮಾಹಿತಿ.

VISTARANEWS.COM


on

Whitening Toothpaste
Koo

ನಿಮ್ಮಿಷ್ಟದ ಯಾವುದೋ ಆಹಾರ ತಿಂದಿದ್ದೀರಿ. ಕೆಲ ಸಮಯದ ನಂತರ ನೋಡಿದರೆ ನಿಮ್ಮ ಹಲ್ಲುಗಳು ಎಂದಿನಷ್ಟು ಬೆಳ್ಳಗಿಲ್ಲದೆ, ನೀವು ಸೇವಿಸಿದ ಆಹಾರದ ಬಣ್ಣವನ್ನು ಹೊತ್ತು ನಿಂತಂತೆ ಕಾಣುತ್ತಿವೆಯೇ? ಇದರಲ್ಲಿ ಅಚ್ಚರಿಯೇನಿಲ್ಲ. ಚಹಾ, ಕಾಫಿ, ಕೆಂಪು ವೈನ್‌, ಕೆಲವು ಬೆರ್ರಿಗಳು, ಫ್ರೂಟ್‌ ಜ್ಯೂಸ್‌ಗಳಂಥವು ಕೆಲವೊಮ್ಮೆ ಹಲ್ಲಿನ ಬಣ್ಣಗೆಡಿಸುತ್ತವೆ. (ಗುಟ್ಕಾ ತಿನ್ನುವವರು ಅಥವಾ ಧೂಮಪಾನಿಗಳಾದರಂತೂ ಹಲ್ಲುಗಳ ಬಣ್ಣ ಹಾಳಾಗುವುದು ನಿಶ್ಚಿತ) ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ಹಲ್ಲುಗಳನ್ನು ಶುಚಿ ಮಾಡಿಸುವಾಗ ಅದಕ್ಕೆ ಬಿಳಿ ಬಣ್ಣವನ್ನೂ ವೈದ್ಯರು ಬರಿಸಿಕೊಡುವುದು ಮಾಮೂಲಿ. ಕ್ಲಿನಿಕ್‌ಗಳಲ್ಲಿ ಮಾಡಿಸಿಕೊಳ್ಳುವ ಇಂಥ ಚಿಕಿತ್ಸೆಗಳು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದಲ್ಲದೆ, ಹಲ್ಲುಗಳು ಬಣ್ಣಗೆಡದಂತೆ ಕಾಪಾಡಿಕೊಳ್ಳಲು ಕೆಲವರು ಬಿಳಿಯಾಗಿಸುವ ಟೂತ್‌ಪೇಸ್ಟ್‌ ಸಹ ಉಪಯೋಗಿಸುತ್ತಾರೆ. ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸುವುದು ಸಹ ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ನೆರವಾಗುತ್ತದೆ. ಆದರೆ ಅತಿಯಾಗಿ ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸಿದರೆ ಹಲ್ಲುಗಳ ಸಂವೇದನೆ ಹೆಚ್ಚುತ್ತದೆ, ಬಿಸಿ ತಿಂದರೂ ಕಷ್ಟ, ತಣ್ಣಗಿರುವುದನ್ನೂ ಬಾಯಿಗೆ ಹಾಕಲಾಗದು, ಹಲ್ಲುಗಳಲ್ಲಿನ ʻಝುಂʼ ಅನುಭವ ಹೆಚ್ಚುತ್ತದೆ ಎಂದು ಕೆಲವರು ದೂರುವುದಿದೆ. ಹಾಗಾದರೆ ಹಲ್ಲುಗಳನ್ನು ಬಿಳಿಯಾಗಿಸಲೆಂದು ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳನ್ನು ಉಪಯೋಗಿಸುವುದು ತಪ್ಪೇ? ಇದರಿಂದ (Whitening Toothpaste) ಹಲ್ಲುಗಳಿಗೆ ಹಾನಿಯಾಗುತ್ತದೆಯೇ?

Whitening Toothpaste image

ಏನು ಹಾಗೆಂದರೆ?

ಹಲ್ಲುಗಳ ಮೇಲ್ಮೈಯಲ್ಲಿರುವ ಕಲೆಗಳನ್ನು ತೆಗೆಯುವುದಕ್ಕೆಂದೇ ನಿರ್ಮಿಸಲಾದ ವಿಶೇಷ ಟೂತ್‌ಪೇಸ್ಟ್‌ಗಳಿವು. ಈ ಮೂಲಕ ಹಲ್ಲುಗಳ ನೈಸರ್ಗಿಕ ಬಿಳುಪನ್ನು ಕಾಪಾಡಿ, ದಂತಪಂಕ್ತಿಗಳ ಒಟ್ಟಾರೆ ಸೌಂದರ್ಯವನ್ನು ವೃದ್ಧಿಸುವುದಕ್ಕೆ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಕೆಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ. ಸಿಲಿಕಾ, ಕ್ಯಾಲ್ಸಿಯಂ ಕಾರ್ಬೊನೇಟ್‌ ಅಥವಾ ಬೇಕಿಂಗ್‌ ಸೋಡಾದಂಥ ಲಘುವಾದ ಅಪಘರ್ಷಕಗಳನ್ನು ಇವು ಹೊಂದಿರುತ್ತವೆ. ಈ ರಾಸಾಯನಿಕಗಳು ಸಾಮಾನ್ಯವಾಗಿ ಹಲ್ಲುಗಳ ಎನಾಮಲ್‌ಗೆ ಹಾನಿ ಮಾಡದೆಯೇ ಮೇಲ್ಮೈಯನ್ನು ಶುಚಿ ಮಾಡುತ್ತವೆ. ಹಲ್ಲುಗಳಿಗೆ ತಮ್ಮ ನೈಸರ್ಗಿಕ ಬಣ್ಣ, ಹೊಳಪು ಹೊಂದಲು ನೆರವಾಗುತ್ತವೆ.
ಆದರೆ, ಕೆಲವೊಂದು ಟೂತ್‌ಪೇಸ್ಟ್‌ಗಳಲ್ಲಿ ಬ್ಲೀಚಿಂಗ್‌ ಏಜೆಂಟ್‌ಗಳನ್ನು ಬಳಸಲಾಗುತ್ತದೆ. ಹೈಡ್ರೋಜೆನ್‌ ಪೆರಾಕ್ಸೈಡ್‌ ಅಥವಾ ಕಾರ್ಬಮೈಡ್‌ ಪೆರಾಕ್ಸೈಡ್‌ ಅಂಥವನ್ನು ಬಳಸಲಾಗುತ್ತದೆ. ಇವುಗಳು ಅಪಘರ್ಷಣ ಮಾಡದೆಯೇ, ರಾಸಾಯನಿಕ ಮಾರ್ಗದಿಂದ ಕಲೆಗಳನ್ನು ತೆಗೆಯುತ್ತವೆ. ಅಂದರೆ ಹಲ್ಲಿನ ಎನಾಮನ್‌ ಕವಚವನ್ನು ಭೇದಿಸಿ ಕೆಲಸ ಮಾಡುತ್ತವೆ. ಅದರಲ್ಲೂ ಪಪೈನ್‌, ಬ್ರೋಮೆಲಿನ್‌ನಂಥ ಕಿಣ್ವಗಳನ್ನು ಟೂತ್‌ಪೇಸ್ಟ್‌ಗಳಿಗೆ ಸೇರಿಸಿದರೆ ಹಲ್ಲುಗಳ ಮೇಲೆ ತೀವ್ರ ಪರಿಣಾಮವನ್ನೇ ಬೀರುತ್ತದೆ. ಇವೆಲ್ಲವುಗಳಿಂದ ಹಲ್ಲು ಸ್ವಚ್ಛವಾಗಿ, ಬೆಳ್ಳಗೆ ಹೊಳೆಯುವುದು ನಿಜವಾದರೂ, ನಿಯಮಿತವಾಗಿ ಉಪಯೋಗಿಸುತ್ತಿದ್ದರೆ ಹಲ್ಲುಗಳು ಸಂಕಷ್ಟಕ್ಕೆ ಈಡಾಗಬಹುದು. ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳನ್ನು ಸದಾ ಬಳಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು?

ಸಂವೇದನೆ ಹೆಚ್ಚು

ಈ ವೈಟ್ನಿಂಗ್‌ ಪೇಸ್ಟ್‌ಗಳಲ್ಲಿ ಅಪಘರ್ಷಕಗಳಿದ್ದರೂ, ಬ್ಲೀಚಿಂಗ್‌ ಅಂಶಗಳಿದ್ದರೂ- ಇವು ಹಲ್ಲುಗಳ ಸಂವೇದನೆಯನ್ನು ಹೆಚ್ಚಿಸುತ್ತವೆ. ಹಲ್ಲುಗಳಲ್ಲಿ ʻಝುಂʼ ಎನ್ನುವ ಅನುಭವ, ತಣ್ಣಗಿನ ವಸ್ತುಗಳನ್ನು ಕುಡಿದರೆ ಚುಚ್ಚಿದಂತಾಗುವುದು, ಬಿಸಿ ಕುಡಿಯುವುದಕ್ಕೂ ಕಷ್ಟವಾಗುವುದು- ಇಂಥ ಅನುಭವಗಳು ತೊಂದರೆ ಕೊಡುತ್ತವೆ.

Irritation of the gums

ಒಸಡುಗಳ ಕಿರಿಕಿರಿ

ಪೆರಾಕ್ಸೈಡ್‌ ಹೊಂದಿರುವ ಜೆಲ್‌ಗಳನ್ನು ಉಪಯೋಗಿಸಿದಾಗ ಒಸಡುಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚು. ಈ ಜೆಲ್‌ಗಳನ್ನು ಉಪಯೋಗಿಸುವ ರೀತಿ ತಪ್ಪಾದರೂ ತೊಂದರೆಯಾಗಬಹುದು. ಇವುಗಳನ್ನು ಬಳಸುವುದಕ್ಕೆ ನೀಡಿರುವ ಮಾರ್ಗಸೂಚಿಯನ್ನು ಸರಿಯಾಗಿ ಅನುಸರಿಸಿದರೆ ಈ ಕಿರಿಕಿರಿಯನ್ನು ಕಡಿಮೆ ಮಾಡಬಹುದು. ಆದರೆ ಈಗಾಗಲೇ ಒಸಡುಗಳ ಸಮಸ್ಯೆ ಇದ್ದರೆ ಇಂಥವುಗಳ ಬಳಕೆ ಯೋಗ್ಯವಲ್ಲ.

ಇದನ್ನೂ ಓದಿ: Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

ಎನಾಮಲ್‌ ಹಾಳು

ಯಾವುದೇ ರೀತಿಯ ವೈಟ್ನರ್‌ಗಳನ್ನಾದರೂ ಸದಾ ಉಪಯೋಗಿಸುವುದಲ್ಲ. ಅಪರೂಪಕ್ಕೆ ಉಪಯೋಗಿಸುವುದಕ್ಕೆ ತೊಂದರೆಯಿಲ್ಲ. ಪದೇಪದೆ ಉಪಯೋಗಿಸುತ್ತಿದ್ದರೆ, ಹಲ್ಲುಗಳ ಮೇಲ್ಮೈ ಮಾತ್ರವಲ್ಲ ಕ್ರಮೇಣ ಎನಾಮಲ್‌ನ ರಕ್ಷಾ ಕವಚವೂ ಸವೆಯತೊಡಗುತ್ತದೆ. ಒಂದೊಮ್ಮೆ ಪದೇಪದೆ ಉಪಯೋಗಿಸುವ ಅನಿವಾರ್ಯತೆ ಇದೆಯೆಂದಾದರೆ, ಇದಕ್ಕಾಗಿ ಕಡಿಮೆ ತೀವ್ರತೆಯ ವೈಟ್ನರ್‌ಗಳನ್ನು ಆಯ್ದುಕೊಳ್ಳುವುದು ಸೂಕ್ತ.

Continue Reading
Advertisement
Kangana Ranaut leaves for Delhi in pretty purple saree
ಬಾಲಿವುಡ್2 mins ago

Kangana Ranaut: ನೇರಳೆ ಬಣ್ಣದ ಸೀರೆಯುಟ್ಟು ದೆಹಲಿಗೆ ಹೊರಟ ಕಂಗನಾ ರಣಾವತ್!

Uric Acid
ಆರೋಗ್ಯ6 mins ago

Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

IND vs PAK T20 Match
ಕ್ರಿಕೆಟ್14 mins ago

IND vs PAK T20 Match: 10 ಸೆಕೆಂಡ್‌ ಜಾಹೀರಾತಿಗೆ ಕನಿಷ್ಠ 50 ಲಕ್ಷ ನಿಗದಿ!

ಪ್ರಮುಖ ಸುದ್ದಿ15 mins ago

MLC Election: ವಿಧಾನ ಪರಿಷತ್ ಚುನಾವಣೆ; ಯತೀಂದ್ರ, ಸಿ.ಟಿ.ರವಿ ಸೇರಿ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

prajwal Revanna
ಪ್ರಮುಖ ಸುದ್ದಿ20 mins ago

Prajwal Revanna : ಪ್ರಜ್ವಲ್​ ರೇವಣ್ಣ ಮತ್ತೆ ನಾಲ್ಕು ದಿನ ಎಸ್​​ಐಟಿ ಕಸ್ಟಡಿಗೆ

Agnipath scheme
ದೇಶ23 mins ago

Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

Raja Rani Show performance Karnataka Jodi in colors
ಕಿರುತೆರೆ31 mins ago

Raja Rani Show: ‘ರಾಜಾ ರಾಣಿ’ ಶೋನಲ್ಲಿ ಕುಣಿದು ಕುಪ್ಪಳಿಸಿದ ‘ಕರ್ನಾಟಕ ಜೋಡಿ’; ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ?

Love Jihad
ಪ್ರಮುಖ ಸುದ್ದಿ58 mins ago

Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

Road Accident
ಕ್ರೈಂ59 mins ago

Road Accident : ಬೈಕ್‌ಗಳಿಗೆ ಗುದ್ದಿ ಸವಾರರನ್ನು ಕೊಂದು ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

Election Results 2024
ದೇಶ1 hour ago

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌