JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ - Vistara News

ಕರ್ನಾಟಕ

JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

ಜೆಡಿಎಸ್‌ ಪಂಚರತ್ನ ರಥಯಾತ್ರೆಯ (JDS Pancharatna Yatre) ಎರಡನೇ ದಿನದಂದು ಗ್ರಾಮ ವಾಸ್ತವ್ಯ ಹೂಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಗುವೊಂದಕ್ಕೆ ನಾಮಕರಣ ಮಾಡಿದ್ದಾರೆ.

VISTARANEWS.COM


on

JDS Pancharatna Yatre ಕುಮಾರಸ್ವಾಮಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಎರಡನೇ ದಿನದ ಪಂಚರತ್ನ ರಥಯಾತ್ರೆಯು (JDS Pancharatna Yatre) ಗುರುವಾರ ಶಿಡ್ಲಘಟ್ಟ ತಾಲೂಕಿಗೆ ಆಗಮಿಸಿದೆ. ಮೈ ಹುಣಸೇನಹಳ್ಳಿಯ ಬಳಿ ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಸಿದ್ದತೆ ಬರದಿಂದ ಸಾಗಿದೆ.

JDS Pancharatna Yatre

ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿಯವರು ಮಗುವೊಂದಕ್ಕೆ ನಾಮಕರಣ ಮಾಡುವ ಮೂಲಕ ಅಭಿಮಾನಿಯೊಬ್ಬ ಆಸೆ ಈಡೇರಿಸಿದ್ದಾರೆ.

ಚಿಂತಾಮಣಿ ತಾಲೂಕಿನ ದಾಚಾಪುರ ಗ್ರಾಮದ ದಂಪತಿ ಸುರೇಶ್ ಮತ್ತು ರೂಪಾ ಅವರ ಮಗುವಿಗೆ ಕುಮಾರಸ್ವಾಮಿ ನಾಮಕರಣ ಮಾಡಿದ್ದಾರೆ. ಮಗುವಿಗೆ ರಿಶಿಕ್ ಎಂದು ಹೆಸರಿಟ್ಟು ನಾಮಕರಣ ಮಾಡಿ, ಉಡುಗೊರೆ ರೂಪದಲ್ಲಿ ಹಣವನ್ನು ನೀಡಿದ್ದಾರೆ.

JDS Pancharatna Yatre

ಇನ್ನು ಮಾಜಿ ಸಿಎಂ ಆಗಮನಕ್ಕಾಗಿ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ ಕಲಾವಿದರಿಂದ ಅದ್ಧೂರಿ ಸ್ವಾಗತಕ್ಕೆ ತಯಾರಿ ನಡೆದಿದೆ. ಇದಕ್ಕೂ ಮೊದಲು ಕುಮಾರಸ್ವಾಮಿ ಗಣಪತಿಗೆ ನವಗ್ರಹ ಪೂಜೆ ಸಲ್ಲಿಸಿದರು.

ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿರುವೆ
ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡ್ತಿದ್ದೇನೆ ಎಂದು ಶಿಡ್ಲಘಟ್ಟ ಕ್ಷೇತ್ರದ ಹುಣಸನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ ಅವರು, ರಾಜ್ಯಾದ್ಯಂತ ಪಂಚರತ್ನ ಯೋಜನೆ ನಾಡಿನ ಜನತೆಗೆ ತಲುಪಿಸಬೇಕು. ಕುಟುಂಬದ ಮಗನಾಗಿ ಕೆಲಸ ಮಾಡುತ್ತಿರುವ ರವಿ, ನಿಮ್ಮ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕಿದೆ ಎಂದರು.

JDS Pancharatna Yatre

ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ. ಇಡೀ ರಾಜ್ಯದಲ್ಲಿ ರೈತ ಬಂಧುಗಳು, ಯುವಕರಿದ್ದೀರಾ. ನಾಡಿನಾದ್ಯಂತ ಜೆಡಿಎಸ್ ಅಲೆ ಆರಂಭವಾಗಿದೆ. ಪಂಚರತ್ನ ಯೋಜನೆ ಮೂಲಕ ಸಮಾಜದ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂದು ಹೇಳಿದರು.

JDS Pancharatna Yatre

ಪಂಚರತ್ನ ಯೋಜನೆಯನ್ನು ಐದು ವರ್ಷಗಳಲ್ಲಿ ಸಂಪೂರ್ಣ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ ಅವರು, ರವಿ ಅವರನ್ನು ಒಮ್ಮೆ ಗೆಲ್ಲಿಸಿ ನಿಮ್ಮೆಲ್ಲರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಪರ ಮಾತನಾಡಿದರು.

ಇದನ್ನೂ ಓದಿ | Rashmika Mandanna | ಕೈ ಸನ್ನೆಯಿಂದಲೇ ರಶ್ಮಿಕಾ ಮಂದಣ್ಣ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ ರಿಷಬ್‌ ಶೆಟ್ಟಿ: ಆಗಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Road Accident: ಮಂಜೇಶ್ವರದಲ್ಲಿ ಆಂಬ್ಯುಲೆನ್ಸ್-ಕಾರಿನ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ

Road Accident: ಕೇರಳದ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಭೀಕರ ಅಪಘಾತ ನಡೆದಿದೆ. ತ್ರಿಶ್ಯೂರು ಗುರುವಾಯೂರು ಮೂಲದ ಮೂವರು ಯುವಕರು ಮೃತಪಟ್ಟಿದ್ದಾರೆ.

VISTARANEWS.COM


on

Car Accident
Koo

ಮಂಗಳೂರು: ಆಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ ಮೂವರು ದುರ್ಮರಣ ಹೊಂದಿರುವ ಘಟನೆ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಮಂಗಳವಾರ ನಡೆದಿದೆ.

ಕೇರಳದ ತ್ರಿಶ್ಯೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೊನ್ ಸೇರಿ ಮೂವರು ಮೃತರು. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಗೂ ಗಾಯಗಳಾಗಿರುವುದು ಕಂಡುಬಂದಿದೆ.

ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಡಿಕ್ಕಿ ಹೊಡೆದ ನಂತರ ಆಂಬ್ಯುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

ಇದನ್ನೂ ಓದಿ | Theft Case : ತಂದೆ ಬೈದಿದ್ದಕ್ಕೆ ಮನೆ ಬಿಟ್ಟು ಆಟೋ ಹತ್ತಿದ ಯುವಕ; 100 ಗ್ರಾಂ ಚಿನ್ನ ಕಸಿದು ಚಾಲಕ ಎಸ್ಕೇಪ್

ಕಲ್ಲು ಸಾಗಿಸುತ್ತಿದ್ದ ಕ್ಯಾಂಟರ್‌ ಪಲ್ಟಿಯಾಗಿ ಮೂವರ ಸಾವು

chikkaballapur road accident

ಚಿಕ್ಕಬಳ್ಳಾಪುರ: ಕಲ್ಲು ಕೂಚ (ಕಂಬ) ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ (Road Accident), ಕಂಬಗಳಡಿ ಸಿಲುಕಿಕೊಂಡು ಮೂವರು ಕಾರ್ಮಿಕರು (laborers death) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ- ಗೌರಿಬಿದನೂರು (Chikkaballapur news) ಮಾರ್ಗದ ಕಣಿವೆ ಬಳಿ ದುರ್ಘಟನೆ ನಡೆದಿದೆ.

ಕೋಲಾರದ ಮಾಲೂರಿನ ಚಿಕ್ಕತಿರುಪತಿಯಿಂದ ಮಂಚೇನಹಳ್ಳಿಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ‌ ಪಲ್ಟಿಯಾಗಿದೆ. ಕ್ಯಾಂಟರ್‌ನ ಹಿಂಬದಿಯಲ್ಲಿ ಸಾಗಿಸಲಾಗುತ್ತಿದ್ದ ಕಲ್ಲಿನ ಕಂಬಗಳ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕರು, ಈ ಕಲ್ಲುಗಳಡಿ ಸಿಲುಕಿಕೊಂಡು ದಾರುಣವಾಗಿ ಸಾವಿಗೀಡಾದರು.

108 ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಕರೆ ಕಳುಹಿಸಿದರೂ ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಆಂಬ್ಯುಲೆನ್ಸ್ ಬಂದಿದ್ದರೆ ಜೀವಗಳನ್ನು ಉಳಿಸಬಹುದಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ‌ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಾಲಬಾಧೆ ತಾಳಲಾಗದೆ ರೈತ ಆತ್ಮಹತ್ಯೆ

ಕೊರಟಗೆರೆ: ಸಾಲದ ಬಾಧೆ ತಾಳಲಾರದೇ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ರಾಜಣ್ಣ (38) ಮೃತಪಟ್ಟ ರೈತ. ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ರೈತ ರಾಜಣ್ಣ ಹಲವು ಖಾಸಗಿ ಫೈನಾನ್ಸ್‌ಗಳಲ್ಲಿ 12 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು, ಜಮೀನಿನಲ್ಲಿ 5ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದು ನೀರು ಸಿಗದ ಕಾರಣ ಮನನೊಂದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

ತನ್ನ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದು, ಕಳೆದ ಭಾನುವಾರ ತಡರಾತ್ರಿ ತನ್ನ ಜಮೀನಿನಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ್ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

ಎರಡು ವರ್ಷದಿಂದ ಮಳೆ ಇಲ್ಲದೆ ಬೆಳೆಗಳೆಲ್ಲವೂ ನಾಶವಾಗಿ ರೈತ ಮಾಡಿರುವ ಸಾಲ ತೀರಿಸಲಾಗದೆ ನೇಣು ಹಾಕಿಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ಹಣದ ವಸೂಲಿಗೆ ಬರುತ್ತಿರುವ ಮೈಕ್ರೋ ಫೈನಾನ್ಸ್ ಹಾಗೂ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಮಳೆ ಇಲ್ಲದೆ ಬೆಳೆ ಇಲ್ಲದೆ ರೈತ ಎಲ್ಲಿಂದ ಸಾಲವನ್ನು ಕಟ್ಟುತ್ತಾನೆ? ಈ ಘಟನೆಗಳ ಬಗ್ಗೆ ಕೊಡಲೇ ಸರ್ಕಾರ ಗಮನ ಹರಿಸಬೇಕು. ರೈತರ ಪ್ರಾಣವನ್ನು ಉಳಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಆಗ್ರಹಿಸಿದ್ದಾರೆ.

Continue Reading

ಮಳೆ

Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

Karnataka Rains : ನಿನ್ನೆ ಸೋಮವಾರ ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿದೆ. ಬಿರುಗಾಳಿ ಮಳೆಗೆ ಮರ ಬಿದ್ದು ಒಬ್ಬನ ಪ್ರಾಣಪಕ್ಷಿ ಹಾರಿಹೋದರೆ, ಮತ್ತೊಬ್ಬ ಬೆನ್ನು ಮೂಳೆಯನ್ನು ಮುರಿದುಕೊಂಡಿದ್ದಾರೆ.

VISTARANEWS.COM


on

By

karnataka rains
Koo

ಬೆಂಗಳೂರು/ಮಂಡ್ಯ: ಜಸ್ಟ್‌ ಅರ್ಧ ಗಂಟೆ ಸುರಿದ ಭಾರಿ ಗಾಳಿ ಮಳೆಗೆ (Karnataka Rains) ಸಾವು-ನೋವುಗಳು ಸಂಭವಿಸಿವೆ. ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿಯೊಬ್ಬರು ಬಲಿಯಾದರೆ, ಬೆಂಗಳೂರಲ್ಲಿ ಟೆಕ್ಕಿಯ ಬೆನ್ನು ಮೂಳೆ ಮುರಿದಿದೆ.

ಸೋಮವಾರ ಬೆಂಗಳೂರಲ್ಲಿ ಸುರಿದ ಮಳೆಗೆ ಟೆಕ್ಕಿಯೊಬ್ಬರು ಬೆನ್ನು ಮೂಳೆ ಮುರಿದುಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಗಾಳಿಗೆ ಮರದ ಕೊಂಬೆ ಮೈ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದಿದೆ. ಬೆಂಗಳೂರಿನ ಸಿ.ವಿ ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.

ಐಟಿ ಕಂಪನಿ ಉದ್ಯೋಗಿಯಾಗಿ ರವಿಕುಮಾರ್ (26) ಎಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರ ಬಿದ್ದಿರುವ ಹಿನ್ನೆಲೆಯಲ್ಲಿ ಸ್ಪೈನ್ ಕಾರ್ಡ್ ಮುರಿದುಕೊಂಡಿದ್ದಾರೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳು ರವಿಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯದಲ್ಲಿ ಬಿರುಗಾಳಿ ಮಳೆ ಎಫೆಕ್ಟ್‌ಗೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರಿನ ಮೇಲೆ ಬೃಹತ್ ಮರ ಬಿದ್ದಿದ್ದು, ಅದರೊಳಗೆ ಇದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಕಾರ್ತಿಕ್ ಮೃತ ದುರ್ದೈವಿ. ಮಂಡ್ಯ ನಗರದ ನೆಹರು ನಗರದಲ್ಲಿ ದುರ್ಘಟನೆ ನಡೆದಿದೆ.

ಕಾರ್ತಿಕ್ ಮಂಡ್ಯ ನಗರದ ಖಾಸಗಿ ನರ್ಸಿಂಗ್ ಹೋಮ್‌ಗೆ ಬಂದಿದ್ದರು. ಈ ವೇಳೆ ಮಳೆ ಬಂದ ಕಾರಣಕ್ಕೆ ಮರದ ಕೆಳಗೆ ಕಾರ್ ಪಾರ್ಕ್ ಮಾಡಿ ಕುಳಿತಿದ್ದರು. ಆದರೆ ಜೋರಾಗಿ ಬೀಸಿದ ಬಿರುಗಾಳಿಗೆ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಜಖಂಗೊಂಡಿತ್ತು. ಪರಿಣಾಮ ಕಾರೊಳಗೆ ಸಿಲುಕಿದ ಕಾರ್ತಿಕ್‌ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಇನ್ನೂ ಘಟನೆಯಲ್ಲಿ ಹಲವು ಬೈಕ್‌ಗಳು ಜಖಂಗೊಂಡಿದ್ದವು. ಸ್ಥಳಕ್ಕೆ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!

ಧರೆಗೆ ಬಿದ್ದ ಮರಗಳು, ವಿದ್ಯುತ್‌ ಕಂಬಗಳು

ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರಸ್ತೆ ಮಧ್ಯೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಹೆದ್ದಾರಿ ಸೇರಿದಂತೆ ನಗರದ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಪೂರ್ತಿ ವಿದ್ಯುತ್ ಸ್ಥಗಿತವಾಗಿತ್ತು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿತ್ತು. ಪರಿಣಾಮ ಬೈಕ್‌ಗಳು, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿತ್ತು. ಇನ್ನೂ ಮುರಿದು ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ನಗರಸಭೆ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಯಿಂದ ಹರಸಾಹಸ ಪಡಬೇಕಾಯಿತು.

ಮಳೆಯ ಅವಾಂತರಕ್ಕೆ ರಾಜಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಕಾರು, 2 ಸ್ಕೂಟರ್ ಜಖಂಗೊಂಡಿತ್ತು. ರಾತ್ರಿ ಬಿದ್ದ ಮರವನ್ನು ಮರು ದಿನ ಬೆಳಗ್ಗೆಯಾದರೂ ತೆರವು ಮಾಡದ ಪಾಲಿಕೆ ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ರಸ್ತೆಯಲ್ಲಿ ಓಡಾಡಲು ಜನರು ಪರದಾಡಬೇಕಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ರಾಜೇಶ್ವರಿ ಚಿತ್ರಮಂದಿರ ಬಳಿ ಮರಗಳು ಧರೆಗುರಳಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಲ್ಲೇಶ್ವರಂ ಚಿತ್ತಾಪುರ ಮಠದ ಬಳಿಯೂ ಬೃಹತ್‌ ಮರವು ಅಪ್ಪಳಿಸಿದ್ದು, ಆ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇನ್ನೂ ಮಳೆ ಗಾಳಿಗೆ ನಗರದ 15 ಬೃಹತ್ ಗಾತ್ರದ ಮರ ಧರೆಗುರುಳಿವೆ ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಳ್ಳಾರಿ

Lok Sabha Election 2024: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮತದಾನ

Lok Sabha Election 2024: ಸಂಡೂರಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮಂಗಳವಾರ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ, ಕುಟುಂಬ ಸದಸ್ಯರ ಜತೆ ಆಗಮಿಸಿ, ಮತದಾನ ಮಾಡಿದರು.

VISTARANEWS.COM


on

Ballari Lok Sabha constituency Congress candidate e Tukaram voting in Sandur
Koo

ಸಂಡೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಅವರು ಮಂಗಳವಾರ ಸಂಡೂರಿನಲ್ಲಿ ಮತದಾನ (Lok Sabha Election 2024) ಮಾಡಿದರು.

ಸಂಡೂರಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಕುಟುಂಬ ಸದಸ್ಯರ ಜತೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ಮತ ಚಲಾಯಿಸಿದ್ದು ಖುಷಿ ನೀಡಿದೆ. ಭವ್ಯ ಭಾರತದ ಭವಿಷ್ಯ ನಿರ್ಧಾರ ಮಾಡುವ ಈ ಚುನಾವಣೆ ಮಹತ್ವದಾಗಿದೆ. ಜನರು ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಮತ್ತೊಂದು ಹೊಸ ಇತಿಹಾಸ ಬರೆಯಲಿದೆ ಎಂದು ಅವರು ತಿಳಿಸಿದರು.

Continue Reading

Lok Sabha Election 2024

Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

ಲೋಕಸಭೆ ಚುನಾವಣೆ (Lok Sabha Election 2024) ರಾಜ್ಯದ ಎರಡನೇ ಹಂತದ (second phase voting) ಮತದಾನದಲ್ಲಿ ಹಲವು ವೈವಿಧ್ಯಮಯ ಚಿತ್ರಣಗಳು ಕಂಡುಬಂದವು. ಶತಾಯುಷಿಗಳು, ವೃದ್ಧರು, ದಿವ್ಯಾಂಗರು, ವಿದೇಶದಲ್ಲಿರುವವರು ಕೂ ಉತ್ಸಾಹದಿಂದ ಬಂದು ಮತ ಚಲಾಯಿಸಿದರು.

VISTARANEWS.COM


on

lok sabha election 2024 one family
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಒಂದೇ ಕುಟುಂಬದ 69 ಸದಸ್ಯರು ಒಟ್ಟಾಗಿ ಬಂದು ಮತದಾನ ಮಾಡಿದರು.
Koo

ಬೆಂಗಳೂರು: ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್‌ ಹಾಕಿ ಸೆಲ್ಫಿ ತೆಗೆದುಕೊಂಡ ಒಂದೇ ಕುಟುಂಬದ 69 ಮಂದಿ, ಮತ ಹಾಕಿದವರಿಗೆ ಫ್ರೀಯಾಗಿ ತಿಂಡಿ ಕಾಫಿ ಒದಗಿಸಿದವರು… ಹೀಗೆ ಲೋಕಸಭೆ ಚುನಾವಣೆ (Lok Sabha Election 2024) ರಾಜ್ಯದ ಎರಡನೇ ಹಂತದ (second phase voting) ಮತದಾನದಲ್ಲಿ ಹಲವು ವೈವಿಧ್ಯಮಯ ಚಿತ್ರಣಗಳು ಕಂಡುಬಂದವು. ಮೊಬೈಲ್‌ ನಿಷೇಧವಿದ್ದರೂ ಮತ ಹಾಕುವ ಫೋಟೋ ತೆಗೆದು ವೈರಲ್‌ ಮಾಡಿದವರು, ಮತದಾನಕ್ಕೆ ಬಹಿಷ್ಕಾರ, ಮತಗಟ್ಟೆಯಲ್ಲಿ ಚಕಮಕಿಯಂಥ ಘಟನೆಗಳೂ ನಡೆದವು.

ಒಂದೇ ಕುಟುಂಬದ 69 ಸದಸ್ಯರು ಒಟ್ಟಾಗಿ ವೋಟ್

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56, 57ರಲ್ಲಿ ಒಂದೇ ಕುಟುಂಬದ 69 ಸದಸ್ಯರು ಬಂದು ಮತದಾನ ಮಾಡಿ ಮಾದರಿಯಾದರು. ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯರಿಂದ ಮತದಾನ ನಡೆಯಿತು. ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ತೆಗೆದು ಸಂಭ್ರಮಿಸಿದರು. ಕುಟುಂಬದ ಮೂರು ತಲೆಮಾರಿನ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದರು. ಪ್ರತಿ ಚುನಾವಣೆಯಲ್ಲೂ ತಂಡವಾಗಿ ಬಂದು ಮತ ಚಲಾಯಿಸುತ್ತಾರೆ.

ಅಪೂರ್ವ ಸಹೋದರಿಯರು

ದಾವಣಗೆರೆ: ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದು ಸಹೋದರಿಯರು ಮತದಾನ ಮಾಡಿದ್ದಾರೆ. ರೀತು ಮತ್ತು ರಕ್ಷಾ ಮತದಾನ ಮಾಡಿದ ಸಹೋದರಿಯರು. ರೀತು ಅಮೇರಿಕಾದ ಇಂಡಿಯಾನಾದಿಂದ ಹಾಗೂ ರಕ್ಷ ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿ ದಾವಣಗೆರೆಯ MCC ಎ ಬ್ಲಾಕ್‌ನ ವಿಶ್ವಭಾರತಿ ಸ್ಕೂಲ್‌ನಲ್ಲಿ ಹಕ್ಕು ಚಲಾಯಿಸಿದರು. ರೀತು ಮತ್ತು ರಕ್ಷಾ ದಾವಣಗೆರೆಯ ವಾಗೇಶ್ ಬಾಬು ಜಿ.ಪಿ ಅವರ ಪುತ್ರಿಯರು.”ಒಳ್ಳೆ ಸರ್ಕಾರ, ನಾಯಕರು, ಆಡಳಿತಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಬೇಕು” ಎಂದು ಮನವಿ ಮಾಡಿದರು.

3 ಲಕ್ಷ ರೂ. ವೆಚ್ಚ ಮಾಡಿ ಬಂದ ಅನಿವಾಸಿ ಭಾರತೀಯ!

ರಾಯಚೂರು: ಅನಿವಾಸಿ ಭಾರತೀಯರೊಬ್ಬರು 3 ಲಕ್ಷ ರೂ. ವೆಚ್ಚ ಮಾಡಿ ಮತದಾನ ಮಾಡುವುದಕ್ಕಾಗಿಯೇ ಭಾರತಕ್ಕೆ ಬಂದು ಹಕ್ಕು ಚಲಾಯಿಸಿದರು. ಆ ಮೂಲಕ ಮತದಾನದ ಮಹತ್ವ ಸಾರಿದರು. ಒಮಾನ್ ದೇಶದ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯ, ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಈ ವ್ಯಕ್ತಿ. ಕಳೆದ 25 ವರ್ಷಗಳಿಂದ ಮಸ್ಕತ್‌ನಲ್ಲಿ ವಾಸಿಸುತ್ತಿರುವ ಅಮರೇಶ, ವಟಗಲ್ ಗ್ರಾಮದಲ್ಲಿ ಮತದಾನ ಮಾಡಿ, “ಪ್ರತಿಯೊಬ್ಬರೂ ಮತದಾನ ಮಾಡಿ” ಎಂದು ಸಂದೇಶ ನೀಡಿದರು.

ಅಬುಧಾಬಿಯಿಂದ ಬಂದು ಮತ ಹಾಕಿದ

ಚಿಕ್ಕೋಡಿ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಸುರಜ ಉಪಾಶೆ ಎಂಬ ಯುವಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮತ ಹಕ್ಕು ಚಲಾಯಿಸಿದ್ದಾನೆ. ಕಳೆದ 10 ವರ್ಷದಿಂದ ಅಬುಧಾಬಿಯಲ್ಲಿರುವ ಯುವಕ, ಮತದಾನಕ್ಕಾಗಿಯೇ ಆಗಮಿಸಿದ್ದಾನೆ. ಹುಕ್ಕೇರಿ ಪಟ್ಟಣದ ಗಾಂಧಿ ನಗರ ಶಾಲೆಯಲ್ಲಿ ಮತದಾನ ಮಾಡಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾನೆ.

ಉಚಿತ ತಿಂಡಿ, ಕಾಫಿ- ಟೀ

ಶಿವಮೊಗ್ಗ: ಶಿವಮೊಗ್ಗದ ಶುಭಂ ಹೋಟೆಲ್‌ನಲ್ಲಿ, ಮತದಾನದ ಪ್ರಮಾಣ ಹೆಚ್ಚಿಸಿ, ಜಾಗೃತಿ ಮೂಡಿಸಲು ಸ್ಪೆಷಲ್ ಆಫರ್ ನೀಡಲಾಯಿತು. ಬೆಳಗ್ಗೆ 7ರಿಂದ‌ ಮಧ್ಯಾಹ್ನ 12 ಗಂಟೆವರೆಗೆ ಫ್ರೀ ಟಿಫನ್ ನೀಡಲಾಯಿತು. ಬೆಳಗ್ಗೆಯಿಂದ 5 ಸಾವಿರಕ್ಕೂ ಹೆಚ್ಚು ಮತದಾರರು ಫ್ರೀ ಟಿಫನ್ ಸವಿದರು. ಪಲಾವ್, ದೋಸೆ, ಬಿಸಿಬೇಳೆಬಾತ್, ಕಾಫಿ ತಿಂಡಿ ಫ್ರೀ ನೀಡಲಾಗಿದೆ. ಸುಮಾರು 10 ಸಾವಿರ ಮಂದಿಗೆ ಆಗುವಷ್ಟು ಹೋಟೆಲ್‌ ಮಾಲಿಕರು ಉಚಿತ ತಿಂಡಿಯ ವ್ಯವಸ್ಥೆ ಮಾಡಿದ್ದರು.

ವೋಟ್ ಮಾಡಿದರೆ ಉಚಿತ ಐಸ್‌ಕ್ರೀಂ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಡೈರೀಸ್ ಐಸ್‌ಕ್ರೀಮ್ ಮಾಲಿಕರು ವೋಟ್ ಮಾಡಿದವರಿಗೆ ಉಚಿತವಾಗಿ ಎಲೆಕ್ಷನ್ ಸ್ಪೆಷಲ್ ಐಸ್‌ಕ್ರೀಮ್ ವಿತರಿಸಿದರು. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಪ್ರೋತ್ಸಾಹಿಸಲು ಡೈರಿಸ್ ಐಸ್ಕ್ರೀಮ್‌ ವಿತರಣೆ ನಡೆಯಿತು.

ಮತದಾನ ಬಹಿಷ್ಕಾರ

ವಿಜಯನಗರ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚಿಲಕನಹಟ್ಟಿ ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ವಿಂಗಡಣೆ ಮಾಡಿದ್ದಕ್ಕೆ ಮತದಾನ ಬಹಿಷ್ಕಾರ ಹಾಕಲಾಯಿತು. ಹಾರುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 78ರಲ್ಲಿ, ಚಿಲಕನಹಟ್ಟಿಯ ಮಾರುತಿ ನಗರದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಮಾಡುವಂತೆ ಮತದಾರರು ಪಟ್ಟು ಹಿಡಿದರು. ಕಳೆದ ಹಲವು ವರ್ಷದಿಂದ ಪ್ರತ್ಯೇಕ ಮತಗಟ್ಟೆಗೆ ಒತ್ತಾಯವಿತ್ತು. ಚಿಲಕನಹಟ್ಟಿಯಿಂದ ಹಾರುವನಹಳ್ಳಿ ಗ್ರಾಮಕ್ಕೆ 3 ಕಿ.ಮೀ ಅಂತರವಿದೆ. ಅದಕ್ಕೆ ರಾಷ್ಟ್ರೀಯ ಹೆದ್ದಾರಿ 50 ದಾಟಬೇಕಿದ್ದು, ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಗ್ರಾಮಸ್ಥರದ್ದು.

ಗೌಪ್ಯ ಮತದಾನ ವೈರಲ್‌

ದಾವಣಗೆರೆ: ಎಷ್ಟೇ ಕಟ್ಟುನಿಟ್ಟಾಗಿ ಗೌಪ್ಯ ಮತದಾನ ಮಾಡಿದರೂ ಫೋಟೋ ತೆಗೆದುಕೊಂಡು ಪಬ್ಲಿಕ್‌ ಮಾಡುತ್ತಿರುವವರು ಕಂಡುಬಂದಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮತ ಹಾಕಿದ್ದನ್ನು ಬಿಜೆಪಿ ಕಾರ್ಯಕರ್ತನೊಬ್ಬ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಮತಗಟ್ಟೆಗೆ ಮೊಬೈಲ್ ನಿಷೇಧ ಮಾಡಿದರೂ ಮೊಬೈಲ್ ತೆಗೆದುಕೊಂಡು ಹೋಗಲಾಗಿದೆ.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತ ವಾಗ್ವಾದ

ಬೆಳಗಾವಿ: ಕೆಲವೆಡೆ ಬಿಜಪಿ- ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬೆಳಗಾವಿಯ ಹನುಮಾನ್ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತಗಟ್ಟೆಯಲ್ಲೇ ನಿಂತು ಮತದಾರರು ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಈ ವೇಳೆ ಕಾಂಗ್ರೆಸ್ ‌ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಇದನ್ನೂ ಓದಿ: Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Continue Reading
Advertisement
Viral News
ವೈರಲ್ ನ್ಯೂಸ್2 mins ago

Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ?

Car Accident
ಕರ್ನಾಟಕ5 mins ago

Road Accident: ಮಂಜೇಶ್ವರದಲ್ಲಿ ಆಂಬ್ಯುಲೆನ್ಸ್-ಕಾರಿನ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ

Viral Video
ವೈರಲ್ ನ್ಯೂಸ್12 mins ago

Viral Video: ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ಕಿಡಿಗೇಡಿಗಳ ವಿಕೃತಿ; ವಿಡಿಯೋ ವೈರಲ್‌

karnataka rains
ಮಳೆ21 mins ago

Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

India’s Jersey T20 World Cup
ಕ್ರೀಡೆ40 mins ago

India’s Jersey T20 World Cup: ಭಾರತ ತಂಡದ ಹೊಸ ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

Narendra Modi
ದೇಶ46 mins ago

Narendra Modi: ಮತದಾನ ಮಾಡಿ ಬಂದ ಮೋದಿಗೆ ರಾಖಿ ಕಟ್ಟಿ, ಆಶೀರ್ವಾದ ಮಾಡಿದ ಅಜ್ಜಿ; Video ಇದೆ

Aravind Kejriwal
ದೇಶ1 hour ago

Arvind Kejriwal: ಕೇಜ್ರಿವಾಲ್‌ ನ್ಯಾಯಾಂಗ ಬಂಧನ ವಿಸ್ತರಣೆ; ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Ballari Lok Sabha constituency Congress candidate e Tukaram voting in Sandur
ಬಳ್ಳಾರಿ2 hours ago

Lok Sabha Election 2024: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮತದಾನ

MS Dhoni
ಕ್ರೀಡೆ2 hours ago

MS Dhoni: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಇದುವೇ ಪ್ರಮುಖ ಕಾರಣ

Crime News
ಕ್ರೈಂ2 hours ago

ಮಾದಕ ವಸ್ತು ನೀಡಿ ಕುಟುಂಬಸ್ಥರೊಂದಿಗೆ ಮಲಗಲು ಹಿಂಸೆ ನೀಡುವ ಪತಿ; ಮಹಿಳೆಯೊಬ್ಬರ ಕಣ್ಣೀರಿನ ಕಥೆ ಇದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ21 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ22 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌